Tag: ಸಮರ್ಜಿತ್ ಲಂಕೇಶ್

  • SIIMA Award | ನಟ ಸಮರ್ಜಿತ್‌ಗೆ ಡಬಲ್ ಪ್ರಶಸ್ತಿಗಳ ಧಮಾಕ

    SIIMA Award | ನಟ ಸಮರ್ಜಿತ್‌ಗೆ ಡಬಲ್ ಪ್ರಶಸ್ತಿಗಳ ಧಮಾಕ

    ಗೌರಿ ಸಿನಿಮಾದ ಮೂಲಕ ಭರವಸೆ ಮೂಡಿಸಿದ್ದ, ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಸಮರ್ಜಿತ್ ಲಂಕೇಶ್ (Samarjit Lankesh) ಅವರಿಗೆ ಎರಡು ಪ್ರಶಸ್ತಿಗಳು ಲಭಿಸಿವೆ. `ಗೌರಿ’ ಚಿತ್ರಕ್ಕಾಗಿ (Gowri Cinema) ಸೈಮಾ (SIIMA Award) ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿ ಹಾಗೂ ಅತ್ಯುತ್ತಮ ಉದಯೋನ್ಮುಖ ನಟನಿಗಾಗಿ ಲುಮಿಯರ್ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ ಸಮರ್ಜಿತ್.

    ಉದಯೋನ್ಮುಖ ನಟ ಸಮರ್ಜಿತ್ ಲಂಕೇಶ್ ತಮ್ಮ ವೃತ್ತಿಜೀವನಕ್ಕೆ ಮತ್ತೊಂದು ಗರಿ ಸೇರಿಸಿದ್ದಾರೆ. ಸತತವಾಗಿ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸುವ ಮೂಲಕ ಭಾರತೀಯ ಚಿತ್ರರಂಗದ ಭರವಸೆಯ ಹೊಸ ಪ್ರತಿಭೆಗಳಲ್ಲಿ ಒಬ್ಬರಾಗಿ ಹೊರ ಹೊಮ್ಮಿದ್ದಾರೆ. ಇದೀಗ ಸಮರ್ಜಿತ್ ಬಾಲಿವುಡ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇದನ್ನೂ ಓದಿ: ಮಲ್ಲಿಗೆ ಮುಡಿದ ನಟಿ ನವ್ಯಾಗೆ ಆಸ್ಟ್ರೇಲಿಯಾದಲ್ಲಿ 1 ಲಕ್ಷ ದಂಡ

    ದುಬೈನಲ್ಲಿ ನಡೆದ 13ನೇ ದಕ್ಷಿಣ ಭಾರತ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2025ರ ಸಮಾರಂಭದಲ್ಲಿ ಸಮರ್ಜಿತ್ ತಮ್ಮ ಪ್ರಥಮ ಚಿತ್ರ `ಗೌರಿ’ಯಲ್ಲಿನ ಅದ್ಭುತ ಅಭಿನಯಕ್ಕಾಗಿ ಅತ್ಯುತ್ತಮ ಚೊಚ್ಚಲ ನಟ (ಕನ್ನಡ) ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅವರ ಈ ಭರವಸೆಯ ಹೆಜ್ಜೆ, ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದೆ. ಇದನ್ನೂ ಓದಿ: `ಪುಷ್ಪ 3 ಬರೋದು ಪಕ್ಕಾ’..ಅಲ್ಲು ಅರ್ಜುನ್‌ ಗುಡ್ ನ್ಯೂಸ್ ಕೊಟ್ಟಿದ್ದೆಲ್ಲಿ?

     ದುಬೈನಲ್ಲಿ 13ನೇ ದಕ್ಷಿಣ ಭಾರತ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಸಮಾರಂಭದಲ್ಲಿ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಸಮರ್ಜಿತ್ ಅವರು ಅವಾರ್ಡ್ ಹಿಡಿದು ವೇದಿಕೆಯಲ್ಲಿ ಸಂಭ್ರಮಿಸಿದ್ದಾರೆ.

  • ‘ಗೌರಿ’ ಹೀರೋ ಸಮರ್ಜಿತ್‌ಗೆ ಸಿಕ್ತು ಉದಯೋನ್ಮುಖ ನಟ ಪ್ರಶಸ್ತಿ

    ‘ಗೌರಿ’ ಹೀರೋ ಸಮರ್ಜಿತ್‌ಗೆ ಸಿಕ್ತು ಉದಯೋನ್ಮುಖ ನಟ ಪ್ರಶಸ್ತಿ

    ಭಾರತದ ಸಿನಿಮಾ ರಂಗದಲ್ಲಿ ತನ್ನ ನಟನೆಯ ಮೂಲಕ ಭರವಸೆ ಮೂಡಿಸಿರುವ ಸಮರ್ಜಿತ್ ಲಂಕೇಶ್ (Samarjith Lankesh) ಅವರಿಗೆ ರಾಷ್ಟ್ರಮಟ್ಟದ ಪ್ರತಿಷ್ಠಿತ ಲುಮಿರೆ ಅತ್ಯುತ್ತಮ ಉದಯೋನ್ಮುಖ ನಟ ಪ್ರಶಸ್ತಿ ಲಭಿಸಿದೆ. ಇದನ್ನೂ ಓದಿ:2ನೇ ಮದುವೆಗೆ ಸಜ್ಜಾದ ಚೈತ್ರಾ ವಾಸುದೇವನ್

    ಇತ್ತೀಚೆಗೆ ರಾಘವೇಂದ್ರ ಚಿತ್ರವಾಣಿ ಉದಯೋನ್ಮುಖ ನಟ ಪ್ರಶಸ್ತಿ ಪಡೆದ ಸಮರ್ಜಿತ್ ಲಂಕೇಶ್ ತನ್ನ ಮಡಿಲಿಗೆ ಮತ್ತೊಂದು ಪ್ರಶಸ್ತಿಯನ್ನು ಸೇರಿಸಿಕೊಂಡಿದ್ದಾರೆ.

    ಡಾನ್ಸ್ ಹಾಗೂ ಮಾರ್ಷಿಯಲ್ ಆರ್ಟ್ಸ್ ಪ್ರವೀಣತೆಯನ್ನು ಹೊಂದಿರುವ ಸಮರ್ಜಿತ್ ಲಂಕೇಶ್ ಅವರು ರಾಷ್ಟ್ರಮಟ್ಟದಲ್ಲಿ ಪ್ರೇಕ್ಷಕ ಸಮೂಹವನ್ನು ಹೊಂದಿದ್ದಾರೆ. ಈಗ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಬ್ಯಾನರ್ ನಡಿ ನಟಿಸುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ನಡೆಸುತ್ತಿರುವ ಸಮರ್ಜಿತ್ ಲಂಕೇಶ್ ಅವರು ದೇಶದ ಪ್ರಸಿದ್ಧ ತಾರೆಯರ ಜೊತೆ ಬೆಳ್ಳಿಪರದೆಯನ್ನು ಹಂಚಿಕೊಳ್ಳುತ್ತಿದ್ದಾರೆ.

    ತನ್ನ ಪ್ರತಿಭೆ ಹಾಗೂ ನಟನೆಯ ಸಮರ್ಪಣಾ ಭಾವದಿಂದ ಸಮರ್ಜಿತ್ ಲಂಕೇಶ್ ಭಾರತದ ಸಿನಿಮಾ ರಂಗದಲ್ಲಿ ತಾರೆಯಾಗಿ ಉದಯಿಸುವ ಭರವಸೆ ಮೂಡಿಸಿದ್ದಾರೆ.

