ಚಾಮರಾಜನಗರ: ಸಫಾರಿ ವಾಹನದ ಮೇಲೆ ಕಾಡಾನೆಯೊಂದು (Wild Elephant) ದಾಳಿಗೆ ಯತ್ನಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ (Bandipura) ಸಫಾರಿಯಲ್ಲಿ ನಡೆದಿದೆ.
ಬೆಂಗಳೂರು: ಬನ್ನೇರುಘಟ್ಟ (Bannerghatta) ಸಫಾರಿ ವಾಹನದ ಮೇಲೆ ಜಾಲರಿ ಅಳವಡಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆಯ ಸಚಿವ ಈಶ್ವರ ಖಂಡ್ರೆ (Eshwar khandre) ಸೂಚನೆ ನೀಡಿದ್ದಾರೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿಂದು ಚಿರತೆ ಸಫಾರಿ ಅಂಗಳದಲ್ಲಿ ವಾಹನದ ಕಿಟಕಿ ಬಳಿ ಕೈ ಇಟ್ಟಿದ್ದ ಬಾಲಕನಿಗೆ ಚಿರತೆ ಗಾಯಗೊಳಿಸಿರುವ ಬಗ್ಗೆ ಆಘಾತ ವ್ಯಕ್ತಪಡಿಸಿದ ಸಚಿವರು ಎಲ್ಲಾ ಸಫಾರಿ ವಾಹನಗಳ ಕಿಟಕಿ ಮತ್ತು ಛಾಯಾಗ್ರಹಣದ ರಂಧ್ರಗಳಿಗೆ ಕಡ್ಡಾಯವಾಗಿ ಜಾಲರಿ ಅಳವಡಿಸಲು ಸೂಚಿಸಿದ್ದಾರೆ. ಇದನ್ನೂಓದಿ: ಬನ್ನೇರುಘಟ್ಟ ಸಫಾರಿ ವೇಳೆ ಬೊಲೆರೋ ಹಿಂಬಾಲಿಸಿ ಬಾಲಕನ ಮೇಲೆ ಚಿರತೆ ದಾಳಿ
ಸಫಾರಿಯ ವೇಳೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಮತ್ತು ಪ್ರವಾಸಿಗರಿಗೆ ಸೂಕ್ತ ಎಚ್ಚರಿಕೆ ನೀಡಲು ಹಾಗೂ ಸಫಾರಿ ಟಿಕೆಟ್ ನಲ್ಲಿಯೇ ಎಚ್ಚರಿಕೆಯ ಸಂದೇಶ ಮುದ್ರಿಸುವಂತೆ ಅವರು ಸೂಚಿಸಿದ್ದಾರೆ.
ನಿಂತ ಕೆಲ ಕ್ಷಣದ ಬಳಿಕ ಬೊಲೆರೋ ಮುಂದಕ್ಕೆ ನಿಧಾನವಾಗಿ ಸಾಗಿದೆ. ಈ ವೇಳೆ ಬೊಲೆರೋ ಹಿಂಬಾಲಿಸಿದ ಚಿರತೆ ಕಿಟಕಿಯ ಮೂಲಕ ಕೈ ಹಾಕಿ ಉಗುರಿನಿಂದ ಪರಚಿದೆ. ಗಾಯಾಳು ಬಾಲಕನಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಬಳಿಕ ಬಾಲಕ ಮನೆಗೆ ತೆರಳಿದ್ದಾನೆ.
ಚರತೆ ಬೊಲೆರೋ ಹತ್ತಿ ದಾಳಿ ನಡೆಸುತ್ತಿರುವ ದೃಶ್ಯ ಹಿಂಬದಿಯ ವಾಹನದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರ ಮೊಬೈಲಿನಲ್ಲಿ ಸೆರೆಯಾಗಿದೆ.
ಪಾರ್ಕ್ ಒಳಗೆ ಸಂಚಾರ ಮಾಡುವ ಬಸ್ ಹಾಗೂ ಜೀಪ್‌ಗಳಲ್ಲಿ ಸಣ್ಣದಾದ ರಂದ್ರ ಇದ್ದು ಅದನ್ನು ಕೂಡ ಸಂಪೂರ್ಣವಾಗಿ ಬಂದ್ ಮಾಡಲು ಕೆಎಸ್‌ಟಿಡಿಸಿಗೆ ಸೂಚನೆ ನೀಡಿದ್ದು, ಇನ್ನು ಮುಂದೆ ಇಂತಹ ಘಟನೆ ಆಗದಂತೆ ಎಚ್ಚರ ವಹಿಸಲು ಸಿಬ್ಬಂದಿಗೆ ಹಾಗೂ ಚಾಲಕರಿಗೆ ಸೂಚನೆ ನೀಡಿದ್ದೇನೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸುರ್ಯಸೇನ್ ಮಾಹಿತಿ ನೀಡಿದ್ದಾರೆ.
