Tag: ಸರಪಂಚ್

  • ಬಾರಾಮುಲ್ಲಾದಲ್ಲಿ ಬಸ್, ಟ್ರಕ್ ಮುಖಾಮುಖಿ ಡಿಕ್ಕಿ – ಓರ್ವ ಸಾವು, 6 ಮಂದಿಗೆ ಗಾಯ

    ಬಾರಾಮುಲ್ಲಾದಲ್ಲಿ ಬಸ್, ಟ್ರಕ್ ಮುಖಾಮುಖಿ ಡಿಕ್ಕಿ – ಓರ್ವ ಸಾವು, 6 ಮಂದಿಗೆ ಗಾಯ

    ಶ್ರೀನಗರ: ಬಸ್, ಟ್ರಕ್ ಮುಖಾಮುಖಿ ಡಿಕ್ಕಿಯಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿ, 6 ಮಂದಿ ಗಾಯಗೊಂಡ ಘಟನೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.

    ಕುಪ್ವಾರ ಜಿಲ್ಲೆಯ ಸರಪಂಚ್ ಫಯಾಜ್ ಅಹ್ಮದ್ ಭಟ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಪೊಲೀಸರು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದಿಯನ್ನ ರಾಷ್ಟ್ರೀಯ ಭಾಷೆಯನ್ನಾಗಿ ಮಾಡಿದ್ರೆ ತಪ್ಪೇನಿಲ್ಲ: ಮುರುಗೇಶ್ ನಿರಾಣಿ

    ಘಟನೆ ಕುರಿತು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸರಪಂಚ್ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಬಾರಾಮುಲ್ಲಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸರಪಂಚ್ ಫಯಾಜ್ ಅಹ್ಮದ್ ಭಟ್ ಅವರ ದುರದೃಷ್ಟಕರ ನಿಧನದಿಂದ ನೋವಾಗಿದೆ. ಈ ದುಃಖದ ಸಮಯದಲ್ಲಿ ನನ್ನ ಆಲೋಚನೆಗಳು ಅವರ ಕುಟುಂಬದೊಂದಿಗೆ ಇವೆ. ಗಾಯಾಳುಗಳಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದೇವೆ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಭಾಷಾವಾರು ಪ್ರಾಂತ್ಯಗಳನ್ನು ರಚಿಸಿರುವುದನ್ನು ನೆನಪಿಸಬಯಸುತ್ತೇನೆ: ಡಿಕೆಶಿ

  • 21 ವರ್ಷಕ್ಕೆ ಗ್ರಾಮದ ಮುಖ್ಯಸ್ಥೆಯಾಗಿ ಇತಿಹಾಸ ಸೃಷ್ಟಿಸಿದ ಯುವತಿ

    21 ವರ್ಷಕ್ಕೆ ಗ್ರಾಮದ ಮುಖ್ಯಸ್ಥೆಯಾಗಿ ಇತಿಹಾಸ ಸೃಷ್ಟಿಸಿದ ಯುವತಿ

    ಪಾಟ್ನ: ಎಲ್ಲರಿಗೂ ಸಾಧಿಸಬೇಕು ಎನ್ನುವ ಆಸೆ ಜೊತೆಗೆ, ಹೋಗುವ ದಾರಿಗಳ ಬಗ್ಗೆ ಕೆಲವು ಗೊಂದಲಗಳು ಸಹ ಇರುತ್ತೆ. ಆ ಎಲ್ಲ ಗೊಂದಲಗಳನ್ನು ಬಗೆ ಹರಿಸಿಕೊಂಡು ಮುಂದೆ ನುಗ್ಗಿದರೆ ಅವರಿಗೆ ಯಶಸ್ಸು ನಿಶ್ಚಿತ ಎಂಬುದಕ್ಕೆ ಬಿಹಾರದ ಈ ಯುವತಿ ಉತ್ತಮ ಉದಾಹರಣೆಯಾಗಿದ್ದಾರೆ.

