Tag: ಸಮೀರ್ ವಾಂಖೆಡೆ

  • ಮಾಜಿ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಸಿಬಿಐನಿಂದ ಭ್ರಷ್ಟಾಚಾರ ಕೇಸ್ ದಾಖಲು

    ಮುಂಬೈ: 2 ವರ್ಷಗಳ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ನಟ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ (Aryan Khan) ಅವರನ್ನು ಬಂಧಿಸಿದ್ದ ಮಾಜಿ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ (Sameer Wankhede) ವಿರುದ್ಧ ಕೇಂದ್ರೀಯ ತನಿಖಾ ದಳ (CBI) ಶುಕ್ರವಾರ ಭ್ರಷ್ಟಾಚಾರ ಪ್ರಕರಣವನ್ನು ದಾಖಲಿಸಿದೆ.

    ವಾಂಖೆಡೆ ಭ್ರಷ್ಟಾಚಾರದ ಮೂಲಕ ಆಸ್ತಿ ಗಳಿಕೆ ಮಾಡಿರುವ ಆರೋಪದಡಿ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಸಮೀರ್ ವಾಂಖೆಡೆ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆಯ ಭಾಗವಾಗಿ ಅಂಧೇರಿ, ಮುಂಬೈಯಲ್ಲಿರುವ ಅವರ ಮನೆ ಸೇರಿದಂತೆ 29 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.

    2021ರ ಅಕ್ಟೋಬರ್‌ನಲ್ಲಿ ವಾಂಖೆಡೆ ನೇತೃತ್ವದ ತಂಡ ಮುಂಬೈ ಇಂಟರ್ನ್ಯಾಷನಲ್ ಕ್ರೂಸ್ ಟರ್ಮಿನಲ್‌ನಲ್ಲಿ ಕಾರ್ಡೆಲಿಯಾ ಹಡಗಿನ ಮೇಲೆ ದಾಳಿ ಮಾಡಿ ಆರ್ಯನ್ ಖಾನ್ ಹಾಗೂ ಇತರರನ್ನು ಬಂಧಿಸಿತ್ತು. ಮಾದಕ ವಸ್ತು ಸಂಗ್ರಹ, ಸೇವನೆ, ಕಳ್ಳಸಾಗಣೆಯ ಆರೋಪ ಹೊರಿಸಿ ಆರ್ಯನ್ ಖಾನ್ ಅವರನ್ನು 22 ದಿನಗಳ ಕಾಲ ಜೈಲಿನಲ್ಲಿಡಲಾಗಿತ್ತು. ಬಳಿಕ ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಎನ್‌ಸಿಬಿ ಮೇ 2022ರಲ್ಲಿ ಕ್ಲೀನ್ ಚಿಟ್ ನೀಡಿತ್ತು. ಇದನ್ನೂ ಓದಿ: ಕಣಿವೆಯಲ್ಲಿ ಹೆಚ್ಚುತ್ತಿರುವ ಉಗ್ರರ ಹಾವಳಿ – ಕೇಂದ್ರದ ದಿಟ್ಟ ನಿರ್ಧಾರ

    ಇದರ ನಡುವೆ ಸಮೀರ್ ವಾಂಖೆಡೆ ವಿರುದ್ಧ ಮಹಾರಾಷ್ಟ್ರದ ಮಾಜಿ ಸಚಿವ ನವಾಬ್ ಮಲಿಕ್ ಹಲವು ಆರೋಪಗಳನ್ನು ಮಾಡಿದರು. ಅದರಲ್ಲಿ ಒಂದು ವಾಂಖೆಡೆ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರಿ ಹುದ್ದೆ ಪಡೆದಿದ್ದರು ಎಂಬುದೂ ಆಗಿತ್ತು. ಆ ಕೇಸ್‌ನ ಬಳಿಕ ಅವರಿಗೆ ಮಹಾರಾಷ್ಟ್ರದ ಜಾತಿ ಪರಿಶೀಲನಾ ಸಮಿತಿ ಕ್ಲೀನ್ ಚಿಟ್ ನೀಡಿತ್ತು. 2021ರಲ್ಲಿ ಎನ್‌ಸಿಬಿ ವಲಯ ನಿರ್ದೇಶಕರಾಗಿ ಅವರ ಅವಧಿ ಮುಗಿದಿದ್ದು ಬಳಿಕ ಕಂದಾಯ ಇಲಾಖೆಗೆ ವರ್ಗಾವಣೆಗೊಂಡಿದ್ದರು. ಇದನ್ನೂ ಓದಿ: ಹಿಂಡನ್‍ಬರ್ಗ್ ವರದಿ ವಿವಾದ – ತನಿಖೆಗೆ 3 ತಿಂಗಳ ಗಡುವು ನೀಡಿದ ಸುಪ್ರೀಂ

  • ನಿಮ್ಮನ್ನು ಮುಗಿಸಲಾಗುವುದು- ಎನ್‍ಸಿಬಿ ಮಾಜಿ ಅಧಿಕಾರಿ ಸಮೀರ್ ವಾಂಖೆಡೆಗೆ ಜೀವ ಬೆದರಿಕೆ

    ನಿಮ್ಮನ್ನು ಮುಗಿಸಲಾಗುವುದು- ಎನ್‍ಸಿಬಿ ಮಾಜಿ ಅಧಿಕಾರಿ ಸಮೀರ್ ವಾಂಖೆಡೆಗೆ ಜೀವ ಬೆದರಿಕೆ

    ಮುಂಬೈ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‍ಸಿಬಿ) ಮಾಜಿ ಅಧಿಕಾರಿ ಸಮೀರ್ ವಾಂಖೆಡೆಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಬಂದಿರುವುದಾಗಿ ಆರೋಪಿಸಲಾಗಿದೆ. ಆಗಸ್ಟ್ 14 ರಂದು ‘ಅಮನ್’ ಹೆಸರಿನ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಈ ಸಂದೇಶ ಬಂದಿದೆ.

    ಸಂದೇಶದಲ್ಲಿ “ತುಮ್ಕೋ ಪತಾ ಹೈ ತುಮ್ನೆ ಕ್ಯಾ ಕಿಯಾ ಹೈ, ಇಸ್ಕಾ ಹಿಸಾಬ್ ತುಮ್ಕೋ ದೇನಾ ಪಡೆಗಾ” (ನೀವು ಏನು ಮಾಡಿದ್ದೀರಿ ಎಂದು ನಿಮಗೆ ತಿಳಿದಿದೆ ಮತ್ತು ನೀವು ಅದಕ್ಕೆ ಲೆಕ್ಕ ಕೊಡಬೇಕಾಗುತ್ತದೆ) ಎಂದು ಬರೆಯಲಾಗಿದೆ. ಮತ್ತೊಂದು ಸಂದೇಶದಲ್ಲಿ, “ತುಮ್ಕೋ ಖತಮ್ ಕರ್ ದೇಂಗೆ (ನಿಮ್ಮನ್ನು ಮುಗಿಸಲಾಗುವುದು) ಎಂದು ಹೇಳಲಾಗಿದೆ.

