Tag: ಸಮರ್ಜಿತ್ ಲಂಕೇಶ್

  • ಅಕ್ಕನ ಮೇಲಿನ ಪ್ರೀತಿ ಮತ್ತು ಗೌರವಕ್ಕೆ ಮಗನ ಮೊದಲ ಚಿತ್ರಕ್ಕೆ ಗೌರಿ ಎಂದು ಹೆಸರಿಟ್ಟೆ : ಇಂದ್ರಜಿತ್

    ಅಕ್ಕನ ಮೇಲಿನ ಪ್ರೀತಿ ಮತ್ತು ಗೌರವಕ್ಕೆ ಮಗನ ಮೊದಲ ಚಿತ್ರಕ್ಕೆ ಗೌರಿ ಎಂದು ಹೆಸರಿಟ್ಟೆ : ಇಂದ್ರಜಿತ್

    ಸ್ಯಾಂಡಲ್ ವುಡ್‌ಗೆ ಹೊಸ ಹೀರೋನ ಪದಾರ್ಪಣೆ ಆಗಿದೆ. ಖ್ಯಾತ ಬರಹಗಾರ ಪಿ ಲಂಕೇಶ್ ಕುಟುಂಬದ ಮೂರನೇ ಕುಡಿ, ನಿರ್ದೇಶಕ ಇಂದ್ರಜಿತ್ ಲಂಕೇಶ್ (Indrajit Lankesh) ಪುತ್ರ ಸಮರ್ಜಿತ್ ಲಂಕೇಶ್ (Samarjit Lankesh) ಸಿನಿಮಾರಂಗಕ್ಕೆ ಅದ್ದೂರಿ ಎಂಟ್ರಿ ಕೊಟ್ಟಿದ್ದಾರೆ. ಸಮರ್ಜಿತ್ ಮೊದಲ ಸಿನಿಮಾಗೆ ‘ಗೌರಿ’ (Gowri) ಎಂದು ಟೈಟಲ್ ಇಡಲಾಗಿದೆ. ಬೆಂಗಳೂರಿನ ಬುಲ್ ಟೆಂಪಲ್ ರಸ್ತೆಯಲ್ಲಿರುವ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅದ್ದೂರಿ ಪೂಜೆ ಮೂಲಕ ಗೌರಿ ಸಿನಿಮಾಗೆ ಚಾಲನೆ ಸಿಕ್ಕಿದೆ. ಮುಹೂರ್ತ (Muhurta) ಸಮಾರಂಭಕ್ಕೆ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮಿಜಿ ಭೇಟಿ ನೀಡಿ ಸಮರ್ಜಿತ್‌ಗೆ ಆಶೀರ್ವದಿಸಿದರು. ನಿರ್ಮಾಪಕ ರಮೇಶ್ ರೆಡ್ಡಿ ಅವರು ಕ್ಲ್ಯಾಪ್ ಮಾಡಿ ಶುಭ ಹಾರೈಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್, ತಮ್ಮ ಸಹೋದರಿಯ ಮೇಲಿನ ಪ್ರೀತಿ ಮತ್ತು ಗೌರವಕ್ಕಾಗಿ ಮಗನ ಚೊಚ್ಚಲು ಸಿನಿಮಾಗೆ ‘ಗೌರಿ ಎಂದು ಹೆಸರಿಟ್ಟಿರುವುದಾಗಿ ತಿಳಿಸಿದರು. ಗೌರಿ ಚಿತ್ರಕ್ಕೆ ಇಂದ್ರಜಿತ್ ಲಂಕೇಶ್ ಅವರೇ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮಗನ ಚೊಚ್ಚಲ ಸಿನಿಮಾಗೆ ನಿರ್ದೇಶನ ಮಾಡುವ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಈ ಮೂಲಕ ಇಂದ್ರಜಿತ್ ಲಂಕೇಶ್ ಪತ್ನಿ ಅರ್ಪಿತಾ ನಿರ್ಮಾಪಕಿಯಾಗಿ ಮಗನ ಜೊತೆಯೇ ಸ್ಯಾಂಡಲ್ ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಮೂಲಕ ತಮ್ಮ ಮಗನನ್ನು ತಾವೇ ಬಣ್ಣದ ಲೋಕಕ್ಕೆ ಪರಿಚಯಿಸುತ್ತಿದ್ದಾರೆ ಇಂದ್ರಜಿತ್ ದಂಪತಿ. ಇದನ್ನೂ ಓದಿ:ಬಿಗ್ ಬಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ದೊಡ್ಮನೆ ಆಟಕ್ಕೆ ಮುಹೂರ್ತ ಫಿಕ್ಸ್