ಈ ಹಿಂದೆಯೂ ಕೂಡ ಒಮ್ಮೆ ಚಿರತೆ ಹಾಗೂ ಇನ್ನೊಮ್ಮೆ ಹುಲಿ ಇದೇ ರೀತಿ ದಾಳಿ ಮಾಡಿತ್ತು. ಆದರೂ ಕೂಡ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.
ನೀವು ವನ್ಯಜೀವಿ ಪ್ರಿಯರೇ? ಹಾಗಾದ್ರೆ ಖಂಡಿತವಾಗಿ ಯಾವುದಾದ್ರೂ ಒಂದು ಕಾಡಿಗೆ ಭೇಟಿ ಕೊಟ್ಟೇ ಇರ್ತೀರಿ. ತೆರೆದ ಜಿಪ್ಸಿಯಲ್ಲಿ ದಿನವಿಡೀ ಕಾಡು ಸುತ್ತಿ ಕೊನೇ ಕ್ಷಣದಲ್ಲಿ ಒಂದು ಚಿರತೆ (Leopard) ನಿಮ್ಮ ಮುಂದೆ ಹಾದು ಹೋದ್ರೆ ಅದೆಷ್ಟು ಖುಷಿ ಇರುತ್ತೆ ಅಲ್ಲವೇ? ಒಂದು ಕ್ಷಣ ಮೈ ರೋಮಗಳು ನೆಟ್ಟಗಾಗುತ್ತವೆ. ಅದರಂತೆಯೇ ಅಪರೂಪದ ಪ್ರಾಣಿ, ಪಕ್ಷಿಗಳು, ಗಮನ ಸೆಳೆಯುವ ಸಸ್ಯವರ್ಗ ಸೇರಿದಂತೆ ಹಲವು ಆಕರ್ಷಣೆಗಳೊಂದಿಗೆ ಪ್ರವಾಸಿಗರನ್ನ ಸೆಳೆಯುತ್ತವೆ ನಮ್ಮ ಭಾರತೀಯ ರಾಷ್ಟ್ರೀಯ ಉದ್ಯಾನಗಳು. ಇತ್ತೀಚೆಗಷ್ಟೇ ನಮ್ಮ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ದಕ್ಷಿಣ ಭಾರತದ ಮೊದಲ ಮತ್ತು ದೇಶದ ಅತಿ ದೊಡ್ಡ ಚಿರತೆ ಸಫಾರಿಯನ್ನ ಶುರು ಮಾಡಲಾಗಿದೆ. ಇದೀಗ ಮುಂಬೈನ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲೂ (SGNP) ಚಿರತೆ ಸಫಾರಿ ಶುರು ಮಾಡಲು ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಈವರೆಗೆ ಇದ್ದ ತೊಡಕುಗಳೆಲ್ಲವನ್ನ ಪರಿಹರಿಸಿ ಪ್ರವಾಸೋದ್ಯಮಕ್ಕೆ ಪುನಶ್ಚೇತನ ನೀಡುವ ಮಹತ್ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಈ ಬಗ್ಗೆ ಹೆಚ್ಚು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ..
ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಬಗ್ಗೆ ನಿಮಗೆಷ್ಟು ಗೊತ್ತು?
ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ (Mumbai) 1969 ರಲ್ಲಿ ಸ್ಥಾಪಿಸಲಾದ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನವು ಮೊದಲು 87 ಕಿಮೀ ವಿಸ್ತೀರ್ಣ ಹೊಂದಿತ್ತು. ಇದೀಗ ಮುಂಬೈ ಮತ್ತು ಥಾಣೆಯಲ್ಲಿ 104 ಚದರ ಕಿ.ಮೀ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದೆ. ಪ್ರವಾಸಿಗರ ಪ್ರಮುಖ ಆಕರ್ಷಣಾ ಕೇಂದ್ರ ಮಾತ್ರವಲ್ಲದೇ ವನ್ಯಜೀವಿ ಸಂರಕ್ಷಣಾ (Wildlife Protection) ತಾಣವೂ ಆಗಿದೆ. ಈ ಜೀವ ವೈವಿಧ್ಯಮಯ ತಾಣವು ಅದ್ಭುತವಾದ ಸದ್ಯ ಮತ್ತು ಪ್ರಾಣಿಗಳ ನೆಲೆಯಾಗಿದೆ. 1,300ಕ್ಕೂ ಹೆಚ್ಚು ಸಸ್ಯ ಪ್ರಭೇದಗಳು, 274 ಪಕ್ಷಿ ಪ್ರಭೇದಗಳು, 40 ಜಾತಿಯ ಸಸ್ತನಿಗಳು, 250 ಜಾತಿಯ ಪಕ್ಷಿಗಳು, 150 ಜಾತಿಯ ಚಿಟ್ಟೆಗಳು ಮತ್ತು 38 ಜಾತಿಯ ಸರೀಸೃಪಗಳಿಗೆ ನೆಲೆಯಾಗಿದೆ. ಈ ಉದ್ಯಾನವು ಪ್ರಕೃತಿ ಪ್ರಿಯರಿಗೆ ಕೇವಲ ಸ್ವರ್ಗವಲ್ಲ, ಇತಿಹಾಸ ಮತ್ತು ಸಂಸ್ಕೃತಿಯ ನಿಧಿಯೂ ಆಗಿದೆ. ಶತಮಾನಗಳ ಹಿಂದೆ ಬಂಡೆಗಳಲ್ಲಿ ಕೆತ್ತಿದ ಗುಹೆಗಳು ಇನ್ನೂ ಇಲ್ಲಿವೆ. ಇಷ್ಟು ವನ್ಯ ಸಂಪತ್ತನ್ನ ಹೊಂದಿರುವ ಉದ್ಯಾನದಲ್ಲಿ ಇದೀಗ ಚಿರತೆ ಸಫಾರಿ ಆರಂಭಿಸಲು ಸಕಲ ತಯಾರಿ ನಡೆಯುತ್ತಿದೆ.
