Tag: ಸಮ್ಮಿಶ್ರ ಸರಕಾರ

  • ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ?

    ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ?

    ಬೆಂಗಳೂರು: ಅಂತೂ ಇಂತೂ ಕೊನೆಗೂ ಸಮ್ಮಿಶ್ರ ಸರ್ಕಾರದ ಸಂಪುಟ ರಚನೆಯಾಗಿದೆ. ಕಾಂಗ್ರೆಸ್‍ನ 15 ಮತ್ತು ಜೆಡಿಎಸ್‍ನ 10 ಮಂದಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ಮಧ್ಯಾಹ್ನ 2.12ಕ್ಕೆ ಶುಭ ಕನ್ಯಾಲಗ್ನದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ರು.

    ಮೊದಲಿಗೆ ಎಚ್.ಡಿ.ರೇವಣ್ಣ, ಆರ್.ವಿ. ದೇಶಪಾಂಡೆ, ಬಂಡೆಪ್ಪ ಕಾಶಂಪೂರ್, ಡಿ.ಕೆ. ಶಿವಕುಮಾರ್‍ರಿಂದ ಹಿಡಿದು ಕೊಳ್ಳೇಗಾಲದ ಬಿಎಸ್‍ಪಿ ಶಾಸಕ ಮಹೇಶ್, ರಾಣೆಬೆನ್ನೂರ್‍ನ ಪಕ್ಷೇತರ ಅಭ್ಯರ್ಥಿ ಶಂಕರ್ ಹಾಗೂ ಎಂಎಲ್‍ಸಿ ಜಯಮಾಲವರೆಗೆ ಎಲ್ಲರಿಗೂ ಹೋಲ್‍ಸೇಲ್ ಎಂಬಂತೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನವನ್ನ ಎಚ್‍ಡಿಕೆ-ಜಿಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಕರುಣಿಸಿದೆ.

    ಎಲ್ಲರೂ ಕನ್ನಡದಲ್ಲೇ ದೇವರ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ರು. ಡಿಕೆಶಿ ಅವರು ಅಜ್ಜಯ್ಯನ ಮೇಲೆ, ಕೊಳ್ಳೇಗಾಲದ ಮಹೇಶ್ ಬುದ್ಧಬಸವ ಅಂಬೇಡ್ಕರ್ ಮೇಲೆ ಪ್ರಮಾಣವಚನ ಸ್ವೀಕರಿಸಿದರೆ ಜಮೀರ್ ಅಹಮದ್ ಮಾತ್ರ ಇಂಗ್ಲಿಷ್‍ನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ರು. ಜೆಡಿಎಸ್‍ನ ಸಿ.ಎಸ್. ಪುಟ್ಟರಾಜು ಮತ್ತು ಸಾ.ರಾ. ಮಹೇಶ್ ಅವರು ಕುಮಾರಸ್ವಾಮಿ ಪಾದಕ್ಕೆ ಎರಗಿ ನಮಸ್ಕರಿಸಿದ್ರು.

    ಸರ್ಕಾರದಲ್ಲಿ ಜಾತಿ ಬಲ
    ಒಕ್ಕಲಿಗ 6 +2, ಲಿಂಗಾಯತ 2+2, ಮುಸ್ಲಿಂ 2+2, ಪರಿಶಿಷ್ಟ ಜಾತಿ 1+2, ಕುರುಬ 1+1, ಎಸ್‍ಟಿ 1, ಉಪ್ಪಾರ 1, ರೆಡ್ಡಿ 1, ಈಡಿಗ 1 ಸಿಕ್ಕಿದೆ. ಆದ್ರೆ, ಜಿಲ್ಲಾವಾರು ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಕೊಡಗು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಬೆಂಗಳೂರು ಗ್ರಾ., ಬಾಗಲಕೋಟೆ, ಕೊಪ್ಪಳ, ಯಾದಗಿರಿ, ಗದಗ, ಹುಬ್ಬಳ್ಳಿ-ಧಾರವಾಡ ಮತ್ತು ಬಳ್ಳಾರಿ ಸೇರಿ 14 ಜಿಲ್ಲೆಗಳಿಗೆ ಸಚಿವ ಸ್ಥಾನ ಸಿಕ್ಕಿಲ್ಲ

