ಬೆಂಗಳೂರು: ಮಳೆ ಬಂದರೆ ಅಂಡರ್‌ಪಾಸ್‌ನಲ್ಲಿ ಸವಾರರು ದ್ವಿಚಕ್ರ ವಾಹನ ನಿಲ್ಲಿಸಿದರೆ ಇನ್ನು ಮುಂದೆ ದಂಡ ಕಟ್ಟಬೇಕಾಗುತ್ತದೆ.
ಹೌದು. ಒಂದು ವೇಳೆ ವಾಹನ ಏನಾದರೂ ನಿಲ್ಲಿಸಿದರೆ ಸಂಚಾರಿ ಪೊಲೀಸರು ದಂಡ ಹಾಕಲಿದ್ದಾರೆ. ಅಂಡರ್ ಪಾಸ್‌ನಲ್ಲಿ ವಾಹನ ನಿಲ್ಲಿಸುವುದರಿಂದ ಹಿಂಬದಿಯಿಂದ ಬರುವ ವಾಹನ ಅಪಘಾತ ಸಂಭವಿಸಿದೆ. ಒಟ್ಟು 3 ಕಡೆ ಈ ರೀತಿಯ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮೈಸೂರಿನಲ್ಲಿ ಹಂದಿಜ್ವರಕ್ಕೆ ತುಂಬು ಗರ್ಭಿಣಿ ಬಲಿ
ಈ ಅಪಘಾತವನ್ನು ತಡೆಯುವ ಉದ್ದೇಶದಿಂದ ಪೊಲೀಸರು ದಂಡ ಪ್ರಯೋಗಕ್ಕೆ ಮುಂದಾಗಿದ್ದಾರೆ. ಸಂಚಾರಿ ಪೊಲೀಸರ ಕ್ರಮವನ್ನು ಸಚಿವ ಸೋಮಣ್ಣ ಸಮರ್ಥನೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಅಂಡರ್‌ಪಾಸ್‌ನಲ್ಲಿ ದ್ವಿಚಕ್ರ ವಾಹನ ನಿಲ್ಲಿಸುತ್ತಿದ್ದಾರೆ. ಭಾರೀ ಸಂಖ್ಯೆಯಲ್ಲಿ ಬೈಕ್/ ಸ್ಕೂಟರ್‌ಗಳು ನಿಲ್ಲುವುದರಿಂದ ಇತರೇ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಈ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ಈಗ ಸಂಚಾರಿ ಪೊಲೀಸರು ದಂಡ ಹಾಕಲು ಮುಂದಾಗಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮಂಡ್ಯ: ವಸತಿ ಪ್ರದೇಶದಲ್ಲಿ ಕೊರೊನಾ ಟೆಸ್ಟ್ ಮಾಡುವುದು ತಪ್ಪು ಎಂದು ಹೇಳುವ ಮೂಲಕ ಮಾಜಿ ಸಂಸದ ಶಿವರಾಮೇಗೌಡ ತಮ್ಮ ಪಕ್ಷದ ಎಂಎಲ್‍ಸಿ ಶಿವರಾಮೇಗೌಡರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮಂಡ್ಯದಲ್ಲಿ ಜೆಡಿಎಸ್ ಎಂಎಲ್‍ಸಿ ಶ್ರೀಕಂಠೇಗೌಡ ಮತ್ತು ಅವರ ಪುತ್ರ ಪತ್ರಕರ್ತರ ಮೇಲೆ ಮಾಡಿದ ಹಲ್ಲೆಯ ವಿಚಾರವಾಗಿ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಶಿವರಾಮೇಗೌಡ, ಮಾಧ್ಯಮ ಮಿತ್ರರ ಮೇಲೆ ಹಲ್ಲೆ ಮಾಡಿದ್ದು ತಪ್ಪು. ಅದನ್ನು ನಾನು ಖಂಡಿಸುತ್ತೇನೆ. ಆದರೆ ವಸತಿ ಪ್ರದೇಶದ ಮಧ್ಯದಲ್ಲಿ ಇರುವ ಅಂಬೇಡ್ಕರ್ ಭವನದಲ್ಲಿ ಕೊರೊನಾ ಟೆಸ್ಟ್ ಮಾಡಲು ಅಧಿಕಾರಿಗಳು ಅನುಮತಿ ನೀಡಿದ್ದು ಎಷ್ಟು ಸರಿ? ಅಂತಹ ಅಧಿಕಾರಿಗಳುನ್ನು ಅಮಾನತು ಮಾಡಬೇಕು ಎಂದರು.
