Tag: ಸಬ್ಸಿಡಿ

  • ರಾಜ್ಯದ ಜನರಿಗೆ ಕಾದಿದ್ಯಾ ಫ್ರೀ ಕರೆಂಟ್ ಶಾಕ್? – ಗ್ರಾಹಕರಿಂದಲೇ ಹಣ ವಸೂಲಿಗೆ ಎಸ್ಕಾಂ ಚಿಂತನೆ

    ರಾಜ್ಯದ ಜನರಿಗೆ ಕಾದಿದ್ಯಾ ಫ್ರೀ ಕರೆಂಟ್ ಶಾಕ್? – ಗ್ರಾಹಕರಿಂದಲೇ ಹಣ ವಸೂಲಿಗೆ ಎಸ್ಕಾಂ ಚಿಂತನೆ

    ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾರಣವಾಗಿದ್ದ ಪಂಚ ಗ್ಯಾರಂಟಿ ಯೋಜನೆಗಳಿಂದಲೇ (Guarantee Scheme) ಈಗ ಕಾಂಗ್ರೆಸ್ ನೇತೃತ್ವದ ಸರ್ಕಾರ ಇಕ್ಕಟ್ಟಿಗೆ ಸಿಲುಕಿದಂತೆ ಕಾಣುತ್ತಿದೆ. ಪ್ರತಿ ವರ್ಷ ಸರ್ಕಾರದಿಂದ ಎಸ್ಕಾಂಗಳಿಗೆ (ESCOM) ಪಾವತಿಸಬೇಕಿದ್ದ ಹಣವನ್ನು ಜನರಿಂದಲೇ ಸಂಗ್ರಹಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.

    ಹೌದು. ಪ್ರತಿ ವರ್ಷ ಸರ್ಕಾರ ಎಸ್ಕಾಂಗಳಿಗೆ 1,602 ಕೋಟಿ ರೂ. ಸಬ್ಸಿಡಿ ಸರ್ಕಾರ ಪಾವತಿಸಬೇಕು. ಆದ್ರೆ ಇದು ಪಾವತಿಯಾಗದೇ ಇರುವುದರಿಂದ ಜನರಿಂದಲೇ ವಸೂಲಿಗೆ ಚೆಸ್ಕಾಂ ಪ್ರಸ್ತಾವನೆ ಸಲ್ಲಿಸಿದೆ. ಆದರೆ ನಿರ್ದೇಶನ ಕೊಡದ ಹೊರತು ಹಣ ವಸೂಲಿ ಮಾಡದಂತೆ ಕೆಇಆರ್‌ಸಿ (KERC) ಸೂಚಿಸಿದೆ. ಒಂದು ವೇಳೆ ಕೆಇಆರ್‌ಸಿ ಏನಾದರೂ ಸೂಚನೆ ಕೊಟ್ಟರೆ 1.79 ಕೋಟಿ ಗೃಹಜ್ಯೋತಿ (Gruhajyothi) ಫಲಾನುಭವಿಗಳಿಗೆ ಬಿಗ್ ಶಾಕ್ ಎದುರಾಗಲಿದೆ.

    ಜನರಿಂದಲೇ ಗೃಹಜ್ಯೋತಿ ಬಿಲ್ ವಸೂಲಿಗೆ ಅವಕಾಶ ಕೊಡುವಂತೆ ಕೋರಿ ಚೆಸ್ಕಾಂ ಕೆಇಆರ್‌ಸಿಗೆ ಪತ್ರ ಬರೆದಿದೆ. ಕೆಇಆರ್‌ಸಿ ಆಕ್ಟ್ ಅಡಿ ಅವಕಾಶ ಕೊಡುವಂತೆ ಪತ್ರ ಬರೆಯಲಾಗಿದೆ. 2008ರ ಕೆಇಆರ್‌ಸಿ ಆಕ್ಟ್ ಅನ್ನು ಚೆಸ್ಕಾಂ ಪತ್ರದಲ್ಲಿ ಉಲ್ಲೇಖಿಸಿದೆ. ಸರ್ಕಾರ ಸಬ್ಸಿಡಿ ಕೊಡದೇ ಹೋದಲ್ಲಿ ಜನರಿಂದ ಅದನ್ನ ಪಾವತಿ ಮಾಡಿಸಿಕೊಳ್ಳಬೇಕು. ಇದಕ್ಕೆ ಕೆಇಆರ್‌ಸಿ ಖುದ್ದು ಅನುಮತಿ ಕೊಡಬೇಕು, ವಸೂಲಿಗೆ ನಿರ್ದೇಶನ ಕೊಡಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ. ಆದರೆ ಕೆಇಆರ್‌ಸಿಯಿಂದ ವಿಚಾರಣೆ ಬಾಕಿ ಇದ್ದು, ಇನ್ನೂ ಅನುಮತಿ ಸಿಕ್ಕಿಲ್ಲ. ಕೆಇಆರ್‌ಸಿ ನಿರ್ದೇಶನ ಕೊಡದ ಹೊರತು ಜನರಿಂದ ಬಿಲ್ ಪಾವತಿ ಮಾಡಿಸಿಕೊಳ್ಳುವಂತಿಲ್ಲ.

