Tag: ಸಮಾಜವಾದಿ ಪಕ್ಷ

  • ಬಿಜೆಪಿಗೆ ನ್ಯಾಯಾಲಯಗಳಲ್ಲಿ ನಂಬಿಕೆ ಇಲ್ಲ, ಇದು ನಕಲಿ ಎನ್‌ಕೌಂಟರ್‌ : ಅಖಿಲೇಶ್‌ ಯಾದವ್‌

    ಬಿಜೆಪಿಗೆ ನ್ಯಾಯಾಲಯಗಳಲ್ಲಿ ನಂಬಿಕೆ ಇಲ್ಲ, ಇದು ನಕಲಿ ಎನ್‌ಕೌಂಟರ್‌ : ಅಖಿಲೇಶ್‌ ಯಾದವ್‌

    ಲಕ್ನೋ: ಗ್ಯಾಂಗ್‌‌ ಸ್ಟಾರ್‌, ರಾಜಕಾರಣಿ ಅತೀಕ್ ಅಹ್ಮದ್ ಪುತ್ರ (Atiq Ahmed) ಅಸಾದ್‌ ಮತ್ತು ಸಹಚರನನ್ನು ಕೊಲ್ಲಲು ನಕಲಿ ಎನ್‌ಕೌಂಟರ್‌ (Fake Encounter) ಮಾಡಲಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.

    ರಾಜ್ಯವನ್ನು ಕಾಡುತ್ತಿರುವ ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಆಡಳಿತ ಪಕ್ಷ ನಕಲಿ ಎನ್‌ಕೌಂಟರ್‌ ನಡೆಸುತ್ತಿದೆ ಎಂದು ಆರೋಪಿಸಿದರು.  ಇದನ್ನೂ ಓದಿ: ಉಮೇಶ್ ಪಾಲ್ ಹತ್ಯೆ ಕೇಸ್‌ – ಗ್ಯಾಂಗ್‌ ಸ್ಟಾರ್‌ ಅತಿಕ್‌ ಪುತ್ರ ಎನ್‌ಕೌಂಟರ್‌ಗೆ ಬಲಿ

    ಬಿಜೆಪಿಗೆ (BJP) ನ್ಯಾಯಾಲಯಗಳ ಮೇಲೆ ನಂಬಿಕೆ ಇಲ್ಲ. ಅಧಿಕಾರದಲ್ಲಿರುವವರು ಯಾರು ಬದುಕಬೇಕು ಅಥವಾ ಸಾಯಬೇಕು ಎಂದು ನಿರ್ಧರಿಸಲು ಸಾಧ್ಯವಿಲ್ಲ. ಇಂದಿನ ಮತ್ತು ಇತ್ತೀಚಿನ ಎನ್‌ಕೌಂಟರ್‌ಗಳ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.

    ಅಸದ್ ಮತ್ತು ಗುಲಾಮ್ ಮೋಟಾರ್ ಸೈಕಲ್‌ನಲ್ಲಿ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಝಾನ್ಸಿಯಲ್ಲಿ ವಿಶೇಷ ಕಾರ್ಯಪಡೆ ತಂಡವು ಅವರನ್ನು ತಡೆದಿದೆ. ಈ ವೇಳೆ ಅವರು ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಬಲಿಯಾಗಿದ್ದಾರೆ. ಇವರಿಂದ ಅತ್ಯಾಧುನಿಕ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಸಾರಸ್ ಕೊಕ್ಕರೆಯನ್ನು ಸಾಕಿದ್ದ ವ್ಯಕ್ತಿಗೆ ಅರಣ್ಯ ಇಲಾಖೆ ನೋಟಿಸ್

    ಸಾರಸ್ ಕೊಕ್ಕರೆಯನ್ನು ಸಾಕಿದ್ದ ವ್ಯಕ್ತಿಗೆ ಅರಣ್ಯ ಇಲಾಖೆ ನೋಟಿಸ್

    ಲಕ್ನೋ: ಸಾರಸ್ ಕೊಕ್ಕರೆಯನ್ನು ರಕ್ಷಣೆ ಮಾಡಿ ಒಂದು ವರ್ಷಗಳ ಕಾಲ ಸಾಕಿದ್ದ ಉತ್ತರ ಪ್ರದೇಶದ (Uttar Pradesh) ವ್ಯಕ್ತಿಯೊಬ್ಬನಿಗೆ ಅರಣ್ಯ ಇಲಾಖೆ (Forest department) ನೋಟಿಸ್ ಜಾರಿಗೊಳಿಸಿದೆ.

    ಅಮೇಥಿ ಜಿಲ್ಲೆಯ ಮಂಡ್ಖಾ ಗ್ರಾಮದ ಆರೀಫ್ ಖಾನ್ ಗುರ್ಜರ್ ಅವರು ತಮ್ಮ ಹೊಲದಲ್ಲಿ ಸಿಕ್ಕಿದ್ದ ಕೊಕ್ಕರೆಯನ್ನು ಮನೆಗೆ ಕೊಂಡೊಯ್ದು ಸಾಕಿದ್ದರು. ಈಗ ಅರಣ್ಯ ಇಲಾಖೆ ಅವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ (Wildlife Protection Act)ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಬಾಲಕಿ ಹತ್ಯೆಗೈದ ಅಪರಾಧಿಗೆ ನೂರು ವರ್ಷ ಜೈಲು

    ಅರಣ್ಯ ಇಲಾಖೆ ಅಧಿಕಾರಿಗಳು ಪಕ್ಷಿಯನ್ನು ಸಮಸ್ಪುರ್‍ನ ಅಭಯಾರಣ್ಯಕ್ಕೆ ಸ್ಥಳಾಂತರಿಸಿದ್ದು, ನೈಸರ್ಗಿಕವಾಗಿ ವಾಸಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.

