Tag: ಸಮುದಾಯ

  • ಎಸ್‌ಟಿಗೆ ಕುರುಬ – ಮಹತ್ವದ ಸಭೆ ಕರೆದ ವಾಲ್ಮೀಕಿ ಸಮುದಾಯ

    ಎಸ್‌ಟಿಗೆ ಕುರುಬ – ಮಹತ್ವದ ಸಭೆ ಕರೆದ ವಾಲ್ಮೀಕಿ ಸಮುದಾಯ

    ಬೆಂಗಳೂರು: ಕುರುಬ ಸಮುದಾಯವನ್ನು (Kuruba Community) ಎಸ್‌ಟಿ ಪಟ್ಟಿಗೆ (ST List) ಸೇರಿಸುವ ವಿಚಾರ ಜಾತಿ ಜಟಾಪಟಿಗೆ ವೇದಿಕೆ ಆಗಿದೆ. ಎಸ್‌ಟಿಗೆ ಸೇರ್ಪಡೆ ಮಾಡುವ ಅಂತಿಮ ತೀರ್ಮಾನಕ್ಕೂ ಮುನ್ನವೇ ವಾಲ್ಮೀಕಿ ಸಮುದಾಯ (Valmiki Community) ಮಹತ್ವದ ಸಭೆ ಕರೆದಿದೆ.

    ಸೆಪ್ಟಂಬರ್ 18ರಂದು ಹರಿಹರ ವಾಲ್ಮೀಕಿ ಗುರುಪೀಠದಲ್ಲಿ ಸಭೆ ಕರೆಯಲಾಗಿದ್ದು, ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಮೂರು ಪ್ರಮುಖ ವಿಚಾರಗಳ ಕುರಿತು ಚರ್ಚಿಸಲು ಸಭೆ ಕರೆಯಲಾಗಿದ್ದು, ಸಭೆಗೆ ವಾಲ್ಮೀಕಿ ಸಮುದಾಯದ ಸಚಿವರು, ಶಾಸಕರು, ಮಾಜಿ ಶಾಸಕರು, ಎಂಎಲ್‌ಸಿ, ಮಾಜಿ ಎಂಎಲ್‌ಸಿ, ಧರ್ಮದರ್ಶಿಗಳು, ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರಿಗೆ ಸಭೆಗೆ ಆಹ್ವಾನಿಸಲಾಗಿದೆ. ಇದನ್ನೂ ಓದಿ: ಈ ಸರ್ಕಾರ 47 ಹೊಸ ಜಾತಿಗಳನ್ನು ಸೃಷ್ಟಿ ಮಾಡಿದೆ: ಸುನಿಲ್ ಕುಮಾರ್ ಕಿಡಿ

     

    ಸಭೆಯ ಅಜೆಂಡಾ ಏನು?
    ವಾಲ್ಮೀಕಿ ನಾಯಕ ಜಾತಿಗೆ ಇತರೆ ಮೇಲ್ವರ್ಗದ ಜಾತಿಗಳನ್ನು ಸೇರ್ಪಡೆ ಮಾಡುತ್ತಿರುವ ಸರ್ಕಾರದ ನಡೆ ಬಗ್ಗೆ ತೀರ್ಮಾನ.

    ನಾಯಕ ತಳವಾರ ಹೆಸರಿನಲ್ಲಿ ಇತರೆ ಜಾತಿಯ ತಳವಾರರು ತೆಗೆದುಕೊಳ್ಳುತ್ತಿರುವ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವುದನ್ನು ತಡೆಯಲು ಸರ್ಕಾರಕ್ಕೆ ಒತ್ತಾಯ.

    ರಾಜ್ಯ ಸರ್ಕಾರ ಜಾತಿ ಗಣತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು ಜಾತಿ ಕಾಲಂ ನಲ್ಲಿ ಜಾತಿ ಹೆಸರನ್ನು ನಮೂದಿಸುವ ಕುರಿತು ಚರ್ಚೆ.

