Tag: ಸಮಾಜಸೇವೆ

  • RSS ಭಾರತವನ್ನ ಮಾದರಿ ಸಮಾಜವಾಗಿ ರೂಪಿಸಲು ಶ್ರಮಿಸುತ್ತಿದೆ: ಮೋಹನ್ ಭಾಗವತ್

    RSS ಭಾರತವನ್ನ ಮಾದರಿ ಸಮಾಜವಾಗಿ ರೂಪಿಸಲು ಶ್ರಮಿಸುತ್ತಿದೆ: ಮೋಹನ್ ಭಾಗವತ್

    ನವದೆಹಲಿ: ಸಮಾಜವನ್ನೂ ಜಾಗೃತಗೊಳಿಸಲು ಹಾಗೂ ಒಗ್ಗೂಡಿಸಲು ರಾಷ್ಟ್ರೀಯ ಸ್ವಯಂಸೇವಾ ಸಂಘ (RSS) ಶ್ರಮಿಸುತ್ತಿದ್ದು, ಇದರಿಂದ ಇಡೀ ವಿಶ್ವಕ್ಕೆ ಭಾರತ ಮಾದರಿ ಸಮಾಜವಾಗಿ ನಿಲ್ಲಲು ಸಾಧ್ಯವಾಗುತ್ತದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

    ಸಾಂದರ್ಭಿಕ ಚಿತ್ರ

    ಆರ್‌ಎಸ್‌ಎಸ್‌ನ ದೆಹಲಿ ಘಟಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರು ಸಮಾಜ ಸೇವೆ ಮಾಡಲು ಒಂದು ಸಮುದಾಯವಾಗಿ ಬರಬೇಕೆ ಹೊರತು ಒಬ್ಬ ವ್ಯಕ್ತಿಯಾಗಿ ಅಲ್ಲ. ಹಾಗಾಗಿಯೇ ಸಂಘವು ಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ನದಿ, ಕೆರೆಗಳಲ್ಲಿ ಸ್ನಾನ ಮಾಡೋ ಮುನ್ನ ಹುಷಾರ್ – ವಿದೇಶದಲ್ಲಿ ಪತ್ತೆಯಾಗಿದೆ ಮೆದುಳು ತಿನ್ನುವ ಡೆಡ್ಲಿ ವೈರಸ್

    ನಮ್ಮ ಸಮಾಜದ ವಿವಿಧ ವರ್ಗಗಳ ಅನೇಕ ವ್ಯಕ್ತಿಗಳು ದೇಶದ ಸ್ವಾತಂತ್ರ‍್ಯಕ್ಕಾಗಿ ತ್ಯಾಗ ಬಲಿದಾನದ ಜತೆಗೆ ಕೊಡುಗೆ ನೀಡಿದ್ದಾರೆ. ಆದರೆ ನಾವು ಒಂದು ಸಮಾಜವಾಗಿ ಒಗ್ಗೂಡಿ ಮುಂಚೂಣಿಗೆ ಬರಲು ಸಮಯ ಹಿಡಿಯಿತು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸಮಾಜಮುಖಿಯಾಗಿ ಚಿಂತನೆ ನಡೆಸುವಂಥದ್ದು ಭಾರತೀಯರ ಮೂಲ ಸ್ವಭಾವ. ಇದು ಅವರ ಡಿಎನ್‌ಎಯಲ್ಲೇ ಬಂದಿದೆ. ಇಂಥ ಗುಣಗಳನ್ನು ನಾವು ಪ್ರೋತ್ಸಾಹಿಸಬೇಕು. ಅಂತೆಯೇ ಆರ್‌ಎಸ್‌ಎಸ್‌ನ ಕಾರ್ಯಕರ್ತರು ತಮ್ಮ ವೈಯಕ್ತಿಕ ಹಿತಾಸಕ್ತಿಗಳತ್ತ ಗಮನ ಕೊಡದೇ ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದೂ ಸಲಹೆ ನೀಡಿದರು. ಇದನ್ನೂ ಓದಿ: Paytm ಮುಖ್ಯಸ್ಥರಾಗಿ ವಿಜಯ್ ಶೇಖರ್ ಮರುನೇಮಕ

    ಯಾವುದೇ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡುವಾಗ ಕಾರ್ಯಕರ್ತರು, ನಾನು ಮತ್ತು ನನ್ನದು ಎಂಬುದಕ್ಕಿಂತ ನಮಗೆ, ನಮ್ಮದು ಎನ್ನುವುದಕ್ಕೆ ಆದ್ಯತೆ ನೀಡಬೇಕು. ಇದು ಸಮಾಜವು ವಿಕಾಸಗೊಳ್ಳಲು ಸಹಾಯ ಮಾಡುತ್ತದೆ ಎಂದೂ ಭಾಗವತ್ ತಿಳಿವಳಿಕೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉಕ್ರೇನ್‍ನಿಂದ ಮರಳಿ ಬಂದ ವಿದ್ಯಾರ್ಥಿಯಿಂದ ಸಮಾಜಸೇವೆ

    ಉಕ್ರೇನ್‍ನಿಂದ ಮರಳಿ ಬಂದ ವಿದ್ಯಾರ್ಥಿಯಿಂದ ಸಮಾಜಸೇವೆ

    ರಾಯಚೂರು: ಉಕ್ರೇನ್‍ನಲ್ಲಿ ನಾನಾ ಕಷ್ಟ ಎದುರಿಸಿ ದೇಶಕ್ಕೆ ಮರಳಿ ಬಂದ ವಿದ್ಯಾರ್ಥಿ ಈಗ ಸಮಾಜ ಸೇವೆಗೆ ಮುಂದಾಗಿದ್ದಾನೆ.