    ತಂದೆ ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಗೌರಿ’ (Gowri) ಚಿತ್ರದಲ್ಲಿ ಸಮರ್ಜಿತ್ ಲಂಕೇಶ್ ಅವರು ನಾಯಕ ಪಾತ್ರ ಮಾಡುವ ಮೂಲಕ ಮೆಚ್ಚುಗೆ ಪಡೆದಿದ್ದರು. ಈ ಚಿತ್ರದಲ್ಲಿ ನಾಯಕಿಯಾಗಿ ಸಾನ್ಯಾ ಅಯ್ಯರ್ (Saanya Iyer) ನಟಿಸಿದ್ದರು.

  • ಬಾಲಿವುಡ್‌ಗೆ ಸಮರ್ಜಿತ್: ಕರಣ್ ಜೋಹರ್ ಸಿನಿಮಾದಲ್ಲಿ ಇಂದ್ರಜಿತ್  ಪುತ್ರ

    ಬಾಲಿವುಡ್‌ಗೆ ಸಮರ್ಜಿತ್: ಕರಣ್ ಜೋಹರ್ ಸಿನಿಮಾದಲ್ಲಿ ಇಂದ್ರಜಿತ್ ಪುತ್ರ

    ಮರ್ಜಿತ್ ಲಂಕೇಶ್ (Samarjit Lankesh) ಗೌರಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಟ. ದೊಡ್ಡ ಸ್ಟಾರ್ ಆಗಬೇಕು ಎಂದು ಕನಸನ್ನು ಹೊತ್ತು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಸಮರ್ಜಿತ್ ಮೊದಲ ಸಿನಿಮಾದಲ್ಲೇ ಕನ್ನಡ ಸಿನಿಮಾ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅದ್ಭುತ ಅಭಿನಯದ ಮೂಲಕ ಫ್ಯೂಚರ್ ಸ್ಟಾರ್ ಎನ್ನುವ ಭರವಸೆ ಮೂಡಿಸಿರುವ ನಟ ಸಮರ್ಜಿತ್ ಖ್ಯಾತ ನಿರ್ದೇಶಕ, ಪತ್ರಕರ್ತ ಇಂದ್ರಿಜಿತ್ ಲಂಕೇಶ್ ಅವರ ಪುತ್ರ. ಗೌರಿ ಸಿನಿಮಾದ ನಟನೆಗಾಗಿ ಸಮರ್ಜಿತ್ ಅವರಿಗೆ ‘ಲುಮಿಯರ್ ನ್ಯಾಷನಲ್ ಅವಾರ್ಡ್’ ಬಂದಿದೆ.

    ಅವಾರ್ಡ್ ಪಡೆದ ಖುಷಿಯಲ್ಲಿರುವ ಹ್ಯಾಂಡಮ್ ಹಂಕ್ ಸಮರ್ಜಿತ್ ಬಾಲಿವುಡ್‌ಗೆ ಹಾರಲು ಸಜ್ಜಾಗಿದ್ದಾರೆ. ಹಿಂದಿ ಸಿನಿಮಾರಂಗಮಾತ್ರವಲ್ಲ ಪಕ್ಕದ ತೆಲುಗು ಮತ್ತು ತಮಿಳಿನಿಂದನೂ ಆಫರ್‌ಗಳು ಬರುತ್ತಿದ್ದು ಪರಭಾಷೆಯ ಕಡೆ ಸಮರ್ಜಿತ್ ಗಮನ ಹರಿಸುತ್ತಿದ್ದಾರೆ. ಹೌದು, ಸಮರ್ಜಿತ್ ಹಿಂದಿ ಸಿನಿಮಾರಂಗಕ್ಕೆ ಕಾಲಿಡಲು ತಯಾರಾಗಿದ್ದಾರೆ. ಈಗಾಗಲೇ ಹಿಂದಿಯ ದೊಡ್ಡ ಪ್ರೊಡಕ್ಷನ್ ಹೌಸ್ ಸಮರ್ಜಿತ್‌ಗೆ ಸಿನಿಮಾ ಮಾಡಲು ಮುಂದಾಗಿದೆ ಎನ್ನುವ ಸುದ್ದಿ ಕೇಳಿಬಂದಿದೆ. ಬಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ ಸಮರ್ಜಿತ್ ಜೊತೆ ಸಿನಿಮಾ ಮಾಡಲು ಮುಂದಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ.

    ಈಗಾಗಲೇ ಧರ್ಮ ಪ್ರೊಡಕ್ಷನ್ ಕಡೆಯಿಂದ ಕರೆ ಬಂದಿದ್ದು ಸಮರ್ಜಿತ್ ಮುಂಬೈಗೆ ಹಾರಿದ್ದಾರೆ. ಕರಣ್ ಜೊಹರ್ ಸಂಸ್ಥೆ ಜೊತೆ ಮಾತುಕತೆ ನಡೆಸಿರುವ ಸಮರ್ಜಿತ್ ಹಿಂದಿಯಲ್ಲಿ ಸಿನಿಮಾ ಮಾಡುವುದು ಬಹುತೇಕ ಖಚಿತವಾಗಿದೆ. ಅಂದಹಾಗೆ ಇತ್ತೀಚಿನ ದಿನಗಳಲ್ಲಿ ಹಿಂದಿ ನಿರ್ಮಾಣ ಸಂಸ್ಥೆಗಳು ಅದರಲ್ಲೂ ಕರಣ್ ಜೋಹರ್ ಸೌತ್ ಸಿನಿಮಾರಂಗದ ಕಡೆ ಹೆಚ್ಚು ಇಂಟ್ರೆಸ್ಟ್ ತೋರಿಸುತ್ತಿದ್ದಾರೆ. ಒಂದುವೇಳೆ ಸಮರ್ಜಿತ್ ಲಂಕೇಶ್ ಅವರಿಗೆ ಸಿನಿಮಾ ನಿರ್ಮಾಣ ಮಾಡಿದರೆ ಮೊದಲ ಬಾರಿಗೆ ಕರಣ್ ಸಂಸ್ಥೆ ಕನ್ನಡ ನಟನ ಜೊತೆ ಸಿನಿಮಾ ಮಾಡಿದಂತೆ ಆಗಲಿದೆ.

    ಇನ್ನೂ ವಿಶೇಷ ಎಂದರೆ ತಮಿಳಿನ ಪ್ರಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಸಂಸ್ಥೆ ಕೂಡ ಸಮರ್ಜಿತ್ ಗೆ ಸಿನಿಮಾ ಮಾಡಲು ಮುಂದಾಗಿರುವ ವಿಚಾರ ಹೊರಬಿದ್ದಿದೆ. ಈಗಾಗಲೇ ಲೈಕಾ ಸಂಸ್ಥೆ ನಿಖಿಲ್ ಸಿನಿಮಾ ಮೂಲಕ ಕನ್ನಡಕ್ಕೆ ಕಾಲಿಟ್ಟಿದೆ. ಆ ಸಿನಿಮಾ ಪೂರ್ಣಗೊಳ್ಳುವ ಮೊದಲೇ ಲೈಕಾ ಸಂಸ್ಥೆ ಕನ್ನಡದ ಮತ್ತೊಬ್ಬ ಸ್ಟಾರ್ ಸಮರ್ಜಿತ್‌ಗೆ ಸಿನಿಮಾ ಮಾಡಲು ನಿರ್ಧರಿಸಿದ್ದು ಈಗಾಗಲೇ ಮಾತುಕತೆ ಹಂತದಲ್ಲಿದೆ ಎನ್ನುವ ಮಾತು ಕೇಳಿಬರುತ್ತಿದೆ.

