Tag: ಸಪ್ತಸಾಗರದಾಚೆ ಎಲ್ಲೋ ಸಿನಿಮಾ

  • ಸಿಂಪಲ್ ಸ್ಟಾರ್ ಮದುವೆ ಯಾವಾಗ? ರಕ್ಷಿತ್ ಶೆಟ್ಟಿ ಸ್ಪಷ್ಟನೆ

    ಸಿಂಪಲ್ ಸ್ಟಾರ್ ಮದುವೆ ಯಾವಾಗ? ರಕ್ಷಿತ್ ಶೆಟ್ಟಿ ಸ್ಪಷ್ಟನೆ

    ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ (Saptasagaradacche Yello) ಸಿನಿಮಾ ಈಗ ತೆಲುಗು ವರ್ಷನ್‌ನಲ್ಲಿ ರಿಲೀಸ್ ಆಗಿದೆ. ಇದರ ಪ್ರಚಾರ ಕಾರ್ಯದಲ್ಲಿ ರಕ್ಷಿತ್ ಶೆಟ್ಟಿ & ಟೀಮ್ ಬ್ಯುಸಿಯಾಗಿದೆ. ಇದೀಗ ಸಂದರ್ಶನವೊಂದರಲ್ಲಿ, ರಕ್ಷಿತ್ ಮದುವೆ ಬಗ್ಗೆ ಕೇಳಲಾಗಿದೆ. ಈ ಬಗ್ಗೆ ನಟ ರಿಯಾಕ್ಟ್ ಮಾಡಿದ್ದಾರೆ.

    ತೆಲುಗಿನ ‘ಸಪ್ತಸಾಗರಲು ದಾಟಿ’ ಸಿನಿಮಾ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಈ ವೇಳೆ, ರಕ್ಷಿತ್‌ಗೆ ಮದುವೆ (Wedding) ಬಗ್ಗೆ ಪ್ರಶ್ನೆ ಎದುರಾಗಿದೆ. ನಿಮ್ಮ ಬಗ್ಗೆ ಅತೀ ಹೆಚ್ಚು ಗೂಗಲ್ ಆಗಿರುವ ಪ್ರಶ್ನೆ ಅಂದರೆ ನಿಮ್ಮ ಮದುವೆ ಬಗ್ಗೆ. ನಿಮ್ಮ ಮದುವೆ ಯಾವಾಗ? ಎಂದು ಪ್ರಶ್ನೆ ಮಾಡಿದ್ದಾರೆ. ಖಂಡಿತವಾಗಿಯೂ ನಾನು ಮದುವೆ ಆಗುತ್ತೇನೆಂದು ಗೂಗಲ್‌ಗೆ ಗೊತ್ತಾಗುತ್ತೆ ಎಂದು ರಕ್ಷಿತ್ ಶೆಟ್ಟಿ ನಗುತ್ತಲೇ ಉತ್ತರಿಸಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡ್ತೀನಿ ಎಂದಿದ್ದಾರೆ. ಇದನ್ನೂ ಓದಿ:ಕಂಗನಾ ಅನಾರೋಗ್ಯ: 12 ತಿಂಗಳಲ್ಲಿ ಬಂದ ಕಾಯಿಲೆಗಳೆಷ್ಟು?

    ಸ್ಯಾಂಡಲ್‌ವುಡ್‌ನಲ್ಲಿ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಕನ್ನಡ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ರಕ್ಷಿತ್ ಶೆಟ್ಟಿ- ರುಕ್ಮಿಣಿ ವಸಂತ್ (Rukmini Vasanth) ಜೋಡಿ ಅಭಿಮಾನಿಗಳನ್ನ ಮೋಡಿ ಮಾಡಿದೆ.

    ಹಾಗಾಗಿ ಇದೀಗ ತೆಲುಗಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ‘ಸಪ್ತಸಾಗರಲು ದಾಟಿ’ ಎಂಬ ಟೈಟಲ್ ಮೂಲಕ ಟಾಲಿವುಡ್‌ನಲ್ಲಿ ಮೋಡಿ ಮಾಡಲು ಸಜ್ಜಾಗಿದೆ. ಇಂದು (ಸೆ.22) ಸಿನಿಮಾ ತೆರೆಕಂಡಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಾಗರದೂರಲ್ಲಿ ಸಪ್ತಸಾಗರ ಮೂವಿ ಟೀಂ- ಅಲಂಕಾರ್ ಥಿಯೇಟರ್‌ಗೆ ರಕ್ಷಿತ್ ಶೆಟ್ಟಿ

