Tag: ಸನ್ಯಾಸಿನಿ

  • ಕನ್ನಡದ ವಿಷ್ಣು ವಿಜಯದಲ್ಲಿ ನಟಿಸಿದ್ದ ಮಮತಾ ಕುಲಕರ್ಣಿ ಈಗ ಸನ್ಯಾಸಿನಿ

    ಕನ್ನಡದ ವಿಷ್ಣು ವಿಜಯದಲ್ಲಿ ನಟಿಸಿದ್ದ ಮಮತಾ ಕುಲಕರ್ಣಿ ಈಗ ಸನ್ಯಾಸಿನಿ

    ಪ್ರಯಾಗರಾಜ್: ಬಾಲಿವುಡ್ ಹಾಗೂ ದಕ್ಷಿಣ ಸಿನಿಮಾದಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ನಟಿ ಮಮತಾ ಕುಲಕರ್ಣಿ (Mamata Kulkarni) ಇದೀಗ ಲೌಕಿಕ ಜಗತ್ತನ್ನು ತೊರೆದು ಆಧ್ಯಾತ್ಮಿಕ ಜಗತ್ತಿಗೆ ಇಳಿದಿದ್ದಾರೆ.

    90ರ ದಶಕದಲ್ಲಿ ಬಾಲಿವುಡ್ ಸೇರಿದಂತೆ ಕನ್ನಡ ಸಿನಿಮಾದಲ್ಲಿ ನಟಿಸಿರುವ ಮಮತಾ, ಇದೀಗ ಕಿನ್ನರ ಅಖಾಡಕ್ಕಿಳಿಯುವ ಮೂಲಕ ಮಹಾಮಂಡಲೇಶ್ವರಿಯಾಗಿದ್ದಾರೆ. ಮಮತಾ ಕುಲಕರ್ಣಿ ಹೆಸರನ್ನು ಬದಲಿಸಿಕೊಂಡು `ಮಾಯಿ ಮಮತಾ ನಂದಗಿರಿ’ ಎಂದು ನಾಮಕರಣ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: ಡಿಕೆಶಿ ಕ್ಷೇತ್ರದಲ್ಲಿ ಗ್ರಾಮವನ್ನೇ ಖರೀದಿಸಿದ್ರಾ ಕಾಂಗ್ರೆಸ್‌ ಶಾಸಕ?

    ಮಹಾಕುಂಭಮೇಳದಲ್ಲಿ ಬಾಗಿಯಾಗಿರುವ ನಟಿ, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಬಳಿಕ ತಮ್ಮ ಸ್ವಂತ ಪಿಂಡ ಪ್ರದಾನಮಾಡುವ ಮೂಲಕ ಜೂನಾ ಅಖಾ ಡದ ಅಡಿ ಕಾರ್ಯನಿರ್ವಹಿಸುವ ಕಿನ್ನರ ಅಖಾಡಕ್ಕೆ ಸೇರಿಕೊಂಡಿದ್ದು, ಮಹಾಮಂಡಲೇಶ್ವರರಾಗಿದ್ದಾರೆ. ಇವರಿಗೆ ಕಿನ್ನರ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಲಕ್ಷ್ಮಿ ನಾರಾಯಣ ತ್ರಿಪಾಠಿ ದೀಕ್ಷೆ ನೀಡಿದರು.

    ಕಳೆದ 2 ವರ್ಷಗಳಿಂದ ಜೂನಾ ಅಖಾಡದೊಂದಿಗೆ ಸಂಪರ್ಕದಲ್ಲಿದ್ದ ಮಮತಾ, 2-3 ತಿಂಗಳಿಂದ ಕಿನ್ನರ ಅಖಾಡದೊಂದಿಗೆ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದರು. ಇದೀಗ ಅದೇ ಅಖಾಡದ ಭಾಗವಾಗಲು ನಿರ್ಧರಿಸಿದ್ದಾರೆ. ಸದ್ಯ ಜ29ರಂದು ಮೌನಿ ಅಮಾವಾಸ್ಯೆಯ ಪವಿತ್ರ ಸ್ನಾನಕ್ಕಾಗಿ ಪ್ರಯಾಗರಾಜ್‌ನಲ್ಲಿದ್ದಾರೆ.