    ಗೌರಿ ಸಿನಿಮಾಗಾಗಿ ಸಮರ್ಜಿತ್ ಸಿಕ್ಕಾಪಟ್ಟೆ ತಯಾರಿ ಮಾಡಿಕೊಂಡಿದ್ದಾರೆ. ಆಗಲೇ ಆಕ್ಟಿಂಗ್, ಸ್ಟಂಟ್ ಕಲಿತು ಎಲ್ಲಾ ರೀತಿಯ ತಯಾರಿ ಮಡಿಕೊಂಡೆ ಕ್ಯಾಮರಾ ಎದುರಿಸುತ್ತಿದ್ದಾರೆ. ಸಮರ್ಜಿತ್ ಮೊದಲ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಕಿರುತೆರೆ ಹಾಗೂ ಬಿಗ್ ಬಾಸ್ ಖ್ಯಾತಿಯ ಸಾನ್ಯಾ ಐಯ್ಯರ್. ಅಂದಹಾಗೆ ಸಾನ್ಯಾ‌ಗೂ ಮೊದಲ ಸಿನಿಮಾ. ಚೊಚ್ಚಲ ಸಿನಿಮಾ ಮೂಲಕ ಸಮರ್ಜಿತ್ ಮತ್ತು ಸಾನ್ಯಾ (Sanya Iyer) ಇಬ್ಬರೂ ದೊಡ್ಡ ಪರದೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.

    ಅದ್ದೂರಿ ಮೂಹೂರ್ತದ ಮೂಲಕ ಸದ್ದು ಮಾಡಿರುವ ಗೌರಿ ಸಿನಿಮಾ ಸದ್ಯದಲ್ಲೇ ಶೂಟಿಂಗ್‌ಗೆ ಹೊರಡುತ್ತಿದೆ. ಮೊದಲ ಹಂತದ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆಸಲು ಸಿನಿಮಾತಂಡ ಪ್ಲಾನ್ ಮಾಡಿದೆ. ಇನ್ನೂ ಸಿನಿಮಾದಲ್ಲಿ ಕಾಂತಾರ ಸಿನಿಮಾ ಖ್ಯಾತಿಯ ನಟಿ ಮಾನಸಿ ಸುಧೀರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತ ಸಿನಿಮಾಗಿದೆ. ಈಗಾಗಲೇ ಫೋಟೋಶೂಟ್ ಹಾಗೂ ಲುಕ್ ಮೂಲಕ ಸಮರ್ಜಿತ್ ಗಮನ ಸೆಳೆದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಯಾಂಡಲ್ ವುಡ್ ಗೆ ಹೊಸ ನಾಯಕನ ಎಂಟ್ರಿ: ಕನ್ನಡಕ್ಕೆ ಸಿಕ್ಕ ಮತ್ತೋರ್ವ ಆರಡಿ ಕಟೌಟ್

