Tag: ಸಮಂತಾ ರುತ್ ಪ್ರಭು

  • ನಾಗ-ಸಮಂತಾ ಡಿವೋರ್ಸ್‌ ಹೇಳಿಕೆ ಹಿಂಪಡೆದು ಕ್ಷಮೆ – ಕೊಂಡಾ ಸುರೇಖಾ ವಿರುದ್ಧ ನಾಗಾರ್ಜುನ ಅಕ್ಕಿನೇನಿ ದೂರು

    ನಾಗ-ಸಮಂತಾ ಡಿವೋರ್ಸ್‌ ಹೇಳಿಕೆ ಹಿಂಪಡೆದು ಕ್ಷಮೆ – ಕೊಂಡಾ ಸುರೇಖಾ ವಿರುದ್ಧ ನಾಗಾರ್ಜುನ ಅಕ್ಕಿನೇನಿ ದೂರು

    ಹೈದರಾಬಾದ್‌: ನಾಗಚೈತನ್ಯ ಮತ್ತು ನಟಿ ಸಮಂತಾ ರುತ್‌ ಪ್ರಭು ವಿಚ್ಛೇದನಕ್ಕೆ ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆಟಿ ರಾಮರಾವ್‌ ಕಾರಣ ಎಂದು ಬಾಂಬ್‌ ಸಿಡಿಸಿ ವಿವಾದಕ್ಕೆ ಸಿಲುಕಿದ್ದ ತೆಲಂಗಾಣ ಅರಣ್ಯ ಸಚಿವೆ ಕೊಂಡಾ ಸುರೇಖಾ (Konda Surekha) ವಿರುದ್ಧ ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್ ನಾಗಾರ್ಜುನ ಅಕ್ಕಿನೇನಿ (Nagarjuna Akkineni) ದೂರು ದಾಖಲಿಸಿದ್ದಾರೆ.

    ತಮ್ಮ ಮಗ ಮತ್ತು ಸಮಂತಾ ದಾಂಪತ್ಯ ಜೀವನಕ್ಕೆ ಸಂಬಂಧಿಸಿದಂತೆ ಮಾನಹಾನಿಕರ ಹೇಳಿಕೆ ನೀಡಿದ್ದರೆಂದು ಆರೋಪಿಸಿ ಕಾಂಗ್ರೆಸ್‌ ನಾಯಕರಿಗೆ (Congress Leaders) ದೂರು ಸಲ್ಲಿಸಿದ್ದಾರೆ. ಹೈದರಾಬಾದ್‌ನ ನಾಂಪಲ್ಲಿಯಲ್ಲಿ ದೂರು ದಾಖಲಿಸಿದ್ದಾರೆ. ಸುರೇಖಾ ಸುಳ್ಳು ಹೇಳಿಕೆ ನೀಡಿದ್ದಾರೆ. ಈ ಮೂಲಕ ವೈಯಕ್ತಿ, ವೃತ್ತಿಪರ, ಕೌಟುಂಬಿಕ ಪ್ರತಿಷ್ಠೆಗೆ ಹಾನಿ ಮಾಡಿದ್ದಾರೆ. ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಆರೋಪ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: BBK 11: ಧರ್ಮ ಕೀರ್ತಿರಾಜ್‌ ಮೇಲೆ ಲವ್‌ ಆಯ್ತಾ?- ದೊಡ್ಮನೆಯಲ್ಲಿ ತ್ರಿಕೋನ ಪ್ರೇಮಕಥೆ

    ಕ್ಷಮೆಯಾಚಿಸಿದ ಸುರೇಖಾ
    ತಮ್ಮ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಹಿಂದೇಟು ಹಾಕಿದ ಸಚಿವೆ ಕೊಂಡಾ ಸುರೇಖಾ ಹೇಳಿಕೆ ಹಿಂಪಡೆದು ಕ್ಷಮೆ ಕೋರಿದ್ದಾರೆ. ನನಗೆ ಯಾರ ವಿರುದ್ಧವೂ ವೈಯಕ್ತಿಕ ದ್ವೇಷವಿಲ್ಲ. ಮಾತಿನ ಭರದಲ್ಲಿ ಬಾಯಿತಪ್ಪಿ ಆಡಿದ ಮಾತಿದು. ತೆಲುಗು ಚಿತ್ರರಂಗದ ಕುರಿತು ನಾನು ನೀಡಿದ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಕೆಟಿಆರ್‌ ವಿರುದ್ಧ ಮಾಡಿರುವ ಆರೋಪಗಳಿಗೆ ನಾನು ಬದ್ಧಳಾಗಿದ್ದೇನೆ ಎಂದು ಕೂಡ ಹೇಳಿದ್ದಾರೆ. ಇದನ್ನೂ ಓದಿ: 160 ಎಕರೆ ಪ್ರದೇಶದಲ್ಲಿ ಮೈಸೂರು ಫಿಲಂ ಸಿಟಿ ನಿರ್ಮಾಣ: ಸಿದ್ದರಾಮಯ್ಯ

    ಸಮಂತಾ ಬಗ್ಗೆ ಗೌರವವಿದೆ:
    ನನ್ನ ಹೇಳಿಕೆಯಿಂದ ನಟಿ ಸಮಂತಾ (Samantha Ruth Prabhu) ಅವರಿಗೆ ನೋವಾಗಿದ್ದರೆ ಈ ಕೂಡಲೇ ಹೇಳಿಕೆ ಹಿಂಪಡೆಯುತ್ತೇನೆ. ಯಾರ ಮನಸ್ಸನ್ನೂ ನೋಯಿಸುವುದು ನನ್ನ ಉದ್ದೇಶ ಆಗಿರಲಿಲ್ಲ. ಅನ್ಯಥಾ ಭಾವಿಸಬೇಡಿ. ನನ್ನ ಹೇಳಿಕೆ ರಾಜಕೀಯ ನಾಯಕರು ಮಹಿಳೆಯರನ್ನು ಕೀಳಾಗಿ ಕಾಣುವುದನ್ನು ಪ್ರಶ್ನಿಸುವ ಉದ್ದೇಶವಾಗಿತ್ತೇ ಹೊರತು ನಿಮ್ಮ (ಸಮಂತಾ) ಭಾವನೆಗಳನ್ನು ನೋಯಿಸುವುದು ಆಗಿರಲಿಲ್ಲ. ನೀವು ಸ್ವಾವಲಂಬಿಯಾಗಿ ಬೆಳೆದು ಬಂದ ರೀತಿಯ ಬಗ್ಗೆ ನನಗೆ ಅಭಿಮಾನ ಮಾತ್ರವಲ್ಲದೇ ಗೌರವವೂ ಇದೆ ಎಂದು ಹೇಳಿದ್ದಾರೆ.