  • BJPಯಂತೆ ಒಂದೊಂದು ಸಮಾಜಕ್ಕೆ ಒಂದೊಂದು ಸಮಾವೇಶ ಮಾಡಲ್ಲ – HDK

    BJPಯಂತೆ ಒಂದೊಂದು ಸಮಾಜಕ್ಕೆ ಒಂದೊಂದು ಸಮಾವೇಶ ಮಾಡಲ್ಲ – HDK

    ಬೆಂಗಳೂರು: ಬಿಜೆಪಿ (BJP) ರೀತಿ ನಾನು ಒಂದೊಂದು ಸಮಾಜಕ್ಕೆ (Community) ಒಂದೊಂದು ಸಮಾವೇಶ ಮಾಡೋದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಕಿಡಿ ಕಾರಿದ್ದಾರೆ.

    ನಗರದ ಜೆಪಿ ಭವನದಲ್ಲಿ ಬಿಜೆಪಿ (BJO) ಒಬಿಸಿ (OBC) ಸಮಾವೇಶದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಒಂದೊಂದು ಸಮಾಜಕ್ಕೆ ಒಂದೊಂದು ಸಮಾವೇಶ ಮಾಡೋದಿಲ್ಲ. ನಾಡಿನ ಸಮಸ್ಯೆ ಪರಿಹಾರಕ್ಕೆ ಕೆಲಸ ಮಾಡ್ತೀನಿ ಎಂದಿದ್ದಾರೆ. ಇದನ್ನೂ ಓದಿ: ಚಂದಮಾಮ ಪುಸ್ತಕದಲ್ಲಿ ‘ದಿನಕ್ಕೊಂದು ಕತೆ’ ಎಂದು ಬರ್ತಿತ್ತು – ಬಿಜೆಪಿ ಸರ್ಕಾರದಿಂದ ‘ದಿನಕ್ಕೊಂದು ಹಗರಣ’ ಬರುತ್ತಿದೆ: ಕಾಂಗ್ರೆಸ್

    ನಾಡಿನ ಅಭಿವೃದ್ಧಿ ದೃಷ್ಟಿಯಿಂದ ಪಂಚರತ್ನ ಯೋಜನೆ ಇದೆ. ಈ ಯೋಜನೆ ಎಲ್ಲ ಸಮುದಾಯಕ್ಕೂ ಇದೆ. ಬಿಜೆಪಿ ಅವರು ಜಾತಿ ಸಮಾವೇಶ ಮಾಡಿ ಏನ್ ಸಾಧನೆ ಮಾಡ್ತಾರೆ. ಜನ ಸೇರಿಸೋದು ಒಂದು ಕೆಲಸನಾ? ಆ ಸಮಾಜಕ್ಕೆ ಏನ್ ಕೊಟ್ಟಿದ್ದಾರೆ ಅಂತಾ ಬಿಜೆಪಿಯವರೇ ಹೇಳಲಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: 8 ಗಂಡಂದಿರಿಂದ 11 ಮಕ್ಕಳು, ಇನ್ನೂ 19 ಮಕ್ಕಳಿaಗಾಗಿ ಪ್ಲ್ಯಾನಿಂಗ್‌ ಮಾಡಿದ್ದಾಳೆ ಈ ಮಹಿಳೆ

    ಇವತ್ತು ಉತ್ತರ ಕರ್ನಾಟಕ ಲಿಂಗಾಯತ ಮುಖಂಡರ ಸಭೆ ಇದೆ. ನಾಡಗೌಡರ ನೇತೃತ್ವದಲ್ಲಿ ಸಭೆ ಮಾಡ್ತಿದ್ದೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಚುನಾವಣೆಯಲ್ಲಿ (Elections) ಜೆಡಿಎಸ್ (JDS) ಅಭ್ಯರ್ಥಿ ಗೆಲ್ಲಸಲು, ಪಕ್ಷ ಸಂಘಟನೆ ವಿಚಾರವಾಗಿ ಚರ್ಚೆ ಮಾಡ್ತೀವಿ. ಚುನಾವಣೆ ಹಿನ್ನಲೆಯಲ್ಲಿ ಸಭೆ ಮಾಡ್ತಿದ್ದೇವೆ. ಚುನಾವಣೆ ಬಗ್ಗೆ ಎಲ್ಲರ ಸಲಹೆ ಪಡೆಯುತ್ತೇನೆ. ಅ ಭಾಗಕ್ಕೆ ಹೆಚ್ಚು ಟಿಕೆಟ್ ಕೊಡುವ ಬಗ್ಗೆ ನಿರ್ಧಾರ ಮಾಡ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತುಮಕೂರಲ್ಲಿ ಮುಸ್ಲಿಂ ಸಮುದಾಯದ ಅಂಗಡಿ ಮುಂಗಟ್ಟು ಬಂದ್