    ಸಮಾಜವಾದಿ ಪಕ್ಷದ ನಾಯಕ (Samajwadi Party) ಅಕಿಲೇಶ್ ಯಾದವ್ (Akhilesh Yadav), ಅರಣ್ಯ ಇಲಾಖೆಯ ಕ್ರಮವನ್ನು ಖಂಡಿಸಿದ್ದಾರೆ. ಇಲಾಖೆಗೆ ಪ್ರಧಾನಿ ನಿವಾಸದ ನವಿಲನ್ನು ಕೊಂಡೊಯ್ಯುವ ಧೈರ್ಯ ಇದೆಯೇ ಎಂದು ಪ್ರಶ್ನಿಸಿದ್ದಾರೆ.

    ಸಾರಸ್ ಹಾಗೂ ಆರೀಫ್‍ನ ಒಡನಾಟದ ಬಗ್ಗೆ ಕೇಳಿದ್ದ ಅಖಿಲೇಶ್ ಯಾದವ್, ರೈತನನ್ನು ಭೇಟಿಯಾಗಿ ಕೊಕ್ಕರೆಯೊಂದಿಗೆ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

    ಯಾದವ್ ಹೇಳಿಕೆಗೆ ಅರಣ್ಯಾಧಿಕಾರಿ ಡಿ.ಎನ್ ಸಿಂಗ್ ಪ್ರತಿಕ್ರಿಯಿಸಿ, ಆರೀಫ್ ಒಪ್ಪಿಗೆಯೊಂದಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಪಕ್ಷಿಗಳು ಯಾವಾಗಲೂ ಜೋಡಿಯಾಗಿ ಜೀವಿಸುತ್ತವೆ ಎಂದಿದ್ದಾರೆ. ಇದನ್ನೂ ಓದಿ: ದೇವಿ ಹೇಳಿದಂತೆ ಎರಡು ಕ್ಷೇತ್ರದಲ್ಲಿ ನಿಲ್ಲಲು ಮುಂದಾದ್ರಾ ಸಿದ್ದರಾಮಯ್ಯ?

  • ಎಸ್‍ಪಿ ಶಾಸಕನ 7 ಕೋಟಿ ರೂ ಮೌಲ್ಯದ ಅಕ್ರಮ ಆಸ್ತಿ ವಶ

    ಎಸ್‍ಪಿ ಶಾಸಕನ 7 ಕೋಟಿ ರೂ ಮೌಲ್ಯದ ಅಕ್ರಮ ಆಸ್ತಿ ವಶ

    ಲಕ್ನೋ: ಸಮಾಜವಾದಿ ಪಕ್ಷದ (Samajwadi Party) ಶಾಸಕ ಇರ್ಫಾನ್ ಸೋಲಂಕಿ ಹಾಗೂ ಆತನ ಕಿರಿಯ ಸಹೋದರ ರಿಜ್ವಾನ್‍ಗೆ ಸೇರಿದ 7 ಕೋಟಿ ರೂ ಗಳ ಮೌಲ್ಯದ ಆಸ್ತಿಯನ್ನು ಪೊಲೀಸರು ಗ್ಯಾಂಗ್‍ಸ್ಟರ್ ಕಾಯ್ದೆ ಅಡಿ ವಶಪಡಿಸಿಕೊಂಡಿದ್ದಾರೆ.

    ಶಾಸಕ ಹಾಗೂ ಆತನ ಸಹೋದರನಿಗೆ ಸೇರಿದ 163 ಚದರ ಮೀಟರ್ ವಿಸ್ತೀರ್ಣದ ನಾಲ್ಕು ಪ್ಲಾಟ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಶಾಸಕನ ಉಳಿದ ಆಸ್ತಿಯನ್ನು ವಶಪಡಿಸಿಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರಾಪರ್ ಆಗಲು ಕದ್ದ- ತನಿಖೆ ವೇಳೆ ರಾಪ್ ಸಾಂಗ್ ಹಾಡಿದ!

    ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿತರಾಗಿರುವ ಸೋಲಂಕಿ (Irfan Solanki) ಹಾಗೂ ರಿಜ್ವಾನ್ ಇಬ್ಬರನ್ನೂ ಪ್ರತ್ಯೇಕ ಜೈಲಿನಲ್ಲಿಡಲಾಗಿದೆ ಎಂದು ಫೀಲ್ಖಾನಾ (Pheelkhana) ಪೊಲೀಸ್ ಠಾಣಾಧಿಕಾರಿ ಸುನಿಲ್ ಕುಮಾರ್ ಸಿಂಗ್ ಹೇಳಿದ್ದಾರೆ.

    ಸೋಲಂಕಿ ಅವರು ಎಸ್‍ಪಿ ಆಡಳಿತ ಅವಧಿಯಲ್ಲಿ ತಮ್ಮ ರಾಜಕೀಯ ಪ್ರಭಾವ ಬಳಸಿ ಕಾನ್ಪುರ ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಪಡೆದುಕೊಂಡಿದ್ದರು ಎಂದು ಸಿಂಗ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಶಾಸಕರಿಗೆ ಸೇರಿದ ಗಾಜಿಯಾಬಾದ್ ಹಾಗೂ ನೋಯ್ಡಾದ ಪ್ಲಾಟ್‍ಗಳನ್ನು ಸಹ ವಶಪಡಿಸಿಕೊಳ್ಳಲಾಗುವುದು ಎಂದು ಸಿಂಗ್ ತಿಳಿಸಿದ್ದಾರೆ.

