Tag: ಸರ

  • ದೇವರ ಭಜನೆಯಲ್ಲಿ ಮಗ್ನರಾಗಿದ್ದಾಗ ಕಿಟಿಕಿಯಿಂದ ಮಹಿಳೆಯ ಸರ ಕದ್ದು ಪರಾರಿ – FIR ದಾಖಲು

    ದೇವರ ಭಜನೆಯಲ್ಲಿ ಮಗ್ನರಾಗಿದ್ದಾಗ ಕಿಟಿಕಿಯಿಂದ ಮಹಿಳೆಯ ಸರ ಕದ್ದು ಪರಾರಿ – FIR ದಾಖಲು

    ಬೆಂಗಳೂರು: ದೇವರ ಭಜನೆಯಲ್ಲಿ ಮಗ್ನರಾಗಿದ್ದ ಸಂದರ್ಭ ಕಿಟಕಿಯಿಂದ ಮಹಿಳೆಯ (Woman) ಸರ ಕದ್ದು (Chain Snatch) ಆರೋಪಿ ಪರಾರಿಯಾಗಿರುವ ಘಟನೆ ನಂದಿನಿ ಲೇಔಟ್‌ನ (Nandini Layout) ಶಂಕರನಗರ (Shankar Nagar) ಗಣೇಶ ದೇಗುಲದಲ್ಲಿ ನಡೆದಿದೆ.

    ಅಕ್ಟೋಬರ್ 11ರಂದು ನಡೆದ ಘಟನೆ ಭಕ್ತರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಮಂಗಳಾ ಎಂಬ ಮಹಿಳೆ ಅಕ್ಟೋಬರ್ 11ರ ಸಂಜೆ 6:30ರ ಸುಮಾರಿಗೆ ದೇಗುಲಕ್ಕೆ ಬಂದಿದ್ದರು. ಶಂಕರನಗರದ ನಿವಾಸಿಯಾಗಿರುವ ಮಂಗಳಾ ಪತಿ ರೈಲ್ವೆ ಇಲಾಖೆ ನಿವೃತ್ತ ಅಧಿಕಾರಿಯಾಗಿದ್ದರು. ಕಿಟಕಿ ಪಕ್ಕ ಕೂತು ಭಜನೆ ಮಾಡುತ್ತಿದ್ದಾಗ ಸಂಜೆ 7:17ರ ಸುಮಾರಿಗೆ ಕಳ್ಳ ಮಂಗಳಮ್ಮನ ಕುತ್ತಿಗೆಗೆ ಕೈ ಹಾಕಿ ಚಿನ್ನದ ಮಾಂಗಲ್ಯ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಇದನ್ನೂ ಓದಿ: ದರ್ಶನ್‌, ಪವಿತ್ರಾಗೆ ನೋ ರಿಲೀಫ್‌ – ಕೋರ್ಟ್‌ ಜಾಮೀನು ನೀಡದ್ದು ಯಾಕೆ?

    ಸರ ಕಿತ್ತುಕೊಳ್ಳಲು ಯತ್ನಿಸಿದ ಸಂದರ್ಭ ಮಹಿಳೆ ಬಿಗಿಯಾಗಿ ಮಾಂಗಲ್ಯ ಹಿಡಿದುಕೊಂಡಿದ್ದಾರೆ. ಮಾಂಗಲ್ಯ ಸರವನ್ನು ಬಿಗಿಯಾಗಿ ಹಿಡಿದುಕೊಂಡ ಪರಿಣಾಮ 70 ಗ್ರಾಂ ತೂಕದ ಸರ ತುಂಡಾಗಿ ಮೂವತ್ತು ಗ್ರಾಂ ಕಳ್ಳನ ಕೈಗೆ ಸಿಕ್ಕಿದೆ. ಈ ವೇಳೆ ಮಹಿಳೆ ಜೋರಾಗಿ ಕೂಗಿಕೊಳ್ಳಲು ಪ್ರಾರಂಭಿಸಿದ್ದು, ಕಳ್ಳ ಅಲ್ಲಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಪಿಎಸ್‌ಐ ಫಲಿತಾಂಶ ಪ್ರಕಟಿಸುವಂತೆ ವಿಜಯೇಂದ್ರ ಆಗ್ರಹ

    ಕಳ್ಳನ ಕೈಚಳಕ ಭಜನೆ ವೀಡಿಯೋ ಮಾಡುತ್ತಿದ್ದ ಭಕ್ತರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಘಟನೆಯ ಬಳಿಕ ಅಕ್ಟೋಬರ್ 11ರ ರಾತ್ರಿ 9 ಗಂಟೆಗೆ ಮಂಗಳಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆ ನೀಡಿದ ದೂರಿನ ಆಧಾರದಲ್ಲಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಬಾಗಲಕೋಟೆ| ಅಂಗನವಾಡಿಗಳಿಗೆ ಮೂರು ತಿಂಗಳಿನಿಂದ ಸರಬರಾಜು ಆಗುತ್ತಿಲ್ಲ ಆಹಾರ!