    ಇದರ ಬೆನ್ನಲ್ಲೇ ಸಮೀರ್ ವಾಂಖೆಡೆ ಗೋರೆಗಾಂವ್ ಪೊಲೀಸರನ್ನು ಸಂಪರ್ಕಿಸಿದ್ದು, ಎಫ್‍ಐಆರ್ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ನಿನ್ನೆ ವಾಂಖೆಡೆ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಖಾತೆಯು ಶೂನ್ಯ ಅನುಯಾಯಿಗಳನ್ನು ಹೊಂದಿದ್ದು, ವಾಂಖೆಡೆಗೆ ಬೆದರಿಕೆ ಹಾಕುವ ಉದ್ದೇಶದಿಂದ ರಚಿಸಲಾಗಿದೆ ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಟ್ವೀಟ್ ಮಾಡಿದ್ದಕ್ಕೆ ಸೌದಿ ಮಹಿಳೆಗೆ 34 ವರ್ಷ ಜೈಲು ಶಿಕ್ಷೆ

    2021 ರ ಅಕ್ಟೋಬರ್‍ನಲ್ಲಿ ಮುಂಬೈ ಕ್ರೂಸ್‍ನಲ್ಲಿ ಡ್ರಗ್ಸ್ ದಾಳಿ ನಡೆಸಿದ ಮೇಲೆ ಎನ್‍ಸಿಬಿಯ ಮುಂಬೈ ಕಚೇರಿಯ ಮಾಜಿ ವಲಯ ನಿರ್ದೇಶಕ ವಾಂಖೆಡೆ ಮುನ್ನಲೆಗೆ ಬಂದಿದ್ದರು. ಪ್ರಕರಣ ಹಿನ್ನೆಲೆಯಲ್ಲಿ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಮತ್ತು 19 ಇತರರನ್ನು ಬಂಧಿಸಿದ್ದರು. ಮತ್ತು ಕೆಲವು ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರು.

    ಈ ನಡುವೆ ಸಮೀರ್ ವಾಂಖೆಡೆ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿತ್ತು. ಈ ಹಿನ್ನಲೆ ಪ್ರಕರಣವನ್ನು ಮುಂಬೈ ವಲಯದಿಂದ ಎನ್‍ಸಿಬಿಯ ಕೇಂದ್ರ ತಂಡಕ್ಕೆ ವರ್ಗಾಯಿಸಲಾಯಿತು. ವಾಂಖೆಡೆ ಅವರನ್ನು ಪ್ರಕರಣದಿಂದ ತೆಗೆದುಹಾಕಲಾಯಿತು ಮತ್ತು ಅವರ ವಿರುದ್ಧ ವಿಜಿಲೆನ್ಸ್ ತನಿಖೆಯನ್ನು ಪ್ರಾರಂಭಿಸಲಾಯಿತು.

    Live Tv
    [brid partner=56869869 player=32851 video=960834 autoplay=true]

  • ಸಮೀರ್ ಮುಸ್ಲಿಂ ಅಲ್ಲ – ಜಾತಿ ಪರಿಶೀಲನಾ ಸಮಿತಿ ಕ್ಲೀನ್‌ ಚಿಟ್

    ಸಮೀರ್ ಮುಸ್ಲಿಂ ಅಲ್ಲ – ಜಾತಿ ಪರಿಶೀಲನಾ ಸಮಿತಿ ಕ್ಲೀನ್‌ ಚಿಟ್

    ಮುಂಬೈ: ನಕಲಿ ಜಾತಿ ಪ್ರಮಾಣ ಪತ್ರ ಬಳಸಿ ಸರ್ಕಾರಿ ನೌಕರಿ ಪಡೆದಿರುವುದಾಗಿ ಆರೋಪ ಹೊತ್ತಿದ್ದ ಮಾಜಿ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆಗೆ ಜಾತಿ ಪರಿಶೀಲನಾ ಸಮಿತಿ ಕ್ಲೀನ್‌ ಚಿಟ್ ನೀಡಿದೆ.

    ಸಮೀರ್ ವಾಂಖೆಡೆ ಹುಟ್ಟಿನಿಂದ ಮುಸ್ಲಿಂ ಅಲ್ಲ. ಅವರು ಮಹಾರ್-37 ಪರಿಶಿಷ್ಟ ಜಾತಿಗೆ ಸೇರಿದವರು. ಸಮೀರ್ ವಾಂಖೆಡೆ ಹಾಗೂ ಅವರ ತಂದೆ ದ್ಯಾನೇಶ್ ವಾಂಖೆಡೆ ಹಿಂದೂ ಧರ್ಮವನ್ನು ತ್ಯಜಿಸಿ ಮುಸ್ಲಿಂ ಧರ್ಮವನ್ನು ಸ್ವೀಕರಿಸಿಲ್ಲ ಎಂದು ಸಮಿತಿ ತೀರ್ಮಾನಿಸಿದೆ. ಇದನ್ನೂ ಓದಿ: ಸ್ವಾವಲಂಬಿ ಭಾರತ ಕಟ್ಟಲು ಕೈಜೋಡಿಸಿ: ರಾಜ್ಯಪಾಲರ ಮನವಿ

    ಮಹಾರಾಷ್ಟ್ರದ ಮಾಜಿ ಕ್ಯಾಬಿನೆಟ್ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಸಮೀರ್ ಅವರು ನಕಲಿ ಜಾತಿ ಪ್ರಮಾಣ ಪತ್ರ ಬಳಸಿರುವುದಾಗಿ ಆರೋಪಿಸಿದ್ದರು. ಬಳಿಕ ರಾಜಕೀಯ ಮುಖಂಡರಾದ ಮನೋಜ್ ಸಂಸಾರೆ, ಅಶೋಕ್ ಕಾಂಬ್ಳೆ ಹಾಗೂ ಸಂಜಯ್ ಕಾಂಬ್ಳೆ ಅವರು ಸಮೀರ್ ವಾಂಖೆಡೆ ವಿರುದ್ಧ ದೂರು ನೀಡಿದ್ದರು. ಇದೀಗ ಈ ಆರೋಪ ಆಧಾರ ರಹಿತ ಎಂದು ಜಾತಿ ಪರಿಶೀಲನಾ ಸಮಿತಿ ಹೇಳಿದೆ. ಇದನ್ನೂ ಓದಿ: ಲಂಚ-ಮಂಚ ಹೇಳಿಕೆಗೆ ಕೌಂಟರ್ ಕೊಟ್ಟ ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ಸುದೀರ್ಘ ಉತ್ತರ

