Tag: ಸಮಂತಾ ರಾತ್ ಪ್ರಭು

  • ವಿಜಯ್ ದೇವರಕೊಂಡ ಜೊತೆ ಕ್ಯೂಟ್ ಫೋಟೋ ಶೇರ್ ಮಾಡಿದ ಸಮಂತಾ

    ವಿಜಯ್ ದೇವರಕೊಂಡ ಜೊತೆ ಕ್ಯೂಟ್ ಫೋಟೋ ಶೇರ್ ಮಾಡಿದ ಸಮಂತಾ

    ಟಾಲಿವುಡ್ ಕ್ಯೂಟ್ ಬ್ಯೂಟಿ ಸಮಂತಾ ರಾತ್ ಪ್ರಭು ಬಹುಭಾಷಾ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಆದರೂ, ಅವಕಾಶ ಮಾಡಿಕೊಂಡು ತಮ್ಮ ಸಿನಿ ಜರ್ನಿಯಲ್ಲಿ ಜೊತೆಗಿದ್ದ ತಾರೆಯರನ್ನು ನೆನೆಪಿಸಿಕೊಳ್ಳುತ್ತಿರುತ್ತಾರೆ. ಈ ಹಿನ್ನೆಲೆ ಇಂದು ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಹುಟ್ಟುಹಬ್ಬದ ಹಿನ್ನೆಲೆ ವಿಶೇಷ ಫೋಟೋ ಶೇರ್ ಮಾಡಿ ವಿಶ್‌ ಮಾಡಿದ್ದಾರೆ

    ವಿಜಯ್ ದೇವರಕೊಂಡ ಅವರೊಂದಿಗೆ ನಟಿಸುತ್ತಿರುವ ಸಮಂತಾ ಅವರು ನಟನ ಜೊತೆಗಿನ ಮುದ್ದಾದ ಫೋಟೋ ಶೇರ್ ಮಾಡಿಕೊಂಡಿದ್ದು, ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. ಸಮಂತಾ ಅವರು ಟ್ವೀಟ್‌ನಲ್ಲಿ  ‘ನಂಬಲಾಗದಷ್ಟು ಸ್ಪೂರ್ತಿದಾಯಕ ವ್ಯಕ್ತಿ’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ದೇವರಕೊಂಡ ಅವರ ವ್ಯಕ್ತಿತ್ವ ಬೇರೆಯವರಿಗೆ ಸ್ಪೂರ್ತಿ ನೀಡುತ್ತೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

    https://twitter.com/Samanthaprabhu2/status/1523507862160703488?ref_src=twsrc%5Etfw%7Ctwcamp%5Etweetembed%7Ctwterm%5E1523507862160703488%7Ctwgr%5E%7Ctwcon%5Es1_&ref_url=https%3A%2F%2Fwww.pinkvilla.com%2Fentertainment%2Fsouth%2Fsamantha-shares-cute-pic-vijay-deverakonda-pens-birthday-note-calls-him-incredibly-inspiring-1084996

    ಟ್ವೀಟ್‌ನಲ್ಲಿ ಅವರು, ‘ಹುಟ್ಟುಹಬ್ಬದ ಶುಭಾಶಯಗಳು, ಎಲ್ಲರ ಪ್ರೀತಿ ಮತ್ತು ಮೆಚ್ಚುಗೆಗೆ ನೀವು ಅರ್ಹರು. ನೀವು ಕೆಲಸ ಮಾಡುವುದನ್ನು ನೋಡುವುದು ನಂಬಲಾಗದಷ್ಟು ಸ್ಫೂರ್ತಿದಾಯಕವಾಗಿದೆ. ದೇವರು ಆಶೀರ್ವದಿಸಲಿ’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಸಮಂತಾ ಮತ್ತು ವಿಜಯ್ ಕಾಶ್ಮೀರದಲ್ಲಿ ವಿಡಿ 11 ರ ಸೆಟ್‌ನಲ್ಲಿರುವ ಫೋಟೋ ಶೇರ್ ಮಾಡಿದ್ದು, ಇಬ್ಬರೂ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ವಿಜಯ್ ತನ್ನ ತಂಡದೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಕೇಕ್ ಕಟ್ ಮಾಡಿದ್ದಾರೆ. ನಿರ್ಮಾಪಕರು ವಿಜಯ್ ಹುಟ್ಟುಹಬ್ಬದ ಆಚರಣೆಯ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ವೈರಲ್ ಆಗುತ್ತಿವೆ

     