  • ಮಂಕಿ ಕ್ಯಾಪ್ ಧರಿಸಿ  ವೃದ್ಧೆಯ ಚಿನ್ನದ ಸರ ಎಗರಿಸಿ ಖದೀಮ ಪರಾರಿ

    ಮಂಕಿ ಕ್ಯಾಪ್ ಧರಿಸಿ ವೃದ್ಧೆಯ ಚಿನ್ನದ ಸರ ಎಗರಿಸಿ ಖದೀಮ ಪರಾರಿ

    ಕೋಲಾರ: ಮಂಕಿ ಕ್ಯಾಪ್ ಧರಿಸಿ ಬಂದಿದ್ದ ಮುಸುಕುಧಾರಿಯೋರ್ವ, ಒಂಟಿ ಮನೆಯಲ್ಲಿದ್ದ ವೃದ್ಧೆಯ ಚಿನ್ನದ ಸರ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ದೇವಗಾನಹಳ್ಳಿಯಲ್ಲಿ ಈ ಘಟನೆ ನಡೆದಿದೆ.

    ವೆಂಕಟಲಕ್ಷ್ಮಮ್ಮ ಅವರ ಒಂದೂವರೆ ಲಕ್ಷ ಮೌಲ್ಯದ ಚಿನ್ನದ ಸರ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಮಂಕಿ ಕ್ಯಾಪ್, ಹ್ಯಾಂಡ್ ಗ್ಲೌಸ್ ಹಾಗೂ ಜರ್ಕಿನ್ ಧರಿಸಿ ಬಂದಿದ್ದ ವ್ಯಕ್ತಿ ಮನೆಯಲ್ಲಿ ಮಲಗಿದ್ದ ವೇಳೆ ಬಾಗಿಲು ಬಡಿದು ವೃದ್ಧೆಯನ್ನು ಎಚ್ಚರಗೊಳಿಸಿ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಓದಿ: ಹತ್ಯೆ ಸ್ಥಳದಲ್ಲಿ ನನ್ನ ಮಗ ಇದ್ದಿದ್ದು ನಿಜವಾದ್ರೆ ರಾಜೀನಾಮೆ ನೀಡುತ್ತೇನೆ: ಅಜಯ್ ಮಿಶ್ರಾ

    ಬಾಗಿಲು ತೆರಯುತ್ತಿದ್ದಂತೆ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದಾನೆ. ಸುಮಾರು 1.5 ಲಕ್ಷ ಮೌಲ್ಯದ ಸುಮಾರು 40 ಗ್ರಾಮ ಚಿನ್ನದ ಸರ ಕಳ್ಳತನ ಮಾಡಿರುವ ಆರೋಪಿ ಮಹಿಳೆ ಚಿರಾಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾನೆ. ಕೆಜಿಎಫ್ ಸುತ್ತಮುತ್ತ ಇದು ಕಳೆದ 15 ದಿನಗಳಲ್ಲಿ ಮೂರನೆ ಪ್ರಕರಣವಾಗಿದ್ದು, ಬೆಚ್ಚಿಬೀಳಿಸಿದ ಘಟನೆಗೆ ಗ್ರಾಮದಲ್ಲಿ ಆತಂಕದ ವಾತಾವರಣ ಎದುರಾಗಿದೆ. ಬಂಗಾರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಲಖೀಂಪುರದಲ್ಲಿ ನಾಲ್ವರು ರೈತರನ್ನು ಕೊಂದ ಪ್ರಕರಣ – ಇನ್ನೂ ಅರೆಸ್ಟ್ ಆಗಿಲ್ಲ ಮಂತ್ರಿ ಮಗ

