Tag: ಸನ್ ಗ್ಲಾಸ್

  • ಒಳ್ಳೆಯ ಬಟ್ಟೆ,‌ ದುಬಾರಿ ಸನ್‌ ಗ್ಲಾಸ್ ಧರಿಸಿದ್ದಕ್ಕೆ ದಲಿತ ವ್ಯಕ್ತಿಯ ಮೇಲೆ ಹಲ್ಲೆ- 7 ಮಂದಿ ವಿರುದ್ಧ FIR

    ಒಳ್ಳೆಯ ಬಟ್ಟೆ,‌ ದುಬಾರಿ ಸನ್‌ ಗ್ಲಾಸ್ ಧರಿಸಿದ್ದಕ್ಕೆ ದಲಿತ ವ್ಯಕ್ತಿಯ ಮೇಲೆ ಹಲ್ಲೆ- 7 ಮಂದಿ ವಿರುದ್ಧ FIR

    ಗಾಂಧಿನಗರ: ದಲಿತ ವ್ಯಕ್ತಿಯೊಬ್ಬ ಒಳ್ಳೆಯ ಬಟ್ಟೆ ಹಾಗೂ ದುಬಾರಿ ಸನ್‍ಗ್ಲಾಸ್ (Sunglass) ಧರಿಸಿದ್ದ ಎಂಬ ಕಾರಣಕ್ಕೆ ತಂಡವೊಂದು ಹಲ್ಲೆ ಮಾಡಿ ಘಟನೆ ಗುಜರಾತ್‍ನಲ್ಲಿ ನಡೆದಿದೆ.

    ಗುಜರಾತ್‍ (Gujrat) ನ ಬನಸ್ ಕಾಂತ ಜಿಲ್ಲೆಯ ಪಾಲನ್‍ಪುರ ತಾಲೂಕಿನ ಮೋಟಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಿಗರ್ ಶೆಖಾಲಿಯಾ ಹಲ್ಲೆಗೊಳಗಾದ ವ್ಯಕ್ತಿ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಏಳು ಮಂದಿ ಆರೋಪಿಗಳ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ಶಕುನಿ ಪಾತ್ರಧಾರಿ ಗೂಫಿ ಆರೋಗ್ಯ ಸ್ಥಿತಿ ಗಂಭೀರ

    ನಡೆದಿದ್ದೇನು..?: ಮಂಗಳವಾರ ಬೆಳಗ್ಗೆ ಜಿಗರ್ ತಮ್ಮ ಮನೆ ಮುಂದೆ ನಿಂತಿದ್ದರು. ಈ ವೇಳೆ ಓರ್ವ ಆರೋಪಿ ಬಂದು ಇತ್ತೀಚಿನ ದಿನಗಳಲ್ಲಿ ನಿನ್ನದು ಅತಿಯಾಯ್ತು. ಇದೇ ರೀತಿ ಮುಂದುವರಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹೊರಟು ಹೋಗಿದ್ದಾನೆ.

    ಅದೇ ದಿನ ರಾತ್ರಿ ಜಿಗರ್ ಗ್ರಾಮದ ಹೊರಭಾಗದ ದೇವಾಲಯದ ಬಳಿ ನಿಂತಿದ್ದ ವೇಳೆ ಬಂದ 7 ಮಂದಿ ಆರೋಪಿಗಳು ಏಕಾಏಕಿ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ತನ್ನನ್ನು ಯಾಕೆ ಹೊಡೆಯುತ್ತಿದ್ದೀರಾ ಎಂದು ಕೇಳಿದಾಗ ಒಳ್ಳೆಯ ಬಟ್ಟೆ ಹಾಗೂ ಸನ್ ಗ್ಲಾಸ್ ಧರಿಸಿದ್ದಕ್ಕಾಗಿ ಎಂದು ಹೇಳಿ ಮನಬಂದಂತೆ ಥಳಿಸಿದ್ದಾರೆ.