    ನಟಿ ಕನ್ನಡದ ವಿಷ್ಣು ವಿಜಯ ಸಿನಿಮಾದಲ್ಲಿ ನಟಿಸಿದ್ದು, ವಕ್ತ ಹಮಾರಾ ಹೈ, ಕ್ರಾಂತಿವೀರ, ಸಬ್ಸೆ ಬಡಾ ಕಿಲಾಡಿ ಇನ್ನಿತರ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.ಇದನ್ನೂ ಓದಿ: ದಿನ ಭವಿಷ್ಯ 25-01-2025

  • ಸನ್ಯಾಸಿನಿಯಾದ ಖ್ಯಾತ ಮಾಡೆಲ್ ಬರ್ಖಾ

    ಸನ್ಯಾಸಿನಿಯಾದ ಖ್ಯಾತ ಮಾಡೆಲ್ ಬರ್ಖಾ

    ಸುಶ್ಮಿತಾ ಸೇನ್, ಐಶ್ವರ್ಯ ರೈರಂಥ ಖ್ಯಾತ ಮಾಡೆಲ್ ಗಳಿಗೆ ಸೌಂದರ್ಯ ಸ್ಪರ್ಧೆಯಲ್ಲಿ ತೀವ್ರ ಪೈಪೋಟಿ ನೀಡಿ ಮೊದಲ ರನ್ನರ್ ಅಪ್ ಆಗಿದ್ದ ಖ್ಯಾತ ಮಾಡೆಲ್ (model), ನಟಿ ಬರ್ಖಾ ಮದನ್ (Barkha Madan) ಸನ್ಯಾಸಿನಿಯಾಗಿದ್ದಾರೆ (Nun). 1994ರಲ್ಲಿ ನಡೆದ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಬರ್ಖಾ ಫೈನಲಿಸ್ಟ್ ಆಗಿದ್ದವರು.

    ಖಿಲಾಡಿ ಕಾ ಕಿಲಾಡಿ ಸಿನಿಮಾದ ಮೂಲಕ ಬಾಲಿವುಡ್ ಅನ್ನು ಪ್ರವೇಶ ಮಾಡಿದ್ದ ಇವರು, ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರು. ಮಾಡೆಲಿಂಗ್ ಮತ್ತು ಸಿನಿಮಾ ರಂಗದಲ್ಲಿ ಹಲವಾರು ವರ್ಷಗಳ ಕಾಲ ಸಕ್ರೀಯರಾಗಿದ್ದವರು ನಂತರ ಬಣ್ಣದ ಲೋಕದಿಂದ ದೂರವಾದರು. ಇದೀಗ ಸನ್ಯಾಸಿನಿಯಾಗಿ ಬದಲಾಗಿದ್ದಾರೆ.

     

    ದಲೈ ಲಾಮಾ ಅವರ ಅನುನಾಯಿ ಆಗಿದ್ದ ಬರ್ಖಾ, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆಧ್ಯಾತ್ಮಿಕ ಪೋಸ್ಟ್ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದರು. ಕಾಡು ಮೇಡು ಗುಡ್ಡ ಬೆಟ್ಟಗಳ ಸಂಗ ಮಾಡಿದ್ದರು. ಇದೀಗ ಸನ್ಯಾಸಿನಿಯಾಗಿ ಪರ್ವತಗಳಲ್ಲಿ ವಾಸಿಸುತ್ತಿದ್ದಾರೆ ಎನ್ನುತ್ತಾರೆ ಅವರನ್ನು ಬಲ್ಲವರು.

  • ಮತಾಂತರ ಮಾಡ್ತಿದ್ದಾರೆಂದು ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ- RSS ಕಾರ್ಯಕರ್ತ ಅರೆಸ್ಟ್

    ಮತಾಂತರ ಮಾಡ್ತಿದ್ದಾರೆಂದು ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ- RSS ಕಾರ್ಯಕರ್ತ ಅರೆಸ್ಟ್

    ಚೆನ್ನೈ: ಇಬ್ಬರು ಕ್ರೈಸ್ತ  ಸನ್ಯಾಸಿನಿಯರಿಗೆ ಕಿರುಕುಳ ಕೊಟ್ಟಿದ್ದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS)ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.

    ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ಇಲುಪ್ಪುರ್ ಬಳಿ ಇಬ್ಬರು ಕ್ರೈಸ್ತ ಸನ್ಯಾಸಿನಿಯರನ್ನು ಧಾರ್ಮಿಕ ಮತಾಂತರದಲ್ಲಿ ತೊಡಗಿದ್ದಾರೆಂದು RSS ಕಾರ್ಯಕರ್ತ ಗಣೇಶ್ ಬಾಬು ಕಿರುಕುಳ ಕೊಡುತ್ತಿದ್ದರು. ಈ ವೇಳೆ ಅವರ ಬಳಿ ಇದ್ದ ಫೋನ್ ಹಾಗೂ ಬೈಕ್ ಕಸಿದುಕೊಂಡಿದ್ದರು. ಈ ಆರೋಪದ ಮೇಲೆ ಇಲುಪ್ಪುರ್ ಪೊಲೀಸರು ಗಣೇಶ್‍ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಡಿಕೆಶಿಯನ್ನು ಸಿಎಂ ಮಾಡಲು ಸಿದ್ದರಾಮಯ್ಯ ಬಿಡುತ್ತಾರೆಯೇ: ನಲಪಾಡ್‍ಗೆ ಬಿಜೆಪಿ ಗುದ್ದು

    Goa RSS rebel faction dissolved, merged with parent organisation | Goa News - Times of India

    ಈ ಕುರಿತು ವಿವರಿಸಿದ ಪೊಲೀಸರು, ಘಟನೆ ವೇಳೆ ಗಣೇಶ್ ಜೊತೆ 20ರಿಂದ 30 ಮಂದಿ ಇದ್ದರು. ಜನವರಿ 21 ರಂದು ಈ ಘಟನೆ ನಡೆದಿದ್ದು, ಗಣೇಶ್ ಅವರನ್ನು ಶನಿವಾರ ಬಂಧಿಸಲಾಗಿದೆ. ಭಾನುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಪ್ರಸ್ತುತ ಆರೋಪಿಯನ್ನು ಅರಂತಂಗಿ ಉಪ ಕಾರಾಗೃಹದಲ್ಲಿ ಇರಿಸಲಾಗಿದೆ. ಆರೋಪಿ ವಿರುದ್ಧ ಮಹಿಳೆಯರ ಕಿರುಕುಳ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

    ಘಟನೆ ವಿವರ:
    ಕ್ರೈಸ್ತ ಸನ್ಯಾಸಿನಿಯರು ತಮಗೆ ಪರಿಚಯವಿದ್ದ ಗರ್ಭಿಣಿಯನ್ನು ಭೇಟಿ ಮಾಡಲು ಹೋಗುತ್ತಿದ್ದಾಗ ಗಣೇಶ್ ಮತ್ತು ತಂಡದವರು ಅವರನ್ನು ತಡೆದಿದ್ದಾರೆ. ಗಣೇಶ್ ಅವರ ಗುಂಪು ಸನ್ಯಾಸಿನಿಯರನ್ನು, ನೀವು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಬಂದಿದ್ದೀರಾ ಎಂದು ಅವರ ಬಳಿ ಇದ್ದ ಮೊಬೈಲ್ ಮತ್ತು ಬೈಕ್ ಅನ್ನು ಕಸಿದುಕೊಂಡಿದ್ದಾರೆ. ಆದರೆ ಇದು ನಿಜವಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸಮವಸ್ತ್ರದಲ್ಲಿ ಕಾಲೇಜಿಗೆ ಬರಲು ನಾಳೆ ಒಂದು ದಿನ ಅವಕಾಶ: ರಘುಪತಿ ಭಟ್ ಎಚ್ಚರಿಕೆ

    POLICE JEEP

    ಕ್ರೈಸ್ತ ಸನ್ಯಾಸಿನಿಯರು ಪೊಲೀಸರನ್ನು ಸ್ಥಳಕ್ಕೆ ಕರೆಸಿದಾಗ, ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ನಾವು ಫೋನ್ ಮತ್ತು ಬೈಕ್ ಕಿತ್ತುಕೊಂಡಿಲ್ಲ ಎಂದು ವಾದಿಸಿದರು. ನಂತರ ಗಣೇಶ್, ನಾಳೆ ನಾನೇ ಬಂದು ಶರಣಾಗುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ಬರಲಿಲ್ಲ. ಪರಿಣಾಮ ಶನಿವಾರ ರಾತ್ರಿ ಗಣೇಶ್‍ನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

    ಗಣೇಶ್‍ನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕೆಲವು ಗುಂಪು, ಕೇಸರಿ ಸ್ಕಾರ್ಫ್‍ಗಳನ್ನು ಧರಿಸಿ ಭಾನುವಾರ ಇಲುಪ್ಪುರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

