Tag: ಸಯರೂ ನದಿ

  • ಮಾಘ ಪೂರ್ಣಿಮೆ; ಪುಣ್ಯಸ್ನಾನಕ್ಕಾಗಿ ಅಯೋಧ್ಯೆಯ ಸರಯೂ ನದಿ ತಟದಲ್ಲಿ ಜನಸಾಗರ

    ಮಾಘ ಪೂರ್ಣಿಮೆ; ಪುಣ್ಯಸ್ನಾನಕ್ಕಾಗಿ ಅಯೋಧ್ಯೆಯ ಸರಯೂ ನದಿ ತಟದಲ್ಲಿ ಜನಸಾಗರ

    ಲಕ್ನೋ: ಇಂದು ಮಾಘ ಪೂರ್ಣಿಮೆಯ (Magh Purnima) ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯ ಸರಯೂ ನದಿ ತಟದಲ್ಲಿ ಸಾವಿರಾರು ಮಂದಿ ಭಕ್ತರು ಪಣ್ಯಸ್ನಾನಕ್ಕಾಗಿ ಆಗಮಿಸಿದ್ದಾರೆ.

    ಪವಿತ್ರ ಸ್ನಾನ ಮಾಡಲು ಅಯೋಧ್ಯೆಯ ಸರಯೂ ನದಿಗೆ  (Saryu River)  ಆಗಮಿಸಿದ ಭಕ್ತರೊಬ್ಬರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ನನಗೆ ಇಂದು ತುಂಬಾ ಸಂತೋಷವಾಗುತ್ತಿದೆ. ನಾವು ಕಾಶಿಯಿಂದ ಇಲ್ಲಿಗೆ ಬಂದಿದ್ದೇವೆ. ಇಲ್ಲಿ ಮಾಡಿರುವ ವ್ಯವಸ್ಥೆ ಕೂಡ ಚೆನ್ನಾಗಿದೆ ಎಂದಿದ್ದಾರೆ.

    ಮಾಘ ಪೂರ್ಣಿಮೆಯನ್ನು ಹುಣ್ಣಿಮೆಯ ದಿನ ಎಂದೂ ಕರೆಯುತ್ತಾರೆ. ಈ ದಿನ ಭಕ್ತರು ಪ್ರಾರ್ಥನೆಯ ಮೂಲಕ ಚಂದ್ರ ದೇವರಿಗೆ ತಮ್ಮ ಭಕ್ತಿಯನ್ನು ವ್ಯಕ್ತಪಡಿಸುತ್ತಾರೆ ಎಂಬ ನಂಬಿಕೆ. ಹೀಗಾಗಿ ಇಂದು ಭಕ್ತರು, ಗಂಗಾ ನದಿಯಂತಹ (Ganga River) ಪವಿತ್ರ ನದಿಗಳ ಪವಿತ್ರ ನೀರಿನಲ್ಲಿ ಮುಳುಗುವುದು. ಈ ಆಚರಣೆಯು ವ್ಯಕ್ತಿಯನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಶುದ್ಧೀಕರಿಸುತ್ತದೆ. ಈ ಮೂಲಕ ಎಲ್ಲಾ ರೀತಿಯ ತೊಂದರೆಗಳಿಂದ ಮುಕ್ತಗೊಳಿಸುತ್ತದೆ ಎಂದು ನಂಬಲಾಗಿದೆ. ಇದನ್ನೂ ಓದಿ: ಉತ್ತರ ಕಾಶ್ಮೀರದಲ್ಲಿ ‘ಕನ್ನಡ’ ಬಾವುಟ ಹಾರಿಸಿದ ಧಾರವಾಡದ ಯುವತಿ

    ದಿನದ ವಿಶೇಷವೇಶವೇನು..?: ಭಕ್ತರು ವಿಶೇಷವಾಗಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರ ಜೊತೆಗೆ ಭಕ್ತರು, ಬಡವರು ಮತ್ತು ನಿರ್ಗತಿಕರಿಗೆ ಆಹಾರವನ್ನು ನೀಡುವ ಮೂಲಕ ದಾನ ಕಾರ್ಯಗಳಲ್ಲಿ ತೊಡಗುತ್ತಾರೆ. ಬಡವರಿಗೆ ಆಹಾರ, ಬಟ್ಟೆ ಮತ್ತು ದಕ್ಷಿಣೆಯನ್ನು ಒದಗಿಸಲು ಇದು ಸೂಕ್ತ ಸಮಯವೆಂದು ಪರಿಗಣಿಸಲಾಗಿದೆ. ಸತ್ಯನಾರಾಯಣ ವ್ರತವನ್ನು ಆಚರಿಸುವುದು ಮತ್ತು ಭಗವಾನ್ ವಿಷ್ಣುವಿಗೆ ಪ್ರಾರ್ಥನೆ ಸಲ್ಲಿಸುವುದು. ಜೊತೆಗೆ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡುವುದು ಈ ದಿನದ ವಿಶೇಷ ಸಂಪ್ರದಾಯವಾಗಿದೆ.

    ಒಟ್ಟಿನಲ್ಲಿ ಪುಣ್ಯಸ್ನಾನದ ಬಳಿಕ ಭಕ್ತರು ರಾಮಮಂದಿರಕ್ಕೆ (Ayodhya Ram Mandir) ತೆರಳಿ ರಾಮಲಲ್ಲಾನ ದರ್ಶನ ಪಡೆಯುತ್ತಿದ್ದಾರೆ. ಈ ಮೂಲಕ ಅಯೋಧ್ಯೆ ರಾಮಮಂದಿರದಲ್ಲಿಯೂ ಭಕ್ತರ ದಂಡೇ ಜಮಾಯಿಸಿದೆ.