    ಒಟ್ನಲ್ಲಿ ಕನ್ನಡದ ಯುವ ನಟನೊಬ್ಬನಿಗೆ ಪರಭಾಷಯಿಂದ ಅದರಲ್ಲೂ ದೊಡ್ಡ ದೊಡ್ಡ ಪ್ರೊಡಕ್ಷನ್ ಗಳು ಸಿನಿಮಾ ಮಾಡಲು ಮುಂದಾಗಿರುವುದು ಖುಷಿಯ ವಿಚಾರ. ಸಮರ್ಜಿತ್ ದೊಡ್ಡ ಸ್ಟಾರ್ ಆಗಿ ಮೆರೆಯಲಿ ಎನ್ನುವುದೇ ಅಭಿಮಾನಿಗಳ ಆಶಯ.

  • ‘ಗೌರಿ’ ರಿಲೀಸ್ ಡೇಟ್ ಅನೌನ್ಸ್: ವಿಶೇಷ ದಿನದಂದು ತೆರೆಗೆ ಬರುತ್ತಿದೆ ಸಿನಿಮಾ

    ‘ಗೌರಿ’ ರಿಲೀಸ್ ಡೇಟ್ ಅನೌನ್ಸ್: ವಿಶೇಷ ದಿನದಂದು ತೆರೆಗೆ ಬರುತ್ತಿದೆ ಸಿನಿಮಾ

    ಕೊನೆಗೂ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ ಗೌರಿ.  ಸ್ವಾತಂತ್ರ್ಯಾ ದಿನಾಚರಣೆಗೆ ತೆರೆಗೆ ಬರುತ್ತಿದೆ ಸಮರ್ಜಿತ್ ಲಂಕೇಶ್ ಮೊದಲ ಸಿನಿಮಾ. ಸ್ಯಾಂಡಲ್ ವುಡ್ ನ ಬಹು ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ಗೌರಿ ಸಿನಿಮಾ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ. ಇವಾಗಲೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ ಈ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂದು ಚಿತ್ರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಅದರೀಗ ಆ ಕುತುಹಲಕ್ಕೆ ತೆರೆ ಬಿದ್ದಿದೆ. ಇಂದ್ರಜಿತ್ ಲಂಕೇಶ್ ನಿರ್ದೇಶನದ ಅವರ ಪುತ್ರ ಸಮರ್ಜಿತ್ ಮತ್ತು ನಟಿ ಸಾನಿಯಾ ಅಭಿನಯದ ಮೊದಲ ಸಿನಿಮಾವಿದು. ಇಂದಿ ಸಿನಿಮಾ ತಂಡ  ಮಾಧ್ಯಮದ ಮುಂದೆ ಹಾಜರಾಗುವ ಮೂಲಕ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಗೌರಿ ಸಿನಿಮಾ ವಿಶೇಷ ದಿನದಂದು ತೆರೆಗೆ ಬರಲಿದೆ ಎಂದು ಹೇಳಿದರು.

    ಹೌದು ‘ಗೌರಿ’ (Gowri) ಸಿನಿಮಾ ಆಗಸ್ಟ್ 15 ಸ್ವಾತಂತ್ರ್ಯಾ ದಿನಾಚರಣೆಗೆ ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ. ಗೌರಿ ತಂಡ ಇಂದು ಕಾಲೇಜಿನಲ್ಲಿ ಕಾರ್ಯಕ್ರಮ ಮಾಡುವ‌ ಮೂಲಕ ಅದ್ದೂರಿಯಾಗಿ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಬೆಂಗಳೂರಿನ MES ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿನಿಮಾತಂಡ ‘ಗೌರಿ’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ಕಾಲೇಜಿನ ವಿದ್ಯಾರ್ಥಿಗಳ ಜೊತೆ ಕುಣಿದು ಕುಪ್ಪಳಿಸಿದ್ದ ಸಿನಿಮಾ ತಂಡ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್ ‘ಕನ್ನಡದ ಯುವ ಪ್ರತಿಭೆಗಳನ್ನು ಬೆಳಸಿ. ಆಗಸ್ಟ್ 15 ಒಳ್ಳೆಯ ದಿನ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಕ್ಕೆ ಕರೆತರುವ ಪ್ರಯತ್ನ ಇದು. ಎಲ್ಲಾ ಸಿನಿಮಾಗಳು ಕನ್ನಡ ಸಿನಿಮಾಗಳೇ ಪ್ರೋತ್ಸಾಹಿಸಬೇಕು’ಎಂದರು. ಕನಸು ನನಸಾದ ಸಮಯಚಿದು. ನನ್ನ ಮೊದಲ ಸಿನಿಮಾವನ್ನು ಎಲ್ಲರೂ ನೋಡಿ ಎಂದರು.

    ಈಗಾಗಲೇ ಸಿನಿಮಾದಿಂದ ವೈರಲ್ ಆಗಿರುವ ‘ಟೈಮ್ ಬರುತ್ತೆ…’ ಮತ್ತು ಧೂಳ್ ಎಬ್ಬಿಸಾವ…ಹಾಡಿಗೆ ವಿದ್ಯಾರ್ಥಿಗಳ ಜೊತೆ ಸಮರ್ಥಿಜ್ ಲಂಕೇಶ್ ಮತ್ತು ನಾಯಕಿ ಸಾನ್ಯಾ ಅಯ್ಯರ್ ಡಾನ್ಸ್ ಮಾಡಿ ಸಂಭ್ರಮಿಸಿದರು.  ನಿಮ್ಮ ತಂಡದ ಖುಷಿಗೆ ಮತ್ತಷ್ಟು ಜೊಷ್ ತುಂಬಿದರು ವಿದ್ಯಾರ್ಥಿಗಳು.

  • ದಕ್ಷಿಣದ ಸಿನಿಮಾಗಳ ಮುಂದೆ ‘ಗೌರಿ’ ಸಾಂಗ್ ಸಖತ್ ಟ್ರೆಂಡಿಂಗ್

    ದಕ್ಷಿಣದ ಸಿನಿಮಾಗಳ ಮುಂದೆ ‘ಗೌರಿ’ ಸಾಂಗ್ ಸಖತ್ ಟ್ರೆಂಡಿಂಗ್

    ಇಂದ್ರಜಿತ್ ಲಂಕೇಶ್ (Indrajit Lankesh) ನಿರ್ದೇಶನದ ಸಮರ್ಜಿತ್ (Samarjit Lankesh), ಸಾನ್ಯಾ ಅಯ್ಯರ್ ಅಭಿನಯದ `ಗೌರಿ’ (Gowri) ಚಿತ್ರದ ಹುಬ್ಬಳ್ಳಿ ಜವಾರಿ ಶೈಲಿಯ `ಧೂಳ್ ಎಬ್ಬಿಸಾವ..’ ಹಾಡು ಬಿಡುಗಡೆ ಆಗಿದ್ದು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡಿಂಗ್ ನಲ್ಲಿದೆ…ಎಲ್ಲೆಲ್ಲೂ ಕೇಳಿ ಬರುತ್ತಿರೋ ಧೂಳ್ ಎಬ್ಬಿಸಾವ ಹಾಡು ಈಗ ಹೊಸ ಇತಿಹಾಸ ಬರೆದಿದೆ.