  • ನಗರದಲ್ಲಿ ಸರಗಳ್ಳತನ ಮಾಡುತ್ತಿದ್ದ ಬವಾರಿಯ ಗ್ಯಾಂಗ್ ಅರೆಸ್ಟ್

    ನಗರದಲ್ಲಿ ಸರಗಳ್ಳತನ ಮಾಡುತ್ತಿದ್ದ ಬವಾರಿಯ ಗ್ಯಾಂಗ್ ಅರೆಸ್ಟ್

    ಬೆಂಗಳೂರು: ನಗರದಲ್ಲಿ ಸರಗಳ್ಳತನ ಮಾಡುತ್ತಿದ್ದ ಬವಾರಿಯ ಗ್ಯಾಂಗ್‍ನ್ನು ಹೆಡೆಮುರಿ ಕಟ್ಟುವಲ್ಲಿ ವಿಜಯ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

    ನಗರದಲ್ಲಿ ನಡೆದ ಹಲವು ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ ಬವಾರಿಯ ಗ್ಯಾಂಗ್‍ನ ರಾಹುಲ್, ಗೌರವ್, ನೀತಿನ್ ರಿಯಾಜ್ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಉತ್ತರಪ್ರದೇಶದಿಂದ ಬಂದು ನಗರದಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದರು. ಆರೋಪಿಗಳು ಉತ್ತರಪ್ರದೇಶ, ದೆಹಲಿ, ಜಮ್ಮುಕಾಶ್ಮೀರದಿಂದ ವಿಮಾನದಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಆಕ್ಟೀವ್ ಆಗಿದೆಯಾ ಓಜಿಕುಪ್ಪಂ ಗ್ಯಾಂಗ್? ಒಂಟಿ ಮಹಿಳೆಯರೇ ಇವರ ಟಾರ್ಗೆಟ್!

    ನಗರದ ವಿಜಯನಗರ, ಕೆಂಗೇರಿ, ತಿಲಕ ನಗರ, ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿರುವುದು ಬೆಳಕಿಗೆ ಬಂದಿದ್ದು, ಸರಗಳ್ಳತನ ಜೊತೆಗೆ ಕಾಮಾಕ್ಷಿ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಮನೆಯಲ್ಲಿ ಕಳ್ಳತನ ಮಾಡಿರುವುದು ಕೂಡ ತನಿಖೆಯ ವೇಳೆ ತಿಳಿದು ಬಂದಿದೆ. ಬಂಧಿತ ಆರೋಪಿಗಳಿಂದ 13 ಲಕ್ಷ ಬೆಲೆ ಬಾಳುವ 260 ಗ್ರಾಂ. ಚಿನ್ನಾಭರಣ, 2,000 ಸಾವಿರ ನಗದು, ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಪ್ರತ್ಯೇಕವಾಗಿ ಮೂರು ಗ್ಯಾಂಗ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ. ಸದ್ಯ ಆರೋಪಿಗಳು ವಿಜಯನಗರ ಪೊಲೀಸರ ವಶದಲ್ಲಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಗ್ಯಾಂಗ್‍ರೇಪ್ ಎಸಗಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ ಕಿರಾತಕರು!

  • ನಡು ರಸ್ತೆಯಲ್ಲಿ 8 ತಿಂಗಳ ಗರ್ಭಿಣಿ ಎಳೆದು ಸರ ಕದ್ದ ಖದೀಮರು

    ನಡು ರಸ್ತೆಯಲ್ಲಿ 8 ತಿಂಗಳ ಗರ್ಭಿಣಿ ಎಳೆದು ಸರ ಕದ್ದ ಖದೀಮರು

    ಚೆನ್ನೈ: ನಡುಬೀದಿಯಲ್ಲಿ 8 ತಿಂಗಳ ಗರ್ಭಿಣಿ ಮೇಲೆ ಹಲ್ಲೆ ನಡೆಸಿ ಅಪರಿಚಿತ ವ್ಯಕ್ತಿಗಳು ಚಿನ್ನದ ಸರ ಕದ್ದಿರುವ ಆಘಾತಕಾರಿ ಘಟನೆ ಶುಕ್ರವಾರ ಬೆಳಗ್ಗೆ ಚೆನ್ನೈನ ಪಲ್ಲವರಂನಲ್ಲಿ ನಡೆದಿದೆ.