    ತುಮಕೂರಲ್ಲಿ ಮುಸ್ಲಿಂ ಸಮುದಾಯದ ಅಂಗಡಿ ಮುಂಗಟ್ಟು ಬಂದ್

    ತುಮಕೂರು: ಹಿಜಬ್ ವಿವಾದದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಇದರ ಹಿನ್ನೆಲೆಯಲ್ಲಿ ಮುಸ್ಲಿಂ ಸಂಘಟನೆಗಳು ಇಂದು ಕರ್ನಾಟಕ ಬಂದ್‍ಗೆ ಕರೆ ನೀಡಿದ್ದಾರೆ.

    ಹೈಕೋರ್ಟ್ ತೀರ್ಪು ಸಂಬಂಧಿಸಿದಂತೆ ಮುಸ್ಲಿಂ ವ್ಯಾಪಾರಸ್ಥರು ನಗರದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಮಾಡಿದ್ದಾರೆ. ಕಾಲ್ ಟ್ಯಾಕ್ಸ್ ಸರ್ಕಲ್, ಬಿ.ಜಿ.ಪಾಳ್ಯ ಸರ್ಕಲ್, ಗುಬ್ಬಿ ಗೇಟ್, ಕುಣಿಗಲ್ ರಿಂಗ್ ರಸ್ತೆಗಳಲ್ಲಿನ ಪ್ರಮುಖ ಗ್ಯಾರೇಜ್, ಆಟೋ ಮೊಬೈಲ್ಸ್ ಅಂಗಡಿಗಳು ಬಂದ್ ಆಗಿದ್ದು, ಉಳಿದಂತೆ ಯಥಾಸ್ಥಿತಿಯಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಇದನ್ನೂ ಓದಿ: ಉಕ್ರೇನ್‌ ಮೇಯರ್‌ ಕಿಡ್ನಾಪ್ ಮಾಡಿದ ರಷ್ಯಾ ಸೇನೆ

    ಹಿಜಬ್ ವಿವಾದದ ಬಗ್ಗೆ ಹೈಕೋರ್ಟ್ ತೀರ್ಪು ನೀಡಿದ್ದು, ಸರ್ಕಾರದ ವಸ್ತ್ರ ಸಂಹಿತೆಯನ್ನು ಎತ್ತಿ ಹಿಡಿದಿದೆ. ಹೀಗಾಗಿ ನಮಗೆ ಕಾನೂನಿಂದ ಯಾವುದೇ ನೆರವು ಸಿಕ್ಕಿಲ್ಲ ಎಂದು ಮುಸಲ್ಮಾನ್ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಷ್ಯಾದ ಪಡೆಯಿಂದ ಕಿಡ್ನಾಪ್ ಆಗಿದ್ದ ಉಕ್ರೇನ್‍ ಮೇಯರ್ ಬಿಡುಗಡೆ

  • ಕೊರೊನಾ ಹಾಸನ ಜಿಲ್ಲೆಯಲ್ಲಿ ಸಮುದಾಯಕ್ಕೆ ಹರಡಿರುವ ಲಕ್ಷಣ ಕಾಣಿಸುತ್ತಿದೆ: ಡಿಸಿ

    ಕೊರೊನಾ ಹಾಸನ ಜಿಲ್ಲೆಯಲ್ಲಿ ಸಮುದಾಯಕ್ಕೆ ಹರಡಿರುವ ಲಕ್ಷಣ ಕಾಣಿಸುತ್ತಿದೆ: ಡಿಸಿ

    – ಇಂದು ಓರ್ವ ಸಾವು, 28 ಸೋಂಕಿತರು ಪತ್ತೆ

    ಹಾಸನ: ಕೊರೊನಾ ಹಾಸನ ಜಿಲ್ಲೆಯಲ್ಲಿ ಸಮುದಾಯಕ್ಕೆ ಹರಡಿರುವ ಲಕ್ಷಣಗಳು ಕಾಣಿಸುತ್ತಿವೆ ಎಂದು ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಕಳವಳ ವ್ಯಕ್ತಪಡಿಸಿದ್ದಾರೆ.

