Tag: ಸನ್ಯಾಸಿ

  • ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಐ.ಆರ್.ಪೆರುಮಾಳ್ – ಮಹಾ ಕುಂಭಮೇಳದಲ್ಲಿ ಸನ್ಯಾಸಿಯಾಗಿ ಪ್ರತ್ಯಕ್ಷ!

    ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಐ.ಆರ್.ಪೆರುಮಾಳ್ – ಮಹಾ ಕುಂಭಮೇಳದಲ್ಲಿ ಸನ್ಯಾಸಿಯಾಗಿ ಪ್ರತ್ಯಕ್ಷ!

    ರಾಯಚೂರು: ಈ ಹಿಂದೆ ರಾಯಚೂರು (Raichuru) ಜಿಲ್ಲಾಧಿಕಾರಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಐ.ಆರ್.ಪೆರುಮಾಳ್ ಮಹಾ ಕುಂಭಮೇಳದಲ್ಲಿ (Mahakumbha Mela) ಸನ್ಯಾಸಿಯಾಗಿ ಪ್ರತ್ಯಕ್ಷವಾಗಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಐ.ಆರ್.ಪೆರುಮಾಳ್ ಫೋಟೋ ಈಗ ಫುಲ್ ವೈರಲ್ ಆಗಿದೆ.ಇದನ್ನೂ ಓದಿ: ರಮೇಶ್‌ ಜಾರಕಿಹೊಳಿ, ಯತ್ನಾಳ್‌ ಉಚ್ಚಾಟನೆಗೆ ಮಾಜಿ ಶಾಸಕ ರೇಣುಕಾಚಾರ್ಯ ಆಗ್ರಹ

    ಗಂಟು ಕಟ್ಟಿದ ಕೂದಲು ಇರುವ ಫೋಟೋ ವೈರಲ್ ಆಗಿದ್ದು, ಐಎಎಸ್ ಅಧಿಕಾರಿಯ ವೈರಾಗ್ಯ ಜೀವನ ಅಚ್ಚರಿ ಮೂಡಿಸಿದೆ. 1993-94ರಲ್ಲಿ ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಅಧಿಕಾರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ರಾಜ್ಯದ ನಾನಾ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿ 2012ರಲ್ಲಿ ಅವರು ನಿವೃತ್ತರಾಗಿದ್ದರು.

    ಬಳಿಕ 2014 ರಲ್ಲಿ ತಮಿಳುನಾಡಿನ (Tamilnadu) ಮದುರೈ ಜಿಲ್ಲೆಯ ಇರಂಜುಮುಡಿ ಶಿವನ ದೇವಾಲಯ ಬಳಿ ಮಠ ಕಟ್ಟಿಕೊಂಡಿದ್ದರು. ಸನ್ಯಾಸತ್ವ ಸ್ವೀಕರಿಸಿ ಶಿವಯೋಗಿ ಪೆರುಮಾಳ್ ಸ್ವಾಮೀಜಿಯಾಗಿದ್ದ ನಿವೃತ್ತ ಅಧಿಕಾರಿ ಮಹಾ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುವ ಫೋಟೋ ಈಗ ವೈರಲ್ ಆಗಿದೆ.ಇದನ್ನೂ ಓದಿ: New Delhi| ಕಾರಿಗೆ ಬೆಂಕಿ – ಮದುವೆಗೆ ಆಮಂತ್ರಣ ಹಂಚಲು ಹೋಗಿದ್ದ ವರ ಸಾವು

  • ಮೃತ ಸನ್ಯಾಸಿ ಮನೆಯಲ್ಲಿ ಸಿಕ್ತು 30 ಲಕ್ಷಕ್ಕೂ ಅಧಿಕ ಹಣ!

    ಮೃತ ಸನ್ಯಾಸಿ ಮನೆಯಲ್ಲಿ ಸಿಕ್ತು 30 ಲಕ್ಷಕ್ಕೂ ಅಧಿಕ ಹಣ!

    ಚಿತ್ರದುರ್ಗ: ಮೃತ ಸನ್ಯಾಸಿ (Monk) ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದ್ದು, ಇದೀಗ ಭಾರೀ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

    ಹೌದು. ಚಿತ್ರದುರ್ಗ (Chitradurga) ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ನಿವಾಸಿ ಗಂಗಾಧರ ಶಾಸ್ತ್ರಿ (70) ವಾರದ ಹಿಂದೆ ಮೃತಪಟ್ಟಿದ್ದರು. ಇದೀಗ ಇವರ ಮನೆಯಲ್ಲಿ 30 ಲಕ್ಷ ಹಣ ಪತ್ತೆಯಾಗಿದೆ.

