Tag: ಸನ್ ಪಿಕ್ಚರ್ಸ್

  • ‘ಬೀಸ್ಟ್’ ಸಿನಿಮಾ ವಿಶೇಷ ಫೋಟೋ ಶೇರ್ ಮಾಡಿದ ಚಿತ್ರತಂಡ

    ‘ಬೀಸ್ಟ್’ ಸಿನಿಮಾ ವಿಶೇಷ ಫೋಟೋ ಶೇರ್ ಮಾಡಿದ ಚಿತ್ರತಂಡ

    ಚೆನ್ನೈ: ದಕ್ಷಿಣ ಭಾರತ ಸೂಪರ್ ಸ್ಟಾರ್ ದಳಪತಿ ವಿಜಯ್ ಮತ್ತು ನಿರ್ದೇಶಕ ನೆಲ್ಸನ್ ದಿಲೀಪ್‍ಕುಮಾರ್ ಅಪ್ಪಿಕೊಂಡ ಫೋಟೋವನ್ನು ಚಿತ್ರತಂಡ ಶೇರ್ ಮಾಡಿದ್ದು, ಈ ಫೋಟೋ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

    ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾದ ಕೊನೆಯ ದಿನದ ಶೂಟಿಂಗ್ ನಿನ್ನೆ ಚೆನ್ನೈನ ಗೋಕುಲಂ ಸ್ಟುಡಿಯೋದಲ್ಲಿ ನಡೆಯಿತು. ಈ ವೇಳೆ ಫುಲ್ ಖುಷ್ ಆದ ದಳಪತಿ ಮತ್ತು ನಿರ್ದೇಶಕ ನೆಲ್ಸನ್ ದಿಲೀಪ್‍ಕುಮಾರ್ ಅಪ್ಪಿಕೊಂಡಿದ್ದಾರೆ. ಈ ಫೋಟೋ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದು, ನಿರ್ಮಾಣ ಸಂಸ್ಥೆಯಾದ ಸನ್ ಪಿಕ್ಚರ್ಸ್ ಆ ಫೋಟೋವನ್ನು ಟ್ವಟ್ಟರ್ ನಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: ಐಟಂ ಸಾಂಗ್ ಫುಲ್ ಕ್ಲಿಕ್ -‘ಪುಷ್ಪ’ದಲ್ಲಿ ಸಮಂತಾ ಫುಲ್ ಮಿಂಚಿಂಗ್

    ಬೀಸ್ಟ್ ಶೂಟಿಂಗ್‍ನ ಕೊನೆಯ ದಿನದಂದು ಗೋಕುಲಂ ಸ್ಟುಡಿಯೋದಲ್ಲಿ ಪೆಪ್ಪಿ ಹಾಡನ್ನು ಚಿತ್ರೀಕರಿಸಲಾಯಿತು. ಈ ವೇಳೆ ನೆಲ್ಸನ್ ದಿಲೀಪ್‍ಕುಮಾರ್ ಅವರನ್ನು ವಿಜಯ್ ಅಪ್ಪಿಕೊಂಡಿದ್ದಾರೆ. ಆ ಫೋಟೋವನ್ನು ಸನ್ ಪಿಕ್ಚರ್ಸ್ ಟ್ವಿಟ್ಟರ್ ನಲ್ಲಿ, ಕೊನೆಯ ದಿನದ ಚಿತ್ರೀಕರಣದ ವಿಶೇಷ ಕ್ಷಣ ಇಲ್ಲಿದೆ ಎಂದು ಬರೆದು ಟ್ವೀಟ್ ಮಾಡಿದೆ. ಈ ಫೋಟೋಗೆ ವಿಜಯ್ ಮತ್ತು ದಿಲೀಪ್‍ಕುಮಾರ್ ಅವರನ್ನು ಟ್ಯಾಗ್ ಮಾಡಿದೆ.

    ಕಳೆದ ತಿಂಗಳು, ‘ಬೀಸ್ಟ್’ ಸಿನಿಮಾದ 100ನೇ ದಿನದ ಚಿತ್ರೀಕರಣ ಪೂರ್ಣಕೊಂಡ ಹಿನ್ನೆಲೆ ಸಿನಿಮಾದ ವಿಶೇಷ ಫೋಟೋಗಳನ್ನು ಪ್ರೊಡಕ್ಷನ್ ಹೌಸ್ ಹಂಚಿಕೊಂಡಿತ್ತು. ಈಗ ಚಿತ್ರೀಕರಣ ಪೂರ್ಣಗೊಂಡಿದ್ದು, ಸ್ವಲ್ಪ ದಿನಗಳಲ್ಲೇ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಲಿದೆ.

    ತಮಿಳಿಗೆ ಮತ್ತೆ ಪೂಜಾ!
    ‘ಬೀಸ್ಟ್’ ಚಿತ್ರದ ಮೂಲಕ ತಮಿಳಿಗೆ ಪೂಜಾ ಹೆಗ್ಡೆ ಕಾಮ್‍ಬ್ಯಾಕ್ ಮಾಡಿದ್ದು, ಡಿಸೆಂಬರ್ 10 ರಂದು ತನ್ನ ಭಾಗದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಶೂಟಿಂಗ್ ವೇಳೆ ತಮ್ಮ ಅನುಭವನ್ನು ಹಂಚಿಕೊಂಡ ವೀಡಿಯೋವನ್ನು ಸನ್ ಪಿಕ್ಚರ್ಸ್ ಟ್ವಿಟ್ಟರ್ ಹಂಚಿಕೊಂಡಿದೆ. ಇದನ್ನೂ ಓದಿ: ಅರಿಶಿನ ಶಾಸ್ತ್ರ ಸಂಭ್ರಮದ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್ 

    ಬೀಸ್ಟ್ ಸಿನಿಮಾದಲ್ಲಿ ಕೆಲಸ ಮಾಡಿದ್ದು, ತುಂಬಾ ಸಂತೋಷವಾಗುತ್ತಿದೆ. ಸೆಟ್‍ನಲ್ಲಿಯೂ ಸಖತ್ ಖುಷಿ ಇತ್ತು. ಈ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ತುಂಬಾ ನಕ್ಕಿದ್ದೇವೆ. ಈ ಸಿನಿಮಾ ನೋಡಿ ನೀವು ಕೂಡ ನಗುತ್ತೀರಿ ಎಂದು ನಾನು ಭಾವಿಸುತ್ತೇನೆ. ಸಿನಿಮಾದ ಕಥೆ ವಿಶಿಷ್ಟವಾಗಿ ಮೂಡಿಬಂದಿದೆ. ಚಿತ್ರದ ಶೂಟಿಂಗ್ ಸಮಯ ನನಗೆ ರಜೆಗೆ ಬಂದಿದ್ದೇನೆ ಅನಿಸುತ್ತಿತ್ತು. ಇವತ್ತು ಈ ಸಿನಿಮಾದ ಚಿತ್ರೀಕರಣದಲ್ಲಿ ನನ್ನ ಕೊನೆಯ ದಿನವಾಗಿದೆ. ನನಗೆ ತುಂಬಾ ದುಃಖವಾಗುತ್ತಿದೆ. ಈ ಸಿನಿಮಾ ಅದಷ್ಟು ಬೇಗ ನಿಮ್ಮ ಮುಂದೆ ಬರುತ್ತೆ. ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ನೋಡಿ ಎಂದು ಹೇಳಿದರು.

    ನೆಲ್ಸನ್ ದಿಲೀಪ್‍ಕುಮಾರ್ ನಿರ್ದೇಶನದ ‘ಬೀಸ್ಟ್’ ಚಿತ್ರದಲ್ಲಿ ದಳಪತಿ ವಿಜಯ್, ಪೂಜಾ ಹೆಗ್ಡೆ ಮತ್ತು ನಿರ್ದೇಶಕ ಸೆಲ್ವರಾಘವನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು 2022 ರ ಬೇಸಿಗೆಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.