    ಬೈಕ್‍ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗೀತಾ ಎಂಬ ಮಹಿಳೆಯ ಪಕ್ಕದಲ್ಲಿ ನಿಲ್ಲಿಸಿ, ಸರ ಕದಿಯಲು ಯತ್ನಿಸಿದ್ದಾರೆ. ಈ ವೇಳೆ ಗೀತಾ ವಿರೋಧಿಸಿದಾಗ, ಸರಗಳ್ಳರು ಆಕೆಯನ್ನು ಜೋರಾಗಿ ರಸ್ತೆ ಮಧ್ಯೆ ತಳ್ಳಾಡುತ್ತಾ ಎಳೆದಾಡಿದ್ದಾರೆ. ಆಗ ಮಹಿಳೆ ಜೋರಾಗಿ ಕೂಗಿದನ್ನು ಕೇಳಿ ಅಲ್ಲಿದ್ದ ನೆರೆಹೊರೆಯವರು ಮನೆಯಿಂದ ಹೊರಗೆ ಬಂದಿದ್ದಾರೆ. ಆದರೆ ಆ ಹೊತ್ತಿಗೆ ಸರಗಳ್ಳರು ಸರದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ.

    ಘಟನೆ ವೇಳೆ ಗೀತಾಗೆ ಹಾನಿಯಾಗಿದ್ದು ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವಿಚಾರವಾಗಿ ಗೀತಾ, ತನ್ನ ತೋಳು ಹಾಗೂ ಕಾಲಿಗೆ ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಮಹಿಳೆಯ ಪತಿ ರಾಮಚಂದ್ರನ್ ಪಲ್ಲವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಮೊದಲಿಗೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದ ಪೊಲೀಸರು ವೀಡಿಯೋ ವೈರಲ್ ಆಗುತ್ತಿದ್ದಂತೆ ಸೋಮವಾರ ಎಫ್‍ಐಆರ್ ದಾಖಲಿಸಿದ್ದಾರೆ.

    ಈ ಕುರಿತಂತೆ ತನಿಖೆಯನ್ನು ಚುರುಕುಗೊಳಿಸಿ ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ವೃದ್ಧೆಯ ಸರ ಎಗರಿಸಿ ಎಸ್ಕೇಪ್- ಎಳೆದ ರಭಸಕ್ಕೆ ಕೆಳಗೆ ಬಿದ್ದ ಹಿರಿ ಜೀವ

    ವೃದ್ಧೆಯ ಸರ ಎಗರಿಸಿ ಎಸ್ಕೇಪ್- ಎಳೆದ ರಭಸಕ್ಕೆ ಕೆಳಗೆ ಬಿದ್ದ ಹಿರಿ ಜೀವ

    ಬೆಂಗಳೂರು: ನಗರದಲ್ಲಿ ಮತ್ತೆ ಮುಂದುವರಿದ ಸರಗಳ್ಳರ ಹಾವಳಿ ಆರಂಭವಾಗಿದೆ. ವೃದ್ಧೆಯೊಬ್ಬರ ಸರ ಕಳವು ಮಾಡಿ ಎಸ್ಕೇಪ್ ಆಗಿರುವ ಘಟನೆ ಕೆಂಗೇರಿ ಬಳಿಯ ವಲಗೇರಹಳ್ಳಿ ಮುಖ್ಯರಸ್ತೆಯಲ್ಲಿನಡೆದಿದೆ.

    ಭಾನುವಾರ ಆಯುಧಪೂಜೆ ಹಿನ್ನೆಲೆಯಲ್ಲಿ ವೃದ್ಧೆ ಸರೋಜಮ್ಮ ಪೂಜಾ ಸಾಮಗ್ರಿ ತರಲು ತೆರಳುತ್ತಿದ್ದರು. ಈ ವೇಳೆ ಹಿಂಬಂದಿಯಿಂದ ಬೈಕ್ ನಲ್ಲಿ ಬಂದ ವ್ಯಕ್ತಿ ಕ್ಷಣಾರ್ಧದಲ್ಲಿ ಕುತ್ತಿಗೆಯಲ್ಲಿದ್ದ ಸರ ಎಗರಿಸಿ ಪರಾರಿಯಾಗಿದ್ದಾನೆ. ಆರೋಪಿ ಚಿನ್ನದ ಸರ ಎಳೆದ ರಭಸಕ್ಕೆ ವೃದ್ಧೆ ಕಳೆಗೆ ಬಿದ್ದಿದ್ದಾರೆ. ಪರಿಣಾಮ ವೃದ್ದೆಯ ಮೊಣಕೈ ಹಾಗೂ ಕಾಲುಗಳಿಗೆ ಗಾಯಗಳಾಗಿವೆ.