    ಇಂದು ಕೊರೊನಾ ವಿಚಾರವಾಗಿ ಸುದ್ದಿಗಾರರರೊಂದಿಗೆ ಮಾತಾನಾಡಿದ ಅವರು, ಇಂದು ಹಾಸನ ಜಿಲ್ಲೆಯಲ್ಲಿ 28 ಹೊಸ ಕೋವಿಡ್ ಪ್ರಕರಣ ಬೆಳಕಿಗೆ ಬಂದಿದೆ. ಜೊತೆಗೆ ಹಾಸನ ತಾಲೂಕಿನ 30 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಈತ ಬೆಂಗಳೂರಿನಿಂದ ಬಂದಿದ್ದು, ಉಸಿರಾಟದ ತೊಂದರೆ ಮತ್ತು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಎಂದು ಮಾಹಿತಿ ನೀಡಿದ್ದಾರೆ.

    ಇದುವರೆಗೂ ಹಾಸನದಲ್ಲಿ 58 ಕಂಟೋನ್ಮೆಂಟ್ ಜೋನ್ ಇದೆ. ಅದರ ಜೊತೆಗೆ ಇಂದು 13 ಹೊಸ ಕಂಟೋನ್ಮೆಂಟ್ ಜೋನ್ ಮಾಡಬೇಕಿದೆ. ಇದರಲ್ಲಿ 11 ಕಂಟೋನ್ಮೆಂಟ್ ಜೋನ್‍ಗಳ ನಿಗದಿತ ದಿನ ಈಗಾಗಲೇ ಮುಗಿದಿದೆ. ನಮ್ಮ ನಿಮ್ಮ ಸುತ್ತಮುತ್ತ ಪಾಸಿಟಿವ್ ಇರುವವರು ಇರಬಹುದು ಎಚ್ಚರದಿಂದಿರಿ. ಹೆಚ್ಚು ಹೆಚ್ಚು ಪರೀಕ್ಷೆ ಮಾಡಿದಾಗ ಕೊರೊನಾ ಪಾಸಿಟಿವ್ ಬರುತ್ತಿರುವುದು ಇದಕ್ಕೆ ಉತ್ತಮ ಉದಾಹರಣೆ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಇಡೀ ರಾಜ್ಯದಲ್ಲಿ ಕೊರೊನಾ ಸೋಂಕು ಜಾಸ್ತಿಯಾಗುತ್ತಿರುವ ಕಾರಣ, ನಾವೇ ಎಲ್ಲರಿಂದ ದೂರ ಇರಬೇಕಾಗುತ್ತೆ. ಜಿಲ್ಲೆಯಲ್ಲಿ ನಿಯಮ ಮೀರಿದರೆ ಮುಲಾಜಿಲ್ಲದೆ ದಂಡ ವಿಧಿಸಲಾಗುತ್ತದೆ. ಇದರ ಜೊತೆಗೆ ಕೋವಿಡ್ ಪ್ರಕರಣ ಹಾಸನದಲ್ಲಿ ಕೊರೊನಾ ಸಮುದಾಯಕ್ಕೆ ಹರಡಿರುವ ಲಕ್ಷಣ ಕಾಣಿಸುತ್ತಿದೆ ಎಂದು ಹೇಳಿದರು.

  • ಕೊರೊನಾ ಸೋಂಕು ಸಮುದಾಯಕ್ಕೆ ಹರಡಿದೆ – ಕೇಂದ್ರಕ್ಕೆ ಬರೆದ ಪತ್ರದಲ್ಲಿ ವೈದ್ಯಕೀಯ ಕ್ಷೇತ್ರದ ಕಳವಳ

    ಕೊರೊನಾ ಸೋಂಕು ಸಮುದಾಯಕ್ಕೆ ಹರಡಿದೆ – ಕೇಂದ್ರಕ್ಕೆ ಬರೆದ ಪತ್ರದಲ್ಲಿ ವೈದ್ಯಕೀಯ ಕ್ಷೇತ್ರದ ಕಳವಳ

    ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಎರಡು ಲಕ್ಷದ ಗಡಿಯಲ್ಲಿದ್ದು ಸಮುದಾಯಕ್ಕೆ ಹರಡಿಯಾಗಿದೆ. ಆದರೆ ಕೇಂದ್ರ ಸರ್ಕಾರ ಸೋಂಕು ಸಮುದಾಯಕ್ಕೆ ಹರಡಿಲ್ಲ ಎಂದು ಸುಳ್ಳು ಹೇಳುತ್ತಿದೆ ಎಂದು ವೈದ್ಯಕೀಯ ಕ್ಷೇತ್ರದ ಹಲವು ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ.

