Tag: ಸನ್ಯಾಸ ದೀಕ್ಷೆ

  • Mandya | ಸರ್ಕಾರಿ ನೌಕರಿ ಬಿಟ್ಟು ಸನ್ಯಾಸತ್ವ ದೀಕ್ಷೆ ಪಡೆಯಲು ಸಜ್ಜಾದ ಕೆಎಎಸ್‌ ಅಧಿಕಾರಿ

    Mandya | ಸರ್ಕಾರಿ ನೌಕರಿ ಬಿಟ್ಟು ಸನ್ಯಾಸತ್ವ ದೀಕ್ಷೆ ಪಡೆಯಲು ಸಜ್ಜಾದ ಕೆಎಎಸ್‌ ಅಧಿಕಾರಿ

    ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯಲ್ಲಿ ಸರ್ಕಾರಿ ನೌಕರಿ ಬಿಟ್ಟು ಸನ್ಯಾಸತ್ವ ದೀಕ್ಷೆ ಪಡೆಯಲು ಕೆಎಎಸ್ ಅಧಿಕಾರಿಯೊಬ್ಬರು (KAS Officer) ಮುಂದಾಗಿದ್ದಾರೆ.

    ಮಂಡ್ಯ ಜಿಲ್ಲೆಯ ಎಡಿಸಿಯಾಗಿ (Mandya ADC) ಕಾರ್ಯನಿರ್ವಹಿಸುತ್ತಿರುವ ಎಚ್.ಎಲ್.ನಾಗರಾಜು ಅವರು ಇದೀಗ ನಾಗರೀಕ ಸೇವೆ ತೊರೆದು ಸನ್ಯಾಸತ್ವ ಸ್ವೀಕಾರಕ್ಕೆ ನಿರ್ಧಾರ ಮಾಡಿದ್ದಾರೆ. ಸ್ವಯಂ ನಿವೃತ್ತಿ ಪಡೆದು ದೀಕ್ಷೆ ಸ್ವೀಕರಿಸಲಿರುವ ಮಂಡ್ಯ ಅಪರ ಜಿಲ್ಲಾಧಿಕಾರಿ ನಾಗರಾಜು ಅವರ ನಿರ್ಧಾರ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ಬಡವರ ಖಾತೆಗೆ 5 ಸಾವಿರ – ವದಂತಿ ನಂಬಿ ಪೋಸ್ಟ್ ಆಫೀಸ್ ಮುಂದೆ ಕ್ಯೂ ನಿಂತ ಜನ

    ಕೆಲವೇ ದಿನಗಳಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಲಿರುವ ನಾಗರಾಜು ಅವರು ಬಳಿಕ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದಲ್ಲಿ ಸನ್ಯಾಸ ದೀಕ್ಷೆ ಸ್ವೀಕಾರ ಮಾಡಿ ಶ್ರೀ ಚಂದ್ರಶೇಖರ ಸ್ವಾಮೀಜಿ ಶಿಷ್ಯರಾಗಿ ಮುಂದುವರೆಯಲಿದ್ದಾರೆ ಎಂದು ನಾಗರಾಜು ಅವರ ಆಪ್ತ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಇದನ್ನೂ ಓದಿ: Bangladesh | ಭಾರತಕ್ಕೆ ತೆರಳದಂತೆ 50ಕ್ಕೂ ಹೆಚ್ಚು ಇಸ್ಕಾನ್‌ ಸದಸ್ಯರಿಗೆ ಗಡಿಯಲ್ಲಿ ತಡೆ

    ಈ ಹಿಂದೆಯೂ ಸಹ ನಾಗರಾಜು ಅವರು ಸನ್ಯಾಸತ್ವ ಸ್ವೀಕರಿಸಿದ್ದರು. 2011ರಲ್ಲಿ ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ತಹಶಿಲ್ದಾರ್ ಆಗಿ ಕೆಲಸ ಮಾಡುತ್ತಿದ್ದ ನಾಗರಾಜು ಅವರು ತಹಶಿಲ್ದಾರ್ ಹುದ್ದೆ ತೊರೆದು ಆದಿಚುಂಚನಗಿರಿ ಮಠದಲ್ಲಿ ಶ್ರೀಬಾಲಗಂಗಾಧರನಾಥ ಶ್ರೀಗಳಿಂದ ಸ್ವಾಮೀಜಿಯಾಗಿ ದೀಕ್ಷೆ ಪಡೆದಿದ್ದರು.

