Tag: ಸಯ್ಯಾಜಿರಾವ್ ರಸ್ತೆ

  • 19ರ ಯುವಕ, 24ರ ಯುವತಿ – ಮೈಸೂರಿನ ದೇಗುಲದಲ್ಲಿ ನಡೆದೇ ಹೋಯ್ತು ಮದುವೆ

    19ರ ಯುವಕ, 24ರ ಯುವತಿ – ಮೈಸೂರಿನ ದೇಗುಲದಲ್ಲಿ ನಡೆದೇ ಹೋಯ್ತು ಮದುವೆ

    ಮೈಸೂರು: ಯುವತಿಗೆ 24, ಯುವಕನಿಗೆ 19 ವರ್ಷ. ಆದ್ರೂ ಇಬ್ಬರ ನಡುವೆ ಪ್ರೇಮವಾಗಿ, ಪ್ರೇಮ ಮದುವೆ ಸ್ವರೂಪ ಪಡೆದು ಇಬ್ಬರೂ ಸಿನಿಮೀಯ ರೀತಿಯಲ್ಲಿ ಮಂದಿರದಲ್ಲಿ ಹಾರವನ್ನ ಬದಲಾಯಿಸಿಕೊಂಡು ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಹೌದು. ಇಂತಹ ಮದುವೆ ಮಾಡಿಕೊಂಡಿರುವವರು ಮೈಸೂರಿನ ದೀಪಕ್ ಕುಮಾರ್ ಹಾಗೂ ಶ್ವೇತಾ. ಮೈಸೂರಿನ ಮಂಡಿ ಮೊಹಲ್ಲದ ನಿವಾಸಿಗಳಾದ ಈ ಜೋಡಿ ಸಯ್ಯಾಜಿರಾವ್ ರಸ್ತೆಯಲ್ಲಿ ದೇವಾಲಯವೊಂದರಲ್ಲಿ ಹಾರ ಬದಲಿಸಿಕೊಂಡು ವಿವಾಹವಾಗಿದ್ದಾರೆ.

    ಅದ್ರೆ ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿರುವ ದೀಪಕ ಪೋಷಕರು, ತಮ್ಮ ಮಗನನ್ನು ವಾಪಸ್ ಕೊಡಿಸುವಂತೆ ಪೆÇಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ಮಂಡಿ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.