Tag: ಸರಣಿ ಕಳ್ಳತನ

  • ಸರಣಿ ಕಳ್ಳತನ- ಖದೀಮರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಸರಣಿ ಕಳ್ಳತನ- ಖದೀಮರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ವಿಜಯಪುರ: ಬುಧವಾರ ತಡರಾತ್ರಿಯಲ್ಲಿ ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ಸರಣಿ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಖತರ್ನಾಕ್ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸಿಂಧಗಿ ಪಟ್ಟಣದ ಸಂಗೀತಾ ಮೊಬೈಲ್ ಶೋರೂಂನಲ್ಲಿ ಲಕ್ಷಾಂತರ ರೂ. ಮೌಲ್ಯದ ಮೊಬೈಲ್‍ಗಳನ್ನು ಖದೀಮರು ದೋಚಿದ್ದಾರೆ. ಅಲ್ಲದೆ ಸಿದ್ದೇಶ್ವರ ಸೂಪರ್ ಬಾಜಾರ್, ಪೂಜಾರಿ ಟೈರ್ ರಿಮೊಡಿಂಗ್ ಶಾಫ್ ಹಾಗೂ ಸ್ಪೂರ್ತಿ ವೈನ್ ಶಾಫ್ ಗಳಲ್ಲಿಯೂ ಕಳ್ಳತನ ಮಾಡಿ ಖದೀಮರು ಪರಾರಿಯಾಗಿದ್ದಾರೆ.

    ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿ ಆಧರಿಸಿ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಇಬ್ಬರು ಕಳ್ಳರಿಂದ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಸ್ಥಳಕ್ಕೆ ಸಿಂಧಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆಗೆ ನಡೆಸಿದ್ದಾರೆ. ಸಿಂಧಗಿ ಪೊಲೀಸ್ ಠಾಣೆಯಲ್ಲಿ ಈ ಕಳ್ಳತನ ಪ್ರಕರಣ ದಾಖಲಾಗಿದೆ.