    ಗಾಯಾಳು ವೃದ್ಧೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಆರೋಪಿಯ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವೃದ್ಧೆಗೆ ಖಾರದ ಪುಡಿ ಎರಚಿ ಸರ ಕಿತ್ತು ಪರಾರಿಯಾಗಿದ್ದ ಆರೋಪಿ ಸೆರೆ

    ವೃದ್ಧೆಗೆ ಖಾರದ ಪುಡಿ ಎರಚಿ ಸರ ಕಿತ್ತು ಪರಾರಿಯಾಗಿದ್ದ ಆರೋಪಿ ಸೆರೆ

    ಚಿಕ್ಕಮಗಳೂರು: ಜಮೀನಿನಲ್ಲಿ ಕೆಲಸ ಮಾಡುವಾಗ ಎಲೆ ಅಡಿಕೆ ಕೇಳುವ ನೆಪದಲ್ಲಿ 70 ವರ್ಷದ ವೃದ್ಧೆಯ ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದ ಆರೋಪಿಗಳನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

    ಜಿಲ್ಲೆಯ ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಗ್ರಾಮದ 70 ವರ್ಷಮ್ಮ ಜಯಮ್ಮ ಎಂಬವರ ಬಳಿ ಎಲೆ-ಅಡಿಕೆ ಕೇಳುವ ವೇಳೆ 28 ಗ್ರಾಂ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದನು. ಜಯಮ್ಮ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿರುವುದನ್ನು ಗಮನಿಸಿದ ಭೂತನಹಳ್ಳಿ ಗೋವಿಂದ ಎಂಬವನು ಆಕೆಯ ಬಳಿ ಎಲೆ ಬೇಕು ಎಂದು ಕೇಳಿದ್ದಾನೆ. ವೃದ್ಧೆ ಎಲೆ-ಅಡಿಕೆ ಹುಡುಕುತ್ತಿದ್ದಾಗ ಅವರ ಕುತ್ತಿಗೆಯಲ್ಲಿದ್ದ ಸರವನ್ನು ನೋಡಿ ಕಣ್ಣಿಗೆ ಕಾರದ ಪುಡಿ ಎರಚಿ ಸರವನ್ನು ಕದ್ದು ಪರಾರಿಯಾಗಿದ್ದನು.

    ಕೂಡಲೇ ಜಯಮ್ಮ ಅಜ್ಜಂಪುರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು, ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಸ್ಥಳೀಯರ ಮಾಹಿತಿ ಮೆರೆಗೆ ಆರೋಪಿ ಗೋವಿಂದನನ್ನು ಅಜ್ಜಂಪುರದ ಬೇಗೂರು ಹಳ್ಳದ ಬಳಿ ಪೊಲೀಸರು ಬಂಧಿಸಿದ್ದರು. ಈ ವೇಳೆ ಆರೋಪಿಯಿಂದ ಒಂದು ಲಕ್ಷ ಮೌಲ್ಯದ ಚಿನ್ನದ ಸರ ಹಾಗೂ ಒಂದು ಬೈಕ್ ವಶ ಪಡಿಸಿಕೊಂಡಿದ್ದು, ಆರೋಪಿ ಗೋವಿಂದನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

  • ಮುದುಕಿ ಎನ್ನುವುದನ್ನೂ ಲೆಕ್ಕಿಸದ ಕಳ್ಳರು- ಎಳೆದ ರಭಸಕ್ಕೆ ನೆಲಕ್ಕುರುಳಿ ಒದ್ದಾಡಿದ ವೃದ್ಧೆ

    ಮುದುಕಿ ಎನ್ನುವುದನ್ನೂ ಲೆಕ್ಕಿಸದ ಕಳ್ಳರು- ಎಳೆದ ರಭಸಕ್ಕೆ ನೆಲಕ್ಕುರುಳಿ ಒದ್ದಾಡಿದ ವೃದ್ಧೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸರಗಳ್ಳರ ಹಾವಳಿ ಮಿತಿ ಮೀರುತ್ತಿದ್ದು, ಮಹಿಳೆಯರು, ವೃದ್ಧೆಯರು ಚಿನ್ನಾಭರಣ ಧರಿಸಿ ಓಡಾಡುವುದೇ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ವೃದ್ಧೆಯನ್ನೂ ಬಿಡದ ಕಳ್ಳರು, ಸರ ಕದಿಯುವ ಭರದಲ್ಲಿ ಹಲ್ಲೆ ನಡೆಸಿದ್ದಾರೆ.

    ಅಜ್ಜಿಯನ್ನೂ ಬಿಡದ ಕಳ್ಳ ಕುತ್ತಿಗೆಯಲ್ಲಿನ ಸರಕ್ಕೆ ಕೈ ಹಾಕಿ ಎಳೆದು ನೆಲಕ್ಕೆ ಬೀಳಿಸಿದ್ದಾನೆ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಪರಿಚಯಸ್ಥರ ರೀತಿ ಮಾತನಾಡಿಕೊಂಡು ಹತ್ತಿರ ಬಂದು ಸರ ಎಳೆದಿದ್ದಾನೆ.