    ಇವರು ಶಾಸ್ತ್ರ ಹೇಳುವುದು, ಶುಭ ಕಾರ್ಯದ ಪೂಜೆ ಮಾಡಿಸುತ್ತಿದ್ದರು. 16 ಎಕರೆ ಜಮೀನಿದ್ದು 4 ಎಕರೆ ತೆಂಗಿನ ತೋಟ, ಗದ್ದೆಯನ್ನು ಹೊಂದಿದ್ದರು. ಭಕ್ತರಿಂದ ಬಂದ ಕಾಣಿಕೆ ಹಣವೇ 46 ಸಾವಿರ ರೂ. ಹೆಚ್ಚಿದೆ. ಒಟ್ಟಿನಲ್ಲಿ ಇದೀಗ ಕೃಷಿ ಮತ್ತಿತರೆ ಆದಾಯದಿಂದ ಬಂದ 30 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ.

    2 ದಿನಗಳ ಹಿಂದೆ ಶಾಸ್ತ್ರಿ ಮನೆ ಪರಿಶೀಲಿಸಿದಾಗ ಹಣ ಪತ್ತೆಯಾಗಿದ್ದು, ಭಕ್ತರು ಶಾಕ್ ಆಗಿದ್ದಾರೆ. ಒಂಟಿಯಾಗಿ ಬದುಕು ಸವೆಸಿದ್ದ ಶಾಸ್ತ್ರಿಯವರು ಮನೆಯ ವಿವಿಧೆಡೆ ಹಣ ಇರಿಸಿದ್ದರು. ಇದನ್ನೂ ಓದಿ: ಅಕ್ರಮ ಆಸ್ತಿ ಕೇಸ್‌; ಕೆ.ಆರ್‌. ಪುರಂ ತಹಶೀಲ್ದಾರ್‌ ಸಹೋದರ ಸೇರಿ ನಾಲ್ವರಿಗೆ ಲೋಕಾಯುಕ್ತ ನೋಟಿಸ್‌

    ಸದ್ಯ ಜುಲೈ 7ಕ್ಕೆ ಭಕ್ತರ ಸಭೆ ಕರೆದು ಸಮಿತಿ ರಚಿಸಿ ಜಮೀನಿನಲ್ಲಿ ಗಂಗಾಧರ ಶಾಸ್ತ್ರಿ ಗದ್ದುಗೆ ನಿರ್ಮಿಸಲು ಸ್ಥಳೀಯರು ನಿರ್ಧಾರ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಾಲು ಸಾಲು ಸಿನಿಮಾಗಳ ನಡುವೆ ಕಾವಿತೊಟ್ಟು ಅಚ್ಚರಿ ಮೂಡಿಸಿದ ಮಿಲ್ಕಿ ಬ್ಯೂಟಿ

    ಸಾಲು ಸಾಲು ಸಿನಿಮಾಗಳ ನಡುವೆ ಕಾವಿತೊಟ್ಟು ಅಚ್ಚರಿ ಮೂಡಿಸಿದ ಮಿಲ್ಕಿ ಬ್ಯೂಟಿ

    ಕ್ಷಿಣ ಸಿನಿಮಾ ರಂಗದ ಖ್ಯಾತ ತಾರೆ, ಮಿಲ್ಕಿಬ್ಯೂಟಿ ಖ್ಯಾತಿಯ ನಟಿ ತಮನ್ನಾ ಕಾವಿತೊಟ್ಟು ಅಚ್ಚರಿ ಮೂಡಿಸಿದ್ದಾರೆ. ಬಿಕಿನಿ ತೊಟ್ಟು ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದ ಈ ನಟಿ, ಇದೀಗ ಕಾವಿ ತೊಟ್ಟಿರುವುದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ. ಕೇವಲ ಕಾವಿ ಮಾತ್ರ ತೊಟ್ಟಿಲ್ಲ, ಹಲವು ದೇವಾಲಯಗಳಿಗೆ ತೆರಳಿ ಅವರು ಪೂಜೆ ಕೂಡ ಸಲ್ಲಿಸುತ್ತಿದ್ದಾರೆ. ಹೀಗಾಗಿ ತಮನ್ನಾ ಸಂನ್ಯಾಸಿನಿ ಆಗಲಿದ್ದಾರಾ ಎನ್ನುವ  ಅನುಮಾನ ಕೂಡ ಮೂಡಿದೆ.

