Tag: ಸರಕು ರೈಲು

  • ಮೆಕ್ಸಿಕೋದಲ್ಲಿ ಇಂಧನ ಟ್ಯಾಂಕರ್‌ಗೆ ರೈಲು ಡಿಕ್ಕಿ – ಸ್ಥಳೀಯ ಮನೆಗಳು ಬೆಂಕಿಗಾಹುತಿ

    ಮೆಕ್ಸಿಕೋದಲ್ಲಿ ಇಂಧನ ಟ್ಯಾಂಕರ್‌ಗೆ ರೈಲು ಡಿಕ್ಕಿ – ಸ್ಥಳೀಯ ಮನೆಗಳು ಬೆಂಕಿಗಾಹುತಿ

    ಮೆಕ್ಸಿಕೋ ಸಿಟಿ: ಇಂಧನ ಟ್ಯಾಂಕರ್‌ಗೆ (Fuel Tanker) ರೈಲು (Train) ಡಿಕ್ಕಿ ಹೊಡೆದ ಪರಿಣಾಮ ಭಾರೀ ಬೆಂಕಿ (Fire) ಅವಘಡ ಉಂಟಾಗಿದ್ದು, ಸ್ಥಳೀಯ ಮನೆಗಳು ಸುಟ್ಟು ಕರಕಲಾಗಿರುವ ಘಟನೆ ಮಧ್ಯ ಮೆಕ್ಸಿಕೋದಲ್ಲಿ (Mexico) ಗುರುವಾರ ನಡೆದಿದೆ.

    ಘಟನೆಯ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಸರಕು ರೈಲೊಂದು ಸುತ್ತಲೂ ಬೆಂಕಿಯಿಂದ ಆವರಿಸಿರುವ ರೈಲ್ವೇ ಹಳಿಯಲ್ಲಿ ಸಾಗುತ್ತಿರುವುದು ಕಂಡುಬಂದಿದೆ. ಭಾರೀ ಬೆಂಕಿಗೆ ದಿಗ್ಭ್ರಮೆಗೊಂಡ ಸ್ಥಳೀಯರು ಬೆಂಕಿಯಿಂದ ತಪ್ಪಿಸಿಕೊಳ್ಳಲು ಚಲ್ಲಾಪಿಲ್ಲಿಯಾಗಿ ಓಡಿದ್ದಾರೆ.

    ವರದಿಗಳ ಪ್ರಕಾರ ಇಂಧನ ತುಂಬಿದ್ದ ಟ್ಯಾಂಕರ್ ಅನ್ನು ಚಲಾಯಿಸುತ್ತಿದ್ದ ಚಾಲಕ ರೈಲ್ವೇ ಹಳಿಯನ್ನು ದಾಟಲು ಪ್ರಯತ್ನಿಸುತ್ತಿದ್ದ. ಇದೇ ವೇಳೆ ಸರಕು ರೈಲು ಆಗಮಿಸಿದೆ. ಟ್ಯಾಂಕರ್ ಚಾಲಕ ಪ್ರಾಣ ಉಳಿಸಿಕೊಳ್ಳಲು ವಾಹನವನ್ನು ಅಲ್ಲೇ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಈ ವೇಳೆ ವೇಗವಾಗಿ ಬಂದ ರೈಲು ಇಂಧನ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಭಾರೀ ಬೆಂಕಿ ಹುಟ್ಟಿಕೊಂಡಿದೆ. ಇದನ್ನೂ ಓದಿ: ಇನ್ನೂ ಮುಗಿಯದ ಸುರತ್ಕಲ್ ಟೋಲ್‍ಗೇಟ್ ವಿವಾದ- ಹೋರಾಟಗಾರರ ಮೇಲೆ ಎಫ್‍ಐಆರ್

    ಘಟನೆಯಿಂದ ಉಂಟಾದ ಬೆಂಕಿ ಸ್ಥಳೀಯ ವಸತಿ ಪ್ರದೇಶಕ್ಕೆ ತಗುಲಿದೆ. ಹಲವು ಮನೆಗಳು ಸುಟ್ಟು ಕರಕಲಾಗಿದ್ದು, 800 ರಿಂದ 1,000 ಜನರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ. ಸದ್ಯ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಒಬ್ಬ ಸ್ಥಳೀಯನಿಗೆ ಹೊಗೆಯಿಂದಾಗಿ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಆತನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

    ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಟ್ಯಾಂಕರ್ ಚಾಲಕನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪೀಠೋಪಕರಣ ಮಳಿಗೆಯಲ್ಲಿ ಆಕಸ್ಮಿಕ ಬೆಂಕಿ

    Live Tv
    [brid partner=56869869 player=32851 video=960834 autoplay=true]

  • ಭಾರತದ ಅತಿ ಉದ್ದದ ಸರಕು ರೈಲು ‘ಸೂಪರ್ ವಾಸುಕಿ’ – ಇದರ ವಿಶೇಷತೆ ಏನು ಗೊತ್ತಾ?

