Tag: ಸಮೀರಾ ರೆಡ್ಡಿ

  • ಟ್ರೋಲ್ ಮಾಡೋರಿಗೆ ಬೋಲ್ಡ್ ಫೋಟೋ ಮೂಲಕ ಸಮೀರಾ ಖಡಕ್ ಉತ್ತರ

    ಟ್ರೋಲ್ ಮಾಡೋರಿಗೆ ಬೋಲ್ಡ್ ಫೋಟೋ ಮೂಲಕ ಸಮೀರಾ ಖಡಕ್ ಉತ್ತರ

    ಮುಂಬೈ: ಬಹುಭಾಷಾ ನಟಿ ಸಮೀರಾ ರೆಡ್ಡಿ ಈಗ 8 ತಿಂಗಳ ಗರ್ಭಿಣಿಯಾಗಿದ್ದು, ತಮ್ಮ ಬೇಬಿ ಬಂಪ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದನ್ನು ನೋಡಿ ಜನರು ಟ್ರೋಲ್ ಮಾಡುತ್ತಿದ್ದು, ಈಗ ಸಮೀರಾ ಬೋಲ್ಡ್ ಫೋಟೋ ಹಂಚಿಕೊಳ್ಳುವ ಮೂಲಕ ಟ್ರೋಲ್ ಮಾಡೋರಿಗೆ ಖಡಕ್ ಉತ್ತರ ನೀಡಿದ್ದಾರೆ.

    ಸಮೀರಾ ತಮ್ಮ ಪತಿ ಅಕ್ಷಯ್ ವಾರ್ದೆ ಹಾಗೂ ಮಗ ಹಂಸ್ ಜೊತೆ ಗೋವಾದಲ್ಲಿ ರಜೆಯನ್ನು ಕಳೆಯುತ್ತಿದ್ದಾರೆ. ಸಮೀರಾ ತಮ್ಮ ಮಗನ ಜೊತೆ ಸಮುದ್ರದಲ್ಲಿ ಕಾಲ ಕಳೆಯುತ್ತಿರುವ ಫೋಟೋ ವೈರಲ್ ಆಗಿದೆ. ಈ ಫೋಟೋ ನೋಡಿ ಜನರು ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

    ಟ್ರೋಲ್‍ಗಳಿಗೆ ಸಮೀರಾ ಬೋಲ್ಡ್ ಫೋಟೋ ಮೂಲಕ ಖಡಕ್ ಆಗಿ ಉತ್ತರಿಸಿದ್ದಾರೆ. ಸಮೀರಾ ಬಿಕಿನಿಯಲ್ಲಿ ಫೋಟೋ ಹಾಕಿ ಅದಕ್ಕೆ, ಯಾರು ಆಳವಿಲ್ಲದ ತುದಿಯಲ್ಲಿ ಈಜುತ್ತಾರೆಯೋ ಅವರು ವ್ಯಕ್ತಿಯ ಆತ್ಮದ ಆಳವನ್ನು ತಿಳಿದಿರುವುದಿಲ್ಲ. ನಾನು ನನ್ನ ಬೇಬಿ ಬಂಪ್ ಎಂಜಾಯ್ ಮಾಡುತ್ತಿರುವುದರಿಂದ ಅನಾನುಕೂಲ ಆದವರಿಗೆ ಇದು ನನ್ನ ಉತ್ತರ ಎಂದು ಬರೆದು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

    ಈ ಹಿಂದೆ ಸಮೀರಾ ಗರ್ಭಿಣಿ ಆದ ಕಾರಣ ಅವರ ತೂಕ ಹೆಚ್ಚಾಗಿದೆ ಎಂದು ಟ್ರೋಲ್ ಮಾಡುತ್ತಿದ್ದರು. ಆಗ ಸಮೀರಾ ನೀವು ಕೂಡ ನಿಮ್ಮ ತಾಯಿಯ ಗರ್ಭದಿಂದ ಜನಿಸಿದ್ದೀರಾ. ಆಗ ನಿಮ್ಮ ತಾಯಿಯ ದೇಹ ಪರ್ಫೆಕ್ಟ್ ಆಗಿತ್ತಾ? ನೀವು ಜನ್ಮ ಪಡೆದ ನಂತರ ನಿಮ್ಮ ತಾಯಿಯ ಬಳಿ ಈ ರೀತಿ ಪ್ರಶ್ನೆ ಕೇಳಿದ್ದೀರಾ? ಈಗಲೂ ನಿಮ್ಮ ತಾಯಿ ಹಾಟ್ ಆಗಿದ್ದಾರಾ ಎಂದು ಪ್ರಶ್ನಿಸಿದ್ದರು. ಅಲ್ಲದೆ ಇನ್ನೊಬ್ಬರ ದೇಹದ ಬಗ್ಗೆ ಮಾತನಾಡುವುದು ಸರಿಯಲ್ಲ. ಪ್ರಗ್ನೆನ್ಸಿ ಎನ್ನುವುದು ನೈಸರ್ಗಿಕ ಪ್ರಕ್ರಿಯೆ. ಯಾರೂ ಕೂಡ ಕರೀನಾ ಕಪೂರ್ ರಂತೆ ಮಗುವಿಗೆ ಜನ್ಮ ನೀಡಿ ಹಾಟ್ ಆಗಿ ಕಾಣಿಸಲು ಸಾಧ್ಯವಿಲ್ಲ ಎಂದು ಹೇಳಿ ಟ್ರೋಲರ್ಸ್‍ಗೆ ಚಳಿ ಬಿಡಿಸಿದ್ದರು.