    ತಮನ್ನಾ ಕೈಯಲ್ಲಿ ಸದ್ಯ ನಾಲ್ಕು ಚಿತ್ರಗಳಿವೆ. ಚಿರಂಜೀವಿ ಜೊತೆ ಭೋಳಾ ಶಂಕರ್ ಸಿನಿಮಾದಲ್ಲಿ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ. ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲೂ ಇವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಬಾಲಿವುಡ್ ನಲ್ಲಿ ಬೋಲೆ ಚುಡಿಯಾ ಸಂಪೂರ್ಣ ಶೂಟಿಂಗ್ ಮುಗಿದಿದೆ. ಬಾಂದ್ರಾ ಹೆಸರಿನ ಸಿನಿಮಾವನ್ನೂ ಅವರು ಒಪ್ಪಿಕೊಂಡಿದ್ದಾರೆ. ಇಷ್ಟೊಂದು ಬ್ಯುಸಿಯಾಗಿದ್ದರೂ, ದೇವಸ್ಥಾನ ಸುತ್ತುವುದಕ್ಕೆ ಕಾರಣ ಏನು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ ಅವರ ಅಭಿಮಾನಿಗಳಿಗೆ. ಇದನ್ನೂ ಓದಿಸಿದ್-ಕಿಯಾರಾ ಮದುವೆ ಜೀವನದ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ

    ಕೆಲವು ದಿನಗಳ ಹಿಂದೆಯಷ್ಟೇ ತಮನ್ನಾ ಮದುವೆ ವಿಚಾರ ಸಖತ್ ಸದ್ದು ಮಾಡಿತ್ತು. ಮುಂಬೈ ಮೂಲದ ಉದ್ಯಮಿಯೊಬ್ಬರನ್ನು ಅವರು ಮದುವೆ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಈ ನಡುವೆ ಅವರು ಕಾವಿತೊಟ್ಟು ಲಿಂಗ ಬೈರವಿಗೆ ಪೂಜೆ ಸಲ್ಲಿಸಿದ್ದಾರೆ. ಜೊತೆ ಹಿಮಾಲಯಕ್ಕೆ ತೆರಳಿ ವೈಷ್ಣವಿ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಬಲ್ಲ ಮೂಲಗಳ ಪ್ರಕಾರ  ತಮನ್ನಾ ಇಶಾ ಯೋಗ ಆಶ್ರಮಕ್ಕೆ ಭೇಟಿ ನೀಡಿದ್ದು, ಅಲ್ಲಿ ದೀಕ್ಷೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇದೆಲ್ಲವೂ ಅವರ ಮದುವೆಗೆ ಎಂದು ಹೇಳಲಾಗುತ್ತಿದೆ. ಆದಷ್ಟು ಬೇಗ ಮದುವೆಯಾಗಲಿ ಎನ್ನುವುದಕ್ಕಾಗಿ ಅವರು ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬ್ಯಾಂಕ್‍ಗೆ ರೈಫಲ್ ಹಿಡಿದು ನುಗ್ಗಿದ ಸನ್ಯಾಸಿ – ಸಾಲ ನೀಡದ್ದಕ್ಕೆ ಲೂಟಿ ಮಾಡೋದಾಗಿ ಬೆದರಿಕೆ

    ಬ್ಯಾಂಕ್‍ಗೆ ರೈಫಲ್ ಹಿಡಿದು ನುಗ್ಗಿದ ಸನ್ಯಾಸಿ – ಸಾಲ ನೀಡದ್ದಕ್ಕೆ ಲೂಟಿ ಮಾಡೋದಾಗಿ ಬೆದರಿಕೆ

    ಚೆನ್ನೈ: ಸನ್ಯಾಸಿಯೋರ್ವ ರೈಫಲ್ (Rifle)ಹಿಡಿದು ಬ್ಯಾಂಕ್‍ಗೆ ನುಗ್ಗಿ ಸಾಲ ಕೇಳಿದ್ದಾನೆ. ಈ ವೇಳೆ ಸಾಲ ನೀಡಲು ನಿರಾಕರಿಸಿದ್ದಕ್ಕೆ ಬ್ಯಾಂಕ್ ಲೂಟಿ ಮಾಡುವುದಾಗಿ ಬೆದರಿಕೆಯೊಡ್ಡಿರುವ ಘಟನೆ ತಮಿಳುನಾಡಿನ (Tamil Nadu) ತಿರುವಾರೂರಿನಲ್ಲಿ (Thiruvarur) ನಡೆದಿದೆ.