ಕೊರೊನಾ ವಾರಿಯರ್ಸ್‍ಗೆ ಪೊಲೀಸರಿಗೆ ಮತ್ತು ಪತ್ರಕರ್ತರಿಗೆ ಕೊರೊನಾ ಟೆಸ್ಟ್ ಮಾಡಬೇಡಿ ಎಂದು ಹೇಳಿಲ್ಲ. ಅವರ ಆರೋಗ್ಯ ತಪಾಸಣೆಯಾಗಬೇಕು. ಆದರೆ ಅದನ್ನು ವಸತಿ ಪ್ರದೇಶದ ಮಧ್ಯೆ ಇರುವ ಭವನದಲ್ಲಿ ಮಾಡಿದರೆ, ಜನರು ಸಾಮಾನ್ಯವಾಗಿಯೇ ಭಯಪಡುತ್ತಾರೆ. ಜೊತೆಗೆ ಶ್ರೀಕಂಠೇಗೌಡ ಅವರ ಮನೆಯೂ ಅದೇ ಪ್ರದೇಶದಲ್ಲಿ ಇರುವ ಕಾರಣ ಅವರು ಅದನ್ನು ಕೇಳಲು ಬಂದಿದ್ದಾರೆ ಅಷ್ಟೇ ಎಂದು ಶಿವರಾಮೇಗೌಡ ಹೇಳಿದ್ದಾರೆ.
ನಾನು ಜಿಲ್ಲಾಧಿಕಾರಿಗೆ ಮನವಿ ಮಾಡುತ್ತೇನೆ ಅಲ್ಲಿ ಕೊರೊನಾ ಪರೀಕ್ಷೆ ಮಾಡಲು ಅನುಮತಿ ಕೊಟ್ಟ ಅಧಿಕಾರಿಯನ್ನು ಅಮಾನತು ಮಾಡಬೇಕು. ಈ ಕೊರೊನಾ ಪರೀಕ್ಷೆಯನ್ನು ಊರಿನಿಂದ ಹೊರಗೆ ಹಲವಾರು ಕಟ್ಟಡಗಳು ಇವೆ ಅಲ್ಲಿ ಮಾಡಬೇಕು. ಅದನ್ನು ಬಿಟ್ಟು ಊರ ಒಳಗೆ ಯಾಕೆ ಮಾಡಬೇಕು. ಅಲ್ಲಿನ ಸ್ಥಳೀಯ ನಿವಾಸಿಗಳು ಹೆದರಿಕೊಂಡು ನನಗೆ 50 ಜನ ಕರೆ ಮಾಡಿದ್ದರು. ಕೆಲ ಸ್ಥಳೀಯ ಮಟ್ಟದ ಅಧಿಕಾರಿಗಳ ಮಾತನನ್ನು ಸರ್ಕಾರ ಕೇಳಬಾರದು ಎಂದು ಸಮರ್ಥನೆ ಮಾಡಿಕೊಂಡರು.
ನಡೆದಿದ್ದೇನು?
ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಇಂದು ಪತ್ರಕರ್ತರ ಕೋವಿಡ್-19 ಟೆಸ್ಟ್ ಇತ್ತು. ಆದರೆ ಅಂಬೇಡ್ಕರ್ ಭವನದ ಬಳಿಯೇ ವಿಧಾನಸಭಾ ಸದಸ್ಯ ಕೆ.ಟಿ ಶ್ರೀಕಂಠೇಗೌಡ ಅವರ ಮನೆಯಿದೆ. ಹೀಗಾಗಿ ಇಲ್ಲಿ ಟೆಸ್ಟ್ ಮಾಡಬೇಡಿ ಎಂದು ತನ್ನ ಸಂಗಡಿಗರನ್ನು ಕರೆದುಕೊಂಡು ಬಂದು ಖ್ಯಾತೆ ತೆಗೆದಿದ್ದಾರೆ. ಅಲ್ಲದೆ ಕೋವಿಡ್ ಟೆಸ್ಟ್ ನಿಲ್ಲಿಸುವಂತೆ ಜಗಳ ಮಾಡಿದ್ದಾರೆ. ಇದೇ ವೇಳೆ ಕೆಟಿಎಸ್ ಪುತ್ರ ಪತ್ರಕರ್ತರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ಬುಧವಾರ ಬೆಂಗಳೂರಿನ ಸಾದಿಕ್ ನಗರದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ನಡೆದ ಹಲ್ಲೆಯನ್ನು ಶಾಸಕ ಜಮೀರ್ ಅಹಮದ್ ಅವರು ಸಮರ್ಥಿಸಿಕೊಂಡಿದ್ದಾರೆ.