    ಬಿಸಿಲನಾಡು ರಾಯಚೂರಿನ ಮೆಡಿಕಲ್ ವಿದ್ಯಾರ್ಥಿ ಮೊಹಮ್ಮದ್ ಅಸರ್ ಹುಸೇನ್, ಉಕ್ರೇನ್ ರಷ್ಯಾ ಯುದ್ದ ಹಿನ್ನೆಲೆ ಮೈನಸ್ 10 ಡಿಗ್ರಿಯಲ್ಲಿ ಗಂಟೆಗಟ್ಟಲೆ ಕಾದು ಉಕ್ರೇನ್ ಗಡಿದಾಟಿ ಭಾರತಕ್ಕೆ ಬಂದಿದ್ದಾನೆ. ರಾಯಚೂರಿಗೆ ಬಂದ ವಿದ್ಯಾರ್ಥಿ ಈಗ ಸಮಾಜಸೇವೆ ಮಡಲು ಮುಂದಾಗಿದ್ದಾನೆ.

    ಹಾವುಗಳ ರಕ್ಷಣೆ ಹಾಗೂ ಸಾರ್ವಜನಿಕರಲ್ಲಿ ಹಾವಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾನೆ. ತಂದೆ ಉರಗತಜ್ಞ ಅಫ್ಸರ್ ಹುಸೇನ್ ಕಳೆದ 32 ವರ್ಷಗಳಿಂದ ಹಾವುಗಳ ರಕ್ಷಣೆಯಲ್ಲಿ ತೊಡಗಿದ್ದಾರೆ. ತಂದೆಯಿಂದ ವಿವಿಧ ಬಗೆಯ ಹಾವುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿರುವ ಅಸರ್ ಹುಸೇನ್ ಈಗ ತಾನೂ ಸಹ ಹಾವುಗಳ ರಕ್ಷಣೆ ಕೆಲಸ ಮಾಡುತ್ತಿದ್ದಾನೆ. ಯಾರೇ ಫೋನ್ ಕರೆ ಮಾಡಿದರು ಅವರ ಮನೆ, ಕಚೇರಿಗೆ ತೆರಳಿ ಹಾವುಗಳ ಹಿಡಿದು ಕಾಡಿಗೆ ಬಿಡುವ ಕೆಲಸಕ್ಕೆ ಮುಂದಾಗಿದ್ದಾನೆ. ಇದನ್ನೂ ಓದಿ: 3ನೇ ತರಗತಿ ಬಾಲಕಿಯ ಬಟ್ಟೆ ಬಿಚ್ಚಿ ಅತ್ಯಾಚಾರಗೈದ ಪ್ರಿನ್ಸಿಪಾಲ್!

    ಉಕ್ರೇನ್‍ನ ಇವ್ಯಾನೋ ಫ್ರಾನ್ಸಿವಿಸ್ಕ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಮೊದಲ ವರ್ಷದ ಎಂಬಿಬಿಎಸ್ ಓದುತ್ತಿದ್ದ ಅಸರ್ ಹುಸೇನ್ ದೇಶಕ್ಕೆ ಮರಳಿರುವುದರಿಂದ ಮುಂದಿನ ಓದಿನ ಬಗ್ಗೆ ಗೊಂದಲದಲ್ಲಿದ್ದಾನೆ. ತಾನು ಸುರಕ್ಷಿತವಾಗಿ ಬಂದ ಹಾಗೇ ಉಳಿದ ವಿದ್ಯಾರ್ಥಿಗಳನ್ನು ಕರೆತರಬೇಕು ಅಂತ ಸರ್ಕಾರಕ್ಕೆ ಮನವಿ ಮಾಡಿದ್ದಾನೆ.