ಯಾವಾಗಿನಿಂದ ಸಫಾರಿ ಶುರು?
2024ರ ಗಣತಿಯ ಪ್ರಕಾರ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನವು 54 ಚಿರತೆಗಳನ್ನು ಹೊಂದಿದೆ. ಇತ್ತೀಚೆಗಷ್ಟೇ ನಡೆದ ವಿಧಾನ ಪರಿಷತ್ ಸೆಷನ್‌ನಲ್ಲಿ ಮಹಾರಾಷ್ಟ್ರ ಅರಣ್ಯ ಸಚಿವ ಗಣೇಶ್ ನಾಯಕ್ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದರು. SGNP ನೈಸರ್ಗಿಕ ಸಂರಕ್ಷಣೆಯ ವಾತಾವರಣ ಇರೋದ್ರಿಂದ ಚಿರತೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಸ್ಥಿರವಾಗಿ ಬೆಳೆಯುತ್ತಲೇ ಇದೆ. 2015 ರಲ್ಲಿ 35 ಇದ್ದ ಚಿರತೆಗಳ ಸಂಖ್ಯೆ 2017 ರಲ್ಲಿ 41, 2018 ರಲ್ಲಿ 47, 2019 ರಲ್ಲಿ 46, 2023 ರಲ್ಲಿ 52 ಮತ್ತು 2024 ರಲ್ಲಿ 54 ಚಿರತೆಗಳು ಕಂಡುಬಂದಿವೆ. ಹೀಗಾಗಿ ಶೀಘ್ರದಲ್ಲೇ ಚಿರತೆ ಸಫಾರಿ ಆರಂಭಿಸಲು ತಯಾರಿ ನಡೆಸಲಾಗಿದೆ ಅಂತ ಸಚಿವರು ವಿವರಿಸಿದ್ದಾರೆ.
ಇಷ್ಟು ವರ್ಷ ಶುರು ಮಾಡದಿದ್ದಕ್ಕೆ ಕಾರಣ ಏನು?
ಕೆಪಿ ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡಕ್ಕೆ ಅನುವಾದಿಸಿರುವ ʻರುದ್ರ ಪ್ರಯಾಗದ ಭಯಾನಕ ನರಭಕ್ಷಕʼ (ಕೆನ್ನೆತ್ ಆಂಡರ್ಸನ್ ಅವರ ಅನುವಾದ ಕಥನ) ಕಾಡಿನ ಕಥೆಯನ್ನ ನೀವು ಓದಿದ್ದರೆ ನರಭಕ್ಷಕ ಚಿರತೆ ಇಡೀ ರುದ್ರ ಪ್ರಯಾಗವನ್ನು ಯಾವ ರೀತಿ ಕಾಡಿತ್ತು ಅನ್ನೋದು ನಿಮಗೆ ನೆನಪಾಗುತ್ತೆ. ಹಾಗೆಯೇ ಇಲ್ಲಿನ ಕಾಡಂಚಿನ ಗ್ರಾಮಗಳ ಜನ ಭಯದಲ್ಲೇ ಓಡಾಡುವಂತಾಗಿತ್ತು. 2017ರಲ್ಲಿ ಚಿರತೆ ದಾಳಿಗೆ ಇಬ್ಬರು ಮಕ್ಕಳು (ಒಂದು ಹುಡುಗಿ ಮತ್ತು ಒಂದು ಹುಡುಗ) ಬಲಿಯಾಗಿದ್ದರು. ಈ ಘಟನೆ ಭಾರೀ ಸಂಚಲನವನ್ನೇ ಸೃಷ್ಟಿಸಿತ್ತು. 2022ರಲ್ಲಿ ಮತ್ತೆ ಹುಡುಗಿಯೊಬ್ಬಳು ಚಿರತೆ ದಾಳಿಗೆ ಬಲಿಯಾಗಿದ್ದಳು. ಕಾನೂನಿನ ಅನ್ವಯ ಸರ್ಕಾರ ಸಂತ್ರಸ್ತ ಕುಟುಂಬಗಳಿಗೆ ತಲಾ 20 ಲಕ್ಷ ರೂಪಾಯಿ ಪರಿಹಾರವನ್ನೇನೋ ನೀಡಲಾಯ್ತು. ಆದ್ರೆ ತಡೆಗೋಡೆಗಳು ಇಲ್ಲದಿದ್ದ ಪರಿಣಾಮ ಹೊರವಲಯದಲ್ಲಿ ವಾಸಿಸುವ ಮಕ್ಕಳ ಮೇಲೆ ಚಿರತೆ ದಾಳಿ ಮುಂದುವರಿಯುತ್ತಲೇ ಇದೆ. ಮನೆಯಿಂದ ಪ್ರಕೃತಿ ಕರೆಗೆ ಹೋದಂತಹ ಸಂದರ್ಭದಲ್ಲಿ ಏಕಾಏಕಿ ನೆಗೆದು ದಾಳಿ ಮಾಡಿವೆ. ಹೀಗಾಗಿಯೇ ಇಷ್ಟು ವರ್ಷ ಇಲ್ಲಿ ಚಿರತೆ ಸಫಾರಿ ಶುರು ಮಾಡಿರಲಿಲ್ಲ ಎಂದು ಹೇಳಲಾಗುತ್ತಿದೆ.