    ಸಮೀರ್ ವಾಂಖೆಡೆಗೆ ಕ್ಲೀನ್‌ ಚಿಟ್ ಲಭಿಸುತ್ತಿದ್ದಂತೆಯೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸತ್ಯಮೇವ ಜಯತೆ ಎಂದು ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಿಕ್ಕ ವಯಸ್ಸಿನಲ್ಲೇ ಬಾರ್ ಲೈಸೆನ್ಸ್‌ಗಾಗಿ ಸುಳ್ಳು ಮಾಹಿತಿ ನೀಡಿದ್ದ ಸಮೀರ್ ವಾಂಖೆಡೆ ವಿರುದ್ಧ ಎಫ್‌ಐಆರ್

    ಮುಂಬೈ: ಬಾರ್ ಲೈಸನ್ಸ್ ಪಡೆಯಲು ನಕಲಿ ವಯಸ್ಸಿನ ದಾಖಲೆ ನೀಡಿದ್ದಕ್ಕಾಗಿ ಮಾದಕ ವಸ್ತು ನಿಗ್ರಹ ಸಂಸ್ಥೆ(ಎನ್‌ಸಿಬಿ) ಮಾಜಿ ವಲಯ ಮುಖ್ಯಸ್ಥ ಸಮೀರ್ ವಾಂಖೆಡೆ ವಿರುದ್ಧ ಎಫ್‌ಐಆರ್ ದಾಖಲಿಸಿಲಾಗಿದೆ.

    ಸಮೀರ್ ವಾಂಖೆಡೆ ನವಿ ಮುಂಬೈನಲ್ಲಿ ಬಾರ್ ಹೊಂದಿದ್ದು, ಅಪ್ರಾಪ್ತ ವಯಸ್ಸಿನಲ್ಲೇ ಪರವಾನಗಿ ಪಡೆದಿದ್ದರು ಎಂದು ಎನ್‌ಸಿಪಿ ಮುಖ್ಯಸ್ಥ ನವಾಬ್ ಮಲಿಕ್ ಆರೋಪಿಸಿದ್ದರು. ನವಿ ಮುಂಬೈನ ಸದ್ಗುರು ಫ್ಯಾಮಿಲಿ ಬಾರ್ ಆಂಡ್ ರೆಸ್ಟೋರೆಂಟ್‌ಗೆ ಪರವಾನಗಿ ಪಡೆದಾಗ ಸಮೀರ್‌ಗೆ ಕೇವಲ 17 ವರ್ಷ ಎಂದು ಹೇಳಿದ್ದರು. ಇದನ್ನೂ ಓದಿ: ಹಿಜಬ್ ಆಯ್ಕೆಯಲ್ಲ, ನಾವು ಪ್ರೀತಿಸುವ ದೇವರು ವಿಧಿಸಿರುವ ಶಿಷ್ಟಾಚಾರ: ಝೈರಾ ವಾಸಿಮ್

    ಬಾರ್ ನಡೆಸಲು ವ್ಯಕ್ತಿಗೆ ಕನಿಷ್ಠ 21 ವರ್ಷವಾಗಿರಬೇಕು. 1997ರ ಅಕ್ಟೋಬರ್ 27ರಂದು ಸಮೀರ್ ವಾಂಖೆಡೆಗೆ ಬಾರ್ ಹಾಗೂ ರೆಸ್ಟೋರೆಂಟ್‌ನ ಪರವಾನಗಿ ನೀಡಲಾಗಿತ್ತು ಎಂದು ಸ್ಥಳೀಯ ಅಬಕಾರಿ ಕಚೇರಿಯ ತನಿಖೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲು!

    ನವಾಬ್ ಮಲಿಕ್ ದೂರು ನೀಡಿದ ಬಳಿಕ ರಾಜ್ಯ ಅಬಕಾರಿ ಇಲಾಖೆ ವಾಂಖೆಡೆ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ವಾಂಖೆಡೆ ಅವರ ಪರವಾನಗಿ ರದ್ದುಗೊಳಿಸಲಾಗಿದ್ದು, ಐಪಿಸಿ 181, 188, 420, 425, 428, 481 ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

  • ಆರ್ಯನ್ ಖಾನ್ ಕಿಡ್ನಾಪ್ ಮಾಡಲಾಗಿತ್ತು: ನವಾಬ್ ಮಲಿಕ್

    ಆರ್ಯನ್ ಖಾನ್ ಕಿಡ್ನಾಪ್ ಮಾಡಲಾಗಿತ್ತು: ನವಾಬ್ ಮಲಿಕ್

    ಮುಂಬೈ: ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ಕಿಡ್ನಾಪ್ ಮಾಡಿ, ಹಣ ಕೇಳಲಾಗಿತ್ತು ಎಂದು ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಗಂಭೀರ ಆರೋಪ ಮಾಡಿದ್ದಾರೆ.

    ಡ್ರಗ್ಸ್ ಕೇಸ್ ಪ್ರಕರಣ ಅಂತಿಮವಾಗಿಲ್ಲದೇ, ಈ ನಡುವೆಯೇ ಆರ್ಯನ್ ಖಾನ್ ಜಾಮೀನು ಪಡೆದುಕೊಂಡು ಇತ್ತೀಚೆಗೆ ಹೊರಬಂದಿದ್ದಾರೆ. ಅದು ಅಲ್ಲದೇ ಆರ್ಯನ್ ಕೇಸ್ ನೋಡಿಕೊಳ್ಳುತ್ತಿದ್ದ ಎನ್‍ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರ ವಿರುದ್ಧ ಭ್ರಷ್ಟಚಾರದ ಆರೋಪಗಳು ಸಹ ಕೇಳಿಬರುತ್ತಿದೆ. ಈ ಹಿನ್ನೆಲೆ ಸಮೀರ್ ಆರ್ಯನ್ ಅವರನ್ನು ಅಪಹರಿಸಿಬೇಕೆಂದು ಈ ಆರೋಪ ಅವರ ಮೇಲೆ ಹಾಕುತ್ತಿದ್ದಾರೆ ಎಂದು ಗಂಭೀರ ಆರೋಪವನ್ನು ನವಾಬ್ ಮಾಡಿದ್ದಾರೆ. ಇದನ್ನೂ ಓದಿ: ಸೋನಂ, ರಿಯಾ ಫೋಟೋ ಹಾಕಿ ಮಿಸ್ ಮಾಡ್ಕೊಳ್ತಿದ್ದೀನಿ ಅಂದ್ರು ಅನಿಲ್ ಕಪೂರ್

    ಈ ಕುರಿತು ಮಾತನಾಡಿದ ಅವರು, ಎನ್‍ಸಿಬಿ ನಾಯಕರ ವಿರುದ್ಧ ಹಲವು ಆರೋಪಗಳು ಕೇಳಿ ಬರುತ್ತಿದೆ. ಈ ಹಿಂದೆ ಸಮೀರ್ ನೇತೃತ್ವದಲ್ಲಿ ಹಡಗಿನ ಮೇಲೆ ದಾಳಿ ನಡೆಸಿದ ನಂತರ 23 ವರ್ಷದ ಯುವಕನನ್ನು ಕಳೆದ ತಿಂಗಳು ಬಂಧಿಸಲಾಯಿತು. ಈ ವೇಳೆ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, ನಂತರ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ಸಹ ನೀಡಿತ್ತು. ಆದರೆ ಬೇಕೆಂದು ಆರ್ಯನ್ ಅವರನ್ನು ಇದರಲ್ಲಿ ಸೇರಿಸಿ ಶಾರೂಖ್ ಅವರಿಗೆ ಸಮೀರ್ ಮತ್ತು ಬಿಜೆಪಿ ಮುಖಂಡ ಮೋಹಿತ್ ಅವರು ಹಣಕ್ಕಾಗಿ ಬೇಡಿಕೆಯನ್ನು ಇಟ್ಟಿದ್ದರು ಎಂದು ಆರೋಪ ಮಾಡಿದ್ದಾರೆ.

    ಅದು ಅಲ್ಲದೇ ಡ್ರಗ್ಸ್ ಪಾರ್ಟಿ ನಡೆದಿತ್ತು ಎನ್ನಲಾದ ಐಷಾರಾಮಿ ಹಡಗಿನಲ್ಲಿ ಆರ್ಯನ್ ಟಿಕೆಟ್ ಅನ್ನು ಪಡೆದಿರಲಿಲ್ಲ. ಅವರನ್ನು ಪ್ರತೀಕ್ ಗಾಬಾ ಮತ್ತು ಆಮಿರ್ ಫರ್ನೀಚರ್‍ವಾಲ್ ಅವರು ಕರೆದುಕೊಂಡು ಹೋಗಿದ್ದರು. ಇದು ಕಿಡ್ನಾಪ್ ಮತ್ತು ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣವಾಗಿದೆ. ಇದರ ಹಿಂದೆ ಮೋಹಿತ್ ಅವರ ಮಾಸ್ಟರ್ ಮೈಂಡ್ ಇದೆ ಎಂದಿದ್ದಾರೆ.

    ಸಮೀರ್ ಅವರು ಆರ್ಯನ್ ಅರೆಸ್ಟ್ ಆದ ಬಳಿಕ ಭಯಗೊಂಡಿದ್ದರು. ಅದಕ್ಕೆ ಅ.7ರಂದು ಓಶಿವಾರಾ ಸ್ಮಶಾನದ ಬಳಿ ಮೋಹಿತ್ ಮತ್ತು ಸಮೀರ್ ಭೇಟಿ ಆಗಿದ್ದರು. ಅವರ ಅದೃಷ್ಟಕ್ಕೆ ಅಲ್ಲಿಂದ ಸಿಸಿಟಿವಿ ಹಾಳಾಗಿತ್ತು. ಆದ್ದರಿಂದ ನಮಗೆ ಸರಿಯಾಗಿ ಈ ಕುರಿತು ಮಾಹಿತಿ ಮತ್ತು ಸಾಕ್ಷಿಗಳು ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಜಾಗೃತಿ ಅಭಿಯಾನಕ್ಕೆ ಕೇಳಿದ ತಕ್ಷಣ ಹಿಂದೆ ಮುಂದೆ ನೋಡದೆ ಬಂದಿದ್ದ ಅಪ್ಪು

    ನವಾಬ್ ಅವರು ಅನೇಕ ಆರೋಪಗಳನ್ನು ಹೊರಿಸುತ್ತಿದ್ದು, ಇವರ ವಿರುದ್ಧ ಸಮೀರ್ ಅವರ ತಂದೆ ಧ್ಯಾನದೇವ್ ಕಚ್ರುಜಿ ವಾಂಖೆಡೆ 1.25 ಕೊಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಅದು ಅಲ್ಲದೇ ನವಾಬ್ ಅವರು ಸಮೀರ್ ಅವರ ಕುಟುಂಬವನ್ನು ವಂಚಕ ಕುಟುಂಬ ಎಂದು ಕರೆದಿದ್ದು, ಅವರ ಧಾರ್ಮಿಕ ನಂಬಿಕೆಯನ್ನು ಪ್ರಶ್ನಿಸಿದ್ದಾರೆ. ಅವರನ್ನು ಹಿಂದೂಗಳ ಕುಟುಂಬವಲ್ಲ ಎಂದು ಟೀಕಿಸಿದ್ದರು. ಅದು ಅಲ್ಲದೇ ಅವರ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು.

  • ಆರ್ಯನ್ ಖಾನ್ ಬಂಧನ ಕೇಸ್‍ಗೆ ತಿರುವು – ಸಮೀರ್ ಆಪ್ತ ಕಿರಣ್ ಗೋಸಾವಿ ಬಂಧನ

    ಆರ್ಯನ್ ಖಾನ್ ಬಂಧನ ಕೇಸ್‍ಗೆ ತಿರುವು – ಸಮೀರ್ ಆಪ್ತ ಕಿರಣ್ ಗೋಸಾವಿ ಬಂಧನ

    ಮುಂಬೈ: ಡ್ರಗ್ಸ್ ಪ್ರಕರಣ ಸಂಬಂಧ ಸ್ಟಾರ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಜೈಲಿನಲ್ಲಿದ್ದರೆ, ಇತ್ತ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದೆ. ಸಮೀರ್ ವಾಂಖೆಡೆ ಆಪ್ತ ಕಿರಣ್ ಗೋಸಾವಿಯನ್ನು ಎನ್‍ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

    ಹೌದು. ಡ್ರಗ್ಸ್ ಪ್ರಕರಣ ಸಂಬಂಧ ಕಿರಣ್ ಗೋಸಾವಿಯನ್ನು ಬಂಧಿಸಲಾಗಿದೆ ಎಂದು ಪುಣೆ ಪೊಲೀಸ್ ಆಯುಕ್ತ ಅಮಿತಾಬ್ ಗುಪ್ತಾ ಮಾಹಿತಿ ನೀಡಿದ್ದಾರೆ. ಮೂರು ದಿನಗಳ ಹಿಂದೆಯಷ್ಟೇ ಕಿರಣ್, ಉತ್ತರ ಪ್ರದೇಶದ ಲಕ್ನೋ ಪೊಲೀಸ್ ಠಾಣೆಗೆ ಶರಣಾಗುವುದಾಗಿ ಹೇಳಿಕೆ ನೀಡಿದ್ದ. ಈ ಬೆನ್ನಲ್ಲೇ ಕಾರ್ಯಾಚರಣೆಗಿಳಿದ ಎನ್‍ಸಿಬಿ ಅಧಿಕಾರಿಗಳು ಆತನನ್ನು ಇಂದು ಪುಣೆಯಲ್ಲಿ ಬಂಧಿಸಿದ್ದಾರೆ. ಇದನ್ನೂ ಓದಿ:  ಎನ್‍ಡಿಪಿಎಸ್ ಕಾಯ್ದೆಯನ್ನು ಎನ್‍ಸಿಬಿ ದುರುಪಯೋಗ ಪಡಿಸಿಕೊಂಡಿದೆ – ಆರ್ಯನ್ ಖಾನ್ ಜಾಮೀನು ಅರ್ಜಿ ಮುಂದೂಡಿಕೆ

    ಕಿರಣ್ ಮೇಲಿನ ಆರೋಪಗಳೇನು..?
    ಮಲೇಷಿಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ವ್ಯಕ್ತಿಯೊಬ್ಬನಿಗೆ ಆಮಿಷವೊಡ್ಡಿ ಹಣ ವಸೂಲಿ ಮಾಡಿದ ಆರೋಪ ಕೇಳಿಬಂದಿತ್ತು. ವ್ಯಕ್ತಿಗೆ ಉದ್ಯೋಗ ಕೊಡಿಸುವುದಾಗಲಿ, ಹಣ ವಾಪಸ್ ನೀಡುವುದಾಗಲಿ ಮಾಡಿರಲಿಲ್ಲ. ಹೀಗಾಗಿ ಕಿರಣ್ ವಿರುದ್ಧ 2018ರ ಮೇ 19ರಂದು ಪುಣೆಯ ಫರಸ್ಕನ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಇದಲ್ಲದೆ ಇನ್ನೂ ವಂಚನೆ ಆರೋಪಗಳು ಕೇಳಿಬಂದಿದ್ದವು. ಇತ್ತ ಕಿರಣ್ ಖಾಸಗಿ ಬಾಡಿಗಾರ್ಡ್ ಪ್ರಭಾಕರ್ ಸೈಲ್ ಮುಂಬೈ ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದಾನೆ. ಇದನ್ನೂ ಓದಿ: ತಂದೆ ಹಿಂದೂ, ತಾಯಿ ಮುಸ್ಲಿಂ, ನಾನು ಜಾತ್ಯಾತೀತ ಕುಟುಂಬಕ್ಕೆ ಸೇರಿದ್ದೇನೆ: ಸಮೀರ್ ವಾಂಖೆಡೆ ತೀಕ್ಷ್ಣ ಪ್ರತಿಕ್ರಿಯೆ

  • 26 ಪ್ರಕರಣಗಳಲ್ಲಿ ಸಮೀರ್ ತನಿಖೆ ನಡೆಸುವಾಗ ಸರಿಯಾದ ನಿಯಮಗಳನ್ನು ಅನುಸರಿಸಿಲ್ಲ: ನವಾಬ್ ಮಲಿಕ್

    26 ಪ್ರಕರಣಗಳಲ್ಲಿ ಸಮೀರ್ ತನಿಖೆ ನಡೆಸುವಾಗ ಸರಿಯಾದ ನಿಯಮಗಳನ್ನು ಅನುಸರಿಸಿಲ್ಲ: ನವಾಬ್ ಮಲಿಕ್

    ಮುಂಬೈ: 26 ಪ್ರಕರಣಗಳಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‍ಸಿಬಿ) ಮುಂಬೈ ವಲಯ ಅಧಿಕಾರಿ ಸಮೀರ್ ವಾಂಖೆಡೆ ತನಿಖೆ ನಡೆಸುವಾಗ ಸರಿಯಾದ ನಿಯಮಗಳನ್ನು ಅನುಸರಿಸಿಲ್ಲ ಎಂದು ಮಹಾರಾಷ್ಟ್ರದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ(ಎನ್‍ಸಿಪಿ) ಸಚಿವ ನವಾಬ್ ಮಲಿಕ್ ಆರೋಪಿಸಿದ್ದಾರೆ.

    ಬಾಲಿವುಡ್ ನಟ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಪ್ರಕರಣದ ತನಿಖೆ ನಡೆಸುತ್ತಿರುವ ಸಮೀರ್ ವಾಂಖೆಡೆ ವಿರುದ್ಧವೇ ಲಂಚದ ಆರೋಪ ಕೇಳಿ ಬಂದಿದೆ. ಎರಡು ವರ್ಷಗಳಿಂದ ಏಜೆನ್ಸಿಯೊಂದಿಗೆ ಕೆಲಸ ಮಾಡುತ್ತಿರುವ ಎನ್ ಉದ್ಯೋಗಿಯ ಪತ್ರವನ್ನು ಉಲ್ಲೇಖಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಲಿಕ್ ಅವರು, ಎನ್‍ಸಿಬಿ ಅಧಿಕಾರಿಯಿಂದ ಪತ್ರವನ್ನು ಸ್ವೀಕರಿಸಿದ್ದೇನೆ. ನಾನು ಈ ಪತ್ರವನ್ನು ಡೈರೆಕ್ಟರ್ ಜನರಲ್ ನಾರ್ಕೋಟಿಕ್ಸ್‍ಗೆ ಕಳುಹಿಸುತ್ತಿದ್ದೇನೆ. ಈ ಪತ್ರದ ಪ್ರಕಾರ, 26 ಪ್ರಕರಣಗಳಲ್ಲಿ ಸಮೀರ್ ವಾಂಖೆಡೆ ಅವರು ತನಿಖೆ ನಡೆಸುವಾಗ ಸರಿಯಾದ ನಿಯಮಗಳನ್ನು ಅನುಸರಿಸದಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಅದಕ್ಕೆ ಈ ಕುರಿತು ಸರಿಯಾದ ತನಿಖೆಯಾಗಬೇಕು ಎಂದು ನಾನು ಒತ್ತಾಯಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಂದು ಕರ್ನಾಟಕದಲ್ಲಿ 277 ಪಾಸಿಟಿವ್, 7 ಸಾವು 

    ನನ್ನ ಯುದ್ಧವು ಏಜೆನ್ಸಿ ವಿರುದ್ಧ ಅಲ್ಲ. ನಾನು ಅನ್ಯಾಯದ ವಿರುದ್ಧ ಹೋರಾಡುತ್ತಿದ್ದೇನೆ. ನಾನು ವಂಚನೆಯಿಂದ ಕೆಲಸ ಪಡೆದ ಒಬ್ಬ ಅಧಿಕಾರಿಯನ್ನು ಮಾತ್ರ ಬಹಿರಂಗಪಡಿಸುತ್ತಿದ್ದೇನೆ. ಸಮೀರ್ ಅವರು ಎನ್‍ಸಿಬಿ ಉದ್ಯೋಗ ಪಡೆಯಲು ನಕಲಿ ಜನನ ಪ್ರಮಾಣಪತ್ರವನ್ನು ಬಳಸಿದ್ದಾರೆ. ಅವರು ಅಕ್ರಮವಾಗಿ ಕೆಲವರ ಫೋನ್ ಟ್ಯಾಪಿಂಗ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಸಮೀರ್ ಅವರ ಮೇಲೆ ಆರೋಪಗಳನ್ನು ಸುಳ್ಳು ಮತ್ತು ದುರುದ್ದೇಶಪೂರಿತವಾಗಿ ಮಾಡುತ್ತಿಲ್ಲ. ಕೆಟ್ಟ ಕೆಲಸಗಳಿಗೆ ನಾನು ಎಂದೂ ಬೆಂಬಲ ನೀಡುವುದಿಲ್ಲ. ಇದು ಅವರ ಹಕ್ಕು, ಅವರೂ ತಮ್ಮ ಅಭಿಪ್ರಾಯವನ್ನು ಮಂಡಿಸಬಹುದು ಎಂದು ಹೇಳಿದ್ದಾರೆ.

    ಸುದ್ದಿಗೋಷ್ಠಿ ನಡೆಸಿದ ಸಮೀರ್ ವಾಂಖೆಡೆ ಪತ್ನಿ ಕ್ರಾಂತಿ ರೆಡ್ಕಾರ್, ಇಂತಹ ಪತ್ರಗಳಿಗೆ ಯಾವುದೇ ಆಧಾರಗಳಿಲ್ಲ. ನನ್ನ ಗಂಡ ಯಾವ ತಪ್ಪು ಮಾಡಿಲ್ಲ. ಇದನ್ನು ನಾನು ಸಹಿಸುವುದಿಲ್ಲ. ನಾವೇಕೆ ನ್ಯಾಯಾಲಯಕ್ಕೆ ಹೋಗಬೇಕು? ನಮ್ಮ ವಿರುದ್ಧ ಆರೋಪ ಮಾಡುವವರು ನ್ಯಾಯಾಲಯದ ಮೊರೆ ಹೋಗಬೇಕು. ನಾವು ಕೋಟ್ಯಾಧಿಪತಿಗಳಲ್ಲ. ಸರಳ ಜನ. ಸಮೀರ್ ಒಬ್ಬ ಪ್ರಾಮಾಣಿಕ ಅಧಿಕಾರಿ. ಅವರನ್ನು ಕೆಲಸದಿಂದ ತೆಗೆದುಹಾಕಬೇಕು ಎಂದು ಅನೇಕರು ಸೇರಿಕೊಂಡು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ರಾಗಿಣಿ ಕೇಸ್ ಉಲ್ಲೇಖ, ಆರ್ಯನ್‍ಗೆ ಜಾಮೀನು ನೀಡಿ – ಮುಕುಲ್ ರೊಹ್ಟಗಿ ವಾದ

    ಪತ್ರದ ಬಗ್ಗೆ ಮಾತನಾಡಿದ ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಮಹಾನಿರ್ದೇಶಕ ಮುತಾ ಅಶೋಕ್ ಜೈನ್ ಅವರು, ನಾನು ಪತ್ರವನ್ನು ನೋಡಿದ್ದೇನೆ. ನಾವು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

  • ತಂದೆ ಹಿಂದೂ, ತಾಯಿ ಮುಸ್ಲಿಂ, ನಾನು ಜಾತ್ಯಾತೀತ ಕುಟುಂಬಕ್ಕೆ ಸೇರಿದ್ದೇನೆ: ಸಮೀರ್ ವಾಂಖೆಡೆ ತೀಕ್ಷ್ಣ ಪ್ರತಿಕ್ರಿಯೆ

    ತಂದೆ ಹಿಂದೂ, ತಾಯಿ ಮುಸ್ಲಿಂ, ನಾನು ಜಾತ್ಯಾತೀತ ಕುಟುಂಬಕ್ಕೆ ಸೇರಿದ್ದೇನೆ: ಸಮೀರ್ ವಾಂಖೆಡೆ ತೀಕ್ಷ್ಣ ಪ್ರತಿಕ್ರಿಯೆ

    ಮುಂಬೈ: ನನ್ನ ತಂದೆ ಹಿಂದೂ, ತಾಯಿ ಮುಸ್ಲಿಂ. ನಾನು ಬಹು ಧರ್ಮೀಯ ಮತ್ತು ಜಾತ್ಯಾತೀತ ಕುಟುಂಬಕ್ಕೆ ಸೇರಿದವನು. ನನ್ನ ಪರಂಪರೆಯ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಮುಂಬೈ ಎನ್‍ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಕರವಾಗಿ ಉತ್ತರ ನೀಡಿದ್ದಾರೆ.

    ಟ್ವಿಟ್ಟರ್‌ನಲ್ಲಿ ಮಹಾರಾಷ್ಟ್ರದ ಸಚಿವ ಮತ್ತು ಎನ್‍ಸಿಪಿ ನಾಯಕ ನವಾಬ್ ಮಲಿಕ್ ಅವರು ಸಮೀರ್ ಅವರ ತಂದೆಯ ಧರ್ಮದ ಬಗ್ಗೆ ಪ್ರಸ್ತಾಪಿಸಿ ಅವರ ಜನನ ಪ್ರಮಾಣ ಪತ್ರ ಬಿಡುಗಡೆ ಮಾಡಿದ್ದಾರೆ. ಈ ಹಿನ್ನೆಲೆ ಪತ್ರದ ಮೂಲಕ ವಾಂಖೆಡೆ ತೀಕ್ಷ್ಣ ತೀರುಗೇಟು ನೀಡಿದ್ದಾರೆ. ಇದನ್ನೂ ಓದಿ: ಸಮೀರ್ ವಾಂಖೆಡೆ ವಿರುದ್ಧ ಲಂಚದ ಆರೋಪ – ತನಿಖೆಗೆ ಸೂಚನೆ

    ನನ್ನ ತಂದೆ ಜ್ಞಾನದೇವ್ ಕಚ್ರುಜಿ ವಾಂಖೆಡೆ ಅವರು 2007ರ ಜೂನ್ 30 ರಂದು ಪುಣೆಯ ರಾಜ್ಯ ಅಬಕಾರಿ ಇಲಾಖೆಯ ಹಿರಿಯ ಪೊಲೀಸ್ ಇನ್ಸ್‍ಪೆಕ್ಟರ್ ಆಗಿ ನಿವೃತ್ತರಾದರು. ನನ್ನ ತಂದೆ ಹಿಂದೂ ಮತ್ತು ನನ್ನ ತಾಯಿ ದಿವಂಗತ ಜಹೀದಾ ಮುಸ್ಲಿಂ. ನಾನು ನಿಜವಾದ ಭಾರತೀಯ ಸಂಪ್ರದಾಯದಲ್ಲಿ ನಂಬಿಕೆ ಇಟ್ಟವನು. ನಾನು ಬಹು ಧಾರ್ಮಿಕ ಮತ್ತು ಜಾತ್ಯಾತೀತ ಕುಟುಂಬಕ್ಕೆ ಸೇರಿದ್ದೇನೆ. ನನ್ನ ಪರಂಪರೆಯ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ವಾಂಖೆಡೆ ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಅವಶ್ಯಕತೆ ಬಿದ್ದರೆ ಮುಂದಿನ ದಿನಗಳಲ್ಲಿ ಪಠ್ಯ ಕಡಿತ: ಬಿ.ಸಿ.ನಾಗೇಶ್

    ಯುಪಿಎಸ್‍ಸಿ ದಾಖಲೆಗಳ ಪ್ರಕಾರ, ವಾಂಖೆಡೆ ತನ್ನ ಪರೀಕ್ಷೆಗೆ ಹಾಜರಾಗಿದ್ದಾಗ ಸಮೀರ್ ಜ್ಞಾಂದೇವ್ ವಾಂಖೆಡೆ ಎಂದು ನಮೂನೆಯನ್ನು ಭರ್ತಿ ಮಾಡಿದ್ದಾರೆ. ಸಚಿವ ನವಾಬ್ ಮಲಿಕ್ ಹಂಚಿಕೊಂಡ ಪ್ರಮಾಣ ಪತ್ರದ ಪ್ರಕಾರ ಸಮೀರ್ ದಾವೂದ್ ವಾಂಖೆಡೆ ಎಂದು ಉಲ್ಲೇಖಿಸಿದೆ.

    ಈ ಹಿನ್ನೆಲೆ ಸಮೀರ್, ಟ್ವಿಟ್ಟರ್‍ನಲ್ಲಿ ನನ್ನ ವೈಯಕ್ತಿಕ ದಾಖಲೆಗಳನ್ನು ಪ್ರಕಟಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈಯಕ್ತಿಕ ದಾಖಲೆ ಬಿಡುಗಡೆ ಮಾಡುವುದು ಮಾನಹಾನಿಕರ ಸ್ವರೂಪ ಮತ್ತು ನನ್ನ ಕುಟುಂಬದ ಗೌಪ್ಯತೆಯ ಮೇಲೆ ಅನಗತ್ಯದ ಆಕ್ರಮಣವಾಗಿದೆ. ಇದು ನನ್ನನ್ನು, ನನ್ನ ಕುಟುಂಬ, ನನ್ನ ತಂದೆ ಮತ್ತು ನನ್ನ ದಿವಂಗತ ತಾಯಿಯನ್ನು ನಿಂದಿಸುವ ಉದ್ದೇಶವನ್ನು ಹೊಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

     

  • ಸಮೀರ್ ವಾಂಖೆಡೆ ವಿರುದ್ಧ ಲಂಚದ ಆರೋಪ – ತನಿಖೆಗೆ ಸೂಚನೆ

    ಸಮೀರ್ ವಾಂಖೆಡೆ ವಿರುದ್ಧ ಲಂಚದ ಆರೋಪ – ತನಿಖೆಗೆ ಸೂಚನೆ

    ಮುಂಬೈ: ಮುಂಬೈನಲ್ಲಿ ಐಷಾರಾಮಿ ಹಡಗಿನಲ್ಲಿ ನಡೆದ ಡ್ರಗ್ ಪಾರ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಹಲವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ತನಿಖಾಧಿಕಾರಿ ಸಮೀರ್ ವಾಂಖೆಡೆ ವಿರುದ್ಧವೇ ಈಗ ತನಿಖೆಗೆ ಸೂಚಿಸಲಾಗಿದೆ.

    ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್ 25 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಹಿನ್ನಲೆಯಲ್ಲಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‍ಸಿಬಿ) ವಿಜಿಲೆನ್ಸ್ (ವಿಚಕ್ಷಣ ದಳ) ತನಿಖೆಗೆ ಆದೇಶಿಸಿದೆ. ಇದನ್ನೂ ಓದಿ: ಆರ್ಯನ್ ಖಾನ್ ಡ್ರಗ್ಸ್ ಕೇಸ್‍ಗೆ ಟ್ವಿಸ್ಟ್ – NCB ಮುಖ್ಯಸ್ಥರ ವಿರುದ್ಧ ಗಂಭೀರ ಆರೋಪ

    ಎನ್‍ಸಿಬಿ ಪ್ರಧಾನ ಕಛೇರಿಯಲ್ಲಿ ಈ ವಿಚಾರಣೆ ನಡೆಯಲಿದ್ದು ಉತ್ತರ ಪ್ರದೇಶದ ಎನ್‍ಸಿಬಿ ಉಪ ಮಹಾನಿರ್ದೇಶಕ (ಡಿಡಿಜಿ) ಜ್ಞಾನೇಶ್ವರ್ ಸಿಂಗ್ ಸಮೀರ್ ವಾಖೆಂಡೆ ವಿಚಾರಣೆ ನಡೆಸಲಿದ್ದಾರೆ. ಜ್ಞಾನೇಶ್ವರ್ ಸಿಂಗ್ ಮಾದಕದ್ರವ್ಯ ವಿರೋಧಿ ಏಜೆನ್ಸಿಯ ಮುಖ್ಯ ಜಾಗೃತ ಅಧಿಕಾರಿ (ಸಿವಿಒ) ಕೂಡ ಆಗಿದ್ದಾರೆ ಎಂದು ವರದಿಯಾಗಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜ್ಞಾನೇಶ್ವರ್ ಸಿಂಗ್, ನಮ್ಮದು ವೃತ್ತಿಪರ ಸಂಸ್ಥೆ, ನಮ್ಮ ಸಿಬ್ಬಂದಿ ವಿರುದ್ಧ ಯಾವುದೇ ಆರೋಪಗಳು ಕೇಳಿ ಬಂದರು ನಾವು ವಿಚಾರಣೆಗೆ ಮುಕ್ತರಾಗಿದ್ದೇವೆ. ವಿಚಾರಣೆ ಪಾರದರ್ಶಕ ಮತ್ತು ನ್ಯಾಯಸಮ್ಮತವಾಗಿರುತ್ತದೆ ಎಂದಿದ್ದಾರೆ. ಸಮೀರ್ ವಾಂಖೆಡೆ ಪ್ರಕರಣ ತನಿಖೆ ಮುಂದುವರಿಸಿವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಇದು ಅಕಾಲಿಕ ಪ್ರಶ್ನೆ ಎಂದಷ್ಟೇ ಹೇಳಿದ್ದಾರೆ. ಇದನ್ನೂ ಓದಿ: ಸಿಗದ ಜಾಮೀನು – ಜೈಲಿನಲ್ಲಿ ರಾಮನ ಮೊರೆ ಹೋದ ಆರ್ಯನ್ ಖಾನ್

    ಡ್ರಗ್ ಪಾರ್ಟಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್, ಆರ್ಯನ್ ಖಾನ್ ಬಿಡುಗಡೆಗೆ 25 ಕೋಟಿ ರೂ ಬಿಡುಗಡೆ ಡಿಮ್ಯಾಂಡ್ ಮಾಡಲಾಗಿದೆ. ಕನಿಷ್ಠ 18 ಕೋಟಿ ನೀಡಿದರೆ ಆರ್ಯನ್ ಖಾನ್ ಬಿಡುಗಡೆ ಮಾಡಲಾಗುವುದು, ಇದರಲ್ಲಿ 8 ಕೋಟಿ ಹಣ ತನಿಖಾಧಿಕಾರಿ ಸಮೀರ್ ವಾಂಖೆಡೆ ನೀಡಬೇಕಿದೆ ಎಂದು ಆರೋಪಿಸಿದ್ದರು. ಹಣಕ್ಕಾಗಿ ಸಮೀರ್ ವಾಂಖೆಡೆ ಕೆಪಿ ಗೋಸಾವಿ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿತ್ತು.

    ಇಂದು ಮುಂಬೈ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದ್ದ ಪ್ರಭಾಕರ್ ಸೈಲ್, ಜೀವ ಭಯವಿದ್ದು ರಕ್ಷಣೆ ನೀಡುವಂತೆ ದೂರು ನೀಡಿದ್ದರು. ಇದಾದ ಬೆನ್ನಲೆ ಸಮೀರ್ ವಾಂಖೆಡೆ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ಇದನ್ನೂ ಓದಿ: ಮೊದಲ ಬಾರಿಗೆ ಮಗನನ್ನು ಭೇಟಿಯಾದ ಶಾರೂಖ್

  • ಆರ್ಯನ್ ಖಾನ್ ಡ್ರಗ್ಸ್ ಕೇಸ್‍ಗೆ ಟ್ವಿಸ್ಟ್ – NCB ಮುಖ್ಯಸ್ಥರ ವಿರುದ್ಧ ಗಂಭೀರ ಆರೋಪ

    ಆರ್ಯನ್ ಖಾನ್ ಡ್ರಗ್ಸ್ ಕೇಸ್‍ಗೆ ಟ್ವಿಸ್ಟ್ – NCB ಮುಖ್ಯಸ್ಥರ ವಿರುದ್ಧ ಗಂಭೀರ ಆರೋಪ

    ಮುಂಬೈ: ಬಾಲಿವುಡ್ ನಟ ಶಾರೂಕ್ ಖಾನ್ ಮಗ ಶಾರೂಖ್ ಖಾನ್ ಡ್ರಗ್ಸ್ ಕೇಸ್‍ಗೆ ಟ್ವಿಸ್ಟ್ ಸಿಕ್ಕಿದೆ. ಎನ್‍ಸಿಬಿ ಮುಖ್ಯಸ್ಥ ಸಮೀರ್ ವಾಂಖೆಡೆ ವಿರುದ್ಧ ಬಿಜೆಪಿಯ ಕೆಪಿ ಗೋಸಾವಿ ಆಪ್ತ ಪ್ರಭಾಕರ್ ಸೈಲ್ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

    ಆರ್ಯನ್ ಬಿಡುಗಡೆ ಮಾಡೋಕೆ 25 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ. 18 ಕೋಟಿಗೆ ಡೀಲ್ ಆಗುವಂತೆ ಕಾಣುತ್ತಿದೆ. ಇದರಲ್ಲಿ ಸಮೀರ್ ವಾಂಖೆಡೆಗೆ 8 ಕೋಟಿ ಹೋಗ್ಬೇಕು ಅಂತಾ ಎನ್‍ಸಿಬಿ ಕಚೇರಿಯಲ್ಲಿಯೇ ಕೆಪಿ ಗೋಸಾವಿ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಕ್ರೂಸ್ ರೇಡ್‍ಗೆ ಸಂಬಂಧಿಸಿದಂತೆ ಖಾಲಿ ಪುಟುಗಳ ಪಂಚನಾಮೆ ಪತ್ರಕ್ಕೆ ಸಮೀರ್ ವಾಂಖೆಡೆ ತಮ್ಮಿಂದ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಪ್ರಭಾಕರ್ ಸೈಲ್ ಕೂಡ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಶಾರೂಖ್ ಖಾನ್ ಬಿಜೆಪಿ ಸೇರಿದ್ರೆ ಡ್ರಗ್ಸ್ ಸಕ್ಕರೆ ಪುಡಿಯಾಗುತ್ತೆ: ಛಗನ್ ಭುಜ್‍ಬಲ್

    ಇದಕ್ಕೆ ಸಂಬಂಧಿಸಿ ವೀಡಿಯೋ ರಿಲೀಸ್ ಮಾಡಿರುವ ಸಂಜಯ್ ರೌತ್, ಇದೆಲ್ಲ ಸುಳ್ಳು ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡು ಸೈಲ್‍ನ್ನು ಬಂಧಿಸಬೇಕು ಎಂದು ಸಮೀರ್ ಒತ್ತಾಯಿಸಿದ್ದಾರೆ. ಜೊತೆಗೆ ಈ ಆರೋಪಗಳೆಲ್ಲ ಸುಳ್ಳು. ಶೀಘ್ರ ಸ್ಪಷ್ಟನೆ ಕೊಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಎನ್‍ಸಿಬಿ ಕೂಡ ಸಮೀರ್ ಬೆಂಬಲಕ್ಕೆ ಧಾವಿಸಿದೆ. ಸದ್ಯ ಕೆಪಿ ಗೋಸಾವಿ ನಾಪತ್ತೆಯಾಗಿದ್ದಾರೆ. ತಮ್ಮ ಜೀವಕ್ಕೆ ಸಮೀರ್‍ರಿಂದ ಅಪಾಯವಿದೆ ಎಂಬ ಆತಂಕವನ್ನು ಸೈಲ್ ಹೊರಹಾಕಿದ್ದಾರೆ. ಇದನ್ನೂ ಓದಿ: ಶಾರೂಖ್ ಖಾನ್ ಪುತ್ರನಾಗಿದ್ದರಿಂದ ಆರ್ಯನ್ ಖಾನ್ ಬಲಿಪಶು: ದಿಗ್ವಿಜಯ್ ಸಿಂಗ್