    ಅಸರ್ ಇದ್ದ ಸ್ಥಳದಿಂದ ಕೇವಲ 10 ಕಿ.ಮೀ ದೂರದಲ್ಲಿ ರಷ್ಯಾ ದಾಳಿ ಜೋರಾಗಿತ್ತು. ಸ್ಫೋಟದ ಶಬ್ಧಕ್ಕೆ ಹೆದರಿ ಬಂಕರ್‍ಗೆ ಓಡುತ್ತಿದ್ದದ್ದನ್ನ ನೆನೆದು ಇನ್ನೂ ಉಳಿದವರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾನೆ. ಉಕ್ರೇನ್ ಗಡಿಯಲ್ಲಿ ಕುಡಿಯಲು ಊಟ, ನೀರು ಸಿಗದೆ ಕಷ್ಟ ಅನುಭವಿಸಿದ್ದು. ಗಡಿಗೆ ತಲುಪಲು 18 ಕಿ.ಮೀ ನಡೆದುಕೊಂಡೆ ಹೋದ ಅನುಭವ ಹಂಚಿಕೊಂಡಿದ್ದಾನೆ. ಇನ್ನೂ ಮಗ ಮನೆಗೆ ಸುರಕ್ಷಿತವಾಗಿ ಬಂದಿರುವುದಕ್ಕೆ ಪೋಷಕರು ಸಂತಸ ವ್ಯಕ್ತಪಡಿಸಿದ್ದು. ತಂದೆ ಉರಗತಜ್ಞ ತಮ್ಮ ಜೊತೆಯೆ ಮಗನನ್ನು ಹಾವುಗಳ ರಕ್ಷಣಾ ಕಾರ್ಯಕ್ಕೆ ಕರೆದೊಯ್ಯುತ್ತಿದ್ದಾರೆ. ಇದನ್ನೂ ಓದಿ: ಡಬಲ್ ಎಂಜಿನ್ ಸರ್ಕಾರ ಅಲ್ಲ, ಡಬ್ಬಾ ಸರ್ಕಾರ ಇದು: ಸಿದ್ದು ಕಿಡಿ

    ಒಟ್ಟಿನಲ್ಲಿ, ಯುದ್ದ ಭೂಮಿಯಿಂದ ಜೀವ ಉಳಿಸಿಕೊಂಡು ಬಂದವನು ಈಗ ಹಾವುಗಳ ರಕ್ಷಣೆ ಹಾಗೂ ಹಾವುಗಳಿಂದ ಜನರ ರಕ್ಷಣೆಗೆ ಮುಂದಾಗಿದ್ದಾನೆ.

  • ಮನೆ ಕೆಲ್ಸದ ಜೊತೆ ಬಿಡುವಿನ ವೇಳೆ ಮಾಸ್ಕ್ ತಯಾರಿಸಿ ಬಡವರಿಗೆ ವಿತರಣೆ

    ಮನೆ ಕೆಲ್ಸದ ಜೊತೆ ಬಿಡುವಿನ ವೇಳೆ ಮಾಸ್ಕ್ ತಯಾರಿಸಿ ಬಡವರಿಗೆ ವಿತರಣೆ

    ಮಡಿಕೇರಿ: ಕೊರೊನಾ ಬಗ್ಗೆ ಸರ್ಕಾರ ಎಷ್ಟೇ ಅರಿವು ಮೂಡಿಸುತ್ತಿದ್ದರೂ ಜನತೆ ಎಚ್ಚೆತ್ತುಕೊಳ್ಳತ್ತಿಲ್ಲ. ಹೊರಗೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಬಳಸುವಂತೆ ಮನವಿ ಮಾಡುತ್ತಿದ್ದರೂ ಅದರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

    ಇದೇ ಸಂದರ್ಭವನ್ನು ಬಂಡವಾಳ ಮಾಡಿಕೊಂಡ ಹಲವರು ತುರ್ತು ಅಗತ್ಯವಿರುವ ಮಾಸ್ಕ್ ಗಳನ್ನು ದುಬಾರಿ ಬೆಲೆಗೆ ಮಾರಿ ಜನರ ಜೇಬಿಗೆ ಕತ್ತರಿ ಹಾಕಲು ಹೊರಟಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಮಡಿಕೇರಿ ನಗರದ ಮುಳಿಯ ಲೇಔಟ್‍ನ ನಿವಾಸಿ ಗೌರಿಯವರು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ತಾವೇ ಮಾಸ್ಕ್ ಹೊಲೆದು ಬಡವರಿಗೆ ಹಂಚುತ್ತಿದ್ದಾರೆ.