104 ಚದರ ಕಿಮೀ ವ್ಯಾಪಿಸಿಕೊಂಡಿರುವ ಉದ್ಯಾನದಲ್ಲಿ ಚಿರತೆಗಳಿಗೆ ಈಗ ಸಾಕಷ್ಟು ಬೇಟೆಗಳಿವೆ. ಚಿರತೆಗಳಿಗೆ ಬೇಟೆಯಾಗಿ ಸಸ್ಯಹಾರಿ ಪ್ರಾಣಿಗಳಿವೆ. ಇದನ್ನ ಇನ್ನಷ್ಟು ಖಚಿತಪಡಿಸಿಕೊಳ್ಳೋದಕ್ಕೆ ಸರ್ಕಾರವು ಆ ಪ್ರದೇಶದಲ್ಲಿ ಹೆಚ್ಚಿನ ಹಣ್ಣಿನ ಮರಗಳನ್ನ ನೆಡಲು ನಿರ್ಧರಿಸಿದೆ.
ಗಡಿ ಗೋಡೆ ನಿರ್ಮಿಸಲು ಕ್ರಮ
ಸದ್ಯ ಚಿರತೆ ಸಫಾರಿ ಶುರು ಮಾಡೋದಕ್ಕೂ ಮುನ್ನವೇ ಕಾಡಿನ ಸಮೀಪದಲ್ಲಿರುವ ಜನರ ಸುರಕ್ಷತೆಗೂ ಸರ್ಕಾರ ಒತ್ತುಕೊಟ್ಟಿದೆ. ಗಡಿಯುದ್ಧಕ್ಕೂ ಸಿಮೆಂಟ್ ಗೋಡೆಗಳನ್ನ ನಿರ್ಮಿಸುವ ಯೋಜನೆಯನ್ನ ಈಗಾಗಲೇ ಪ್ರಸ್ತಾಪಿಸಲಾಗಿದೆ. ಜೊತೆಗೆ ಉದ್ಯಾನವನದೊಳಗೆ ಪರಿಫೆರಲ್ ರಸ್ತೆ (ಸಫಾರಿಗೆ ಸೂಕ್ತ ಮಾರ್ಗ) ನಿರ್ಮಿಸುವ ಜೊತೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಯೋಜನೆಯೂ ಇದೆ. ಹಿಂದೆಂದಿಗಿಂತಲೂ ವಾಚರ್ಸ್‌ಗಳ ಗಸ್ತು ಹೆಚ್ಚಾಗಿರುವಂತೆ ನೋಡಿಕೊಳ್ಳುವ ಪ್ರಸ್ತಾವನೆಯೂ ಸರ್ಕಾರದ ಮುಂದಿದೆ. ಮುಖ್ಯವಾಗಿ ಉದ್ಯಾನವನದಲ್ಲಿರುವ ಪ್ರಾಣಿಗಳ ಸುರಕಕ್ಷತೆ ಮೇಲೆ ನಿಗಾ ಇಡಲು ಉಪಗ್ರಹ ತಂತ್ರಜ್ಞಾನ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ.