    ಕೆಟಿಆರ್‌ ಲೀಗಲ್‌ ನೋಟಿಸ್‌
    ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ವಿಚ್ಛೇದನ ಕುರಿತು ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ ಆರೋಪ ಕುರಿತು ಸಚಿವೆ ಕೊಂಡಾ ಸುರೇಖಾ ಅವರಿಗೆ ಕೆಟಿ ರಾಮರಾವ್‌ ಲೀಗಲ್‌ ನೋಟಿಸ್‌ ನೀಡಿದ್ದರು. ಸಚಿವೆ ಮಾಡಿರುವ ಆರೋಪವು ರಾಜಕೀಯ ಪ್ರೇರಿತವಾದುದು. ಇಂಥ ಹೇಳಿಕೆ ನೀಡುವ ಮೂಲಕ ತಮ್ಮ ವ್ಯಕ್ತಿತ್ವಕ್ಕೆ ಕಳಂಕ ತರುವ ಪ್ರಯತ್ನ ಮಾಡಿದ್ದಾರೆ. 24 ಗಂಟೆಯೊಳಗೆ ಸುರೇಖಾ ಅವರು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಅ.9ರವರೆಗೆ ಅತ್ಯಧಿಕ ಮಳೆ – ಯೆಲ್ಲೋ ಅಲರ್ಟ್ ಘೋಷಣೆ

  • ಮಾಜಿಪತಿಯ ಟ್ಯಾಟೂ ತೆಗೆಸುವಂತೆ ಸಮಂತಾಗೆ ಅಭಿಮಾನಿಗಳ ಒತ್ತಾಯ

    ಮಾಜಿಪತಿಯ ಟ್ಯಾಟೂ ತೆಗೆಸುವಂತೆ ಸಮಂತಾಗೆ ಅಭಿಮಾನಿಗಳ ಒತ್ತಾಯ

    ತೆಲುಗಿನ ಖ್ಯಾತ ಸ್ಟಾರ್ ಜೋಡಿ ಸಮಂತಾ ರುತ್ ಪ್ರಭು (Samantha Ruth Prabhu) ಹಾಗೂ ನಾಗ ಚೈತನ್ಯ (Naga Chaitanya) ಸತತ ಹತ್ತು ವರ್ಷಗಳ ಕಾಲ ಸ್ನೇಹಿತರಾಗಿ, ಪ್ರೇಮಿಗಳಾಗಿ ಆನಂತರ ಲವ್ ಮ್ಯಾರೇಜ್ ಆದವರು. ಇವರ ಮದುವೆ ನಂತರ ಈ ಜೋಡಿಯ ಮೇಲೆ ಯಾರ ಕಣ್ಣು ಬೀಳದಿರಲಿ ಎಂದು ಅನೇಕರು ಹಾರೈಸಿದ್ದರು. ಆದರೆ, ಹಾರೈಕೆ ತುಂಬಾ ವರ್ಷಗಳ ಕಾಲ ಉಳಿಯಲಿಲ್ಲ. ಹೊಂದಾಣಿಕೆಯ ಕಾರಣ ನೀಡಿ ಇಬ್ಬರೂ ದೂರವಾದರು.

    ಮದುವೆ ನಂತರ ಸಮಂತಾ ತಮ್ಮ ಪತಿ ನಾಗ ಚೈತನ್ಯ ಅವರ ಸಹಿಯನ್ನು ದೇಹದ ಮೇಲೆ ಟ್ಯಾಟೂ (Tattoo) ಹಾಕಿಸಿಕೊಂಡಿದ್ದರು. ‘ವೈಎಂಸಿ’ ಎಂದು ಬರೆಯಿಸಿದ್ದ ಆ ಟ್ಯಾಟೂದ ವಿಸ್ತ್ರತರೂಪ ‘ಯೇ ಮಾಯಾ ಚೇಸಾವೆ’ ಎಂದು. ಇದು ಈ ಜೋಡಿಯ ಸೂಪರ್ ಹಿಟ್ ಸಿನಿಮಾ.  ಜೊತೆಗೆ ನಾಗ ಚೈತನ್ಯ ಅವರ ಸಹಿಯನ್ನೂ ಹೊಟ್ಟೆಯ ಮೇಲೆ ಹಾಕಿಸಿಕೊಂಡಿದ್ದರು. ಡಿವೋರ್ಸ್ ನಂತರ ಆ ಟ್ಯಾಟೂವನ್ನುಉಳಿಸಿಕೊಂಡಿದ್ದಾರೆ ಸಮಂತಾ. ಇದನ್ನೂ ಓದಿ:ನಯನತಾರಾ ಬಗ್ಗೆ ಕನ್ನಡದ ‘ಗೂಳಿ’ ನಟಿ ಶಾಕಿಂಗ್ ಹೇಳಿಕೆ

    ಇತ್ತೀಚೆಗೆ ಸಮಂತಾ ಸಾಕಷ್ಟು ಫೋಟೋಶೂಟ್ ಗಳಲ್ಲಿ ಭಾಗಿಯಾಗುತ್ತಿದ್ದರು. ಪ್ರತಿ ಫೋಟೋದಲ್ಲೂ ಹಾಟ್ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಹಾಗಾಗಿ ನಾಗಚೈತನ್ಯ ಹಾಕಿರುವ ಟ್ಯಾಟೂ ಸಹಿ ಎದ್ದು ಕಾಣುತ್ತಿದೆ. ಇದನ್ನು ಕಂಡ ಅಭಿಮಾನಿಗಳು ಇನ್ನೂ ಯಾಕೆ ಅದನ್ನು ಇಟ್ಟುಕೊಂಡಿದ್ದೀರಿ? ದೂರವಾದ ನಂತರ ಅದನ್ನು ತೆಗೆಸಿ ಎಂದು ಒತ್ತಡ ಹೇರುತ್ತಿದ್ದಾರೆ. ಯಾವುದೇ ಫೋಟೋದಲ್ಲಿ ಟ್ಯಾಟೂ ಕಾಣಲಿ, ಆ ಫೋಟೋಗಳಿಗೆ ಕಾಮೆಂಟ್ ಹಾಕುವುದನ್ನು ಅಭಿಮಾನಿಗಳು ಮರೆಯುವುದಿಲ್ಲ.

    ಸಮಂತಾ ಮತ್ತು ನಾಗಚೈತನ್ಯ ದೂರವಾದ ನಂತರ ಇಬ್ಬರೂ ಸಾಕಷ್ಟು ನೋವುಗಳನ್ನ ಅನುಭವಿಸಿದ್ದಾರೆ. ಅದರಲ್ಲೂ ಸಮಂತಾ ಡಿಪ್ರೆಷನ್ ಗೆ ಹೋಗಿದ್ದರು. ಮತ್ತೆ ಅದರಿಂದ ಆಚೆ ಬಂದು ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ. ಅದರೂ ನಾಗ ಚೈತನ್ಯ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಸಮಂತಾಗೆ ಆಗಾಗ್ಗೆ ಕಾಮೆಂಟ್ ಮೂಲಕ ಕೆಣಕುತ್ತಲೇ ಇರುತ್ತಾರೆ.

  • ವಿಜಯ್ ದೇವರಕೊಂಡ ಟ್ವೀಟ್ ಗೆ ‘ಥ್ಯಾಂಕ್ಯೂ ಮೈ ಹೀರೋ’ ಎಂದ ಸಮಂತಾ

    ವಿಜಯ್ ದೇವರಕೊಂಡ ಟ್ವೀಟ್ ಗೆ ‘ಥ್ಯಾಂಕ್ಯೂ ಮೈ ಹೀರೋ’ ಎಂದ ಸಮಂತಾ

    ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ನಟನೆಯ ‘ಶಾಕುಂತಲಂ’ (Shakunthalam) ಸಿನಿಮಾ ಇಂದು ಬಿಡುಗಡೆ ಆಗಿದೆ. ರಿಲೀಸ್ ಗೂ ಮುನ್ನಾ ದಿನ ನಟ ವಿಜಯ್ ದೇವರಕೊಂಡ ಸಿನಿಮಾಗೆ ಶುಭಾಶಯ ಕೋರಿ ಟ್ವೀಟ್ ವೊಂದನ್ನು ಮಾಡಿದ್ದಾರೆ. ಆ ಟ್ವೀಟ್ ನಲ್ಲಿ ಸಮಂತಾರನ್ನು ಹಾಡಿಹೊಗಳಿದ್ದಾರೆ. ವಿಜಯ್ ದೇವರಕೊಂಡ (Vijay Devarakonda) ಆಡಿದ ಮಾತುಗಳು ಸಮಂತಾ ಅಭಿಮಾನಿಗಳಲ್ಲಿ ಧನ್ಯತಾ ಭಾವ ಮೂಡಿಸಿವೆ.