    ಇತ್ತ ಮಗನ ಮೇಲೆ ಹಲ್ಲೆ ನಡೆಯುತ್ತಿರುವ ವಿಚಾರ ತಿಳಿದ ತಾಯಿ ಸ್ಥಳಕ್ಕೆ ದೌಡಾಯಿಸಿ ಹಲ್ಲೆ ಮಾಡದಂತೆ ಮನವಿ ಮಾಡಿದ್ದಾರೆ. ಅಲ್ಲದೆ ಮಗನ ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಆರೋಪಿಗಳು ಜಿಗರ್ ತಾಯಿ ಮೇಲೆಯೂ ಹಲ್ಲೆ ನಡೆಸಿ ಆಕೆಯ ಬಟ್ಟೆಯನ್ನು ಹರಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹೊರಟು ಹೋಗಿದ್ದಾರೆ.

    ಗಾಯಾಳು ತಾಯಿ-ಮಗ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

  • ಮಹಿಳೆಯರಿಗೆ ಬೇಸಿಗೆಯಲ್ಲಿ ಯಾವ ರೀತಿಯ ಸನ್ ಗ್ಲಾಸ್ ಬೆಸ್ಟ್ ಗೊತ್ತಾ?

    ಮಹಿಳೆಯರಿಗೆ ಬೇಸಿಗೆಯಲ್ಲಿ ಯಾವ ರೀತಿಯ ಸನ್ ಗ್ಲಾಸ್ ಬೆಸ್ಟ್ ಗೊತ್ತಾ?

    ಹಿಳೆಯರಿಗೆ ಸನ್ ಗ್ಲಾಸ್‍ಗಳಲ್ಲಿ ಯಾವುದು ಸೂಕ್ತ ಎಂದು ನೋಡಲು ಹೋದರೆ, ಹಲವಾರು ರೀತಿಯ ಸ್ಟೈಲಿಷ್ ಸನ್ ಗ್ಲಾಸ್‍ಗಳಿರುವುದನ್ನು ಕಾಣಬಹುದು. ಅದರಲ್ಲಿಯೂ ಈಗಿನ ಟ್ರೆಂಡ್ಸ್‍ನಲ್ಲಿ ವಿವಿಧ ಆಕಾರದ ಬಹಳಷ್ಟು ಸೈಲಿಷ್ ಹಾಗೂ ಕ್ಲಾಸಿಕ್ ಸನ್ ಗ್ಲಾಸ್‍ಗಳಿದೆ.

    ನೀವೆನಾದರೂ ಪ್ರತಿನಿತ್ಯ ಧರಿಸುವ ಉಡುಪುಗಳಿಗೆ ಕ್ಲಾಸಿಕ್ ಸ್ಟೈಲಿಷ್ ಸನ್ ಗ್ಲಾಸ್ ಹಾಕಿಕೊಳ್ಳಲು ಬಯಸಿದರೆ, ಇದು ಬೇಸಿಗೆಯ ಸಮಯದಲ್ಲಿ ಧರಿಸಲು ಪರ್ಫೆಕ್ಟ್ ಸನ್ ಗ್ಲಾಸ್‍ಗಳೆಂದೇ ಹೇಳಬಹುದು. ರೌಂಡ್ ಫ್ರೆಮ್‍ಗಳಲ್ಲಿಯೇ 70 ಸ್ಟೈಲಿಷ್ ಕಲರ್ ಲೆನ್ಸ್ ಇರುವ ಸನ್ ಗ್ಲಾಸ್‍ಗಳಿದ್ದು, ಅವುಗಳನ್ನು ನೀವು ಬೇಸಿಗೆಯಲ್ಲಿ ಬಳಸಬಹುದು. ಸದ್ಯ ಈ ಕೆಳಗೆ ಬೇಸಿಗೆಯಲ್ಲಿ ಉಪಯೋಗಿಸಬಹುದಾದ ಕೆಲವೊಂದು ಸನ್ ಗ್ಲಾಸ್ ಕುರಿತ ಡೀಟೆಲ್ಸ್ ಇದೆ.