    ಕೆಇಆರ್‌ಸಿ ಚೆಸ್ಕಾಂ ಪ್ರಸ್ತಾಪ ಒಪ್ಪಿದ್ರೆ ಏನಾಗುತ್ತೆ?
    * ಗೃಹಜ್ಯೋತಿ ಬಳಕೆದಾರರೇ ಮೊದಲು ಬಿಲ್ ಪಾವತಿಸಬೇಕಾಗುತ್ತದೆ.
    * ಸದ್ಯ 1.71ಕೋಟಿ ಅರ್ಹರು ಗೃಹಜ್ಯೋತಿಗೆ ನೋಂದಣಿ ಮಾಡಿಕೊಂಡಿದ್ದಾರೆ.
    * ಇದರಲ್ಲಿ 1.65 ಕೋಟಿ ಕುಟುಂಬಗಳಿಗೆ ಶೂನ್ಯ ಬಿಲ್ ಬರುತ್ತಿದೆ.
    * ಬೆಸ್ಕಾಂ ವ್ಯಾಪ್ತಿಯಲ್ಲೇ 70 ಲಕ್ಷ ಗೃಹಜ್ಯೋತಿ ಫಲಾನುಭವಿಗಳಿದ್ದಾರೆ.
    * ಕೆಇಆರ್‌ಸಿ ಚೆಸ್ಕಾಂ ಪ್ರಸ್ತಾಪಕ್ಕೆ ಅವಕಾಶ ಕೊಟ್ಟರೆ ಎಲ್ಲಾ ಎಸ್ಕಾಂಗಳಿಗೂ ಇದು ಅನ್ವಯ ಆಗಲಿದೆ.
    * ಈಗಾಗಲೇ ಸರ್ಕಾರ ಸಬ್ಸಿಡಿ ಹಣವನ್ನು ಮುಂಗಡವಾಗಿ ನೀಡುವ ಬದಲು ಎರಡು ತಿಂಗಳು ಬಾಕಿ ಉಳಿಸಿಕೊಳ್ಳುತ್ತಿದೆ.
    * 2008ರ ಕೆಇಆರ್‌ಸಿ ನಿಯಮಗಳ ಪ್ರಕಾರ ಪರಿಗಣಿಸಿದರೆ ಅವಕಾಶ ಕೊಡಬೇಕಾಗಬಹುದು.
    * ಆದರೆ ಇದೇ ತಿಂಗಳು 27ರಂದು ಕೆಇಆರ್‌ಸಿ ಅಂತಿಮ ಸಭೆ ಇದೆ.
    * ಆ ಸಭೆಯಲ್ಲಿ ಏನು ತೀರ್ಮಾನ ಮಾಡುತ್ತೆ ಎಂಬುದರ ಮೇಲೆ ಗೃಹಜ್ಯೋತಿ ಗ್ರಾಹಕರಿಗೆ ಶಾಕ್ ಸಿಗುತ್ತಾ? ರಿಲೀಫ್ ಸಿಗುತ್ತಾ ಎಂದು ಗೊತ್ತಾಗಲಿದೆ.

  • Karnataka Budget 2023: ಸ್ಥಗಿತಗೊಂಡಿದ್ದ ಸಿನಿಮಾ ಸಬ್ಸಿಡಿಗೆ ಮತ್ತೆ ಮರುಜೀವ

    Karnataka Budget 2023: ಸ್ಥಗಿತಗೊಂಡಿದ್ದ ಸಿನಿಮಾ ಸಬ್ಸಿಡಿಗೆ ಮತ್ತೆ ಮರುಜೀವ

    ರ್ನಾಟಕ ಸರಕಾರ ಕನ್ನಡದ (Sandalwood) ಸಿನಿಮಾಗಳಿಗೆ ನೀಡುತ್ತಿದ್ದ ಸಹಾಯಧನವನ್ನು (Subsidy) ಕಳೆದ ಮೂರು ವರ್ಷಗಳಿಂದ ನೀಡಿರಲಿಲ್ಲ. ನಾನಾ ರೀತಿಯ ಕಾರಣಗಳನ್ನು ಕೊಡುತ್ತಲೇ ಸಬ್ಸಿಡಿಯನ್ನು ಸ್ಥಗಿತಗೊಳಿಸಲಾಗಿತ್ತು. ಮತ್ತೆ ಸಹಾಯಧನವನ್ನು ನೀಡಲು ಕ್ರಮ ಕೈಗೊಳ್ಳುವುದಾಗಿ ಬಜೆಟ್ ನಲ್ಲಿ (Karnataka Budget 2023)  ತಿಳಿಸಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.

    ‘ಕಳೆದ ಮೂರು ವರ್ಷಗಳಿಂದ ಕನ್ನಡದ ಗುಣಾತ್ಮಕ ಚಿತ್ರಗಳಿಗೆ (Film) ಸಹಾಯಧನ ನೀಡುವ ಯೋಜನೆ ಸ್ಥಗಿತಗೊಂಡಿತ್ತು. ಈ ಬಾರಿ ಆಯ್ಕೆ ಸಮಿತಿಗಳನ್ನು ರಚಿಸಿ, ಸಹಾಯಧನ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಬಜೆಟ್ ಘೋಷಣೆ ಮಾಡಿದ್ದಾರೆ ಮುಖ್ಯಮಂತ್ರಿಗಳು. ಈ ಮೂಲಕ ಗುಣಾತ್ಮಕ ಕನ್ನಡ ಚಿತ್ರಗಳ ನಿರ್ಮಾಪಕರ ಸಹಾಯಕ್ಕೆ ನಿಂತಿದ್ದಾರೆ. ಇದನ್ನೂ ಓದಿ:ನೀಲಿ ತಾರೆ ಮಿಯಾ ತೆಲುಗಿನ ಡೈರೆಕ್ಟರ್ ಆರ್‌ಜಿವಿ

     

    ಮೊನ್ನೆಯಷ್ಟೇ ಸಿನಿಮಾ ಸಬ್ಸಡಿ ಮತ್ತು ಸಿನಿಮಾ ಪ್ರಶಸ್ತಿಗೆ ಸಂಬಂಧಿಸಿದಂತೆ ನಿಯೋಗವೊಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿತ್ತು. 2018 ರಿಂದ ಸಿನಿಮಾ ಪ್ರಶಸ್ತಿಯನ್ನು ನೀಡಿಲ್ಲ ಮತ್ತು ಸಬ್ಸಿಡಿ ಕೂಡ ಸ್ಥಗಿತಗೊಳಿಸಲಾಗಿದೆ ಎಂದು ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗಿತ್ತು. ಮನವಿಗೆ ಸ್ಪಂದಿಸಿರುವ ಸಿದ್ದರಾಮಯ್ಯ ಅವರು ಈ ಬಾರಿ ಬಜೆಟ್ ನಲ್ಲಿ ಸಬ್ಸಿಡಿ ಕುರಿತಾಗಿ ಉಲ್ಲೇಖಿಸಿದ್ದಾರೆ. ಪ್ರಶಸ್ತಿಯ ಮನವಿಯನ್ನು ಪುರಸ್ಕರಿಸಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇನ್ಮುಂದೆ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗೆ ಸಬ್ಸಿಡಿ ಸಿಗಲ್ಲ

    ಇನ್ಮುಂದೆ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗೆ ಸಬ್ಸಿಡಿ ಸಿಗಲ್ಲ

    ನವದೆಹಲಿ: ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ಗೃಹ ಬಳಕೆಯ ಎಲ್‍ಜಿಪಿ ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡಲ್ಲ ಎಂದು ಅಧಿಕೃತವಾಗಿ ಘೋಷಿಸಿದೆ.