    ಸ್ಯಾಂಡಲ್ ವುಡ್ ಗೆ ಹೊಸ ನಾಯಕನ ಎಂಟ್ರಿ: ಕನ್ನಡಕ್ಕೆ ಸಿಕ್ಕ ಮತ್ತೋರ್ವ ಆರಡಿ ಕಟೌಟ್

    ತ್ರಿಕೋದ್ಯಮದ ಖ್ಯಾತನಾಮರಾದ ಪಿ ಲಂಕೇಶ್ ಮೊಮ್ಮಗ ಸಮರ್ಜಿತ್ ಲಂಕೇಶ್ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈಗಾಗಲೇ ಇಂದ್ರಜಿತ್ ಲಂಕೇಶ್ (Indrajit Lankesh) ಚಿತ್ರರಂಗದಲ್ಲಿ ಸ್ಟೈಲಿಶ್ ನಿರ್ದೇಶಕ ಎಂದೇ ಗುರುತಿಸಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ನಿರ್ದೇಶನ ಮಾಡಿರುವಂತಹ ಇಂದ್ರಜಿತ್ ಲಂಕೇಶ್ ಈ ಬಾರಿ ತಮ್ಮ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.

    ‘ಗೌರಿ’ (Gauri) ಹೆಸರಿನ ಸಿನಿಮಾದ ಮೂಲಕ ಸಮರ್ಜಿತ್ ಲಂಕೇಶ್ (Samarjit Lankesh) ಅವರನ್ನ ಚಿತ್ರರಂಗಕ್ಕೆ ನಾಯಕನನ್ನಾಗಿ ಪರಿಚಯ ಮಾಡುತ್ತಿದ್ದು ಇಂದು ಬೆಂಗಳೂರಿನಲ್ಲಿ ಸಿನಿಮಾದ ಮುಹೂರ್ತ ಅದ್ದೂರಿಯಾಗಿ ನಡೆದಿದೆ. ಗೌರಿ ಸಿನಿಮಾಗಾಗಿ ಸಮರ್ಜಿತ್ ಈಗಾಗಲೇ ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಂಡಿದ್ದು ಸಮರ್ಜಿತ್ ಜೊತೆಯಾಗಿ ಸಾನ್ಯ ಐಯ್ಯರ್ ನಾಯಕಿಯಾಗಿ ಅಭಿನಯ ಮಾಡುತ್ತಿದ್ದಾರೆ.

    ಸಿನಿಮಾ ಮುಹೂರ್ತಕ್ಕೂ ಮುನ್ನವೇ ಸಮರ್ಜಿತ್ ಹಾಗೂ ಸಾನಿಯಾ (Sanya Iyer) ಅವರ ಫೋಟೋಶೂಟ್ ನಡೆದಿದ್ದು ಸ್ಯಾಂಡಲ್ವುಡ್ ನ ಸ್ಟಾರ್ ಸಿನಿಮಾಟೋಗ್ರಾಫರ್ ಆದ ಭುವನ್ ಗೌಡ ಅವರು ಸಮರ್ಜಿತ್ ಅವರ  ಫೋಟೋಶೂಟ್ ಮಾಡಿ ಲುಕ್ ಟೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ:‘ನಿಂಬಿಯಾ ಬನಾದ ಮ್ಯಾಗ’ ಬೆರಗು ಮೂಡಿಸಿದ ಅಶೋಕ್ ಕಡಬ!

    ಭುವನ್ ಮಾತ್ರವಲ್ಲದೆ  ಎಜೆ ಶೆಟ್ಟಿ ಅವ್ರಿಂದಲೂ ಫೋಟೋ ಶೂಟ್ ಮಾಡಿಸಿದ್ದು ಸಾನ್ಯ ಹಾಗೂ ಸಮಜಿತ್ ಇಬ್ಬರ ಕೆಮಿಸ್ಟ್ರಿ ಫೋಟೋ ಶೂಟ್ ನಲ್ಲಿ ಸಖತ್ತಾಗಿ ವರ್ಕ್ ಆಗಿದೆ. ಈಗಾಗಲೇ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿರುವಂತಹ ಇಂದ್ರಜಿತ್ ತಮ್ಮ ಮಗ ಯಾವ ಯಾವ ಪಾತ್ರದಲ್ಲಿ ಯಾವ ರೀತಿ ಕಾಣಿಸುತ್ತಾರೆ ಎಂಬುದನ್ನು ಚೆಕ್ ಮಾಡಲು ಸುಮಾರು ನಾಲ್ಕೈದು ಲುಕ್ ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ.