ಚಿರತೆ ಸಫಾರಿ ಆರಂಭಿಸುವುದಕ್ಕೂ ಮುನ್ನ ಉದ್ಯಾನವನದಲ್ಲಿರುವ 22 ಬುಡಕಟ್ಟು ಪಾಡಾಗಳು (ತಾಂಡಾಗಳು) ಇವೆ. ಉದ್ಯಾನವನದ ಹೊರಗೆ ನೆಲೆಸಿರುವ 2,000 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಜೊತೆಗೆ ಅವರಿಗೆ ಮನೆಗಳನ್ನು ನಿರ್ಮಿಸಲು ಪ್ರಸ್ತಾಪಿಸಲಾಗಿದೆ. ಅದಕ್ಕಾಗಿ ಮುಂಬೈನ ಆರೆ ಕಾಲೋನಿಯಲ್ಲಿ 90 ಎಕರೆ ಭೂಮಿಯನ್ನ ಗುರುತಿಸಲಾಗಿದೆ. ಚಿರತೆಗಳು ರಾತ್ರಿ ವೇಳೆಯಲ್ಲಿ ಮನೆಗಳ ಮೇಲೆ ದಾಳಿ ಮಾಡುವುದನ್ನ ತಪ್ಪಿಸಲು ಸೋಲಾರ್ ಬೇಲಿ ವ್ಯವಸ್ಥೆ ಕಲ್ಪಿಸಲು ಜೊತೆಗೆ ಬಹಿರ್ದೆಸೆಗೆ ಹೋಗುವುದನ್ನ ತಡೆಯಲು ಶೌಚಾಲಯ ವ್ಯವಸ್ಥೆ ಮಾಡಲು ನಿರ್ದೇಶಿದೆ.
ಈ ಎಲ್ಲ ತಯಾರಿಗಳನ್ನು ಮಾಡಿಕೊಂಡ ಬಳಿಕ ಚಿರತೆ ಸಫಾರಿ ಪರಿಚಯಿಸಲು ಸರ್ಕಾರ ತಯಾರಿ ನಡೆಸಿದೆ. ಈ ಮೂಲಕ ವನ್ಯಜೀವಿಪ್ರಿಯರಿಗೆ ಚಿರತೆಗಳನ್ನು ವೀಕ್ಷಿಸುವ ಅವಕಾಶ ಮಾಡಿಕೊಡಲಿದೆ. ಪ್ರಸ್ತುತ ಹುಲಿ ಮತ್ತು ಸಿಂಹ ಸಫಾರಿಗಳನ್ನು ನಡೆಸುತ್ತಿರುವ SGNP ಚಿರತೆಗಳ ಸುರಕ್ಷಿತ ನೆಲೆಯಾಗಿದ್ದರೂ, ಸಫಾರಿ ಶುರು ಮಾಡಿರಲಿಲ್ಲ. ಅಲ್ಲದೇ ಚಿರತೆ ಸಫಾರಿಗೆ ಸುಮಾರು 30 ಹೆಕ್ಟೇರ್ ಪ್ರದೇಶದ ಅಗತ್ಯವಿದೆ. ಈಗಾಗಲೇ ಈ ಸೌಲಭ್ಯ ಉದ್ಯಾನದಲ್ಲಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ ಸಫಾರಿ ಅಭಿವೃದ್ಧಿಪಡಿಸಲು ಅಂದಾಜು 5 ಕೋಟಿ ರೂ. ವೆಚ್ಚ ನಿಗದಿ ಮಾಡಲಾಗಿದೆ. ಅರಣ್ಯ ಇಲಾಖೆ ಮತ್ತು ಜಿಲ್ಲಾ ಯೋಜನಾ ಸಮಿತಿಯ ಮೂಲಕ ಹಣವನ್ನು ವ್ಯವಸ್ಥೆ ಮಾಡಲಾಗುತ್ತದೆ.
ಚಾಮರಾಜನಗರ: ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಲಯ ವ್ಯಾಪ್ತಿಯ ಹನೂರು ಬಫರ್ ವಲಯದ ಪಚ್ಚೆ ದೊಡ್ಡಿಗಸ್ತಿನ ಸುಂಕದಕಟ್ಟೆ ಅರಣ್ಯ ಪ್ರದೇಶದಲ್ಲಿ ಸಫಾರಿಗರಿಗೆ ಹುಲಿ ಕಾಣಿಸಿಕೊಂಡಿದ್ದು, ಪ್ರವಾಸಿಗರು ಹರ್ಷ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳು ಹನೂರು ಬಫರ್ ವಲಯ ವ್ಯಾಪ್ತಿಯಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಕಡೆ ಕಾಡ್ಗಿಚ್ಚು ಕಾಣಿಸಿಕೊಂಡು ಒಣ ಹುಲ್ಲು ಹಾಗೂ ಸಣ್ಣ ಪುಟ್ಟ ಮರಗಳು ಬೆಂಕಿಗೆ ಆಹುತಿಯಾಗಿತ್ತು. ತದನಂತರ ಮೂರ್ನಾಲ್ಕು ದಿನಗಳ ಕಾಲ ಸತತವಾಗಿ ಬಿದ್ದ ಮಳೆಗೆ ಅರಣ್ಯವು ಅಚ್ಚಹಸಿರಿನಿಂದ ಕೂಡಿದ್ದು ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ. ಇದನ್ನೂ ಓದಿ: 2ನೇ ದಿನ ಪಬ್ಲಿಕ್ ಟಿವಿ ವಿದ್ಯಾಪೀಠಕ್ಕೆ ಭರ್ಜರಿ ಪ್ರತಿಕ್ರಿಯೆ – ಮುಗಿಯುವ ಮುನ್ನ ಭಾಗಿಯಾಗಿ
ಇದೀಗ ಅರಣ್ಯವು ಅಚ್ಚಹಸಿರಿನಿಂದ ಕಂಗೊಳಿಸುತ್ತಿರುವುದರಿಂದ ಸಫಾರಿಗೆ ತೆರಳುವ ವನ್ಯ ಪ್ರಿಯರಿಗೆ ಒಂದಲ್ಲ ಒಂದು ಪ್ರಾಣಿಗಳು ಕಾಣಸಿಗುತ್ತಿವೆ. ಮಲೆ ಮಹದೇಶ್ವರ ವನ್ಯಜೀವಿ ವ್ಯಾಪ್ತಿಯ ಹನೂರು ಬಫರ್ ವಲಯ ವ್ಯಾಪ್ತಿಯಲ್ಲಿ ಸಫಾರಿ ಕೇಂದ್ರ 2024ರ ಅಕ್ಟೋಬರ್ 2 ರಂದು ಪ್ರಾರಂಭಿಸಲಾಗಿತ್ತು. ಆದರೆ, ಇದುವರೆಗೂ ಒಮ್ಮೆಯೂ ಹುಲಿರಾಯ ದರ್ಶನ ನೀಡಿರಲಿಲ್ಲ.