    ಸಾಗರದೂರಲ್ಲಿ ಸಪ್ತಸಾಗರ ಮೂವಿ ಟೀಂ- ಅಲಂಕಾರ್ ಥಿಯೇಟರ್‌ಗೆ ರಕ್ಷಿತ್ ಶೆಟ್ಟಿ

    ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ (Rakshit Shetty) ‘ಸಪ್ತಸಾಗರದಾಚೆ ಎಲ್ಲೋ’ (Sapta Sagaradacche Yello) ಸಿನಿಮಾ ಯಶಸ್ಸಿನ ಓಡಾಟದಲ್ಲಿದ್ದಾರೆ. ರಕ್ಷಿತ್, ಸದ್ಯ ಚಿತ್ರತಂಡದ ಜೊತೆ ಹುಟ್ಟೂರು ಉಡುಪಿಗೆ ಭೇಟಿ ನೀಡಿ, ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾರೆ. ಕೃಷ್ಣನೂರಿನಲ್ಲಿ ಅಷ್ಟಮಿ ಸಂಭ್ರಮ ಜೋರಾಗಿದ್ದು, ಜೊತೆ ಜೊತೆಗೆ ಚಿತ್ರದ ಸಕ್ಸಸ್ ಟೂರ್ ಕೂಡ ಮಾಡುತ್ತಿದ್ದಾರೆ. ಇದನ್ನೂ ಓದಿ:ಆ್ಯಕ್ಷನ್ ಪ್ರಿನ್ಸ್ ಬರ್ತ್‌ಡೇಯಂದು ರಿಲೀಸ್ ಆಗಲಿದೆ ಚಿರು ಸರ್ಜಾ ನಟನೆಯ ಕೊನೆಯ ಸಿನಿಮಾ

    ಅಲಂಕಾರ ಚಿತ್ರಮಂದಿರಕ್ಕೆ ಬಂದ ರಕ್ಷಿತ್ ಶೆಟ್ಟಿ, ಅಭಿಮಾನಿಗಳತ್ತ ಕೈಬೀಸಿ ಕೃಷ್ಣಜನ್ಮಾಷ್ಟಮಿಯ ಶುಭಾಶಯ ಹೇಳಿದರು. ರಾಜ್ಯಾದ್ಯಂತ ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಥಿಯೇಟರ್‌ಗೆ ಬಂದು ಚಿತ್ರ ನೋಡಿ ಎಂದರು.

    ‘ಸಪ್ತಸಾಗರದಾಚೆ ಎಲ್ಲೋ’ ಎರಡನೇ ಭಾಗ ಸಿದ್ದವಾಗಿದ್ದು, ಅಕ್ಟೋಬರ್ 10ಕ್ಕೆ ರಿಲೀಸ್ ಆಗಲಿದೆ. ಅದಕ್ಕೂ ಸಪೋರ್ಟ್ ಮಾಡಿ ಎಂದು ಕೇಳಿಕೊಂಡರು. ರಕ್ಷಿತ್ ಶೆಟ್ಟಿ ಅಭಿಮಾನಿಗಳು (Fans) ಚಿತ್ರದ ಪೋಸ್ಟರ್ ಮಾದರಿಯ ಕಲಾಕೃತಿಯನ್ನು ನೀಡಿದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Exclusive:’ಟೋಬಿ’ ಸಿನಿಮಾದ ಇಂಟ್ರೆಸ್ಟಿಂಗ್‌ ವಿಚಾರ ಬಿಚ್ಚಿಟ್ಟ ನಾಯಕಿ ಚೈತ್ರಾ ಆಚಾರ್

    Exclusive:’ಟೋಬಿ’ ಸಿನಿಮಾದ ಇಂಟ್ರೆಸ್ಟಿಂಗ್‌ ವಿಚಾರ ಬಿಚ್ಚಿಟ್ಟ ನಾಯಕಿ ಚೈತ್ರಾ ಆಚಾರ್

    ಸ್ಯಾಂಡಲ್‌ವುಡ್‌ನ (Sandalwood) ಕೃಷ್ಣ ಸುಂದರಿ ಚೈತ್ರಾ ಆಚಾರ್ (Chaithra Achar) ಅವರು ಸದ್ಯ ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ರಾಜ್ ಬಿ ಶೆಟ್ಟಿ (Raj B Shetty) ನಟನೆಯ ಟೋಬಿ ಸಿನಿಮಾಗೆ ನಾಯಕಿಯಾಗಿದ್ದು ಹೇಗೆ.? ಅವರ ಪಾತ್ರ ಹೇಗಿದೆ, ಸಿನಿಮಾದಲ್ಲಿ ನಟಿಸಿದ ಅನುಭವ ಹೇಗಿತ್ತು ಎಂಬುದರ ಬಗ್ಗೆ ಪಬ್ಲಿಕ್ ಟಿವಿ ಡಿಜಿಟಲ್‌ಗೆ ನಟಿ ಚೈತ್ರಾ ಅವರು ಮಾತನಾಡಿದ್ದಾರೆ.