     

    ಬರೀ ಫೋಟೋ ಶೂಟ್ ಮಾತ್ರವಲ್ಲದೇ ಕೆಲ ಹಳೆ ಸಿನಿಮಾ ಸೀನ್ ಗಳನ್ನ ರೀ ಕ್ರಿಯೇಟ್ ಮಾಡುವ ಮೂಲಕ ಮಗನ ನಟನೆಯನ್ನೂ ಕೂಡ ಟೆಸ್ಟ್ ಮಾಡಿದ್ದಾರೆ. ಲುಕ್ ಹಾಗೂ ಆಕ್ಟಿಂಗ್, ಸ್ಟಂಟ್, ಡ್ಯಾನ್ಸ್ ಎಲ್ಲಾ ವಿಚಾರದಲ್ಲಿಯೂ ಸಮರ್ಜಿತ್ ಪರ್ಫೆಕ್ಟ್ ಅನ್ನಿಸುತ್ತಿದ್ದು ಮುಹೂರ್ತ ಮಾಡಿ ನೇರವಾಗಿ ಶೂಟಿಂಗ್ ಹೋಗಲಿದೆ ಗೌರಿ ಸಿನಿಮಾ ಟೀಂ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂದ್ರಜಿತ್ ಲಂಕೇಶ್ ಪುತ್ರನ ಚಿತ್ರಕ್ಕೆ ‘ಗೌರಿ’ ಟೈಟಲ್ ಫೈನಲ್-‌ ಆ.31ಕ್ಕೆ ಮುಹೂರ್ತ ಫಿಕ್ಸ್

    ಇಂದ್ರಜಿತ್ ಲಂಕೇಶ್ ಪುತ್ರನ ಚಿತ್ರಕ್ಕೆ ‘ಗೌರಿ’ ಟೈಟಲ್ ಫೈನಲ್-‌ ಆ.31ಕ್ಕೆ ಮುಹೂರ್ತ ಫಿಕ್ಸ್

    ಪಿ.ಲಂಕೇಶ್ ಮೊಮ್ಮಗ, ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ (Samarjit Lankesh) ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡ್ತಿದ್ದಾರೆ. ಸಮರ್ಜಿತ್ ಚೊಚ್ಚಲ ಸಿನಿಮಾಗೆ ಹೀರೋಯಿನ್ ಆಗಿ ಬಿಗ್ ಬಾಸ್ (Bigg Boss) ಬೆಡಗಿ ಸಾನ್ಯ ಅಯ್ಯರ್ (Saanya Iyer) ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ‘ಗೌರಿ’ (Gowri) ಎಂದು ಟೈಟಲ್ ಫಿಕ್ಸ್ ಆಗಿದೆ. ಇದೇ ಆಗಸ್ಟ್ 31ಕ್ಕೆ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. ಮುಖ್ಯ ಅತಿಥಿಯಾಗಿ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ.

    ಮಗನ ಮೊದಲ ಸಿನಿಮಾಗೆ ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ (Indrajit Lankesh) ನಿರ್ದೇಶನ ಮಾಡ್ತಿದ್ದಾರೆ. ‘ಗೌರಿ’ (Gowri) ಸಿನಿಮಾ ಸಲುವಾಗಿ ಸಮರ್ಜಿತ್ ಲಂಕೇಶ್ ಅವರು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಸಿಕ್ಸ್ ಪ್ಯಾಕ್ ಆ್ಯಬ್ಸ್ ಮೂಲಕ ಅವರು ಗಮನ ಸೆಳೆಯುತ್ತಿದ್ದಾರೆ. ಅವರ ಫೋಟೋಗಳು ಈಗಾಗಲೇ ಹೈಲೈಟ್ ಆಗಿವೆ. ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಆಗಸ್ಟ್ 31ರಂದು ಬೆಳಗ್ಗೆ 10:30ಕ್ಕೆ ಗೌರಿ ಸಿನಿಮಾದ ಮುಹೂರ್ತ ನೆರವೇರಲಿದೆ. ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಇದನ್ನೂ ಓದಿ:‘ನಿಂಬಿಯಾ ಬನಾದ ಮ್ಯಾಗ’ ಬೆರಗು ಮೂಡಿಸಿದ ಅಶೋಕ್ ಕಡಬ!