    ಕೊರೊನಾ ಸೋಂಕು ಸಮುದಾಯಕ್ಕೆ ಹರಡಿರುವ ಬಗ್ಗೆ ಉಲ್ಲೇಖಿಸಿ ಇಂಡಿಯನ್ ಪಬ್ಲಿಕ್ ಹೆಲ್ತ್ ಅಸೋಸಿಯೇಷನ್ (ಐಪಿಹೆಚ್‍ಎ), ಇಂಡಿಯನ್ ಅಸೋಸಿಯೇಷನ್ ಅಂಡ್ ಸೋಷಿಯಲ್ ಮೆಡಿಸಿನ್ (ಐಎಪಿಎಸ್‍ಎಂ) ಮತ್ತು ಇಂಡಿಯನ್ ಅಸೋಸಿಯೇಷನ್ ಆಫ್ ಎಪಿಡೆಮಿಯಾಲಜಿಸ್ಟ್ (ಐಎಇ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿವೆ.

    ಪತ್ರದಲ್ಲಿ ಕೊರೊನಾ ನಿಯಂತ್ರಿಸಲು ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಸಮರ್ಪಕವಾಗಿಲ್ಲ ಎಂದು ಈ ಮೂರು ಸಂಸ್ಥೆಗಳು ಆರೋಪಿಸಿವೆ. ಮೊದಲ ಹಂತದ ಲಾಕ್‍ಡೌನ್ ಜಾರಿಗೊಳಿಸಿದಾಗಲೇ ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕಿತ್ತು. ಸೋಂಕು ಹರಡುವಿಕೆ ಹೆಚ್ಚಾದ ಮೇಲೆ ಕಾರ್ಮಿಕರನ್ನು ಕಳುಹಿಸಿದ್ದು ತಪ್ಪು ನಿರ್ಧಾರವಾಗಿದೆ. ಅವರನ್ನು ಕೊರೊನಾ ಸೋಂಕು ಸಮುದಾಯಕ್ಕೆ ಹರಡಿದ ಮೇಲೆ ಕಳುಹಿಸಲಾಗಿದೆ. ಇದರಿಂದ ಕೊರೊನಾ ಇನ್ನಷ್ಟು ಹರಡುವ ಸಾಧ್ಯತೆ ಇದೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಹರಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂಬ ಆತಂಕವನ್ನು ವ್ಯಕ್ತಪಡಿಸಲಾಗಿದೆ.

    ನಗರ ಪ್ರದೇಶಗಳಿಗೆ ಹೋಲಿಸಿಕೊಂಡರೆ ನಮ್ಮ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೌಕರ್ಯಗಳು ಬಹಳ ಕಡಿಮೆ. ಸೌಕರ್ಯಗಳಿಲ್ಲದ ಕಡೆ ಪರಿಸ್ಥಿತಿ ನಿರ್ವಹಣೆ ಮಾಡುವುದು ಕಷ್ಟವಾಗಲಿದೆ. ಇದರಿಂದ ಕೊರೊನಾ ಕಷ್ಟ ಇನ್ನೂ ಹೆಚ್ಚಾಗಲಿದೆ. ಆದ್ದರಿಂದ ಜಿಲ್ಲಾ ಮಟ್ಟದಲ್ಲಿ ಹೆಚ್ಚಿನ ಕ್ರಮಕೈಗೊಳ್ಳಬೇಕಾಗಿದೆ. ಜಿಲ್ಲಾಡಳಿಗಳಿಗೆ ಹೆಚ್ಚಿನ ಅಧಿಕಾರ ಮತ್ತು ನೆರವು ನೀಡಿ. ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕೂಡಲೇ ಕ್ಲಷ್ಟರ್ ಮಟ್ಟದಲ್ಲಿ ಲಾಕ್‍ಡೌನ್ ಜಾರಿ ಮಾಡಬೇಕು. ಜೊತೆಗೆ ಸೋಂಕಿತರನ್ನು ಬಹಳ ಬೇಗ ಪತ್ತೆಹಚ್ಚಬೇಕು. ಸೂಕ್ತ ಐಸೊಲೇಷನ್ ವ್ಯವಸ್ಥೆ ಮಾಡಬೇಕು ಎಂದು ಪತ್ರದಲ್ಲಿ ಸಲಹೆ ನೀಡಲಾಗಿದೆ.