ಇಂದು ಸಿಎಂ ಅವರ ಜೊತೆ ಸಭೆಯಲ್ಲಿ ಭಾಗಿಯಾಗಿದ್ದ ಜಮೀರ್ ಅಹಮದ್, ಬಳಿಕ ಹೊರಗೆ ಬಂದು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಆಶಾ ಕಾರ್ಯಕರ್ತೆಯರಿಗೆ ಯಾರು ಅನುಮತಿ ಕೊಟ್ಟಿರುವುದು. ಸರ್ಕಾರದ ಅನುಮತಿ ಪಡೆದುಕೊಂಡು ಅವರು ಅಲ್ಲಿಗೆ ಹೋಗಿಲ್ಲ. ಅದಕ್ಕೆ ಹಲ್ಲೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ನಾನು ಕೂಡ ಘಟನೆ ನಡೆದ ಸ್ಥಳಕ್ಕೆ ಹೋಗಿ ಬಂದಿದ್ದೇನೆ. ಆಶಾ ಕಾರ್ಯಕರ್ತೆಯರು ಆರೋಗ್ಯ ತಪಾಸಣೆ ಮಾಡಬೇಕು ಎಂದರೆ ಸರ್ಕಾರದ ಅನುಮತಿ ಪಡೆಯಬೇಕು. ಆದರೆ ಅವರು ಅಲ್ಲಿಗೆ ಹೆಲ್ತ್ ಚೆಕಪ್ ಮಾಡಲು ಹೋಗಿರಲಿಲ್ಲ. ಮನೆ ಮನೆಗೆ ಹೋಗಿ ಎಷ್ಟು ಜನ ಇದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗಾಗಿ ಇವರು ಎನ್.ಆರ್.ಸಿ ವಿಚಾರವಾಗಿ ಬಂದಿದ್ದಾರೆ ಎಂದು ಅವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಜಮೀರ್ ಅವರು ಸಮರ್ಥನೆ ಮಾಡಿಕೊಂಡಿದ್ದಾರೆ. ಇದನ್ನು ಓದಿ: ಬೆಂಗ್ಳೂರಿನಲ್ಲಿ ನರ್ಸ್, ಆಶಾ ಕಾರ್ಯಕರ್ತೆಯರ ಮೇಲೆ ಗ್ಯಾಂಗ್ ದಾಳಿ
ಇಂದು ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದವರು ಪರೀಕ್ಷೆ ಮಾಡಿಸಿಕೊಳ್ಳಲು ಮನವಿ ಮಾಡುವಂತೆ ಕೇಳಿ ಸಿಎಂ ಸಭೆ ಕರೆದಿದ್ದರು. ಅದಕ್ಕೆ ನಾವೆಲ್ಲ ಬಂದು ಬೆಂಬಲ ನೀಡಿದ್ದೇವೆ. ಪರೀಕ್ಷೆ ಮಾಡಿಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಅದರಿಂದ ನಮಗೆ ಒಳ್ಳೆಯದು. ನಮ್ಮ ಕ್ಷೇತ್ರದಿಂದಲೂ 11 ಜನ ನಿಜಾಮುದ್ದೀನ್‍ಗೆ ಹೋಗಿ ಬಂದಿದ್ದರು. ಅವರನ್ನು ನಾನೇ ಪರೀಕ್ಷೆ ಮಾಡಿಸಿದ್ದೆ. ಅವರಿಗೆ ನೆಗೆಟಿವ್ ಬಂದಿದೆ. ಹಾಗಾಗಿ ಅಲ್ಲಿಗೇ ಹೋಗಿ ಬಂದವರು ಸ್ವತಃ ತಾವೇ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಇದೇ ವೇಳೆ ಜಮೀರ್ ಮನವಿ ಮಾಡಿದರು.