    ಜಜ್ಮೌ, ಚಕೇರಿ, ಚಮನ್‍ಗಂಜ್ ಹಾಗೂ ಇನ್ನಿತರೆ ಸ್ಥಳಗಳಲ್ಲಿ ಅಕ್ರಮ ಆಸ್ತಿ ಪತ್ತೆಯಾಗಿದೆ. ಅವುಗಳ ಅಂದಾಜು ಮೊತ್ತ ಸುಮಾರು 150-200 ಕೋಟಿ ರೂ ಗಳು ಎಂದು ಅಂದಾಜಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.

    ಶಾಸಕ ಹಾಗೂ ಅವರ ಗ್ಯಾಂಗ್‍ಗೆ ಸೇರಿದ ಆಸ್ತಿಗಳ ವಿವರ ಪಡೆಯಲು ಕಾನ್ಪುರ  (Kanpur) ಅಭಿವೃದ್ಧಿ ಪ್ರಾಧಿಕಾರ ಹಾಗೂ ಕಾನ್ಪುರ್ ಮುನ್ಸಿಪಾಲ್ ಕಾರ್ಪೊರೇಷನ್‍ನ ಸಹಾಯ ಕೇಳಿದ್ದೇವೆ ಎಂದು ಜಂಟಿ ಪೊಲೀಸ್ ಕಮಿಷನರ್ ಆನಂದ್ ಪ್ರಕಾಶ್ ತಿವಾರಿ ಹೇಳಿದ್ದಾರೆ.

    ಸೋಲಂಕಿ ಮತ್ತು ರಿಜ್ವಾನ್, ಕಳೆದ ನವೆಂಬರ್ 7 ರಂದು ಮಹಿಳೆಯೊಬ್ಬರಿಂದ ಪ್ಲಾಟ್ ಕಿತ್ತುಕೊಳ್ಳುವ ಸಲುವಾಗಿ ಮಹಿಳೆಯ ಮನೆಗೆ ಬೆಂಕಿ ಹಚ್ಚಿದ ಆರೋಪ ಹಾಗೂ ಡಿಸೆಂಬರ್ 2 ರಂದು ಮಹಿಳೆಗೆ ಕಿರುಕುಳ ನೀಡಿದ ಆರೋಪದಡಿ ಜೈಲಿನಲ್ಲಿದ್ದಾರೆ. ನಾಲ್ಕು ಬಾರಿ ಶಾಸಕರಾಗಿರುವ ಸೋಲಂಕಿ ಪ್ರಸ್ತುತ ಮಹಾರಾಜ್‍ಗಂಜ್ ಜೈಲಿನಲ್ಲಿದ್ದಾನೆ. ಇದನ್ನೂ ಓದಿ: ಐಷಾರಾಮಿ ಕಾರಲ್ಲಿ ಬಂದು ಜಿ20 ಕಾರ್ಯಕ್ರಮಕ್ಕಾಗಿ ಇಟ್ಟಿದ್ದ ಹೂಕುಂಡ ಕದ್ದೊಯ್ದ ಕಳ್ಳ ಅರೆಸ್ಟ್‌

  • ಪರ್ವೇಜ್ ಮುಷರಫ್ ಶಾಂತಿಗೆ ಶ್ರಮಿಸಿದ ವ್ಯಕ್ತಿ – ಶಶಿ ತರೂರ್ ಹೇಳಿಕೆಗೆ ಬಿಜೆಪಿ ಗರಂ

    ಪರ್ವೇಜ್ ಮುಷರಫ್ ಶಾಂತಿಗೆ ಶ್ರಮಿಸಿದ ವ್ಯಕ್ತಿ – ಶಶಿ ತರೂರ್ ಹೇಳಿಕೆಗೆ ಬಿಜೆಪಿ ಗರಂ

    ಲಕ್ನೋ: ಪಾಕಿಸ್ತಾನದ (Pakistan) ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ (Pervez Musharraf) ಸಾವಿನ ಕುರಿತಾಗಿ ಕಾಂಗ್ರೆಸ್ ನೇತಾರ ಶಶಿ ತರೂರ್ (Shashi Tharoor) ನೀಡಿದ ಹೇಳಿಕೆಗೆ ಬಿಜೆಪಿ ಗರಂ ಆಗಿದೆ.

    ಮುಷರಫ್‌ನನ್ನ ಶಾಂತಿದೂತನಿಗೆ ಹೋಲಿಸಿದ್ದಕ್ಕೆ ಕೇಸರಿ ಪಡೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ನಮ್ಮ ದೇಶದ ಸೈನಿಕರನ್ನ ಚಿತ್ರಹಿಂಸೆಗೆ ಗುರಿಮಾಡಿದ ವ್ಯಕ್ತಿಯನ್ನು ಶಾಂತಿಗಾಗಿ ಶ್ರಮಿಸಿದ ವ್ಯಕ್ತಿ ಎನ್ನಲು ಹೇಗಾದ್ರೂ ಮನಸ್ಸು ಬರುತ್ತೆ ಎಂದು ಬಿಜೆಪಿ (BJP) ಕಿಡಿಕಾರಿದೆ. ಇದನ್ನೂ ಓದಿ: ಭಾರತದ ಪ್ರತಿಷ್ಠೆ ಹಾಳುಮಾಡಲು ದಿವಾಳಿ ಪಾಕಿಸ್ತಾನ ಸಂಚು- ಇಂಟಲಿಜೆನ್ಸ್ ರಿಪೋರ್ಟ್

