Tag: ಸಮರ್ಜಿತ್‌

  • ಸಮರ್ಜಿತ್ ಲಂಕೇಶ್ ಅಭಿನಯದ ಚೊಚ್ಚಲ ಚಿತ್ರದ ಸಾಂಗ್ ರಿಲೀಸ್

    ಸಮರ್ಜಿತ್ ಲಂಕೇಶ್ ಅಭಿನಯದ ಚೊಚ್ಚಲ ಚಿತ್ರದ ಸಾಂಗ್ ರಿಲೀಸ್

    ತ್ರಕರ್ತ, ನಿರ್ದೇಶಕ ಹಾಗೂ ನಿರ್ಮಾಪಕ ಇಂದ್ರಜಿತ್ ಲಂಕೇಶ್ (Indrajit Lankesh) ಪುತ್ರ ಸಮರ್ಜಿತ್ (Samarjit) ಲಂಕೇಶ್ “ಗೌರಿ” (Gowri) ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇಂದ್ರಜಿತ್ ಲಂಕೇಶ್ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಇತ್ತೀಚಿಗೆ ಬಸವನಗುಡಿಯ ಬಿ.ಎಂ.ಎಸ್ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ, ಸಾವಿರಾರು ವಿದ್ಯಾರ್ಥಿಗಳ ಸಮ್ಮಖದಲ್ಲಿ “ಗೌರಿ” ಚಿತ್ರದ ಮೊದಲ ಹಾಡು ಲೋಕಾರ್ಪಣೆಯಾಯಿತು.

    ಇಂದ್ರಜಿತ್ ಲಂಕೇಶ್, ಸಮರ್ಜಿತ್ ಲಂಕೇಶ್, ಸಾನ್ಯಾ ಅಯ್ಯರ್, ಅವಿನಾಶ್, ವಿಷ್ಣು ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ವಿಜಯ್ ಈಶ್ವರ್ ಬರೆದಿರುವ “ಟೈಮ್ ಬರತ್ತೆ” ಎಂಬ ಹಾಡು ಈ ಚಿತ್ರದ ಚೊಚ್ಚಲಗೀತೆಯಾಗಿ ಬಿಡುಗಡೆಯಾಗಿದ್ದು, ಖ್ಯಾತ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಈ ಹಾಡಿಗೆ ಸಂಗೀತ ನೀಡಿ, ಹಾಡಿದ್ದಾರೆ. ಯವಜನತೆಗೆ ಹತ್ತಿರವಾಗಿರುವ ಈ ಹಾಡಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಹಾಡು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

    ಹಾಡು ಬಿಡುಗಡೆ ನಂತರ ಮಾತನಾಡಿದ ನಿರ್ಮಾಪಕ, ನಿರ್ದೇಶಕ ಇಂದ್ರಜಿತ್ ಲಂಕೇಶ್, ಇಂದು “ಗೌರಿ” ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದ್ದೇವೆ. ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದೆ. ಐದು ಜನ ಸಂಗೀತ ನಿರ್ದೇಶಕರು ಈ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಭಾರತದ ಹನ್ನೆರಡಕ್ಕೂ ಅಧಿಕ ಹೆಸರಾಂತ ಗಾಯಕರು “ಗೌರಿ” ಚಿತ್ರದ ಹಾಡುಗಳನ್ನು ಹಾಡಿದ್ದಾರೆ.

    ಚಂದನ್ ಶೆಟ್ಟಿ ಸಂಗೀತ ನೀಡಿ ಹಾಡಿರುವ ಮೊದಲ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ‌. ಇದರ ಜೊತೆಗೆ ಈ ಹಾಡಿಗೆ ನಾಯಕ ಸಮರ್ಜಿತ್, ನಾಯಕಿ ಸಾನ್ಯಾ ಅಯ್ಯರ್ ಹಾಗೂ ನಟಿ ಸಂಯುಕ್ತ ಹೆಗಡೆ ರೀಲ್ಸ್ ಕೂಡ ಮಾಡಿದ್ದಾರೆ‌. ಈ ಹಾಡಿನ ಲಿರಿಕಲ್ ವಿಡಿಯೋ ಹಾಗೂ ರೀಲ್ಸ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.  ಉಳಿದ ಹಾಡುಗಳು ಅನಾವರಣವಾಗಲಿದೆ. ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ‌‌ ಎಂದರು.