    ಧೂಳ್ ಎಬ್ಬಿಸಾವ ಸಾಂಗ್ ಆಲ್ ಇಂಡಿಯಾ ಲೆವೆಲ್ ನಲ್ಲಿ ಟ್ರೆಂಡ್ ಸೃಷ್ಟಿಸುವ ಮೂಲಕ ರೆಕಾರ್ಡ್ ಮಾಡಿದೆ.ಶಿವುಬೆರ್ಗಿ ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿರುವ ಈ ಹಾಡನ್ನು ಅನಿರುದ್ಧ್ ಶಾಸ್ತ್ರೀ  ಮತ್ತು ಅನನ್ಯಾ ಭಟ್ ಅವರ ಸುಂದರ ಕಂಠದಲ್ಲಿ ಮೂಡಿಬಂದಿದೆ. `ಗೌರಿ’ ಚಿತ್ರದ ನಾಯಕ ಸಮರ್ಜಿತ್ ಲಂಕೇಶ್ ಮತ್ತು ಖ್ಯಾತ ನಟಿ ಸಂಜನಾ ಆನಂದ್ ಈ ಹಾಡಿಗೆ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ. ಭಜರಂಗಿ ಮೋಹನ್ ಈ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ…

    ಇನ್ಸ್ಟಾಗ್ರಾಂ ಮತ್ತು ಯೂಟ್ಯೂಬ್ ನಲ್ಲಿ ಟಾಪ್ 5 ಟ್ರೆಂಡಿಂಗ್ ನಲ್ಲಿರುವ ಈ ಹಾಡಿಗೆ ನಾಡಿನ ಲಕ್ಷಾಂತರ ಮಂದಿ ರೀಲ್ಸ್ ಮಾಡುತ್ತಿದ್ದಾರೆ. ಒಂದೊಂದು  ರೀಲ್ಸ್ ಲಕ್ಷಾಂತರ ವ್ಯೂಸ್ ಮತ್ತು ಲೈಕ್ಸ್ ಪಡೆಯುತ್ತಿವೆ. ಕರ್ನಾಟಕ ಸೇರಿದಂತೆ ಇಡೀ ದೇಶದ ಜನರು ಈ ಹಾಡಿಗೆ ಫಿದಾ ಆಗಿದ್ದಾರೆ…

    ಮತ್ತೊಂದು ವಿಶೇಷ ಅಂದ್ರೆ ಆಲ್ ಇಂಡಿಯಾ ಲೆವೆಲ್ ಟ್ರೆಂಡಿಂಗ್ ನಲ್ಲಿ ಸೌತ್ ಸಾಂಗ್ ಗಳು ಸದ್ದು ಮಾಡುತ್ತಿರುವ ಲಿಸ್ಟ್ ನಲ್ಲಿ ಮೊದಲನೇ ಸ್ಥಾನ ಕಲ್ಕಿ ಚಿತ್ರದ ಹಾಡು ಪಡೆದುಕೊಂಡಿದ್ರೆ ಎರಡನೇ ಸ್ಥಾನ ಪುಷ್ಪ2 ಚಿತ್ರದ ಹಾಡು ಪಡೆದುಕೊಂಡಿದೆ. ಇನ್ನು ಮೂರನೇ ಸ್ಥಾನದಲ್ಲಿ ಕನ್ನಡದ ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಸಿನಿಮಾದ ಧೂಳ್ ಎಬ್ಬಿಸುವ ಸಾಂಗ್ ಇದೆ ಅನ್ನೋದೆ ಖುಷಿಯ ವಿಚಾರ…ಒಟ್ನಲ್ಲಿ ಸದ್ಯ ಆಲ್ ಇಂಡಿಯಾ ಮ್ಯೂಸಿಕ್ ಟ್ರೆಂಡಿಂಗ್ ಲೀಸ್ಟ್ ನಲ್ಲಿ ಬರೀ ಸೌತ್ ಚಿತ್ರಗಳೇ ಇದೆ ಎನ್ನುವುದು ಸೌತ್ ಸಿನಿಮಾ ಅಭಿಮಾನಿಗಳಿಗೆ ಹೆಮ್ಮೆಯ ವಿಚಾರವಾಗಿದೆ.

     

    ಇನ್ನು ಕಮಲ್ ಹಾಸನ್ ಅವರ ಇಂಡಿಯನ್ 2 ಚಿತ್ರದ ಹಾಡನ್ನು ಹಿಂದಿಕ್ಕಿದೆ ಗೌರಿ ಸಿನಿಮಾದ ಹಾಡು..ಅದರ ಜೊತೆಗೆ ಉತ್ತರ ಕರ್ನಾಟಕದ ಮಂದಿಯಂತು ಈ ಹಾಡಿಗೆ ಕುಣಿದು ಕುಪ್ಪಳಿಸುತ್ತಿದ್ದಾರೆ. ದೇಶದೆಲ್ಲೆಡೆ `ಗೌರಿ’ ಚಿತ್ರದ ಈ ಹಾಡು ಸಖತ್ ಧೂಳ್ ಎಬ್ಬಿಸ್ತಿದೆ. ಈಗಾಗಲೇ ಸಖತ್ ಪ್ರಮೋಷನ್ ಮೂಲಕ ಸದ್ದು ಮಾಡ್ತಿರೋ ಗೌರಿ ಸಿನಿಮಾ ಆದಷ್ಟು ಬೇಗ ದೊಡ್ಡ ಸ್ಕ್ರೀನ್ ಮೇಲೆ ಬರಲಿದೆ

  • ಸಮರ್ಜಿತ್‌ ಲಂಕೇಶ್‌, ಸಾನ್ಯಾ ನಟನೆಯ ‘ಗೌರಿ’ ಸಿನಿಮಾ ರಿಲೀಸ್‌ ಆಗೋದು ಯಾವಾಗ?

    ಸಮರ್ಜಿತ್‌ ಲಂಕೇಶ್‌, ಸಾನ್ಯಾ ನಟನೆಯ ‘ಗೌರಿ’ ಸಿನಿಮಾ ರಿಲೀಸ್‌ ಆಗೋದು ಯಾವಾಗ?