    ಸಮಂತಾ ಅವರ ಸಿನಿಮಾ ಬಗೆಗಿನ ಪ್ರೀತಿಯನ್ನು ಮನಮುಟ್ಟುವಂತೆ ಬರೆದಿರುವ ದೇವರಕೊಂಡ, ‘ನಿನೊಬ್ಬ ನಿಜವಾದ ಹೋರಾಟಗಾರ್ತಿ’ ಎಂದು ಕರೆದಿರುವುದು ಸಮಂತಾ ಮೇಲಿನ ಅಭಿಮಾನವನ್ನು ಮತ್ತಷ್ಟು ಹೆಚ್ಚಿಸಿದೆ. ‘ಪ್ರತಿ ಶಾಟ್ ಇದ್ದಾಗಲೂ ಇದೇ ನನ್ನ ಕೊನೆಯ ಸಿನಿಮಾ ಎನ್ನುವಂತೆ ನಟಿಸುತ್ತೀರಿ’ ಎಂದು ಆಡಿದ ಮಾತು ಸಮಂತಾರ ವೃತ್ತಿಬದ್ಧತೆಗೆ ಸಾಕ್ಷಿಯಾಗಿದೆ. ಇದನ್ನೂ ಓದಿ:ಸಲ್ಮಾನ್ ಖಾನ್ ಜೊತೆಗಿನ ಡೇಟಿಂಗ್ ಸುದ್ದಿಗೆ ಪೂಜಾ ಹೆಗ್ಡೆ ಸ್ಪಷ್ಟನೆ

    ‘ನೀವು ಯಾವಾಗಲೂ ಪ್ರೀತಿಯಿಂದ ತುಂಬಿರುತ್ತೀರಿ. ನೀವು ಅಂದುಕೊಂಡಿದ್ದನ್ನೇ ಮಾಡುತ್ತೀರಿ. ಸದಾ ಬೇರೆಯವರನ್ನು ಹುರಿದುಂಬಿಸುತ್ತೀರಿ. ಸದಾ ಉತ್ತಮವಾದದನ್ನೇ ಕೊಡುವ ನಿಮ್ಮ ಗುಣಕ್ಕೆ ಎಲ್ಲರೂ ಮನಸೋಲುತ್ತಾರೆ. ನಿಮ್ಮ ಶಾಕುಂತಲಂ ಸಿನಿಮಾ ಗೆಲ್ಲಲಿ’ ಎಂದು ಹಾರೈಸಿದ್ದಾರೆ ವಿಜಯ್ ದೇವರಕೊಂಡ.

    ಅಷ್ಟೊಂದು ಪ್ರೀತಿ ತುಂಬಿದ ಮಾತುಗಳಿಗೆ ಫಿದಾ ಆಗಿರುವ ಸಮಂತಾ, ಭಾವನಾತ್ಮಕವಾಗಿಯೇ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಿಮ್ಮ ಮಾತುಗಳಿಗೆ ಪ್ರತಿಕ್ರಿಯಿಸೋಕೆ ಪದಗಳೇ ಇಲ್ಲ. ಈ ವೇಳೆಯಲ್ಲಿ ಇದು ಅಗತ್ಯವಿತ್ತು. ಧನ್ಯವಾದಗಳು ಮೈ ಹೀರೋ’ ಎಂದು ಅವರು ರೀ ಟ್ವೀಟ್ ಮಾಡಿದ್ದಾರೆ. ಅಭಿಮಾನಿಗಳು ಕೂಡ ಸಮಂತಾಗೆ ಶುಭಾಶಯದ ಮಳೆಯನ್ನೇ ಸುರಿಸಿದ್ದಾರೆ.

  • ವಿಜಯ್ ಸೇತುಪತಿ ಒಲಿಯುವುದು ನಯನತಾರಾಗಾ ಅಥವಾ ಸಮಂತಗಾ?: ಹೆಚ್ಚಿದ ಕುತೂಹಲ

    ವಿಜಯ್ ಸೇತುಪತಿ ಒಲಿಯುವುದು ನಯನತಾರಾಗಾ ಅಥವಾ ಸಮಂತಗಾ?: ಹೆಚ್ಚಿದ ಕುತೂಹಲ

    ಟಾಲಿವುಡ್ ಸೂಪರ್ ಸ್ಟಾರ್ ವಿಜಯ್ ಸೇತುಪತಿ ಮತ್ತು ಟಾಲಿವುಡ್ ಕ್ವಿನ್ಸ್ ನಯನತಾರಾ ಮತ್ತು ಸಮಂತಾ ರುತ್ ಪ್ರಭು ನಟಿಸಿರುವ ‘ಕಾತು ವಾಕುಲಾ ರೆಂಡು ಕಾದಲ್’ ಸಿನಿಮಾ ಸಿನಿರಸಿಕರನ್ನು ತನ್ನತ್ತ ಸೆಳೆಯುತ್ತಿದೆ. ಈ ಸಿನಿಮಾ ಪ್ರೋಮೋ ಸಹ ರಿಲೀಸ್ ಆಗಿದ್ದು, ಅಭಿಮಾನಿಗಳನ್ನು ನಗುವಿನ ಅಲೆಯಲ್ಲಿ ಚಿತ್ರತಂಡ ತೇಲಿಸಿದೆ.

    ‘ಕಾತು ವಾಕುಲಾ ರೆಂಡು ಕಾದಲ್’ ಸಿನಿಮಾವನ್ನು ವಿಘ್ನೇಶ್ ಶಿವನ್ ನಿರ್ದೇಶನ ಮಾಡಿದ್ದು, ಈ ಕಾಮಿಡಿ ರೊಮ್ಯಾಂಟಿಕ್ ಸಿನಿಮಾ ಏಪ್ರಿಲ್ 28 ರಂದು ಅಭಿಮಾನಿಗಳ ಮುಂದೆ ಬರುತ್ತಿದೆ. ಇದಕ್ಕು ಮುನ್ನ ಚಿತ್ರರಸಿಕರನ್ನು ತಮ್ಮ ಸಿನಿಮಾದಂತ ಆಕರ್ಷಿಸಲು ಚಿತ್ರತಂಡ ಕೆಲವು ವೀಡಿಯೋ, ಪ್ರೋಮೋವನ್ನು ಬಿಡುಗಡೆ ಮಾಡುತ್ತಿದೆ. ಮೊದಲು ಈ ಸಿನಿಮಾ ಟ್ರೇಲರ್ ರಿಲೀಸ್ ಆಗಿದ್ದು, ಇದನ್ನು ನೋಡಿ ಅಭಿಮಾನಿಗಳು ಹೆಚ್ಚು ಕಾತುರತೆಯನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಸೂರ್ಯ- ಚಂದ್ರ ಇರೋವರೆಗೂ ಸಂವಿಧಾನ ಬದಲಾವಣೆ ಅಸಾಧ್ಯ: ಆನಂದ್ ಸಿಂಗ್ 

