Tag: ಸನ್ ಟ್ಯಾನ್

  • ಸನ್ ಟ್ಯಾನ್ ನಿವಾರಣೆಗೆ ಇಲ್ಲಿವೆ 6 ಸುಲಭ ಟಿಪ್ಸ್

    ಸನ್ ಟ್ಯಾನ್ ನಿವಾರಣೆಗೆ ಇಲ್ಲಿವೆ 6 ಸುಲಭ ಟಿಪ್ಸ್

    ಬೇಸಿಗೆಯಲ್ಲಿ ಎರಡು ನಿಮಿಷ ಬಿಸಿಲಿನಲ್ಲಿ ಓಡಾಡಿದ್ರೂ ಸಾಕು ಚರ್ಮಕ್ಕೆ ಹಾನಿಯಾಗುತ್ತೆ. ಹಾಗಂತ ಹೊರಗಡೆ ಓಡಾಡದೆ ಇರೋಕಾಗಲ್ಲ. ಬಿಸಿಲಲ್ಲಿ ಸುತ್ತಾಡಿ ಚರ್ಮ ಕಪ್ಪಾಯಿತು ಅಂತ ಬ್ಲೀಚ್ ಬಳಸಿದ್ರೆ ತೊಂದರೆಯೇ ಹೆಚ್ಚು. ಹೀಗಾಗಿ ಮನೆಯಲ್ಲೇ ಸಿಗೋ ಕೆಲವು ಸಾಮಗ್ರಿಗಳನ್ನ ಬಳಸಿ ಹೇಗೆ ಸನ್ ಟ್ಯಾನ್ ನಿವಾರಿಸಿಕೊಳ್ಳಬಹುದು ಅನ್ನೋದಕ್ಕೆ ಇಲ್ಲಿದೆ 6 ಸುಲಭ ಟಿಪ್ಸ್

    1. ನಿಂಬೆ ರಸ
    ನಿಂಬೆಹಣ್ಣನ್ನು ಕಟ್ ಮಾಡಿ ಟ್ಯಾನ್ ಆಗಿರುವ ಭಾಗದ ಮೇಲೆ ಉಜ್ಜಿ. 5-10 ನಿಮಿಷದ ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈ ರೀತಿ 2 ರಿಂದ 3 ವಾರ ಮಾಡಿದರೆ ಕ್ರಮೇಣವಾಗಿ ಸನ್ ಟ್ಯಾನ್ ಕಡಿಮೆಯಾಗುತ್ತದೆ.

    2. ಸೌತೇಕಾಯಿ, ನಿಂಬೆ ರಸ, ರೋಸ್ ವಾಟರ್
    ಒಂದು ಬೌಲ್‍ನಲ್ಲಿ ಸೌತಕಾಯಿಯ ತಿರುಳು, ಒಂದು ಚಮಚ ನಿಂಬೆ ರಸ ಹಾಗೂ ಒಂದು ಚಮಚ ರೋಸ್ ವಾಟರ್ ಹಾಕಿ ಕಲಸಿಕೊಂಡು ಅದನ್ನ ಟ್ಯಾನ್ ಆಗಿರುವ ಭಾಗಗಳಿಗೆ ಹಚ್ಚಿ, 10 ನಿಮಿಷದ ಬಳಿಕ ತೊಳೆಯಿರಿ.

    3. ಕಡಲೆಹಿಟ್ಟು, ಅರಿಶಿಣ
    2 ಚಮಚ ಕಡಲೆಹಿಟ್ಟಿಗೆ ಒಂದು ಚಿಟಿಕೆ ಅರಿಶಿಣ ಬೆರೆಸಿ ಹಾಲು ಅಥವಾ ರೋಸ್ ವಾಟರ್ ಹಾಕಿ ಕಲಸಿಕೊಳ್ಳಿ. ಈ ಮಿಶ್ರಣವನ್ನ ಮುಖ ಕೈ ಕಾಲು ಹಾಗೂ ಟ್ಯಾನ್ ಆದ ಭಾಗಗಳಿಗೆ ಹಚ್ಚಿ 15-20 ನಿಮಿಷದ ಬಳಿಕ ತೊಳೆಯಿರಿ.

    4. ಟೊಮೆಟೋ, ಆಲೋವೆರಾ, ಮೈಸೂರು ಬೇಳೆ
    1 ಚಮಚ ಮೈಸೂರು ಬೇಳೆಯನ್ನ ನೀರಿನಲ್ಲಿ ನೆನೆಸಿಟ್ಟು ನಂತರ ರುಬ್ಬಿಕೊಳ್ಳಿ. (ಮೈಸೂರು ಬೇಳೆ ಕೇಸರಿ ಬಣ್ಣದಲ್ಲಿರುತ್ತದೆ. ಅಂಗಡಿಗಳಲ್ಲಿ ಲಭ್ಯ)
    ರುಬ್ಬಿಕೊಂಡ ನಂತರ ಅದಕ್ಕೆ ಟೊಮೆಟೋ ರಸ ಹಾಗೂ ಆಲೋವೆರಾ (ಲೋಳೆರಸ)ವನ್ನ ಸಮಪ್ರಮಾಣದಲಿ ಬೆರೆಸಿ ಕಲಸಿಕೊಳ್ಳಿ. ಇದನ್ನ ಟ್ಯಾನ್ ಆದ ಭಾಗಗಳಿಗೆ ಹಚ್ಚಿ 30 ನಿಮಿಷದ ಬಳಿಕ ತಣ್ಣೀರಿನಲ್ಲಿ ತೊಳೆಯಿರಿ.

    5. ಆಲೂಗಡ್ಡೆ ರಸ, ನಿಂಬೆ ರಸ, ಅಕ್ಕಿ ಹಿಟ್ಟು
    2 ಚಮಚ ಅಕ್ಕಿಹಿಟ್ಟು, 2 ಚಮಚ ಆಲೂಗಡ್ಡೆ ರಸ ಹಾಗೂ 1 ಚಮಚ ನಿಂಬೆ ರಸವನ್ನ ಮಿಕ್ಸ್ ಮಾಡಿಕೊಂಡು ಟ್ಯಾನ್ ಆದ ಭಾಗಗಳ ಮೇಲೆ ದಪ್ಪ ಪದರದಂತೆ ಹಚ್ಚಿ 30 ನಿಮಿಷಗಳ ಬಳಿಕ ತೊಳೆಯಿರಿ.

    6. ಪರಂಗಿ ಹಣ್ಣು, ಜೇನುತುಪ್ಪ
    ಅರ್ಧ ಕಪ್‍ನಷ್ಟು ಪಪ್ಪಾಯ ಹಣ್ಣಿನ ಪೇಸ್ಟ್‍ಗೆ 1 ಚಮಚ ಜೇನುತುಪ್ಪ ಮಿಕ್ಸ್ ಮಾಡಿಕೊಳ್ಳಿ. ಇದನ್ನ ಟ್ಯಾನ್ ಆಗಿರುವ ಭಾಗಗಳಿಗೆ ಹಚ್ಚಿ 30 ನಿಮಿಷದ ಬಳಿಕ ತೊಳೆಯಿರಿ.