    “ಗೌರಿ” ಚಿತ್ರದ ಮೊದಲ ಹಾಡಿಗೆ ಸಿಗುತ್ತಿರುವ ಮೆಚ್ಚುಗೆಗೆ ಮನ ತುಂಬಿ ಬಂದಿದೆ ನಿಮ್ಮೆಲ್ಲರ ಹಾರೈಕೆ ನಮ್ಮ ಚಿತ್ರಕ್ಕಿರಲಿ ಎಂದರು ನಾಯಕ ಸಮರ್ಜಿತ್ ಲಂಕೇಶ್ ಹಾಗೂ ನಾಯಕಿ ಸಾನ್ಯಾ ಅಯ್ಯರ್.

  • ಇಂದ್ರಜಿತ್ ಲಂಕೇಶ್ ಪುತ್ರನ ಜೊತೆ ಪ್ರೇಮಿಗಳ ದಿನಕ್ಕೂ ಮುನ್ನ ಸಾನ್ಯಾ ಫೋಟೋಶೂಟ್

    ಇಂದ್ರಜಿತ್ ಲಂಕೇಶ್ ಪುತ್ರನ ಜೊತೆ ಪ್ರೇಮಿಗಳ ದಿನಕ್ಕೂ ಮುನ್ನ ಸಾನ್ಯಾ ಫೋಟೋಶೂಟ್

    ನಿರ್ದೇಶಕ ಇಂದ್ರಜಿತ್ ಲಂಕೇಶ್ (Indrajit Lankesh) ಅವರ ಬಹು ನಿರೀಕ್ಷಿತ `ಗೌರಿ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಖ್ಯಾತ ಸಾಹಿತಿ ಪಿ.ಲಂಕೇಶ್ ಅವರ ಮೊಮ್ಮಗ, ಲಂಕೇಶ್ ಕುಟುಂಬದ ಮೂರನೇ ತಲೆಮಾರು ಸಮರ್ಜಿತ್ ಲಂಕೇಶ್ (Samarjit) ನಾಯಕ ನಟನಾಗಿದ್ದು, ಸಾನ್ಯಾ ಅಯ್ಯರ್ ನಾಯಕಿಯಾಗಿದ್ದಾರೆ. ಬಹುದೊಡ್ಡ ತಾರಾಗಣವಿರುವ `ಗೌರಿ’ ಚಿತ್ರದ ಅಪರೂಪದ, ವಿಭಿನ್ನ, ವಿಶಿಷ್ಠ ಶೈಲಿಯ ಫೋಟೋ ಶೂಟ್ ಬುಕ್ ಮೈ ಕ್ಯಾಪ್ಚರ್ ನಲ್ಲಿ ಯಶಸ್ವಿಯಾಗಿ ನಡೆದಿದೆ.

    ಪ್ರೇಮಿಗಳ ದಿನಕ್ಕೂ ಮುನ್ನ ಖ್ಯಾತ ಛಾಯಾಗ್ರಾಹಕ ಕೆನಡಾದ ರೋಹಿತ್ ಅವರ ಕ್ಯಾಮೆರಾದಲ್ಲಿ ಫೋಟೋಗಳು ಸೆರೆ ಆಗಿವೆ. ಅವರ ಕೈಚಳಕ, ದೀಪಿಕಾ ಪಡುಕೋಟೆ ಸೇರಿದಂತೆ ಅನೇಕ ಖ್ಯಾತ ಸೆಲಬ್ರೆಟಿಗಳ ಮೇಕಪ್ ಆರ್ಟಿಸ್ಟ್ ಗೌರಿ ಕಪೂರ್ ಅವರ ಮೇಕಪ್ ಮೋಡಿ ಮಾಡಿದೆ. ಪ್ರೇಮಿಗಳ ದಿನಕ್ಕೆ ಭಾವನೆಗಳ ಸಂಗಮದ ಫೋಟೋ ಶೂಟ್ ಅದಾಗಿದೆ.

    ಸಾನ್ಯ ಅಯ್ಯರ್ ತಮ್ಮ ಚೊಚ್ಚಲು ಸಿನಿಮಾ ‘ಗೌರಿ’ ಶೂಟಿಂಗ್ ಮುಗಿಸಿದ್ದಾರೆ. ಡಬ್ಬಿಂಗ್ (Dubbing) ಕೆಲಸವನ್ನೂ ಮುಗಿಸಿದ್ದಾರೆ. ಡಬ್ಬಿಂಗ್ ಮಾಡುತ್ತಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅವರು ಪೋಸ್ಟ್ ಮಾಡಿದ್ದರು. ಜೊತೆಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಕೂಡ ಇದ್ದರು. ಆ ಫೋಟೋ ವೈರಲ್ ಕೂಡ ಆಗಿತ್ತು.