    ಈ ಸಿನಿಮಾಗಾಗಿ ಸಮರ್ಜಿತ್ ಲಂಕೇಶ್ ಅವರು ಡ್ಯಾನ್ಸ್, ಫೈಟಿಂಗ್, ಕುದುರೆ ಸವಾರಿ ಸೇರಿದಂತೆ ಅನೇಕ ಕಲೆಗಳನ್ನು ಕಲಿತು ಬಂದಿದ್ದಾರೆ. ಜಾಹೀರಾತು ಕ್ಷೇತ್ರದಲ್ಲಿ ಅವರಿಗೆ ಅನುಭವ ಇದೆ. ಗೌರಿ ಚಿತ್ರದಲ್ಲಿ ಸಮರ್ಜಿತ್ ಲಂಕೇಶ್‌ಗೆ ಜೋಡಿಯಾಗಿ ಸಾನ್ಯ ಅಯ್ಯರ್ ಅವರು ನಟಿಸಲಿದ್ದಾರೆ. ಇವರಿಬ್ಬರ ಫೋಟೋಶೂಟ್ ಕೂಡ ಮಾಡಿಸಲಾಗಿದೆ. ಅಷ್ಟಕ್ಕೂ ಈ ಸಿನಿಮಾಗೆ ‘ಗೌರಿ’ ಎಂದು ಶೀರ್ಷಿಕೆ ಇಟ್ಟಿರುವುದು ಯಾಕೆ ಈ ಪ್ರಶ್ನೆಗೆ ಮುಹೂರ್ತದ ಸಂದರ್ಭದಲ್ಲಿ ಉತ್ತರ ಸಿಗುವ ನಿರೀಕ್ಷೆ ಇದೆ.

    ಸಮರ್ಜಿತ್- ಸಾನ್ಯ ಅಯ್ಯರ್ (Saanya Iyer) ಇಬ್ಬರಿಗೂ ಮೊದಲ ಸಿನಿಮಾ ಆಗಿರುವ ಕಾರಣ, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚಬೇಕು ಎಂದು ಕನಸು ಕಂಡಿದ್ದ ಸಾನ್ಯಗೆ ಇದೀಗ ಸೂಕ್ತ ಕಥೆಯೊಂದು ಸಿಕ್ಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಾನ್ಯ ಅಯ್ಯರ್‌ಗೆ ಸಿಕ್ತು ಸಿನಿಮಾ ಚಾನ್ಸ್- ಹೀರೋಯಿನ್ ಆಗ್ತಿದ್ದಾರೆ ಪುಟ್ಟಗೌರಿ