    ಸನ್ಯಾಸಿಯನ್ನು (Moke) ತಿರುಮಲೈ ಸಾಮಿ ಎಂದು ಗುರುತಿಸಲಾಗಿದ್ದು, ಈತ ಚೀನಾದಲ್ಲಿ ವೈದ್ಯಕೀಯ ಪದವಿ ಓದುತ್ತಿರುವ ತನ್ನ ಮಗಳಿಗೆ ಸಾಲ ನೀಡುವಂತೆ ಕೇಳಲು ಖಾಸಗಿ ವಲಯದ ಬ್ಯಾಂಕ್ (Bank) ಮೊರೆ ಹೋಗಿದ್ದನು. ಈ ವೇಳೆ ಬ್ಯಾಂಕ್ ಅಧಿಕಾರಿಗಳು ಆಸ್ತಿ ದಾಖಲೆ ನೀಡುವಂತೆ ಕೇಳಿದ್ದು, ಇದಕ್ಕೆ ತಿರುಮಲೈ ಸಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಅಲ್ಲದೇ ಸಾಲದ (Loan) ಮೊತ್ತವನ್ನು ಬಡ್ಡಿ ಸಮೇತ ಮರುಪಾವತಿಸುವಾಗ ಬ್ಯಾಂಕ್‍ಗೆ ಯಾಕೆ ತನ್ನ ಆಸ್ತಿ, ಜಮೀನಿನ ದಾಖಲೆಗಳನ್ನು ನೀಡಬೇಕು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಿರ್ಮಾಣ ಹಂತದ ಗೋಡೆ ಕುಸಿತ- ನಾಲ್ವರು ಸಾವು, 9 ಮಂದಿಗೆ ಗಾಯ

    ಕೊನೆಗೆ ಬ್ಯಾಂಕ್ ಅಧಿಕಾರಿಗಳು ತಿರುಮಲೈ ಸಾಮಿ (Thirumalai Samy) ಸಲ್ಲಿಸಿದ್ದ ಸಾಲದ ಅರ್ಜಿಯನ್ನು ತಿರಸ್ಕರಿಸಿದರು. ನಂತರ ಮನೆಗೆ ಹೋಗಿ ಸಾಮಿ ತನ್ನ ರೈಫಲ್ ತೆಗೆದುಕೊಂಡು ಬ್ಯಾಂಕಿಗೆ ಹಿಂತಿರುಗಿದನು. ಬಳಿಕ ಕುರ್ಚಿ ಮೇಲೆ ಕುಳಿತುಕೊಂಡು ಧೂಮಪಾನ ಮಾಡಲು ಆರಂಭಿಸಿದಲ್ಲದೇ ಬ್ಯಾಂಕ್ ಸಿಬ್ಬಂದಿಗೆ ಬೆದರಿಕೆಯೊಡ್ಡಿದ್ದಾನೆ. ಜೊತೆಗೆ ಫೇಸ್‍ಬುಕ್‍ನಲ್ಲಿ ಲೈವ್‌ (Facebook Live) ಬಂದು ಸಾಲ ನೀಡಲು ನಿರಾಕರಿಸಿದ್ದಕ್ಕೆ ಬ್ಯಾಂಕ್ ಲೂಟಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ. ಇದನ್ನೂ ಓದಿ: ಸುಮ್ಮನಹಳ್ಳಿ ಬ್ರಿಡ್ಜ್‌ ಮತ್ತೆ ಕುಸಿತದ ಭೀತಿ – ನೆಲ ಕಾಣುವ ಮಟ್ಟಕ್ಕೆ ಕಿತ್ತು ಹೋದ ಕಾಂಕ್ರಿಟ್ ಸ್ಲ್ಯಾಬ್