  • ಇನ್ಮುಂದೆ ಯಾವುದೇ ಸಮುದಾಯಕ್ಕೆ ಪರಿಹಾರ ಘೋಷಣೆ ಇಲ್ಲ- ಬಿಎಸ್‍ವೈ

    ಇನ್ಮುಂದೆ ಯಾವುದೇ ಸಮುದಾಯಕ್ಕೆ ಪರಿಹಾರ ಘೋಷಣೆ ಇಲ್ಲ- ಬಿಎಸ್‍ವೈ

    ಬೆಂಗಳೂರು: ರಾಜ್ಯ ಸರ್ಕಾರದಿಂದ ಇನ್ನುಮುಂದೆ ಯಾವುದೇ ಸಮುದಾಯಕ್ಕೆ ಕೊರೊನಾ ಪರಿಹಾರ ಘೋಷಣೆ ಮಾಡಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಸಿಎಂ, ರಾಜ್ಯ ಸರ್ಕಾರ ಈಗಾಗಲೇ ಸಾಕಷ್ಟು ಸಮುದಾಯಗಳಿಗೆ ಪರಿಹಾರ ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ಹಣ ತಲುಪಿಸಲು ಎಲ್ಲಾ ಕ್ರಮ ಕೈಗೊಳ್ಳುತ್ತಿದ್ದೇವೆ. ಈಗಾಗಲೇ ನನ್ನ ಶಕ್ತಿ ಮೀರಿ ಪ್ಯಾಕೇಜ್ ಘೋಷಣೆ ಮಾಡಿದ್ದೇನೆ. ಹೀಗಾಗಿ ಇನ್ನುಮುಂದೆ ಯಾವುದೇ ಸಮುದಾಯಕ್ಕೆ ಪರಿಹಾರ ಘೋಷಣೆ ಮಾಡುವುದಿಲ್ಲ ಎಂದು ತಿಳಿಸಿದರು.

    ದೇವಸ್ಥಾನಗಳನ್ನು ತೆರೆಯಲು ಅನುಮತಿ ಕೊಟ್ಟಿದ್ದೇವೆ. ಇದರೊಂದಿಗೆ ಮಸೀದಿ, ಚರ್ಚ್ ಗಳಿಗೂ ಅವಕಾಶ ಕೊಡಲಾಗುತ್ತದೆ. ಈ ಸಂಬಂಧ ಕೇಂದ್ರ ಸರ್ಕಾರದಿಂದ ಅನುಮತಿ ಸಿಗಬೇಕು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರು ಕೆಲವು ನಿಬಂಧನೆಗಳನ್ನು ಅಳವಡಿಸಲು ಸಲಹೆ ಕೊಟ್ಟಿದ್ದಾರೆ. ಅದನ್ನು ಅನುಸರಿಸಲಾಗುತ್ತದೆ ಎಂದು ಹೇಳಿದರು.

    ನಾವು ಕೋವಿಡ್-19 ಜತೆ ಬದುಕಬೇಕಾಗಿದೆ. ಸಾಕಷ್ಟು ಸಮಸ್ಯೆಗಳಿವೆ, ಹೊರಗಿನ ರಾಜ್ಯಗಳಿಂದ ಜನ ಬರುತ್ತಿದ್ದಾರೆ. ಅವರೆಲ್ಲರಿಗೂ ಉಳಿಯಲು ವ್ಯವಸ್ಥೆ ಮಾಡಬೇಕಿದೆ. ಅವರ ವಸತಿಗೆ ಸಮಸ್ಯೆಯಾಗಿದೆ. ಇದರ ಬಗ್ಗೆಯೂ ಕೇಂದ್ರಕ್ಕೆ ಬರೆದ ಪತ್ರದಲ್ಲಿ ಗಮನ ಸೆಳೆಯಲಾಗಿದೆ ಎಂದರು.

