Tag: ಸಪ್ತಮಿ

  • ಕರಾವಳಿ ಸೊಗಡಿನ ‘ಕಾಂತಾರ’ ಟ್ರೈಲರ್: ಕಿಶೋರ್ ಮತ್ತು ರಿಷಭ್ ಜುಗಲ್ ಬಂದಿಗೆ ಫ್ಯಾನ್ಸ್ ಖುಷ್

    ಕರಾವಳಿ ಸೊಗಡಿನ ‘ಕಾಂತಾರ’ ಟ್ರೈಲರ್: ಕಿಶೋರ್ ಮತ್ತು ರಿಷಭ್ ಜುಗಲ್ ಬಂದಿಗೆ ಫ್ಯಾನ್ಸ್ ಖುಷ್

    ರಿಷಭ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಬಿಡುಗಡೆ ಆದ ಕೆಲವೇ ಗಂಟೆಗಳಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿ ಮಾಡಿದೆ. ಟ್ರೈಲರ್ ತುಂಬಾ ಕರಾವಳಿಯ ಸೊಗಡೇ ತುಂಬಿಕೊಂಡಿದ್ದು, ಕಾಡು ಮತ್ತು ನಾಡು ಜನರ ಸಂಘರ್ಷವೇ ಸಿನಿಮಾದ ಕಥಾವಸ್ತು ಎನ್ನುವುದು ಸ್ಪಷ್ಟವಾಗುತ್ತದೆ.

    ಕರಾವಳಿಯ ಭಾಗವೇ ಆಗಿರುವ ಕಾಡು, ಭೂತಕೋಲ, ಕಂಬಳ ಕ್ರೀಡೆ, ಹಲವು ಸಂಪ್ರದಾಯಗಳು, ಆಚಾರ ವಿಚಾರಗಳನ್ನು ಹದವಾಗಿ ಬೆರೆಸಿಕೊಂಡು ಟ್ರೈಲರ್ ರೆಡಿ ಮಾಡಿದ್ದಾರೆ ನಿರ್ದೇಶಕರು. ಹಾಗಾಗಿ ಸಿನಿಮಾ ನೋಡುವಂತೆ ಪ್ರೇರೇಪಿಸುತ್ತದೆ ಟ್ರೈಲರ್. ಕಿಶೋರ್ ಈ ಸಿನಿಮಾದಲ್ಲಿ ಅರಣ್ಯಾಧಿಕಾರಿಯಾಗಿ ನಟಿಸಿದ್ದು, ರಿಷಭ್ ನಾನಾ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅರಣ್ಯ ಉತ್ಪನ್ನಗಳ ಕಳುವು ಸೇರಿದಂತೆ ಹತ್ತು ಹಲವು ವಿಚಾರಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಜಯಶ್ರೀ ಆರಾಧ್ಯ

    ಟ್ರೈಲರ್ ಬಗ್ಗೆ ಹಲವು ರೀತಿಯಲ್ಲಿ ನೋಡುಗರು ಪ್ರತಿಕ್ರಿಯಿಸಿದ್ದು, ಹಿನ್ನೆಲೆ ಸಂಗೀತದ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿದೆ. ರಿಷಭ್ ಅವರ ಹಿಂದಿನ ಸಿನಿಮಾಗಳಿಗಿಂತಲೂ ಇದು ಹೆಚ್ಚು ಕುತೂಹಲ ಮೂಡಿಸಿದೆ ಎಂದಿದ್ದಾರೆ ಕೆಲವರು. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಸಪ್ತಮಿಗೌಡ ನಾಯಕಿಯಾಗಿ ನಟಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನವರಾತ್ರಿ ಸಂಭ್ರಮ: ಕಾಜೊಲ್ ಫುಲ್ ಮಿಂಚಿಂಗ್

    ನವರಾತ್ರಿ ಸಂಭ್ರಮ: ಕಾಜೊಲ್ ಫುಲ್ ಮಿಂಚಿಂಗ್

    ಮುಂಬೈ: ನವರಾತ್ರಿ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಕಾಜೊಲ್ ಮುಂಬೈನಲ್ಲಿ ದುರ್ಗಾ ಪೂಜೆಯನ್ನು ಕುಟುಂಬದೊಂದಿಗೆ ಮಾಡಿದ್ದು, ಫುಲ್ ಮಿಂಚಿದ್ದಾರೆ.