    ಅವರು ಕುಳಿತು ಧೂಮಪಾನ ಮಾಡಲು ಪ್ರಾರಂಭಿಸಿದರು ಮತ್ತು ಬ್ಯಾಂಕ್ ಉದ್ಯೋಗಿಗಳಿಗೆ ಬೆದರಿಕೆ ಹಾಕಿದರು. ಅವರ ಫೇಸ್‍ಬುಕ್ ಪುಟದಲ್ಲಿ ಅವರ ಕ್ರಿಯೆಗಳನ್ನು ಲೈವ್-ಸ್ಟ್ರೀಮ್ ಮಾಡುವಾಗ, ಅವರು ಸಾಲವನ್ನು ನಿರಾಕರಿಸಿದ್ದಕ್ಕಾಗಿ ಬ್ಯಾಂಕ್ ಅನ್ನು ಲೂಟಿ ಮಾಡುವುದಾಗಿ ಹೇಳುವುದನ್ನು ಕೇಳಬಹುದು. ಬಳಿಕ ಈ ಬಗ್ಗೆ ಮಾಹಿತಿ ದೊರೆತ ಪೊಲೀಸರು ಬ್ಯಾಂಕ್‍ಗೆ ಆಗಮಿಸಿ ಸನ್ಯಾಸಿಯನ್ನು ಬಂಧಿಸಿ, ತನಿಖೆ ಆರಂಭಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗರ್ಭಿಣಿ ಮೇಲೆ ಸನ್ಯಾಸಿ ರೇಪ್- ಕಾಂಡೋಮ್, 19 ಮೊಬೈಲ್, 33 ಪೆನ್‍ಡ್ರೈವ್ ಪತ್ತೆ

    ಗರ್ಭಿಣಿ ಮೇಲೆ ಸನ್ಯಾಸಿ ರೇಪ್- ಕಾಂಡೋಮ್, 19 ಮೊಬೈಲ್, 33 ಪೆನ್‍ಡ್ರೈವ್ ಪತ್ತೆ

    – ದೊಡ್ಡ ಬ್ಯಾಗಿನಲ್ಲಿ 2 ಲ್ಯಾಪ್‍ಟಾಪ್, 4 ಹಾರ್ಡ್ ಡಿಸ್ಕ್ ಪತ್ತೆ

    ಜೈಪುರ: ಗರ್ಭಿಣಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಜೈನ ಸನ್ಯಾಸಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಆರೋಪಿ ಜೈನ ಸನ್ಯಾಸಿ ಮನೆಯಲ್ಲಿ ಪೆನ್ ಡ್ರೈವ್, ಕಾಂಡೋಮ್ ಪ್ಯಾಕೆಟ್ ಮತ್ತು ಎರಡು ಲ್ಯಾಪ್‍ಟಾಪ್, ಮೊಬೈಲ್ ಫೋನ್‍ಗಳು ಪತ್ತೆಯಾಗಿರುವ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ನಡೆದಿದೆ.

    ಬಂಧಿತ ಆರೋಪಿಯನ್ನು 38 ವರ್ಷದ ಜೈನ ಸನ್ಯಾಸಿ ಸುಕುಮಾಲ್ ನಂದಿ ಎಂದು ಗುರುತಿಸಲಾಗಿದೆ. ವಶಪಡಿಸಿಕೊಂಡ ವಸ್ತುಗಳು ಆರೋಪಿ ವಾಸಿಸುತ್ತಿದ್ದ ಸಮುದಾಯದ ಆಶ್ರಯ ಮನೆಯೊಂದರಲ್ಲಿ ದೊಡ್ಡ ಬ್ಯಾಗ್‍ನಲ್ಲಿ ಪತ್ತೆಯಾಗಿವೆ.

    ಬಂಧಿತ ಆರೋಪಿ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ಪ್ರಯೋಗಾಲಯ ತಂಡವನ್ನು ಕರೌಲಿಗೆ ನಿಯೋಜಿಸಲಾಗಿತ್ತು. ಈ ತಂಡವು ಶುಕ್ರವಾರ ಬೆಳಗ್ಗೆ ಆರೋಪಿ ಸನ್ಯಾಸಿ ವಾಸಿಸುತ್ತಿದ್ದ ಮನೆಗೆ ಹೋಗಿದೆ. ಅಲ್ಲಿ ತಪಾಸಣೆ ಮಾಡುವ ಸಂದರ್ಭದಲ್ಲಿ ದೊಡ್ಡ ಬ್ಯಾಗ್‍ಯೊಂದು ಪತ್ತೆಯಾಗಿದೆ.

