Tag: ಸಭಾ ತ್ಯಾಗ

  • ಯಾರನ್ನ ಕೇಳಿ ಸಭಾ ತ್ಯಾಗ ಮಾಡಿದ್ರಿ: ಬಿಜೆಪಿ ಸದಸ್ಯರ ವಿರುದ್ಧ ಗುಡುಗಿದ ಶ್ರೀನಿವಾಸ ಪೂಜಾರಿ

    ಯಾರನ್ನ ಕೇಳಿ ಸಭಾ ತ್ಯಾಗ ಮಾಡಿದ್ರಿ: ಬಿಜೆಪಿ ಸದಸ್ಯರ ವಿರುದ್ಧ ಗುಡುಗಿದ ಶ್ರೀನಿವಾಸ ಪೂಜಾರಿ

    ಬೆಂಗಳೂರು: ಯಾರನ್ನ ಕೇಳಿ ನೀವು ಸಭಾ ತ್ಯಾಗ ಮಾಡಿದ್ದೀರಿ ಎಂದು ಪ್ರಶ್ನಿಸಿ ತಮ್ಮದೇ ಪಕ್ಷದ ಸದಸ್ಯರ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಕಿಡಿ ಕಾರಿದ್ದಾರೆ.

    ಸಭಾತ್ಯಾಗ ಮಾಡುವ ಕುರಿತು ಬಿಜೆಪಿಯಲ್ಲಿ ಯಾವುದೇ ಚರ್ಚೆ ನಡೆದಿರಲಿಲ್ಲ. ಆದರೂ ಪರಿಷತ್ ಕಲಾಪದಿಂದ ಬಿಜೆಪಿ ಸದಸ್ಯರು ಹೊರ ನಡೆದರು. ಈ ಬೆಳವಣಿಗೆಯಿಂದ ಪಕ್ಷದ ಸಹ ಸದಸ್ಯರ ವಿರುದ್ಧ ಶ್ರೀನಿವಾಸ್ ಪೂಜಾರಿ ಅವರು ಕಿಡಿ ಕಾರಿದರು.

    ನಿಮ್ಮ ಇಷ್ಟಕ್ಕೆ ಬಂದ ಹಾಗೆ ನಡೆದುಕೊಳ್ಳುವುದೇ ಆಗಿದ್ದರೇ ನಾನು ಏಕೆ ಬೇಕು. ನಾನು ಇನ್ನು ಕೆಲವೊಂದು ಸ್ಪಷ್ಟೀಕರಣ ನೀಡಬೇಕಿತ್ತು ಎಂದು ಸಹ ಸದಸ್ಯರನ್ನು ಆಕ್ರೋಶದಿಂದಲೇ ಪ್ರಶ್ನಿಸಿದ್ದಾರೆ.

    ಸಭಾ ತ್ಯಾಗ ಮಾಡಿದ್ಯಾಕೆ: ಪರಿಷತ್ ಸಭಾಪತಿ ಆಯ್ಕೆ ವಿಳಂಬವಾಗುತ್ತಿದೆ. ನಿರ್ಧಿಷ್ಟ ದಿನಾಂಕ ತಿಳಿಸಿ ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಜುಲೈ 12ರಲ್ಲಿಯೇ ಸರ್ಕಾರ ತನ್ನ ನಿರ್ಧಾರ ಹೊರಡಿಸಲಿದೆ. ಹೀಗಾಗಿ ಅಲ್ಲಿಯರೆಗೆ ಕಾಯಬೇಕು ಎಂದು ಹಂಗಾಮಿ ಸಭಾಪತಿ ಬಸವಾರಜ್ ಹೊರಟ್ಟಿ ಅವರು ಹೇಳಿದರೂ ಕೇಳದೆ ಸಭಾತ್ಯಾಗ ಮಾಡಿದರು. ಬಿಜೆಪಿ ಸದಸ್ಯರ ಸಭಾ ತ್ಯಾಗದ ನಂತರವೂ ಕಲಾಪ ಮುಂದುವರಿದಿತ್ತು.