Tag: ಸಮೀಶಾ

  • ಮೊದಲ ಬಾರಿಗೆ ಮಗಳ ಜೊತೆ ಶಿಲ್ಪಾ ಶೆಟ್ಟಿ ಸುತ್ತಾಟ

    ಮೊದಲ ಬಾರಿಗೆ ಮಗಳ ಜೊತೆ ಶಿಲ್ಪಾ ಶೆಟ್ಟಿ ಸುತ್ತಾಟ

    ಮುಂಬೈ: ಬಾಲಿವುಡ್ ನಟಿ, ಕುಡ್ಲದ ಬೆಡಗಿ ಶಿಲ್ಪಾ ಶೆಟ್ಟಿ ಕುಂದ್ರಾ ಮೊದಲ ಬಾರಿಗೆ ತಮ್ಮ ಮಗಳು ಸಮೀಶಾಳ ಮುಖವನ್ನು ಪರಿಚಯಿಸಿದ್ದು, ಫೋಟೋ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.

    ಶಿಲ್ಪಾ ಶೆಟ್ಟಿ ಕುಂದ್ರಾ ತಮ್ಮ ಮಗಳು ಸಮೀಶಾ ಶೆಟ್ಟಿ ಕುಂದ್ರಾಳ ಮುಖವನ್ನು ಪ್ರಪ್ರಥಮ ಬಾರಿಗೆ ತೋರಿಸಿದ್ದು, ಇಂದು ಮುಂಬೈನಲ್ಲಿ ತಾಯಿ ಮಗಳು ನಗರವನ್ನು ಸುತ್ತಾಡಿದ್ದು, ಈ ವೇಳೆ ಫೋಟೋ ಕ್ಲಿಕ್ಕಿಸಲಾಗಿದೆ. ಈ ಚಿತ್ರಗಳು ಇದೀಗ ಸಖತ್ ವೈರಲ್ ಆಗಿವೆ. ಶಿಲ್ಪಾ ಶೆಟ್ಟಿ ಅವರು ನೀಲಿ ಬಣ್ಣದ ಶರ್ಟ್, ಬ್ಲ್ಯೂ ಜೀನ್ಸ್ ಧರಿಸಿ ಕಾಣಿಸಿಕೊಂಡಿದ್ದು, ಮಗಳು ಸಮೀಶಾ ಪಿಂಕ್ ಶರ್ಟ್ ಹಾಗೂ ಬ್ಲ್ಯೂ ಜೀನ್ಸ್ ನಲ್ಲಿ ಮಿಂಚಿದ್ದಾಳೆ. ಸಮೀಶಾಳ ಕ್ಯೂಟ್ನೆಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಮುದ್ದಾದ ಕೆನ್ನೆ ನೋಡಿ ಸ್ಮೈಲ್ ಮಾಡುತ್ತಿದ್ದಾರೆ.

    ಇತ್ತೀಚೆಗೆ ವಿಯಾನ್ ಹಾಗೂ ಸಮೀಶಾ ಭಾಯಿ ದೂಜ್ ಆಚರಿಸಿದ ವಿಡಿಯೋವನ್ನು ಶಿಲ್ಪಾ ಶೆಟ್ಟಿ ಹಂಚಿಕೊಂಡಿದ್ದರು. ವಿಡಿಯೋ ನೊಡಿದ ಅಭಿಮಾನಿಗಳು ಸಖತ್ ಖುಷ್ ಆಗಿದ್ದರು. ವಿಡಿಯೋ ಸಖತ್ ವೈರಲ್ ಆಗಿತ್ತು.

    ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ದಂಪತಿಗೆ ಈಗಾಗಲೇ ಏಳು ವರ್ಷದ ವಿಯಾನ್ ಎಂಬ ಮಗನಿದ್ದಾನೆ. ಆದರೆ ಫೆಬ್ರವರಿಯಲ್ಲಿ ಅವರು ಬಾಡಿಗೆ ತಾಯ್ತನ ವಿಧಾನದ ಮೂಲಕ ಮಗು ಪಡೆದಿದ್ದಾರೆ. ಮಗು ಜನಿಸಿ ವಾರದ ಬಳಿಕ ಈ ಕುರಿತು ಶಿಲ್ಪಾ ಶೆಟ್ಟಿ ಮಾಹಿತಿ ನೀಡಿದ್ದರು. ತಮ್ಮ ಬೆರಳು ಹಿಡಿದಿರುವ ಮಗಳ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡು, ನಿಮ್ಮ ಆಶೀರ್ವಾದ ಮತ್ತು ಪ್ರೀತಿ ಪುತ್ರಿಯ ಮೇಲಿರಲಿ ಎಂದು ಅಭಿಮಾನಿಗಳಲ್ಲಿ ಶಿಲ್ಪಾ ಕೇಳಿಕೊಂಡಿದ್ದರು.

    ಇನ್‍ಸ್ಟಾಗ್ರಾಂನಲ್ಲಿ ಗುಡ್ ನ್ಯೂಸ್ ಹಂಚಿಕೊಂಡಿದ್ದ ಶಿಲ್ಪಾ ಶೆಟ್ಟಿ, ಓಂ ಶ್ರೀ ಗಣೇಶಯಾ ನಮಃ. ನಮ್ಮ ಪ್ರಾರ್ಥನೆ ದೇವರಿಗೆ ತಲುಪಿದ್ದು, ಮನೆಗೆ ಆಗಮಿಸಿರುವ ಪುಟ್ಟ ದೇವತೆ ಶಮಿಶಾ ಶೆಟ್ಟಿಯನ್ನು ನಿಮಗೆ ಪರಿಚಯಿಸುತ್ತಿದ್ದೇನೆ. ಜೂನಿಯರ್ ಶಿಲ್ಪಾ ಶೆಟ್ಟಿ ಕುಂದ್ರಾ ಫೆಬ್ರವರಿ 15ರಂದು ಜನಿಸಿದ್ದಾಳೆ. ಸ ಅಂದ್ರೆ ಸಂಸ್ಕೃತದಲ್ಲಿ ನಮ್ಮವಳು ಮತ್ತು ಮಿಶಾದ ಅಂದ್ರೆ ದೇವರ ರೀತಿಯಲ್ಲಿರುವ ಎಂದರ್ಥ. ಹಾಗಾಗಿ ನಮ್ಮ ಮನೆಗೆ ಆಗಮಿಸಿರುವ ಲಕ್ಷ್ಮಿಗೆ ಸಮಿಶಾ ಎಂದು ಹೆಸರಿಟ್ಟಿದ್ದೇವೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮಕ್ಕಳ ಮೇಲಿರಲಿ. ವಿಯಾನ್ ರಾಜ್ ಕುಂದ್ರಾ ಜೊತೆ ಆಡಲು ಪುಟ್ಟ ಸೋದರಿ ಆಗಮಿಸಿದ್ದಾಳೆ ಎಂದು ಬರೆದುಕೊಂಡಿದ್ದರು.

    37ನೇ ವರ್ಷದಲ್ಲಿ ನಾನು ತಾಯಿಯಾಗಬೇಕೆಂಬ ಇಚ್ಛೆ ನನ್ನದಾಗಿರಲಿಲ್ಲ. ಸೂಕ್ತ ಸಮಯದಲ್ಲಿ ಮಹಿಳೆ ತಾಯ್ತನದ ಅನುಭವ ಪಡೆಯಬೇಕು. ಆದರೆ ನನಗೆ ರಾಜ್ ಕುಂದ್ರಾ ಸರಿಯಾದ ಸಮಯದಲ್ಲಿ ಸಿಗದಿದ್ದಕ್ಕೆ 37ನೇ ವಯಸ್ಸಿನಲ್ಲಿ ತಾಯಿಯಾದೆ ಎಂದು ಈ ಹಿಂದೆ ಶಿಲ್ಪಾ ಹೇಳಿಕೊಂಡಿದ್ದರು.