    ಸಾನ್ಯ ಅಯ್ಯರ್‌ಗೆ ಸಿಕ್ತು ಸಿನಿಮಾ ಚಾನ್ಸ್- ಹೀರೋಯಿನ್ ಆಗ್ತಿದ್ದಾರೆ ಪುಟ್ಟಗೌರಿ

    ಬಿಗ್ ಬಾಸ್ ಬೆಡಗಿ ಸಾನ್ಯ ಅಯ್ಯರ್ (Saanya Iyer) ಅವರು ಬೆಳ್ಳಿಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಕೊನೆಗೂ ಯುವ ನಟನಿಗೆ ಹೀರೋಯಿನ್ (Heroine) ಆಗುವ ಮೂಲಕ ತಮ್ಮ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ಇಂದ್ರಜಿತ್ ಲಂಕೇಶ್ (Indrajith Lankesh) ಮಗನ ಹೊಸ ಸಿನಿಮಾದಲ್ಲಿ ಸಾನ್ಯ ಅಯ್ಯರ್ ನಾಯಕಿಯಾಗಲಿದ್ದಾರೆ. ಇಂದ್ರಜಿತ್ ಲಂಕೇಶ್ ತಮ್ಮ ಮಗ ಸಮರ್ಜಿತ್‌ನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದು, ಇದಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಸಮರ್ಜಿತ್ ಲಂಕೇಶ್ (Samarjith Lankesh) ಎದುರು ನಾಯಕಿಯಾಗಿ ಪುಟ್ಟಗೌರಿ ಸಾನ್ಯ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಬಾಕಿಯಿದೆ. ಇದನ್ನೂ ಓದಿ:‘ಡಬಲ್ ಇಸ್ಮಾರ್ಟ್’ ಚಿತ್ರೀಕರಣದಲ್ಲಿ ಸಂಜಯ್ ದತ್‌ಗೆ ಪೆಟ್ಟು- ಆಸ್ಪತ್ರೆಗೆ ದಾಖಲು

    ‘ಪುಟ್ಟಗೌರಿ ಮದುವೆ’ (Puttagowri Maduve) ಸೀರಿಯಲ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಬಾಲನಟಿಯಾಗಿ ಎಂಟ್ರಿ ಕೊಟ್ಟಿದ್ದ ಸಾನ್ಯ ಅಯ್ಯರ್ ಅವರು ಬಿಗ್ ಬಾಸ್ ಓಟಿಟಿ ಮತ್ತು ಟಿವಿ ಬಿಗ್ ಬಾಸ್ (Bigg Boss Kannada) ಅವರಿಗೆ ಹೆಚ್ಚಿನ ಜನಪ್ರಿಯತೆ ನೀಡಿತ್ತು. ದೊಡ್ಮನೆಯಿಂದ ಹೊರ ಬಂದ ಮೇಲೆ ಬೋಲ್ಡ್ ಫೋಟೋಶೂಟ್‌ನಲ್ಲಿ ಮಿಂಚಿದ್ದರು. ಫಿಟ್‌ನೆಸ್ ಮತ್ತು ವರ್ಕೌಟ್ ಕಡೆ ಹೆಚ್ಚಿನ ಗಮನ ನೀಡಿದ್ದರು. ಈಗ ಅವರ ಆಸೆಯಂತೆ ಒಂದೊಳ್ಳೆಯ ಕಥೆ ಸಾನ್ಯಗೆ ಅರಸಿ ಬಂದಿದೆ.

    ತಂದೆ ಸಿನಿಮಾ ನಿರ್ದೇಶಕ ಅನ್ನುವ ಕಾರಣಕ್ಕಾಗಿ ಸಮರ್ಜಿತ್ ಚಿತ್ರರಂಗ ಪ್ರವೇಶ ಮಾಡುತ್ತಿಲ್ಲ. ಎಲ್ಲ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡೇ ಅಖಾಡಕ್ಕೆ ಇಳಿಯುತ್ತಿದ್ದಾರೆ. ಹಾಗಾಗಿ ಎಂಟ್ರಿಯಲ್ಲೇ ಭರವಸೆ ಮೂಡಿಸುತ್ತಾರೆ. ಈಗಾಗಲೇ ರಂಗಭೂಮಿಯಲ್ಲೂ ಕೆಲಸ ಮಾಡಿದ ಅನುಭವವೂ ಅವರ ಜೊತೆಗಿದೆ. ನ್ಯೂಯಾರ್ಕ್ ಅಕಾಡೆಮಿಯಲ್ಲಿ ಸಿನಿಮಾ ಸಂಬಂಧಿಸಿದ ಕೋರ್ಸ್ ಮಾಡಿರುವ ಸಮರ್ಜಿತ್, ಅಲ್ಲಿ ನಟನಾ ತರಬೇತಿಯನ್ನು ಪಡೆದಿದ್ದಾರೆ. ಚೇತನ್ ಡಿಸೋಜಾ ಬಳಿ ಸಾಹಸ ಕಲೆಯನ್ನು ಕಲಿತುಕೊಂಡರೆ, ಮುರಳಿ ಬಳಿ ಡಾನ್ಸ್ ಮತ್ತು ಇಬ್ಬರು ನೀನಾಸಂ ಶಿಕ್ಷಕರು ಸಮರ್ಜಿತ್‌ಗೆ ತರಬೇತಿ ನೀಡಿದ್ದಾರೆ. ಲಂಕೇಶ್ ಅವರ ಮೊಮ್ಮಗ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್‌ ಆಗಿ ಎಂಟ್ರಿ ಕೊಡ್ತಿದ್ದಾರೆ.