    ಬಿಹಾರದ ಶಿಯೋಹರ್ ಬ್ಲಾಕ್‍ನ ಕುಶಾಹರ್ ಪಂಚಾಯತ್ ನಲ್ಲಿ 21 ವರ್ಷದ ಅನುಷ್ಕಾ ಕುಮಾರಿ ಸರಪಂಚ್(ಮುಖ್ಯಸ್ಥ) ಆಗುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಗಮನಾರ್ಹವೆಂದರೆ ಅನುಷ್ಕಾ ಮೊದಲ ಬಾರಿಯ ಪಂಚಾಯತ್ ಚುನಾವಣೆಯಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸಿಕೊಂಡಿದ್ದು, ಯಶಸ್ಸನ್ನು ಸಾಧಿಸಿದರು. ಹೊಸದಾಗಿ ಆಯ್ಕೆಯಾದ ಇವರು 2,625 ಮತಗಳನ್ನು ಪಡೆದು ಗೆದ್ದರೆ, ಅವರ ಪ್ರತಿಸ್ಪರ್ಧಿ ರೀಟಾ ದೇವಿ 2,338 ಮತಗಳನ್ನು ಪಡೆದ್ದಿದ್ದರು.

    ಫಲಿತಾಂಶ ಪ್ರಕಟವಾದ ಬಳಿಕ ಅನುಷ್ಕಾ ತಮ್ಮ ಗೆಲುವನ್ನು ಜನರಿಗೆ ಅರ್ಪಿಸಿದರು. ಅನುಷ್ಕಾ ಬೆಂಗಳೂರಿನಲ್ಲಿ ಇತಿಹಾಸದಲ್ಲಿ ಬ್ಯಾಚುಲರ್ ಪದವಿಯನ್ನು ಪೂರ್ಣಗೊಳಿಸಿದ್ದು, ಇನ್ನೂ ಹೆಚ್ಚಿನ ಅಧ್ಯಯನವನ್ನು ಮುಂದುವರಿಸಲು ಬಯಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಬಡಿದಾಟ ಶುರುವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ: ಬಿಎಸ್‍ವೈ

    ಈ ಕುರಿತು ಮಾತನಾಡಿದ ಅವರು, ನಮ್ಮ ಗ್ರಾಮದಲ್ಲಿ ಹಲವಾರು ಸಮಸ್ಯೆಗಳಿವೆ. ಈ ಸಮಸ್ಯೆಗಳು ಮತ್ತು ಭ್ರಷ್ಟಾಚಾರಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ನಾನು ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದೆ. ನಾನು ಪಂಚಾಯತ್ ಜನರ ನಂಬಿಕೆಯನ್ನು ಎಂದಿಗೂ ಮುರಿಯುವುದಿಲ್ಲ ಎಂದು ಭರವಸೆಯನ್ನು ನೀಡಿದರು.

    ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಹೇಳಿದರು.

    ಅದು ಅಲ್ಲದೇ ಅನುಷ್ಕಾ ತನ್ನ ಅಜ್ಜನನ್ನು ತನ್ನ ರೋಲ್ ಮಾಡೆಲ್ ಎಂದು ಪರಿಗಣಿಸುತ್ತಾರೆ. ಅನುಷ್ಕಾ ತಂದೆ ಸುನೀಲ್ ಸಿಂಗ್ ಕೂಡ ಮಾಜಿ ಜಿಲ್ಲಾ ಪರಿಷತ್ ಸದಸ್ಯರಾಗಿದ್ದರು. ಚಿಕ್ಕ ವಯಸ್ಸಿನಲ್ಲೇ ಈ ಗೆಲುವು ಸಾಧಿಸಿದ ಅನುಷ್ಕಾ ಇತರ ಯುವ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಇದನ್ನೂ ಓದಿ: ಕ್ರಿಪ್ಟೋಕರೆನ್ಸಿ ವಿಚಾರದಲ್ಲಿ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕು: ಮೋದಿ ಕರೆ