    ‘ಗೌರಿ’ (Gauri) ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಂತೆಯೇ ಕಿರುತೆರೆಯ ಪುಟ್ಟಗೌರಿ ಸಾಕಷ್ಟು ಬದಲಾವಣೆ ಕಾಣುತ್ತಿದ್ದಾರೆ. ಸಖತ್ ಹಾಟ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದ ಸಾನ್ಯಾ ಅಯ್ಯರ್ (Sanya Iyer), ಈ ಚಿತ್ರಕ್ಕಾಗಿ ಮತ್ತೊಂದು ಫೋಟೋ ಶೂಟ್ (Photoshoot) ನಲ್ಲಿ ಭಾಗಿಯಾಗಿದ್ದರು.

    ಬ್ಲೌಸ್ ಇಲ್ಲದೇ ಕೇವಲ ಸೀರೆ ಉಟ್ಟುಕೊಂಡು ಫೋಟೋ ಶೂಟ್ ಮಾಡಿಸಿಕೊಂಡಿರುವ ಸಾನ್ಯಾ ಅಯ್ಯರ್. ಆ ಫೋಟೋದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಬ್ಯಾಕ್ ಲೆಸ್ ಪೋಸ್ ಕೂಡ ನೀಡಿದ್ದರು. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದ್ದವು.

    ಈ ಹಿಂದೆಯೂ ಸಾನ್ಯಾ ಬಿಕಿನಿ ಫೋಟೋಶೂಟ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಗೌರಿ ಚಿತ್ರಕ್ಕಾಗಿ ಹೊಸ ಲುಕ್‌ನಲ್ಲಿ ಸ್ಟೈಲೀಶ್ ಗೆಟಪ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ. ಬ್ಲೌಸ್ ಇಲ್ಲದೇ ಸೀರೆ ತೊಟ್ಟಿದ್ದಾರೆ.

     

    ಗೌರಿ ಸಿನಿಮಾ ಚಿಕ್ಕಮಗಳೂರು ಸೇರಿದಂತೆ ನಾನಾ ಸ್ಥಳಗಳಲ್ಲಿ ಶೂಟ್ ಆಗಿದೆ. ರವಿವರ್ಮ ಅವರ ಸಾಹಸ ನಿರ್ದೇಶನದಲ್ಲಿ ಸಾಹಸ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದೆ. ಸಮರ್ಜಿತ್ ನಾನು ಅಂದುಕೊಂಡದಕ್ಕಿಂತ ಚೆನ್ನಾಗಿ ಅಭಿನಯಿಸಿದ್ದಾರೆ. ಸಾನ್ಯ ಅವರು ಕೂಡ. ಮುಖ್ಯಮಂತ್ರಿ ಚಂದ್ರು, ಸಿಹಿಕಹಿ ಚಂದ್ರು, ಮಾನಸಿ ಸುಧೀರ್, ಎಸ್ತರ್ ನರೋನ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

  • ಹುಟ್ಟುಹಬ್ಬ ಆಚರಿಸಿಕೊಂಡ ‘ಗೌರಿ’ ನಾಯಕ ಸಮರ್ಜಿತ್ ಲಂಕೇಶ್

    ಹುಟ್ಟುಹಬ್ಬ ಆಚರಿಸಿಕೊಂಡ ‘ಗೌರಿ’ ನಾಯಕ ಸಮರ್ಜಿತ್ ಲಂಕೇಶ್

    ಖ್ಯಾತ ಸಾಹಿತಿ ಪಿ.ಲಂಕೇಶ್ ಮೊಮ್ಮಗ ಹಾಗೂ ಇಂದ್ರಜಿತ್ ಲಂಕೇಶ್ (Indrajit Lankesh) ಮಗ ಸಮರ್ಜಿತ್ ಲಂಕೇಶ್ ‘ಗೌರಿ’ (Gauri) ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಇತ್ತೀಚೆಗೆ ನಾಯಕ ಸಮರ್ಜಿತ್ (Samarjit) ಲಂಕೇಶ್ ಹುಟ್ಟುಹಬ್ಬವನ್ನು ಚಿತ್ರತಂಡದ ಸದಸ್ಯರು ಆಚರಿಸಿದರು. ಸಮರ್ಜಿತ್ ಅವರ ಅಜ್ಜಿ, ಪಿ.ಲಂಕೇಶ್ ಪತ್ನಿ ಇಂದಿರಾ ಲಂಕೇಶ್,  ತಾಯಿ ಅರ್ಪಿತಾ ಲಂಕೇಶ್, ಇಂದ್ರಜಿತ್ ಲಂಕೇಶ್, ನಾಯಕಿ ಸಾನ್ಯ ಅಯ್ಯರ್, ನಟಿಯರಾದ ಮಾನಸಿ ಸುಧೀರ್, ಎಸ್ತರ ನರೋನ, ಹಿರಿಯ ಛಾಯಾಗ್ರಾಹಕ ಕೆ.ಕೆ  ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