  • ಗೋವಾದಲ್ಲಿ ಸ್ನೇಹಿತರ ಜೊತೆ ಎಂಜಾಯ್ ಮೂಡ್‍ನಲ್ಲಿ ಸಮಂತಾ

    ಗೋವಾದಲ್ಲಿ ಸ್ನೇಹಿತರ ಜೊತೆ ಎಂಜಾಯ್ ಮೂಡ್‍ನಲ್ಲಿ ಸಮಂತಾ

    ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಗೋವಾದಲ್ಲಿ ಸ್ನೇಹಿತರ ಜೊತೆ ಸಖತ್ ಎಂಜಯ್ ಮಾಡುತ್ತಿದ್ದು, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ‘ಪುಷ್ಪ’ ಸಿನಿಮಾದ ‘ಓ ಅಂತಾವ.. ಓಹೋ ಅಂತಾವ’ ಡ್ಯಾನ್ಸ್ ನಲ್ಲಿ ಎಲ್ಲರ ಗಮನ ಸೆಳೆದಿರುವ ಸಮಂತಾ ಇತ್ತೀಚೆಗೆ ವೈರಲ್ ಜ್ವರದಿಂದ ಚೇತರಿಸಿಕೊಂಡಿದ್ದರು. ಈಗ ಕ್ರಿಸ್‍ಮಸ್ ಹಿನ್ನೆಲೆ ಸ್ನೇಹಿತರೊಂದಿಗೆ ಗೋವಾಗೆ ತೆರಳಿದ್ದು, ಪ್ರಕೃತಿ ಮಡಿಲಿನಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ. ಗೋವಾದಲ್ಲಿ ತಾವು ಕಳೆದ ಮಧುರ ಕ್ಷಣಗಳನ್ನು ಸಮಂತಾ ಇನ್‍ಸ್ಟಾಗ್ರಾಮ್ ನಲ್ಲಿ ಫೋಟೋ ಮತ್ತು ವೀಡಿಯೋವನ್ನು ಶೇರ್ ಮಾಡಿದ್ದಾರೆ. ಇದನ್ನೂ ಓದಿ: ವೈರಲ್ ಜ್ವರದ ನಂತರ ಮತ್ತೆ ವರ್ಕೌಟ್‍ಗೆ ಮರಳಿದ ಸಮಂತಾ

    ಫೋಟೋವನ್ನು ಶೇರ್ ಮಾಡಿದ ಸಮಂತಾ ‘ಗೋವಾ ಯು ಬ್ಯೂಟಿ’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ಸ್ಯಾಮ್ ನೀರಿನಲ್ಲಿ ಕುಳಿತುಕೊಂಡು ಫುಲ್ ಜೋಶ್ ನಲ್ಲಿ ಸ್ಮೈಲ್ ಕೊಟ್ಟಿದ್ದಾರೆ.

    ಇಷ್ಟೇ ಅಲ್ಲದೇ ಸಮಂತಾ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿಯೂ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಸ್ಟ್ ನಲ್ಲಿ ಅವರು ತಮ್ಮ ಸ್ನೇಹಿತರಾದ ಮಾಡೆಲ್ – ವಕೀಲರಾದ ವಾಸುಕಿ ಸುಂಕವಲ್ಲಿ ಮತ್ತು ಫ್ಯಾಷನ್ ಡಿಸೈನರ್-ಉದ್ಯಮಿ ಶಿಲ್ಪಾ ರೆಡ್ಡಿ ಅವರೊಂದಿಗೆ ಪೋಸ್ ಕೊಟ್ಟಿದ್ದಾರೆ.

     

    View this post on Instagram

     

    A post shared by Samantha (@samantharuthprabhuoffl)

    ಇತ್ತೀಚೆಗೆ ಸಮಂತಾ ಪುಷ್ಪ ಸಿನಿಮಾದಲ್ಲಿ ತಾನು ಮಾಡಿದ ಐಟಂ ಡ್ಯಾನ್ಸ್ ಕುರಿತು ಇನ್‍ಸ್ಟಾದಲ್ಲಿ, ಅನುಭವವನ್ನು ಬರೆದು ‘ಪುಷ್ಪ’ ಸಾಂಗ್ ನ ಫೋಟೋವನ್ನು ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ನಿಂದಿಸಿದ್ದಕ್ಕೆ ಯುವಕನ ಅಪಹರಿಸಿ ಕೊಂದರು!

    ಈ ಪೋಸ್ಟ್ ನೋಡಿದ ಸಮಂತಾ ಅಭಿಮಾನಿಗಳು ಮೆಚ್ಚುಗೆ ವ್ಯಕ್ತವಾಗಿದ್ದು, ಅನೇಕ ಸೆಲೆಬ್ರಿಟಿಗಳು ಕೂಡ ಹೊಗಳಿದ್ದರು.

    ಪ್ರಸ್ತುತ ಸಮಂತಾ ‘ಕಾತು ವಾಕುಲಾ ರೆಂಡು ಕಾದಲ್’, ‘ಶಾಕುಂತಲಂ’ ಮತ್ತು ‘ಯಶೋದಾ’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾಗಳ ರಿಲೀಸ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.