    ಸಮರ್ಜಿತ್- ಸಾನ್ಯ ಅಯ್ಯರ್ ಇಬ್ಬರಿಗೂ ಇದು ಚೊಚ್ಚಲ ಸಿನಿಮಾ ಆಗಿರುವ ಕಾರಣ, ಸಿನಿಮಾ ಮೇಲಿನ ನಿರೀಕ್ಷೆ ಬೆಟ್ಟದಷ್ಟಿದೆ. ಸಿನಿಮಾ ನಿರ್ದೇಶಕರು, ಬ್ಯಾನರ್ ಈ ಎಲ್ಲದರ ಅಪ್‌ಡೇಟ್ ಸದ್ಯದಲ್ಲೇ ಸಿಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಿತ್ರರಂಗಕ್ಕೆ ಲಂಕೇಶ್ ಮೊಮ್ಮಗ ಸಮರ್ಜಿತ್ ಗ್ರ್ಯಾಂಡ್ ಎಂಟ್ರಿ

    ಚಿತ್ರರಂಗಕ್ಕೆ ಲಂಕೇಶ್ ಮೊಮ್ಮಗ ಸಮರ್ಜಿತ್ ಗ್ರ್ಯಾಂಡ್ ಎಂಟ್ರಿ

    ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಲಂಕೇಶ್ ಅವರ ಮೊಮ್ಮಗ ಸಮರ್ಜಿತ್ ಲಂಕೇಶ್ ಗ್ಯಾಂಡ್ ಆಗಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಈಗಾಗಲೇ ಲಂಕೇಶ್ ಅವರ ಪುತ್ರ ಇಂದ್ರಜಿತ್ ಲಂಕೇಶ್ (Indrajit Lankesh) ಮತ್ತು ಪುತ್ರಿ ಕವಿತಾ ಲಂಕೇಶ್ ಸಿನಿಮಾ ರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಹೊಸ ಬಗೆಯ ಸಿನಿಮಾಗಳನ್ನು ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಿಂಚಿದ್ದಾರೆ. ಇದೀಗ ಇಂದ್ರಜಿತ್ ಪುತ್ರ ಸಮರ್ಜಿತ್ (Samarjit Lankesh) ಮೂರನೇ ತಲೆಮಾರಾಗಿ ಸ್ಯಾಂಡಲ್ ವುಡ್ (Sandalwood) ಪ್ರವೇಶ (Entry) ಮಾಡುತ್ತಿದ್ದಾರೆ.

    ತಂದೆ ಸಿನಿಮಾ ನಿರ್ದೇಶಕ ಅನ್ನುವ ಕಾರಣಕ್ಕಾಗಿ ಸಮರ್ಜಿತ್ ಚಿತ್ರರಂಗ ಪ್ರವೇಶ ಮಾಡುತ್ತಿಲ್ಲ. ಎಲ್ಲ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡೇ ಅಖಾಡಕ್ಕೆ ಇಳಿಯುತ್ತಿದ್ದಾರೆ. ಹಾಗಾಗಿ ಎಂಟ್ರಿಯಲ್ಲೇ ಭರವಸೆ ಮೂಡಿಸುತ್ತಾರೆ. ಈಗಾಗಲೇ ರಂಗಭೂಮಿಯಲ್ಲೂ ಕೆಲಸ ಮಾಡಿದ ಅನುಭವವೂ ಅವರ ಜೊತೆಗಿದೆ. ಇದನ್ನೂ ಓದಿ:‘ಪುನರ್ ವಿವಾಹ’ ನಟ ಅಥರ್ವ್‌ ಹೊಸ ಚಿತ್ರಕ್ಕೆ ಸುದೀಪ್ ಸಾಥ್