    ಇದಕ್ಕೆ ಶಶಿ ತರೂರ್ (Shashi Tharoor) ಮತ್ತೆ ತಿರುಗೇಟು ನೀಡಿದ್ದಾರೆ. ತಮ್ಮ ಹೇಳಿಕೆ ಸಮರ್ಥನೆ ಮಾಡಿಕೊಂಡಿರುವ ಶಶಿ ತರೂರ್, ಸತ್ತವರ ಬಗ್ಗೆ ಎರಡು ಒಳ್ಳೆ ಮಾತುಗಳನ್ನು ಆಡಬೇಕೆಂಬ ಪರಂಪರೆ ನಮ್ಮ ದೇಶದಲ್ಲಿದೆ. ಮುಷರಫ್ ಬದ್ಧ ಶತ್ರು ಆಗಿರಬಹುದು, ಕಾರ್ಗಿಲ್ ಯುದ್ಧದ (Kargil War) ಕಾರಣಕರ್ತನೂ ಆಗಿರಬಹುದು. ಆದರೂ 2002ರಿಂದ 2007ರವರೆಗೂ ಭಾರತದ ಜೊತೆ ಶಾಂತಿಗಾಗಿ ಮುಷರಫ್ ಪ್ರಯತ್ನಿಸಿದ್ದರು ಎಂದು ಪುನರುಚ್ಚರಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ

    ಫೆಬ್ರವರಿ 5ರಂದು ನಿಧನರಾದ ಪರ್ವೇಜ್ ಮುಷರಫ್ ಮೃತದೇಹವನ್ನು ಪಾಕಿಸ್ತಾನಕ್ಕೆ ತರಲಾಗಿದ್ದು, ಫೆಬ್ರವರಿ 7ರಂದು ಕರಾಚಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಇದನ್ನೂ ಓದಿ: ಬಿನ್‌ ಲಾಡೆನ್‌ನ ಹೊಗಳಿದ್ದ ವ್ಯಕ್ತಿ, ರಾಹುಲ್‌ ಗಾಂಧಿ ಪಿಎಂ ಆಗಬೇಕೆಂದು ಬಯಸಿದ್ದರು – ಕಾಂಗ್ರೆಸ್‌ಗೆ ಬಿಜೆಪಿ ಟಾಂಗ್‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಮಾಜವಾದಿ ಪಕ್ಷದ ನಾಯಕನ ಮಗಳೊಂದಿಗೆ ಓಡಿ ಹೋದ 47ರ ಬಿಜೆಪಿ ನಾಯಕ

    ಸಮಾಜವಾದಿ ಪಕ್ಷದ ನಾಯಕನ ಮಗಳೊಂದಿಗೆ ಓಡಿ ಹೋದ 47ರ ಬಿಜೆಪಿ ನಾಯಕ

    ಲಕ್ನೋ: 47 ವರ್ಷದ ಬಿಜೆಪಿ ನಾಯಕನೊಬ್ಬ 26 ವರ್ಷದ ಸಮಾಜವಾದಿ ಪಕ್ಷದ (Samajwadi Party) ನಾಯಕನ ಮಗಳೊಂದಿಗೆ ಓಡಿ ಹೋದ ಘಟನೆ ಉತ್ತರಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ವರದಿಯಾಗಿದೆ.

    ಬಿಜೆಪಿ (BJP) ನಾಯಕನನ್ನು ಆಶಿಶ್ ಶುಕ್ಲಾ ಎಂದು ಗುರುತಿಸಲಾಗಿದೆ. ಆತನಿಗೆ ಈಗಾಗಲೇ ಮದುವೆಯಾಗಿದ್ದು (Marriage), ಇಬ್ಬರು ಮಕ್ಕಳಿದ್ದಾರೆ. ಅವರಲ್ಲಿ ಮಗನಿಗೆ 21 ವರ್ಷವಾಗಿದ್ದು, ಮಗಳಿಗೆ 7 ವರ್ಷ ವಯಸ್ಸಾಗಿದೆ.

    ಮೂಲಗಳ ಪ್ರಕಾರ, ಎಸ್‍ಪಿ ನಾಯಕನ ಮಗಳಿಗೆ ಕುಟುಂಬವು ಅವಳ ಇಚ್ಛೆಗೆ ವಿರುದ್ಧವಾಗಿ ಮದುವೆಯನ್ನು ನಿಗದಿಪಡಿಸಿತ್ತು. ಆದರೆ ಆಕೆ ಶುಕ್ಲಾ ಜೊತೆ ಸಂಬಂಧ ಹೊಂದಿದ್ದಳು. ಈ ಹಿನ್ನೆಲೆಯಲ್ಲಿ ಮದುವೆಯಿಂದ ತಪ್ಪಿಸಿಕೊಳ್ಳಲು ಶುಕ್ಲಾ ಜೊತೆ ಓಡಿಹೋಗಿದ್ದಾಳೆ.