ಅಜ್ಜೀಪುರ ಸಫಾರಿ ಕೇಂದ್ರದಿಂದ ತೆರಳುವ ಪ್ರವಾಸಿಗರಿಗೆ ಆನೆ, ಕಾಡೆಮ್ಮೆ, ಜಿಂಕೆ, ಕಡವೆ, ಕರಡಿ, ತೋಳ ನರಿ ಇನ್ನಿತರ ಪ್ರಾಣಿಗಳು ಮಾತ್ರ ಕಾಣಿಸಿಕೊಂಡಿದ್ದವು. ಶನಿವಾರ ತೆರಳಿದ್ದ ಪ್ರವಾಸಿಗರಿಗೆ ಹುಲಿರಾಯ ಕಾಣಿಸಿಕೊಳ್ಳುತ್ತಿದ್ದಂತೆ ತಮ್ಮ ಮೊಬೈಲ್ ಹಾಗೂ ಕ್ಯಾಮೆರಾದಲ್ಲಿ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಪ್ರವಾಸದ ಸಂದರ್ಭದಲ್ಲಿ ಎಂಟು ಜನ ಬೆಂಗಳೂರು ಮೂಲದ ಪ್ರವಾಸಿಗರು ಸಫಾರಿಗೆ ತೆರಳಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಜನಿವಾರ ವಾರ್ | ಭೌತಶಾಸ್ತ್ರ, ರಸಾಯನಶಾಸ್ತ್ರ ಸರಾಸರಿ ಅಂಕ ಪರಿಗಣಿಸಿ ಗಣಿತಕ್ಕೆ ಮಾರ್ಕ್ಸ್ ನೀಡಿ
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ (Gundlupet) ತಾಲೂಕಿನ ಬಂಡೀಪುರದಲ್ಲಿ (Bandipur Safari) ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಒಂದಲ್ಲ, ಎರಡಲ್ಲ, ಐದು ಹುಲಿಗಳ ದರ್ಶನವಾಗಿದೆ. ಹೊಸ ವರ್ಷದ ಮುನ್ನಾ ದಿನ ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ.
ಬೆಂಗಳೂರು: ಸಫಾರಿಗೆ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರ ಮಿನಿ ಬಸ್‌ನ ಮೇಲೆ ಚಿರತೆ ಏರಿದ್ದರಿಂದ ಕೆಲವರಿಗೆ ಆತಂಕವಾಗಿದ್ದು, ಕೆಲವರು ಕಿಟಕಿಯಲ್ಲಿ ಚಿರತೆ (Cheetah) ನೋಡಿ ಖುಷಿ ಪಟ್ಟ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ (Bannerghatta Biological Park) ನಡೆದಿದೆ.