    ಸಾಮಾನ್ಯ ಗ್ರಾಹಕರು ಮಾರ್ಕೆಟ್ ದರಕ್ಕೆ ಅಡುಗೆ ಅನಿಲವನ್ನು ಖರೀದಿ ಮಾಡಬೇಕಾಗುತ್ತದೆ. ಇಂಧನ ಇಲಾಖೆಯ ಕಾರ್ಯದರ್ಶಿ ಪಂಕಜ್ ಚೌಧರಿ ಮಾತನಾಡಿ, ಕೋವಿಡ್ ಶುರುವಾದ ದಿನದಿಂದ ಎಲ್‍ಪಿಜಿ ವಿನಿಯೋಗದಾರರಿಗೆ ಸಬ್ಸಿಡಿ ನೀಡಿಲ್ಲ. ಇನ್ಮುಂದೆಯೂ ಕೂಡ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: PFIಗೆ ಚೀನಾ, ಗಲ್ಫ್ ದೇಶಗಳಿಂದ ಹಣ?

    LPG

    ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್ ಹೊಂದಿದವರಿಗೆ ಮಾತ್ರ ಈಗ ಸಬ್ಸಿಡಿ ನೀಡಲಾಗುತ್ತದೆ. ದೇಶದ ಎಲ್ಲ ಪ್ರಜೆಗಳಿಗೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಸದ್ಯ ಬೆಂಗಳೂರಿನಲ್ಲಿ 14.2 ಕೆಜಿ ತೂಕದ ಎಲ್‍ಪಿಜಿ ಸಿಲಿಂಡರ್ ಬೆಲೆ 1006 ರೂಪಾಯಿ ಇದೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ 200 ರೂಪಾಯಿ ಸಬ್ಸಿಡಿ ಸಿಗಲಿದೆ.

    ಈ ಮೊದಲು ಹೇಗಿತ್ತು?
    ಈ ಮೊದಲು ಸಬ್ಸಿಡಿ ಸಹಿತವಾಗಿಯೇ ಸಿಗುತಿತ್ತು. ಗೃಹ ಬಳಕೆಗೆ ನೀಡಲಾಗುತ್ತಿದ್ದ ಸಬ್ಸಿಡಿ ಸಿಲಿಂಡರ್‌ ದುರುಪಯೋಗ ಆಗುತ್ತಿರುವ ವಿಚಾರ ತಿಳಿದು ಮೋದಿ ಸರ್ಕಾರ ಸಿಲಿಂಡರ್‌ ಖರೀದಿ ಮಾಡಿದ ಬಳಿಕ ಬ್ಯಾಂಕ್‌ ಖಾತೆಗೆ ಸಬ್ಸಿಡಿ ದುಡ್ಡನ್ನು ಹಾಕುತ್ತಿತ್ತು. ಆದರೆ ಕೋವಿಡ್‌ ಬಳಿಕ ಸಬ್ಸಿಡಿ ಮೊತ್ತ ಹಾಕುವುದನ್ನು ಸ್ಥಗಿತಗೊಳಿಸಿದೆ.

  • ವಿದೇಶದಿಂದ 3,500 ರೂ.ಗೆ ಯೂರಿಯಾ ಖರೀದಿಸಿ ರೈತರಿಗೆ 350 ರೂ.ಗೆ ವಿತರಣೆ : ಮೋದಿ

    ವಿದೇಶದಿಂದ 3,500 ರೂ.ಗೆ ಯೂರಿಯಾ ಖರೀದಿಸಿ ರೈತರಿಗೆ 350 ರೂ.ಗೆ ವಿತರಣೆ : ಮೋದಿ

    ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಗುಜರಾತ್‌ನ ಕಲೋಲ್‌ನಲ್ಲಿ ಇಫ್ಕೋ ನಿರ್ಮಿಸಿದ ವಿಶ್ವದ ಮೊದಲ ನ್ಯಾನೋ ಯೂರಿಯಾ ದ್ರವ ರಸಗೊಬ್ಬರ ಘಟಕವನ್ನು ಉದ್ಘಾಟಿಸಿದ್ದಾರೆ.

    ಗಾಂಧಿನಗರದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಅಲ್ಟ್ರಾಮೋಡರ್ನ್ ನ್ಯಾನೋ ಯೂರಿಯಾ ದ್ರವ ರಸಗೊಬ್ಬರ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಗ್ರಹ ಮತ್ತು ಸಹಕಾರ ಸಚಿವ ಅಮಿತ್ ಶಾ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಮನ್ಸುಖ್ ಮಾಂಡವಿಯಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತ ವಿದೇಶದಿಂದ 50 ಕೆಜಿ ಯೂರಿಯಾ ಚೀಲವನ್ನು 3,500 ರೂ.ಗೆ ಆಮದು ಮಾಡಿ ಅದೇ ಚೀಲವನ್ನು ರೈತರಿಗೆ 300 ರೂ.ಗೆ ವಿತರಿಸುತ್ತಿದ್ದೇವೆ. ನಮಗೆ ಇದರಿಂದ ಕಷ್ಟವಾದರೂ ನಾವು ರೈತರಿಗೆ ತೊಂದರೆ ನೀಡಲು ಬಯಸುವುದಿಲ್ಲ ಎಂದು ಹೇಳಿದರು.

    ಇಂದು ಭಾರತವು ವಿಶ್ವದಲ್ಲೇ ಅತಿ ದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿದ್ದು, ಇದರಲ್ಲಿ ಗುಜರಾತ್ ಪ್ರಮುಖ ಪಾಲನ್ನು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಡೈರಿ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ ಮತ್ತು ಗ್ರಾಮೀಣ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡುತ್ತಿದೆ. ಡೈರಿ ಕ್ಷೇತ್ರದ ಸಹಕಾರಿ ಮಾದರಿಯ ಉದಾಹರಣೆ ನಮ್ಮ ಮುಂದಿದೆ ಎಂದರು.