    ಬೈಕ್‍ನಲ್ಲಿದ್ದ ಕಳ್ಳರು ನಿಧಾನವಾಗಿ ಬಂದು ವೃದ್ಧೆಯ ಸರಕ್ಕೆ ಕೈ ಹಾಕಿ ಎಳೆದಿದ್ದಾರೆ. ಎಳೆಯುವ ರಭಸಕ್ಕೆ ಅಜ್ಜಿ ಮಕಾಡೆ ಬೀಳುತ್ತಾರೆ. ಆಗ ಕಳ್ಳ ಸರ ಕಿತ್ತುಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗುತ್ತಾರೆ. ಅಜ್ಜಿಯ ಸರ ಕೀಳುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಗೇಟಿನೊಳಗೆ ಹೋಗುತ್ತಿದ್ದ ಅಜ್ಜಿಯನ್ನು ಮಾತನಾಡಿಸುವ ನೆಪದಲ್ಲಿ ತಡೆದು ಕಳ್ಳರು ಕೈ ಚಳಕ ತೋರಿದ್ದಾರೆ. ಈ ಕುರಿತು ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಸರಗಳ್ಳನ ಮೇಲೆ ಶೂಟೌಟ್- ಚಿನ್ನದ ಸರದ ಗಣಿಯೇ ಪತ್ತೆ

    ಸರಗಳ್ಳನ ಮೇಲೆ ಶೂಟೌಟ್- ಚಿನ್ನದ ಸರದ ಗಣಿಯೇ ಪತ್ತೆ

    ಬೆಂಗಳೂರು: ಜೂನ್ ತಿಂಗಳಿನಲ್ಲಿ ಶೂಟೌಟ್ ಗೆ ಒಳಗಾಗಿದ್ದ ಆರೋಪಿಯಿಂದ ಬರೋಬ್ಬರಿ 1 ಕೋಟಿ ರೂ. ಮೌಲ್ಯದ ಚಿನ್ನದ ಸರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಅಚ್ಯುತ್ ಕುಮಾರ್ ಅಲಿಯಾಸ್ ಗಣಿ ಪೊಲೀಸರಿಂದ ಶೂಟೌಟಿಗೆ ಒಳಗಾಗಿದ್ದ ಆರೋಪಿ. ಈತನ ಮೇಲೆ ರಾಜ್ಯದಾದ್ಯಂತ 105 ಸರಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಈತ ಮೂಲತಃ ಧಾರವಾಡ ಜಿಲ್ಲೆಯ ಕೋಳಿವಾಡದವನು. ಆರೋಪಿ ಅಚ್ಯುತ್ ಕುಮಾರ್ ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದನು.

    ಕಳೆದ ಕೆಲವು ವರ್ಷಗಳಿಂದ ಕುಂಬಳಗೂಡಿನಲ್ಲಿ ಒಂದು ಮನೆ ಮಾಡಿಕೊಂಡು ವಾಸಮಾಡುತ್ತಿದ್ದನು. ಬಳಿಕ ರಿಂಗ್ ರೋಡ್ ಬಳಿದ್ದ ಸುತ್ತಮುತ್ತಾ ಏರಿಯಾಗಳಲ್ಲಿ ಸರಗಳ್ಳತನ ಮಾಡುತ್ತಿದ್ದನು. ಕಳೆದ ಜೂನ್ 17 ರಂದು ಕೆಂಗೇರಿ ಬಳಿ ಅಚ್ಯುತ್ ಕುಮಾರ್ ಕಾಲಿಗೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದರು. ಇದನ್ನೂ ಓದಿ: 150 ಕೇಸ್ ನಲ್ಲಿ ಬೇಕಾಗಿದ್ದ ಆರೋಪಿಗೆ ಶೂಟ್, ಅರೆಸ್ಟ್ – ಡಿಸಿಪಿ ರವಿ ಡಿ.ಚನ್ನಣ್ಣನವರಿಂದ ತಂಡಕ್ಕೆ ಬಹುಮಾನ ಘೋಷಣೆ

