Tag: ಸಪ್ನಾ ಚೌಧರಿ

  • ವಂಚನೆ ಪ್ರಕರಣ: ಕೊನೆಗೂ ನ್ಯಾಯಾಲಯಕ್ಕೆ ಶರಣಾದ ಬಿಗ್ ಬಾಸ್ ಸ್ಪರ್ಧಿ

    ವಂಚನೆ ಪ್ರಕರಣ: ಕೊನೆಗೂ ನ್ಯಾಯಾಲಯಕ್ಕೆ ಶರಣಾದ ಬಿಗ್ ಬಾಸ್ ಸ್ಪರ್ಧಿ

    ಮಾಜಿ ಬಿಗ್ ಬಾಸ್ ಸ್ಪರ್ಧಿ, ಗಾಯಕಿ ಹಾಗೂ ನಟಿಯೂ ಆಗಿರುವ ಸಪ್ನಾ ಚೌಧರಿ (Sapna Chaudhary) ಕೊನೆಗೂ ಲಖನೌ ನ್ಯಾಯಾಲಯದಲ್ಲಿ ಶರಣಾಗಿದ್ದಾರೆ (Surrender). ವಂಚನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ಸಪ್ನಾಗೆ ನ್ಯಾಯಾಲಯವು ಬಂಧನ ವಾರೆಂಟ್ (Warrant) ಜಾರಿ ಮಾಡಿತ್ತು. ಹಾಗಾಗಿ ಸಪ್ನಾಗಾಗಿ ಪೊಲೀಸರು ಬಲೆ ಬೀಸಿದ್ದರು. ಹುಡುಕಾಟ ಕೂಡ ನಡೆದಿತ್ತು.

    2018ರಲ್ಲಿ ಇವೆಂಟ್ ಮಾಡಿಕೊಡಲು ಒಪ್ಪಿಕೊಂಡಿದ್ದ ಸಪ್ನಾ, ಗಾಯನ ಮತ್ತು ನೃತ್ಯಕ್ಕಾಗಿ ಲಕ್ಷಾಂತರ ರೂಪಾಯಿ ಅಡ್ವಾನ್ಸ್ ಪಡೆದಿದ್ದರು. ಆದರೆ, ಆ ಕಾರ್ಯಕ್ರಮವನ್ನು ಅವರಿಂದ ಮಾಡಿಕೊಡಲು ಸಾಧ್ಯವಾಗಲಿಲ್ಲ. ಅಲ್ಲದೇ, ಪಡೆದಿದ್ದ ಸಂಭಾವನೆಯನ್ನೂ ಅವರು ಹಿಂದಿರುಗಿಸಲಿಲ್ಲ. ಕೊನೆ ಕ್ಷಣದಲ್ಲಿ ಕಾರ್ಯಕ್ರಮವನ್ನು ಮಾಡದೇ ಇರುವ ಕಾರಣಕ್ಕಾಗಿ ಆಯೋಜಕರಿಗೆ ಸಾಕಷ್ಟು ನಷ್ಟವಾಗಿತ್ತು. ಹಾಗಾಗಿ ತಮಗೆ ವಂಚನೆ (Cheating) ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು. ಇದನ್ನೂ  ಓದಿ:ಅನುಷ್ಕಾಗೆ ಕೈಕೊಟ್ಟು ಬಾಲಿವುಡ್ ಬೆಡಗಿಗೆ ಮನಸ್ಸು ಕೊಟ್ಟ ಪ್ರಭಾಸ್

    ಈ ಹಿಂದಿನ ವಿಚಾರಣೆಗಳಿಗೆ ಸಪ್ನ ಹಾಜರಾಗದೇ ಇರುವ ಕಾರಣಕ್ಕಾಗಿ ಲಖನೌನ (Lucknow) ಮ್ಯಾಜಿಸ್ಟ್ರೇಟ್ ಕೋರ್ಟ್ (Court) ಬಂಧನ (Arrest) ವಾರೆಂಟ್ ಜಾರಿ ಮಾಡಿತ್ತು. ನಿನ್ನೆ ಮ್ಯಾಜಿಸ್ಟ್ರೇಟ್ ಮುಂದೆ ಶರಣಾಗಿ, ತಮ್ಮಿಂದ ಯಾವುದೇ ತಪ್ಪು ಆಗಿಲ್ಲ, ತಾವು ವಂಚನೆಯನ್ನು ಮಾಡಿಲ್ಲ ಎಂದು ಹೇಳಿದ್ದಾರೆ. ತಮ್ಮ ವಿರುದ್ಧ ಜಾರಿ ಆಗಿರುವ ಬಂಧನ ವಾರೆಂಟ್ ಅನ್ನು ರದ್ದು ಮಾಡುವಂತೆ ಅವರು ಮನವಿಯನ್ನೂ ಮಾಡಿಕೊಂಡಿದ್ದಾರೆ.

