Tag: ಸಪ್ಲೈಯರ್

  • ನ್ಯೂ ಇಯರ್ ಪಾರ್ಟಿಯಲ್ಲಿ ಕಿರಿಕ್: ಸಪ್ಲೈಯರ್‌ಗೆ ಚಾಕು ಇರಿದಿದ್ದ ಆರೋಪಿಗಳು ಅರೆಸ್ಟ್

    ನ್ಯೂ ಇಯರ್ ಪಾರ್ಟಿಯಲ್ಲಿ ಕಿರಿಕ್: ಸಪ್ಲೈಯರ್‌ಗೆ ಚಾಕು ಇರಿದಿದ್ದ ಆರೋಪಿಗಳು ಅರೆಸ್ಟ್

    ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಸಪ್ಲೈಯರ್ ಮೇಲೆ ಹಲ್ಲೆ ಮಾಡಿ ಚಾಕು ಇರಿದಿದ್ದ ಎಂಟು ಜನ ಆರೋಪಿಗಳನ್ನು ಬೆಂಗಳೂರಿನ ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

    ವೆಂಕಟೇಶ್‍ಪುರಂ ನಿವಾಸಿಗಳಾದ ಹರಿ (19), ಪ್ರಕಾಶ್ (19), ರಂಜೀತ್ ಕುಮಾರ್ (22), ಸಂತೋಷ್ (19), ಕರಣ್ (20), ವಿಜಯ್ (19) ಸೇರಿದಂತೆ ಎಂಟು ಜನ ಬಂಧಿತ ಆರೋಪಿಗಳು. ಬಾಣಸವಾಡಿಯ ಓಲಿವ್ ರೆಸಿಡೆನ್ಸಿ ಹೋಟೆಲ್‍ನಲ್ಲಿ ಹೊಸ ವರ್ಷಕ್ಕೆಂದು ಎಂಟು ಜನ ಯುವಕರು ಹೋಗಿದ್ದರು. ಪಾರ್ಟಿ ವೇಳೆ ಕುಡಿದು ಜೋರಾಗಿ ಕೂಗಾಡುತ್ತಿದ್ದರು. ಇದನ್ನು ನೋಡಿದ ಸಪ್ಲೈಯರ್ ಇಶಾಂತ್ ಜೋರಾಗಿ ಕೂಗಾಡಬೇಡಿ, ಇತರರಿಗೆ ತೊಂದರೆ ಆಗುತ್ತೆ ಎಂದು ಬುದ್ಧಿವಾದ ಹೇಳಿದ್ದ. ಇದರಿಂದ ಕೋಪಗೊಂಡ ಯುವಕರು ಸಪ್ಲೈಯರ್ ಇಶಾಂತ್‍ಗೆ ಹಿಗ್ಗಾಮುಗ್ಗಾ ಥಳಿಸಿ, ಚಾಕು ಇರಿದು ಪರಾರಿಯಾಗಿದ್ದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್: ನ್ಯೂ ಇಯರ್ ಸಂಭ್ರಮದಲ್ಲಿ ಕೀಟಲೆ ಮಾಡಿದ್ದ ನಾಲ್ವರ ಬಂಧನ

    ಸಪ್ಲೈಯರ್ ಮೇಲೆ ಹಲ್ಲೆ ನಡೆಸಿದ ದೃಶ್ಯವು ಹೋಟೆಲ್‍ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬಾಣಸವಾಡಿ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದರು. ಆದರೆ ಆರೋಪಿಗಳು ಪತ್ತೆ ಸಾಧ್ಯವಾಗಿರಲಿಲ್ಲ. ಬಳಿಕ ತೀವ್ರ ಕಾರ್ಯಾಚರಣೆ ನಡೆಸಿ, ಭಾನುವಾರ ಎಲ್ಲ ಎಂಟು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

  • ಸಪ್ಲೈಯರ್ ಮೃತದೇಹ ಇದ್ದ ಸಂಪಿನ ನೀರಿನಲ್ಲಿ ಅಡುಗೆ, ಹೋಟೆಲ್ ಗ್ರಾಹಕರಿಗೂ ಅದೇ ನೀರು!

    ಸಪ್ಲೈಯರ್ ಮೃತದೇಹ ಇದ್ದ ಸಂಪಿನ ನೀರಿನಲ್ಲಿ ಅಡುಗೆ, ಹೋಟೆಲ್ ಗ್ರಾಹಕರಿಗೂ ಅದೇ ನೀರು!

    ಚಿಕ್ಕಬಳ್ಳಾಪುರ: ಹೋಟೆಲ್ ನ ಸಪ್ಲೈಯರ್ ಓರ್ವನ ಮೃತದೇಹ ಇದ್ದ ಸಂಪಿನ ನೀರು ಬಳಸಿ ಆಡುಗೆ ತಯಾರಿ ಮಾಡಿರುವುದಲ್ಲದೇ ಅದೇ ಸಂಪಿನ ನೀರನ್ನ ಕುಡಿಯಲು ಗ್ರಾಹಕರಿಗೆ ನೀಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣ ದಲ್ಲಿ ಬೆಳಕಿಗೆ ಬಂದಿದೆ.

    ದೇವನಹಳ್ಳಿ ಬಸ್ ನಿಲ್ದಾಣದಲ್ಲಿರುವ ಶಾಂತಿ ಸಾಗರ್ ಹೋಟೆಲ್ ನ ನೀರಿನ ಸಂಪ್‍ನಲ್ಲಿ ಸಪ್ಲೈಯರ್ ಕೃಷ್ಣ ಎಂಬಾತನ ಶವ ಇಂದು ಪತ್ತೆಯಾಗಿದೆ. ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಸಪ್ಲೈಯರ್ ಕೃಷ್ಣ ಬುಧವಾರದಂದು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಇಂದು ಕೃಷ್ಣ ನ ಮೃತದೇಹ ಹೋಟೆಲ್‍ನ ಸಂಪಿನಲ್ಲಿ ತೇಲಾಡುತ್ತಿದ್ದು ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ನಿನ್ನೆಯೇ ಕೃಷ್ಣ ಸಂಪಿನಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.

    ಆದ್ರೆ ಇಂದು ಅದೇ ಸಂಪಿನ ನೀರು ಬಳಸಿ ಹೋಟೆಲ್ ನಲ್ಲಿ ಆಡುಗೆ ತಯಾರಿ ಮಾಡಲಾಗಿದೆ. ಗ್ರಾಹಕರಿಗೆ ಕುಡಿಯಲು ಅದೇ ನೀರನ್ನೇ ಬಳಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ದೇವನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೋಟೆಲ್‍ನವರ ಕಾರ್ಯ ವೈಖರಿಗೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.