    ಈ ಕ್ಲಿಪ್ನಲ್ಲಿ ವಿಜಯ್ ಸೇತುಪತಿ, ನಯನತಾರಾ ಮತ್ತು ಸಮಂತಾ ರುತ್ ಪ್ರಭು ಕಾಣಿಸಿಕೊಂಡಿದ್ದು, ಇದು ತ್ರಿಕೋನ ಪ್ರೇಮಕಥೆ ಹೊಂದಿರುವ ಸಿನಿಮಾವಾ ಎನ್ನುವ ಅನುಮಾನ ಕೂಡ ಮೂಡಿದೆ. ನಾಯಕ ರಾಂಬೋ(ವಿಜಯ್ ಸೇತುಪತಿ) ಕಣ್ಮಣಿ(ನಯನತಾರಾ) ಮತ್ತು ಖತೀಜಾ(ಸಮಂತಾ) ಇಬ್ಬರನ್ನೂ ಪ್ರೀತಿಸುತ್ತೇನೆ. ಈ ತ್ರೀಕೊನ ಪ್ರೇಮವನ್ನು ಹೇಗೆ ನಾಯಕ ಉಳಿಸಿಕೊಳ್ಳುತ್ತಾನೆ ಎಂಬ ಸಣ್ಣ ಝಲಕ್ ಪ್ರೊಮೋದಲ್ಲಿದೆ. ಈ ಸಿನಿಮಾದಲ್ಲಿ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಕೂಡ ನಟಿಸಿದ್ದಾರೆ.

    ಇದೇ ಮೊದಲು ಸಮಂತಾ ಮತ್ತು ನಯನತಾರಾ ಒಂದೇ ಮೊದಲಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದು, ಮೂರು ಸ್ಟಾರ್ ಕಾಂಬಿನೇಷನ್ನಲ್ಲಿ ಸಿನಿಮಾ ಹೇಗೆ ಮೂಡಿಬಂದಿದೆ ಎಂಬುದನ್ನು ತೆರೆಮೇಲೆ ನೋಡಲು ಚಿತ್ರತಂಡ ಸಹ ಕಾಯುತ್ತಿದೆ. ಈ ಸಿನಿಮಾ ತಮಿಳು ಮತ್ತು ತೆಲುಗು ದ್ವಿಭಾಷೆಯಲ್ಲಿ ಮೂಡಿಬಂದಿದ್ದು, ಅನಿರುದ್ಧ್ ರವಿಚಂದರ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ವಿಜಯ್ ಕಾರ್ತಿಕ್ ಕಣ್ಣನ್ ಚಿತ್ರದ ಛಾಯಾಗ್ರಹಣವನ್ನು ವಹಿಸಿಕೊಂಡಿದ್ದಾರೆ. ಇದನ್ನೂ ಓದಿ: ಪೋಸ್ಟ್‌ಮ್ಯಾನ್‍ನಿಂದಲೇ ಬಡ ಜನರ ಲಕ್ಷ, ಲಕ್ಷ ಹಣ ಗುಳುಂ 

  • ಮೈತುಂಬಾ ಟ್ಯಾಟೂ ಹಾಕಿಸಿಕೊಂಡು, ಅಭಿಮಾನಿಗಳಿಗೆ ಮಾತ್ರ ಟ್ಯಾಟೂ ಹಾಕಿಸಿಕೊಳ್ಳಬೇಡಿ ಎಂದ ಸಮಂತಾ

    ಮೈತುಂಬಾ ಟ್ಯಾಟೂ ಹಾಕಿಸಿಕೊಂಡು, ಅಭಿಮಾನಿಗಳಿಗೆ ಮಾತ್ರ ಟ್ಯಾಟೂ ಹಾಕಿಸಿಕೊಳ್ಳಬೇಡಿ ಎಂದ ಸಮಂತಾ

    ಟಾಲಿವುಡ್ ಕಪಲ್ ಸಮಂತಾ ರುತ್ ಪ್ರಭು ಮತ್ತು ನಾಗಚೈತನ್ಯ ವಿಚ್ಚೇದನದ ನಂತರ ಭಾರೀ ಸುದ್ದಿಯಾಗಿದ್ದರು. ಅದರಲ್ಲಿಯೂ ಸಮಂತಾ ಅವರು ನೆಟ್ಟಿಗರ ಟೀಕಿಗಳಿಗೆ ಗುರಿಯಾಗಬೇಕಾಯಿತು. ತಮ್ಮ ವಿಚ್ಚೇದನದ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ ನಂತರ ನಾಗಚೈತನ್ಯ ಎಲ್ಲೂ ತಮ್ಮ ಸಂಬಂಧದ ಬಗ್ಗೆ ಹೇಳಿಕೊಳ್ಳಲಿಲ್ಲ. ಆದರೆ ಇತ್ತೀಚೆಗೆ ನಾಗಚೈತನ್ಯ ಅವರು ಮತ್ತೆ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಎಲ್ಲಕಡೆ ಹಬ್ಬಿದೆ. ಈ ನಡುವೆಯೇ ಸಮಂತಾ ಅವರ ಹೊಸ ಹೇಳಿಕೆ ಕೂಡ ಎಲ್ಲಾ ಕಡೆ ವೈರಲ್ ಆಗಿದೆ.

    Samantha, Nayanthara to Rashmika: South Indian Actresses and Their Interesting Tattoos | IWMBuzz

    ಸಮಂತಾ ಇತ್ತೀಚೆಗೆ ಇನ್ಸ್ಟಾಗ್ರಾಮ್‌ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ನಲ್ಲಿ ಪಾಲ್ಗೊಂಡರು. ಇದಕ್ಕೆ ಸಮಂತಾ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಯನ್ನೆ ಸುರಿಸಿದರು. ಈ ವೇಳೆ ಒಬ್ಬ ಅಭಿಮಾನಿ, ನೀವು ಪ್ರಯತ್ನಿಸಲು ಇಷ್ಟಪಡುವ ಕೆಲವು ಟ್ಯಾಟೂ ಐಡಿಯಾಗಳನ್ನು ತಿಳಿಸಿ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಈ ನಟಿ, ಎಂದಿಗೂ ಟ್ಯಾಟೂ ಹಾಕಿಸಿಕೊಳ್ಳಬೇಡಿ ಎಂದು ನಾನು ಸಲಹೆ ಕೊಡುತ್ತೇನೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಎರಡನೇ ಮದುವೆಗೆ ಸಿದ್ಧರಾಗುತ್ತಿದ್ದಾರಾ ನಾಗಚೈತನ್ಯ?

    ಆದರೆ ಈ ಹಿಂದೆ ಸಮಂತಾ ತನ್ನ ಮಾಜಿ ಪತಿ ನಾಗಚೈತನ್ಯ ಹೆಸರಿನ ಮೂರು ಭಿನ್ನ ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದರು. ಈ ನಟಿಯ ಬೆನ್ನಿನ ಮೇಲೆ ‘YMS’ ಎಂಬ ಟ್ಯಾಟೂ ಇತ್ತು. ಅಲ್ಲದೇ ನಾಗಚೈತನ್ಯ ಜೊತೆಗಿನ ಚೊಚ್ಚಲ ಸಿನಿಮಾ ‘ಯೇ ಮಾಯಾ ಚೇಸಾವೆ’ ಮತ್ತು ತಮ್ಮ ಪಕ್ಕೆಲುಬಿನ ಮೇಲೆ ‘ಚಾಯ್’ ಎಂದು ಹಾಕಿಸಿಕೊಂಡಿದ್ದರು. ಇದು ನಾಗಚೈತನ್ಯ ಅವರ ಅಡ್ಡಹೆಸರು

  • ಎರಡನೇ ಮದುವೆಗೆ ಸಿದ್ಧರಾಗುತ್ತಿದ್ದಾರಾ ನಾಗಚೈತನ್ಯ?