    ಈ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಈಗಾಗಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು, ಕೊಡಗನ್ನು ಸ್ವಿಜರ್ಲ್ಯಾಂಡ್ ರೀತಿ ಬೆಳೆಸಿ – ಎಷ್ಟು ಬೇಕಾದ್ರೂ ಹಣ ಕೊಡ್ತೀವಿ: ಬೊಮ್ಮಾಯಿ

    ಈ ಬಗ್ಗೆ ಬಿಜೆಪಿಯ ಹರ್ದೋಯ್ ಜಿಲ್ಲಾ ಮಾಧ್ಯಮ ಉಸ್ತುವಾರಿ ಗಂಗೇಶ್ ಪಾಠಕ್ ಮಾತನಾಡಿ, ಆಶಿಶ್ ಶುಕ್ಲಾ ಅವರು ಪಕ್ಷದ ನಗರ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಂದು ಹೇಳಿದರು. ಘಟನೆ ಬೆಳಕಿಗೆ ಬಂದ ನಂತರ ಬಿಜೆಪಿಯು ಅಶಿಶ್ ಶುಕ್ಲಾನನ್ನು ಪಕ್ಷ ವಿರೋಧಿ ಚಟುವಟಿಯಲ್ಲಿ ತೊಡಗಿಸಿಕೊಂಡಿರುವ ಆರೋಪದ ಮೇಲೆ ಉಚ್ಛಾಟಿಸಿದೆ. ಇದನ್ನೂ ಓದಿ: ಕಾರ್ಯನಿರ್ವಹಿಸುವ ಸಾಮರ್ಥ್ಯ ನಾನು ಹೊಂದಿಲ್ಲ – ನ್ಯೂಜಿಲೆಂಡ್ ಪ್ರಧಾನಿ ಹಠಾತ್ ರಾಜೀನಾಮೆ ಘೋಷಣೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 45 ವರ್ಷಗಳಲ್ಲಿಯೇ ಮೊದಲ ಬಾರಿಗೆ ರಾಮ್‌ಪುರ ಚುನಾವಣೆಯಿಂದ ದೂರ ಉಳಿದ ಅಜಂ ಖಾನ್ ಕುಟುಂಬ

    45 ವರ್ಷಗಳಲ್ಲಿಯೇ ಮೊದಲ ಬಾರಿಗೆ ರಾಮ್‌ಪುರ ಚುನಾವಣೆಯಿಂದ ದೂರ ಉಳಿದ ಅಜಂ ಖಾನ್ ಕುಟುಂಬ

    ಲಕ್ನೋ: 1977ರ ನಂತರ 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ (Samajwadi Party leader Azam Khan) ಮತ್ತು ಅವರ ಕುಟುಂಬಸ್ಥರು ರಾಮ್‌ಪುರ (Rampur) ವಿಧಾನಸಭಾ ಸ್ಥಾನ  (Assembly seat) ಚುನಾವಣೆಗೆ ಸ್ಪರ್ಧಿಸುತ್ತಿಲ್ಲ.

    ದ್ವೇಷ ಭಾಷಣ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಅಜಂ ಖಾನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಬಳಿಕ ತೆರವಾದ ಸ್ಥಾನಕ್ಕೆ ಡಿಸೆಂಬರ್ 5 ರಂದು ಉಪಚುನಾವಣೆ ನಡೆಯಲಿದೆ. ಸಮಾಜವಾದಿ ಪಕ್ಷವು ಅಜಂ ಖಾನ್ ಅವರ ಪತ್ನಿ ತಂಜೀನ್ ಫಾತಿಮಾ (Tanzeen Fatima) ಅಥವಾ ಅವರ ಸೊಸೆಯನ್ನು ಕಣಕ್ಕಿಳಿಸುತ್ತಿಲ್ಲ. ಬದಲಾಗಿ ಅಸೀಮ್ ರಜಾಗೆ (Asim Raza) ಟಿಕೆಟ್ ನೀಡಿದೆ. ಅಜಂ ಖಾನ್ ಅಥವಾ ಅವರ ಕುಟುಂಬಸ್ಥರು 1977 ರಿಂದ ಈ ಕ್ಷೇತ್ರದಿಂದ ನಿರಂತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

    ಅಜಂ ಖಾನ್ ಅವರು 1977 ರಿಂದ 2022 ರವರೆಗೆ 12 ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅದರಲ್ಲಿ ಹತ್ತು ಬಾರಿ ಗೆದ್ದಿದ್ದಾರೆ ಮತ್ತು ಎರಡು ಬಾರಿ ಸೋತಿದ್ದಾರೆ. 2019ರಲ್ಲಿ ಅಜಂ ಖಾನ್ ಸಂಸತ್ ಸದಸ್ಯರಾದ ಬಳಿಕ ನಡೆದ ಉಪಚುನಾವಣೆಯಲ್ಲಿ ಅವರ ಪತ್ನಿ ತಜೀನ್ ಫಾತ್ಮಾ ಸ್ಪರ್ಧಿಸಿ ಗೆದ್ದಿದ್ದರು. ಇದೀಗ ಅಸೀಂ ರಾಜಾ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದನ್ನೂ ಓದಿ: ಇರಾನ್‍ನಲ್ಲಿ ಹೆಚುತ್ತಿರುವ ಹಿಜಬ್ ವಿರೋಧಿ ಪ್ರತಿಭಟನೆ- ಮೆಟ್ರೋದಲ್ಲಿ ಮಹಿಳೆಯರನ್ನು ಥಳಿಸಿದ ಪೊಲೀಸರು

    ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ಕಾಂಗ್ರೆಸ್ (Congress) ಪ್ರಬಲ ಶಕ್ತಿ ಹೊಂದಿದ್ದ ಪಕ್ಷವಾಗಿತ್ತು. 1980 ಮತ್ತು 1993ರ ನಡುವೆ, ಅಜಂ ಖಾನ್ ಐದು ಬಾರಿ ವಿಧಾನಸಭಾ ಚುನಾವಣೆಗಳಲ್ಲಿ ಸತತವಾಗಿ ಗೆದ್ದರು. ಆದರೆ 1996ರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ನ ಅಫ್ರೋಜ್ ಅಲಿ ಖಾನ್ ವಿರುದ್ಧ ಸೋತರು. ಅಜಂ ಖಾನ್ ಅವರನ್ನು ರಾಜ್ಯಸಭೆಗೆ ಕಳುಹಿಸಲಾಯಿತು. ನಂತರ ಅವರು 2002 ಮತ್ತು 2022ರ ನಡುವೆ ಮತ್ತೆ ಸತತವಾಗಿ ಐದು ಬಾರಿ ಚುನಾವಣೆಯಲ್ಲಿ ಗೆದ್ದರು. ಇದನ್ನೂ ಓದಿ: ಡೇಟಿಂಗ್ ಆ್ಯಪ್, ಲೀವ್ ಇನ್ ಟುಗೆದರ್ ಹಾವಳಿ- ಕಾಲೇಜುಗಳಲ್ಲಿ ಮಹಿಳಾ ಆಯೋಗದಿಂದ ಸ್ಪೆಷಲ್ ಕ್ಲಾಸ್

    ಅಜಂ ಖಾನ್ ಮತ್ತು ಅವರ ಕುಟುಂಬ ಕಾನೂನು ಮೊಕದ್ದಮೆಗಳನ್ನು ಎದುರಿಸಿದೆ. 2014ರಲ್ಲಿ ಅಖಿಲೇಶ್ ಯಾದವ್ (Akhilesh Yadav) ಸರ್ಕಾರದಲ್ಲಿ ಸಚಿವರಾಗಿದ್ದಾಗ ಸರ್ಕಾರಿ ಭೂಮಿಯನ್ನು ಕಬಳಿಸಲು ಸಂಚು ರೂಪಿಸಿದ್ದ ಆರೋಪದಡಿ ಅಜಂ ಖಾನ್ ಅವರ ಪತ್ನಿ ಮತ್ತು ಪುತ್ರನ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿತ್ತು.

    ನಂತರ ದ್ವೇಷ ಭಾಷಣ ಮಾಡಿದ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಾಯವು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಅಜಂ ಖಾನ್ ಅವರನ್ನು ಅಸೆಂಬ್ಲಿ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನಿಜವಾದ ಮುಸ್ಲಿಮರು ಎಂದಿಗೂ ಬಿಜೆಪಿಗೆ ವೋಟ್ ಹಾಕಲ್ಲ: ಇಕ್ಬಾಲ್ ಮೊಹಮೂದ್

    ನಿಜವಾದ ಮುಸ್ಲಿಮರು ಎಂದಿಗೂ ಬಿಜೆಪಿಗೆ ವೋಟ್ ಹಾಕಲ್ಲ: ಇಕ್ಬಾಲ್ ಮೊಹಮೂದ್

    ಲಕ್ನೋ: ಮಹಾತ್ಮ ಗಾಂಧಿಯನ್ನು (Mahatma Gandhi) ಗುಂಡಿಕ್ಕಿ ಕೊಂದ ನಾಥುರಾಮ್ ಗೋಡ್ಸೆಯನ್ನು ಆರಾಧಿಸುವವರನ್ನು ಎಂದಿಗೂ ನಂಬಲು ಸಾಧ್ಯವಿಲ್ಲ. ಹೀಗಾಗಿ ಮುಸ್ಲಿಮರು ಎಂದಿಗೂ ಬಿಜೆಪಿಗೆ ಮತ ಹಾಕಲು ಸಾಧ್ಯವಿಲ್ಲ ಎಂದು ಸಮಾಜವಾದಿ ಪಕ್ಷದ (Samajwadi Party) ಸಂಭಾಲ್  (Sambhal) ಶಾಸಕ ಇಕ್ಬಾಲ್ ಮೊಹಮೂದ್ (Iqbal Mehmood) ಹೇಳಿದ್ದಾರೆ.

    ಇದೇ ವೇಳೆ ಅಸಾದುದ್ದೀನ್ ಓವೈಸಿ (Asaduddin Owaisi) ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (All India Majlis-e-Ittehadul Muslimeen) (ಎಐಎಂಐಎಂ) ಅನ್ನು ಬಿಜೆಪಿಯ ಬಿ ಟೀಮ್ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬೆಲೆ ನಿಗದಿ ಪಡಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದ 100ಕ್ಕೂ ಅಧಿಕ ರೈತರು ವಶಕ್ಕೆ

    ಇತ್ತೀಚೆಗಷ್ಟೇ ಲಕ್ನೋದಲ್ಲಿ ಪಸ್ಮಾಂಡ ಮುಸ್ಲಿಮರೊಂದಿಗೆ ಬಿಜೆಪಿ ಸಭೆ ನಡೆಸಿತ್ತು. ಈ ಕುರಿತಂತೆ ಪ್ರತಿಕ್ರಿಯಿಸಿದ ಅವರು, “ನಿಜವಾದ ಮುಸ್ಲಿಂ ಎಂದಿಗೂ ಬಿಜೆಪಿಗೆ ಮತ ಹಾಕಲು ಸಾಧ್ಯವಿಲ್ಲ. ಏಕೆಂದರೆ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಎಂದಿಗೂ ಮುಸ್ಲಿಮರಾಗಲು ಸಾಧ್ಯವಿಲ್ಲ. ಮಹಾತ್ಮ ಗಾಂಧಿಯ ಕೊಂದ ನಾಥುರಾಮ್ ಗೋಡ್ಸೆಯನ್ನು (Nathuram Godse) ಆರಾಧಿಸುವ ಜನರನ್ನು ಮುಸ್ಲಿಮರು ಎಂದಿಗೂ ನಂಬುವುದಿಲ್ಲ ಎಂದು ಹೇಳಿದ್ದಾರೆ.

    ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ಮುಖ್ಯಸ್ಥೆ ಮಾಯಾವತಿ ಅವರು ಸಿಬಿಐ ಮತ್ತು ಇಡಿಯಂತಹ ಕೇಂದ್ರೀಯ ಸಂಸ್ಥೆಗಳಿಗೆ ಹೆದರುತ್ತಿದ್ದಾರೆ. ಹಾಗಾಗಿ ಅವರು ಬಿಜೆಪಿ ವಿರುದ್ಧ ಎಂದಿಗೂ ಮಾತನಾಡುವುದಿಲ್ಲ. ಆದರೆ ಬಿಜೆಪಿ ವಿರುದ್ಧ ಹೋರಾಡುತ್ತಿರುವ ಏಕೈಕ ಪಕ್ಷ ಎಂದರೆ ಅದು ಸಮಾಜವಾದಿ ಪಕ್ಷ ಎಂದು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡ್ತಿದ್ದಾರೆ – ಚೇತನ್ ವಿರುದ್ಧ ಮಡಿಕೇರಿಯಲ್ಲಿ ದೂರು ದಾಖಲು

    Live Tv
    [brid partner=56869869 player=32851 video=960834 autoplay=true]

  • ದೇಶದ ತುರ್ತು ಪರಿಸ್ಥಿತಿಯ ಸಂದರ್ಭ ಯಾದವ್ ಜೀ ಸೈನಿಕರಾಗಿದ್ದರು: ಮೋದಿ ಸಂತಾಪ

    ದೇಶದ ತುರ್ತು ಪರಿಸ್ಥಿತಿಯ ಸಂದರ್ಭ ಯಾದವ್ ಜೀ ಸೈನಿಕರಾಗಿದ್ದರು: ಮೋದಿ ಸಂತಾಪ

    ಲಕ್ನೋ: ಉತ್ತರ ಪ್ರದೇಶದ (Uttar Pradesh)  ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ (Samajwadi Party) ವರಿಷ್ಠ ಮುಲಾಯಂ ಸಿಂಗ್ ಯಾದವ್ (Mulayam Singh Yadav) ದೇಶದಲ್ಲಿ ಉಂಟಾಗಿದ್ದ ತುರ್ತು ಪರಿಸ್ಥಿತಿ (Emergency) ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಪ್ರಮುಖ ಸೈನಿಕರಾಗಿ ಹೋರಾಡಿದವರು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೊಗಳಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಮುಲಾಯಂ ಸಿಂಗ್ ಯಾದವ್ ಜೀ ಉತ್ತರಪ್ರದೇಶ ಮತ್ತು ರಾಷ್ಟ್ರೀಯ ರಾಜಕೀಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡವರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಪ್ರಮುಖ ಸೈನಿಕರಾಗಿದ್ದರು. ರಕ್ಷಣಾ ಸಚಿವರಾಗಿ ಅವರು ಬಲಿಷ್ಠ ಭಾರತಕ್ಕಾಗಿ ಶ್ರಮಿಸಿದರು. ಅವರ ಸಂಸದೀಯ ಮಧ್ಯಸ್ಥಿಕೆಗಳು ಮಹತ್ವವನ್ನು ಪಡೆದುಕೊಂಡಿತ್ತು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಹೆಚ್ಚಿಸಲು ಒತ್ತು ನೀಡಿದ್ದವು. ಇದನ್ನೂ ಓದಿ: ಯುಪಿ ಮಾಜಿ ಸಿಎಂ ಮುಲಾಯಂ ಸಿಂಗ್‌ ಯಾದವ್‌ ನಿಧನ

    ಮುಲಾಯಂ ಸಿಂಗ್ ಯಾದವ್ ಜೀ ಅಸಾಧಾರಣ ವ್ಯಕ್ತಿತ್ವ ಹೊಂದಿದ್ದರು. ಜನರ ಸಮಸ್ಯೆಗಳ ಬಗ್ಗೆ ಸಂವೇದನಾಶೀಲರಾಗಿದ್ದ ಅವರು ಜನರಿಗೆ ಯಾವತ್ತು ಸಹಾಯಕ್ಕಾಗಿ ತುಡಿಯುತ್ತಿದ್ದರು. ಹಾಗಾಗಿ ನೆಲದ ನಾಯಕರಾಗಿ ವ್ಯಾಪಕವಾಗಿ ಹೆಸರು ಗಳಿಸಿದ್ದರು. ತುಂಬಾ ಶ್ರದ್ಧೆಯ ಕೆಲಸಗಾರರಾಗಿದ್ದ ಮುಲಾಯಂ ಸಿಂಗ್ ಯಾದವ್ ಜೀ, ಲೋಕನಾಯಕ್ ಜೆಪಿ ಮತ್ತು ಡಾ. ಲೋಹಿಯಾ ಅವರ ಆದರ್ಶಗಳನ್ನು ಜನಪ್ರಿಯಗೊಳಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಇದನ್ನೂ ಓದಿ: ಮುಲಾಯಂ ಸಿಂಗ್‌ ಯಾದವ್ ನಿಧನ – ಸಿಎಂ ಬೊಮ್ಮಾಯಿ ಸಂತಾಪ