    ಇಂದ್ರಜಿತ್ ಲಂಕೇಶ್ (Indrajit Lankesh) ನಿರ್ದೇಶಿಸಿರುವ ‘ಗೌರಿ’ (Gowri Film) ಸಿನಿಮಾ 100 ದಿನಗಳ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಆಗಲಿದೆ ಎಂದು ಗೌರಿ ಚಿತ್ರದ ನಟ ಸಮರ್ಜಿತ್ ಲಂಕೇಶ್ ತಿಳಿಸಿದ್ದಾರೆ. ಇದನ್ನೂ ಓದಿ:‘ಸೀತಾರಾಮ’ ನಟಿಗೆ ಕಿಡಿಗೇಡಿಗಳ ಕಾಟ- ವೈರಲ್ ಆಗ್ತಿದೆ ಡೀಪ್ ಫೇಕ್ ಫೋಟೋ

    ಮಂಡ್ಯದಲ್ಲಿ ಸಮರ್ಜಿತ್ ಮಾತನಾಡಿ, ನೈಜ ಘಟನೆ ಆಧಾರಿತ ಕಥೆ ಇರುವ ಈ ಚಿತ್ರವನ್ನು ನಮ್ಮ ತಂದೆ ಇಂದ್ರಜಿತ್ ಲಂಕೇಶ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಎಂಟು ಹಾಡುಗಳಿದ್ದು, ಈ ಹಾಡುಗಳಲ್ಲಿ ಕೆಲವು ಹಾಡುಗಳು ಸೂಪರ್ ಹಿಟ್ ಆಗಿದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ನಮ್ಮ ಚಟ ಚಟ್ಟ ಹತ್ತಿಸುವವರೆಗೂ ಇರಬಾರದು- ದರ್ಶನ್‌ಗೆ ಉಮಾಪತಿ ಟಾಂಗ್

    ತಮ್ಮ ಜೊತೆ ಸಾನ್ಯಾ ಅಯ್ಯರ್ (Saanya Iyer) ಅವರು ನಾಯಕಿಯಾಗಿ ಪರಿಚಯ ಆಗುತ್ತಿದ್ದಾರೆ. ಈ ಚಿತ್ರ ಬಹುತಾರಾಗಣವನ್ನು ಒಳಗೊಂಡಿದ್ದು ಬಿಗ್ ಬಜೆಟ್ ಚಿತ್ರವಾಗಿದೆ ಎಂದರು. ಚಿತ್ರದಲ್ಲಿ 80 ಕಲಾವಿದರು ನಟಿಸಿದ್ದು, ರಮಣೀಯ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಾಡುಗಳು ಉತ್ತಮವಾಗಿ ಮೂಡಿ ಬಂದಿದೆ. ಐದು ಮಂದಿ ಸಂಗೀತ ನಿರ್ದೇಶಕರು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

    ಶೀಘ್ರದಲ್ಲಿಯೇ ಸಿನಿಮಾ ಬಿಡುಗಡೆಯಾಗಲಿದ್ದು, ಜನತೆ ಈ ಚಿತ್ರವನ್ನು ವೀಕ್ಷಿಸುವ ಮೂಲಕ ಪ್ರೋತ್ಸಾಹಿಸುವಂತೆ ಮನವಿ ಮಾಡಿದ್ದಾರೆ ಇಂದ್ರಜಿತ್ ಪುತ್ರ. ಕಿರುತೆರೆಯ ಪುಟ್ಟ ಗೌರಿ ಜೊತೆ ಸಮರ್ಜಿತ್ ಅದೃಷ್ಟ ಪರೀಕ್ಷೆಗಿಳಿದಿದ್ದು, ಗೆದ್ದು ಬೀಗುತ್ತಾರಾ ಕಾಯಬೇಕಿದೆ.

  • ದರ್ಶನ್ ಗೆ ನಾನ್ಯಾಕೆ ಟಾಂಗ್ ಕೊಡಲಿ: ಇಂದ್ರಜಿತ್ ಲಂಕೇಶ್

    ದರ್ಶನ್ ಗೆ ನಾನ್ಯಾಕೆ ಟಾಂಗ್ ಕೊಡಲಿ: ಇಂದ್ರಜಿತ್ ಲಂಕೇಶ್

    ಯುವ ನಟ ಸಮರ್ಜಿತ್ ಲಂಕೇಶ್ (Samarjit Lankesh) ಹಾಗೂ ನಾಯಕಿ ಸಾನ್ಯ ಅಯ್ಯರ್ ಅಭಿನಯದ ಗೌರಿ ಸಿನಿಮಾ ರಾಜ್ಯದಾದ್ಯಂತ ಜುಲೈ ನಲ್ಲಿ ತೆರೆ ಕಾಣುತ್ತಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಇದೀಗ ಸಿನಿಮಾತಂಡ ಹುಬ್ಬಳ್ಳಿಯಲ್ಲಿ ಚಿತ್ರದ ಹಾಡನ್ನು ರಿಲೀಸ್ ಮಾಡಿ ಸಂಭ್ರಮಿಸಿದೆ. ಹಾಡನ್ನು ರಿಲೀಸ್ ಮಾಡಿ ಮಾತನಾಡಿದ ನಿರ್ದೇಶಕ ಇಂದ್ರಜಿತ್ (Indrajit Lankesh) , ‘ನನ್ನ ಪುತ್ರ ಸಮರ್ಜಿತ್ ಹಾಗೂ ಸಾನ್ಯ ಅಯ್ಯರ್ ಗೆ ಇದು ಚೊಚ್ಚಲ ಸಿನಿಮಾವಾಗಿದ್ದು, ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ.  ಬೆಂಗಳೂರು ಸೇರಿದಂತೆ ರಾಜ್ಯದ ವಿವಿದ ಕಡೆ ಚಿತ್ರೀಕರಣ ಮಾಡಲಾಗಿದೆ. ಅಕ್ಕ ಗೌರಿಯ ಸಿದ್ದಾಂತ ಇದರಲ್ಲಿಯಿಲ್ಲ. ಇದು ಅಕ್ಕ ಗೌರಿಯ ಕಥೆಯೂ ಅಲ್ಲ. ಅಕ್ಕನ ಮೇಲಿನ ಅಭಿಮಾನದಿಂದ ಸಿನಿಮಾಗೆ ಆಕೆಯ ಹೆಸರು ಇಟ್ಟಿದ್ದೇನೆ’ ಎಂದರು.

    ಇನ್ನೂ ಚಿತ್ರದಲ್ಲಿ ಲೂಸ್ ಮಾದ ಯೋಗಿ, ಪ್ರಿಯಾಂಕಾ ಉಪೇಂದ್ರ, ಅಕುಲ್ ಬಾಲಾಜಿ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ನಟ ಸಮರ್ಜಿತ ಮಾತನಾಡಿ,  ಸಿನಿಮಾವನ್ನು ಕಷ್ಟಪಟ್ಟು ಮಾಡಿದ್ದು, ಅದ್ಭುತವಾಗಿ ಮೂಡಿಬಂದಿದೆ. ಜುಲೈ ತಿಂಗಳಲ್ಲಿ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದ್ದು, ಎಲ್ಲರೂ ಸಿನಿಮಾ ಚಿತ್ರಮಂದಿರಕ್ಕೆ ಹೋಗಿ ನೋಡಬೇಕು ಎಂದರು‌. ಪತ್ರಿಕಾಗೋಷ್ಠಿಯಲ್ಲಿ ನಟಿ ಸಾನ್ಯ ಅಯ್ಯರ್ ಉಪಸ್ಥಿತರಿದ್ದರು.