    ಭಾರತದ ಅತಿ ಉದ್ದದ ಸರಕು ರೈಲು ‘ಸೂಪರ್ ವಾಸುಕಿ’ – ಇದರ ವಿಶೇಷತೆ ಏನು ಗೊತ್ತಾ?

    ರಾಯ್ಪುರ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಭಾರತದ ಅತಿ ಉದ್ದವಾದ ಸರಕು ರೈಲನ್ನು ಪರೀಕ್ಷಿಸಲಾಗಿದೆ. ಬರೋಬ್ಬರಿ 3.5 ಕಿ.ಮೀ ಉದ್ದದ ಸೂಪರ್ ವಾಸುಕಿ ರೈಲು ಛತ್ತೀಸ್‌ಗಢದ ಕೊರ್ಬಾದಿಂದ ನಾಗಪುರದ ರಾಜನಂದಗಾವ್‌ಗೆ ಓಡಾಟ ನಡೆಸಿದೆ.

    ಸೂಪರ್ ವಾಸುಕಿ ರೈಲು ಇದುವರೆಗೆ ಭಾರತೀಯ ರೈಲ್ವೇಯಿಂದ ನಡೆಸಲ್ಪಟ್ಟ ಅತಿ ಉದ್ದವಾದ ಹಾಗೂ ಭಾರವಾದ ಸರಕು ಸಾಗಣೆ ರೈಲಾಗಿದೆ. ಇದು ರೈಲ್ವೇ ನಿಲ್ದಾಣವನ್ನು ದಾಟಲು ಸುಮಾರು 4 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

    295 ಬಂಡಿಗಳುಳ್ಳ ರೈಲು ಸುಮಾರು 27 ಸಾವಿರ ಟನ್ ಕಲ್ಲಿದ್ದಲನ್ನು ಹೊತ್ತು ಕೋರ್ಬಾದಿಂದ ನಾಗಪುರದ ರಾಜನಂದಗಾವ್ ತಲುಪಿದೆ. ರೈಲು ಸ್ಥಳ ತಲುಪಲು 11:20 ಗಂಟೆಗಳನ್ನು ತೆಗೆದುಕೊಂಡಿದೆ. ಈ ಗೂಡ್ಸ್ ರೈಲಿಗೆ 6 ಎಂಜಿನ್ ಬಳಸಲಾಗಿತ್ತು. ಇದನ್ನೂ ಓದಿ: ಡಿಫರೆಂಟ್ ಕೇಶ ವಿನ್ಯಾಸಕ್ಕೆ ಯುವಕರ ಕ್ಯೂ!

    ಸೂಪರ್ ವಾಸುಕಿ ರೈಲು ಒಂದು ಬಾರಿ ಹೊತ್ತೊಯ್ಯಬಲ್ಲ ಕಲ್ಲಿದ್ದಲಿನಿಂದ 3,000 ಮೆಗಾವ್ಯಾಟ್‌ನ ವಿದ್ಯುತ್ ಸ್ಥಾವರವನ್ನು ಒಂದು ಇಡೀ ದಿನ ಉರಿಸಲು ಸಾಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕೇಂದ್ರವೂ ಅತ್ಯಂತ ಉದ್ದವಾದ ರೈಲುಗಳನ್ನೇ ಕಲ್ಲಿದ್ದಲು ಸಾಗಾಣೆಗೆ ಹೆಚ್ಚಾಗಿ ಬಳಸಲು ಯೋಜಿಸಿದೆ. ಮುಖ್ಯವಾಗಿ ವಿದ್ಯುತ್ ಕೇಂದ್ರಗಳಲ್ಲಿ ಇಂಧನ ಕೊರತೆಗಳನ್ನು ನೀಗಿಸಲು ಹಾಗೂ ಅತಿ ಹೆಚ್ಚು ಬೇಡಿಕೆಯ ಸಮಯಗಳಲ್ಲಿ ಕಲ್ಲಿದ್ದಲು ಸಾಗಿಸಲು ಬಳಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ತಲುಪಿರುವ ಹಡಗು ಯಾವುದೇ ದೇಶಗಳಿಗೂ ತೊಂದರೆ ಕೊಡಲ್ಲ: ಚೀನಾ

    Live Tv
    [brid partner=56869869 player=32851 video=960834 autoplay=true]