    ಹಳದಿ ಲೆನ್ಸ್‌ನ ಸನ್ ಗ್ಲಾಸ್: ಈ ದೊಡ್ಡ ಗಾತ್ರದ ಸನ್ ಗ್ಲಾಸ್ ಜ್ಯೊಮೆಟ್ರಿಕ್ ಫ್ರೇಮ್‍ನಂತಿದ್ದು, ಇದು ನಿಮ್ಮ ಬಟ್ಟೆಗಳ ಬಣ್ಣಕ್ಕೆ ಬೇಗ ಮ್ಯಾಚ್ ಆಗುತ್ತದೆ. ಈ ಸನ್ ಗ್ಲಾಸ್ ಹಳದಿ ಬಣ್ಣದ ಲೆನ್ಸ್ ಹಾಗೂ ಗೋಲ್ಡನ್ ಕಲರ್ ಫ್ರೇಮ್‍ನನ್ನು ಹೊಂದಿರುತ್ತದೆ. ಇದು ಬೇಸಿಗೆಯಲ್ಲಿ ಎಲ್ಲರ ಗಮನವನ್ನು ಸೆಳೆಯುತ್ತದೆ.

    ಕ್ಯಾಟ್ ಹೈ ಗ್ರೀನ್ ಸನ್ ಗ್ಲಾಸ್: ಕ್ಯಾಟ್ ಹೈ ಸನ್ ಗ್ಲಾಸ್ ಬೇಸಿಗೆ ವೇಳೆ ನಿಮಗೆ ಬೋಲ್ಡ್ ಲುಕ್ ನೀಡುತ್ತದೆ. ಇದು ನೀಲಿ ಬಣ್ಣದ ಫ್ರೇಮ್ ಹಾಗೂ ಹಸಿರು ಬಣ್ಣದ ಲೆನ್ಸ್‍ನನ್ನು ಒಳಗೊಂಡಿದೆ. ಈ ಸನ್ ಗ್ಲಾಸ್ ಶೇ 100ರಷ್ಟು ಸುರಕ್ಷಿತವಾಗಿದ್ದು, ಬೇಸಿಗೆಯಲ್ಲಿ ಹೆಚ್ಚಾಗಿ ಬೀಳುವ ಸೂರ್ಯನ ಕಿರಣಗಳನ್ನು ತಡೆಯುತ್ತದೆ.

    ಮೀರರ್ ಫ್ರೇಮ್‍ನ ರೌಂಡ್ ಗ್ಲಾಸ್: ರೌಂಡ್ ಗ್ಲಾಸ್ ಟ್ರೆಂಡಿಯಾಗಿದ್ದು, ಹಲವಾರು ಸೆಲೆಬ್ರೆಟಿಗಳು ಈ ಗ್ಲಾಸ್‍ನನ್ನು ಧರಿಸುತ್ತಾರೆ. ಈ ಕಂದು ಬಣ್ಣದ ಸುಂದರವಾದ ಸನ್ ಗ್ಲಾಸ್ ಎಲ್ಲ ರೀತಿಯ ಡ್ರಸ್‍ಗಳಿಗೂ ಸೂಟ್ ಆಗುತ್ತದೆ.

    ಪಿಂಕ್ ಸನ್ ಗ್ಲಾಸ್: ಇದರಲ್ಲಿ ಹಲವು ವಿಧವಾದ ಶೇಡ್‍ಗಳಿದ್ದು, ಪಿಂಕ್ ಕಲರ್ ಸನ್ ಗ್ಲಾಸ್ ನಿಮ್ಮ ವ್ಯಕ್ತಿತ್ವವನ್ನು ಭಾಗವನ್ನು ತೋರಿಸುತ್ತದೆ ಹಾಗೂ ಡಲ್ ಆಗಿರುವ ನಿಮ್ಮ ಮುಖ ಬ್ರೈಟ್ ಆಗಿ ಕಾಣುವಂತೆ ಮಾಡುತ್ತದೆ.

    ಕ್ಯಾಟ್ ಹೈ ಸನ್ ಗ್ಲಾಸ್: ಕ್ಯಾಟ್ ಹೈ ಸನ್ ಗ್ಲಾಸ್ ರೆಟ್ರೋ ಶೈಲಿಯಂತಿರುವ ಸನ್ ಗ್ಲಾಸ್ ಆಗಿದ್ದು, ಎಲ್ಲರ ಮಧ್ಯೆ ಈ ಗ್ಲಾಸ್ ಎದ್ದು ಕಾಣಿಸುತ್ತದೆ.