    ಇದೇ ಸಮಯದಲ್ಲಿ ನಟ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಇಂದ್ರಜಿತ್, ಈ ಕೇಸ್ ಬಗ್ಗೆ ನಾನು ಈಗ ಏನು ಹೇಳಲ್ಲ, ತನಿಖೆ ನಾಡೆಯುತ್ತಿದೆ. ಶಿವಮೊಗ್ಗದಲ್ಲಿ ನಾನು ಏನು ಮಾತನಾಡಿಲ್ಲ. ನನ್ನ ತಂದೆ ಹುಟ್ಟಿದ ಸ್ಥಳ ಅದು ಎಂದರು. ದರ್ಶನ್ ಅವರಿಗೆ ನಾನು ಯಾಕೆ ಟಾಂಗ್ ಕೊಡಲಿ. ಬಸವಣ್ಣನ ವಚನ ಹೇಳಿದೆ ಅಷ್ಟೆ. ಅವರ ಜೊತೆ ನಾನು ಸಿನಿಮಾ ಮಾಡಿದ್ದೇನೆ. ಪತ್ರಕರ್ತನಾಗಿ ನಾನು ಕೆಲವು ವಿಚಾರಗಳ ಬಗ್ಗೆ ಧ್ವನಿ ಎತ್ತಿದ್ದೆ ಅಷ್ಟೆ. ಅದು ಬಿಟ್ಟರೆ ನಮ್ಮ ನಡುವೆ ಏನು ಇಲ್ಲ.  ಅನ್ಯಾಯ ಆದಾಗ ಧ್ವನಿ ಎತ್ತುವ ಬಗ್ಗೆ ನನ್ನ ತಂದೆ ಲಂಕೇಶ್ ಅವರಿಂದ ಕಲಿತ್ತಿದ್ದು . ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ವಿಜಯಲಕ್ಷ್ಮಿ ಹಾಗೂ ಅವರ ಮಗನಿಗೆ ದೇವರು ಶಕ್ತಿ ಕೊಡಲಿ ಎಂದರು.

    ಸಾಮಾಜಿಕ ಜಾಲತಾಣ ಅದ್ಭುತವಾದ ಮಾದ್ಯಮ. ಅದು  ತುಂಬ ಕೆಟ್ಟದಾಗಿ ಬಳಕೆಯಾಗುತ್ತಿದೆ ಎಂದು ಸರ್ಕಾರ ಹಾಗೂ ಸೈಬರ್ ಕ್ರೈಮ್ ವಿರುದ್ದ ಇಂದ್ರಜಿತ್ ಆಕ್ರೋಶ ಹೊರಹಾಕಿದರು. ಇದೇ ಸಮಯದಲ್ಲಿ ಸರಿಯಾದ ಕ್ರಮ ಕೈಗೊಳುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಇದರಿಂದ ಇಂದಿನ ಯುವ ಜನತೆ  ಹಾಳಾಗುತ್ತಿದೆ. ಇತ್ತೀಚಿಗಷ್ಟೇ ಎಸ್ ಎಸ್ ಎಲ್‌ಸಿಯಲ್ಲಿ ರ್ಯಾಂಕ್ ಬಂದ ಹುಡುಗಿಯನ್ನು ಆಡಿಕೊಳ್ಳಲಾಯಿತು, ಅವರ ರೂಪದ ಬಗ್ಗೆ ಕೆಟ್ಟ ಕಾಮೆಂಟ್ ಮಾಡಿದರು. ನಾವು ಎಂಥ ದುರಂತದ ಸ್ಥಿತಿಯಲ್ಲಿ ಇದ್ದೀವಿ ಎಂದು ಕಳವಳ ವ್ಯಕ್ತಪಡಿಸಿದರು. .

    ಸೈಬರ್ ಕ್ರೈಮ್ ಯಾವತ್ತು ಯಾರಿಗೂ ಉಪಯೋಗ ಆಗಿಲ್ಲ. ಸಾಮಾಜಿಕ ಜಾಲತಾಣದಿಂದನೇ ಅನೇಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ, ಮಂತ್ರಿಗಳ ಮನೆಯಲ್ಲಿ ಆದಾಗ ಗೊತ್ತಾಗುತ್ತೆ. ಅತೀ ಶೀಘ್ರದಲ್ಲೆ ಇದರ ಬಗ್ಗೆ ಆಕ್ಷನ್ ತೆಗೆದುಕೊಳ್ಳಬೇಕು. ನಾನು ಕೂಡ ಇದರ ವಿರುದ್ದ ಹೋರಾಟ ಮಾಡುತ್ತೇನೆ. ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ಇಂದ್ರಜಿತ್ ಲಂಕೇಶ್ ಹುಬ್ಬಳ್ಳಿಯಲ್ಲಿ ಹೇಳಿದರು.

  • ಸಮರ್ಜಿತ್ ಲಂಕೇಶ್ ಜೊತೆ ಆರ್‌ಸಿಬಿ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಮಸ್ತ್ ಸ್ಟೆಪ್ಸ್

    ಸಮರ್ಜಿತ್ ಲಂಕೇಶ್ ಜೊತೆ ಆರ್‌ಸಿಬಿ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಮಸ್ತ್ ಸ್ಟೆಪ್ಸ್

    ಸ್ಯಾಂಡಲ್‌ವುಡ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ (Indrajit Lankesh) ಇದೀಗ ಪುತ್ರ ಸಮರ್ಜಿತ್ ಲಂಕೇಶ್‌ರನ್ನು (Samarjith Lankesh) ಚಿತ್ರರಂಗಕ್ಕೆ ಗ್ರ್ಯಾಂಡ್‌ ಆಗಿ ಲಾಂಚ್ ಮಾಡುತ್ತಿದ್ದಾರೆ. ಇದರ ನಡುವೆ ‘ಗೌರಿ’ (Gowri Film) ಸಿನಿಮಾದ ಹಾಡೊಂದಕ್ಕೆ ಆರ್‌ಸಿಬಿ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಜೊತೆ ಯುವ ನಟ ಸಮರ್ಜಿತ್ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.

    ಒಂದೇ ಥರದ ಪ್ರಚಾರಗಳೇ ತುಂಬಿ ಹೋಗಿರುವ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹೊಸ ಆವಿಷ್ಕಾರ ಮಾಡ್ತಾನೇ ಬಂದಿರುವ ಇಂದ್ರಜಿತ್ ತಮ್ಮ ಕನಸಿನ ‘ಗೌರಿ’ ಚಿತ್ರದ ‘ಲವ್ ಯೂ ಸಮಂತಾ’ ಹಾಡೊಂದನ್ನ ಬಿಡುಗಡೆ ಮಾಡಲು, ಶ್ರೇಯಾಂಕಾ ಪಾಟೀಲ್ ಅವರನ್ನ ಕರೆತಂದಿದ್ದರು. ಮೈಸೂರಿನ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶ್ರೇಯಾಂಕಾ ಅವರಿಂದ ಹಾಡನ್ನ ಬಿಡುಗಡೆಗೊಳಿಸುವ ಮೂಲಕ ಯೂತ್ಸ್‌ಗೆ ಹುಚ್ಚೆಬ್ಬಿಸಿದ್ದಾರೆ. ಇದನ್ನೂ ಓದಿ:ಡೀಪ್‍ ಫೇಕ್‍ ಸುಳಿಯಲ್ಲಿ ಮತ್ತೆ ರಶ್ಮಿಕಾ ಮಂದಣ್ಣ

    ಅಂದಹಾಗೆ, ಇದು ಶ್ರೇಯಾಂಕಾಗೆ ಮೊದಲ ಸಿನಿಮಾ ಸಮಾರಂಭ. ಅದರಲ್ಲಿಯೂ ಕಣ್ಮುಂದೆ ಉತ್ಸಾಹಿ ಯುವಕ ಯುವತಿಯರ ಗುಂಪು ಇದ್ದಾಗ, ಉತ್ಸಾಹ ಇನ್ನೂ ಹೆಚ್ಚಾಗುತ್ತೆ. ಉತ್ಸಾಹದಿಂದ ಶ್ರೇಯಾಂಕಾ ಅವರು ಇಂದ್ರಜಿತ್ ಲಂಕೇಶ್ ಪುತ್ರನ ಸಮರ್ಜಿತ್ ಲಂಕೇಶ್ ಜೊತೆ ಶ್ರೇಯಾಂಕ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.

