Tag: ಸಬ್ ರಿಜಿಸ್ಟಾರ್

  • ಸಿನಿಮಾ ಸ್ಟೈಲಿನಲ್ಲಿ ಸಬ್‍ ರಿಜಿಸ್ಟಾರ್ ಕಿಡ್ನಾಪ್ – ಸಾರ್ವಜನಿಕರಿಗೆ ಕಿರುಕುಳ ನೀಡದಂತೆ ವಾರ್ನಿಂಗ್

    ಸಿನಿಮಾ ಸ್ಟೈಲಿನಲ್ಲಿ ಸಬ್‍ ರಿಜಿಸ್ಟಾರ್ ಕಿಡ್ನಾಪ್ – ಸಾರ್ವಜನಿಕರಿಗೆ ಕಿರುಕುಳ ನೀಡದಂತೆ ವಾರ್ನಿಂಗ್

    ಬೆಂಗಳೂರು: ಸಿನಿಮಾ ಸ್ಟೈಲ್‍ ನಲ್ಲಿ ಅಪಹರಣಕಾರರು ಸಬ್ ರಿಜಿಸ್ಟಾರ್ ಅವರನ್ನು ಕಿಡ್ನಾಪ್ ಮಾಡಿ ಸಾರ್ವಜನಿಕರಿಗೆ ಕಿರುಕುಳ ನೀಡದಂತೆ ವಾರ್ನಿಂಗ್ ಕೊಟ್ಟಿದ್ದಾರೆ.

    ಇದೇ ಜುಲೈ 5 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಕೆಎಚ್ ರಸ್ತೆಯ ಫುಟ್ ಪಾತ್‍ನಿಂದ ಕಿಡ್ನಾಪ್ ಮಾಡಲಾಗಿತ್ತು. ರಂಗಸ್ವಾಮಿ ಕಿಡ್ನಾಪ್‍ಗೆ ಒಳಗಾದ ಹಿರಿಯ ಸಬ್ ರಿಜಿಸ್ಟಾರ್ ಆಗಿದ್ದು, ಶಾಂತಿನಗರ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

    ಜುಲೈ 5ರಂದು ಜನಸಂದಣಿ ಇರುವ ರಸ್ತೆಯಲ್ಲಿ ಕಾರಿನಲ್ಲಿ 20-25 ವರ್ಷದೊಳಗಿನ 10 ಮಂದಿ ಯುವಕರ ಗ್ಯಾಂಗ್ ಕಚೇರಿಯಿಂದನೇ ಕಿಡ್ನಾಪ್ ಮಾಡಿದ್ದಾರೆ. ರಂಗಸ್ವಾಮಿಗೆ ಗ್ಯಾಂಗ್ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿ, ಜೋರಾಗಿ ಮ್ಯೂಸಿಕ್ ಹಾಕಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ.

    ರಂಗಸ್ವಾಮಿ ಅವರನ್ನು ಕಾರಿನಲ್ಲೇ ಕೂಡಿ ಹಾಕಿದ್ದು, ಸಾರ್ವಜನಿಕರಿಗೆ ಕಿರುಕುಳ ನೀಡದಂತೆ ಎಚ್ಚರಿಕೆಯ ಬುದ್ಧಿ ಪಾಠ ಮಾಡಿದ್ದಾರೆ. ಕಿಡ್ನಾಪ್ ಮಾಡಿ ಸಂಜೆ 5 ರಿಂದ ರಾತ್ರಿಯಿಡಿ ಕಾರಿನಲ್ಲಿ ಸುತ್ತಾಡಿಸಿ ಹಲ್ಲೆ ಮಾಡಿದ್ದಾರೆ. ಬಳಿಕ ರಾತ್ರಿಯಿಡಿ ಸುತ್ತಾಡಿಸಿ ಜುಲೈ 6ರ ಬೆಳಗಿನ ಜಾವ ಕನಕಪುರ ರಸ್ತೆಯಲ್ಲಿ ಬಿಟ್ಟುಹೋಗಿದ್ದಾರೆ.

    ಈ ಕಿಡ್ನಾಪ್ ಕುರಿತಂತೆ ಜುಲೈ 6 ರಂದು ಪೊಲೀಸರಿಗೆ ದೂರನ್ನು ನೀಡಲಾಗಿತ್ತು. ಸದ್ಯಕ್ಕೆ ಈ ಕುರಿತು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.