    ಆಗ ನಿರ್ಮಲಾನಂದನಾಥ ಸ್ವಾಮೀಜಿ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದರು. ಆ ವೇಳೆ ನಾಗರಾಜು ಅವರು ಮತ್ತೆ ತಹಶಿಲ್ದಾರ್ ಹುದ್ದೆಗೆ ಬರಲೇಬೇಕೆಂದು ಸಾರ್ವಜನಿಕರು ಪ್ರತಿಭಟನೆ ಮಾಡಿದ್ದರು. ಬಳಿಕ ಹಿತೈಷಿಗಳು ಹಾಗೂ ಸಾರ್ವಜನಿಕರ ಒತ್ತಾಯಕ್ಕೆ ಮಣಿದು ಸನ್ಯಾಸತ್ವ ತ್ಯಜಿಸಿ ಪುನಃ ತಹಶಿಲ್ದಾರ್ ಹುದ್ದೆಗೆ ನಾಗರಾಜು ಅವರು ಮರಳಿದ್ದರು. ಇದನ್ನೂ ಓದಿ: ಗೋಧ್ರಾ ದುರಂತ ಆಧರಿತ ಸಿನಿಮಾ ‘ದಿ ಸಾಬರಮತಿ ರಿಪೋರ್ಟ್’ ವೀಕ್ಷಿಸಲಿದ್ದಾರೆ ಮೋದಿ

    ಇದೀಗ ಮಂಡ್ಯ ಎಡಿಸಿಯಾಗಿರುವ ನಾಗರಾಜು ಅವರು ತಮ್ಮ ಹುದ್ದೆ ತೊರೆದು ಮತ್ತೆ ಕಾವಿ ಧರಿಸಲು ತೀರ್ಮಾನಿಸಿದ್ದಾರೆ.

  • ನನ್ನನ್ನು ದೀದಿ ಮಾ ಅಂತ ಕರೆಯಿರಿ – ಕುಟುಂಬ ತ್ಯಜಿಸಿದ ಬಿಜೆಪಿ ನಾಯಕಿ ಉಮಾ ಭಾರತಿ

    ನನ್ನನ್ನು ದೀದಿ ಮಾ ಅಂತ ಕರೆಯಿರಿ – ಕುಟುಂಬ ತ್ಯಜಿಸಿದ ಬಿಜೆಪಿ ನಾಯಕಿ ಉಮಾ ಭಾರತಿ

    ಭೋಪಾಲ್: ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ (Senior BJP leader Uma Bharti) ಅವರು ಎಲ್ಲಾ ಕೌಟುಂಬಿಕ ಸಂಬಂಧಗಳಿಂದ ದೂರವಾಗಿದ್ದು, ಇನ್ಮುಂದೆ “ದೀದಿ ಮಾ” (Didi Maa) ಎಂದು ಮಾತ್ರ ಗುರುತಿಸಿಕೊಳ್ಳಲು ಇಚ್ಛಿಸುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

    ರಾಷ್ಟ್ರ ರಾಜಕೀಯದಲ್ಲಿ ಬಿಜೆಪಿ ಅಭಿವೃದ್ಧಿಗೆ ಮತ್ತು ರಾಮಮಂದಿರ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದವರಲ್ಲಿ ಉಮಾ ಭಾರತಿ ಅವರು ಕೂಡ ಒಬ್ಬರು. ಜೈನ ಗುರು ಆಚಾರ್ಯ ವಿದ್ಯಾಸಾಗರ ಮಹಾರಾಜ್ (Jain Muni Acharya Vidyasagar Maharaj ) ಅವರ ಆದೇಶದ ಮೇರೆಗೆ ತಮ್ಮ ಕುಟುಂಬದೊಂದಿಗಿನ ಎಲ್ಲಾ ಸಂಬಂಧಗಳನ್ನು ತೊರೆದಿದ್ದು, ನನ್ನನ್ನು ದೀದಿ ಮಾ ಎಂದು ಮಾತ್ರ ಗುರುತಿಸಿಕೊಳ್ಳುತ್ತೇನೆ. ಇಡೀ ವಿಶ್ವ ಸಮುದಾಯವೇ ನನ್ನ ಕುಟುಂಬವಾಗಿರಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಕ್ಷ ಬಿಡ್ತಾರಾ ರಮೇಶ್ ಜಾರಕಿಹೊಳಿ? – ಸಿದ್ದಾಂತ ಒಪ್ಪಿ ಬಂದ್ರೆ ಸ್ವಾಗತ ಅಂದ್ರು ಕೈ ಮುಖಂಡ

    ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಉಮಾ ಭಾರತಿಯವರು,ನನ್ನ ಸನ್ಯಾಸ ದೀಕ್ಷೆಯ 30ನೇ ವರ್ಷದಲ್ಲಿ ನಾನು ಅವರ (ದೀಕ್ಷೆ ನೀಡಿದ್ದ ಸಂತರ) ಆದೇಶವನ್ನು ಪಾಲಿಸಲು ಪ್ರಾರಂಭಿಸುತ್ತೇನೆ ಎಂದು ನಾನು ನಿರ್ಧರಿಸಿದ್ದೆ. ಅದರಂತೆ 2022ರ ಮಾರ್ಚ್ 17ರಂದು ಸಾಗರ್ ಜಿಲ್ಲೆಯ ರಹಾಲಿಯಲ್ಲಿ ಎಲ್ಲ ಸಂತರ ಮುಂದೆ ಕೌಟುಂಬಿಕ ಬಾಂಧವ್ಯಗಳಿಂದ ಮುಕ್ತಳಾಗುವ ಬಗ್ಗೆ ನನಗೆ ಅವರು ಆದೇಶವನ್ನು ನೀಡಿದ್ದರು. ಇದೇ 17ರಂದು ನಾನು ಕುಟುಂಬ ಸದಸ್ಯರೊಂದಿಗಿನ ಎಲ್ಲಾ ಬಂಧನದಿಂದ ಮುಕ್ತಳಾಗುತ್ತೇನೆ. ನನ್ನ ಜಗತ್ತು ಮತ್ತು ಕುಟುಂಬದ ವ್ಯಾಪ್ತಿ ವಿಸ್ತಾರಗೊಂಡಿದೆ. ಈಗ ನಾನು ಇಡೀ ವಿಶ್ವ ಸಮುದಾಯಕ್ಕೇ ಸಹೋದರಿ ಮತ್ತು ತಾಯಿಯಾಗಿದ್ದೇನೆ. ನನಗೆ ವೈಯಕ್ತಿಕವಾಗಿ ಕುಟುಂಬ ಎಂಬುದಿಲ್ಲ ಎಂದಿದ್ದಾರೆ.

    ನನ್ನ ಕುಟುಂಬ, ನನ್ನ ಸಹೋದರರು, ಸೋದರಳಿಯರು ಮತ್ತು ಸೊಸೆಯಂದಿರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನನಗೆ ರಾಜಕೀಯದಲ್ಲಿ ಸಾಕಷ್ಟು ಬೆಂಬಲ ನೀಡಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಆಡಳಿತದಲ್ಲಿಯೂ ಸಾಕಷ್ಟು ಸುಳ್ಳು ಪ್ರಕರಣ, ಕಿರುಕುಳ ಮತ್ತು ಅನೇಕ ತೊಂದರೆಗಳನ್ನು ಅನುಭವಿಸಿದ್ದೇನೆ. ನನ್ನ ಪೋಷಕರು ಕಲಿಸಿದ ಉತ್ತಮ ಮೌಲ್ಯಗಳು, ನನ್ನ ಗುರುಗಳ ಸಲಹೆ, ನನ್ನ ಜಾತಿ ಮತ್ತು ಕುಲದ ಘನತೆ, ನನ್ನ ಪಕ್ಷದ ಸಿದ್ಧಾಂತ ಮತ್ತು ದೇಶಕ್ಕಾಗಿ ನನ್ನ ಜವಾಬ್ದಾರಿ ಇದ್ಯಾವುದರಿಂದಲೂ ನನಗೆ ಮುಕ್ತಿಸಿಗುವುದಿಲ್ಲ ಎಂದು ಹೀಗೆ ಕೌಟುಂಬಿಕ ಬಂಧದಿಂದ ಮುಕ್ತರಾಗುವ ಬಗ್ಗೆ ಸಾಕಷ್ಟು ಟ್ವೀಟ್ ಮಾಡಿದ್ದಾರೆ.

    ಸದ್ಯ ರಾಜಕೀಯದಿಂದ ದೂರ ಉಳಿದಿರುವ ಉಮಾಭಾರತಿ ಅವರು, ಕೊನೆಯಾದಾಗಿ ಮಧ್ಯಪ್ರದೇಶದಲ್ಲಿ ಮದ್ಯದ ಅಂಗಡಿಗಳನ್ನು ನಿಷೇಧಿಸುವ ಬಗ್ಗೆ ನಡೆದ ಚಳುವಳಿಯಲ್ಲಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ಖಾನ್ ಹತ್ಯೆಗೆ ಸಂಚು ಮಾಡಿರುವುದು ಸಾಬೀತಾದರೆ ಒಂದು ನಿಮಿಷವೂ ಪ್ರಧಾನಿಯಾಗಿರಲ್ಲ: ಶೆಹಬಾಜ್ ಷರೀಫ್

    ಕರ್ನಾಟಕದವರಾದ ಜೈನ ಮುನಿ ಆಚಾರ್ಯ ವಿದ್ಯಾಸಾಗರ ಜೀ ಮಹಾರಾಜ್ ಅವರು ಈಗಲೂ ನನಗೆ ಗುರುಗಳು. ಎಲ್ಲಾ ವೈಯಕ್ತಿಕ ಸಂಬಂಧಗಳು ಮತ್ತು ಬಾಂಧವ್ಯಗಳನ್ನು ತ್ಯಜಿಸಲು ಅವರು ನನಗೆ ಆದೇಶಿಸಿದ್ದಾರೆ. ನನ್ನನ್ನು ದೀದಿ ಮಾ ಎಂದೇ ಕರೆಯಬೇಕು. ನನ್ನ ಭಾರತಿ ಹೆಸರನ್ನು ಅರ್ಥಪೂರ್ಣಗೊಳಿಸಲು ಭಾರತದ ಎಲ್ಲಾ ನಾಗರಿಕರು ಇದನ್ನು ಒಪ್ಪಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]