Tag: ಸಮುದ್ರ ತೀರ

  • ಲಕ್ಷದ್ವೀಪದಲ್ಲಿ ಮೋದಿ ಸ್ನಾರ್ಕ್ಲಿಂಗ್ – ಫೋಟೋಗಳು ಸಿಕ್ಕಾಪಟ್ಟೆ ವೈರಲ್‌!

    ಲಕ್ಷದ್ವೀಪದಲ್ಲಿ ಮೋದಿ ಸ್ನಾರ್ಕ್ಲಿಂಗ್ – ಫೋಟೋಗಳು ಸಿಕ್ಕಾಪಟ್ಟೆ ವೈರಲ್‌!

    ಕವರಟ್ಟಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ (Lakshadweep) ವಾಸ್ತವ್ಯ ಹೂಡಿದ್ದಾಗ ತೆಗೆಸಿದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಭಾರೀ ಸದ್ದು ಮಾಡುತ್ತಿದೆ.

    ಎರಡು ದಿನಗಳ ಕಾಲ ತಮಿಳುನಾಡು, ಕೇರಳ ಮತ್ತು ಲಕ್ಷದ್ವೀಪ ಪ್ರವಾಸದಲ್ಲಿದ್ದ ಮೋದಿ ಅವರು ಹಲವು ಮನಮೋಹಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಲಕ್ಷದ್ವೀಪದಲ್ಲಿ ಸ್ನಾರ್ಕ್ಲಿಂಗ್ (Snorkeling) ಮಾಡುತ್ತಿರುವ ಫೋಟೋಗಳು ಹಾಗೂ ಕಡಲತೀರಗಳಲ್ಲಿ ಮಾರ್ನಿಂಗ್ ವಾಕ್‌ ಮಾಡುತ್ತಾ ಅನುಭವಿಸಿದ ಸುಂದರ ಕ್ಷಣಗಳ ಫೋಟೋಗಳನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಪ್ರಧಾನಿ ಹಂಚಿಕೊಂಡ ಚಿತ್ರದಲ್ಲಿ, ಅವರು ಸಮುದ್ರತೀರದಲ್ಲಿ ಕುರ್ಚಿಯ ಮೇಲೆ ಕುಳಿತು ಕಾಲ ಕಳೆಯುತ್ತಿರುವುದು, ಈ ವೇಳೆ ಅವರು ಲಕ್ಷದ್ವೀಪದ ಪ್ರಕೃತಿ ಸೌಂದರ್ಯವನ್ನು ಸವಿದಿದ್ದಾರೆ. ಮತ್ತೊಂದು ಚಿತ್ರದಲ್ಲಿ, ಕಪ್ಪು ಕುರ್ತಾ ಪೈಜಾಮಾ ಧರಿಸಿ ಬೀಚ್‌ನಲ್ಲಿ ದಡದಲ್ಲೇ ನಡೆದಾಡುತ್ತಾ ಕಡಲ ತೀರದ ಸೌಂದರ್ಯ ಸವಿದಿದ್ದಾರೆ. ಮತ್ತೊಂದು ಚಿತ್ರದಲ್ಲಿ ಸಮುದ್ರತೀರದಲ್ಲಿ ಶಾಲು ಹೊದ್ದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: ರಾಮ ಮಾಂಸಹಾರಿಯಲ್ಲ, ವನವಾಸದಲ್ಲಿ ಹಣ್ಣುಗಳನ್ನು ಸ್ವೀಕರಿಸುತ್ತಿದ್ದ: ಆಚಾರ್ಯ ಸತ್ಯೇಂದ್ರ ದಾಸ್ ತಿರುಗೇಟು

    ಪ್ರವಾಸವನ್ನು ಇಷ್ಟಪಡುವ ಜನರು ಖಂಡಿತವಾಗಿಯೂ ಈ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಮೋದಿ, ಪ್ರಾಚೀನ ಕಡಲತೀರಗಳ ಉದ್ದಕ್ಕೂ ಆ ಮುಂಜಾನೆ ನಡಿಗೆಗಳು ಹೆಚ್ಚು ಆನಂದದ ಕ್ಷಣಗಳಾಗಿದ್ದವು. ರಮಣೀಯ ಸೌಂದರ್ಯದ ಜೊತೆಗೆ ಲಕ್ಷದ್ವೀಪದ ಪ್ರಶಾಂತತೆಯೂ ಮನಮೋಹಕವಾಗಿದೆ. ಇಲ್ಲಿನ ಪ್ರಶಾಂತ ವಾತಾವರಣವು 140 ಕೋಟಿ ಭಾರತೀಯರ ಕಲ್ಯಾಣಕ್ಕಾಗಿ ಇನ್ನಷ್ಟು ಶ್ರಮಿಸುವುದು ಹೇಗೆ ಎಂಬುದನ್ನು ಪ್ರತಿಬಿಂಬಿಸಲು ಅವಕಾಶ ನೀಡಿತು ಎಂದು ಬರೆದುಕೊಂಡಿದ್ದಾರೆ.