    ನ್ಯೂಯಾರ್ಕ್ ಅಕಾಡೆಮಿಯಲ್ಲಿ ಸಿನಿಮಾ ಸಂಬಂಧಿಸಿದ ಕೋರ್ಸ್ ಮಾಡಿರುವ ಸಮರ್ಜಿತ್, ಅಲ್ಲಿ ನಟನಾ ತರಬೇತಿಯನ್ನು ಪಡೆದಿದ್ದಾರೆ. ಚೇತನ್ ಡಿಸೋಜಾ ಬಳಿ ಸಾಹಸ ಕಲೆಯನ್ನು ಕಲಿತುಕೊಂಡರೆ, ಮುರಳಿ ಬಳಿ ಡಾನ್ಸ್ ಮತ್ತು ಇಬ್ಬರು ನೀನಾಸಂ ಶಿಕ್ಷಕರು ಸಮರ್ಜಿತ್ ತರಬೇತಿ ನೀಡಿದ್ದಾರೆ.

    ಜೊತೆಗೆ ಯೋಗರಾಜ್ ಭಟ್ ಅವರ ಬಳಿ ಎರಡು ಸಿನಿಮಾಗಳಿಗೆ ಸಮರ್ಜಿತ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿ  ಕೆಲಸ ಮಾಡಿದ ಅನುಭವ ಕೂಡ ಇದೆ. ಇಷ್ಟೆಲ್ಲ ತರಬೇತಿಯ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಮತ್ತು ಜಾಹೀರಾತು ಕ್ಷೇತ್ರದಲ್ಲೂ ಒಂದಷ್ಟು ಅನುಭವ ಪಡೆದಿದ್ದಾರೆ. ಈ ರೀತಿ ತಯಾರಿ ಮಾಡಿಕೊಂಡು ಸಿನಿಮಾ ರಂಗ ಪ್ರವೇಶ ಮಾಡುತ್ತಿದ್ದಾರೆ.

    ಸಮರ್ಜಿತ್ ನಟನೆಯ ಸಿನಿಮಾ ನಿರ್ದೇಶಕರು ಯಾರು, ಯಾರು ನಿರ್ಮಾಣ ಮಾಡುತ್ತಾರೆ ಇತ್ಯಾದಿ ವಿಷಯಗಳನ್ನು ಸದ್ಯಕ್ಕೆ ಬಹಿರಂಗಗೊಳಿಸಿಲ್ಲ. ಆದರೆ, ಅದ್ದೂರಿಯಾಗಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡುವುದನ್ನು ಸಮರ್ಜಿತ್ ಅವರ ತಂದೆ, ನಿರ್ದೇಶಕ ಇಂದ್ರಜಿತ್ ಖಚಿತ ಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.

     

    ಸಮರ್ಜಿತ್ ಸಿನಿಮಾ ರಂಗಕ್ಕೆ ಬರುತ್ತಿರುವುದು ನಿಜ. ಎಲ್ಲ ರೀತಿಯ ತರಬೇತಿಯನ್ನು ಪಡೆದುಕೊಂಡೇ ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದಾರೆ. ನಟನೆಯ ಜೊತೆ ಜೊತೆಗೆ ತಾಂತ್ರಿಕ ಅಂಶಗಳನ್ನು ತಿಳಿದುಕೊಂಡು ಸ್ಯಾಂಡಲ್ ವುಡ್ ಪ್ರವೇಶ ಮಾಡುತ್ತಿರುವುದು ಖುಷಿಯಾಗುತ್ತಿದೆ ಎನ್ನುತ್ತಾರೆ ನಿರ್ದೇಶಕ ಇಂದ್ರಜಿತ್ ಲಂಕೇಶ್.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]