    ಸಮ್ಮಿಶ್ರ ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ ಸಿಗೋ ಸಾಧ್ಯತೆಯಿದೆ?
    * ಕುಮಾರಸ್ವಾಮಿ – ಹಣಕಾಸು, ಗುಪ್ತದಳ, ವಾರ್ತಾ & ಪ್ರಸಾರ
    * ಪರಮೇಶ್ವರ್ – ಗೃಹ, ಬೆಂಗಳೂರು ನಗರಾಭಿವೃದ್ಧಿ
    * ಎಚ್.ಡಿ.ರೇವಣ್ಣ – ಲೋಕೋಪಯೋಗಿ
    * ಜಿ.ಟಿ.ದೇವೇಗೌಡ – ಕಂದಾಯ

    * ಬಂಡೆಪ್ಪ ಕಾಶೆಂಪುರ – ಅಬಕಾರಿ
    * ಸಿ.ಎಸ್.ಪುಟ್ಟರಾಜು – ಸಾರಿಗೆ
    * ಸಾ.ರಾ.ಮಹೇಶ್ – ಸಹಕಾರ
    * ಡಿ.ಸಿ ತಮ್ಮಣ್ಣ – ಉನ್ನತ ಶಿಕ್ಷಣ

    * ಗುಬ್ಬಿ ಶ್ರೀನಿವಾಸ್ – ತೋಟಗಾರಿಕೆ, ರೇಷ್ಮೆ
    * ಎಂ.ಸಿ ಮನಗೂಳಿ – ಸಣ್ಣ ಕೈಗಾರಿಕೆ
    * ವೆಂಕಟರಾವ್ ನಾಡಗೌಡ – ಸಣ್ಣ ನೀರಾವರಿ
    * ಎನ್.ಮಹೇಶ್ – ಪ್ರವಾಸೋದ್ಯಮ

    * ಆರ್.ವಿ.ದೇಶಪಾಂಡೆ – ಗ್ರಾಮೀಣಾಭಿವೃದ್ಧಿ
    * ಡಿ.ಕೆ.ಶಿವಕುಮಾರ್ – ಇಂಧನ
    * ಕೃಷ್ಣಬೈರೇಗೌಡ – ಕಾನೂನು & ಸಂಸದೀಯ
    * ಕೆ.ಜೆ. ಜಾರ್ಜ್ – ಬೃಹತ್ ಕೈಗಾರಿಕೆ

    * ಪ್ರಿಯಾಂಕ್ ಖರ್ಗೆ – ಐಟಿ, ಬಿಟಿ
    * ರಮೇಶ್ ಜಾರಕಿಹೊಳಿ – ಸಮಾಜ ಕಲ್ಯಾಣ
    * ಯು.ಟಿ.ಖಾದರ್ – ನಗರಾಭಿವೃದ್ಧಿ
    * ಜಮೀರ್ ಅಹ್ಮದ್ – ವಸತಿ, ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್

    * ಶಿವಾನಂದ ಪಾಟೀಲ್ – ಆರೋಗ್ಯ
    * ರಾಜಶೇಖರ್ ಪಾಟೀಲ್ – ಅರಣ್ಯ
    * ಪುಟ್ಟರಂಗಶೆಟ್ಟಿ – ಕಾರ್ಮಿಕ
    * ವೆಂಕಟರಮಣಪ್ಪ – ಬಂದರು, ಮೀನುಗಾರಿಕೆ

    * ಶಿವಶಂಕರ ರೆಡ್ಡಿ – ಕೃಷಿ
    * ಆರ್.ಶಂಕರ್ – ಯುವಜನ & ಕ್ರೀಡೆ
    * ಜಯಮಾಲ – ಮಹಿಳಾ & ಮಕ್ಕಳ ಕಲ್ಯಾಣ ಇದನ್ನು ಓದಿ: ಸಚಿವ ಸ್ಥಾನ ವಂಚಿತ ಕೈ, ತೆನೆ ಘಟಾನುಘಟಿ ನಾಯಕರ ಪಟ್ಟಿ ಇಲ್ಲಿದೆ