  • ಶೂಟಿಂಗ್ ಸೆಟ್ ನಿಂದ ಸನ್ ಗ್ಲಾಸ್ ಕದ್ದ ರಾಧಿಕಾ ಪಂಡಿತ್!

    ಶೂಟಿಂಗ್ ಸೆಟ್ ನಿಂದ ಸನ್ ಗ್ಲಾಸ್ ಕದ್ದ ರಾಧಿಕಾ ಪಂಡಿತ್!

    ಬೆಂಗಳೂರು: ನಟಿ ರಾಧಿಕಾ ಪಂಡಿತ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ. ರಾಧಿಕಾ ಒಂದು ವಸ್ತುವನ್ನ ಕದ್ದು ತಂದಿದ್ದಾರೆ. ಈ ಬಗ್ಗೆ ಖುದ್ದು ರಾಧಿಕಾ ತಮ್ಮ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.

    ಯಶ್ ಅವರನ್ನು ಭೇಟಿ ಮಾಡಲು ರಾಧಿಕಾ `ಕೆಜಿಎಫ್ ಸೆಟ್’ ಗೆ ಹೋಗಿದ್ದರು. ಅಲ್ಲಿಂದ ಸ್ಪೆಷಲ್ ಆಗಿ ಕಣ್ಣಿಗೆ ಕಂಡ ಒಂದು ವಸ್ತುವನ್ನು ತೆಗೆದುಕೊಂಡು ಬಂದಿದ್ದಾರೆ. ರಾಧಿಕಾ ಕೆಜಿಎಫ್ ಸೆಟ್ ನಲ್ಲಿದ್ದ ಹಳದಿ ಬಣ್ಣ ಸನ್ ಗ್ಲಾಸ್ ಅನ್ನು ಯಾರಿಗೂ ಗೊತ್ತಾಗದ ರೀತಿಯಲ್ಲಿ ತೆಗೆದುಕೊಂಡು ಬಂದಿದ್ದಾರೆ. ನಂತರ ಅದನ್ನು ಹಾಕಿಕೊಂಡು ಫೋಟೋ ಕೂಡ ತೆಗೆಸಿಕೊಂಡಿದ್ದಾರೆ.

    ಆ ಫೋಟೋ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಇದನ್ನು ಯಾರಿಗೂ ತಿಳಿಯದಂತೆ ತಂದಿದ್ದೇನೆ ಎಂದು ಸ್ಟೇಟಸ್ ಹಾಕಿದ್ದಾರೆ. ಫೋಟೋ ನೋಡಿರುವ ಅಭಿಮಾನಿಗಳು ರಾಧಿಕಾ ಅವರ ಸಿನಿಮಾ ಬಿಡುಗಡೆ ಆಗದೆ ಇರುವುದರಿಂದ ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅಂತ ಕಮೆಂಟ್ ಮೂಲಕ ತಿಳಿಸಿದ್ದಾರೆ.

    ಕೆಲವರು ಈ ಫೋಟೋಗೆ ಲೈಕ್ ಕೊಟ್ಟು ಕೆಜಿಎಫ್ ಸಿನಿಮಾ ಬಗ್ಗೆ ಚರ್ಚೆ ಶುರು ಮಾಡಿದ್ದು, ಕೆಜಿಎಫ್ ಸೆಟ್ ಗೆ ಹೋದಾಗ ನೀವಾದರೂ ನಿರ್ದೇಶಕರಿಗೆ ಹೇಳಿ ಬೇಗ ಸಿನಿಮಾ ಬಿಡುಗಡೆ ಮಾಡಿಸಿ ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ. ಅದರ ಜೊತೆಯಲ್ಲಿ ಯಶ್ ಅಣ್ಣನಿಗೂ ಚಿತ್ರ ರಿಲೀಸ್ ಮಾಡಿಸುವಂತೆ ತಿಳಿಸಿ ಎಂದಿದ್ದಾರೆ.