Tag: ಸಪ್ತ ಸಾಗರದಾಚೆ ಎಲ್ಲೋ

  • ಬ್ಲೌಸ್ ಇಲ್ಲದೇ ಸೀರೆಯುಟ್ಟು ಮಿಂಚಿದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ನಾಯಕಿ

    ಬ್ಲೌಸ್ ಇಲ್ಲದೇ ಸೀರೆಯುಟ್ಟು ಮಿಂಚಿದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ನಾಯಕಿ

    ‘ಸಪ್ತ ಸಾಗರದಾಚೆ ಎಲ್ಲೋ’ (Sapta Sagaradacche Yello) ಚಿತ್ರದ ರಕ್ಷಿತ್ ಶೆಟ್ಟಿ (Rakshit Shetty) ನಾಯಕಿ ಚೈತ್ರಾ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್‌ನಲ್ಲಿದ್ದಾರೆ. ಬ್ಲೌಸ್ ಇಲ್ಲದೇ ಸೀರೆಯುಟ್ಟು ಮಿಂಚಿದ್ದಾರೆ. ಈ ಕುರಿತ ಫೋಟೋವನ್ನ ನಟಿ ಹಂಚಿಕೊಡಿದ್ದಾರೆ. ಇದನ್ನೂ ಓದಿ:ಪ್ರೀತಿಯಿಂದ ಪ್ರಭಾಸ್‌ಗೆ ಅನುಷ್ಕಾ ಶೆಟ್ಟಿ ಏನೆಂದು ಕರೀತಾರೆ ಗೊತ್ತಾ?

    ‘ಮಹಿರ’ (Mahira) ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ಎಂಟ್ರಿ ಕೊಟ್ಟ ಚೈತ್ರಾ ಆಚಾರ್ (Chaithra Achar)  ಅವರು ಆ ದೃಶ್ಯ, ಗಿಲ್ಕಿ, ತಲೆದಂಡ (Thaledanda) ಸಿನಿಮಾಗಳಲ್ಲಿ ನಾಯಕಿ ನಟಿಸಿದ್ದಾರೆ. ಗಾಯಕಿಯಾಗಿಯೂ ಚೈತ್ರಾ ಆಚಾರ್ ಗುರುತಿಸಿಕೊಂಡಿದ್ದಾರೆ. ಸಾರ್ವಜನಿಕರಿಗೆ ಸುವರ್ಣಾವಕಾಶ, ಮಯಾಬಜಾರ್ 2016, ಗರುಡ ಗಮನ ವೃಷಭ ವಾಹನ ಸಿನಿಮಾದ ಹಾಡುಗಳಿಗೆ ಚೈತ್ರಾ ಧ್ವನಿಯಾಗಿದ್ದಾರೆ.

     

    View this post on Instagram

     

    A post shared by Chaithra J Achar (@chaithra.j.achar)

    ಬ್ಲೌಸ್ ಇಲ್ಲದೇ ಹಳದಿ ಬಣ್ಣದ ಸೀರೆಯುಟ್ಟು ನಟಿ ಚೈತ್ರಾ ಮಿಂಚಿದ್ದಾರೆ. ಹಳದಿ ಸೀರೆ ಕೆಂಪು ಬಣ್ಣದ ಬಾರ್ಡರ್ ಸೀರೆಯಲ್ಲಿ ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ಪೋಸ್ ನೀಡಿದ್ದಾರೆ. ನಟಿಯ ಬೋಲ್ಡ್ ಲುಕ್‌ಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

     

    View this post on Instagram

     

    A post shared by Chaithra J Achar (@chaithra.j.achar)

    ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಗೆ ಚೈತ್ರಾ ಆಚಾರ್ ನಾಯಕಿಯಾಗಿ ನಟಿಸಿದ್ದಾರೆ. ರಕ್ಷಿತ್‌ಗೆ ಚೈತ್ರಾ, ರುಕ್ಮಿಣಿ ವಸಂತ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

  • ‘ಸಪ್ತ ಸಾಗರದಾಚೆ..’ 20 ಕೇಜಿ ತೂಕ ಹೆಚ್ಚಿಸಿಕೊಂಡರಾ ರಕ್ಷಿತ್ ಶೆಟ್ಟಿ?

    ‘ಸಪ್ತ ಸಾಗರದಾಚೆ..’ 20 ಕೇಜಿ ತೂಕ ಹೆಚ್ಚಿಸಿಕೊಂಡರಾ ರಕ್ಷಿತ್ ಶೆಟ್ಟಿ?

    ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದ ನಂತರ ನಿರ್ದೇಶಕ ಹೇಮಂತ್ ಕುಮಾರ್ ಮತ್ತು ರಕ್ಷಿತ್ ಶೆಟ್ಟಿ ಮತ್ತೆ ಒಂದಾಗಿದ್ದಾರೆ. ಈ ಜೋಡಿ ಒಂದಾಗಿ ವಿಭಿನ್ನ ರೀತಿಯ ಚಿತ್ರ ಮಾಡಿದ್ದು, ಅದಕ್ಕೆ ‘ಸಪ್ತ ಸಾಗರದಾಚೆ ಎಲ್ಲೋ’ ಎಂದು ಚಂದದ ಹೆಸರು ಕೂಡ ಇಟ್ಟಿದ್ದಾರೆ. ಈ ಸಿನಿಮಾ ಫಸ್ಟ್ ಲುಕ್ ಇಂದು ಬಿಡುಗಡೆ ಆಗಿದೆ. ಇದನ್ನೂ ಓದಿ : ‘ಧಾಕಡ್’ ಸೋಲಿಗೆ ಕಂಗೆಟ್ಟ ಕಂಗನಾ ರಣಾವತ್ : ವೀಕೆಂಡ್ ನಲ್ಲೂ ವೀಕ್ ಕಲೆಕ್ಷನ್

    ಇಂದು ರಿಲೀಸ್ ಆಗಿರುವ ಫಸ್ಟ್ ಲುಕ್ ಕಂಡು ರಕ್ಷಿತ್ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಮಲ್ಲಿಗೆಯಂತೆ ತೂಗುತ್ತಿದ್ದ ರಕ್ಷಿತ್ ಗುಲಾಬಿ ರೀತಿಯಲ್ಲಿ ಉಬ್ಬಿಕೊಂಡಿರುವುದಕ್ಕೆ ಕಾರಣವನ್ನೂ ಅವರು ಕೇಳಿದ್ದಾರೆ. ಹೌದು, ಈ ಸಿನಿಮಾಗಾಗಿ ರಕ್ಷಿತ್ ಶೆಟ್ಟಿ ತೂಕ ಹೆಚ್ಚಿಸಿಕೊಂಡಿದ್ದು, ಅದು ಗಾಬರಿ ಬೀಳುವಷ್ಟು ತೂಕ ಹೆಚ್ಚಿದೆಯಂತೆ. ಇದನ್ನೂ ಓದಿ : ಶೀಘ್ರದಲ್ಲೇ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಸಿನಿಮಾ ಶುರು : ಯೋಗರಾಜ್ ಭಟ್ ನಿರ್ದೇಶಕ

    ಈ ಪಾತ್ರಕ್ಕಾಗಿ ಅಂಥದ್ದೊಂದು ತಾಲೀಮು ಅವಶ್ಯಕತೆ ಇತ್ತು. ಹಾಗಾಗಿ 15 ರಿಂದ 20 ಕೇಜಿ ತೂಕವನ್ನು ಈ ಚಿತ್ರಕ್ಕಾಗಿ ರಕ್ಷಿತ್ ಹೆಚ್ಚಿಸಿಕೊಂಡಿದ್ದಾರಂತೆ. ಅಲ್ಲದೇ, ಇಲ್ಲಿ ಅವರ ಪಾತ್ರಕ್ಕೆ ಹಲವು ಶೇಡ್ ಗಳು ಇರುವುದರಿಂದ ತೂಕ ಹೆಚ್ಚಿಸಿಕೊಂಡ ಪಾತ್ರದ ಫಸ್ಟ್ ಲುಕ್ ಅನ್ನು ಈ ಬಾರಿ ರಿಲೀಸ್ ಮಾಡಿದ್ದಾರೆ ನಿರ್ದೇಶಕರು. ಈಗ ಆ ಫಸ್ಟ್ ಲುಕ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೇ, ರಕ್ಷಿತ್ ನಡೆಯನ್ನು ಅಭಿನಂದಿಸಲಾಗುತ್ತಿದೆ. ಇದನ್ನೂ ಓದಿ: ವೀಲ್‍ಚೇರ್ ರೋಮಿಯೋಗೆ ಮಯೂರಿ ಜೂಲಿಯಟ್ – ‘ಆ’ ಸವಾಲಿನ ಪಾತ್ರ ಒಪ್ಪಿಕೊಂಡಿದ್ದರ ಹಿಂದಿದೆ ಒಂದು ಕಥಾನಕ!

    ರಕ್ಷಿತ್ ಶೆಟ್ಟಿ ಪಾತ್ರಕ್ಕೆ ಎರಡು ಶೇಡ್ ಇದ್ದು, ಸಿನಿಮಾದ ಮೊದಲ ಭಾಗದಲ್ಲಿ ಒಂದು ರೀತಿ ಕಾಣಿಸಿಕೊಂಡರೆ, ಎರಡನೇ ಭಾಗದಲ್ಲಿ ಮತ್ತೊಂದು ರೀತಿ ಕಾಣಿಸುತ್ತಾರಂತೆ. ಈಗ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಎರಡನೇ ಭಾಗದ ಚಿತ್ರೀಕರಣದ ಸ್ಟಿಲ್ ಎನ್ನಲಾಗುತ್ತಿದೆ. ಮೊದಲ ಹಂತದ ಶೂಟಿಂಗ್ ಜನವರಿಯಲ್ಲಿ ಮುಗಿದಿತ್ತು. ನಂತರ ಎರಡು ತಿಂಗಳು ಕಾಲಾವಕಾಶ ತಗೆದುಕೊಂಡು ತೂಕ ಹೆಚ್ಚಿಸಿಕೊಂಡು ಮತ್ತೊಂದು ಹಂತದ ಶೂಟಿಂಗ್ ನಲ್ಲಿ ಅವರು ಪಾಲ್ಗೊಂಡಿದ್ದರಂತೆ.