    ಕಾಜೊಲ್ ಮುಂಬೈನಲ್ಲಿ ಕುಟುಂಬದೊಂದಿಗೆ ದುರ್ಗಾ ಪೂಜೆಯಲ್ಲಿ ಪಾಲ್ಗೊಂಡಿದ್ದು, ಈ ವೇಳೆ ಸೋದರ ಸಂಬಂಧಿ, ನಟಿ ಶರ್ಬಾನಿ ಮುಖರ್ಜಿ ಅವರನ್ನು ಭೇಟಿಯಾಗಿದ್ದಾರೆ. ಪೂಜೆಯಲ್ಲಿ, ಕಾಜೋಲ್ ಫುಲ್ ದೇಸಿ ಲುಕ್ ನಲ್ಲಿ ಮಿಂಚಿದ್ದಾರೆ. ಕಾಜೊಲ್ ಗುಲಾಬಿ ಬಣ್ಣದ ಸೀರೆಯನ್ನು ಉಟ್ಟಿದ್ದು, ಸಾಂಪ್ರದಾಯಿಕ ಆಭರಣ ಮತ್ತು ಬಿಂದಿಯೊಂದಿಗೆ ದೇಸಿ ಹುಡುಗಿಯಾಗಿ ಫುಲ್ ಮಿಂಚಿದ್ದಾರೆ. ಇದನ್ನೂ ಓದಿ: ಲವ್ ಸ್ಟೋರಿ ಬಹಿರಂಗ ಪಡಿಸಿದ ರಕುಲ್ ಪ್ರೀತಿ ಸಿಂಗ್

     

    View this post on Instagram

     

    A post shared by Kajol Devgan (@kajol)

    ಶರ್ಬನಿ ಮುಖರ್ಜಿ ಸಹ ಸಖತ್ ಆಗಿ ಕಾಣಿಸಿಕೊಂಡಿದ್ದು, ಹಳದಿ ಸೀರೆ ಮತ್ತು ರೆಟ್ರೊ ಬ್ಲೌಸ್ ಹಾಕಿಕೊಂಡಿದ್ದರು. ಈ ವಿಶೇಷ ಫೋಟೋವನ್ನು ಕಾಜೊಲ್ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

    ಕಾಜೊಲ್ ಹಲವು ವರ್ಷಗಳ ನಂತರ ಓಟಿಟಿಯಲ್ಲಿ ‘ತ್ರಿಭಂಗ’ ಚಿತ್ರದಲ್ಲಿ ಕಾಣಿಸಿಕೊಂಡರು. ಇದು ಕಾಜೊಲ್ ಮೊದಲ ಓಟಿಟಿ ಸಿನಿಮಾವಾಗಿತ್ತು. ಈ ಚಿತ್ರವನ್ನು ಪತಿ ಅಜಯ್ ದೇವಗನ್ ನಿರ್ಮಿಸಿದ್ದು, ‘ತ್ರಿಭಂಗ’ವನ್ನು ರೇಣುಕಾ ಸಹಾನೆ ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ತನ್ವಿ ಅಜ್ಮಿ ಮತ್ತು ಮಿಥಿಲಾ ಪಾಲ್ಕರ್ ಕೂಡ ನಟಿಸಿದ್ದರು. ಕಾಜೊಲ್ ಕಳೆದ ವರ್ಷ ‘ದೇವಿ’ ಎಂಬ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ವ್ಯಕ್ತಿ ಅಲ್ಲ ದೊಡ್ಡ ಶಕ್ತಿ: ಶ್ರೀರಾಮುಲು

    ಪ್ರಸ್ತುತ ಕಾಜೊಲ್ ರೇವತಿ ಆಕ್ಷನ್ ಕಟ್ ಹೇಳುತ್ತಿರುವ ‘ದಿ ಲಾಸ್ಟ್ ಹರ್ರೆ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ಕಾಜೊಲ್ ಇನ್‍ಸ್ಟಾಗ್ರಾಮ್ ನಲ್ಲಿ, ರೇವತಿಯೊಂದಿಗೆ ನನ್ನ ಮುಂದಿನ ಚಿತ್ರವನ್ನು ಘೋಷಿಸಲು ತುಂಬಾ ಸಂತೋಷವಾಗಿದೆ ಎಂದು ಬರೆದು ಪೋಸ್ಟ್ ಮಾಡಿದ್ದರು.