    ಜೀವನ ನಡೆಸಲು ನಾಲ್ಕೈದು ಮನೆಗಳಲ್ಲಿ ಕೆಲಸ ಮಾಡಿಕೊಂಡು ಬಿಡುವಿನ ಸಮಯದಲ್ಲಿ ತಾವು ಇರುವ ಬಾಡಿಗೆ ಮನೆಯಲ್ಲೆ ಮಷಿನ್ ಮೂಲಕ ಗೌರಿ ಅವರೇ ಮಾಸ್ಕ್ ಹೊಲೆದು ಬಡವರಿಗೆ ಹಂಚುತ್ತಿದ್ದಾರೆ. ಜೊತೆಗೆ ಮನೆ ಕೆಲಸಕ್ಕೆ ಹೋಗುವ ಬಿಡುವಿನ ವೇಳೆಯಲ್ಲಿ ಮನೆ, ಮನೆಗಳಿಗೆ ತೆರಳಿ ಮಾಸ್ಕ್ ಹಂಚಿ ಬರುತ್ತಾರೆ. ಈ ವೇಳೆ ಜನರಿಗೆ ಕೊರೊನಾದಿಂದ ಪಾರಾಗುವಂತೆ ಮನವರಿಕೆ ಮಾಡಿ ಸಮಾಜ ಸೇವೆ ಕೂಡ ಮಾಡುತ್ತಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಗೌರಿಯವರು, ಔಷಧಿ ಅಂಗಡಿಯಲ್ಲಿ ಮಾಸ್ಕ್ ಹೆಚ್ಚಾಗಿ ಸಿಗುತ್ತಿಲ್ಲ ಬಡವರು ಹೋಗಿ ಕೇಳಿದರೆ ಸುಮಾರು 100, 50, 30 ಹೀಗೆಲ್ಲಾ ಹಣವನ್ನು ತೆಗೆದುಕೊಳ್ಳುತ್ತಾರೆ. ಮೊದಲೇ ಜನ ಸಮಾನ್ಯರು ಹಣವಿಲ್ಲದೆ ತುಂಬ ಕಷ್ಟದಲ್ಲಿ ಇದ್ದಾರೆ. ಹಾಗಾಗಿ ಈ ರೀತಿಯಲ್ಲಿ ಸೇವೆ ಮಾಡುತ್ತಿರುವುದು ಒಂದು ರೀತಿಯಲ್ಲಿ ಖುಷಿ ಹಾಗೂ ತೃಪ್ತಿ ತಂದಿದೆ ಎಂದು ತಾವು ಮಾಡುವ ಕೆಲಸದ ಬಗ್ಗೆ ಗೌರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಭಿಕ್ಷೆ ಬೇಡಿ ವೈದ್ಯರಾದ್ರು, ದುಡಿದ ಹಣವನ್ನ ವಿದ್ಯಾರ್ಥಿಗಳಿಗೆ ದಾನ ಮಾಡಿದ್ರು ಪಾವಗಡದ ಪ್ರಭಾಕರ ರೆಡ್ಡಿ

    ಭಿಕ್ಷೆ ಬೇಡಿ ವೈದ್ಯರಾದ್ರು, ದುಡಿದ ಹಣವನ್ನ ವಿದ್ಯಾರ್ಥಿಗಳಿಗೆ ದಾನ ಮಾಡಿದ್ರು ಪಾವಗಡದ ಪ್ರಭಾಕರ ರೆಡ್ಡಿ

    ತುಮಕೂರು: ಎಂಜಿನಿಯರ್, ಡಾಕ್ಟರ್ ಆಗಿ ಚೆನ್ನಾಗಿ ಸಂಪಾದನೆ ಮಾಡ್ಬೇಕು. ಲೈಫನ್ನ ಎಂಜಾಯ್ ಮಾಡ್ಬೇಕು. ಮಕ್ಕಳು ಮೊಮ್ಮಕ್ಕಳಿಗೂ ಕೂಡಿಡಬೇಕು ಅಂತಲೇ ಎಲ್ಲರ ಕನಸು ಕಾಣ್ತಾರೆ. ಆದ್ರೆ, ಇವತ್ತಿನ ನಮ್ಮ ಪಬ್ಲಿಕ್ ಹೀರೋ ಡಾ.ಪ್ರಭಾಕರ್ ರೆಡ್ಡಿ ಅವರು ಮಾತ್ರ ಹಣವನ್ನೆಲ್ಲಾ ಬಡ ವಿದ್ಯಾರ್ಥಿಗಳಿಗೆ ದಾನ ಮಾಡ್ತಿದ್ದಾರೆ.

    80 ವರ್ಷದ ಡಾ. ಪ್ರಭಾಕರ್ ರೆಡ್ಡಿಯವರು ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವಳ್ಳೂರು ಗ್ರಾಮದಲ್ಲಿ ಜನಿಸಿದ್ದಾರೆ. ಬೆಂಗಳೂರಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿ ವೈದ್ಯ ವೃತ್ತಿಗಾಗಿ ಲಂಡನ್‍ಗೆ ಹೋಗಿರೋ ಇವರು ಸದ್ಯ ನಿವೃತ್ತಿಯಾಗಿದ್ದಾರೆ.

    ಬಾಲ್ಯದಲ್ಲೇ ಹೆತ್ತವರನ್ನ ಕಳೆದುಕೊಂಡು ಕಡುಬಡತನದಲ್ಲಿ ಬೆಳೆದ ಇವರಿಗೆ ಡಾಕ್ಟರ್ ಆಗೋದು ಕನಸು. 1965ರಲ್ಲಿ ಎಂಬಿಬಿಎಸ್ ಪದವಿ ಮುಗಿಸಿದ್ದಾರೆ. ಅಂದಿನ ಕಾಲದಲ್ಲಿ 240 ರೂಪಾಯಿ ಶುಲ್ಕ ಕಟ್ಟಲು ಸಾಧ್ಯವಾಗದೆ ಪರಿತಪಿಸಿದ್ದರು. ಸ್ನೇಹಿತರ ಬಳಿ ಸ್ವಲ್ಪ ಹಣ ಸಿಕ್ಕರೂ ಉಳಿದ ಹಣಕ್ಕಾಗಿ ಸಾರ್ವಜನಿಕವಾಗಿ ಭಿಕ್ಷೆ ಬೇಡಿ, ಎಂಬಿಬಿಎಸ್ ಪಾಸ್ ಮಾಡಿದ್ರು. ಆಮೇಲೆ ಕೆಲ ವರ್ಷ ರಾಜ್ಯದಲ್ಲಿ ಸೇವೆ ಸಲ್ಲಿಸಿ ಹೆಚ್ಚಿನ ವ್ಯಾಸಂಗಕ್ಕಾಗಿ ಲಂಡನ್‍ಗೆ ಹೋಗಿ ಅಲ್ಲಿಯೇ ನೆಲೆಸಿದ್ದರು.

