Tag: ಸಮೀರ್ ಶರ್ಮಾ

  • ಅಡುಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಟ ಸಮೀರ್ ಶರ್ಮಾ ಮೃತದೇಹ ಪತ್ತೆ

    ಅಡುಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಟ ಸಮೀರ್ ಶರ್ಮಾ ಮೃತದೇಹ ಪತ್ತೆ

    – ಎರಡು ದಿನಗಳ ಹಿಂದೆಯೇ ಆತ್ಮಹತ್ಯೆ?

    ಮುಂಬೈ: ಕಿರುತೆರೆಯ ಪ್ರತಿಭಾನ್ವಿತ ನಟ ಸಮೀರ್ ಶರ್ಮಾ (44) ತಮ್ಮ ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

    ಸಮೀರ್ ಶರ್ಮಾ ಮುಂಬೈನ ಪಶ್ಚಿಮ ಮಲಾಡ್‍ನ ರಸ್ತೆಯಲ್ಲಿರುವ ನೇಹಾ ಸಿಹೆಚ್‍ಎಸ್ ಬಿಲ್ಡಿಂಗ್‍ನ ಫ್ಲ್ಯಾಟ್ ನಲ್ಲಿ ವಾಸವಾಗಿದ್ದರು. ಆದರೆ ಬುಧವಾರ ರಾತ್ರಿ ಫ್ಲ್ಯಾಟ್‍ನ ಅಡುಗೆ ಮನೆಯಲ್ಲಿ ನೇಣು ಬಿಗಿದ ಸೀತಿಯಲ್ಲಿ ಪತ್ತೆಯಾಗಿದ್ದಾರೆ.

    ಸಮೀರ್ ಮನೆಯಿಂದ ದುರ್ವಾಸನೆ ಬಂದ ಹಿನ್ನೆಲೆ ನಿವಾಸಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ಒಡೆದು ನೋಡಿದಾಗ ಸಮೀರ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಾವನ್ನಪ್ಪಿದ ಎರಡು ದಿನ ಮೇಲಾಗಿದ್ದರಿಂದ ಶವ ಕೊಳೆಯಲಾರಂಭಿಸಿತ್ತು.

    ಕಳೆದ ಫೆಬ್ರವರಿಯಲ್ಲಿ ಅವರು ಈ ಫ್ಲ್ಯಾಟನ್ನು ಬಾಡಿಗೆಗೆ ಪಡೆದಿದ್ದರು. ಸಮೀರ್ ದೇಹದ ಸ್ಥಿತಿಯನ್ನು ನೋಡಿದರೆ ಅವರು ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದು, ಸಮೀರ್ ಮನೆಯಲ್ಲಿ ಯಾವುದೇ ಡೆತ್ ನೋಟ್ ಲಭ್ಯವಾಗಿಲ್ಲ. ನೆರೆಹೊರೆಯವರ ಪ್ರಕಾರ ಸಮೀರ್ ಕಳೆದ ಕೆಲ ದಿನಗಳಿಂದ ಒಂಟಿಯಾಗಿರುತ್ತಿದ್ದರು. ಹೊರಗಡೆ ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ದಾರೆ.

    ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಕೊಂಡು ತನಿಖೆ ಮುಂದುವರಿಸಿದ್ದಾರೆ. ಸಮೀರ್ ಸೂಪರ್ ಹಿಟ್ ಧಾರಾವಾಹಿಗಳಾದ ‘ದಿಲ್ ಕ್ಯಾ ಚಾಹ್ತಾ’, ‘ಕಹಾನಿ ಘರ್ ಘರ್ ಕೀ’, ‘ಸಾಸ್ ಕಭೀ ಬಹು ಥೀ’ ಗಳಲ್ಲಿ ನಟಿಸಿದ್ದರು. ‘ಯೇ ರಿಶ್ತೆ ಹೈ ಪ್ಯಾರ್ ಕೇ’ ಧಾರಾವಾಹಿಯ ಶೌರ್ಯ ಪಾತ್ರ ಸಮೀರ್ ಗೆ ಹೆಚ್ಚು ಜನಪ್ರಿಯತೆ ತಂದು ಕೊಟ್ಟಿತ್ತು.