    ಸಮೀರಾ ರೆಡ್ಡಿ 2014ರಲ್ಲಿ ಉದ್ಯಮಿ ಅಕ್ಷಯ್ ವಾರ್ದೆ ಅವರನ್ನು ಮದುವೆಯಾಗಿದ್ದರು. ಸಮೀರಾ ರೆಡ್ಡಿಗೆ ಈಗಾಗಲೇ ಒಂದು ಗಂಡು ಮಗು ಇದ್ದು, ಈಗ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

  • ವರದನಾಯಕಿಯ ಬೇಬಿ ಬಂಪ್ ಫೋಟೋ ವೈರಲ್

    ವರದನಾಯಕಿಯ ಬೇಬಿ ಬಂಪ್ ಫೋಟೋ ವೈರಲ್

    ಬೆಂಗಳೂರು: ವರದನಾಯಕ ಸಿನಿಮಾದ ನಾಯಕಿ ಸಮೀರಾ ರೆಡ್ಡಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಶುಕ್ರವಾರ ತಮ್ಮ ಬೇಬಿ ಬಂಪ್ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಶುಕ್ರವಾರ ಮೂರು ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡಿರುವ ಸಮೀರಾ, ಮಗು ಕಿಕ್ ಮಾಡುತ್ತಿದೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಕಂದನ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ. ಇದೂವರೆಗೂ ಫೋಟೋಗೆ 13 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದ್ದು, ಆರೋಗ್ಯವನ್ನು ಕಾಪಾಡಿಕೊಳ್ಳಿ, ಸುಂದರವಾದ ಫೋಟೋ, ಗಂಡು ಮಗು ಆಗಲಿದೆ ಎಂದು ಅಭಿಮಾನಿಗಳು ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

    ಈ ಮೊದಲು ಬೇಬಿ ಬಂಪ್ ಫೋಟೋ ಅಪ್ಲೋಡ್ ಮಾಡಿಕೊಂಡಾಗ ಕೆಲವರು ಸಮೀರಾರನ್ನು ಟ್ರೋಲ್ ಮಾಡಿದ್ದರು. ಟ್ರೋಲ್ ಗೆ ಪ್ರತಿಕ್ರಿಯಿಸಿದ್ದ ಸಮೀರಾ ರೆಡ್ಡಿ, ನೀವು ಕೂಡ ನಿಮ್ಮ ತಾಯಿಯ ಗರ್ಭದಿಂದ ಜನಿಸಿದ್ದೀರಾ. ಆಗ ನಿಮ್ಮ ತಾಯಿಯ ದೇಹ ಪರ್ಫೆಕ್ಟ್ ಆಗಿ ಇತ್ತಾ?. ನೀವು ಜನ್ಮ ಪಡೆದ ನಂತರ ನಿಮ್ಮ ತಾಯಿಯ ಬಳಿ ಈ ರೀತಿ ಪ್ರಶ್ನೆ ಕೇಳಿದ್ದೀರಾ? ಈಗಲೂ ನಿಮ್ಮ ತಾಯಿ ಹಾಟ್ ಆಗಿದ್ದಾರಾ ಎಂದು ಪ್ರಶ್ನಿಸಿ ಖಡಕ್ ತಿರುಗೇಟು ನೀಡಿದ್ದರು.

