Tag: ಸರನ್

  • Bihar | ಕಳ್ಳಭಟ್ಟಿ ಸೇವಿಸಿ 20 ಮಂದಿ ಸಾವು

    Bihar | ಕಳ್ಳಭಟ್ಟಿ ಸೇವಿಸಿ 20 ಮಂದಿ ಸಾವು

    ಪಾಟ್ನಾ: ಕಳ್ಳಭಟ್ಟಿ ಸೇವಿಸಿ 20 ಮಂದಿ ಸಾವಿಗೀಡಾಗಿರುವ ಘಟನೆ ಬಿಹಾರ (Bihar) ರಾಜ್ಯದ ಸಿವಾನ್ ಮತ್ತು ಸರನ್ ಜಿಲ್ಲೆಯಲ್ಲಿ ನಡೆದಿದೆ.

    ಅಧಿಕಾರಿಗಳ ಮಾಹಿತಿ ಪ್ರಕಾರ ಕಳ್ಳಭಟ್ಟಿ (Liquior) ಸೇವನೆಯಿಂದ 6 ಜನ ಸಾವನ್ನಪ್ಪಿದ್ದರು. 12 ಮಂದಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಧಿಕಾರಿಗಳು ಮೃತರ ಹಾಗೂ ಚಿಕಿತ್ಸೆಗೆ ಒಳಪಟ್ಟವರ ಯಾವುದೇ ಗುರುತನ್ನು ಬಹಿರಂಗಪಡಿಸಿಲ್ಲ.ಇದನ್ನೂ ಓದಿ: ಮದುವೆಯಾದ 12 ವರ್ಷಗಳ ಬಳಿಕ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ರಾಧಿಕಾ ಆಪ್ಟೆ

    ಸಿವಾನ್ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಮುಕುಲ್ ಕುಮಾರ್ ಗುಪ್ತಾ ಮಾತನಾಡಿ, ಮಘಾರ್ ಮತ್ತು ಔರಿಯಾ ಪಂಚಾಯತ್ ವ್ಯಾಪ್ತಿಯಲ್ಲಿ ಮೂವರು ಸಾವನ್ನಪ್ಪಿದ್ದು, ಬೆಳಗ್ಗೆ 7:30 ಸುಮಾರಿಗೆ ಮಾಹಿತಿ ಲಭಿಸಿದೆ. ತಕ್ಷಣವೇ ಸ್ಥಳಕ್ಕೆ ಅಧಿಕಾರಗಳ ತಂಡವನ್ನು ಕಳುಹಿಸಲಾಗಿದ್ದು, 12 ಜನರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಯಿತು. ಈ ವೇಳೆ ಮಾರ್ಗಮಧ್ಯೆ ಇನ್ನೋರ್ವ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.

    ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವರದಿಯ ಬಳಿಕ ಸಾವಿಗೆ ನಿಖರ ಕಾರಣ ಏನು ಎಂಬುವುದನ್ನು ತಿಳಿಸಲಾಗುವುದು ಎಂದರು. ಸದ್ಯ ಎರಡು ಜಿಲ್ಲೆಯಲ್ಲಿ ಆಡಳಿತ ಮಂಡಳಿಯು ತನಿಖೆ ನಡೆಸುತ್ತಿದೆ. ಜೊತೆಗೆ ಮಘಾರ್ ಮತ್ತು ಔರಿಯಾ ಪಂಚಾಯಿತಿ ವ್ಯಾಪ್ತಿಯ ಇಬ್ಬರು ಚೌಕಿದಾರ್‌ರನ್ನು ಇಲಾಖೆಯು ಅಮಾನತುಗೊಳಿಸಿದೆ.

    ಮತ್ತೊಂದು ಪ್ರಕರಣದಲ್ಲಿ, ಅ.16ರಂದು ಕಳ್ಳಭಟ್ಟಿ ಸೇವಿಸಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬಿಹಾರ ರಾಜ್ಯದ ಇಬ್ರಾಹಿಂಪುರ ಪ್ರದೇಶದಲ್ಲಿ ನಡೆದಿದೆ.

    ಸರನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮನ್ ಸಮೀರ್ ಮಾತನಾಡಿ, ಮೂವರು ಚಿಕಿತ್ಸೆ ಪಡೆಯುತ್ತಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿಯ ನಂತರ ಸಾವಿನ ನಿಖರವಾದ ಕಾರಣ ತಿಳಿಸಲಾಗುವುದು ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೂಚ್ ಸೇವಿಸಿರುವ ಮಾಹಿತಿ ಲಭಿಸಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

    2016ರ ಏಪ್ರಿಲ್‌ನಲ್ಲಿ ಬಿಹಾರ ಸರ್ಕಾರವು ಮದ್ಯ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಿದೆ. ನಿಷೇಧಿಸಿದ ನಂತರ ಅಕ್ರಮ ಮದ್ಯ ಸೇವನೆಯಿಂದ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಬಿಹಾರ ಸರ್ಕಾರ ತಿಳಿಸಿದೆ.ಇದನ್ನೂ ಓದಿ: ಮಲ್ಲೇಶ್ವರಂ ಸ್ಫೋಟದಲ್ಲಿ ಭಾಗಿಯಾಗಿದ್ದ ಉಗ್ರನಿಂದ ಸೆಂಟ್ರಲ್ ಜೈಲಿನಿಂದಲೇ ಹನಿಟ್ರ್ಯಾಪ್?

  • ಇಬ್ಬರು ಭದ್ರತಾ ಸಿಬ್ಬಂದಿಗೆ ಗುಂಡಿಕ್ಕಿ ಬ್ಯಾಂಕ್‍ನಲ್ಲಿ 13.28 ಲಕ್ಷ ಲೂಟಿ

    ಇಬ್ಬರು ಭದ್ರತಾ ಸಿಬ್ಬಂದಿಗೆ ಗುಂಡಿಕ್ಕಿ ಬ್ಯಾಂಕ್‍ನಲ್ಲಿ 13.28 ಲಕ್ಷ ಲೂಟಿ

    ಪಾಟ್ನಾ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ (Bank) ಒಂದರ ಇಬ್ಬರು ಭದ್ರತಾ ಸಿಬ್ಬಂದಿಯನ್ನು (Security guards) ದುಷ್ಕರ್ಮಿಗಳು ಗುಂಡಿಕ್ಕಿ ಕೊಂದು 13.28 ಲಕ್ಷ ರೂ. ದೋಚಿರುವ ಘಟನೆ ಬಿಹಾರದ (Bihar) ಸರನ್‍ನಲ್ಲಿ (Saran) ಗುರುವಾರ ನಡೆದಿದೆ.

    ಮಧ್ಯಾಹ್ನ 12.30 ರ ಸುಮಾರಿಗೆ ಐವರು ಶಸ್ತ್ರಸಜ್ಜಿತ ಅಪರಿಚಿತ ವ್ಯಕ್ತಿಗಳು (Armed assailants) ಬ್ಯಾಂಕ್‍ಗೆ ನುಗ್ಗಿದ್ದಾರೆ. ಭದ್ರತಾ ಸಿಬ್ಬಂದಿ ವಿರೋಧಿಸಿದಾಗ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಚಿಕಿತ್ಸೆ ವೇಳೆ ಇಬ್ಬರೂ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಮನ್ಸ್ ಹಿಡಿದು ಠಾಣೆಯ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

    ಗಣೇಶ್ ಶಾ ಮತ್ತು ರಾಮ್ ನರೇಶ್ ರೈ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಸಿಬ್ಬಂದಿ. ಆರೋಪಿಗಳ ಪತ್ತೆಗೆ ಪೊಲೀಸರು ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ತಪ್ಪಿತಸ್ಥರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಭೀಕರ ಸ್ಫೋಟ – ಡೈರಿ ಫಾರ್ಮ್‌ನಲ್ಲಿದ್ದ 18,000 ಹಸುಗಳು ಸಾವು

