Tag: ಸರಕು ಸಾಗಣೆ ರೈಲು

  • ಶೀಘ್ರದಲ್ಲೇ ಹಳಿಗೆ ಇಳಿಯಲಿದೆ ಖಾಸಗಿ ಕಂಪೆನಿಗಳ ಸರಕು ಸಾಗಾಣಿಕೆ ರೈಲುಗಳು!

    ಶೀಘ್ರದಲ್ಲೇ ಹಳಿಗೆ ಇಳಿಯಲಿದೆ ಖಾಸಗಿ ಕಂಪೆನಿಗಳ ಸರಕು ಸಾಗಾಣಿಕೆ ರೈಲುಗಳು!

    ನವದೆಹಲಿ: ಶೀಘ್ರದಲ್ಲೇ ಭಾರತೀಯ ರೈಲ್ವೆ ಇಲಾಖೆ ಖಾಸಗಿ ಕಂಪೆನಿಗಳಿಗೆ ತಮ್ಮ ಸ್ವಂತ ನಿಲ್ದಾಣಗಳ ಮೂಲಕ ಸರಕು ಸಾಗಣೆ ರೈಲುಗಳ ಓಡಾಟ ನಡೆಸಲು ಅನುಮತಿ ನೀಡಲಿದೆ.

    ಸಿಮೆಂಟ್, ಸ್ಟೀಲ್, ರಾಸಾಯನಿಕ ಮತ್ತು ಗೊಬ್ಬರ, ಧಾನ್ಯ ಹೀಗೆ ವಿವಿಧ ವಲಯದ ಕಂಪೆನಿಗಳು ಈ ಯೋಜನೆಯಡಿ ತಮ್ಮದೇ ಸ್ವಂತ ಸರಕು ಸಾಗಣೆ ರೈಲನ್ನು ಹೊಂದಲು ಆಸಕ್ತಿ ತೋರಿವೆ ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಈ ಖಾಸಗಿ ನಿಲ್ದಾಣಗಳ ಮೂಲಕ ನಾವು 2 ರಿಂದ 2.5 ಕೋಟಿ ಟನ್‍ಗಳಷ್ಟು ಲೋಡ್ ಸಾಮಥ್ರ್ಯವನ್ನು ಹೆಚ್ಚಿಸಬಹುದು. ಕಲ್ಲಿದ್ದಲು ಹೊರತುಪಡಿಸಿ ಬೇರೆ ಎಲ್ಲಾ ಸರಕುಗಳಿಗೆ ಬೇಡಿಕೆ ಹೆಚ್ಚಿದೆ. ಆದ್ದರಿಂದ ವಿವಿಧ ವಲಯಗಳ ಸಂಸ್ಥೆಗಳು ಮುಂದೆ ಬಂದು ಬಂಡವಾಳ ಹಾಕಿ ಅವರಿಗೆ ಅನುಕೂಲಕರವಾದ ಸ್ಥಳಗಳಲ್ಲಿ ನಿಲ್ದಾಣಗಳನ್ನ ನಿರ್ಮಿಸಿಕೊಳ್ಳಬೇಕೆಂದು ಬಯಸುತ್ತೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಒಂದು ವೇಳೆ ಈ ಯೋಜನೆ ಯಶಸ್ವಿಯಾದ್ರೆ ಮುಂದೆ ಖಾಸಗಿ ಪ್ಯಾಸೆಂಜರ್ ರೈಲುಗಳ ಸಂಚಾರಕ್ಕೂ ಕೂಡ ದಾರಿ ಮಾಡಿಕೊಡಬಹುದಾಗಿದೆ. ಟಾಟಾ ಸ್ಟೀಲ್, ಅದಾನಿ ಆಗ್ರೋ, ಕ್ರಿಬ್ಕೋ ಸೇರಿದಂತೆ ಅನೇಕ ಕಂಪೆನಿಗಳು ಈಗಾಗಲೇ ಸ್ವಂತ ಖಾಸಗಿ ನಿಲ್ದಾಣಗಳನ್ನ ಹೊಂದಿವೆ.

    ರೈಲ್ವೆ ಇಲಾಖೆಯು ಪ್ರಸಕ್ತ ವರ್ಷಕ್ಕೆ 5 ಸಾವಿರ ಕೋಟಿ ರೂ. ವೆಚ್ಚದಲ್ಲಿ ದೇಶದಲ್ಲಿ 55 ಖಾಸಗಿ ಸರಕು ಸಾಗಣೆ ನಿಲ್ದಾಣಗಳಿಗೆ ಅನುಮತಿ ನೀಡಲು ನಿರ್ಧರಿಸಿದೆ. ಈ ಯೋಜನೆಯಡಿ ಸಂಸ್ಥೆಗಳು ಭಾರತೀಯ ರೈಲ್ವೆಯ ಬೋಗಿಗಳನ್ನ ಭೋಗ್ಯಕ್ಕೆ ಪಡೆಯಬಹುದು ಅಥವಾ ಕಂಪೆನಿಗಳು ತಮಗೆ ಬೇಕಾದಂತೆ ಬೋಗಿಗಳನ್ನ ತಯಾರಿಸಿಕೊಂಡು ತಮ್ಮ ಖಾಸಗಿ ನಿಲ್ದಾಣಗಳ ಮೂಲಕ ಅನುಕೂಲಕ್ಕೆ ತಕ್ಕಂತೆ ಓಡಾಟ ಮಾಡಬಹುದಾಗಿದೆ. ಆದರೂ ರೈಲಿನ ನಿರ್ವಹಣೆಯನ್ನ ರೈಲ್ವೆ ಇಲಾಖೆಯೇ ನೋಡಿಕೊಳ್ಳಲಿದ್ದು, ಕಂಪೆನಿಗಳು ಟ್ರ್ಯಾಕ್ ಮತ್ತು ಇತರೆ ಸೇವೆಗಳಿಗೆ ಶುಲ್ಕ ಕಟ್ಟಬೇಕಾಗುತ್ತದೆ. ಶೀಘ್ರದಲ್ಲೇ ರೈಲ್ವೆ ಅಭಿವೃದ್ಧಿ ಪ್ರಾಧಿಕಾರಿವನ್ನು ಸ್ಥಾಪಿಸಲಾಗುತ್ತಿದ್ದು, ಶುಲ್ಕವನ್ನ ಪ್ರಾಧಿಕಾರವೇ ನಿರ್ಧರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    17ನೇ ಹಣಕಾಸು ವರ್ಷದಲ್ಲಿ ರೈಲ್ವೆ ಇಲಾಖೆ 110.7 ಕೋಟಿ ಟನ್‍ಗಳಷ್ಟು ಲೋಡಿಂಗ್ ಮಾಡಿ ದಾಖಲೆ ಬರೆದಿದೆ. ಇನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ 120 ಕೋಟಿ ಟನ್‍ಗಳಷ್ಟು ಲೋಡಿಂಗ್ ಮಾಡಬೇಕೆಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಗುರಿ ಹೊಂದಿದ್ದಾರೆ.

  • ಇಂದು ಇಂಗ್ಲೆಂಡಿನಿಂದ ಹೊರಟು 7 ದೇಶಗಳನ್ನು ಸುತ್ತಿ ಚೀನಾ ತಲುಪಲಿದೆ ಈ ರೈಲು!

    ಇಂದು ಇಂಗ್ಲೆಂಡಿನಿಂದ ಹೊರಟು 7 ದೇಶಗಳನ್ನು ಸುತ್ತಿ ಚೀನಾ ತಲುಪಲಿದೆ ಈ ರೈಲು!