ಇತ್ತೀಚಿಗೆ ಆರಂಭವಾಗಿರುವ ಚಿರತೆ ಸಫಾರಿಯಲ್ಲಿ (Cheetah Safari) ಚಿರತೆಗಳು ಬಸ್, ಜೀಪ್ ಬಳಿ ಬರುವುದು, ಕೆಲವು ಬಾರಿ ಬಸ್, ಜೀಪ್‌ಗಳ ಮೇಲೆ ಹತ್ತುವ ವಾಡಿಕೆ ಮಾಡಿಕೊಂಡಿವೆ. ಅದೇ ರೀತಿ ಇಂದು ಸಹ ಒಂದು ಚಿರತೆ ಬಸ್ ಮೇಲೆ ಏರಿ ಕಿಟಕಿಗಳಲ್ಲಿ ಪ್ರವಾಸಿಗರನ್ನು ನೋಡಿ ಗುರ್ ಎಂದಿದೆ. ನಂತರ ಚಾಲಕ ಬಸ್ ನಿಧಾನವಾಗಿ ಮುಂದಕ್ಕೆ ಚಲಿಸುತ್ತಿದ್ದಂತೆ ಬಸ್‌ನಿಂದ ಕೆಳಕ್ಕೆ ಹಾರಿ ಹೋಗಿದೆ. ಇದನ್ನೂ ಓದಿ: ಕುರ್ಚಿ ಕಾದಾಟ ಮಧ್ಯೆ ಸತೀಶ್ ಜಾರಕಿಹೊಳಿಯನ್ನು ಭೇಟಿಯಾದ ವಿಜಯೇಂದ್ರ
ಕಳೆದ ಮೂರು ತಿಂಗಳ ಹಿಂದೆ ಉದ್ಯಾನವನದ ಕರಡಿ, ಸಿಂಹ ಸಫಾರಿಗಳಿಗೆ ಹೊಂದಿಕೊಂಡಂತೆ ಇರುವ ವಿಶಾಲ ತೆರೆದ ಆವರಣದಲ್ಲಿ 19 ಚಿರತೆಗಳಿಗೆ ಆಶ್ರಯ ನೀಡಿ ಪ್ರತಿ ದಿನ ಒಂದೊಂದು ತಂಡವನ್ನು ಸಫಾರಿಗೆ ಬಿಡಲಾಗುತ್ತಿದೆ. ಸದ್ಯ ಚಿರತೆಗಳನ್ನು ಸಫಾರಿಯಲ್ಲಿ ನೋಡಿ ಖುಷಿ ಪಡುತ್ತಿದ್ದಾರೆ. ಇದನ್ನೂ ಓದಿ: ಮಕ್ಕಳ ಕಳ್ಳಿಯೆಂದು ಮಾನಸಿಕ ಅಸ್ವಸ್ಥೆಗೆ ಥಳಿತ: ಪೊಲೀಸರಿಂದ ಮಹಿಳೆಯ ರಕ್ಷಣ
ಚಿರತೆಗಳು ಬುದ್ಧಿವಂತ ಪ್ರಾಣಿಗಳು ಚಿಕ್ಕ ಜಾಗ ಸಿಕ್ಕರೂ ನುಸುಳಿ ಬಿಡುತ್ತವೆ ಹಾಗಾಗಿ ಪ್ರವಾಸಿ ವಾಹನದಲ್ಲಿ ಕಿಟಕಿಯ ಗ್ಲಾಸ್‌ಗಳನ್ನು ಮುಚ್ಚಿರಬೇಕು. ಮಕ್ಕಳನ್ನು ಕಿಟಕಿ ಪಕ್ಕ ಕೂರಿಸಿದ್ದರೆ ಎಚ್ಚರಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು. ಅದೇ ರೀತಿ ನಮ್ಮ ವಾಹನಗಳ ಚಾಲಕ ಮತ್ತು ಸಹಾಯಕ ಸಿಬ್ಬಂದಿಗಳಿಗೂ ಸಲಹೆ ಸೂಚನೆಗಳನ್ನು ನೀಡಲಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮೊಯಿದ್ದೀನ್ ಬಾವ ಸಹೋದರನ ಶವ ಫಲ್ಗುಣಿ ನದಿಯಲ್ಲಿ ಪತ್ತೆ
ಚಿರತೆಗಳು ನಾಚಿಕೆ ಸ್ವಭಾವದ ಪ್ರಾಣಿ. ಇವುಗಳಿಗೆ ಯಾವುದೇ ಅಪಾಯ ಇಲ್ಲ ಎಂಬುದು ಖಾತರಿ ಪಡಿಸಿಕೊಂಡ ಮೇಲೆಯೇ ನಡೆದು ಸಾಗುವುದು. ಹಾಗಾಗಿ ಪ್ರತಿ ದಿನ ವಾಹನಗಳನ್ನು ನೋಡಿ ಅಪಾಯವಿಲ್ಲ ಎಂಬುದು ಖಚಿತವಾಗಿದ್ದರಿಂದ ವಾಹನಗಳ ಬಳಿ ಬರುವುದು, ಮೇಲೆ ಏರುವುದು ವಾಡಿಕೆ ಮಾಡಿ ಕೊಂಡಿವೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಚೆನ್ನೈ ಏರ್ ಶೋ ವೇಳೆ ದುರಂತ – ಬಿಸಿಲಿನ ತಾಪಕ್ಕೆ ಐವರು ಸಾವು, 230ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಡಿಸ್ಪುರ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶನಿವಾರ (ಮಾ.9) ಬೆಳಗ್ಗೆ ಅಸ್ಸಾಂನ (Assam) ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ (Kaziranga National Park) ಆನೆ ಸಫಾರಿ ಹಾಗೂ ಜೀಪ್ ಸಫಾರಿ ನಡೆಸಿದ್ದಾರೆ. ನರೇಂದ್ರ ಮೋದಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ ಎನಿಸಿಕೊಂಡಿದ್ದಾರೆ.