  • ಬಿಹಾರದಲ್ಲಿ ಮತ್ತೆ ಕಳ್ಳಭಟ್ಟಿ ಸೇವಿಸಿ 3 ಸಾವು, 6 ಮಂದಿ ಆಸ್ಪತ್ರೆ ದಾಖಲು

    ಬಿಹಾರದಲ್ಲಿ ಮತ್ತೆ ಕಳ್ಳಭಟ್ಟಿ ಸೇವಿಸಿ 3 ಸಾವು, 6 ಮಂದಿ ಆಸ್ಪತ್ರೆ ದಾಖಲು

    ಪಾಟ್ನಾ: ಕೆಲ ದಿನಗಳ ಹಿಂದೆ ಬಿಹಾರದಲ್ಲಿ (Bihar) ಕಳ್ಳಭಟ್ಟಿ (Spurious Liquor) ಸೇವಿಸಿ 70ಕ್ಕೂ ಅಧಿಕ ಜನರು ಸಾವನ್ನಪ್ಪಿ ದೊಡ್ಡ ದುರಂತವೇ ಎನಿಸಿಕೊಂಡಿತ್ತು. ಇದೀಗ ಮತ್ತೆ ಕಳ್ಳಭಟ್ಟಿ ಸೇವಿಸಿ ಮೂವರು ಸಾವನ್ನಪ್ಪಿರುವ ಘಟನೆ ಬಿಹಾರದ ಸಿವಾನ್ (Siwan) ಜಿಲ್ಲೆಯಲ್ಲಿ ವರದಿಯಾಗಿದೆ.

    ಸಿವಾನ್ ಜಿಲ್ಲೆಯ ಬಾಲಾ ಗ್ರಾಮದಲ್ಲಿ ಭಾನುವಾರ ಕಳ್ಳಭಟ್ಟಿ ಸೇವಿಸಿ 3 ಜನರು ಸಾವನ್ನಪ್ಪಿದ್ದರೆ, 6 ಜನರು ಅಸ್ವಸ್ಥರಾಗಿ ಆಸ್ಪತ್ರೆ ದಾಖಲಾಗಿದ್ದಾರೆ. ಘಟನೆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮಿತ್ ಕುಮಾರ್ ಪಾಂಡೆ ಮಧ್ಯರಾತ್ರಿ ಸದರ್ ಆಸ್ಪತ್ರೆಗೆ ತೆರಳಿ ವಿಷಯದ ಬಗ್ಗೆ ವಿಚಾರಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 3 ಜನರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ 6 ಜನರು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಮೇಲ್ನೋಟಕ್ಕೆ ಕಳ್ಳಭಟ್ಟಿ ಸೇವಿಸಿ ಜನರು ಸಾವಿಗೀಡಾಗಿದ್ದಾರೆ. ಅಸ್ವಸ್ಥರು ಸಿವಾನ್‌ನ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ಲೀಸ್ ಮುಕ್ತಿ ಕೊಡಿಸಿ ಸರ್- ಎಮ್ಮೆಗಳ ವಿರುದ್ಧ ಅರವಿಂದ ಲಿಂಬಾವಳಿಗೆ ಟೆಕ್ಕಿಗಳಿಂದ ದೂರು!

    2022ರ ಡಿಸೆಂಬರ್‌ನಲ್ಲಿ ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ಕಳ್ಳಭಟ್ಟಿ ಸೇವಿಸಿ 70 ಜನರು ಸಾವನ್ನಪ್ಪಿದ್ದರು. ಛಾಪ್ರಾದಲ್ಲಿ ನಡೆದ ಕಳ್ಳಭಟ್ಟಿ ದುರಂತ (Bihar Hooch Tragedy) ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ಮದ್ಯ ಕಳ್ಳಸಾಗಣೆ ಮಾಡುತ್ತಿದ್ದವನನ್ನು ಬಂಧಿಸಿ 2.17 ಲಕ್ಷ ರೂ.ಯನ್ನು ವಶಪಡಿಸಿಕೊಂಡಿದ್ದರು.

    spurious_liquor

    ಇದೀಗ ಸರನ್ ಪೊಲೀಸರು ಅಕ್ರಮ ಮದ್ಯ ವ್ಯಾಪಾರ, ಸಾಗಣೆ, ಕಳ್ಳಸಾಗಣೆ ಹಾಗೂ ಮದ್ಯ ತಯಾರಿಕೆಯಲ್ಲಿ ತೊಡಗಿರುವ ಶಂಕಿತರನ್ನು ಗುರುತಿಸಲು ಹಾಗೂ ಬಂಧಿಸಲು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳ ಬಾಳಲ್ಲಿ ಶಿಕ್ಷಣ ಸಂಸ್ಥೆಗಳ ಎಡವಟ್ಟು- ಫಲಿತಾಂಶ ಪ್ರಕಟ ವಿಳಂಬ, ವಿದ್ಯಾರ್ಥಿಗಳಿಗೆ ಆತಂಕ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಹಾರದ ಕಳ್ಳಾಭಟ್ಟಿ ದುರಂತ – 70ಕ್ಕೇರಿದ ಸಾವಿನ ಸಂಖ್ಯೆ, ಕಳ್ಳಸಾಗಾಟ ಮಾಡುತ್ತಿದ್ದವನ ಬಂಧನ