    ಇಫ್ಕೋ ನ್ಯಾನೋ ರಸಗೊಬ್ಬರಗಳ ಉತ್ಪಾದನೆಗೆ ಹೆಚ್ಚುವರಿ ಉತ್ಪಾದನಾ ಘಟಕಗಳನ್ನು  ಅಯೋನ್ಲಾ, ಫುಲ್ಪುರ್, ಬೆಂಗಳೂರು ಮತ್ತು ಪರದೀಪ್, ಕಾಂಡ್ಲಾ, ದಿಯೋಘರ್ ಮತ್ತು ಗುವಾಹಟಿಯಲ್ಲಿ ಸ್ಥಾಪಿಸಿದೆ. ಈ ಎಲ್ಲಾ ಘಟಕಗಳು ದಿನಕ್ಕೆ 2 ಲಕ್ಷ ಬಾಟಲಿಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದ್ದು ಒಟ್ಟು 3,000 ಕೋಟಿ ರೂ.ಗಳ ಹೂಡಿಕೆಯ ಪೈಕಿ 720 ಕೋಟಿ ರೂ.ಗಳನ್ನು ಈಗಾಗಲೇ ಹೂಡಿಕೆ ಮಾಡಲಾಗಿದ್ದು ಸಾವಿರಾರು ಜನರಿಗೆ ಉದ್ಯೋಗವನ್ನು ಸೃಷ್ಟಿಸಲಾಗಿದೆ .

  • 125 ಸಿನಿಮಾಗಳಿಂದ 200 ಚಿತ್ರಗಳಿಗೆ ಸಬ್ಸಿಡಿ  ಏರಿಕೆ: ಬಜೆಟ್‌ನಲ್ಲಿ ಸಿಎಂ ಬೊಮ್ಮಾಯಿ ಘೋಷಣೆ

    125 ಸಿನಿಮಾಗಳಿಂದ 200 ಚಿತ್ರಗಳಿಗೆ ಸಬ್ಸಿಡಿ ಏರಿಕೆ: ಬಜೆಟ್‌ನಲ್ಲಿ ಸಿಎಂ ಬೊಮ್ಮಾಯಿ ಘೋಷಣೆ

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದು, ಸಿನಿಮಾ ರಂಗಕ್ಕೂ ಬಂಪರ್ ಕೊಡುಗೆ ನೀಡಿದ್ದಾರೆ. ಪ್ರಸ್ತುತ ವಾರ್ಷಿಕ 125 ಚಿತ್ರಗಳಿಗೆ ಕೊಡುತ್ತಿದ್ದ ಸಬ್ಸಿಡಿಯನ್ನು 200ಕ್ಕೆ ಏರಿಸಿದ್ದಾರೆ. ಇದನ್ನೂ ಓದಿ : ಏಳು ತಿಂಗಳ ಗರ್ಭಿಣಿಗೆ ಇದೆಂಥ ಟಾರ್ಚರ್? : ಶಾಕ್ ನಲ್ಲಿ ನಟಿ ಸಂಜನಾ

    ನೆನ್ನೆ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಈ ಕುರಿತು ನಿರ್ಮಾಪಕ ಮತ್ತು ಸಚಿವ ಮುನಿರತ್ನ  ಸುಳಿವು ನೀಡಿದ್ದರು. ಸಿನಿಮಾ ರಂಗ ಎಂದೂ ಮರೆಯಲಾರದಂತಹ ಸುದ್ದಿಯನ್ನು ಮುಖ್ಯಮಂತ್ರಿಗಳು ಕೊಡಲಿದ್ದಾರೆ ಎಂದು ವೇದಿಕೆಯಲ್ಲೇ ಮಾತನಾಡಿದ್ದರು. ಇದನ್ನೂ ಓದಿ : ರವಿಚಂದ್ರನ್ ಸಿನಿಮಾ ಹಿರೋಯಿನ್ ಈಗ ನಿರ್ದೇಶಕಿ

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಕೋವಿಡ್ ನಿಂದ ನಿರ್ಮಾಪಕರು ಭಾರೀ ಹಾನಿಗೊಳಗಾಗಿದ್ದಾರೆ. ಹಾಗಾಗಿ 175 ಚಿತ್ರಗಳಿಗೆ ವಾರ್ಷಿಕ ಸಬ್ಸಿಡಿ ಕೊಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಸರಕಾರ ಇನ್ನೂ 25 ಚಿತ್ರಗಳನ್ನು ಸೇರಿಸಿ 200 ಚಿತ್ರಗಳಿಗೆ ಸಬ್ಸಿಡಿ ಕೊಡುವುದಾಗಿ ಬಜೆಟ್ ನಲ್ಲಿ ಘೋಷಿಸಿದ್ದಾರೆ. ಇದನ್ನೂ ಓದಿ : ಮಾರ್ಚ್ 27ಕ್ಕೆ ಕೆಜಿಎಫ್ 2 ಟ್ರೈಲರ್ ರಿಲೀಸ್

    2016ಕ್ಕೂ ಮುನ್ನ ಸರಕಾರ ವಾರ್ಷಿಕ ನೂರು ಚಿತ್ರಗಳಿಗೆ ಮಾತ್ರ ಸಬ್ಸಿಡಿ ನೀಡುತ್ತಿತ್ತು. ಅಂದಿನ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ 100 ಸಿನಿಮಾದಿಂದ 125 ಸಿನಿಮಾಗಳಿಗೆ ಏರಿಕೆ ಮಾಡಿ, ಒಂದೊಂದು ಚಿತ್ರಕ್ಕೆ ತಲಾ 10 ಲಕ್ಷ ರೂಪಾಯಿಯನ್ನು ಸಬ್ಸಿಡಿ ನೀಡುವುದಾಗಿ ಘೋಷಿಸಿದ್ದರು.

  • ಗ್ರಾಹಕರಿಗೆ ಮತ್ತೊಮ್ಮೆ ಶಾಕ್ – ಮತ್ತೆ ಎಲ್‍ಪಿಜಿ ಸಿಲಿಂಡರ್ ಬೆಲೆ ಏರಿಕೆ

    ಗ್ರಾಹಕರಿಗೆ ಮತ್ತೊಮ್ಮೆ ಶಾಕ್ – ಮತ್ತೆ ಎಲ್‍ಪಿಜಿ ಸಿಲಿಂಡರ್ ಬೆಲೆ ಏರಿಕೆ

    ನವದೆಹಲಿ : ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವ ಎಲ್‍ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 100.50 ರೂ. ಏರಿಕೆಯಾಗಿದ್ದು, ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬರಲಿದೆ. ಕಳೆದ ನವೆಂಬರ್‌ನಲ್ಲಿ 266.50 ರೂಪಾಯಿ ಏರಿಸಿದ್ದ ಸರ್ಕಾರ ಒಂದು ತಿಂಗಳ ಬಳಿಕ ಮತ್ತೆ ನೂರು ರೂಪಾಯಿ ಐವತ್ತು ಪೈಸೆ ಏರಿಸಿದೆ.

    ಇದರಿಂದಾಗಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕರ್ಮಷಿಯಲ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಾಗಿದೆ. ಸದ್ಯ ದೆಹಲಿಯಲ್ಲಿ 19-ಕೆಜಿ ವಾಣಿಜ್ಯ ಸಿಲಿಂಡರ್ ದರ 2,101 ರೂ. ಆಗಿದೆ. ಮುಂಬೈನಲ್ಲಿ, 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‍ನ ಬೆಲೆ 1,950 ರಿಂದ 2,051 ರೂ. ಆದರೆ, ಕೋಲ್ಕತ್ತಾದಲ್ಲಿ, ವಾಣಿಜ್ಯ ಎಲ್‍ಪಿಜಿ ದರ 2,177 ರೂ. ಆಗಿದೆ. ಇನ್ನು ಚೆನ್ನೈನಲ್ಲಿ 19 ಕೆಜಿ ಸಿಲಿಂಡರ್ 2,234.50 ಗೆ ಏರಿಕೆಯಾಗಿದೆ. ಇದನ್ನೂ ಓದಿ: ಇಸ್ರೋ ಖಾಸಗೀಕರಣ – ಬೆಂಗಳೂರಿನ ಕಛೇರಿ ಗುಜರಾತ್‍ಗೆ ವರ್ಗಾವಣೆ ಖಂಡಿಸಿ ಪ್ರತಿಭಟನೆ

    ಗೃಹ ಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಥಾಸ್ಥಿತಿ ಮುಂದುವರೆಸಲಾಗಿದೆ. ದೆಹಲಿಯಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಗೃಹ ಬಳಕೆ ಸಿಲಿಂಡರ್ ಬೆಲೆ ದರ 899.50 ರೂ. ಇದೆ. ಸಬ್ಸಿಡಿ ಗ್ಯಾಸ್ ಸೇರಿದಂತೆ ಎಲ್ಲಾ ವರ್ಗಗಳ ಎಲ್‍ಪಿಜಿ ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಅಕ್ಟೋಬರ್ 6 ರಂದು 15 ರೂ.ಗಳಷ್ಟು ಹೆಚ್ಚಿಸಲಾಗಿದೆ. ಅದಕ್ಕೂ ಮೊದಲು, ಅಕ್ಟೋಬರ್ 1 ರಂದು ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಎಲ್‍ಪಿಜಿ ದರಗಳನ್ನು 25 ರೂಗಳಷ್ಟು ಹೆಚ್ಚಿಸಲಾಗಿತ್ತು. ಇದನ್ನೂ ಓದಿ: ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಸ್ಯಾಂಪಲ್‌ ಕಳುಹಿಸಿ: ರಾಜ್ಯಗಳಿಗೆ ಕೇಂದ್ರ ಸೂಚನೆ

    ಪ್ರತಿ ಕುಟುಂಬಕ್ಕೆ ಸರ್ಕಾರ ಗೃಹ ಬಳಕೆಯ 12 ಸಿಲಿಂಡರ್‌ಗಳನ್ನು ಸಬ್ಸಿಡಿಯಲ್ಲಿ ನೀಡುತ್ತಿದೆ. ಈಗ ಎಲ್‍ಪಿಜಿ ಗ್ಯಾಸ್ ಗ್ರಾಹಕರಿಗೆ ಪ್ರತಿ ಸಿಲಿಂಡರ್‌ಗೆ 79.26 ರೂ.ಗಳನ್ನು ಸಬ್ಸಿಡಿಯಾಗಿ ನೀಡಲಾಗುತ್ತಿದೆ. ಆದರೆ, ಕೆಲವು ಗ್ರಾಹಕರು 158.52 ಅಥವಾ 237.78 ಸಬ್ಸಿಡಿ ಪಡೆಯುತ್ತಿದ್ದಾರೆ.

  • ಡಿಎಪಿ ಗೊಬ್ಬರ ಸಬ್ಸಿಡಿ ಪ್ರಮಾಣ ಶೇ.140 ಏರಿಕೆ – ಕೇಂದ್ರದಿಂದ ಐತಿಹಾಸಿಕ ನಿರ್ಧಾರ

    ಡಿಎಪಿ ಗೊಬ್ಬರ ಸಬ್ಸಿಡಿ ಪ್ರಮಾಣ ಶೇ.140 ಏರಿಕೆ – ಕೇಂದ್ರದಿಂದ ಐತಿಹಾಸಿಕ ನಿರ್ಧಾರ

    ನವದೆಹಲಿ: ಕೇಂದ್ರ ಸರ್ಕಾರವು ಡಿ-ಅಮೋನಿಯಂ ಫಾಸ್ಫೇಟ್ (ಡಿಎಪಿ) ರಸಗೊಬ್ಬರಕ್ಕೆ ನೀಡಲಾಗುತ್ತಿದ್ದ ಸಬ್ಸಿಡಿಯ ಪ್ರಮಾಣವನ್ನು ಶೇ.140ಕ್ಕೆ  ಹೆಚ್ಚಿಸುವ ಮೂಲಕ ಐತಿಹಾಸಿಕ ನಿರ್ಧಾರವನ್ನು ತೆಗದುಕೊಂಡಿದೆ.

    ಡಿಎಪಿ ರಸಗೊಬ್ಬರ ದರ ಭಾರೀ ಏರಿಕೆ ಆಗಿದೆ ಎಂಬ ರೈತರ ಟೀಕೆಯ ಬೆನ್ನಲ್ಲೇ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರಸಗೊಬ್ಬರ ದರ ನಿಯಂತ್ರಣ ಸಂಬಂಧ ಉನ್ನತ ಮಟ್ಟದ ಸಭೆ ನಡೆಯಿತು.