    ಗೌರಿ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಈಗಾಗಲೇ ಚಿಕ್ಕಮಗಳೂರಿನ ರಮಣೀಯ ಸ್ಥಳಗಳಲ್ಲಿ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ರವಿವರ್ಮ ಅವರ ಸಾಹಸ ನಿರ್ದೇಶನದಲ್ಲಿ ಸಾಹಸ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದೆ. ಸಮರ್ಜಿತ್ ನಾನು ಅಂದುಕೊಂಡದಕ್ಕಿಂತ ಚೆನ್ನಾಗಿ ಅಭಿನಯಿಸುತ್ತಿದ್ದಾರೆ. ಸಾನ್ಯ ಅವರು ಕೂಡ. ಮುಖ್ಯಮಂತ್ರಿ ಚಂದ್ರು, ಸಿಹಿಕಹಿ ಚಂದ್ರು, ಮಾನಸಿ ಸುಧೀರ್, ಎಸ್ತರ್ ನರೋನ ಮುಂತಾದವರು ನಮ್ಮ ಚಿತ್ರದಲ್ಲಿ ನಟಿಸುತ್ತಿದ್ದಾರೆ‌. ಹಿರಿಯ ಛಾಯಾಗ್ರಾಹಕ ಕೆ.ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಇದು ಅವರ ನೂರನೇ ಚಿತ್ರ ಎಂದು ಇಂದ್ರಜಿತ್ ಲಂಕೇಶ್ ತಿಳಿಸಿದರು.

    ನಾನು ಹುಟ್ಟುಹಬ್ಬವನ್ನು (Birthday) ಅದ್ದೂರಿಯಾಗಿ ಆಚರಿಸಿಕೊಳ್ಳುವುದಿಲ್ಲ ಎಂದು ಮಾತನಾಡಿದ ಸಮರ್ಜಿತ್ ಲಂಕೇಶ್, ಇಂದು ಚಿತ್ರತಂಡದವರು ನನ್ನ ಹುಟ್ಟುಹಬ್ಬ ಆಚರಿಸಿದ್ದು ಖುಷಿಯಾಗಿದೆ. ಎಲ್ಲರಿಗೂ ಧನ್ಯವಾದ. ಸಾಕಷ್ಟು ತಯಾರಿ ಮಾಡಿಕೊಂಡು ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಚಿತ್ರ ಚೆನ್ನಾಗಿ ಮೂಡಿಬರುವ ಭರವಸೆ ಇದೆ ಎಂದರು. ನಾಯಕಿ ಸಾನ್ಯ ಅಯ್ಯರ್ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡರು. ಮಾನಸಿ ಸುಧೀರ್ ಹಾಗೂ ಎಸ್ತರ್ ನರೋನ ಸಹ ಚಿತ್ರದ ಕುರಿತು ಮಾತನಾಡಿದರು.

    ಇದು ನನ್ನ ನೂರನೇ ಚಿತ್ರ. ನನ್ನ ಮಗ ನಾಣಿ ಕೂಡ ಈ ಚಿತ್ರದಲ್ಲಿ ನನ್ನ ಜೊತೆ ಕೆಲಸ ಮಾಡುತ್ತಿದ್ದಾರೆ. ಸಮರ್ಜಿತ್ ನಟನೆ ನೋಡಿದಾಗ ಮೊದಲ ಚಿತ್ರ ಅನಿಸುವುದಿಲ್ಲ. ಅಷ್ಟು ಚೆನ್ನಾಗಿ ನಟಿಸುತ್ತಿದ್ದಾರೆ ಎಂದರು ಛಾಯಾಗ್ರಾಹಕ ಕೆ.ಕೆ. ಸಮರ್ಜಿತ್ ಅಜ್ಜಿ ಇಂದಿರಾ ಲಂಕೇಶ್ ಅವರು ಮೊಮ್ಮಗನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು.