    ಆ ಚೀಲವನ್ನು ತೆರೆದು ನೋಡಿದಾಗ ಅದರಲ್ಲಿ 19 ಮೊಬೈಲ್ ಫೋನ್, ಎರಡು ಲ್ಯಾಪ್‍ಟಾಪ್, ನಾಲ್ಕು ಹಾರ್ಡ್ ಡಿಸ್ಕ್, ಕಾಂಡೋಮ್ ಪ್ಯಾಕೆಟ್‍ಗಳು ಮತ್ತು 33 ಪೆನ್ ಡ್ರೈವ್‍ಗಳನ್ನು ಪತ್ತೆಯಾಗಿದೆ. ತನಿಖಾ ಅಧಿಕಾರಿಗಳು ಹಾರ್ಡ್ ಡಿಸ್ಕ್ ಗಳನ್ನು ಸ್ಕ್ಯಾನ್ ಮಾಡಿದ್ದಾರೆ. ಅದರಲ್ಲಿ ಅನೇಕ ಅಶ್ಲೀಲ ವಿಡಿಯೋ ಇರುವುದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

    ಸಂತ್ರಸ್ತೆ ಗರ್ಭಿಣಿ ತನ್ನ ಅತ್ತಿಗೆಯೊಂದಿಗೆ ಗುರುವಾರ ಆಶೀರ್ವಾದ ಪಡೆಯಲು ಆರೋಪಿ ಸನ್ಯಾಸಿಯನ್ನು ಭೇಟಿ ಮಾಡಲು ಹೋಗಿದ್ದರು. ಮೊದಲು ಸಂತ್ರಸ್ತೆಯ ಅತ್ತಿಗೆ ರೂಮಿಗೆ ಹೋಗಿದ್ದಾರೆ. ಆಗ ಸನ್ಯಾಸಿ ಆಕೆಯ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ನಂತರ ಸಂತ್ರಸ್ತೆ ರೂಮಿಗೆ ಹೋಗಿದ್ದು, ಈ ವೇಳೆ ಆರೋಪಿ ನಂದಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಒಂದು ವೇಳೆ ಈ ವಿಚಾರವನ್ನು ಕುಟುಂಬದವರಿಗೆ ಹೇಳಿದರೆ ನನ್ನ ಅಧಿಕಾರವನ್ನು ಬಳಸಿಕೊಂಡು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಇನ್ಸ್‌ಪೆಕ್ಟರ್ ಲಕ್ಷ್ಮಣ್ ಗೌರ್ ಹೇಳಿದರು.

    ಸಂತ್ರಸ್ತೆ ಮನೆಗೆ ಹಿಂದಿರುಗಿದ ನಂತರ ನಡೆದ ಘಟನೆಯನ್ನು ಕುಟುಂಬದವರ ಬಳಿ ಹೇಳಿದ್ದಾರೆ. ತಕ್ಷಣ ಕುಟುಂಬದವರು ಪೊಲೀಸ್ ಠಾಣೆಗೆ ಬಂದು ಸನ್ಯಾಸಿ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯಕ್ಕೆ ಆತನ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಪೊಲೀಸರು ಆರೋಪಿ ಸನ್ಯಾಸಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬರುತ್ತಿದ್ದಂತೆ ಆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾಗಿತ್ತು ಎಂದು ಲಕ್ಷ್ಮಣ್ ಗೌಡರ್ ತಿಳಿಸಿದರು.

  • ಸಿನಿಮಾ ನೋಡಿ ಮನೆ ಬಿಟ್ಟು ಹೋದ ಯುವಕ

    ಸಿನಿಮಾ ನೋಡಿ ಮನೆ ಬಿಟ್ಟು ಹೋದ ಯುವಕ

    -ಲ್ಯಾಪ್‍ಟ್ಯಾಪ್ ನಿಂದ ಬೆಂಗ್ಳೂರು ಯುವಕ ದೆಹಲಿಯಲ್ಲಿ ಪತ್ತೆ!