ಸಿಎಂ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪನವ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಡಿಸಿಎಂ ಅಶ್ವಥ್ ನಾರಾಯಣ್, ಕಂದಾಯ ಸಚಿವ ಆರ್.ಅಶೋಕ್, ಸಿ.ಎಂ ಇಬ್ರಾಹಿಂ, ಜಮೀರ್ ಅಹಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕ ಹ್ಯಾರಿಸ್ ಮತ್ತು ರಿಜ್ವಾನ್ ಅರ್ಷಾದ್ ಭಾಗಿಯಾಗಿದ್ದರು. ಈ ವೇಳೆ ದೆಹಲಿಯ ನಿಜಾಮುದ್ದೀನ್ ಜಮಾತ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಪತ್ತೆ ಕಾರ್ಯಕ್ಕೆ ಸಹಕಾರಿಸುವಂತೆ ಸಿಎಂ ಮುಸ್ಲಿಂ ನಾಯಕರಲ್ಲಿ ಸಿಎಂ ಮನವಿ ಮಾಡಿಕೊಂಡರು.
ಬೆಂಗಳೂರು: ಪ್ರತ್ಯೇಕ ಲಿಂಗಾಯಿತ ಧರ್ಮ ವಿಚಾರಕ್ಕೆ ಕೈ ಹಾಕಿ ತಪ್ಪು ಮಾಡಿದ್ದೇವೆ ಎನ್ನುವ ಹೇಳಿಕೆಗೆ ನಾನು ಬದ್ಧನಾಗಿದ್ದು, ಪ್ರಜ್ಞಾ ಪೂರ್ವಕವಾಗಿಯೇ ಆತ್ಮಲೋಕನ ಮಾಡಿಕೊಂಡು ನಾನು ಹೇಳಿಕೆ ನೀಡಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಮರ್ಥನೆ ನೀಡಿದ್ದಾರೆ.
ಪತ್ಯೇಕ ಲಿಂಗಾಯತ ಧರ್ಮಕ್ಕೆ ವಿಚಾರಕ್ಕೆ ಕೈ ಹಾಕಿ ತಪ್ಪು ಮಾಡಿದ್ವಿ ಎನ್ನುವ ಹೇಳಿಕೆಗೆ ತಮ್ಮ ನಿವಾಸದಲ್ಲಿ ಪ್ರತಿಕ್ರಿಯಿಸಿದ ಅವರು, ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ಪ್ರಜ್ಞಾ ಪೂರ್ವಕವಾಯೇ ಆತ್ಮಾವಲೋಕನ ಮಾಡಿಕೊಂಡು ನಾನು ಹೇಳಿಕೆ ನೀಡಿದ್ದೇನೆ. ಯಾವತ್ತು ಧರ್ಮ, ಜಾತಿ ವಿಚಾರದಲ್ಲಿ ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ಹಸ್ತಕ್ಷೇಪ ಮಾಡಬಾರದು. ರಾಜಕೀಯದಲ್ಲಿ ಧರ್ಮ ಇರಬೇಕೇ ಹೊರತು, ಧರ್ಮದಲ್ಲಿ ರಾಜಕೀಯ ಇರಬಾರದು ಎಂದು ತಮ್ಮ ಹೇಳಿಕೆಗೆ ಸಮರ್ಥಿಸಿಕೊಂಡರು.