    ಇದಕ್ಕೂ ಮುನ್ನ ಸಿಎಂ ಯಡಿಯೂರಪ್ಪ ಅವರು ಮಾಜಿ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ಅವರ 56ನೇ ಪುಣ್ಯತಿಥಿ ಹಿನ್ನೆಲೆ ವಿಧಾನಸೌಧದಲ್ಲಿ ಇರುವ ನೆಹರೂ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

  • ಅಶ್ವಥ್ ನಾರಾಯಣ, ಅಶೋಕ್ ವಿರುದ್ಧ ನಾರಾಯಣ ಗೌಡ ವಾಗ್ದಾಳಿ

    ಅಶ್ವಥ್ ನಾರಾಯಣ, ಅಶೋಕ್ ವಿರುದ್ಧ ನಾರಾಯಣ ಗೌಡ ವಾಗ್ದಾಳಿ

    ಬೆಂಗಳೂರು: ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಹಾಗೂ ಕಂದಾಯ ಸಚಿವ ಆರ್ ಅಶೋಕ್ ವಿರುದ್ಧ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ವಾಗ್ದಾಳಿ ನಡೆಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಮುದಾಯವನ್ನು ಬಳಸಿಕೊಂಡು ಎಲ್ಲರೂ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ ಅವರು ಕೂಡ ಸಮುದಾಯವನ್ನು ಬಳಸಿಕೊಂಡು ಮಂತ್ರಿ ಹಾಗೂ ಶಾಸಕರು ಆಗಿದ್ದಾರೆ. ಹಾಗಾಗಿ ಉಪಮುಖ್ಯಮಂತ್ರಿ ಅಥವಾ ಮಂತ್ರಿ ಆಗಲಿ ಮುಖ ನೋಡಿ ಈ ಸ್ಥಾನ ಕೊಡಲಿಲ್ಲ. ಬದಲಾಗಿ ಅವರ ಸಮುದಾಯ ನೋಡಿ ಅವರಿಗೆ ಉಪಮುಖ್ಯಮಂತ್ರಿ ಹಾಗೂ ಮಂತ್ರಿ ಸ್ಥಾನವನ್ನು ಕೊಟ್ಟಿದ್ದಾರೆ. ಇಂದು ಬಿಜೆಪಿಯಲ್ಲಿ ಒಬ್ಬ ಅಶ್ವಥ್ ನಾರಾಯಣ್, ಸಿ.ಟಿ ರವಿ, ಅಶೋಕ್ ಅವರನ್ನು ಮಾತನಾಡಿಸುತ್ತಿದ್ದಾರೆ ಹೊರತು ಮಾತನಾಡುತ್ತಿಲ್ಲ ಎಂದು ಕಿಡಿ ಕಾರಿದರು.

    ನಾನು ಯಾವಾಗಲೂ ಕನ್ನಡ, ಕನ್ನಡಿಗರ ಹಾಗೂ ಕರ್ನಾಟಕದ ಪರವಾಗಿ 25 ವರ್ಷದ ಹೋರಾಟದ ಜೀವನದಲ್ಲಿ ತೊಡಗಿಸಿಕೊಂಡಿದ್ದೇನೆ. ಈಗಲೂ ಕರ್ನಾಟಕದ ಧ್ವನಿಯಾಗಿ ಕೆಲಸ ಮಾಡಬೇಕು ಎಂಬುದು ನನ್ನ ಉದ್ದೇಶವಾಗಿದೆ. ರಾಜಕೀಯವಾಗಿ ನಾನು ಯೋಚನೆ ಮಾಡಿಲ್ಲ. ಈ ಹೋರಾಟ ಸಂಪೂರ್ಣವಾಗಿ ಡಿ.ಕೆ ಶಿವಕುಮಾರ್ ಅವರ ಕಾನೂನಿನ ಹೋರಾಟಕ್ಕೆ ನೈತಿಕವಾದಂತಹ ಹಾಗೂ ಮಾನಸಿಕವಾದಂತಹ ರ‍್ಯಾಲಿಯೇ ಹೊರತು ಬೇರೆ ರಾಜಕೀಯ ಉದ್ದೇಶ ಇಲ್ಲ ಎಂದು ಹೇಳಿದ್ದಾರೆ.