    ಪೊಲೀಸರು ಬಳಿಕ ತನಿಖೆಯನ್ನು ಮುಂದುವರಿಸಿದ್ದು, ಈಗ ಈತ ಕಳ್ಳತನ ಮಾಡಿದ್ದ ಬರೋಬ್ಬರಿ 1 ಕೋಟಿ ಮೌಲ್ಯದ ಚಿನ್ನದ ಸರಗಳು ಪತ್ತೆಯಾಗಿವೆ. ಆರೋಪಿ ಅಚ್ಯುತ್ ಕಳವು ಮಾಡಿದ್ದ ಮಾಲ್ ಗಳನ್ನು ಗವಿ ಸಿದ್ದೇಶನ ಬಳಿ ಅಡ ಇಡುತ್ತಿದ್ದನು. ಇದರಿಂದ ಅಡ ಇಟ್ಟುಕೊಂಡ ತಪ್ಪಿಗೆ ಈಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಅಚ್ಯುತ್ ನನ್ನ ಬಂಧಿಸಲು ಮೂರು ವಿಶೇಷ ತಂಡವನ್ನ ರಚನೆ ಮಾಡಲಾಗಿತ್ತು.

    ಜೂನ್ 17 ಏನಾಗಿತ್ತು?
    ಸರಗಳ್ಳ ಅಚ್ಯುತ್ ಕುಮಾರ್ ನನ್ನ ಜ್ಞಾನಭಾರತಿ ಪೊಲೀಸರು ಬಂಧಿಸಿದ್ದರು. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ನಸುಕಿನ ಜಾವ ಸುಮಾರು 2.30ಕ್ಕೆ ಕುಂಬಳಗೋಡಿಗೆ ಕರೆದೊಯ್ಯುಲಾಗುತ್ತಿತ್ತು. ಕೆಂಗೇರಿ ಸ್ಯಾಟ್ ಲೈಟ್ ಟೌನ್ ಬಳಿ ಬರುವ ವೇಳೆಗೆ ಮೂತ್ರ ವಿಸರ್ಜನೆ ಮಾಡಬೇಕೆಂದು ಹೇಳಿ ತಪ್ಪಿಸಿಕೊಂಡಿದ್ದನು. ತಪ್ಪಿಸಿಕೊಂಡ ಆರೋಪಿಗಾಗಿ ಪೊಲೀಸ್ ತಂಡವನ್ನು ಆಯೋಜಿಸಲಾಗಿತ್ತು. ಕೋಡಿಪಾಳ್ಯ ನೈಸ್ ಮಾರ್ಗದಲ್ಲಿ ಇರುವ ಬಗ್ಗೆ ಮಾಹಿತಿ ತಿಳಿದು ಕೆಂಗೇರಿ ಮತ್ತು ಜ್ಞಾನಭಾರತಿ ಪೊಲೀಸರು ಬಂಧಿಸಲು ಹೋಗಿದ್ದರು. ಆಗ ಬಂಧಿಸಲು ಬಂದಿದ್ದ ಜ್ಞಾನಭಾರತಿ ಎ.ಎಸ್.ಐ ವೀರಭದ್ರಯ್ಯ ಹಾಗೂ ಹೆಡ್ ಕಾನ್ಸ್ ಟೇಬಲ್ ಚಂದ್ರಶೇಖರ್ ಮೇಲೆ ಹಲ್ಲೆ ಮಾಡಿದ್ದ. ಈ ವೇಳೆ ಆತ್ಮರಕ್ಷಣೆಗೆಂದು ಪೊಲೀಸರು ಆತನ ಮೇಲೆ ಗುಂಡಿನ ದಾಳಿ ಮಾಡಿದ್ದರು.

    ಅಚ್ಯುತ್ ಕುಮಾರ್ ವಿರುದ್ಧ ಸುಮಾರು ಬೆಂಗಳೂರಿನಲ್ಲಿ 70 ಸರಗಳ್ಳತನ ಕೇಸ್ ಗಳು ದಾಖಲಾಗಿದೆ. ಆದರೆ ರಾಜ್ಯದ ಇತರ ಜಿಲ್ಲೆಗಳೂ ಸೇರಿ ಒಟ್ಟು 150 ಕ್ಕೂ ಹೆಚ್ಚು ಕೇಸ್ ಆರೋಪಿ ಅಚ್ಯುತ್ ಮೇಲೆ ದಾಖಲಾಗಿದೆ. ಅಷ್ಟೇ ಅಲ್ಲದೇ ಬಂಧನಕ್ಕೂ ಮುನ್ನ ತುಮಕೂರಿನಲ್ಲಿ ಮೂರು ಕಡೆ ಸರಗಳ್ಳತನ ಮಾಡಿದ್ದನು. ಆರೋಪಿ ಒಬ್ಬಂಟಿಯಾಗಿ ಬೈಕಿನಿಂದ ಇಳಿಯದೇ ಸರ ಕಿತ್ತು ಪರಾರಿಯಾಗುತ್ತಿದ್ದನು. ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಪಶ್ಚಿಮ ವಿಭಾಗ ಡಿಸಿಪಿ ರವಿ ಡಿ.ಚನ್ನಣ್ಣನವರ್ 1 ಲಕ್ಷ ರೂ. ಬಹುಮಾನವನ್ನು ಘೋಷಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮನೆಮುಂದೆ ನಿಂತಿದ್ದ ಮಹಿಳೆ ಕುತ್ತಿಗೆಗೆ ಕನ್ನ – ಚೋರನನ್ನು ಚೇಸ್ ಮಾಡಿ ಸೆರೆ ಹಿಡಿದ ಯುವಕ