ಈ ಬಗ್ಗೆ ಬೇರೆಯವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಿಲ್ಲ. ನನ್ನ ಮನಸ್ಸಿಗೆ ಅನ್ನಿಸಿದ್ದನ್ನು ನಾನು ಹೇಳಿದ್ದೇನೆ. ಹಿಂದಿನ ಸರ್ಕಾರ ಪ್ರತ್ಯೇಕ ಧರ್ಮ ಮಾಡುವಾಗ ನಾನು ಬೇಡವೆಂದು ಹೇಳಬೇಕಿತ್ತು. ಆದರೆ ಹಲವು ಸಚಿವರ ಅಭಿಪ್ರಾಯ ಪ್ರತ್ಯೇಕ ಧರ್ಮ ಬೇಕು ಎಂದು ಹೇಳಿದ್ದರು. ಹೀಗಾಗಿ ನಾನು ಅದಕ್ಕೆ ಬೆಂಬಲ ಸೂಚಿಸಿದ್ದೆ. ಯಾವುದೇ ಕಾರಣಕ್ಕೂ ಧರ್ಮದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು. ಅಂತಹ ಕೆಲಸ ಮಾಡಿ, ನಾವು ದೊಡ್ಡ ತಪ್ಪು ಮಾಡಿದ್ದೇವು ಪಶ್ಚಾತ್ತಾಪ ವ್ಯಕ್ತಪಡಿಸಿದರು. ಇದನ್ನೂ ಓದಿ: ಶಿವಕುಮಾರ್ Vs ಎಂಬಿ ಪಾಟೀಲ್ – ಕಾಂಗ್ರೆಸ್‍ನಲ್ಲಿ ಮತ್ತೆ ಧರ್ಮ ಯುದ್ಧ ಶುರು
ನನ್ನ ಹೇಳಿಕೆಯನ್ನು ತೆಗಳುವವರು ತೆಗಳಲಿ, ಮಾನನಷ್ಟ ಮೊಕದ್ದಮೆ ಹಾಕುವವರು ಹಾಕಲಿ, ಬೈಯುವವರು ಬೈಯಲಿ. ಯಾರು ಏನೇ ಅಂದರೂ, ನಾನು ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ ಎಂದು ಖಡಕ್ ಆಗಿಯೇ ತಿಳಿಸಿದರು.
ಬಳ್ಳಾರಿ ಚುನಾವಣೆ ಬಗ್ಗೆ ಮಾತನಾಡಿ, ನವೆಂಬರ್ 6ನೇ ತಾರೀಖಿನವರೆಗೂ ಕಾಯೋಣ, ಶ್ರೀರಾಮುಲು ಅಣ್ಣನವರು ಕನಕಪುರದ ಗೌಡರಿಗೇನು ಕೆಲಸ ಎಂದು ಹೇಳುತ್ತಿದ್ದಾರೆ. ಅವರನ್ನು ನಾನೇಕೆ ತುಳಿಯೋಕೆ ಹೋಗೋಣ. ಅವರನ್ನು ಬೇಕಾದರೆ ಹೆಗಲ ಮೇಲೆ ಕೂಡಿಸಿಕೊಂಡು ಹೋಗುತ್ತೇನೆ ಎಂದು ಹೇಳಿದ್ರು.
ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯ 15 ಕೋಟಿ ರೂಪಾಯಿ ಅನುದಾನವನ್ನು ಮಂಗಳೂರಿನ ಕಸಾಯಿಖಾನೆಗೆ ನೀಡಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಸಮರ್ಥನೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕುದ್ರೋಳಿಯಲ್ಲಿರುವ ಕಸಾಯಿಖಾನೆ ಬಹಳ ಹಳೆಯದ್ದಾಗಿದೆ. ಕಸಾಯಿಖಾನೆ ಅಭಿವೃದ್ಧಿಗೆ ಜನ ಬೇಡಿಕೆಯನ್ನಿಟ್ಟಿದ್ದರು. ಈ ವಿಚಾರ ಬಿಜೆಪಿಯವರಿಗೂ ಗೊತ್ತಿದೆ. ಸ್ಮಾರ್ಟ್ ಸಿಟಿಯಿಂದ ಹಣ ಬರೋದು ಸ್ವಚ್ಛತೆಗಾಗಿ. ಹೀಗಾಗಿ ಘನ ತಾಜ್ಯ ನಿಯಂತ್ರಣ ಬರಬೇಕಾದರೆ ಕಸಾಯಿಖಾನೆಯ ಅಭಿವೃದ್ಧಿ ಆಗಬೇಕಿದೆ. ಬಿಜೆಪಿಯವರು ಈ ವಿಚಾರದಲ್ಲಿ ಸುಮ್ಮನೆ ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರಕ್ಕೆ ಪತ್ರ ಬರೆದು ಅನುದಾನ ನಿಲ್ಲಿಸಲಿ ಅಂತ ಯುಟಿ ಖಾದರ್ ಸವಾಲು ಹಾಕಿದ್ದಾರೆ. ಇದನ್ನು ಓದಿ: ಸ್ಮಾರ್ಟ್ ಸಿಟಿಯ 15 ಕೋಟಿ ರೂ. ಕಸಾಯಿಖಾನೆಗೆ ನೀಡಿದ್ರು ಸಚಿವ ಖಾದರ್!