ಮೋದಿ ಯುನೆಸ್ಕೋ ವಿಶ್ವ ಪರಂಪರೆಯ ತಾಣಕ್ಕೆ ಭೇಟಿ ನೀಡಿದ ಸಂದರ್ಭ ಉದ್ಯಾನದ ಸೆಂಟ್ರಲ್ ಕೊಹೊರಾ ಶ್ರೇಣಿಯ ಮಿಹಿಮುಖ್ ಪ್ರದೇಶದಲ್ಲಿ ಮೊದಲು ಆನೆ ಸಫಾರಿ ನಡೆಸಿದರು. ಬಳಿಕ ಅದೇ ವ್ಯಾಪ್ತಿಯಲ್ಲಿ ಜೀಪ್ ಸಫಾರಿ ನಡೆಸಿದರು. ಈ ವೇಳೆ ಪ್ರಧಾನಿಯೊಂದಿಗೆ ಉದ್ಯಾನದ ನಿರ್ದೇಶಕಿ ಸೋನಾಲಿ ಘೋಷ್ ಮತ್ತು ಇತರ ಹಿರಿಯ ಅರಣ್ಯ ಅಧಿಕಾರಿಗಳು ಇದ್ದರು. ಇದನ್ನೂ ಓದಿ: ಲೋಕಸಭೆಗೆ ರಾಜ್ಯದಿಂದ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ?
ರಾಜ್ಯಕ್ಕೆ ಎರಡು ದಿನಗಳ ಭೇಟಿಗಾಗಿ ಪ್ರಧಾನಿ ಶುಕ್ರವಾರ ಸಂಜೆ ಕಾಜಿರಂಗಕ್ಕೆ ಆಗಮಿಸಿದ್ದರು. ಶನಿವಾರ ಮಧ್ಯಾಹ್ನ ಮೋದಿ ಜೋರ್ಹತ್‌ನಲ್ಲಿ ಅಹೋಮ್ ಜನರಲ್ ಲಚಿತ್ ಬರ್ಫುಕನ್ ಅವರ 125 ಅಡಿ ಎತ್ತರದ ಪ್ರತಿಮೆಯನ್ನು ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: NDA 358, INDIA 110 ಸ್ಥಾನ – ಟೈಮ್ಸ್ ನೌ ಸಮೀಕ್ಷೆ
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಹುಲಿಸಂರಕ್ಷಿತಾರಣ್ಯ ಬಂಡೀಪುರದಲ್ಲಿ (Bandipura) ಇಂದು (ಬುಧವಾರ) ಒಂದು ದಿನದ ಮಟ್ಟಿಗೆ ಸಫಾರಿ ಬಂದ್ ಮಾಡಲಾಗಿದೆ.
ಇಂದು (ಸೆ.20) ಸಫಾರಿ ಪಾಯಿಂಟ್ ಮೇಲುಕಾಮನಹಳ್ಳಿಯಲ್ಲಿ ಬಂಡೀಪುರದ ಅರಣ್ಯ ಮುಂಚೂಣಿ ಸಿಬ್ಬಂದಿಗಳ ದಿನಾಚರಣೆ ಆಚರಿಸಲಾಗುತ್ತಿದೆ. ಆ ಹಿನ್ನೆಲೆ ಬಂಡೀಪುರದ ಅರಣ್ಯ ಸಿಬ್ಬಂದಿ ಸೇವೆ, ಸಾಧನೆ ಸ್ಮರಿಸಿ ಗೌರವ ಸಲ್ಲಿಕೆ ಮಾಡಲಾಗುತ್ತದೆ. ಇದನ್ನೂ ಓದಿ: ಹಾಲಶ್ರೀ ಬಂಧಿಸಲು ಅರ್ಚಕರ ವೇಷದಲ್ಲಿ ಫೀಲ್ಡ್‌ಗಿಳಿದಿದ್ದ ಅಧಿಕಾರಿಗಳು!
ಈ ವೇಳೆ ಬಂಡೀಪುರದ ಬಹುತೇಕ ಎಲ್ಲಾ ಸಿಬ್ಬಂದಿ ಕೂಡ ಪಾಲ್ಗೊಳ್ಳುತ್ತಾರೆ. ಅರಣ್ಯ ಸಿಬ್ಬಂದಿಗಳಿಗೆ ಮೊದಲ ಬಾರಿಗೆ ಗೌರವ ಕೊಡಲು ಇಂತಹ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಹೀಗಾಗಿ ಪ್ರವಾಸಿಗರಿಗೆ ಸಫಾರಿ ಬಂದ್ ಮಾಡಿರುವ ಕುರಿತು ಬಂಡೀಪುರ ಹುಲಿಸಂರಕ್ಷಣಾಧಿಕಾರಿ ರಮೇಶ್ ಕುಮಾರ್ ಮಾಹಿತಿ ಕೊಟ್ಟಿದ್ದಾರೆ.