    ಸಪ್ನಾ ಹೇಳಿಕೆಯನ್ನು ಆಲಿಸಿದ ಕೋರ್ಟ್ ಸದ್ಯ ಅರೆಸ್ಟ್ ವಾರೆಂಟ್ ರದ್ದು ಮಾಡಿದ್ದು ಮತ್ತೆ ಸೆಪ್ಟೆಂಬರ್ 30ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. 14 ಅಕ್ಟೋಬರ್ 2018ರಂದು ಸಪ್ನಾ ವಿರುದ್ಧ ದೂರು ದಾಖಲಾಗಿತ್ತು. ಅಲ್ಲಿಂದ ಈವರೆಗೂ ಸಪ್ನಾ ಕೋರ್ಟಿಗೆ ಹಾಜರಾಗಿರಲಿಲ್ಲ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ಟೇಜ್ ಮೇಲೆ ಹೆಜ್ಜೆ ಹಾಕಿ ನೋಡಿ: ಕಲ್ಲೆಸದವರಿಗೆ ಸಪ್ನಾ ಚೌಧರಿ ಸವಾಲ್

    ಸ್ಟೇಜ್ ಮೇಲೆ ಹೆಜ್ಜೆ ಹಾಕಿ ನೋಡಿ: ಕಲ್ಲೆಸದವರಿಗೆ ಸಪ್ನಾ ಚೌಧರಿ ಸವಾಲ್

    -ಕಿಡಿಗೇಡಿಗಳ ಕಿತಾಪತಿಗೆ ಕಣ್ಣೀರಿಟ್ಟ ಡ್ಯಾನ್ಸಿಂಗ್ ಕ್ವೀನ್

    ನವದೆಹಲಿ: ಸ್ಟೇಜ್ ಮೇಲೆ ಬಂದು ಹೆಜ್ಜೆ ಹಾಕಿ ಸೊಂಟ ಬಳುಕಿಸಿ ನೋಡಿ ನಮ್ಮ ಕಷ್ಟ ನಿಮಗೆ ಗೊತ್ತಾಗುತ್ತೆ ಎಂದು ದೇಸಿ ಡ್ಯಾನ್ಸಿಂಗ್ ಕ್ವೀನ್ ಸವಾಲು ಹಾಕಿದ್ದಾರೆ. ಕಾರ್ಯಕ್ರಮದ ವೇದಿಕೆಯಲ್ಲಿ ಕೆಲ ಕಿಡಿಗೇಡಿಗಳು ಕಲ್ಲೆಸೆದಾಗ ನೊಂದ ಸಪ್ನಾ ಚೌಧರಿ ಪುಂಡರಿಗೆ ಸವಾಲು ಹಾಕಿ ಕಣ್ಣೀರಿಟ್ಟಿರುವ ಹಳೆಯ ವಿಡಿಯೋ ವೈರಲ್ ಆಗಿದೆ.

    ಹರ್ಯಾಣದ ಡ್ಯಾನ್ಸರ್ ಸಪ್ನಾ ಚೌಧರಿ ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ಫೇಮಸ್. ತಮ್ಮ ದೇಶಿ ಡ್ಯಾನ್ಸಿಂಗ್ ಶೈಲಿ ಮೂಲಕವೇ ಸಪ್ನಾ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮ್ಮ ಅಮೋಘ ಡ್ಯಾನ್ಸ್ ಮೂಲಕ ಸಪ್ನಾ ನೋಡುಗರಿಗೆ ಕಿಕ್ ಏರಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಪ್ನಾರ ಡ್ಯಾನ್ಸ್ ವಿಡಿಯೋ ಕ್ಲಿಪ್ ಗಳು ವೈರಲ್ ಆಗುತ್ತಿರುತ್ತವೆ.

    ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಸಪ್ನಾ ಚೌಧರಿ ಡ್ಯಾನ್ಸ್ ಮಾಡ್ತಿರೋವಾಗ ಕೆಲ ಪುಂಡರು ಕಲ್ಲು ಎಸೆದಿದ್ದಾರೆ. ಇದರಿಂದ ಬೇಸರಗೊಂಡ ಸಪ್ನಾ ಡ್ಯಾನ್ಸ್ ನಿಲ್ಲಿಸಿ ಮೈಕ್ ಹಿಡಿದು ಮಾತನಾಡಿದ್ದಾರೆ. ನೀವುಗಳು ಕಲ್ಲು ಎಸೆದಾಗ ನನಗೆ ಅಳು ಬರುತ್ತದೆ. ನೀವೇ ಸ್ಟೇಜ್ ಮೇಲೆ ಬಂದು ಒಂದೆರಡು ಹೆಜ್ಜೆ ಹಾಕಿ, ಸೊಂಟ ಬಳುಕಿಸಿ ನೋಡಿ ನಿಮ್ಮ ಸ್ಥಿತಿ ಹೇಗಿರುತ್ತೆ ಅಂತ ಗೊತ್ತಾಗುತ್ತದೆ. ಚೆನ್ನಾಗಿ ನಡೆಯುತ್ತಿರೋ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ರೆ ನಿಮಗೆ ಏನು ಸಿಗುತ್ತದೆ ಎಂದು ಪ್ರಶ್ನ ಮಾಡಿದ್ದಾರೆ.

    ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್‍ಬಾಸ್ ರಿಯಾಲಿಟಿ ಶೋನಲ್ಲಿ ಸಪ್ನಾ ಸ್ಪರ್ಧಿಸಿದ್ದರು. ಬಿಗ್‍ಬಾಸ್ ಟ್ರೋಫಿ ಗೆಲ್ಲದಿದ್ದರೂ ಇರುವಷ್ಟು ದಿನ ನೋಡುಗರನ್ನು ಮನರಂಜಿಸಿದ್ದರು.

  • ಸಪ್ನಾ ಚೌಧರಿಯನ್ನ ರಾಹುಲ್ ಗಾಂಧಿ ಮದ್ವೆ ಆಗ್ಲಿ – ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ

    ಸಪ್ನಾ ಚೌಧರಿಯನ್ನ ರಾಹುಲ್ ಗಾಂಧಿ ಮದ್ವೆ ಆಗ್ಲಿ – ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ

    ಲಕ್ನೋ: ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಮತ್ತೆ ನಾಲಗೆ ಹರಿಬಿಟ್ಟಿದ್ದು, ಸೋನಿಯಾ ಗಾಂಧಿ ಮದ್ವೆಗೂ ಮುನ್ನ ಡ್ಯಾನ್ಸರ್ ಆಗಿದ್ರು. ಈಗ ರಾಹುಲ್ ಗಾಂಧಿಯೂ ಡ್ಯಾನ್ಸರ್ ಸಪ್ನಾ ಚೌಧರಿಯನ್ನ ಮದ್ವೆ ಆಗಲಿ ಎಂದಿದ್ದಾರೆ.

    ಬಿಗ್‍ಬಾಸ್ ಫೇಮ್‍ನ ಸಿಂಗರ್ ಸಪ್ನಾ ಚೌಧರಿ ಕಾಂಗ್ರೆಸ್ ಸೇರಿದ್ದಾರೆ ಎಂದು ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಸುರೇಂದ್ರ ಸಿಂಗ್ ಮಾತನಾಡಿ, ಅತ್ತೆ ಸೊಸೆ ಇಬ್ಬರು ಒಂದೇ ಕ್ಯಾಟಗರಿ ಸೇರಿದವರಾಗುತ್ತಾರೆ. ರಾಹುಲ್ ಮದುವೆ ಆಗಲಿ ಎಂದರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಸಪ್ನಾ ಸೌಧರಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಮಥುರಾ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿತ್ತು. ಈ ಸುದ್ದಿ ಪ್ರಚಾರವಾಗುತ್ತದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಪ್ನಾ ಚೌಧರಿ, ತಾವು ಕಾಂಗ್ರೆಸ್ ಸದಸ್ಯತ್ವ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು. ಅಲ್ಲದೇ ಪ್ರಿಯಂಕಾ ಗಾಂಧಿ ಅವರೊಂದಿಗೆ ಇರುವ ಫೋಟೋ ತುಂಬಾ ಹಳೆಯದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.

    ಈ ಹಿಂದೆಯೂ ಕೂಡ ತಮ್ಮ ವಿವಾದತ್ಮಾಕ ಹೇಳಿಕೆಯಿಂದಲೇ ಸುದ್ದಿಯಾಗಿದ್ದ ಶಾಸಕ ಸುರೇಂದ್ರ ಸಿಂಗ್, ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲು ಪೋಷಕರೇ ಕಾರಣ. ಮಕ್ಕಳನ್ನು ಕಟ್ಟುನಿಟ್ಟಾಗಿ ಬೆಳೆಸಬೇಕು. ಮುಕ್ತವಾಗಿ ಸಂಚರಿಸಲು, ಸ್ಮಾರ್ಟ್ ಫೋನ್ ಬಳಕೆ ಮಾಡಲು ಬಿಡಬಾರದು ಎಂದಿದ್ದರು.