    ಮನೆಮುಂದೆ ನಿಂತಿದ್ದ ಮಹಿಳೆ ಕುತ್ತಿಗೆಗೆ ಕನ್ನ – ಚೋರನನ್ನು ಚೇಸ್ ಮಾಡಿ ಸೆರೆ ಹಿಡಿದ ಯುವಕ

    ಬೆಂಗಳೂರು: ನಗರದಲ್ಲಿ ಸರಗಳ್ಳತನ ಹೆಚ್ಚುತ್ತಿದ್ದು, ಸರಗಳ್ಳನನ್ನು ಚೇಸ್ ಮಾಡಿ ಯುವಕನೊಬ್ಬ ಸೆರೆ ಹಿಡಿದಿರುವ ಘಟನೆ ಕುಮಾರಸ್ವಾಮಿ ಲೇಔಟ್ ನ ದೇವರಕೆರೆಯಲ್ಲಿ ನಡೆದಿದೆ.

    ಆರೋಪಿ ಚೇತನ್ ಶ್ವೇತಾ ಅವರ ಸುಮಾರು 70 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದನು. ಬಳಿಕ ಯುವಕ ಶರತ್ ಆರೋಪಿಯನ್ನು ಚೇಸ್ ಮಾಡಿ ಹಿಡಿದು ಕುಮಾರಸ್ವಾಮಿ ಲೇಔಟ್ ನ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಘಟನೆ ವಿವರ:
    ಗುರುವಾರ ಶ್ವೇತಾ ಅವರ ಬರ್ತ್ ಡೇ ಇತ್ತು. ಆದ್ದರಿಂದ ಹುಟ್ಟುಹಬ್ಬವನ್ನು ಮುಗಿಸಿ ಮನೆ ಮುಂದೆ ಸಂಬಂಧಿಕರೊಂದಿಗೆ ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಆರೋಪಿ ವಾಕಿಂಗ್ ಮಾಡುವ ರೀತಿ ಶ್ವೇತಾ ಅವರ ಸರವನ್ನು ಎಗರಿಸಿ ಪರಾರಿಯಾಗಿದ್ದಾನೆ. ಆಗ ಶ್ವೇತಾ ಕೂಗಿಕೊಂಡಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ಶರತ್ ಸರಗಳ್ಳತನವನ್ನು ಗಮನಿಸಿ ತನ್ನ ಬೈಕಿನಲ್ಲಿ ಚೇಸ್ ಮಾಡಿಕೊಂಡು ಹೋಗಿದ್ದಾರೆ. ಶರತ್ ಸುಮಾರು 2 ಕಿ.ಮೀ ವರೆಗೆ ಆರೋಪಿಯನ್ನು ಚೇಸ್ ಮಾಡಿದ್ದಾರೆ.

    ಕೊನೆಗೆ ನಗರದ ಇಸ್ರೋ ಲೇಔಟ್ ನಲ್ಲಿ ಶರತ್ ಆರೋಪಿಯನ್ನು ಹಿಡಿದಿದ್ದಾರೆ. ಬಳಿಕ ಕುಮಾರಸ್ವಾಮಿ ಲೇಔಟ್ ನ ಪೊಲೀಸರಿಗೆ ಕಳ್ಳನನ್ನು ಒಪ್ಪಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಯುವಕ ಶರತ್ ಸಾಹಸದಿಂದ ಮತ್ತೆ ಶ್ವೇತಾ ಅವರಿಗೆ ಮರಳಿ ಅವರ 70 ಗ್ರಾಂ ಸರ ಸಿಕ್ಕಿದೆ.