  • ಅಂದು ಹೊಡೆದು, ಇಂದು ಕಿಸ್ ಕೊಟ್ಟ ಪೋಪ್

    ಅಂದು ಹೊಡೆದು, ಇಂದು ಕಿಸ್ ಕೊಟ್ಟ ಪೋಪ್

    ವ್ಯಾಟಿಕನ್ ಸಿಟಿ: ಕೈ ಹಿಡಿದು ಎಳೆದ ಮಹಿಳೆಯೊಬ್ಬರಿಗೆ ಹೊಡೆದಿದ್ದ ಪೋಪ್ ಈಗ ಸನ್ಯಾಸಿನಿಯೊಬ್ಬರಿಗೆ ಕಿಸ್ ಕೊಟ್ಟು ಸುದ್ದಿಯಾಗಿದ್ದಾರೆ.

    ವ್ಯಾಟಿಕನ್ ನಗರದ ಸೇಂಟ್ ಪೀಟರ್ಸ್ ನಲ್ಲಿ ಪೋಪ್ ಫ್ರಾನ್ಸಿಸ್ ಅವರು ಹೊಸ ವರ್ಷದ ಸಂದರ್ಭದಲ್ಲಿ ಜನರಿಗೆ ಶುಭಾಶಯ ಕೋರುತ್ತಿದ್ದರು. ಈ ವೇಳೆ ಸಾಲಿನಲ್ಲಿ ನಿಂತಿದ್ದ ಮಹಿಳೆಯೊಬ್ಬರು ಪೋಪ್ ಅವರ ಕೈಯನ್ನು ಹಿಡಿದು ಎಳೆದಿದ್ದರು. ಇಂದರಿಂದ ಕೋಪಗೊಂಡ ಪೋಪ್, ಮಹಿಳೆಯ ಕೈಗೆ ಹೊಡೆದು ಹೊರಟುಹೋದಿದ್ದರು. ಆದರೆ ಈಗ ಪೋಪ್ ಅವರು ಸನ್ಯಾಸಿನಿಯೊಬ್ಬರಿಗೆ ಮುತ್ತು ಕೊಟ್ಟ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: ಕೈ ಹಿಡಿದು ಎಳೆದ ಮಹಿಳೆಗೆ ಹೊಡೆದ ಪೋಪ್: ವಿಡಿಯೋ

    ಚರ್ಚ್ ಸಭಾಂಗಣದಲ್ಲಿ ಬುಧವಾರ ಸಾರ್ವಜನಿಕರ ಸಭೆ ನಡೆದಿತ್ತು. ಈ ವೇಳೆ ಸನ್ಯಾಸಿನಿಯೊಬ್ಬರು ಸಭೆಗೆ ಆಗಮಿಸಿದ ಪೋಪ್ ಫ್ರಾನ್ಸಿಸ್ ಅವರಿಗೆ ಕಿಸ್ ಕೊಡುವಂತೆ ಕೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಫ್ರಾನ್ಸಿಸ್ ಅವರು, ಕೊಡುತ್ತೇನೆ. ಆದರೆ ನೀವು ಕಚ್ಚುತ್ತೀರಿ ಎಂದರು. ಹೀಗಾಗಿ ಅಲ್ಲಿ ಸೇರಿದ್ದ ಜನರು ನಗೆಗಡಲಲ್ಲಿ ತೇಲಿದರು.

    ಮಾತು ಮುಂದುವರಿಸಿದ ಫ್ರಾನ್ಸಿಸ್ ಅವರು, ಶಾಂತವಾಗಿರಿ. ನಾನು ನಿಮಗೆ ಕಿಸ್ ನೀಡುತ್ತೇನೆ. ಆದರೆ ನೀವು ಶಾಂತವಾಗಿರಿ. ಕಚ್ಚಬೇಡಿ ಎಂದು ಮಹಿಳೆಯ ಬಳಿಗೆ ಹೋಗಿ ಸನ್ಯಾಸಿನಿಯ ಬಲ ಕೆನ್ನೆಗೆ ಮುತ್ತಿಕ್ಕಿದರು. ಆಗ ಸನ್ಯಾಸಿನಿಯು ಸಂಭ್ರಮಿಸುತ್ತಾ ಕ್ರೇಜಿ, ಪಾಪಾ ಎಂದು ಕೂಗಿ ಧನ್ಯವಾದ ತಿಳಿಸಿದರು.