Tag: ಸಮರ್ಥ್ ಕಡ್ಕೊಳ್

  • ವಿಶ್ವ ಎಡಚರ ದಿನಕ್ಕೆ ನಾಯಕಿಯನ್ನು ಪರಿಚಯಿಸಿದೆ ದಿಗಂತ್ ನಟನೆಯ ಸಿನಿಮಾ ಟೀಮ್

    ವಿಶ್ವ ಎಡಚರ ದಿನಕ್ಕೆ ನಾಯಕಿಯನ್ನು ಪರಿಚಯಿಸಿದೆ ದಿಗಂತ್ ನಟನೆಯ ಸಿನಿಮಾ ಟೀಮ್

    ದೂದ್ ಪೇಡ ದಿಗಂತ ನಟಿಸುತ್ತಿರುವ ಹೊಸ ಸಿನಿಮಾ ಎಡಗೈಯೇ ಅಪಘಾತಕ್ಕೆ ಕಾರಣ. ಇವತ್ತು ವಿಶ್ವ ಎಡಚರ ದಿನದ ಅಂಗವಾಗಿ ಚಿತ್ರತಂಡ ನಾಯಕಿಯನ್ನು ಪರಿಚಯಿಸಿದೆ. ಧನು ಹರ್ಷ ಎಂಬ ಯುವ ಪ್ರತಿಭೆ ಈ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ವಿಶ್ವ ಎಡಚರ ದಿನದ ಅಂಗವಾಗಿ ನಾಯಕಿಯ ಇಂಟ್ರೂಡಕ್ಷನ್ ಟೀಸರ್ ನ್ನು ಚಿತ್ರತಂಡ ರಿಲೀಸ್ ಮಾಡಿದೆ.

    ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾದಲ್ಲಿ ಧನು ದಿಗಂತ್ ಗೆ ಜೋಡಿಯಾಗಿ ನಟಿಸುತ್ತಿದ್ದು, ರಾಧಿಕಾ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ‘ಎಡಗೈ’ ಆಧಾರಿತ ಪರಿಕಲ್ಪನೆ ಸಿನಿಮಾವಾಗಿರೋದ್ರಿಂದ  ಈ ಪಾತ್ರ ತಮಗೆ ವಿಶೇಷವಾಗಿದ್ದು, ಡಿಫರೆಂಟ್ ಶೇಡ್ ನಲ್ಲಿ ಕಾಣಿಸಿಕೊಳ್ಳುವುದಾಗಿ ಧನು ಹರ್ಷ ಹೇಳಿದ್ದಾರೆ. ಇದನ್ನೂ ಓದಿ:ನಾನು ಮತ್ತು ರೂಪೇಶ್ ಶೆಟ್ಟಿ ಜಸ್ಟ್ ಫ್ರೆಂಡ್ಸ್, ಅಂಥದ್ದೇನೂ ಇಲ್ಲ: ಸಾನ್ಯಾ ಅಯ್ಯರ್

    ಸಮರ್ಥ್ ಬಿ ಕಡ್ಕೋಲ್ ನಿರ್ದೇಶನದಲ್ಲಿ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ಮೂಡಿಬರ್ತಿದ್ದು, ಆಗಸ್ಟ್ ತಿಂಗಳಾಂತ್ಯಕ್ಕೆ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಗುರುದತ್ತ ಗಾಣಿಗ ಮತ್ತು ಸಮರ್ಥ ಕಡ್ಕೋಳ್ ಜಂಟಿಯಾಗಿ ನಿರ್ಮಿಸಿರುವ ಚಿತ್ರಕ್ಕೆ ಅಭಿಮನ್ಯು ಸದಾನಂದ್ ಛಾಯಾಗ್ರಹಣವಿದೆ. ಈ ಹಿಂದೆ ದಿಗಂತ್ ಫಸ್ಟ್ ಲುಕ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಇದೀಗ ನಾಯಕಿ ಇಂಟ್ರೂಡಕ್ಷನ್ ಟೀಸರ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

    Live Tv
    [brid partner=56869869 player=32851 video=960834 autoplay=true]