    – 3 ತಿಂಗಳ ಹಿಂದೆ ಇಂಗ್ಲೆಂಡಿಗೆ ಬಂದಿದ್ದ ರೈಲು

    ಲಂಡನ್: ಇಂಗ್ಲೆಂಡ್‍ನಿಂದ ಚೀನಾಗೆ ಮೊದಲ ಸರಕು ಸಾಗಣೆ ರೈಲು ಇಂದು ನಿರ್ಗಮಿಸಲಿದೆ. ಇಂಗ್ಲೆಂಡಿನ ಎಸ್ಸೆಕ್ಸ್‍ನಿಂದ 7500 ಮೈಲಿ(ಸುಮಾರು 12070 ಕಿ.ಮೀ) ಪ್ರಯಾಣವನ್ನು ಆರಂಭಿಸಲಿದೆ.

    ಇಂಗ್ಲೆಂಡಿನ ಸ್ಟ್ಯಾನ್‍ಫರ್ಡ್ ಲಿ ಹೋಪ್‍ನ ಡಿಪಿ ವರ್ಲ್ಡ್ ಲಂಡನ್ ಗೇಟ್‍ವೇ ರೈಲ್ ಟಮಿರ್ನಲ್‍ನಿಂದ ರೈಲು ಹೊರಡಲಿದೆ. ರೈಲಿನಲ್ಲಿರುವ 30 ಕಂಟೇನರ್‍ಗಳು ವಿಸ್ಕಿ, ತಂಪು ಪಾನೀಯ, ವಿಟಮಿನ್ಸ್ ಹಾಗೂ ಔಷಧಿ ಸೇರಿದಂತೆ ಬ್ರಿಟಿಷ್ ಸರಕುಗಳನ್ನ ಹೊತ್ತು ಸಾಗಲಿದೆ.

    ಚೀನಾದ ಝೀಜಿಯಾಂಗ್‍ನ ಪೂರ್ವ ಪ್ರಾಂತ್ಯದಲ್ಲಿರುವ ಪ್ರಸಿದ್ಧ ಹೋಲ್‍ಸೇಲ್ ಮಾರುಕಟ್ಟೆಯಾದ ಯಿವು ತಲುಪಲು ಈ ರೈಲು ಸುಮಾರು 12070 ಕಿ.ಮೀ ಪ್ರಯಾಣ ಮಾಡಲಿದ್ದು, 17 ದಿನಗಳ ಬಳಿಕ ಅಲ್ಲಿಗೆ ತಲುಪಲಿದೆ.

    ಈ ರೈಲು 7 ದೇಶಗಳಾದ ಫ್ರಾನ್ಸ್, ಬೆಲ್ಜಿಯಂ, ಜರ್ಮನಿ, ಪೋಲ್ಯಾಂಡ್, ಬೆಲಾರಸ್, ರಷ್ಯಾ ಹಾಗೂ ಕಜಕಿಸ್ತಾನವನ್ನು ದಾಟಿ ಸಾಗಲಿದ್ದು, ಏಪ್ರಿಲ್ 27 ರಂದು ಚೀನಾ ತಲುಪಲಿದೆ. ಇನ್ನು ವಿರುದ್ಧ ದಿಕ್ಕಿನಿಂದ ಮೊದಲ ಸರಕು ಸಾಗಣೆ ರೈಲು ಚೀನಾದಿಂದ ಇಂಗ್ಲೆಂಡಿಗೆ 3 ತಿಂಗಳ ಹಿಂದೆ ಬಂದಿತ್ತು.

    ವಿಮಾನಕ್ಕೆ ಹೋಲಿಸಿದ್ರೆ ರೈಲಿನ ಮೂಲಕ ಸರಕು ಸಾಗಣೆಗೆ ಕಡಿಮೆ ವೆಚ್ಛ ತಗುಲುತ್ತದೆ. ಹಾಗೆ ಸಮುದ್ರ ಮಾರ್ಗಕ್ಕಿಂತ ಕಡಿಮೆ ಸಮಯದಲ್ಲಿ ರೈಲಿನಲ್ಲಿ ಸರಕು ಸಾಗಣೆ ಮಾಡಬಹುದು ಎಂದು ರೈಲಿನ ನಿರ್ವಾಹಕರು ಹೇಳಿದ್ದಾರೆ.