    ಮುಂದುವರಿದು.. ಸಾಹಸ ಪ್ರಿಯರಿಗೆ ಖಂಡಿತವಾಗಿಯೂ ಇದು ಪ್ರಶಸ್ತ ಸ್ಥಳ. ತಮ್ಮಲ್ಲಿರುವ ಸಾಹಸ ಮನೋವೃತ್ತಿಯನ್ನು ಹೊರತೆಗೆಯಲು ಬಯಸುವವರಿಗೆ, ಲಕ್ಷದ್ವೀಪವು ಖಂಡಿತಾ ಅವರ ಪಟ್ಟಿಯಲ್ಲಿರುತ್ತದೆ. ಅಲ್ಲಿ ನನ್ನ ವಾಸ್ತವ್ಯದ ಸಮಯದಲ್ಲಿ, ನಾನು ಸ್ನಾರ್ಕೆಲಿಂಗ್‌ ಅನ್ನು ಸಹ ಪ್ರಯತ್ನಿಸಿದೆ. ಇದು ಎಂತಹ ಹರ್ಷದಾಯಕ ಅನುಭವ ಎಂದು ಶ್ಲಾಘಿಸಿದ್ದಾರೆ.

    ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದ ಪ್ರಧಾನಿಯವರು ಸುಮಾರು 1,150 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಯಂದು ಪಿಂಕ್‌ ಸಿಟಿ ಜೈಪುರದಲ್ಲಿ ಮಾಂಸ, ಮದ್ಯದಂಗಡಿ ಬಂದ್‌ 

  • ಸಮುದ್ರ ತೀರದಲ್ಲಿ 36 ಅಡಿ ಉದ್ದದ ಬೃಹತ್ ತಿಮಿಂಗಿಲದ ಶವ ಪತ್ತೆ

    ಸಮುದ್ರ ತೀರದಲ್ಲಿ 36 ಅಡಿ ಉದ್ದದ ಬೃಹತ್ ತಿಮಿಂಗಿಲದ ಶವ ಪತ್ತೆ

    ಕೊಲ್ಕತ್ತಾ: ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪೋರ್ ಜಿಲ್ಲೆಯ ಸಮುದ್ರ ತೀರವೊಂದರಲ್ಲಿ 36 ಅಡಿ ಉದ್ದದ ಬೃಹತ್ ತಿಮಿಂಗಿಲದ ಶವವೊಂದು ಪತ್ತೆಯಾಗಿದೆ.

    ಮಿಡ್ನಾಪೋರ್ ಜಿಲ್ಲೆಯ ಮಂದಾರಮಣಿ ಬೀಚ್‍ನಲ್ಲಿ ಸೋಮವಾರ ಬೃಹತ್ ತಿಮಿಂಗಿಲದ ಶವ ಪತ್ತೆಯಾಗಿದೆ. ತಿಮಿಂಗಿಲದ ದೇಹ ಮತ್ತು ಬಾಲದ ಮೇಲೆ ಅನೇಕ ಗಾಯದ ಗುರುತುಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ತಿಮಿಂಗಿಲದ ಸಾವಿಗೆ ಕಾರಣ ತಿಳಿದುಬಂದಿಲ್ಲ.

    ತಿಮಿಂಗಿಲದ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಸ್ಥಳೀಯ ಮಂದಾರಮಣಿ ಪೊಲೀಸ್ ಠಾಣೆ ಮತ್ತು ರಾಜ್ಯ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸುತ್ತಿದ್ದಾರೆ.

    ಇನ್ನೂ ಬೃಹತ್ ತಿಮಿಂಗಿಲವನ್ನು ಕಂಡು ಅಚ್ಚರಿಗೊಂಡ ಸ್ಥಳೀಯರು ಕಡಲತೀರದ ಬಳಿ ಜಮಾಯಿಸಿದ್ದು, ತಿಮಿಂಗಿಲದ ಮೃತದೇಹದೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಮಂದಾರಮಣಿ ಬೀಚ್‍ ಮಿಡ್ನಾಪೋರ್ ನ ಜನಪ್ರಿಯ ಪ್ರವಾಸಿ ತಾಣವಾಗಿದೆ.