    ‘ಗೌರಿ’ (Gowri Film) ಸಿನಿಮಾದಲ್ಲಿ ಸಮರ್ಜಿತ್ ಲಂಕೇಶ್‌ಗೆ ‘ಬಿಗ್ ಬಾಸ್’ ಬೆಡಗಿ ಸಾನ್ಯಾ ಅಯ್ಯರ್ (Saanya Iyer) ನಾಯಕಿಯಾಗಿ ನಟಿಸಿದ್ದಾರೆ. ಈ ಮೂಲಕ ಇಬ್ಬರೂ ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

  • ‘ಗೌರಿ’ ಸಿನಿಮಾದ ಪ್ರೀ ಟೀಸರ್ ರಿಲೀಸ್ ಮಾಡಿದ ಅನಿಲ್ ಕುಂಬ್ಳೆ

    ‘ಗೌರಿ’ ಸಿನಿಮಾದ ಪ್ರೀ ಟೀಸರ್ ರಿಲೀಸ್ ಮಾಡಿದ ಅನಿಲ್ ಕುಂಬ್ಳೆ

    ಲಾಫಿಂಗ್ ಬುದ್ದ ಫಿಲಂಸ್ ಲಾಂಛನದಲ್ಲಿ ಇಂದ್ರಜಿತ್ ಲಂಕೇಶ್ ನಿರ್ಮಿಸಿ, ನಿರ್ದೇಶಿಸಿರುವ ಹಾಗೂ ಸಮರ್ಜಿತ್ ಲಂಕೇಶ್ ನಾಯಕನಾಗಿ ನಟಿಸಿರುವ ಮೊದಲ ಚಿತ್ರ ‘ಗೌರಿ’. ಇತ್ತೀಚಿಗೆ ಈ ಚಿತ್ರದ ಪ್ರೀ ಟೀಸರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು.  ಸ್ಪಿನ್ ಮಾಂತ್ರಿಕ ಎಂದೆ ಖ್ಯಾತರಾಗಿರುವ ಅನಿಲ್ ಕುಂಬ್ಳೆ ಹಾಗೂ ಹೆಸರಾಂತ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಗೌರಿ ಚಿತ್ರದ ಪ್ರೀ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು. ನಿರ್ಮಾಪಕ ರಮೇಶ್ ರೆಡ್ಡಿ, ಪತ್ರಕರ್ತ ಸದಾಶಿವ ಶೆಣೈ, ಕವಿತಾ ಲಂಕೇಶ್ ಸೇರಿದಂತೆ ಸಾಕಷ್ಟು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

    ನಾನು ಹಾಗೂ ಅಜಿತ್(ಇಂದ್ರಜಿತ್) ಹಲವು ವರ್ಷಗಳ ಗೆಳೆಯರು. ಅವರ ಮಗ ಸಮರ್ಜಿತ್ ನನ್ನ ಜೊತೆ ಜಾಹೀರಾತೊಂದರಲ್ಲಿ ಅಭಿನಯಿಸಿದ್ದರು. ಈಗ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಾನ್ಯಾ ಅಯ್ಯರ್ ನಾಯಕಿಯಾಗಿ ನಟಿಸಿದ್ದಾರೆ. ಇಬ್ಬರು ಯುವ ಪ್ರತಿಭೆಗಳ ಭವಿಷ್ಯ ಉಜ್ವಲವಾಗಲಿ ಎಂದು ಅನಿಲ್ ಕುಂಬ್ಳೆ ಹಾರೈಸಿದರು.

    ಅನಿಲ್ ಕುಂಬ್ಳೆ ಅವರ ಜೊತೆಗೆ ನನ್ನದು ಮೂವತ್ತು ವರ್ಷಕ್ಕೂ ಮೀರಿದ ಗೆಳೆತನ. ಹಾಗೆ ಪುನೀತ್ ರಾಜಕುಮಾರ್ ಸಹ ಬಹಳ ಆತ್ಮೀಯರು. ಇಂದು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಅನಿಲ್ ಕುಂಬ್ಳೆ ಅವರು ನಮ್ಮ ಗೌರಿ ಚಿತ್ರದ ಪ್ರೀ ಟೀಸರ್ ಬಿಡುಗಡೆ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ. ನನ್ನ ಮಗ ಸಮರ್ಜಿತ್ ನಾಯಕನಾಗಲು ಬೇಕಾದ ಎಲ್ಲಾ ತಯಾರಿ ಮಾಡಿಕೊಂಡು ಈ ಚಿತ್ರದಲ್ಲಿ ಅಭಿನಯಿಸಿದ್ದಾನೆ.‌ ಸಾನ್ಯಾ ಅವರ ಅಭಿನಯ ಕೂಡ ಉತ್ತಮವಾಗಿದೆ. ಗೌರಿ ಚಿತ್ರ ಯಾವುದಕ್ಕೂ ಕಡಿಮೆ ಇಲ್ಲದೆ ಅದ್ದೂರಿಯಾಗಿ ಮೂಡಿಬಂದಿದೆ. ಚಿತ್ರಕ್ಕೆ ಎ.ಜೆ.ಶೆಟ್ಟಿ ಹಾಗೂ ಕೆ.ಕೆ ಇಬ್ಬರು ಛಾಯಾಗ್ರಾಹಕರು, ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ, ಶಿವು ಬೋರ್ಗಿ ಹಾಗೂ ಅನಿರುದ್ದ್ ಶಾಸ್ತ್ರಿ ನಾಲ್ವರು ಸಂಗೀತ ನಿರ್ದೇಶಕರು. ಮ್ಯಾಥ್ಯೂಸ್ ಮನು ರೀರೆಕಾರ್ಡಿಂಗ್ ಮಾಡಿದ್ದಾರೆ. ವಿ.ನಾಗೇಂದ್ರಪ್ರಸಾದ್, ಕವಿರಾಜ್, ಕೆ.ಕಲ್ಯಾಣ್, ವರದರಾಜ್ ಈ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಕೈಲಾಶ್ ಖೇರ್ ,ಚಂದನ್ ಶೆಟ್ಟಿ, ಅನಿರುದ್ಧ ಶಾಸ್ತ್ರಿ, ಜಾವೇದ್ ಅಲಿ, ಅನನ್ಯ ಭಟ್, ನಿಹಾಲ್ ತೌರೋ, ಅದಿತಿ ಸಾಗರ್, ಬಾಲಸುಬ್ರಹ್ಮಣ್ಯಂ ಹಾಗೂ ಪ್ರಜ್ಞಾ ಮರಾಠೆ, ಸಮರ್ಜಿತ್ ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ.  ಗುಬ್ಬಿ, ಮಾಸ್ತಿ, ರಾಜಶೇಖರ್ ಹಾಗೂ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ರವಿವರ್ಮ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ.  ಹೀಗೆ ನುರಿತ ತಂತ್ರಜ್ಞರ ಕಾರ್ಯವೈಖರಿ ಹಾಗು ಕಲಾವಿದರ ಉತ್ತಮ ಅಭಿನಯದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದು ಇಂದ್ರಜಿತ್ ಲಂಕೇಶ್ ತಿಳಿಸಿದರು.