    ಎರಡನೇ ಮದುವೆಗೆ ಸಿದ್ಧರಾಗುತ್ತಿದ್ದಾರಾ ನಾಗಚೈತನ್ಯ?

    ಸೌತ್ ಕ್ಯೂಟ್ ಕಪಲ್ ಸಮಂತಾ ರುತ್ ಪ್ರಭು ಮತ್ತು ನಾಗಚೈತನ್ಯ ಅವರ ವಿಚ್ಛೇದನವು 2021ರಲ್ಲಿ ಅತಿದೊಡ್ಡ ಸುದ್ದಿಯಾಗಿತ್ತು. ಮೊದಲು ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ನಾಗಚೈತನ್ಯ ಸರ್‌ನೇಮ್ ತೆಗೆದು ಹಾಕಿದ್ದರಿಂದ ಅನುಮಾನ ಪ್ರಾರಂಭವಾಗಿತ್ತು. ಕೊನೆಗೆ ಈ ಜೋಡಿ ಅ.2ರಂದು ತಾವು ವಿಚ್ಛೇದನ ಪಡೆಯುತ್ತಿದ್ದೇವೆ ಎಂದು ಸಾರ್ವಜನಿಕವಾಗಿ ತಿಳಿಸಿ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದ್ದರು. ಆದರೆ ಮತ್ತೆ ಈ ಜೋಡಿ ಸುದ್ದಿಯಾಗಿದ್ದು, ನಾಗಚೈತನ್ಯ ಮರುಮದುವೆಗೆ ಸಿದ್ಧರಾಗುತ್ತಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

    ಮೂಲಗಳ ಪ್ರಕಾರ ನಾಗಚೈತನ್ಯ ಶೀಘ್ರದಲ್ಲೇ ಮತ್ತೊಮ್ಮೆ ಮದುವೆಯಾಗುತ್ತಿದ್ದಾರೆ ಎಂಬ ಗಾಸಿಪ್ ಎಲ್ಲಕಡೆ ಹಬ್ಬುತ್ತಿದ್ದು, ಈ ಕುರಿತು ಭಾರೀ ಚರ್ಚೆಯಾಗುತ್ತಿದೆ. ಆದರೆ ಈ ನಟ ಯಾವುದೇ ಸಿನಿಮಾ ತಾರೆಯರನ್ನು ಮದುವೆಯಾಗುತ್ತಿಲ್ಲ ಎಂಬುದು ಸಹ ಮೂಲಗಳ ಪ್ರಕಾರ ತಿಳಿದುಬಂದಿದೆ. ಇದನ್ನೂ ಓದಿ: ಗಲ್ಲಿ ಬಾಯ್ ರಣವೀರ್ ಚಿತ್ರಕ್ಕೆ ಚಾರ್ಲಿ ಚಾಪ್ಲಿನ್‍ನಿಂದ ಪ್ರೇರಣೆ?

    ಈ ಮೊದಲು ನಾಗಚೈತನ್ಯ, ಸಮಂತಾ ಜೊತೆ ಮದುವೆಯಾಗುವುದಕ್ಕೂ ಮೊದಲು ನಟಿ ಶ್ರುತಿಹಾಸನ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಕೊನೆಗೆ ಈ ನಟ ಸಮಂತಾ ಅವರನ್ನು ಮದುವೆ ಮಾಡಿಕೊಂಡಿದ್ದರು.

    ಇತ್ತೀಚೆಗೆ ನಾಗಚೈತನ್ಯ ಅವರು ‘ಮಜಿಲಿ’ ಸಹನಟಿ ದಿವ್ಯಾಂಶ ಕೌಸಿಕ್ ಅವರೊಂದಿಗೆ ರಿಲೇಷನ್‍ಶಿಪ್ ಹೊಂದಿದ್ದಾರೆ ಎಂಬ ವದಂತಿ ಕೇಳಿಬರುತ್ತಿದೆ. ಆದರೆ ಈ ಬೆನ್ನಲ್ಲೇ ನಾಗಚೈತನ್ಯ ಅವರು ಯಾವುದೇ ನಟಿಯರನ್ನು ಮದುವೆಯಾಗಲು ಆಸಕ್ತಿ ತೋರಿಸುತ್ತಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಕುರಿತು ಅಕ್ಕಿನೇನಿ ಕುಟುಂಬ ಅಧಿಕೃತವಾಗಿ ತಿಳಿಸಬೇಕು. ಪ್ರಸ್ತುತ ನಾಗಚೈತನ್ಯ ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ತುಟಿಗೂ ಸೈಜ್ ಇರುತ್ತಾ? ನೆಟ್ಟಿಗನ ಚಳಿ ಬಿಡಿಸಿದ ಸ್ಟಾರ್ ನಟಿ ಶ್ರುತಿ ಹಾಸನ್

  • ಇನ್‌ಸ್ಟಾದಿಂದ ನಾಗಚೈತನ್ಯನನ್ನು ಅನ್‍ಫಾಲೋ ಮಾಡಿದ ಸಮಂತಾ

    ಇನ್‌ಸ್ಟಾದಿಂದ ನಾಗಚೈತನ್ಯನನ್ನು ಅನ್‍ಫಾಲೋ ಮಾಡಿದ ಸಮಂತಾ

    ಟಾಲಿವುಡ್ ಬ್ಯೂಟಿ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ದಕ್ಷಿಣ ಸಿನಿರಂಗದಲ್ಲಿಯೇ ಕ್ಯೂಟ್ ಕಪಲ್ ಆಗಿದ್ದರು. ಆದರೆ ಕೆಲವು ಕಾರಣಗಳಿಂದ ಈ ಜೋಡಿಗಳು ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯವಾಡಿದ್ದರು. ಆದರೂ ನಾವಿಬ್ಬರು ಗುಡ್ ಫ್ರೆಂಡ್ಸ್ ಆಗಿರುತ್ತೇವೆ ಎಂದು ಹೇಳಿಕೊಂಡಿದ್ದರು. ಆದರೆ ಇದಕ್ಕಿದ್ದ ಹಾಗೇ ಸಮಂತಾ ತಮ್ಮ Instagramನಲ್ಲಿ ನಾಗ ಚೈತನ್ಯ ಅವರನ್ನು ಅನ್‍ಫಾಲೋ ಮಾಡುವ ಮೂಲಕ ತಮ್ಮ ಸಂಬಂಧಕ್ಕೆ ಪೂರ್ಣ ಅಂತ್ಯವಾಡಿದ್ದಾರೆ ಎಂಬುದನ್ನು ಪರೋಕ್ಷವಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ನಾಗಚೈತ್ಯನ್ಯ ಜೊತೆ ವಿಚ್ಛೇದನ ಪಡೆದ ನಂತರವೂ ಸಮಂತಾ ಅವರನ್ನು ಇನ್‍ಸ್ಟಾದಲ್ಲಿ ಫಾಲೋ ಮಾಡುತ್ತಿದ್ದರು. ಆದರೆ ಇಂದು ಅವರ ಪ್ರೊಫೈಲ್ ಚೆಕ್ ಮಾಡಿದಾಗ 400ಕ್ಕೂ ಹೆಚ್ಚು ಜನರನ್ನು ಸಮಂತಾ ಫಾಲೋ ಮಾಡಿದ್ದಾರೆ. ಈ ಮಧ್ಯೆ ನಾಗಚೈತನ್ಯ ಅವರನ್ನು ಫಾಲೋ ಮಾಡುತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ. ನಟಿ ಈ ಹಿಂದೆಯೂ ಸಹ ತಮ್ಮ ಪ್ರೊಫೈಲ್ ನಲ್ಲಿ ನಾಗಚೈತನ್ಯ ಜೊತೆ ಕಾಣಿಸಿಕೊಂಡಿದ್ದ ಎಲ್ಲ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಇದನ್ನೂ ಓದಿ:  ಹುಡುಗಿ ಎಂದು ಅಪ್ಪನ ಜೊತೆಗೆ ಚಾಟ್ ಮಾಡಿ ಸಿಕ್ಕಿಬಿದ್ದ ಖ್ಯಾತ ನಿರ್ಮಾಪಕ!