    ಎಲ್ಲ ಸಂಸ್ಥೆಗಳಲ್ಲಿ ಸಮಸ್ಯೆ ಇದ್ದೇ ಇರುತ್ತದೆ. ಒಕ್ಕಲಿಗರ ಸಂಘದಲ್ಲಿ ನಿರ್ದೇಶಕರು, ಆಡಳಿತ ಇಲ್ಲ. ಎಲ್ಲ ನಿರ್ದೇಶಕರು ಈ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಸಮಾಜದ ಅನೇಕ ಸಂಘ-ಸಂಸ್ಥೆ ಹಾಗೂ ರಾಜಕೀಯ ಪಕ್ಷಗಳು ಈ ರ‍್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೆ 40 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಕೂಡ ಭಾಗಿಯಾಗಲಿದ್ದಾರೆ ಎಂದರು.

    ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಪ್ರಕರಣವನ್ನೂ ಸಿಬಿಐಗೆ ಕೊಟ್ಟಿದ್ದಾರೆ. ಹೀಗಾಗಿ ಅವರಿಗೂ ಮುಂದಿನ ದಿನಗಳಲ್ಲಿ ತೊಂದರೆ ಆಗಬಹುದು. ಒಟ್ಟಿನಲ್ಲಿ ಸಮಾಜದ ನಾಯಕರನ್ನು ರಾಜಕೀಯ ಮುಗಿಸಬೇಕು ಎಂಬ ಕೇಂದ್ರದ ವ್ಯವಸ್ಥೆಯ ವಿರುದ್ಧ ಜನ ಸಿಡಿದೆದ್ದು ನಿಲ್ಲಬೇಕಾಗುತ್ತದೆ ಎಂದು ಹೇಳಿದ್ದಾರೆ.

  • ಬಡ ಮುಸ್ಲಿಂ ಯುವಕ, ಯುವತಿಯರಿಗೆ ಖಾದ್ರಿಯಾ ಟ್ರಸ್ಟ್ ವತಿಯಿಂದ ಉಚಿತ ಸಾಮೂಹಿಕ ವಿವಾಹ

    ಬಡ ಮುಸ್ಲಿಂ ಯುವಕ, ಯುವತಿಯರಿಗೆ ಖಾದ್ರಿಯಾ ಟ್ರಸ್ಟ್ ವತಿಯಿಂದ ಉಚಿತ ಸಾಮೂಹಿಕ ವಿವಾಹ

    ಬೆಂಗಳೂರು: ಬಡ ಮುಸ್ಲಿಂ ಸಮುದಾಯದ ಯುವಕ ಯುವತಿಯರಿಗೆ ಖಾದ್ರಿಯಾ ಟ್ರಸ್ಟ್ ವತಿಯಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯವನ್ನು ಏರ್ಪಡಿಸಲಾಗಿತ್ತು.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಜಾಸ್ ಟೋಲ್ ಬಳಿ ಬೆಂಗಳೂರಿನ ಮೌಲ್ವಿಗಳು ನೂತನ ವಧು-ವರರಿಗೆ ಸಂಪ್ರದಾಯಿಕವಾಗಿ ವಿವಾಹವನ್ನು ನೆರವೇರಿಸಿದರು. ನವ ಜೋಡಿಗಳಿಗೆ ಖಾದ್ರಿಯಾ ಟ್ರಸ್ಟ್ ವತಿಯಿಂದ ಉಚಿತವಾಗಿ ಗೃಹ ಉಪಯೋಗಿ ವಸ್ತುಗಳು ಹಾಗೂ ಜೀವನಾಧಾರಕ್ಕೆ ಹೊಲಿಗೆ ಯಂತ್ರಗಳನ್ನ ಕೊಡುಗೆಯಾಗಿ ವಿತರಿಸಿದರು.

    ಇದೇ ವೇಳೆ ಖಾದ್ರಿಯಾ ಟ್ರಸ್ಟ್ ನ ಅಧ್ಯಕ್ಷ ಜಲಾಲುದ್ಧಿನ್ ಖಾದ್ರಿ ಮಾತನಾಡಿ, ಬಡವರ ಏಳಿಗೆಗಾಗಿ ತಮ್ಮ ತಂದೆ- ತಾಯಿಯ ನೆನಪಿನಲ್ಲಿ ಇಂತಹ ಕಾರ್ಯಗಳನ್ನ ನಡೆಸುತಿದ್ದು, ಸಮುದಾಯಕ್ಕೆ ಅಭಾರಿಯಾಗಿರುವುದಾಗಿ ತಿಳಿಸಿದರು.