ಮಂಗಳೂರಿನ ಸ್ವಚ್ಛತೆಗೆ ಕಸಾಯಿಖಾನೆಗೆ 15 ಕೋಟಿ ರೂ ನೀಡಲಾಗಿದೆ. ಕಸಾಯಿಖಾನೆಯಲ್ಲಿ ಡಾಕ್ಟರ್‍ಗಳಿಗೆ ಕೂರುವ ವ್ಯವಸ್ಥೆ ಇಲ್ಲ. ಘನತಾಜ್ಯದ ವಿಲೇವಾರಿಗೆ ವ್ಯವಸ್ಥೆ ಇರಲಿಲ್ಲ. ಹೀಗಾಗಿ 15 ಕೋಟಿ ರೂಪಾಯಿ ನೀಡಲಾಗಿದೆ. ಬಿಜೆಪಿಯವರಿಗೆ ಆಡಳಿತದ ಅನುಭವ ಕಡಿಮೆ ಇದೆ ಎಂದು ತಿರುಗೇಟು ನೀಡಿದರು.
ಈ ವಿಚಾರವಾಗಿ ಬೋರ್ಡ್ ಮೀಟಿಂಗ್ ನಲ್ಲಿ ತೀರ್ಮಾನಿಸಿ ನಿರ್ಧಾರ ಮಾಡಲಾಗಿದೆ. ಬೋರ್ಡ್ ಮೀಟಿಂಗ್ ನಲ್ಲಿ ಬಿಜೆಪಿಯವರೂ ಇದ್ದಾರೆ. ಮೀಟಿಂಗ್ ನಲ್ಲಿ ಯಾಕೆ ಬಿಜೆಪಿಯವರು ಚಕಾರ ಎತ್ತಿಲ್ಲ. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಹೋಗಿದೆ. ಬಿಜೆಪಿಯವರು ಬೇಕಿದ್ದರೆ ಪ್ರಸ್ತಾವನೆ ನಿಲ್ಲಿಸಲಿ. ಕೇಂದ್ರ ಸರ್ಕಾರಕ್ಕೆ ಅನುದಾನ ಕಡಿತಗೊಳಿಸುವಂತೆ ಪತ್ರ ಬರೆಯಿರಿ. ವಿರುದ್ಧ ಮಾತನಾಡಿದ ಎಲ್ಲಾ ಬಿಜೆಪಿ ನಾಯಕರು ಪತ್ರ ಬರೆದು ಅನುದಾನ ನಿಲ್ಲಿಸಲಿ. ಗೋಶಾಲೆಗಳಿಗೆ ಅನುದಾನ ನೀಡಲು ಕೇಂದ್ರಕ್ಕೆ ಪತ್ರ ಬರೆಯಲಿ. ಬಿಜೆಪಿಯವರು ಪತ್ರ ಬರೆಯುದಿಲ್ಲ ಎಂದರೆ ಛೀಮಾರಿ ಹಾಕುತ್ತಾರೆ ಎಂದು ಪತ್ರ ಬರೆಯುತ್ತಿಲ್ಲ. ಕೇಂದ್ರ ಅನುದಾನ ಕೊಟ್ಟರೆ ಗೋಶಾಲೆಗೆ ಎರಡು ಪಟ್ಟು ಜಾಸ್ತಿ ಹಣ ನೀಡುತ್ತೇವೆ ಎಂದರು. ಇದನ್ನು ಓದಿ:ಸಚಿವ ಖಾದರ್‌ಗೆ ಸ್ಮಾರ್ಟ್ ಸಿಟಿಗಿಂತ ಕಸಾಯಿಖಾನೆಯೇ ಮುಖ್ಯ: ಸುನೀಲ್ ಕುಮಾರ್