    ನಾವು ರಾಜ್ಯಗಳ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದಾಗ ನಾನು ಮುಲಾಯಂ ಸಿಂಗ್ ಯಾದವ್ ಜೀ ಅವರೊಂದಿಗೆ ಅನೇಕ ಸಂವಾದಗಳನ್ನು ನಡೆಸಿದೆ. ಆ ಬಳಿಕ ನಮ್ಮಿಬ್ಬರೊಂದಿಗೆ ನಿಕಟ ಒಡನಾಟವು ಮುಂದುವರಿಯಿತು. ನಾನು ಯಾವಾಗಲೂ ಅವರ ಅಭಿಪ್ರಾಯಗಳನ್ನು ಕೇಳಲು ಎದುರು ನೋಡುತ್ತಿದ್ದೆ. ಅವರ ನಿಧನ ನನಗೆ ನೋವು ತಂದಿದೆ. ಅವರ ಕುಟುಂಬಕ್ಕೆ ಮತ್ತು ಲಕ್ಷಾಂತರ ಬೆಂಬಲಿಗರಿಗೆ ದು:ಖವನ್ನು ಸಹಿಸುವ ಶಕ್ತಿ ದೇವರು ಕರುಣಿಸಲಿ ಸಂತಾಪ. ಓಂ ಶಾಂತಿ ಎಂದು ಬರೆದುಕೊಂಡು ಮೋದಿ ಟ್ವೀಟ್ ಮಾಡಿದ್ದಾರೆ.

    ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 82 ವರ್ಷದ ಮುಲಾಯಂ ಸಿಂಗ್ ಅವರನ್ನು ಅ. 2ರಂದು ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದಿನಿಂದಲೂ ಅವರಿಗೆ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಕೊನೆಯುಸಿರೆಳೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮುಲಾಯಂ ಸಿಂಗ್‌ ಯಾದವ್ ನಿಧನ – ಸಿಎಂ ಬೊಮ್ಮಾಯಿ ಸಂತಾಪ

    ಮುಲಾಯಂ ಸಿಂಗ್‌ ಯಾದವ್ ನಿಧನ – ಸಿಎಂ ಬೊಮ್ಮಾಯಿ ಸಂತಾಪ

    ಬೆಂಗಳೂರು: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್(Mulayam Singh Yadav) ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ರಾಮ್ ಮನೋಹರ್ ಲೋಹಿಯಾ, ರಾಜ್ ನಾರಾಯಣ್ ಅವರಂಥ ನಾಯಕರ ಮಾರ್ಗದರ್ಶನದಲ್ಲಿ ಮುನ್ನೆಲೆಗೆ ಬಂದ ಮುಲಾಯಂ ಸಿಂಗ್ ಅವರು ತುರ್ತು ಪರಿಸ್ಥಿತಿ ವಿರೋಧಿಸಿ ಸೆರೆವಾಸ ಅನುಭವಿಸಿದ್ದರು. ಸಮಾಜವಾದಿ ಪಕ್ಷವನ್ನು ಸ್ಥಾಪಿಸಿ, ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಮುಲಾಯಂ ಸಿಂಗ್ ಅವರು ಕೇಂದ್ರ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅವರ ನಿಧನದಿಂದ ರಾಷ್ಟ್ರವು ಮುತ್ಸದ್ದಿ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ. ಇದನ್ನೂ ಓದಿ: ಯುಪಿ ಮಾಜಿ ಸಿಎಂ ಮುಲಾಯಂ ಸಿಂಗ್‌ ಯಾದವ್‌ ನಿಧನ

    ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಭಗವಂತ ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಯುಪಿ ಮಾಜಿ ಸಿಎಂ ಮುಲಾಯಂ ಸಿಂಗ್‌ ಯಾದವ್‌ ನಿಧನ

    ಯುಪಿ ಮಾಜಿ ಸಿಎಂ ಮುಲಾಯಂ ಸಿಂಗ್‌ ಯಾದವ್‌ ನಿಧನ

    ಗುರುಗ್ರಾಮ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್‌ (Mulayam Singh Yadav) ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.

    ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ 82 ವರ್ಷದ ಮುಲಾಯಂ ಸಿಂಗ್‌ ಅವರನ್ನು ಅ. 2ರಂದು ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದಿನಿಂದಲೂ ಅವರಿಗೆ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

    “ಜೀವ ರಕ್ಷಕ ಔಷಧಗಳ ಹೊರತಾಗಿಯೂ ಮುಲಾಯಂ ಸಿಂಗ್‌ ಅವರ ಆರೋಗ್ಯ ಇಂದು ಕ್ಷೀಣಿಸಿದೆ. ಆಸ್ಪತ್ರೆಯ ಐಸಿಯುನಲ್ಲಿ ತಜ್ಞರ ತಂಡದಿಂದ ಚಿಕಿತ್ಸೆ ಮುಂದುವರಿಯುತ್ತಿದೆ” ಎಂದು ಡಾ. ಸಂಜೀವ್‌ ಗುಪ್ತಾ ಭಾನುವಾರ ಹೇಳಿಕೆ ನೀಡಿದ್ದರು.

    ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್‌ ಅವರ ತಂದೆ ಮುಲಾಯಂ ಅವರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.

    Live Tv
    [brid partner=56869869 player=32851 video=960834 autoplay=true]