    ತಮ್ಮ ಕಷ್ಟದ ದಿನಗಳನ್ನ ನೆನಸಿಕೊಳ್ಳುವ ಪ್ರಭಾಕರ ರೆಡ್ಡಿ ಅವರು, ತಮ್ಮ ಹೆಸರಿನಲ್ಲಿ ಎಜುಕೇಷನ್ ಟ್ರಸ್ಟ್ ಸ್ಥಾಪಿಸಿ ವಿದ್ಯಾರ್ಥಿಗಳ ಸಹಾಯಕ್ಕೆ ನಿಂತಿದ್ದಾರೆ. ವಿದ್ಯಾರ್ಥಿ ವೇತನ, ಶಾಲಾ ಕಾಲೇಜ್‍ಗಳಿಗೆ ಕುಡಿಯುವ ನೀರು, ಬೆಂಚು, ಕ್ರೀಡಾಪಟುಗಳಿಗೆ ಸಮವಸ್ತ್ರವನ್ನ ನೀಡ್ತಿದ್ದಾರೆ. ಪಾವಗಡದಲ್ಲಿ ಸುಮಾರು 1 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲ್ ಕಟ್ಟಿ ಅದನ್ನು ಸಮಾಜ ಕಲ್ಯಾಣ ಇಲಾಖೆಗೆ ಅತಿ ಕಡಿಮೆ ಬಾಡಿಗೆಗೆ ನೀಡಿದ್ದಾರೆ.

    ಬೆಂಗಳೂರಿನಲ್ಲಿದ್ದ 1.5 ಕೋಟಿ ರೂಪಯಿ ಮನೆ ಹಾಗೂ ಲಂಡನ್ನಿನಲಿದ್ದ ಸುಮಾರು 2 ಕೋಟಿ ರೂಪಾಯಿ ಮನೆಯನ್ನು ಮಾರಿದ್ದು, ಈಗ ಬಾಡಿಗೆ ಮನೆಯಲ್ಲಿದ್ದಾರೆ. ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವಿನ ಜೊತೆಗೆ ಪರಿಸರ ಕಾಳಜಿ, ಸ್ವಚ್ಚತೆ, ಹಾಗೂ ಮಾನವೀಯ ಮೌಲ್ಯಗಳ ಬಗ್ಗೆ ಉಪನ್ಯಾಸ ಸಹ ಮಾಡ್ತಿದ್ದಾರೆ.

    https://www.youtube.com/watch?v=GYvWiQGjB94

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಸ್ವರ್ಗ ಕೊಟ್ರೂ ನನಗೆ ಬೇಡ: ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದ ಡಾ. ರವೀಂದ್ರನಾಥ ಶಾನುಭಾಗ್

    ಸ್ವರ್ಗ ಕೊಟ್ರೂ ನನಗೆ ಬೇಡ: ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದ ಡಾ. ರವೀಂದ್ರನಾಥ ಶಾನುಭಾಗ್

    ಉಡುಪಿ: ನಾನು ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಉಡುಪಿಯ ಸಮಾಜಸೇವಕ ಡಾ. ರವೀಂದ್ರನಾಥ ಶಾನುಭಾಗ್ ಹೇಳಿದ್ದಾರೆ.

    ಕಳೆದ ರಾತ್ರಿ ನನಗೆ ಅಧಿಕೃತವಾಗಿರಲಿಲ್ಲ. ಇಂದು ಅಧಿಕೃತವಾಗಿದೆ. ನನಗೆ ನನ್ನ ಸಮಾಜಸೇವೆ ತೃಪ್ತಿ ಆಗಿಲ್ಲ. ನೊಂದ ಜೀವಗಳ ಕಣ್ಣೀರು ಕಣ್ಣಮುಂದೆ ಸುರಿಯುತ್ತಿರುವಾಗ ನಾನು ಯಾವ ಪುರುಷಾರ್ಥಕ್ಕೆ ಪ್ರಶಸ್ತಿ ಸ್ವೀಕರಿಸಲಿ? ಎಂದು ಸರ್ಕಾರಕ್ಕೆ ಡಾ. ಶಾನುಭಾಗ್ ಪ್ರಶ್ನೆ ಮಾಡಿದ್ದಾರೆ.