    ಮನಂ, ಮಜಿಲಿಯೇ ಮಾಯ ಚೇಸಾವೆ ಮುಂತಾದ ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಈ ಜೋಡಿ 2017 ರಲ್ಲಿ ಸಪ್ತಪದಿ ತುಳಿದಿತ್ತು. ಆದರೆ ಕಳೆದ ವರ್ಷವಷ್ಟೇ ಈ ತಾರಾ ಜೋಡಿ ಪ್ರತ್ಯೇಕವಾಗುತ್ತಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ್ದರು. ಅದರಂತೆ ಸಮಂತಾ ಪ್ರಭು ರುತ್ ಸೋಶಿಯಲ್ ಮೀಡಿಯಾದಿಂದ ‘ಅಕ್ಕಿನೇನಿ’ ಎಂಬ ನಾಗ ಚೈತನ್ಯ ಸರ್‌ ನೇಮ್‌ ತೆಗೆದುಹಾಕಿದ್ದರು. ನಂತರ ಈ ನಟಿ ‘ಎಸ್’ ಎಂದು ತಮ್ಮ ಸೋಶಿಯಲ್ ಮೀಡಿಯಾ ಪ್ರೊಫೈಲ್ ಬದಲಾಯಿಸಿಕೊಂಡಿದ್ದಾರೆ.

  • ನಯನತಾರಾ ಜೊತೆಗಿನ ಫೋಟೋ ಹಂಚಿಕೊಂಡ ಸಮಂತಾ – ಕುಚಿಕು ಗೆಳೆತಿಯರ ಫೋಟೋ ಕಹಾನಿ

    ನಯನತಾರಾ ಜೊತೆಗಿನ ಫೋಟೋ ಹಂಚಿಕೊಂಡ ಸಮಂತಾ – ಕುಚಿಕು ಗೆಳೆತಿಯರ ಫೋಟೋ ಕಹಾನಿ

    ಮುಂಬೈ: ನಯನತಾರಾ ಜತೆಗಿನ ತಮ್ಮ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಸಂಭ್ರಮ ಹೆಚ್ಚಿಸಿದ್ದಾರೆ ದಕ್ಷಿಣದ ಖ್ಯಾತ ತಾರೆ ಸಮಂತಾ ರುತ್ ಪ್ರಭು. ಇಬ್ಬರು ಖ್ಯಾತ ನಟಿಯರು ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಳ್ಳುವುದು ಅಪರೂಪವಾಗಿರುವ ಈ ಸಂದರ್ಭದಲ್ಲಿ ಸಮಂತಾ ಶೇರ್ ಮಾಡಿರುವ ಫೋಟೋ ವೈರಲ್ ಆಗಿದೆ. ಕುಚಿಕು ಸ್ನೇಹಕ್ಕೆ ಮುನ್ನುಡಿ ಬರೆದಿದೆ.

    ನಯನತಾರಾ ಮತ್ತು ಸಮಂತಾ ಇಬ್ಬರೂ ಟಾಲಿವುಡ್ ಸೂಪರ್ ಸ್ಟಾರ್ ನಟಿಯರು. ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದವರು. ಅಲ್ಲದೇ, ಈಗ ಇಬ್ಬರು ಒಂದೇ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಫೋಟೋಗೆ ಮತ್ತಷ್ಟು ಮಹತ್ವ ಬಂದಿದೆ. ನಯನತಾರಾ ಜತೆ ನಟಿಸುತ್ತಿರುವ ಕುರಿತು ಸಮಂತಾ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಸಮಂತಾ ಅವರನ್ನು ನಯನತಾರಾ ತಮ್ಮ ತೋಳುಗಳಿಂದ ಅಪ್ಪಿಕೊಂಡಿರುವ, ಇಬ್ಬರೂ ನಗುತ್ತ ಕ್ಯಾಮರಾಗೆ ಪೋಸ್ ಕೊಟ್ಟಿರುವುದನ್ನು ಕಾಣಬಹುದು. ಈ ಪೋಸ್ಟ್ ಗೆ ಸಮಂತಾ, ೨೦:೦೨. ೨೨.೨.೨೦೨೨ ಇದು ವಿಶೇಷ ದಿನವಾಗಿದೆ ಎಂದೂ ಅವರು ಬರೆದುಕೊಂಡಿದ್ದಾರೆ. ನಯನತಾರಾ ಸೋಶಿಯಲ್ ಮೀಡಿಯಾದಲ್ಲಿ ಇಲ್ಲ. ಆದರೂ ಅವರು ನಿಮಗೆ ತಮ್ಮ ಪ್ರೀತಿಯನ್ನು ಕಳುಹಿಸುತ್ತಾರೆ ಎಂದು ಬರೆದು ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಮಹಿಳೆ ಹೆಚ್ಚು ಸ್ಟ್ರಾಂಗ್ ಎಂಬುದನ್ನು ಪುರುಷರು ಅರ್ಥಮಾಡಿಕೊಳ್ಳಬೇಕು: ಮಾಧವನ್

     

    View this post on Instagram

     

    A post shared by Samantha (@samantharuthprabhuoffl)

    ಈ ವಿಶೇಷ ಫೋಟೋ ಕಂಡ ಅಭಿಮಾನಿಗಳು ಸಖತ್ ಖುಷ್ ಆಗಿದ್ದು, ತಮ್ಮ ವಿಶೇಷ ಸ್ಟಾರ್ ನಟಿಯ ಗೆಳೆತನ ನೋಡಿ ತಮ್ಮದೇ ಆದ ರೀತಿಯಲ್ಲಿ ಹಾರೈಸಿದ್ದಾರೆ.

    ಇವರಿಬ್ಬರ ಗೆಳೆಯತನಕ್ಕೆ ಸಾಕ್ಷಿ ಎನ್ನುವಂತೆ ಈ ಹಿಂದೆ ಸಿನಿಮಾ ನಿರ್ದೇಶಕ ವಿಘ್ನೇಶ್ ಶಿವನ್ ಚಿತ್ರದ ಸೆಟ್‌ನ ತೆರೆಮರೆಯ ವೀಡಿಯೋವನ್ನು ಹಂಚಿಕೊಂಡಿದ್ದರು. ಈ ವೀಡಿಯೋದಲ್ಲಿ ನಯನಾ ಮತ್ತು ಸಮಂತಾ ಒಂದೇ ರೀತಿಯ ಉಡುಪು ಧರಿಸಿದ್ದರು.