    ಮಹಿರ, ಗಿಲ್ಕಿ, ತಲೆದಂಡ ಸಿನಿಮಾಗಳಲ್ಲಿ ನಟಿಸಿರುವ ಪ್ರತಿಭಾನ್ವಿತ ನಟಿ ಚೈತ್ರಾ ಆಚಾರ್ ಅವರು ಸದ್ಯ ‘ಟೋಬಿ’ (Toby) ಚಿತ್ರಕ್ಕೆ ನಾಯಕಿಯಾಗಿದ್ದು ಹೇಗೆ.? ರಾಜ್ ಬಿ ಶೆಟ್ಟಿ ಅವರ ಜೊತೆ ನಟಿಸಿದ ಅನುಭವ ಹೇಗಿತ್ತು ಎಂದು ನಟಿ ಮುಕ್ತವಾಗಿ ಮಾತನಾಡಿದ್ದಾರೆ.

    ‘ಮಹಿರ’ (Mahira) ಸೆಟ್‌ನಲ್ಲಿ ನಾನು ಮೊದಲು ರಾಜ್ ಬಿ ಶೆಟ್ಟಿ ಅವರನ್ನ ಭೇಟಿಯಾಗಿದ್ದು, ಅದು ಬಿಟ್ಟರೇ ಸಿನಿಮಾ ಬಗ್ಗೆ ಯಾವುದೇ ಮಾತುಕತೆ ಇರಲಿಲ್ಲ. ಒಂದು ದಿನ ರಾಜ್ ಅವರು ಕತೆ ಮಾಡಿ, ಕಥೆ ಹೀಗಿದೆ ಈ ಪಾತ್ರ ನೀವೇ ಮಾಡಬೇಕು ಅಂದಾಗ ಖುಷಿಯಾಯ್ತು. ರಾಜ್ ಬಿ ಶೆಟ್ಟಿ ಅವರ ಸಿನಿಮಾವನ್ನ ಮಾಸ್ ಕಮರ್ಷಿಯಲ್ ಆಗಿ ನೋಡಬೇಕು ಎಂದು ಆಸೆಪಟ್ಟವರಿಗೆ ಟೋಬಿ ಸಿನಿಮಾ ಇಷ್ಟ ಆಗೋದ್ರಲ್ಲಿ ಎರಡು ಮಾತಿಲ್ಲ. ‘ಗರುಡ ಗಮನ ವೃಷಭ ವಾಹನ’ ಸಿನಿಮಾಗಿಂತ ‘ಟೋಬಿ’ ಭಿನ್ನವಾಗಿದೆ ಮೂಡಿ ಬಂದಿದೆ. ಒಂದೇ ಸಿನಿಮಾದಲ್ಲಿ ಎಲ್ಲಾ ರೀತಿಯ ಅಭಿರುಚಿ ಇಷ್ಟಪಡುಂತಹ ಎಲಿಮೆಂಟ್‌ ಇದೆ. ಈ ಚಿತ್ರ ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ ಎಂಬ ನಂಬಿಕೆಯಿದೆ ಎಂದು ನಟಿ ಹೇಳಿದ್ದಾರೆ.