    ನಮ್ಮ ಚಿತ್ರದ ಪ್ರೀ ಟೀಸರ್ ಬಿಡುಗಡೆ ಮಾಡಿಕೊಟ್ಟ ಅನಿಲ್ ಕುಂಬ್ಳೆ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು.‌ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಸಮರ್ಜಿತ್ ಲಂಕೇಶ್. ಅವಕಾಶ ಕೊಟ್ಟ ನಿರ್ಮಾಪಕ,  ನಿರ್ದೇಶಕರಿಗೆ ಹಾಗೂ ಆಗಮಿಸಿದ್ದ ಗಣ್ಯರಿಗೆ ನಾಯಕಿ ಸಾನ್ಯಾ ಅಯ್ಯರ್ ವಿಶೇಷವಾಗಿ ಧನ್ಯವಾದ ಹೇಳಿದರು.

    ಸಂಭಾಷಣೆ ಬರೆದಿರುವ ಮಾಸ್ತಿ, ರಾಜಶೇಖರ್, ಸಂಗೀತ ನಿರ್ದೇಶನ ಮಾಡಿರುವ ಅನಿರುದ್ದ್ ಶಾಸ್ತ್ರಿ, ಹಿನ್ನೆಲೆ ಸಂಗೀತ ನೀಡಿರುವ ಮ್ಯಾಥ್ಯೂಸ್ ಮನು, ನಟ ನೀನಾಸಂ ಅಶ್ವಥ್ ಹಾಗೂ ಗಾಯಕರಾದ ಅದಿತಿ ಸಾಗರ್, ಬಾಲಸುಬ್ರಹ್ಮಣ್ಯಂ ಹಾಗೂ ಪ್ರಜ್ಞಾ ಮರಾಠೆ ಮುಂತಾದವರು ಗೌರಿ ಚಿತ್ರದ ಕುರಿತು ಮಾತನಾಡಿದರು.

  • ಸಮರ್ಜಿತ್ ಲಂಕೇಶ್ ಜೊತೆ ತಾನ್ಯ ಡಾನ್ಸ್ : ಇದು ಪುನೀತ್ ಹುಟ್ಟುಹಬ್ಬಕ್ಕೆ ಗಿಫ್ಟ್

    ಸಮರ್ಜಿತ್ ಲಂಕೇಶ್ ಜೊತೆ ತಾನ್ಯ ಡಾನ್ಸ್ : ಇದು ಪುನೀತ್ ಹುಟ್ಟುಹಬ್ಬಕ್ಕೆ ಗಿಫ್ಟ್

    ತ್ರಕರ್ತ, ನಟ, ನಿರ್ಮಾಪಕ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ (Indrajit Lankesh) ಅವರ ಪುತ್ರ ಸಮರ್ಜಿತ್ ಲಂಕೇಶ್ ‘ಗೌರಿ’ (Gauri) ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇಂದ್ರಜಿತ್ ಅವರೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮಾರ್ಚ್ 17,  ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅವರ ಹುಟ್ಟುಹಬ್ಬ. ಪುನೀತ್ ಅವರ ಹುಟ್ಟುಹಬ್ಬಕ್ಕೆ ‘ಗೌರಿ’ ತಂಡದಿಂದ ವಿಶೇಷ ಗೀತೆಯೊಂದು ಬರಲಿದೆ. ಈ ವಿಶೇಷ ಗೀತೆಗೆ ಸಮರ್ಜಿತ್ ಲಂಕೇಶ್ ಜೊತೆ ದಕ್ಷಿಣ ಭಾರತದ ಖ್ಯಾತ ನಟಿ ತಾನ್ಯ ಹೋಪ್ ಹೆಜ್ಜೆ (Dance) ಹಾಕಲಿದ್ದಾರೆ. ಮೋಹನ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಈ ಹಾಡಿನ ಬಗ್ಗೆ ಚಿತ್ರತಂಡದ ಸದಸ್ಯರು ಮಾತನಾಡಿದರು.

    ನಾನು ಅಪ್ಪು ಅವರ ಅಭಿಮಾನಿ ಎಂದು ಮಾತನಾಡಿದ ಸಮರ್ಜಿತ್ (Samarjit Lankesh), ಪುನೀತ್ ಅವರ ಡ್ಯಾನ್ಸ್ ನನಗೆ ಸ್ಪೂರ್ತಿ. ಹಾಗಾಗಿ ಅವರ ಹುಟ್ಟುಹಬ್ಬದಂದು ಗೌರಿ ಚಿತ್ರತಂಡದಿಂದ ಈ ಹಾಡನ್ನು ಬಿಡುಗಡೆ ಮಾಡುವ ಮೂಲಕ ಅವರಿಗೆ ನಮನ ಸಲ್ಲಿಸುತ್ತಿದ್ದೇವೆ ಎಂದರು.

    ಇಂದ್ರಜಿತ್  ಅವರ ಮಗ ಸಮರ್ಜಿತ್ ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರವಿದು. ಸಮರ್ಜಿತ್ ಬಹಳ ಲವಲವಿಕೆಯ ಹುಡುಗ. ಈ ಹಾಡಿನಲ್ಲಿ ಸಮರ್ಜಿತ್ ಅವರ ಜೊತೆ ಅಭಿನಯಿಸುತ್ತಿರುವುದು ಖುಷಿಯಾಗಿದೆ.  ನಾನು ಸಹ ಪುನೀತ್ ಅವರ ಅಭಿಮಾನಿ‌ ಎಂದು ತಾನ್ಯ ಹೋಪ್ ತಿಳಿಸಿದರು.

    ಈಗಾಗಲೇ ಗೌರಿ ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಆದರೆ ಇಂದು ಸಿನಿಮಾಗಿಂತ ಈ ಹಾಡಿನ ಬಗ್ಗೆ ಹೇಳಲು ಬಯಸುತ್ತೇನೆ. ಮುಂಬರುವ ಪುನೀತ್ ಅವರ ಹುಟ್ಟುಹಬ್ಬಕ್ಕೆ ಗೌರಿ ಚಿತ್ರತಂಡದಿಂದ ವಿಶೇಷ ಹಾಡೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಪುನೀತ್ ರಾಜಕುಮಾರ್ ಅವರ ಚಿತ್ರಗಳ ಪ್ರಸಿದ್ದ ಹಾಡುಗಳಿಗೆ ಸಮರ್ಜಿತ್ ಹಾಗೂ ತಾನ್ಯ ಹೋಪ್ ಹೆಜ್ಜೆ ಹಾಕಲಿದ್ದಾರೆ.

     

    ಈ ವಿಶೇಷ ಗೀತೆಯ ತಾಲೀಮು ನಡೆಯುತ್ತಿದೆ. ಸದ್ಯದಲ್ಲೇ ಚಿತ್ರೀಕರಣವಾಗಲಿದೆ ಎನ್ನುತ್ತಾರೆ ನಿರ್ದೇಶಕ ಇಂದ್ರಜಿತ್ ಲಂಕೇಶ್. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಸಮರ್ಜಿತ್ ಲಂಕೇಶ್ ಅವರಿಗೆ ನಾಯಕಿಯಾಗಿ ಸಾನ್ಯ ಅಯ್ಯರ್ ನಟಿಸುತ್ತಿದ್ದಾರೆ.