     

    View this post on Instagram

     

    A post shared by Vignesh Shivan (@wikkiofficial)

    ಈ ಇಬ್ಬರು ನಟಿಯರು ‘ಕಾತುವಾಕುಲ ರೆಂಡು ಕಾದಲ್’ ಸಿನಿಮಾದಲ್ಲಿ ಒಂದಾಗಿದ್ದು, ವಿಜಯ್ ಸೇತುಪತಿ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಚಿತ್ರದ ವಿಶೇಷ ಅಂದರೆ ಬಹುತೇಕ ಸ್ಟಾರ್ ನಟ-ನಟಿಯರೆ ತಾರಾಗಣದಲ್ಲಿ ಇದ್ದಾರೆ. ಹಾಗಾಗಿ ಸಿನಿಮಾ ಬಿಡುಗಡೆಗೂ ಮುನ್ನ ಕುತೂಹಲ ಮೂಡಿಸಿದೆ. ಇದನ್ನೂ ಓದಿ:  ವೈರಲ್ ಆಯ್ತು ಶಾರೂಖ್ ನ್ಯೂಲುಕ್ – ರಿಯಲ್ ಫೋಟೋ ರಿಲೀಸ್!

  • ‘ಊ ಅಂಟಾವಾ’ ವಿವಾದದ ಕುರಿತು ಮೌನ ಮುರಿದ ದೇವಿ ಶ್ರೀ ಪ್ರಸಾದ್

    ‘ಊ ಅಂಟಾವಾ’ ವಿವಾದದ ಕುರಿತು ಮೌನ ಮುರಿದ ದೇವಿ ಶ್ರೀ ಪ್ರಸಾದ್

    ಚೆನ್ನೈ: ‘ಪುಷ್ಪಾ’ ಸಿನಿಮಾದ ‘ಊ ಅಂಟಾವಾ’ ಸಾಂಗ್ ವಿವಾದದ ಕುರಿತು ಸಂಗೀತ ಸಂಯೋಜಕ ದೇವಿ ಶ್ರೀ ಪ್ರಸಾದ್ ಮೌನ ಮುರಿಸಿದ್ದಾರೆ.

    ‘ಊ ಅಂಟಾವಾ’ ಸಾಂಗ್ ಅನ್ನು ಐಟಂ ಸಾಂಗ್ ಎಂದು ಹೇಳಿದಕ್ಕೆ ರಾಜಕೀಯ ಮುಖಂಡರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ದೇವಿ ಶ್ರೀ ಪ್ರಸಾದ್, ಸಂಗೀತಗಾರನಿಂದ ಮತ್ತು ಸಂಯೋಜನೆಯ ಕಡೆಯಿಂದ, ನಿರ್ದೇಶಕರು ಏನು ಬಯಸುತ್ತಾರೆ, ಸಿನಿಮಾದ ವಿಷಯವು ಏನನ್ನು ಬಯಸುತ್ತೆ ಅದನ್ನು ನಾವು ಮೊದಲು ತಿಳಿದುಕೊಳ್ಳುತ್ತೇವೆ. ನಂತರ ಅವರಿಗೆ ಬೇಕಾಗಿರುವ ರೀತಿ ನಾವು ಪೂರೈಸಬೇಕು. ಪ್ರೇಕ್ಷಕರು ಒಂದು ಸಾಂಗ್ ಅನ್ನು ಯಾವುದೇ ರೀತಿ ನೋಡಿದರೂ ಅದು ಸರಿಯೇ. ಲವ್ ಸಾಂಗ್ ಆಗಿದ್ದರೆ ಲವ್ ಸಾಂಗ್, ಐಟಂ ಸಾಂಗ್ ಆಗಿದ್ದರೆ ಐಟಂ ಸಾಂಗ್ ಆಗುತ್ತೆ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ವಸತಿ ಶಾಲೆಯ 16 ಮಕ್ಕಳಿಗೆ ವಕ್ಕರಿಸಿದ ಕೊರೊನಾ

    ನನಗೆ, ಅದು ಭಕ್ತಿ, ಪ್ರೀತಿ ಅಥವಾ ಐಟಂ ಹಾಡು ಆಗಿರಲಿ. ಸಂಯೋಜನೆಯ ಪ್ರಕ್ರಿಯೆಯು ಒಂದೇ ಆಗಿರುತ್ತದೆ. ಇದನ್ನು ಈ (ರಾಜಕೀಯ) ವ್ಯಕ್ತಿಗಳು ಬೇರೆ ಸನ್ನಿವೇಶದಲ್ಲಿ ತೆಗೆದುಕೊಂಡಿದ್ದಾರೆ ಅದು ಅನಗತ್ಯವಾಗಿತ್ತು ಎಂದು ತಿಳಿಸಿದರು

    ದೇವಿ ಶ್ರೀ ಪ್ರಸಾದ್ ಸಂಯೋಜಿಸಿದ ಈ ಹಾಡಿಗೆ ಸಮಂತಾ ರುತ್ ಪ್ರಭು ಸಖತ್ ಆಗಿ ಸ್ಟೆಪ್ ಹಾಕಿದ್ದು, ಅಲ್ಲು ಅರ್ಜುನ್ ಜೊತೆ ಮಿಂಚಿದ್ದಾರೆ. ಈ ಸಾಂಗ್ ಈಗ ಟ್ರೆಂಡ್ ಕ್ರಿಯೇಟ್ ಮಾಡಿದ್ದು, ಚಿಕ್ಕ ಮಕ್ಕಳಿಂದ ದೊಡ್ಡವರ ವರೆಗೂ ಈ ಸಾಂಗ್ ಅನ್ನೆ ಗುನುಗುತ್ತ ಇರುತ್ತಾರೆ. ಇನ್‍ಸ್ಟಾ, ಸೋಶಿಯಲ್ ಮೀಡಿಯಾದಲ್ಲಿ ಈ ಸಾಂಗ್ ಫುಲ್ ಕ್ರೇಜ್ ಮೂಡಿಸಿದೆ.

    ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪಾ’ ಸಿನಿಮಾದ ಹಾಡುಗಳು ಜನರನ್ನು ರಂಜಿಸುತ್ತಿದೆ. ಪ್ರಸ್ತುತ ಈ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲಿಯೂ ಈ ಸಿನಿಮಾದ ಹಾಡಿಗೆ ಜನರಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ವಿವಾದಕ್ಕೂ ಸಹ ಕಾರಣವಾಗಿದೆ. ರಶ್ಮಿಕಾ ಅವರ ‘ಸಾಮಿ ಸಾಮಿ’ ಸಾಂಗ್ ರೊಮ್ಯಾಂಟಿಕ್ ಆಗಿದ್ದರೆ, ‘ಊ ಅಂಟಾವಾ’ ಸಾಂಗ್ ಐಟಂ ಸಾಂಗ್ ಆಗಿದ್ದು, ಎಲ್ಲ ಕಡೆ ಸಖತ್ ವೈರಲ್ ಆಗಿದೆ. ಇದನ್ನೂ ಓದಿ:  ಬ್ರೇಕಪ್ ವಿಚಾರವಾಗಿ ಕೊನೆಗೂ ಮೌನ ಮುರಿದ ಅರ್ಜುನ್ ಕಪೂರ್!

    ಪ್ರಸ್ತುತ ದೇವಿ ಶ್ರೀ ಪ್ರಸಾದ್ ‘ಪುಷ್ಪಾ 2’ ಸಿನಿಮಾದ ಸಂಗೀತ ಸಂಯೋಜನೆಯಲ್ಲಿ ನಿರತರಾಗಿದ್ದಾರೆ. ರಣವೀರ್ ಸಿಂಗ್ ನಟನೆಯ ‘ಸರ್ಕಸ್’ ಅನ್ನು ಪೈಪ್‍ಲೈನ್‍ನಲ್ಲಿ ಪಡೆದುಕೊಂಡಿದ್ದಾರೆ.