    ಬಿಹಾರದ ಕಳ್ಳಾಭಟ್ಟಿ ದುರಂತ – 70ಕ್ಕೇರಿದ ಸಾವಿನ ಸಂಖ್ಯೆ, ಕಳ್ಳಸಾಗಾಟ ಮಾಡುತ್ತಿದ್ದವನ ಬಂಧನ

    ಪಾಟ್ನಾ: ಬಿಹಾರದಲ್ಲಿ (Bihar) ಕಳೆದೊಂದು ವಾರದಿಂದ ಮದ್ಯ (Liquor) ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 70ಕ್ಕೇರಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಿಶೇಷ ತನಿಖಾ ತಂಡ (SIT) ಸರನ್ ಜಿಲ್ಲೆಯಲ್ಲಿ (Saran) ಕಳ್ಳಾಭಟ್ಟಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದೆ. ಆತನಿಂದ 2.17 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

    ಆರೋಪಿಯನ್ನು ಅಖಿಲೇಶ್ ಕುಮಾರ್ ಯಾದವ್ ಅಲಿಯಾಸ್ ಅಖಿಲೇಶ್ ರೈ ಎಂದು ಗುರುತಿಸಲಾಗಿದೆ. ಕಳ್ಳಾಭಟ್ಟಿ ಸೇವಿಸಿ ಜನರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಶ್ರಖ್ ಹಾಗೂ ಇಶುಪುರ್ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 2 ಎಫ್‌ಐಆರ್‌ಗಳಲ್ಲಿ ಆರೋಪಿಗಳ ಹೆಸರು ಇಲ್ಲವಾದರೂ ಎಸ್‌ಐಟಿ ತನಿಖೆಯ ವೇಳೆ ಅಖಿಲೇಶ್ ಭಾಗಿಯಾಗಿರುವುದು ಖಚಿತವಾಗಿದೆ. ಇದನ್ನೂ ಓದಿ: 16ರ ಬಾಲಕಿ ಮೇಲೆ 8 ಕಾಮುಕರಿಂದ ಸತತ 12 ಗಂಟೆ ಗ್ಯಾಂಗ್ ರೇಪ್

    ಆರೋಪಿಯ ವಿರುದ್ಧ ಈ ಹಿಂದೆಯೂ ಅಬಕಾರಿ ಕಾಯ್ದೆಯಡಿ 4 ಪ್ರಕರಣಗಳು ದಾಖಲಾಗಿವೆ. ಬಿಹಾರದ ಸರನ್‌ನಲ್ಲಿ ಕಳೆದ ಬುಧವಾರದಿಂದ ಇಲ್ಲಿಯವರೆಗೆ ಮದ್ಯ ಸೇವಿಸಿ 70 ಜನರು ಸಾವನ್ನಪ್ಪಿದ್ದಾರೆ.

    ಸರನ್‌ನಲ್ಲಿ ನಡೆದ ಕಳ್ಳಾಭಟ್ಟಿ ದುರಂತ (Bihar Hooch Tragedy) ರಾಷ್ಟ್ರೀಯ ಮಟ್ಟದಲ್ಲಿ ಬೆಳಕಿಗೆ ಬಂದಿದ್ದು, ಸರನ್ ಪೊಲೀಸರು ಅಕ್ರಮ ಮದ್ಯ ವ್ಯಾಪಾರ, ಸಾಗಣೆ, ಕಳ್ಳಸಾಗಣೆ ಹಾಗೂ ಅಕ್ರಮ ಮದ್ಯ ತಯಾರಿಕೆಯಲ್ಲಿ ತೊಡಗಿರುವ ಶಂಕಿತರನ್ನು ಪತ್ತೆ ಹಚ್ಚಲು ಹಾಗೂ ಬಂಧಿಸಲು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಇದನ್ನೂ ಓದಿ: ದಟ್ಟ ಮಂಜಿನಿಂದ ಕಾಣದಂತಾದ ರಸ್ತೆ – ಸರಣಿ ಅಪಘಾತದಿಂದಾಗಿ 22 ವಾಹನಗಳು ಜಖಂ

    Live Tv
    [brid partner=56869869 player=32851 video=960834 autoplay=true]