    ಈ ಸಭೆಯ ಬಳಿಕ ಶೇ.140ಕ್ಕೆ ಸಬ್ಸಿಡಿಯ ಪ್ರಮಾಣವನ್ನು ಏರಿಸುವ ನಿರ್ಧಾರ ತೆಗೆದುಕೊಂಡಿದೆ. ಇಷ್ಟೊಂದು ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ 14,775 ಕೋಟಿ ರೂ. ಹಣವನ್ನು ವಿನಿಯೋಗಿಸಲಿದೆ. ಸಬ್ಸಿಡಿ ಮೊತ್ತ ಒಂದೇ ಬಾರಿಗೆ ಈ ಪ್ರಮಾಣದಲ್ಲಿ ಯಾವತ್ತೂ ಏರಿಕೆಯಾಗಿಲ್ಲ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಸದ್ಯ ಈಗ ಒಂದು ಚೀಲ ಡಿಎಪಿ ರಸಗೊಬ್ಬರಕ್ಕೆ 2,400 ರೂ. ದರವಿದೆ. ಈ ಮೊದಲು 500 ರೂ. ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ ಈಗ ಈ ಸಬ್ಸಿಡಿ ದರವನ್ನು 1,200 ರೂ.ಗೆ ಏರಿಸಲಾಗಿದ್ದು, ರೈತರು 1 ಚೀಲ ಡಿಎಪಿ ಗೊಬ್ಬರವನ್ನು 1,200 ರೂ. ದರದಲ್ಲಿ ಖರೀದಿಸಬಹುದಾಗಿದೆ.

    ಅಂತರಾಷ್ಟ್ರೀಯ ಮಟ್ಟದಲ್ಲಿ ದರ ಏರಿಕೆ ಆಗಿದ್ದರೂ ರೈತರಿಗೆ ಹಳೆ ಬೆಲೆಯಲ್ಲಿ ರಸಗೊಬ್ಬರ ಸಿಗಬೇಕು ಎಂದು ನರೇಂದ್ರ ಮೋದಿ ಸಭೆಯಲ್ಲಿ ಒತ್ತಿ ಹೇಳಿದ್ದರಿಂದ ಈ ನಿರ್ಧಾರ ಪ್ರಕಟವಾಗಿದೆ.

    ಕಳೆದ ವರ್ಷ ಒಂದು ಚೀಲ ಡಿಎಪಿ ದರಕ್ಕೆ ಕಂಪನಿಗಳು 1,700 ರೂ. ದರವನ್ನು ನಿಗದಿಪಡಿಸಿತ್ತು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ 500 ರೂ. ಸಬ್ಸಿಡಿ ನೀಡಿತ್ತು. ಹೀಗಾಗಿ ಒಂದು ಚೀಲ ಗೊಬ್ಬರವನ್ನು ರೈತರು 1,200 ರೂ. ದರದಲ್ಲಿ ಖರೀದಿಸುತ್ತಿದ್ದರು.

     

    ಡಿಎಪಿಗೆ ಬಳಸಲಾಗುವ ಫಾಸ್ಪರಿಕ್ ಆಸಿಡ್, ಅಮೋನಿಯಾ ಇತ್ಯಾದಿಗಳ ಅಂತರರಾಷ್ಟ್ರೀಯ ಬೆಲೆಗಳು ಇತ್ತೀಚಿಗೆ ಶೇ.60 ರಿಂದ ಶೇ.70 ರಷ್ಟು ಏರಿಕೆ ಕಂಡಿದೆ. ಆದ್ದರಿಂದ ಒಂದು ಚೀಲ ಡಿಎಪಿಯ ನೈಜ ಬೆಲೆ ಈಗ 2,400 ರೂ.ಗೆ ಏರಿಕೆಯಾಗಿದೆ. 500 ರೂ.ಗಳ ಸಬ್ಸಿಡಿ ನೀಡಿದ್ದರೂ ಒಂದು ಪ್ಯಾಕ್ ಚೀಲದ ದರ 1,900 ರೂ. ಆಗುತ್ತಿತ್ತು. ಈಗ ಶೇ.140ರಷ್ಟು ಸಬ್ಸಿಡಿ ಏರಿಕೆ ಮಾಡಿದ್ದರಿಂದ ರೈತರು 1,200 ರೂ. ದರದಲ್ಲಿ ಗೊಬ್ಬರವನ್ನು ಖರೀದಿಸಬಹುದಾಗಿದೆ.

  • ಇಂದಿರಾ ಕ್ಯಾಂಟೀನ್ ಸಬ್ಸಿಡಿ ದುರುಪಯೋಗ – ತನಿಖೆಗೆ ಆದೇಶಿಸಿದ ಸಿಎಂ

    ಇಂದಿರಾ ಕ್ಯಾಂಟೀನ್ ಸಬ್ಸಿಡಿ ದುರುಪಯೋಗ – ತನಿಖೆಗೆ ಆದೇಶಿಸಿದ ಸಿಎಂ

    ಬೆಂಗಳೂರು: ಇಂದಿರಾ ಕ್ಯಾಂಟೀನ್‍ಗಳ ಸಬ್ಸಿಡಿ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ.

    ಇಂದಿರಾ ಕ್ಯಾಂಟೀನ್‍ಗಳ ಸಬ್ಸಿಡಿ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ‘ಪಬ್ಲಿಕ್ ಟಿವಿ’ ವಿಶೇಷ ವರದಿ ಮಾಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ತನಿಖೆ ನಡೆಸುವಂತೆ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ತನಿಖೆ ನಡೆಸಿ ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಕಾರ್ಯದರ್ಶಿಗೆ ಸಿಎಂ ಸೂಚಿಸಿದ್ದಾರೆ.

    ಗುತ್ತಿಗೆ ನೀಡಿರುವ ಸಂಸ್ಥೆಗಳ ಹಾಗೂ ಕ್ಯಾಂಟೀನ್ ನಿರ್ವಹಣೆ ಮಾಡುತ್ತಿರುವ ಸಂಸ್ಥೆಗಳ ವಿರುದ್ಧ ತನಿಖೆಗೆ ಆದೇಶಿಸಿದೆ. ಇದರ ಜೊತೆಯಲ್ಲೇ ಚೆಫ್ ಟಾಕ್ ಹಾಸ್ಪಿಟಾಲಿಟಿ ಸರ್ವೀಸ್ ಹಾಗೂ ರಿವಾಡ್ರ್ಸ್ ಸಂಸ್ಥೆಗಳ ವಿರುದ್ಧ ಸಿಎಂ ತನಿಖೆಗೆ ಆದೇಶ ನೀಡಿದ್ದಾರೆ.

    ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣ ಹಾಗೂ ಗ್ರಾಹಕರ ಸಂಖ್ಯೆಯಲ್ಲಿ ಅವ್ಯವಹಾರ ನಡೆದಿರುವ ಕುರಿತು ‘ಪಬ್ಲಿಕ್ ಟಿವಿ’ ವಿಸ್ತøತ ವರದಿ ಮಾಡಿತ್ತು. 174 ಇಂದಿರಾ ಕ್ಯಾಂಟೀನ್, 15 ಮೊಬೈಲ್ ಕ್ಯಾಂಟಿನ್‍ಗಳಲ್ಲಿ ಪ್ರತಿ ತಿಂಗಳು ಸುಮಾರು 62.70 ಲಕ್ಷ ಜನರು ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟ ಮಾಡುತ್ತಿದ್ದಾರೆ ಎಂಬ ಮಹಿತಿಯನ್ನು ನೀಡಿ ಅಪಾರ ಮೊತ್ತದ ಸಬ್ಸಿಡಿಯನ್ನು ಪಡೆಯುತ್ತಿರುವ ಮಾಹಿತಿ ಲಭ್ಯವಾಗಿದೆ.

    174 ಇಂದಿರಾ ಕ್ಯಾಂಟೀನ್, 15 ಮೊಬೈಲ್ ಕ್ಯಾಂಟೀನ್‍ಗಳಲ್ಲಿ ಪ್ರತಿ ತಿಂಗಳು 6.82 ಕೋಟಿ ರೂ. ಸಬ್ಸಿಡಿ ಹಣ ಪಡೆಯುತ್ತಿವೆ. ವಾಸ್ತವವಾಗಿ ಈ ಅಂಕಿಅಂಶಗಳು ತಪ್ಪು ಮಾಹಿತಿಯಿಂದ ಕೂಡಿದ್ದು, ಅಪಾರ ಪ್ರಮಾಣದ ಸಬ್ಸಿಡಿಯನ್ನು ವಂಚಿಸಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿದೆ. ಈ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ. ಹೀಗಾಗಿ ಈ ಬಗ್ಗೆ ಕೂಡಲೇ ಪರಿಶೀಲಿಸಿ ತನಿಖಾ ವರದಿ ಸಲ್ಲಿಸುವಂತೆ ಸಿಎಂ ಯಡಿಯೂರಪ್ಪ ಆದೇಶಿಸಿದ್ದಾರೆ.

    ಮೊದಲಿನಿಂದಲೂ ಇಂದಿರಾ ಕ್ಯಾಂಟೀನ್ ಕುರಿತು ಯಡಿಯೂರಪ್ಪನವರಿಗೆ ಅಸಮಾಧಾನವಿತ್ತು. ಅಲ್ಲದೆ, ಅಧಿಕಾರಕ್ಕೆ ಬಂದ ನಂತರವೂ ಸಹ ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಬೇಕು ಎಂಬ ಚಿಂತನೆ ನಡೆಸಿದ್ದರು. ಇದೀಗ ಅಕ್ರಮದ ಕುರಿತು ತನಿಖೆಗೆ ಆದೇಶಿಸಿದ್ದು, ಈ ಮೂಲಕ ಇಂದಿರಾ ಕ್ಯಾಂಟೀನ್ ಮುಚ್ಚುವ ಚಿಂತನೆ ನಡೆಸಿದ್ದಾರಾ ಎಂಬ ಅನುಮಾನ ಎದ್ದಿದೆ.

  • ಗುಡ್ ನ್ಯೂಸ್… ಎಲ್‍ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ

    ಗುಡ್ ನ್ಯೂಸ್… ಎಲ್‍ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ

    ನವದೆಹಲಿ: ಗೃಹ ಬಳಕೆ ಅಡುಗೆ ಅನಿಲ (ಎಲ್‍ಪಿಜಿ) ದರದಲ್ಲಿ ಮತ್ತೆ ಇಳಿಕೆಯಾಗಿದ್ದು, ಸಬ್ಸಿಡಿ ಸಹಿತ ಸಿಲಿಂಡರ್‌ಗೆ 1.46 ರೂ. ಹಾಗೂ ಸಬ್ಸಿಡಿ ರಹಿತ ಸಿಲಿಂಡರ್ ದರದಲ್ಲಿ 30 ರೂ. ಕಡಿತವಾಗಿದೆ.

    ಗುರುವಾರ ರಾತ್ರಿಯಿಂದ ಈ ಹೊಸ ದರ ಅನ್ವಯವಾಗಲಿದೆ. ಇದರಿಂದಾಗಿ ದೆಹಲಿಯಲ್ಲಿ ಪ್ರತಿ 14.2 ಕೆಜಿ ಸಿಲಿಂಡರ್ ದರ ಗುರುವಾರ 494.99 ರೂ. ಇದ್ದರೆ ಮಧ್ಯರಾತ್ರಿಯಿಂದ 493.53 ರೂ. ಆಗಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.

    ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲಿ 30 ರೂ. ಇಳಿಕೆಯಾಗಿದ್ದು, ದೆಹಲಿಯಲ್ಲಿ 689 ರೂ. ಸಿಗುತ್ತಿದ್ದ 14.2 ಕೆಜಿ ಸಿಲಿಂಡರ್ ಈಗ 659 ರೂ.ಗೆ ಸಿಗಲಿದೆ.

    2018ರ ಜೂನ್‍ನಿಂದ ನವೆಂಬರ್ ತಿಂಗಳ ಅವಧಿಯಲ್ಲಿ ಸತತ 6 ಬಾರಿ ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆ 14.13 ರೂ. ಹೆಚ್ಚಳವಾಗಿತ್ತು. ಆದರೆ ಕಳೆದ ಎರಡು ತಿಂಗಳಲ್ಲಿ ಗೃಹ ಬಳಕೆ ಅಡುಗೆ ಅನಿಲ (ಎಲ್‍ಪಿಜಿ) ದರವು ಮೂರು ಬಾರಿ ಇಳಿಕೆ ಕಂಡಿದ್ದು, ಗ್ರಾಹಕರ ಸಂತಸಕ್ಕೆ ಕಾರಣವಾಗಿದೆ.

    2018ರ ಡಿಸೆಂಬರ್ ತಿಂಗಳಲ್ಲಿ ಸಬ್ಸಿಡಿ ಸಹಿತ ಅಡುಗೆ ಅನಿಲ ದರವನ್ನು 2ನೇ ಬಾರಿ ಇಳಿಕೆ ಮಾಡಲಾಗಿತ್ತು. ಡಿಸೆಂಬರ್ 1ರಂದು 6.52 ರೂ. ಕಡಿತಗೊಳಿಸಿತ್ತು. ಜನವರಿ 1ರಂದು 5.91 ರೂ. ಇಳಿಕೆ ಮಾಡಿತ್ತು. ಹೀಗಾಗಿ ಒಂದೇ ತಿಂಗಳಿನಲ್ಲಿ 12.43 ರೂ. ಕಡಿಮೆ ಆಗಿತ್ತು. 2018ರ ಡಿಸೆಂಬರ್ 1ರಂದು ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 133 ರೂ ಇಳಿಕೆಯಾಗಿದ್ದರೆ ಜನವರಿ 1ರಂದು 120.50 ರೂ. ಇಳಿಕೆಯಾಗಿತ್ತು.

    ಜನವರಿ ತಿಂಗಳಿನಲ್ಲಿ ಸಬ್ಸಿಡಿ ಸಹಿತ ಸಿಲಿಂಡರ್ ಪಡೆಯುವ ಗ್ರಾಹಕರ ಖಾತೆಗೆ 194.01 ರೂ. ಜಮೆಯಾಗಿದ್ದರೆ, ಫೆಬ್ರವರಿಯಲ್ಲಿ 165.47 ರೂ. ಜಮೆಯಾಗಲಿದೆ. ಸರ್ಕಾರ ಈಗ ಒಂದು ಕುಟುಂಬಕ್ಕೆ 14.2 ಕೆಜಿ ತೂಕದ ಗರಿಷ್ಟ 12 ಎಲ್‍ಪಿಜಿ ಸಿಲಿಂಡರ್ ಗಳನ್ನು ಸಬ್ಸಿಡಿ ರೂಪದಲ್ಲಿ ನೀಡುತ್ತಿದೆ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‍ಪಿಜಿ ದರ ಮತ್ತು ವಿದೇಶಿ ವಿನಿಮಯ ದರವನ್ನು ನೋಡಿಕೊಂಡು ಪ್ರತಿ ತಿಂಗಳು ಭಾರತದಲ್ಲಿ ಎಲ್‍ಪಿಜಿ ಸಿಲಿಂಡರ್ ಗಳ ದರ ಪರಿಷ್ಕರಣೆಯಾಗುತ್ತದೆ. ಬೆಲೆ ಏರಿಕೆಯಾದಾಗ ಸರ್ಕಾರ ಸಬ್ಸಿಡಿಯನ್ನು ಏರಿಕೆ ಮಾಡುತ್ತದೆ. ದರ ಇಳಿಕೆಯಾದಾಗ ಸಬ್ಸಿಡಿ ದರವನ್ನು ಇಳಿಕೆ ಮಾಡುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಇಂದಿನಿಂದ ಎಲ್‍ಪಿಜಿ ಸಿಲಿಂಡರ್ ದರ ಹೆಚ್ಚಳ

    ಇಂದಿನಿಂದ ಎಲ್‍ಪಿಜಿ ಸಿಲಿಂಡರ್ ದರ ಹೆಚ್ಚಳ

    ನವದೆಹಲಿ: ಪೆಟ್ರೋಲ್, ಡೀಸೆಲ್ ದರ ಏರಿಕೆಯಾದ ಬೆನ್ನಲ್ಲೇ ಇಂದಿನಿಂದ ಎಲ್‍ಪಿಜಿ ಸಿಲಿಂಡರ್ ದರ ಕೂಡ ಏರಿಕೆಯಾಗಿದೆ.

    ಸಬ್ಸಿಡಿ ಸಿಲಿಂಡರ್ ಮೇಲೆ 2.34 ರೂ. ಹಾಗೂ ಸಬ್ಸಿಡಿ ರಹಿತ ಸಿಲಿಂಡರ್ ಮೇಲೆ 48 ರೂ. ನಷ್ಟು ಏರಿಕೆಯಾಗಿದೆ. ಬೆಲೆ ಏರಿಕೆಯಿಂದ ದೆಹಲಿಯಲ್ಲಿ 14.2 ಕೆಜಿ ತೂಕದ ಸಬ್ಸಿಡಿ ಸಿಲಿಂಡರ್ ಬೆಲೆ 493.55 ರೂ. ಮತ್ತು ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 698.50 ರೂ ಆಗಿದೆ.

    ಕೋಲ್ಕತ್ತಾ ದಲ್ಲಿ ಸಬ್ಸಿಡಿ ಸಿಲಿಂಡರ್ ಬೆಲೆ 496.65 ರೂ. ಮತ್ತು ಸಬ್ಸಿಡಿ ರಹಿತ ಬೆಲೆ 723.50 ರೂ ಆಗಿದ್ದು, ಮುಂಬೈ ನಲ್ಲಿ ಸಬ್ಸಿಡಿ ಸಿಲಿಂಡರ್ ಬೆಲೆ 491.31 ರೂ. ಮತ್ತು ಸಬ್ಸಿಡಿ ರಹಿತ ಬೆಲೆ 671.50 ರೂ ಆಗಿದೆ. ಚೆನ್ನೈ ನಲ್ಲಿ ಸಬ್ಸಿಡಿ ಸಿಲಿಂಡರ್ ಬೆಲೆ 481.84 ರೂ. ಮತ್ತು ಸಬ್ಸಿಡಿ ರಹಿತ ಬೆಲೆ 712.50 ರೂ ಆಗಿದೆ.

    ವರ್ಷಕ್ಕೆ 12 ಸಿಲಿಂಡರ್ ಗಳನ್ನು ಸಬ್ಸಿಡಿ ರೂಪದಲ್ಲಿ ಪಡೆಯಬಹುದು. 12 ಕ್ಕಿಂತ ಹೆಚ್ಚು ಸಿಲಿಂಡರ್ ಪಡೆದಲ್ಲಿ ಅದಕ್ಕೆ ಸಬ್ಸಿಡಿ ರಹಿತ ಬೆಲೆ ಪಾವತಿಸಬೇಕಾಗುತ್ತದೆ.

    ಕಳೆದ ತಿಂಗಳಿನಲ್ಲಿ ಸತತ ಏರಿಕೆ ಕಂಡಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಎರಡು ದಿನಗಳಿಂದ ಸ್ವಲ್ಪ ಇಳಿಮುಖವಾಗಿತ್ತು. ಒಂದು ಲೀಟರ್ ಪೆಟ್ರೋಲ್ ಮೇಲೆ 5 ಪೈಸೆ, ಡೀಸೆಲ್ ಮೇಲೆ 6 ಪೈಸೆ ಕಡಿಮೆಯಾಗಿದೆ. ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 78.29 ರೂ ಆಗಿದ್ದು ಡೀಸೆಲ್ ಬೆಲೆ 69.20 ರೂ ಆಗಿದೆ.