    ಸಮರ್ಜಿತ್ ತಮ್ಮ ಹುಟ್ಟುಹಬ್ಬವನ್ನು ಅನೇಕ ಸಾಮಾಜಿಕ ಕಾರ್ಯಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಬೆಳಗ್ಗೆ ಸಿದ್ದಗಂಗಾ ಮಠಕ್ಕೆ ತೆರಳಿ ಶಿವಕುಮಾರ ಸ್ವಾಮಿಗಳ ಗದ್ದುಗೆ ದರ್ಶನ ಮಾಡಿ ಆಶೀರ್ವಾದ ಪಡೆದುಕೊಂಡರು.  ಆನಂತರ ಕಂಠೀರವ ಸ್ಟುಡಿಯೋಗೆ ಆಗಮಿಸಿ ಪುನೀತ್ ರಾಜಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೊದಲ ಚಿತ್ರದ ಶೂಟಿಂಗ್‌ ಎಲ್ಲಿಗೆ ಬಂತು? ಅಪ್‌ಡೇಟ್‌ ಕೊಟ್ರು ಸಾನ್ಯ ಅಯ್ಯರ್

    ಮೊದಲ ಚಿತ್ರದ ಶೂಟಿಂಗ್‌ ಎಲ್ಲಿಗೆ ಬಂತು? ಅಪ್‌ಡೇಟ್‌ ಕೊಟ್ರು ಸಾನ್ಯ ಅಯ್ಯರ್

    ‘ಬಿಗ್ ಬಾಸ್’ (Bigg Boss Kannada) ಖ್ಯಾತಿಯ ಸಾನ್ಯ ಅಯ್ಯರ್ (Saanya Iyer)  ಸ್ಯಾಂಡಲ್‌ವುಡ್‌ಗೆ (Sandalwood) ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಸಿನಿಮಾ ‘ಗೌರಿ’ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಸಿನಿಮಾ ಯಾವ ಹಂತಕ್ಕೆ ಬಂದಿದೆ ಎಂಬುದರ ಬಗ್ಗೆ ನಟಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

    ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಗೌರಿ’ (Gowri) ಸಿನಿಮಾದಲ್ಲಿ ಸಮರ್ಜಿತ್ ಲಂಕೇಶ್‌ಗೆ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಇನ್ನೂ ಕೆಲವು ದಿನಗಳ ಶೂಟಿಂಗ್ ಬಾಕಿಯಿದೆ. ಇದನ್ನೂ ಓದಿ:‘ಆದಿಪುರುಷ್’ ಸೋಲಿನ ಬಳಿಕ ಮಾಸ್ ಆಗಿ ಎಂಟ್ರಿ ಕೊಟ್ರು ಕೃತಿ ಸನೋನ್

    ಈ ಚಿತ್ರದ ಮೂಲಕ ಮಗ ಸಮರ್ಜಿತ್‌ರನ್ನ ಚಿತ್ರರಂಗಕ್ಕೆ ಇಂದ್ರಜಿತ್ ಲಂಕೇಶ್ (Indrajit Lankesh) ಪರಿಚಯಿಸುತ್ತಿದ್ದಾರೆ. ಸಮರ್ಜಿತ್ ಮುಂದೆ ವಿಲನ್ ಆಗಿ ಚಂದು ಗೌಡ ಅಬ್ಬರಿಸುತ್ತಿದ್ದಾರೆ. ವಿಭಿನ್ನ ಕಥೆಯನ್ನ ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪರಿಚಯಿಸಲು ಹೊರಟಿದ್ದಾರೆ.

    ‘ಪುಟ್ಟಗೌರಿ ಮದುವೆ’ ಮದುವೆ ಬಳಿಕ ಬಿಗ್ ಬಾಸ್ ರಿಯಾಲಿಟಿ ಶೋ (Bigg Boss Kannada) ಮೂಲಕ ಕನ್ನಡಿಗರ ಮನಗೆದ್ದ ನಟಿ ಈಗ ನಾಯಕಿಯಾಗಿ ಮಿಂಚಲು ರೆಡಿಯಾಗಿದ್ದಾರೆ. ಸಕಲ ತಯಾರಿ ಮಾಡಿಕೊಂಡೇ ನಟನೆಯ ಅಖಾಡಕ್ಕೆ ಸಾನ್ಯ ಇಳಿದಿದ್ದಾರೆ. ನಾಯಕಿಯಾಗಿ ಗೆದ್ದು ಬೀಗುತ್ತಾರಾ? ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]