    ನನ್ನ ಪಾತ್ರ ಬಗ್ಗೆ ಹೇಳಬೇಕು ಅಂದರೆ ಇದುವರೆಗೂ ಮಾಡಿರದ ಪಾತ್ರದಲ್ಲಿ ಡಿಫರೆಂಟ್ ರೋಲ್‌ನಲ್ಲಿ ನಾನು ನಟಿಸಿದ್ದೀನಿ. ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಮಾಡಬೇಕಾದರೆ ‘ಟೋಬಿ’ ಪಾತ್ರಕ್ಕೆ ಚಾನ್ಸ್ ಸಿಕ್ಕಿತ್ತು. ‘ಟೋಬಿ’ ಚಿತ್ರದಲ್ಲಿ ನನ್ನದು ಗಟ್ಟಿ ಪಾತ್ರ, ಬೇರೇ ಅವರ ಮಾತನ್ನ ಕೇಳದೇ ತನ್ನ ಅನಿಸಿದನ್ನ ಮಾಡೋ ಭಿನ್ನ ಪಾತ್ರ ನನ್ನದು. ಮಾಸ್ ಇಷ್ಟಪಡುವವರಿಗೆ, ಲವ್ ಸ್ಟೋರಿ ಇದ್ರೆ ಚೆಂದ ಅನ್ನೋರಿಗೆ ‘ಟೋಬಿ’ ಸಿನಿಮಾ ಎಲ್ಲಾ ರೀತಿಯಿಂದ ಮನರಂಜನೆ ಕೊಡುತ್ತೆ ಎಂದು ನಟಿ ಚೈತ್ರಾ ಮಾತನಾಡಿದ್ದಾರೆ.

    ರಾಜ್ ಬಿ ಶೆಟ್ಟಿ ಅವರು ಟ್ಯಾಲೆಂಟೆಡ್ ನಟ, ನಿರ್ದೇಶಕ ಅವರು ತುಂಬಾ ಹಂಬಲ್ ಆಗಿರುವಂತಹ ಒಳ್ಳೆಯ ವ್ಯಕ್ತಿ. ಪ್ರತಿ ಸೀನ್‌ನಲ್ಲೂ ನಾವು ಹೀಗೆ ಮಾಡಿದ್ರೆ ಚೆನ್ನಾಗಿರುತ್ತೆ ಅಂತಾ ನನ್ನ ಜೊತೆ ಮಾತನಾಡಿ, ಒಂದೊಳ್ಳೆಯ ಸಿನಿಮಾ ಮೂಡಿ ಬರಲು ಕಾರಣವಾಗಿದೆ. ಅವರಿಂದ ಬಹಳ ಕಲಿತೆ ಅಂತಾ ನಟಿ ಖುಷಿಯಿಂದ ಮಾತನಾಡಿದ್ದಾರೆ.

    ‘ಟೋಬಿ’ ಅನ್ನೋದು ರಾಜ್ ಬಿ ಶೆಟ್ಟಿ ಅವರ ಪಾತ್ರದ ಹೆಸರಾಗಿದ್ದು, ಸಿನಿಮಾದ ಶೂಟಿಂಗ್‌ ಪೂರ್ಣಗೊಂಡಿದೆ. ಇದೇ ಆಗಸ್ಟ್ 25ಕ್ಕೆ ತೆರೆಗೆ ಬರೋದ್ದಕ್ಕೆ ರೆಡಿಯಾಗಿದೆ. ಮಾರಿ ಮಾರಿ ಮಾರಿಗೆ ದಾರಿ ಅಂತಾ ಚಿತ್ರಕ್ಕೆ ಅಡಿಬರಹ ನೀಡಿದ್ದಾರೆ. ಸದ್ಯ ಚಿತ್ರದ ಟೈಟಲ್, ಪೋಸ್ಟರ್ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇದನ್ನೂ ಓದಿ:ಲವ್ ಮೀ ಆರ್ ಹೇಟ್ ಮೀ ಚಿತ್ರಕ್ಕೆ ಚಿತ್ರೀಕರಣ ಮುಕ್ತಾಯ

    ನಟಿ ಚೈತ್ರಾ ಆಚಾರ್ ಅವರು ಬ್ಲಿಂಕ್, ಸಪ್ತಸಾಗರದಾಚೆ ಎಲ್ಲೋ, ಹ್ಯಾಪಿ ಬರ್ತ್‌ಡೇ ಟು ಮಿ, ಟೋಬಿ ಸೇರಿದಂತೆ ಹಲವು ಚಿತ್ರಗಳು ಈ ವರ್ಷ ತೆರೆಗೆ ಅಪ್ಪಳಿಸೋದ್ದಕ್ಕೆ ರೆಡಿಯಿದೆ. ಒಂದಕ್ಕಿಂತ ಒಂದು ಭಿನ್ನ ಪಾತ್ರಗಳಲ್ಲಿ ಚೈತ್ರಾ ಅವರು ಜೀವ ತುಂಬಿದ್ದಾರೆ.

    ಶೃತಿ ರಿಪ್ಪನ್‌ಪೇಟೆ, ಪಬ್ಲಿಕ್‌ ಟಿವಿ ಡಿಜಿಟಲ್‌