  • ಸಮಂತಾ ಜೊತೆಗಿನ ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ನಾಗಚೈತನ್ಯ

    ಸಮಂತಾ ಜೊತೆಗಿನ ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ನಾಗಚೈತನ್ಯ

    ಹೈದರಾಬಾದ್: ಟಾಲಿವುಡ್ ನಟ ನಾಗಚೈತನ್ಯ ಅವರಿಂದ ನಟಿ ಸಮಂತಾ ರುತ್ ಫ್ರಭು ವಿಚ್ಛೇದನ ನೀಡಿದ ಬಳಿಕ ನಟ ಈ ಬಗ್ಗೆ ಎಲ್ಲಿಯೂ ಬಾಯಿಬಿಟ್ಟಿಲ್ಲ. ಇದೀಗ ನಾಗಚೈತನ್ಯ ಅವರು ತಮ್ಮ ವಿಚ್ಛೇದನ ಕುರಿತು ಮೌನ ಮುರಿದಿದ್ದಾರೆ.

    ಹೌದು. ಸಮಂತಾ ಹಾಗೂ ನಾಗಚೈತನ್ಯ ಅವರು ಡಿವೋರ್ಸ್ ಪಡೆದುಕೊಂಡು ಸರಿಸುಮಾರು 3 ತಿಂಗಳುಗಳೇ ಕಳೆದುಹೋಗಿದೆ. ಈ ಹಿಂದೆ ಸಮಂತಾ ಅವರು ವಿಚ್ಛೇದನದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು. ಆದರೆ ನಾಗಚೈತನ್ಯ ಮಾತ್ರ ಎಲ್ಲಿಯೂ ಈ ಬಗ್ಗೆ ಹೇಳಿಕೊಂಡಿರಲಿಲ್ಲ. ಆದರೆ ಇದೀಗ ಬರೋಬ್ಬರಿ ಮೂರು ತಿಂಗಳ ಬಳಿಕ ವಿಚ್ಛೇದನದ ಕುರಿತು ಬಾಯಿಬಿಟ್ಟಿದ್ದಾರೆ.

    ವಿಚ್ಛೇದನದ ಬಳಿಕ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಾಗಚೈತನ್ಯ ಸದ್ಯ ಬಂಗರ್ರಾಜು ಸಿನಿಮಾದ ಪ್ರೊಮೋಷನ್ ನಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ನಟ ಮಾತನಾಡಿದ್ದಾರೆ. ಇದೇ ಸಂದರ್ಭದಲ್ಲಿ ನಾಗಚೈತನ್ಯ ಜೊತೆ ಮಾಧ್ಯಮ ಮಿತ್ರರು ವಿಚ್ಚೇಧನದ ಕುರಿತು ಪ್ರಶ್ನೆ ಕೇಳಿದ್ದಾರೆ.  ಇದನ್ನೂ ಓದಿ: ಮದುವೆ ಬದಲು ವಿಚ್ಛೇದನವನ್ನು ಸಂಭ್ರಮಿಸಬೇಕು: ರಾಮ್ ಗೋಪಾಲ್ ವರ್ಮಾ

    ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ನಾಗಚೈತನ್ಯ, ನಾವಿಬ್ಬರು ಬೇರ್ಪಟ್ಟಿರುವುದು ಒಂದೊಳ್ಳೆಯ ನಿರ್ಧಾರವಾಗಿದೆ. ವೈಯಕ್ತಿಕ ನಿರ್ಧಾರಕ್ಕಾಗಿ ನಾವಿಬ್ಬರು ಪರಸ್ಪರವಾಗಿ ನಿರ್ಧಾರ ತೆಗೆದುಕೊಂಡಿದ್ದೇವೆ. ಅವಳು ಸಂತೋಷವಾಗಿದ್ದರೆ ನನಗೂ ಅದೇ ಸಂತೋಷ. ವೈಯಕ್ತಿಕವಾಗಿ ಸಂತೋಷವಾಗಿರುವ ವಿಚಾರ ಬಂದಂತಹ ಪರಿಸ್ಥಿತಿಯಲ್ಲಿ ಡಿವೋರ್ಸ್ ಆಗುವುದು ಒಳ್ಳೆಯ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ.

    ಚಾಯ್ ಹಾಗೂ ಸ್ಯಾಮ್ ಕಳೆದ ವರ್ಷ ಅಕ್ಟೋಬರ್ 2ರಂದು ವಿಚ್ಛೇದನ ಘೋಷಿಸಿದ್ದರು. ಹೆಚ್ಚು ಆಲೋಚನೆಯ ನಂತರ ಚಾಯ್ ಮತ್ತು ನಾನು ನಮ್ಮ ಸ್ವಂತ ದಾರಿಗಳನ್ನು ಅನುಸರಿಸಲಿದ್ದೇವೆ. ಗಂಡ ಮತ್ತು ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ಒಂದು ದಶಕದ ಸ್ನೇಹವನ್ನು ಹೊಂದಲು ನಾವು ಅದೃಷ್ಟಶಾಲಿಯಾಗಿದ್ದೇವೆ. ನಮ್ಮ ಸಂಬಂಧ ಯಾವಾಗಲೂ ನಮ್ಮ ನಡುವೆ ವಿಶೇಷ ಬಾಂಧವ್ಯವನ್ನು ಹೊಂದಿರುತ್ತದೆ ಎಂದು ನಾವು ನಂಬುತ್ತೇವೆ ಎಂದು ಹೇಳಿದ್ದರು. ಇದನ್ನೂ ಓದಿ: ಸಮಂತಾ, ನಾಗ ಚೈತನ್ಯ DIVORCEಗೆ ಅಸಲಿ ಕಾರಣ ಬಯಲು

    ಈ ಕಷ್ಟದ ಸಮಯದಲ್ಲಿ ನಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮಗಳು ನಮ್ಮನ್ನು ಬೆಂಬಲಿಸಬೇಕು. ನಾವು ಮುಂದುವರಿಯಲು ಬೇಕಾದ ಪ್ರೈವೆಸಿಯನ್ನು ನಮಗೆ ನೀಡಬೇಕೆಂದು ನಾವು ವಿನಂತಿಸುತ್ತೇವೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಎಂದು ಬರೆದುಕೊಂಡು ತಾವಿಬ್ಬರು ವಿಚ್ಛೇದನ ಪಡೆದುಕೊಳ್ಳುತ್ತಿರುವ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕವಾಗಿ ತಿಳಿಸಿದ್ದರು.

    ಟಾಲಿವುಡ್‍ನ ಈ ಸ್ಟಾರ್ ದಂಪತಿ ನಾಲ್ಕು ವರ್ಷಗಳ ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯವನ್ನು ಹಾಡಿದ್ದಾರೆ. ಹಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಸುದ್ದಿಗೆ ತೆರೆ ಬಿದ್ದಿದೆ. ಸಂಸಾರದಲ್ಲಿ ಬಿರುಗಾಳಿ ಎದ್ದಿದೆ ಎಂಬ ಅನುಮಾನ ವಿಚ್ಛೇದನಕ್ಕೂ ಮೊದಲು ಹಲವು ದಿನಗಳಿಂದಲೂ ಕೇಳಿಬರುತ್ತಲೇ ಇತ್ತು. ಆದರೆ ಕುಟುಂಬದ ಯಾರೊಬ್ಬರೂ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಕೊನೆಗೂ ನಟ ಹಾಗೂ ನಟಿಯೇ ಸೋಶಿಯಲ್‌ ಮೀಡಿಯಾ ಮೂಲಕವೇ ಬಹಿರಂಗಪಡಿಸಿದ್ದರು.