    ಕರಾವಳಿಯ ಮೂರು ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತ ನೂರಾರು ಮಕ್ಕಳ ನೊಂದಣಿ ಕೂಡಾ ಆಗಿಲ್ಲ. ಉಡುಪಿ ಜಿಲ್ಲೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಡೇ ಕೇರ್ ಸೆಂಟರ್ ಕೂಡಾ ನಿರ್ಮಾಣವಾಗಿಲ್ಲ. ಎಂಡೋಸಲ್ಫಾನ್ ಪೀಡಿತರು ಬೀದಿಯಲ್ಲಿ ಭಿಕ್ಷೆ ಬೇಡುತ್ತಿರುವಾಗ ಹಾಗೂ ಹಿರಿಯ ನಾಗರೀಕರು ಪ್ರತಿನಿತ್ಯ ಕಣ್ಣೀರಿಡುತ್ತಿರುವಾಗ ನಾನು ಈ ಪ್ರಶಸ್ತಿ ಸ್ವೀಕರಿಸಿದರೆ ಅವರ ಮುಖದಲ್ಲಿ ನಗು ಕಾಣಲು ಹೇಗೆ ಸಾಧ್ಯ ಎಂದು ಉತ್ತರಿಸಲಾಗದ ಪ್ರಶ್ನೆ ಹಾಕಿದ್ದಾರೆ.

    ಜನ ಹಗ್ಗ ತೆಗೆದುಕೊಳ್ಳುವಾಗ ನಾನು ಪ್ರಶಸ್ತಿ ತೆಗೆದುಕೊಳ್ಳಲೇ?: ನಾನು ಎಷ್ಟು ಸಮಾಜಸೇವೆ ಮಾಡಿದ್ದೇನೆ ಎಂಬುದು ಮುಖ್ಯವಲ್ಲ. ಹಿರಿಯ ನಾಗರೀಕರು ಸಾವಿರಾರು ಸಂಖ್ಯೆಯಲ್ಲಿ ನನ್ನ ಬಳಿ ಬರುತ್ತಾ ಇದ್ದಾರೆ. ಕೈಹಿಡಿದು ಕಣ್ಣೀರಿಡುತ್ತಿದ್ದಾರೆ. ಯಾರಿಗಾಗಿ, ಏತಕ್ಕಾಗಿ ಈ ಪ್ರಶಸ್ತಿ ಸ್ವೀಕಾರ ಮಾಡಲಿ? ಅಸಂಖ್ಯ ಅರ್ಜಿಗಳು ಬರುತ್ತಿದೆ. ಈ ನಡುವೆ ಪ್ರಶಸ್ತಿ ನನಗೆ ಬೇಕಾ? ಸರ್ಕಾರ ಹಿರಿಯ ನಾಗರೀಕರ ಕಾನೂನನ್ನು ಪಾಲಿಸದೆ ಗಾಳಿಗೆ ತೂರಿದೆ. ಎಂಟು ಜನ ಹಿರಿಯ ನಾಗರೀಕರು ನ್ಯಾಯ ಸಿಗುವ ಮೊದಲೇ ಸತ್ತು ಹೋಗಿದ್ದಾರೆ. ಪ್ರಶಸ್ತಿ ಸ್ವೀಕರಿಸಿ ನಾನು ಅವರ ಆತ್ಮಕ್ಕೆ ಅವಮಾನ ಮಾಡಬೇಕಾ ಎಂದು ಪ್ರಶ್ನೆ ಮಾಡಿದರು.

    ಐಎಎಸ್ ಅಧಿಕಾರಿಗಳ ಉದ್ಧಟತನ: ರಾಜ್ಯದಲ್ಲಿ ಜಗದೀಶ್, ಡಾ. ವಿಶಾಲ್ ನಂತಹ ಉದ್ಧಟತನದ ಐಎಎಸ್ ಅಧಿಕಾರಿಗಳ ನಡುವೆ ನನಗೆ ಯಾವ ಪ್ರಶಸ್ತಿಯೂ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಚಿವೆ ಉಮಾಶ್ರೀ ನನ್ನ ಒಂದು ಪತ್ರಕ್ಕೂ ಉತ್ತರಿಸುವುದು ಬೇಡ. ನೊಂದ ಸಂತ್ರಸ್ಥರಿಗಾದರೂ ಉತ್ತರಿಸುವ ಕನಿಷ್ಟ ಸೌಜನ್ಯವನ್ನೂ ಇಟ್ಟುಕೊಂಡಿಲ್ಲವಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಪ್ರತಿನಿತ್ಯ ಹೆಣ್ಣುಮಕ್ಕಳ ಮಾನವಕಳ್ಳಸಾಗಣೆ ನಡೆಯುತ್ತಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಪತ್ರಗಳ ಸರಮಾಲೆ ಬರೆದು ವರ್ಷ ಕಳೆಯಿತು. ಉತ್ತರವೂ ಇಲ್ಲ, ಸಮಸ್ಯೆಯೂ ಪರಿಹಾರವಾಗಿಲ್ಲ. ಎಂಡೋಸಲ್ಫಾನ್ ವಿಚಾರದಲ್ಲಿ ಉಡುಪಿಯ ಡಿಸಿಯಾಗಿದ್ದ ಆರ್ ವಿಶಾಲ್ ನಿಮಗೆಲ್ಲ ಈ ಉಸಾಬರಿ ಯಾಕೆ ಎಂದು ಪ್ರಶ್ನೆ ಮಾಡಿದರು.