    https://www.instagram.com/p/Bv3a_ljnj7o/

  • ನೀನು ಹುಟ್ಟುವಾಗ ನಿನ್ನ ತಾಯಿ ಹಾಟ್ ಆಗಿದ್ಳಾ- ಟ್ರೋಲರ್ಸ್‌ಗೆ ಚಳಿ ಬಿಡಿಸಿದ ವರದನಾಯಕ ಬೆಡಗಿ

    ನೀನು ಹುಟ್ಟುವಾಗ ನಿನ್ನ ತಾಯಿ ಹಾಟ್ ಆಗಿದ್ಳಾ- ಟ್ರೋಲರ್ಸ್‌ಗೆ ಚಳಿ ಬಿಡಿಸಿದ ವರದನಾಯಕ ಬೆಡಗಿ

    ಮುಂಬೈ: ಬಹುಭಾಷಾ ನಟಿ ಸಮೀರಾ ರೆಡ್ಡಿ ಈಗ ಗರ್ಭಿಣಿ ಆಗಿದ್ದು, ಟ್ರೋಲ್ ಮಾಡುವವರಿಗೆ ಚಳಿ ಬಿಡಿಸಿದ್ದಾರೆ.

    ಸಮೀರಾ ರೆಡ್ಡಿ 2014ರಲ್ಲಿ ಉದ್ಯಮಿ ಅಕ್ಷಯ್ ವಾರ್ದೆ ಅವರನ್ನು ಮದುವೆಯಾಗಿದ್ದರು. ಸಮೀರಾ ರೆಡ್ಡಿಗೆ ಈಗಾಗಲೇ ಒಂದು ಗಂಡು ಮಗು ಇದ್ದು, ಈಗ ಅವರು ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ. ಸಮೀರಾ ಗರ್ಭಿಣಿ ಆದ ಕಾರಣ ಅವರ ತೂಕ ಹೆಚ್ಚಾಗಿದೆ. ಅದಕ್ಕಾಗಿ ಜನರು ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

    ಟ್ರೋಲ್‍ಗಳಿಗೆ ಪ್ರತಿಕ್ರಿಯಿಸಿದ ಸಮೀರಾ, “ನೀವು ಕೂಡ ನಿಮ್ಮ ತಾಯಿಯ ಗರ್ಭದಿಂದ ಜನಿಸಿದ್ದೀರಾ. ಆಗ ನಿಮ್ಮ ತಾಯಿಯ ದೇಹ ಪರ್ಫೆಕ್ಟ್ ಆಗಿ ಇತ್ತಾ?. ನೀವು ಜನ್ಮ ಪಡೆದ ನಂತರ ನಿಮ್ಮ ತಾಯಿಯ ಬಳಿ ಈ ರೀತಿ ಪ್ರಶ್ನೆ ಕೇಳಿದ್ದೀರಾ? ಈಗಲೂ ನಿಮ್ಮ ತಾಯಿ ಹಾಟ್ ಆಗಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

    ಅಲ್ಲದೆ ಇನ್ನೊಬ್ಬರ ದೇಹದ ಬಗ್ಗೆ ಮಾತನಾಡುವುದು ಸರಿಯಲ್ಲ. ಪ್ರಗ್ನೆನ್ಸಿ ಎನ್ನುವುದು ನೈಸರ್ಗಿಕ ಪ್ರಕ್ರಿಯೆ. ಯಾರೂ ಕೂಡ ಕರೀನಾ ಕಪೂರ್ ರಂತೆ ಮಗುವಿಗೆ ಜನ್ಮ ನೀಡಿ ಹಾಟ್ ಆಗಿ ಕಾಣಿಸಲು ಸಾಧ್ಯವಿಲ್ಲ ಎಂದು ಹೇಳಿ ಟ್ರೋಲರ್ಸ್‌ಗೆ ಚಳಿ ಬಿಡಿಸಿದ್ದಾರೆ.

    ಸಮೀರಾ ರೆಡ್ಡಿ ಬಹುಭಾಷಾ ನಟಿಯಾಗಿದ್ದು, ತೆಲುಗಿನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರ ಜೊತೆ ನಟಿಸಿದ್ದಾರೆ. ಅಲ್ಲದೇ ಕನ್ನಡದಲ್ಲೂ ಕಿಚ್ಚ ಸುದೀಪ್ ಅವರ ಜೊತೆ ‘ವರದನಾಯಕ’ ಚಿತ್ರದಲ್ಲಿ ನಟಿಸಿದ್ದಾರೆ. ಸಮೀರಾ 2014ರಲ್ಲಿ ಮದುವೆ ಆದ ಬಳಿಕ ಚಿತ್ರರಂಗದಿಂದ ದೂರ ಇದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv