Tag: ಸಫಾರಿ

  • ಮರಿಗಳೊಂದಿಗೆ ಪ್ರವಾಸಿಗರನ್ನು ಅಡ್ಡಹಾಕಿದ ಆನೆಗಳು – ಕೆ.ಗುಡಿ ಸಫಾರಿ ವೇಳೆ ಗಜ ಪಡೆ ಎಂಟ್ರಿ

    ಮರಿಗಳೊಂದಿಗೆ ಪ್ರವಾಸಿಗರನ್ನು ಅಡ್ಡಹಾಕಿದ ಆನೆಗಳು – ಕೆ.ಗುಡಿ ಸಫಾರಿ ವೇಳೆ ಗಜ ಪಡೆ ಎಂಟ್ರಿ

    ಚಾಮರಾಜನಗರ: ಏಕಾಏಕಿ ಕಾಡು ಹಾದಿಯಲ್ಲಿ ಮರಿ ಆನೆಗಳೊಂದಿಗೆ ಪ್ರತ್ಯಕ್ಷವಾದ ಆನೆಗಳ ಗುಂಪೊಂದು ಒಂದು ಗಂಟೆ ಸಫಾರಿ ಜೀಪನ್ನು ಅಡ್ಡಹಾಕಿದ್ದ ಘಟನೆ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ಸಫಾರಿ ವಲಯದಲ್ಲಿ ನಡೆದಿದೆ.

    ಸಫಾರಿಯಲ್ಲಿ “ಸುತ್ತುರೋಡ್” ಎಂಬ ಸಫಾರಿ ವಲಯದಲ್ಲಿ ಪ್ರವಾಸಿಗರಿದ್ದ ಜೀಪನ್ನು ಎರಡು ಮರಿಗಳೊಂದಿಗೆ ಮೂರು ಆನೆಗಳು ದಾರಿ ಕೊಡದೇ ಅಡ್ಡಹಾಕಿದೆ. ಸಫಾರಿ ಜೀಪ್ ಕೂಡ ಆನೆ ಪಕ್ಕ ಸುಮ್ಮನೆ ನಿಂತಿದೆ. ಆದರೆ ಆನೆಗಳ ಗುಂಪು ಮಾತ್ರ ಪಕ್ಕಕ್ಕೆ ತೆರಳದೇ ಒಂದು ಗಂಟೆ ರಸ್ತೆ ಮಧ್ಯದಲ್ಲೇ ನಿಂತು ಪ್ರವಾಸಿಗರಿಗೆ ದರ್ಶನ ಕೊಟ್ಟಿದೆ. ಇದನ್ನೂ ಓದಿ: ದೇವಸ್ಥಾನ ಕಳ್ಳತನಕ್ಕೆ 7 ಬೀದಿನಾಯಿಗಳನ್ನು ಕೊಂದ ಕಳ್ಳರು

    ಜನರನ್ನು ಕಂಡರೇ ಆನೆ ದಾಳಿ ಮಾಡಲು ಮಂದಾಗುವುದು, ಜೀಪನ್ನು ಅಟ್ಟಾಡಿಸುವುದು ಸಾಮಾನ್ಯ. ಆದರೆ ಇಲ್ಲಿ ಆರೀತಿ ಆಗಿಲ್ಲ. ಆನೆಗಳ ಗುಂಪು ಕಂಡು ಪ್ರವಾಸಿಗರಲ್ಲಿ ಆತಂಕದ ಸ್ಥಿತಿ ನಿರ್ಮಾಣಗೊಂಡಿದ್ದರೂ ಗಜ ಪರಿವಾರದ ಸೌಮ್ಯ ವರ್ತನೆಯಿಂದಾಗಿ ಮುದಗೊಂಡು ವೀಡಿಯೋ, ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ.  ಗದರಿಸಿದ ಮಾತ್ರಕ್ಕೆ ತಂದೆಯನ್ನು ಮಗ ಕೊಲೆ ಮಾಡುವಂತಿಲ್ಲ: ಹೈಕೋರ್ಟ್

  • ಸಫಾರಿಗರಿಗೆ ಒಟ್ಟಿಗೆ ದರ್ಶನ ನೀಡಿದ 3 ಚಿರತೆಗಳು: ಅಪರೂಪದ ದೃಶ್ಯ ಸೆರೆ!

    ಸಫಾರಿಗರಿಗೆ ಒಟ್ಟಿಗೆ ದರ್ಶನ ನೀಡಿದ 3 ಚಿರತೆಗಳು: ಅಪರೂಪದ ದೃಶ್ಯ ಸೆರೆ!

    ಚಾಮರಾಜನಗರ: ಚಿರತೆ ಎಂದಾಕ್ಷಣ ರಸ್ತೆ ದಾಟುವುದು, ಮರದ ಮೇಲೆ ಬೇಟೆಯಾಡಿದ ಆಹಾರವನ್ನು ತಿನ್ನುವ ದೃಶ್ಯ ಸಾಮಾನ್ಯ. ಆದರೆ ಒಟ್ಟಿಗೆ ಮೂರು ಚಿರತೆಗಳು ಕಾಣಿಸಿಕೊಂಡಿರುವ ರೋಮಾಂಚಕ ಘಟನೆಯೊಂದು ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಫಾರಿ ವೇಳೆ ಈ ಘಟನೆ ನಡೆದಿದೆ. ವನ್ಯಜೀವಿ ಛಾಯಾಗ್ರಾಹಕ ಅಬ್ದುಲ್ ಶೇಜ್ ಎಂಬವರ ಕ್ಯಾಮರಾ ಕಣ್ಣಿಗೆ ಅಪರೂಪದ ದೃಶ್ಯ ಸೆರೆಯಾಗಿದೆ. 14 ಸೆಕೆಂಡ್‌ಗಳ ಈ ವೀಡಿಯೋ ಇದಾಗಿದ್ದು, ಸಫಾರಿಗರನ್ನೇ ಚಿರತೆಗಳು ದಿಟ್ಟಿಸಿ ನೋಡುತ್ತಿರುವ ದೃಶ್ಯ ಸೆರೆಯಾಗಿದೆ.

    ವೀಡಿಯೋದಲ್ಲಿ ಏನಿದೆ?: ಮರವೊಂದರ ರೆಂಬೆಯ ಮೇಲೆ 3 ಚಿರತೆಗಳು ಒಟ್ಟಿಗೆ ಕುಳಿತುಕೊಂಡಿದೆ. ಸಫಾರಿಗರನ್ನೇ ಈ 3 ಚಿರತೆಗಳು ಕೆಲವು ಸೆಕೆಂಡ್‌ಗಳ ಕಾಲ ದಿಟ್ಟಿಸಿ ನೋಡುತ್ತಿದೆ. ನಂತರದಲ್ಲಿ ಒಂದು ಚಿರತೆ ರೆಂಬೆಯಿಂದ ಕೆಳಗೆ ಇಳಿಯುತ್ತದೆ. ಮತ್ತೆರಡು ಚಿರತೆಗಳು ಆ ಚಿರತೆಯನ್ನು ನೋಡುವ ದೃಶ್ಯ ಸೆರೆಯಾಗಿದೆ. ಇದನ್ನೂ ಓದಿ: ಮಾಧುಸ್ವಾಮಿ ವಿರುದ್ಧ ಮಾತಾಡಿಲ್ಲ, ಅಧಿಕಾರಿಗಳಿಗೆ ಛೀಮಾರಿ ಹಾಕಿ ಅಂದೆ ಅಷ್ಟೇ: ಬಸವರಾಜ್

    ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸಫಾರಿಗರಿಗೆ ವನ್ಯಪ್ರಾಣಿಗಳು ಸಖತ್ ದರ್ಶನ ಕೊಡುತ್ತಿದೆ. ಹುಲಿ, ಆನೆ ಹಿಂಡುಗಳು ಕೂಡ ಪ್ರವಾಸಿಗರ ಕಣ್ಣಿಗೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿವೆ. ಇದನ್ನೂ ಓದಿ: ಜಾರ್ಖಂಡ್‍ ಭೀಕರ ರಸ್ತೆ ಅಪಘಾತ- ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಣೆ

  • ವಿದ್ಯಾರ್ಥಿಗಳ ಸಫಾರಿ ವಾಹನದ ಮೇಲೆ ಆನೆ ದಾಳಿ- ವೈರಲ್ ವೀಡಿಯೋ

    ವಿದ್ಯಾರ್ಥಿಗಳ ಸಫಾರಿ ವಾಹನದ ಮೇಲೆ ಆನೆ ದಾಳಿ- ವೈರಲ್ ವೀಡಿಯೋ

    ಪ್ರಿಟೋರಿಯಾ: ವಿದ್ಯಾರ್ಥಿಗಳ ಸಫಾರಿ ವಾಹನದ ಮೇಲೆ ಆನೆ ದಾಳಿಮಾಡಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ವೈರಲ್ ವೀಡಿಯೋದಲ್ಲಿ ಏನಿದೆ?: ಸಫಾರಿಗೆ ತೆರಳಿದ ವಿದ್ಯಾರ್ಥಿಗಳ ಮೇಲೆ ಆನೆ ದಾಳಿ ಮಾಡಿದ್ದು, ಭಯಭೀತರಾದ ವಿದ್ಯಾರ್ಥಿಗಳು ಪ್ರಾಣ ರಕ್ಷಣೆಗಾಗಿ ಸಫಾರಿ ವಾಹನದಿಂದ ಇಳಿದು ಓಡುತ್ತಿರುವ ದೃಶ್ಯವನ್ನು ನಾವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ನೋಡಬಹುದಾಗಿದೆ.

    ದಕ್ಷಿಣ ಆಫ್ರಿಕಾದ ಲಿಂಪೊಪೊ ಪ್ರಾಂತ್ಯದ ಗ್ಲೋವೆಲೆಟ್ ಮತ್ತು ಫಲಬೋರ್ವಾ ಪಟ್ಟಣಗಳ ನಡುವೆ ಇರುವ ವನ್ಯಜೀವಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆನೆಗಳ ಸಂತಾನೋತ್ಪತ್ತಿ ಪ್ರಕ್ರಿಯೆ ಬಗ್ಗೆ ತಿಳಿಯಲು ಬಂದ ವಿದ್ಯಾರ್ಥಿಗಳ ಮೇಲೆ ಆನೆ ದಾಳಿ ನಡೆಸಿದೆ. ಇದನ್ನೂ ಓದಿ: OMICRON ಭೀತಿ- 30,000 ಬೆಡ್ ಸಜ್ಜು ಮಾಡಿದ ದೆಹಲಿ ಸರ್ಕಾರ

    ಪರಿಸರ ತರಬೇತಿ ಬೋಧಕರು ಮತ್ತು ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಸಫಾರಿ ವಾಹನದ ಮೇಲೆ ಆನೆಯೊಂದು ದಾಳಿ ಮಾಡಿದೆ. ಈ ವಿಡಿಯೋದಲ್ಲಿ ಕೆಲವು ವಿದ್ಯಾರ್ಥಿಗಳು ತಮ್ಮ ಜೀವ ಉಳಿಸಿಕೊಳ್ಳಲು ತಮ್ಮ ಬಳಿ ಇದ್ದ ವಸ್ತುಗಳನ್ನು ಬಿಟ್ಟು ಓಡಿರುವುದು ಸೆರೆಯಾಗಿದೆ. ಸಫಾರಿ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಆನೆಯ ದಾಳಿಯಿಂದ ಯಾರಿಗೂ ಗಾಯಗಳಾಗಿಲ್ಲ.

  • ಮರಿಗಳೊಂದಿಗೆ ತಾಯಿ ಹುಲಿ ಬಿಂದಾಸ್ ವಾಕಿಂಗ್

    ಮರಿಗಳೊಂದಿಗೆ ತಾಯಿ ಹುಲಿ ಬಿಂದಾಸ್ ವಾಕಿಂಗ್

    ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕೆ.ಗುಡಿ ಸಫಾರಿಯ ಆನೆಕೆರೆ ಎಂಬಲ್ಲಿ ಮೂರು ಹುಲಿಗಳು ಪ್ರವಾಸಿಗರಿಗೆ ದರ್ಶನ ಕೊಟ್ಟು ಮುದ ನೀಡಿವೆ.

    ಕೆ.ಗುಡಿಯ ಜಂಗಲ್ ಲಾಡ್ಜ್ ನಿಂದ ಬೆಳಗಿನ ಸಫಾರಿಗೆ ತೆರಳಿದ್ದ ಎರಡು ಜೀಪುಗಳಿಗೆ ಮೂರು ಹುಲಿ ಒಟ್ಟಾಗಿ ಹೆಜ್ಜೆ ಹಾಕಿ ಪ್ರವಾಸಿಗರನ್ನು ರೋಮಾಂಚನಗೊಳಿಸಿವೆ. ಈ ಅಪರೂಪದ ವಿಡಿಯೋವನ್ನು ಪ್ರವಾಸಿಗರು ಸೆರೆ ಹಿಡಿದಿದ್ದಾರೆ. ಬಂಡೀಪುರ, ನಾಗರಹೊಳೆಗೆ ಹೋಲಿಸಿದರೇ ಪ್ರವಾಸಿಗರಿಗೆ ಕೆ.ಗುಡಿಯಲ್ಲಿ ಹುಲಿ ಕಾಣಿಸಿಕೊಳ್ಳುವುದು ತುಂಬಾ ಅಪರೂಪ. ಆದರೆ ಮೂರು ಹುಲಿಗಳನ್ನು ಕಂಡ ಸಫಾರಿಗರು ಸಖತ್ ಖುಷ್ ಆಗಿದ್ದಾರೆ.

    ಹುಲಿ ನೀರು ಕುಡಿಯುವುದು, ಚಿನ್ನಾಟ ಆಡುವುದು ಕೂಡ ಕ್ಯಾಮರಾದಲ್ಲಿ ಸೆರೆಯಾಗಿದೆ. ಅದರಂತೆ ಕೆಲ ದಿನಗಳ ಹಿಂದೆ ಬಂಡೀಪುರದಲ್ಲಿ ಸುಂದರಿ ಅಂಡ್ ಸನ್ಸ್ ಎಂಬ ಹುಲಿಯು ದರ್ಶನ ನೀಡಿತ್ತು. ಇದನ್ನೂ ಓದಿ: ಕಾಬೂಲ್ ತೊರೆಯುವ ಮುನ್ನ 73 ಏರ್​​ಕ್ರಾಫ್ಟ್ ನಿಷ್ಕ್ರಿಯಗೊಳಿಸಿದ ಅಮೆರಿಕ ಸೈನಿಕರು

  • ಕಾಫಿನಾಡ ಮುತ್ತೋಡಿ ಅರಣ್ಯದಲ್ಲಿ ಡಿ ಬಾಸ್ ಸಫಾರಿ

    ಕಾಫಿನಾಡ ಮುತ್ತೋಡಿ ಅರಣ್ಯದಲ್ಲಿ ಡಿ ಬಾಸ್ ಸಫಾರಿ

    ಚಿಕ್ಕಮಗಳೂರು: ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯೂ ಆಗಿರುವ ನಟ ದರ್ಶನ್ ಜಿಲ್ಲೆಯ ಮುತ್ತೋಡಿ ಅರಣ್ಯಕ್ಕೆ ಭೇಟಿ ನೀಡಿ, ಶುಕ್ರವಾರ ಅರಣ್ಯ ವಲಯದಲ್ಲೇ ತಂಗಿದ್ದು ಇಂದು ಮಧ್ಯಾಹ್ನ ಬೆಂಗಳೂರಿಗೆ ಹಿಂದಿರುಗಿದ್ದಾರೆ.

    ಸ್ನೇಹಿತರ ಜೊತೆ ಶುಕ್ರವಾರ ಸಂಜೆ ಬಂದ ದರ್ಶನ್ ಸಿಗೇಖಾನ್ ಅರಣ್ಯ ವಿಶ್ರಾಂತಿ ಧಾಮದಲ್ಲಿ ವಾಸ್ತವ್ಯ ಹೂಡಿ ಮುತ್ತೋಡಿ ಅರಣ್ಯದ ಸೌಂದರ್ಯವನ್ನು ಸವಿದರು. ಶುಕ್ರವಾರ ಸಂಜೆ ಬಂದು ಮುತ್ತೋಡಿಯಲ್ಲಿ ವಾಸ್ತವ್ಯ ಹೂಡಿದ ದರ್ಶನ್, ಇಂದು ಬೆಳಗ್ಗೆ ಮುತ್ತೋಡಿ ಅರಣ್ಯ ವಲಯದಲ್ಲಿ ಸಫಾರಿ ಮಾಡಿದ್ದಾರೆ.

    ಸುಮಾರು 25 ಸಾವಿರ ಹೆಕ್ಟರ್ ಗೂ ಅಧಿಕ ವಿಸ್ತಾರದ ಮುತ್ತೋಡಿ ಅರಣ್ಯದಲ್ಲಿ ನಿಸರ್ಗದತ್ತವಾದ ನೋಡುವ ತಾಣಗಳಿವೆ. ಇಂದು ಬೆಳಗ್ಗೆ ಸಫಾರಿ ಹೊರಟ ದರ್ಶನ್ ಕೆಸವೆ, ಗೇಮ್ ರೌಂಡ್, 300 ವರ್ಷಕ್ಕೂ ಅಧಿಕ ಆಯಸ್ಸಿನ ದೊಡ್ಡ ಸಾಗುವಾನಿ ಮರ, ಇಪ್ಳ ಸೇರಿದಂತೆ ಕೆಲ ಸುಂದರ ತಾಣಗಳಿಗೆ ಭೇಟಿ ನೀಡಿದ್ದರು. ಜೊತೆಗೆ ಪ್ರಾಣಿ, ಪಕ್ಷಿಗಳ ವೀಕ್ಷಣೆಗೆ ಸಫಾರಿ ಹೋಗಿ ಬಂದಿದ್ದಾರೆ.

    ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿ ಆಗಿರುವ ದರ್ಶನ್‍ಗೆ ಮುತ್ತೋಡಿ ಅರಣ್ಯದ ವಲಯ ಅರಣ್ಯಾಧಿಕಾರಿ ಲೋಕೇಶ್ ಹೂಗುಚ್ಛ ನೀಡಿ ಸ್ವಾಗತಿಸಿದರು. ಇದೇ ವೇಳೆ, ನೆಚ್ಚಿನ ನಟನನ್ನು ಕಂಡ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ದರ್ಶನ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.

  • ಬಂಡೀಪುರ ಸಫಾರಿ, ಕಾಟೇಜ್ ದರ ಏರಿಕೆ- ಪ್ರವಾಸಿಗರಿಗೆ ಬೆಲೆ ಏರಿಕೆ ಶಾಕ್

    ಬಂಡೀಪುರ ಸಫಾರಿ, ಕಾಟೇಜ್ ದರ ಏರಿಕೆ- ಪ್ರವಾಸಿಗರಿಗೆ ಬೆಲೆ ಏರಿಕೆ ಶಾಕ್

    ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಸಫಾರಿ, ಕಾಟೇಜ್ ದರ ಏರಿಸಲಾಗಿದೆ. ಸಫಾರಿ ದರ ಡಬಲ್ ಮಾಡಿದ್ದು ವನ್ಯಪ್ರಿಯರು, ಪ್ರವಾಸಿಗರಿಂದ ಇದಕ್ಕೆ ವಿರೋಧ ವ್ಯಕ್ತವಾಗಿದೆ.

    ಹುಲಿಗಳ ಸಂಖ್ಯೆಯಲ್ಲಿ ರಾಜ್ಯದಲ್ಲೆ ಎರಡನೇ ಸ್ಥಾನದಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯ. ಕಾಡು ಪ್ರಾಣಿಗಳ ವೀಕ್ಷಣೆಗೆ ಸಫಾರಿ ಮಾಡಲೆಂದೇ ದೇಶ-ವಿದೇಶಗಳಿಂದ ನಿತ್ಯ ನೂರಾರು ಮಂದಿ ಪ್ರವಾಸಿಗರು ಬರುತ್ತಾರೆ. ಕಳೆದ ನಾಲ್ಕು ವರ್ಷಗಳಿಂದ ಸಫಾರಿ, ಕೊಠಡಿ ಬಾಡಿಗೆ, ಪಾರ್ಕಿಂಗ್ ಶುಲ್ಕ ಹೀಗೆ ಯಾವುದೇ ರೀತಿಯ ದರಗಳಲ್ಲೂ ಬದಲಾವಣೆ ಮಾಡಿರಲಿಲ್ಲ. ಇದೀಗ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿಗಳು ದರ ಹೆಚ್ಚಳ ಮಾಡುವ ಬಗ್ಗೆ ಕಳೆದ ಜನವರಿ 29 ರಂದು ಬರೆದಿರುವ ಪತ್ರವನ್ನು ಉಲ್ಲೇಖಿಸಿ ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಅವರು ಸಫಾರಿ ಮತ್ತಿತರ ದರಗಳನ್ನು ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದಾರೆ.

    ಬಂಡೀಪುರದಲ್ಲಿ ಮಾರ್ಚ್ 31 ರ ತನಕ ಒಬ್ಬರಿಗೆ ಪ್ರವೇಶ ಶುಲ್ಕ 250 ರೂಪಾಯಿ ಮತ್ತು ಸಫಾರಿಗೆ 100 ರೂಪಾಯಿ ಇತ್ತು. ಆದರೆ ಏಪ್ರಿಲ್ 1 ರಿಂದ ಪ್ರವೇಶ ಶುಲ್ಕ 300 ರೂಪಾಯಿ ಹಾಗೂ ಸಫಾರಿಗೆ 300 ರೂಪಾಯಿ ದರ ನಿಗದಿಪಡಿಸಲಾಗಿದೆ. ಹಾಗಾಗಿ ಪ್ರವಾಸಿಗರು ಇನ್ನು ಮುಂದೆ 600 ರೂಪಾಯಿ ಕೊಟ್ಟು ಸಫಾರಿ ಹೋಗಬೇಕಾಗಿದೆ. ಹಾಗೆಯೇ ಮಕ್ಕಳು ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ ಹಾಗೂ ಸಫಾರಿ ಸೇರಿದಂತೆ 300 ರೂಪಾಯಿ, ವಿದೇಶಿ ಪ್ರವಾಸಿಗರಿಗೆ 1,000 ರೂಪಾಯಿ ದರ ನಿಗದಿಪಡಿಸಲಾಗಿದೆ.

    ಸಫಾರಿ ಜಿಪ್ಸಿ ಬಾಡಿಗೆ ಭಾರತೀಯರಿಗೆ 3,500 ರೂಪಾಯಿ, ವಿದೇಶಿಯರಿಗೆ 5,000 ರೂಪಾಯಿ, 9 ಸೀಟಿನ ಕ್ಯಾಂಪರ್ ಗೆ ಭಾರತೀಯರಿಗೆ 5,000 ರೂಪಾಯಿ, ವಿದೇಶಿಯರಿಗೆ 7,000 ರೂಪಾಯಿ ನಿಗದಿಪಡಿಸಲಾಗಿದೆ.

    ಬಂಡೀಪುರ ಕ್ಯಾಂಪಸ್ ನಲ್ಲಿರುವ ಕೊಠಡಿ ಬಾಡಿಗೆ ಒಂದು ದಿನಕ್ಕೆ 2,000 ರೂಪಾಯಿ, ವಿದೇಶಿಯರಿಗೆ 4,000 ರೂಪಾಯಿ, ಗಜೇಂದ್ರ ವಿಐಪಿ ಕೊಠಡಿ(1) ಬಾಡಿಗೆ 3,000 ರೂಪಾಯಿಯಿಂದ 6000 ರೂಪಾಯಿ ಗೆ ಏರಿಗೆ ಮಾಡಲಾಗಿದೆ. ಗಜೇಂದ್ರ ವಿಐಪಿ ಕೊಠಡಿ (2)ರ ಬಾಡಿಗೆಯನ್ನು 2,500 ಹಾಗೂ ವಿದೇಶಿಯರಿಗೆ 5,000 ರೂ. ನಿಗದಿ ಮಾಡಲಾಗಿದೆ.

    ಗಜೇಂದ್ರ ವಿಐಪಿ ಕೊಠಡಿ(3)ರ ಬಾಡಿಗೆಯನ್ನು 2,000 ರೂಪಾಯಿ ವಿದೇಶಿಯರಿಗೆ 4,000 ರೂಪಾಯಿ ನಿಗದಿ ಮಾಡಲಾಗಿದೆ. 10 ಬೆಡ್ ಗಳ ಡಾರ್ಮೆಟರಿ ಬಾಡಿಗೆಯನ್ನು 2,500 ವಿದೇಶಿಯರಿಗೆ 5000 ರೂಪಾಯಿ, 20 ಬೆಡ್ ಗಳ ಡಾರ್ಮೆಟರಿ ಬಾಡಿಗೆಯನ್ನು 5000 ರೂಪಾಯಿ, ವಿದೇಶಿಯರಿಗೆ 10,000 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದರ ಜೊತೆಗೆ ಕ್ಯಾಮೆರಾ ಹಾಗೂ ವಾಹನಗಳ ಪಾರ್ಕಿಂಗ್ ಶುಲ್ಕವನ್ನು ಸಹ ಹೆಚ್ಚಳ ಮಾಡಲಾಗಿದೆ.

    ಒಟ್ನಲ್ಲಿ ದರ ಏರಿಕೆ ಕ್ರಮ ಸರಿಯಾದುದಲ್ಲ, ಜನಸಾಮಾನ್ಯರಿಗೆ ಕೈಗೆಟುಕವ ದರದಲ್ಲಿ ಹೆಚ್ಚಳ ಮಾಡಲಾಗಿಲ್ಲ. ಇಷ್ಟೊಂದು ದರ ಭರಿಸಲಾಗದೆ ಬಡವರು, ಮಧ್ಯಮ ವರ್ಗದವರು, ಶಾಲಾ ಮಕ್ಕಳು ಸಫಾರಿಯಿಂದ ದೂರ ಉಳಿಯುವಂತಾಗುತ್ತದೆ. ಕಾಡಿನ ಸೊಬಗನ್ನು ಸವಿಯುವುದರಿಂದ ವಂಚಿತರಾಗಬೇಕಾಗುತ್ತದೆ. ಉಳ್ಳವರಿಗೆ ಬೇಕಾದರೆ ದರ ಏರಿಕೆ ಮಾಡಲಿ, ಆದರೆ ಸ್ಥಳೀಯರಿಗೆ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶುಲ್ಕ ಕಡಿಮೆ ಮಾಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

  • ಸಫಾರಿಗೆ ಹೋದ ಪ್ರವಾಸಿಗರಿಗೆ 2 ಆನೆಗಳಿಂದ ದಾಳಿ

    ಸಫಾರಿಗೆ ಹೋದ ಪ್ರವಾಸಿಗರಿಗೆ 2 ಆನೆಗಳಿಂದ ದಾಳಿ

    – ಮೈಜುಂ ಎನಿಸುವ ವೀಡಿಯೋ

    ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ವೇಳೆ ಪ್ರವಾಸಿಗರ ಮೇಲೆ ಎರಡು ಆನೆ ದಾಳಿ ಮಾಡಿದ ಘಟನೆ ನಡೆದಿದೆ.

    ಸಫಾರಿ ವಾಹನದ ಹಿಂದೆ ಒಂದು, ಮುಂದೆ ಒಂದು ಕಾಡಾನೆ ದಾಳಿ ಮಾಡಿದೆ. ಸಫಾರಿ ವಾಹನ ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಈ ಆನೆ ದಾಳಿ ಮಾಡಿದ ವೀಡಿಯೋ ಎಂಥವರನ್ನು ಒಮ್ಮೆ ಮೈಜುಂ ಎನಿಸುತ್ತದೆ.

    ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತಾರಣ್ಯದ ಕೆ.ಗುಡಿ ಸಫಾರಿ ಜೋನ್‍ನ ಭತ್ತದ ಗದ್ದೆ ಎಂಬಲ್ಲಿ ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಎರಡು ಕಾಡಾನೆ ದಾಳಿ ಮಾಡಿವೆ. ಸಫಾರಿ ವಾಹನ ಚಾಲಕ ನಾಗರಾಜು ಆನೆ ದಾಳಿಗೆ ಅಂಜದೆ ನಿಧಾನವಾಗಿ ವಾಹನ ಚಲಾಯಿಸಿಕೊಂಡು ಬಂದು ಕಾಡಾನೆಗಳಿಂದ ತಪ್ಪಿಸಿಕೊಂಡಿದ್ದಾರೆ.

    ಸಫಾರಿ ವಾಹನದ ಹಿಂದೆ,ಮುಂದೆ ಆನೆ ಅಟ್ಯಾಕ್ ಮಾಡಿದ್ದು, ಹೆದರದೆ ಮುಂದೆ ಬರುತ್ತಿದ್ದ ಆನೆಯನ್ನು ಹಿಮ್ಮೆಟ್ಟಿಸಿ ವಾಹನ ಚಲಾಯಿಸಿದ ನಾಗರಾಜು ಕರ್ತವ್ಯ ನಿರ್ವಹಣೆಗೆ ಪ್ರವಾಸಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮನ್ನ ನಂಬಿ ಸಫಾರಿಗೆ ಪ್ರವಾಸಿಗರು ಬರುತ್ತಾರೆ. ನಮ್ಮ ಪ್ರಾಣ ಹೋದರೂ ಕೂಡ ಪ್ರವಾಸಿಗರ ರಕ್ಷಣೆ ನಮ್ಮ ಹೊಣೆ ಎಂದು ಚಾಲಕ ನಾಗರಾಜು ಹೇಳಿದ್ದಾರೆ.

  • ಡಿ ಬಾಸ್ ಕ್ಯಾಮೆರಾ ಕಣ್ಣಲ್ಲಿ ಕರಿ ಚಿರತೆ ಸೆರೆ

    ಡಿ ಬಾಸ್ ಕ್ಯಾಮೆರಾ ಕಣ್ಣಲ್ಲಿ ಕರಿ ಚಿರತೆ ಸೆರೆ

    ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಗರಹೊಳೆಯಲ್ಲಿ ಮೂರು ದಿನ ಸಫಾರಿ ನಡೆಸಿದ್ದು, ವೈಲ್ಡ್ ಲೈಫ್ ಫೋಟೋಗ್ರಫಿ ನಡೆಸಿದ್ದಾರೆ. ಈ ವೇಳೆ ಕರಿ ಚಿರತೆ ಸೇರಿದಂತೆ ಅಪರೂಪದ ಚಿತ್ರಗಳನ್ನು ಸೆರೆ ಹಿಡಿದ್ದಾರೆ.

    ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ನಾಗರಹೊಳೆಯ ಕಬಿನಿ ವ್ಯಾಪ್ತಿಯಲ್ಲಿ ಡಿ ಬಾಸ್ ಸಫಾರಿ ನಡೆಸಿದ್ದು, ಈ ವೇಳೆ ಕರಿ ಚಿರತೆಯನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾರೆ. ಕಳೆದ ಮೂರು ವರ್ಷಗಳಿಂದ ಕರಿ ಚಿರತೆ ದಾಸನ ಕ್ಯಾಮೆರಾ ಕಣ್ಣಿಗೆ ಬಿದ್ದಿರಲಿಲ್ಲ. ಇದೀಗ ಸೆರೆ ಹಿಡಿದಿದ್ದು, ಇದರಿಂದಾಗಿ ಡಿ ಬಾಸ್ ಫುಲ್ ಖುಷಿಯಾಗಿದ್ದಾರೆ. ಅಲ್ಲದೆ ಮೂರು ದಿನಗಳ ಕಾಲ ದರ್ಶನ್ ತಮ್ಮ ಸ್ನೇಹಿತರ ಜೊತೆ ನಾಗರಹೊಳೆಯಲ್ಲಿ ಭರ್ಜರಿ ಸಫಾರಿ ನಡೆಸಿದ್ದಾರೆ.

    ಸಫಾರಿ ವೇಳೆ ಮೂರು ಹುಲಿ, ಕರಿ ಚಿರತೆ, ಕಾಡು ನಾಯಿ, ಆನೆಗಳು ಕ್ಯಾಮರಾಕ್ಕೆ ಸೆರೆ ಸಿಕ್ಕಿವೆ. ಅದ್ಭುತ ಚಿತ್ರಗಳನ್ನು ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ದರ್ಶನ್ ಸೆರೆ ಹಿಡಿದಿದ್ದಾರೆ. ಅದರಲ್ಲೂ ಕರಿ ಚಿರತೆ ಸಿಕ್ಕಿದ್ದಕ್ಕೆ ಫುಲ್ ಖುಷಿಯಾಗಿದ್ದಾರೆ. ಡಿ ಬಾಸ್ ತಮ್ಮ ಸ್ನೇಹಿತರ ಜೊತೆ ನಾಗರಹೊಳೆಯಲ್ಲಿ ಆಗಾಗ ಸಫಾರಿ ಮಾಡುತ್ತಲೇ ಇರುತ್ತಾರೆ. ಮೊನ್ನೆಯಷ್ಟೇ ಹುಲಿಯ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು.

    ಕಾಡಿನ ದಾರಿಯಲ್ಲಿ ಹುಲಿ ಭರ್ಜರಿಯಾಗಿ ಘರ್ಜಿಸುತ್ತಿದ್ದ ವೇಳೆ ದರ್ಶನ್ ಚಿತ್ರಗಳನ್ನು ಸೆರೆ ಹಿಡಿದಿದ್ದರು. ವೈನ್ಯ ಜೀವಿಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ದರ್ಶನ್, ತುಂಬಾ ಪ್ರೀತಿಸುತ್ತಾರೆ. ಹೀಗಾಗಿ ಆಗಾಗ ಸಫಾರಿ ಹೋಗುತ್ತಲೇ ಇರುತ್ತಾರೆ. ಅಲ್ಲದೆ ವೈಲ್ಡ್ ಲೈಫ್ ಫೋಟೋಗ್ರಫಿ ಸಹ ಅವರಿಗೆ ಎಲ್ಲಿಲ್ಲದ ಪ್ರೀತಿ ಎಂಬುದು ತಿಳಿದಿರುವ ವಿಚಾರವಾಗಿದೆ.

    ಶೂಟಿಂಗ್‍ನಿಂದ ಬಿಡುವು ಸಿಕ್ಕಾಗಲೆಲ್ಲ ದರ್ಶನ್ ಮೈಸೂರಿನ ತಮ್ಮ ಫಾರ್ಮ್ ಹೌಸ್‍ನಲ್ಲೇ ಕಾಲ ಕಳೆಯುತ್ತಾರೆ. ಸಾಕು ಪ್ರಾಣಿಗಳು ಹಾಗೂ ಹಸುಗಳ ಜೊತೆಯೇ ಇರುತ್ತಾರೆ. ಅಲ್ಲದೆ ಸಮಯ ಸಿಕ್ಕಾಗಲೆಲ್ಲ ಅರಣ್ಯಕ್ಕೆ ತೆರಳಿ ವೈಲ್ಡ್ ಲೈಫ್ ಫೋಟೋಗ್ರಫಿ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೇ ತಮ್ಮ ಸ್ನೇಹಿತರ ಬಳಗದೊಂದಿಗೆ ಬೈಕ್‍ನಲ್ಲಿ ಲಾಂಗ್ ರೈಡ್ ಹೋಗಿದ್ದರು. ಇದೀಗ ನಾಗರಹೊಳೆಗೆ ತೆರಳಿದ್ದಾರೆ.

    ಕೆಲವು ದಿನಗಳ ಹಿಂದೆ ಕಿನ್ಯಾಡಿ ಕಾಡಿಗೆ ಹೋಗಿದ್ದ ದರ್ಶನ್, ಪ್ರಾಣಿ, ಪಕ್ಷಿಗಳ ಫೋಟೋವನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದಿದ್ದರು. ಇದೀಗ ನಾಗರಹೊಳೆ ಅಭಯಾರಣ್ಯದಲ್ಲಿ ಬೀಡು ಬಿಟ್ಟು ವಿವಿಧ ರೀತಿಯ ಕಾಡು ಪ್ರಾಣಿಗಳ ಚಿತ್ರಗಳನ್ನು ಕ್ಲಿಕ್ಕಿಸಿದ್ದಾರೆ. ಕ್ಯಾಮೆರಾ ಹೆಗಲಿಗೆ ಹಾಕಿಕೊಂಡು ಫೋಟೋ ತೆಗೆಯುತ್ತಾ ಸಫಾರಿಯನ್ನು ಎಂಜಾಯ್ ಮಾಡಿದ್ದಾರೆ. ದರ್ಶನ್ ಸಧ್ಯ ಬಹುನಿರೀಕ್ಷಿತ ರಾಬರ್ಟ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದು, ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ.

  • ಸಫಾರಿ ವಾಹನ ಎಳೆದಾಡಿದ  ಹುಲಿರಾಯ

    ಸಫಾರಿ ವಾಹನ ಎಳೆದಾಡಿದ ಹುಲಿರಾಯ

    ಬೆಂಗಳೂರು: ಸಫಾರಿಗೆ ಹೋಗಿದ್ದ ವಾಹನದ ಮೇಲೆ ಹುಲಿ ದಾಳಿ ನಡೆಸಿರುವ ಘಟನೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಡೆದಿದೆ.

    ಬ್ಯಾಟರಿ ಸಮಸ್ಯೆಯಿಂದ ಸಫಾರಿ ವಾಹನ ಕೆಟ್ಟ ನಿಂತಿತ್ತು. ಈ ವೇಳೆ ಸಫಾರಿ ವಾಹನವದ ಹತ್ತಿರ ಬಂದಿರುವ ಹುಲಿ ವಾಹನವನ್ನು ಎಳೆದಾಡಿದೆ. ಪ್ರವಾಸಿಗರ ಮೊಬೈಲಲ್ಲಿ ವೀಡಿಯೋ ಸೆರೆಯಾಗಿದೆ. ಕಳೆದ ವಾರ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರವಾಸಿಗರನ್ನ ಸಫಾರಿಗೆ ಕರೆದುಕೊಂಡು ಹೋಗಿದ್ದ ವಾಹನ ಮಾರ್ಗ ಮಧ್ಯದಲ್ಲಿಯೇ ಕೆಟ್ಟುನಿಂತಿತ್ತು. ಈ ವೇಳೆ ಅಲ್ಲಿದ್ದ ಹುಲಿ ವಾಹನದ ಮೇಲೆ ಎಗರಿದೆ. ಹುಲಿ ದಾಳಿ ವೇಳೆ ಹಿಂಬದಿಯ ಬಂಪರ್ ಕಿತ್ತಾಕಿ ಸಫಾರಿ ವಾಹನವನ್ನು ಹಿಂದಕ್ಕೆ ಎಳೆದಾಡಿದೆ. ಈ ವೇಳೆ ವಾಹನದಲ್ಲಿದ್ದ ಪ್ರವಾಸಿಗರು ಕಂಗಾಲುಗೊಂಡಿದ್ದರು. ವ್ಯಾಘ್ರನ ಕೋಪಕ್ಕೆ ಸಫಾರಿ ವಾಹನ ಜಖಂಗೊಂಡಿದೆ.

    ಸಫಾರಿ ಕಾರಿನ ಹಿಂದಿನ ವಾಹನದಲ್ಲಿದ್ದವರು ಹುಲಿ ದಾಳಿಯ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಆಗಾಗ ಬನ್ನೇರುಘಟ್ಟ ಸಫಾರಿಯಲ್ಲಿ ಪ್ರಾಣಿಗಳು ಮೋಜಿಗಾಗೀ ಕೆಲವೊಮ್ಮೆ ಕೆರಳಿದಾಗಲೂ ಈ ರೀತಿ ಅವಾಂತರಗಳು ನಡೆಯುತ್ತಿರುತ್ತವೆ.

  • ಕ್ಯಾಮೆರಾ ಹಿಡಿದು ಸಫಾರಿ ಮಾಡುತ್ತಿರುವ ದರ್ಶನ್ ವೀಡಿಯೋ ವೈರಲ್

    ಕ್ಯಾಮೆರಾ ಹಿಡಿದು ಸಫಾರಿ ಮಾಡುತ್ತಿರುವ ದರ್ಶನ್ ವೀಡಿಯೋ ವೈರಲ್

    ಮೈಸೂರು: ನಟ ದರ್ಶನ್ ಕ್ಯಾಮೆರಾ ಹಿಡಿದು ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ನಾಗರಹೊಳೆಯ ಕಬಿನಿಯಲ್ಲಿ ಸ್ನೇಹಿತರ ಜೊತೆಗೆ ಸಫಾರಿ ಮಾಡುತ್ತಿದ್ದಾರೆ.

    ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ನಾಗರಹೊಳೆಯ ಕಬಿನಿಯಲ್ಲಿ ಆಗಾಗ ಸ್ನೇಹಿತರ ಜೊತೆ ನಟ ದರ್ಶನ್ ಸಫಾರಿ ಮಾಡುತ್ತಿರುತ್ತಾರೆ. ಇದೀಗ ಸಫಾರಿಗೆಂದು ಕಾಡಿಗೆ ಹೋಗಿದ್ದಾರೆ. ಈ ವೇಳೆ ಹುಲಿಯೊಂದು ಕಾಣಿಸಿಕೊಂಡಿದೆ. ಹುಲಿಯ ಫೋಟೋವನ್ನು ತಮ್ಮ ಕ್ಯಾಮೆರಾದಲ್ಲಿ ದರ್ಶನ್ ಸೆರೆ ಹಿಡಿದಿದ್ದಾರೆ. ದರ್ಶನ್ ಹುಲಿ ಫೋಟೋ ತೆಗೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

     

    ನಾಗರಹೋಳೆ ಅರಣ್ಯದಲ್ಲಿ ನಟ ದರ್ಶನ್ ವೈಲ್ಡ್ ಫೋಟೋಗ್ರಾಫಿಯನ್ನು ಮಾಡುತ್ತಿದ್ದಾರೆ. ಪ್ರಾಣಿ ಪಕ್ಷಿಗಳ ಕುರಿತಾಗಿ ವಿಶೇಷವಾದ ಕಾಳಜಿಯನ್ನು ಹೊಂದಿರುವ ದರ್ಶನ್ ಅವರಿಗೆ ಮೂಕ ಪ್ರಾಣಿಗಳು ಎಂದರೆ ಬಲು ಇಷ್ಟ ಎಂಬುದು ತಿಳಿದಿರುವ ವಿಷಯವಾಗಿದೆ. ವೈಲ್ಡ್ ಫೋಟೋಗ್ರಫಿ ಮಾಡುವುದು ಎಂದರೆ ದರ್ಶನ್ ಅವರಿಗೆ ಇಷ್ಟ.

     

    ಸಿನಿಮಾ ಚಿತ್ರೀಕರಣ ಇಲ್ಲದ ಸಮಯದಲ್ಲಿ ಹೆಚ್ಚಾಗಿ ಅವರು ತಾವು ಸಾಕಿರು ಪ್ರಾಣಿಗಳ ಜೊತೆಗೆ ಕಾಲ ಕಳೆಯುತ್ತಾರೆ. ಹಾಗೂ ಸಮಯಸಿಕ್ಕಾಗಲೆಲ್ಲಾ ಅರಣ್ಯಕ್ಕೆ ಹೋಗಿ ಫೋಟೋಗ್ರಫಿಯನ್ನು ಮಾಡುತ್ತಿರುತ್ತಾರೆ. ಸಿನಿಮಾ ಶೂಟಿಂಗ್‍ನಿಂದ ಕೊಂಚ ರಿಲೀಪ್‍ನಲ್ಲಿರವ ದರ್ಶನ್ ಫೋಟೋಗ್ರಾಫಿಯಲ್ಲಿ ಬ್ಯುಸಿಯಾಗಿದ್ದಾರೆ.

    ಶೂಟಿಂಗ್ ನಡುವೇ ಕೊಂಚ ಬಿಡುವು ಮಾಡಿಕೊಂಡಿರುವ ಯಜಮಾನ ಇದೀಗ ನಾಗರ ಹೊಳೆ ಅಭಯಾರಣ್ಯದಲ್ಲಿ ಕ್ಯಾಮೆರಾ ಹಿಡಿದು ಕಾಡುಮೇಡು ಸುತ್ತಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕಿನ್ಯಾಡಿ ಕಾಡಿಗೆ ಹೋಗಿದ್ದ ದರ್ಶನ್ ಅವರು ಪ್ರಾಣಿ ಪಕ್ಷಿಗಳ ಫೋಟೋವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು. ಇದೀಗ ನಾಗರಹೊಳೆ ಅಭಯಾರಣ್ಯದಲ್ಲಿ ಬೀಡು ಬಿಟ್ಟಿದ್ದಾರೆ. ಕ್ಯಾಮೆರಾವನ್ನು ಹೆಗಲಿಗೆ ಹಾಕಿಕೊಂಡು ಪ್ರಾಣಿ ಪಕ್ಷಿಗಳ ಫೋಟೋ ತೆಗೆಯುತ್ತಾ ಸಫಾರಿಯನ್ನು ಎಂಜಾಯ್ ಮಾಡುತ್ತಿದ್ದಾರೆ.