    ಟೈಂ ವೇಸ್ಟ್ ಮಾಡಬೇಡಿ: ಯಾರೂ ನನ್ನ ಮನವೊಲಿಸಬೇಡಿ. ಸಂತ್ರಸ್ಥರ ಕಣ್ಣೀರು ಒರೆಸಲು ಸಾಧ್ಯವಾದ್ರೆ ಅದನ್ನು ಮಾಡಿ. ಮಾನವ ಕಳ್ಳಸಾಗಣೆ ನಿಲ್ಲಿಸಿ, ಎಂಡೋಸಲ್ಫಾನ್ ಸಂತ್ರಸ್ಥರ ಕಣ್ಣೀರು ಒರೆಸಿ, ಹಿರಿಯ ನಾಗರೀಕರನ್ನು ಸಾಯುವ ತನಕ ಬದುಕಲು ಬಿಡಿ. ಅಧಿಕಾರಿಗಳಿಗೆ, ಮಂತ್ರಿಗಳಿಗೆ ಕಾನೂನು ಪಾಲಿಸಲೂ ಗೊತ್ತಿಲ್ಲ. ಮಾನವೀಯತೆ ಅಂತೂ ಇಲ್ಲವೇ ಇಲ್ಲ. ನನ್ನದು ಉದ್ಧಟತನವೂ ಅಲ್ಲ, ಪ್ರಶಸ್ತಿಗೆ ಮಾಡುತ್ತಿರುವ ಅಗೌರವವೂ ಅಲ್ಲ. ಸಂತ್ರಸ್ಥರ ಕಣ್ಣೀರೊರೆಸುವ ಕೆಲಸದಲ್ಲೇ ನಾನು ಪ್ರಶಸ್ತಿಯ ಖುಷಿಯನ್ನು ಪಡೆಯುತ್ತೇನೆ ಎಂದು ಡಾ. ರವೀಂದ್ರನಾಥ ಶಾನುಭಾಗ್ ಸ್ಪಷ್ಟಪಡಿಸಿದರು.

    ಸ್ವರ್ಗ ಕೊಟ್ಟರೂ ಬೇಡ: ಪ್ರಶಸ್ತಿ ಜೊತೆ ಒಂದು ಲಕ್ಷ, ಒಂದು ಕೋಟಿ, ಬಂಗಾರದ ಪದಕ ಬೇಡ. ನನಗೆ ಸ್ವರ್ಗ ಕೊಟ್ಟರೂ ಬೇಡ. ನನಗೆ ಒಂದು ನ್ಯಾಯ ಕೊಡಿ. ನನ್ನ ಸಮಾಜ ಸೇವೆ ಪೂರ್ತಿಯಾಗಿಲ್ಲ. ಪೂರ್ತಿಯಾಗಲು ಜನಪ್ರತಿನಿಧಿಗಳು ಬಿಡುವುದಿಲ್ಲ. ಓಟು ಬೇಡಿದವರ ಬಳಿ ಜನ ನ್ಯಾಯ ಬೇಡುತ್ತಿದ್ದಾರೆ. ಇಂತಹ ಪರಿಸ್ಥಿತಿ ದೇಶದಲ್ಲಿ, ರಾಜ್ಯದಲ್ಲಿ ಇದೆ ಅನ್ನೋದು ನಾಚಿಕೆಗೇಡಿನ ವಿಚಾರ ಎಂದು ಖೇದ ವ್ಯಕ್ತಪಡಿಸಿದ್ರು.

    ಪ್ರಚಾರದ ಅಗತ್ಯವಿಲ್ಲ: ನನಗೆ ಪ್ರಶಸ್ತಿ ತಿರಸ್ಕಾರ ಮಾಡುವ ಮೂಲಕ ಭಾರೀ ಪ್ರಚಾರ ಸಿಗುತ್ತದೆ ಎಂಬ ಉದ್ದೇಶವಂತೂ ಇಲ್ಲವೇ ಇಲ್ಲ. ಹೆಸರು ಮಾಡಬೇಕೆಂದು ಹೀಗೆ ಮಾಡುತ್ತಿಲ್ಲ. ಈ ಮೂಲಕವಾದರೂ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಜ್ಞಾನೋದಯ ಆದ್ರೆ ಆಗಲಿ. ಜಾಗೃತಿ ಮೂಡಿದ್ರೆ ಮೂಡಲಿ. ಸಾಗರದಲ್ಲಿ ಒಂದೂವರೆ ಸಾವಿರ ಎಕ್ರೆ ಕಾಡನ್ನು ಕೃಷಿ ವಿಶ್ವವಿದ್ಯಾನಿಲಯಕ್ಕೆ ನಾಶ ಮಾಡುತ್ತಿದ್ದಾರೆ. ಇಂತದ್ದೆಲ್ಲ ಘಟನೆ ಕಣ್ಣಮುಂದೆ ನಡೆಯುತ್ತಿರುವಾಗ ನಾನು ಪ್ರಶಸ್ತಿ ಸ್ವೀಕರಿಸುವುದರಲ್ಲಿ ಏನು ಅರ್ಥವಿದೆ ಎಂದು ತನ್ನ ನಿಲುವನ್ನು ವ್ಯಕ್ತಪಡಿಸಿದರು.

    https://www.youtube.com/watch?v=mUP-1N8wHHE

  • ಬಿರು ಬೇಸಿಗೆಯಲ್ಲಿ ಪ್ರತಿದಿನ ಜನರಿಗೆ 60 ಟ್ಯಾಂಕರ್‍ಗಳಷ್ಟು ನೀರು ಪೂರೈಸ್ತಿರೋ ದಾವಣಗೆರೆಯ ರಾಕೇಶ್

    ಬಿರು ಬೇಸಿಗೆಯಲ್ಲಿ ಪ್ರತಿದಿನ ಜನರಿಗೆ 60 ಟ್ಯಾಂಕರ್‍ಗಳಷ್ಟು ನೀರು ಪೂರೈಸ್ತಿರೋ ದಾವಣಗೆರೆಯ ರಾಕೇಶ್

    ದಾವಣಗೆರೆ: ಬಿರು ಬೇಸಿಗೆಯಿಂದಾಗಿ ರಾಜ್ಯದ ಬಹುತೇಕ ಕಡೆ ಕುಡಿಯೋ ನೀರಿಗೂ ಪರದಾಡೋ ಸ್ಥಿತಿ ಇದೆ. ನೀರು ಕೊಡಿ ಸ್ವಾಮಿ ಅಂತಾ ಜನನಾಯಕರನ್ನ ಕೇಳಿದ್ರೆ ಕಿವಿನೇ ಕೇಳಿಸಲ್ಲ. ಇಂಥದ್ದರಲ್ಲಿ ವ್ಯಕ್ತಿಯೊಬ್ಬರು ಉಚಿತವಾಗಿ ಟ್ಯಾಂಕರ್ ಮೂಲಕ ಏರಿಯಾಗಳಿಗೆಲ್ಲಾ ನೀರು ಹಂಚ್ತಿದ್ದಾರೆ.

    ದಾವಣಗೆರೆಯ ನಿಟ್ಟುವಳ್ಳಿ ಬಡಾವಣೆಯ ನಿವಾಸಿ ರಾಕೇಶ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ರಾಕೇಶ್ ಅವರಿಗೆ ಏನಾದರೂ ಸೇವೆ ಮಾಡಬೇಕೆಂಬ ಮಹದಾಸೆ. ಹೀಗಾಗಿ ಜನರ ನೀರಿನ ದಾಹ ತಣಿಸುವ ಕೆಲಸ ಮಾಡ್ತಿದ್ದಾರೆ. ತಮ್ಮ ಜಮೀನಿನಲ್ಲಿರುವ ಕೊಳವೆ ಬಾವಿಯಿಂದ ನೀರನ್ನು ತುಂಬಿಸಿಕೊಂಡು ಬಂದು, ನಿತ್ಯ 5 ಟ್ಯಾಂಕರ್ ಮೂಲಕ ನಗರದ ಪ್ರತಿಯೊಂದು ವಾರ್ಡ್‍ಗೂ ಪೂರೈಕೆ ಮಾಡುತ್ತಿದ್ದಾರೆ. ಪ್ರತಿ ನಿತ್ಯ ಸುಮಾರು 60 ಟ್ಯಾಂಕರ್ ನೀರನ್ನ ಜನರಿಗೆ ನೀಡುತ್ತಾರೆ. ರಾಕೇಶ್ ಸಮಾಜ ಸೇವೆಗೆ ಮನೆಯವರು ಹಾಗೂ ಸ್ನೇಹಿತರೂ ಸಾಥ್ ನೀಡಿದ್ದಾರೆ.

    ಪ್ರತಿವರ್ಷ ದಾವಣಗೆರೆ ಜಿಲ್ಲೆಯ ಸುತ್ತಮುತ್ತ ಯಾವುದೇ ಜಾತ್ರೆ ನಡೆಯಲಿ, ರಾಜೇಶ್ ಅಲ್ಲಿಗೆ ಬರೋ ಜನರ ನೀರಿನ ದಾಹ ನೀಗಿಸ್ತಾರೆ. ತಂದೆಯ ಮಾರ್ಗದರ್ಶನದಲ್ಲಿ ಬೆಳೆದ ರಾಕೇಶ್ ಬಡ ಜನರಿಗೆ ತನ್ನ ಕೈಲಾದಷ್ಟು ಸಹಾಯ ಮಾಡ್ತಿದ್ದಾರೆ. ಇದಕ್ಕಾಗಿ ಆರ್‍ಎಸ್‍ಆರ್ ಅನ್ನೋ ಫೌಂಡೇಶನ್ ಸ್ಥಾಪನೆ ಮಾಡಿದ್ದಾರೆ. ರಾಕೇಶ್ ನಿಜಕ್ಕೂ ಆಧುನಿಕ ಭಗೀರಥರಂತೆ ಕಾಣುತ್ತಾರೆ.

    https://www.youtube.com/watch?v=DZgrB9ObNf8