    ಬೆಂಗಳೂರು: ಉನ್ನತ ವ್ಯಾಸಂಗಕ್ಕಾಗಿ ಹೊರ ರಾಜ್ಯದಿಂದ ಬಂದ ವಿದ್ಯಾರ್ಥಿಯೊಬ್ಬ ಚಿಕ್ಕಪ್ಪನ ಮನೆಯಲ್ಲಿ ಆಶ್ರಯ ಪಡೆದು ಓದು ಮುಂದುವರಿಸಿದ್ದನು. ಆದರೆ ಇದ್ದಕ್ಕಿದ್ದ ಹಾಗೆ ಪತ್ರ ಬರೆದಿಟ್ಟು ನನ್ನನ್ನ ಹುಡುಕಬೇಡಿ, ಧನ್ಯವಾದಗಳು ಚಿಕ್ಕಪ್ಪ ಎಂದು ಕಾಣೆಯಾಗಿದ್ದನು. ಈಗ ವಿದ್ಯಾರ್ಥಿ ಪತ್ತೆಯಾಗಿದ್ದಾನೆ.

    ದೇವಾಂಶ್ ಪತ್ತೆಯಾಗಿರುವ ಯುವಕ. ಬಂಡೇಪಾಳ್ಯದ ಆರ್ಟ್ ಅಂಡ್ ಡಿಸೈನ್ ಕಾಲೇಜಿನಲ್ಲಿ ಓದುತ್ತಿದ್ದು, ವ್ಯಾಸಂಗಕ್ಕಾಗಿ ಅಂತ ಬಂದು ಚಿಕ್ಕಪ್ಪನ ಮನೆಯಲ್ಲಿ ಉಳಿದುಕೊಂಡಿದ್ದನು. ಆದರೆ ಖರ್ಚಿಗೆ ತನ್ನ ಎಟಿಎಂ ಕಾರ್ಡ್ ನಲ್ಲಿ 3 ಸಾವಿರ ಹಣ ಡ್ರಾ ಮಾಡಿಕೊಂಡು ಮನೆಯಲ್ಲಿ ತನ್ನ ಮೊಬೈಲ್ ಹಾಗೂ ಡೆಬಿಟ್ ಕಾರ್ಡ್ ಗಳನ್ನ ಬಿಟ್ಟು ಹೋಗಿದ್ದನು. ಈ ಹಿನ್ನೆಲೆಯಲ್ಲಿ ತಕ್ಷಣವೇ ಚಿಕ್ಕಪ್ಪ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಸಿನಿಮಾ:
    ಬೆಂಗಾಲಿಯ ಮಸಾನ್ ಸಿನಿಮಾ ನೋಡಿ ಪ್ರೇರಿತಗೊಂಡು ಚಿತ್ರದಲ್ಲಿ ಬರುವ ವಾರಣಾಸಿಯ ಸನ್ಯಾಸಿಗಳಿಗೆ ಮನಸೋತಿದ್ದನು. ದೇವಾಂಶ್ ತಾನು ಕೂಡ ಸನ್ಯಾಸಿಯಾಗಬೇಕು ಅಂದುಕೊಂಡಿದ್ದು, ವಾರಣಾಸಿಯ ಕೆಲ ಸಂಪ್ರದಾಯದ ಬಗ್ಗೆ ತಿಳಿದುಕೊಂಡು ಹೊರಟಿದ್ದನು. ಅಲ್ಲದೇ ಹೊರಡುವಾಗ ಹಿಂದಿಯಲ್ಲಿ ಪತ್ರ ಬರೆದಿಟ್ಟು ತೆರಳಿದ್ದನು. ಇದಾದ ಬಳಿಕ ತನ್ನ ಗೆಳೆಯರೊಂದಿಗೆ ಮಾತನಾಡಿ, ತನಗೆ ಗಾಂಜಾ ಬೇಕು ಎಂದಿದ್ದನು. ದೇವಾಂಶ್ ಗೆ ಗಾಂಜಾ ಚಟವಿದ್ದರೂ ಮನೆಯಲ್ಲಿ ಎಲ್ಲೂ ತೋರಿಸಿಕೊಳ್ಳಲಿಲ್ಲ ಎಂದು ತಿಳಿದು ಬಂದಿದೆ.

    ಹುಡಕಾಟ:
    ಎಫ್‍ಐಆರ್ ದಾಖಲಿಸಿ ತನಿಖೆ ಶುರು ಮಾಡಿದ್ದ ಬಂಡೇಪಾಳ್ಯ ಪೊಲೀಸರು, ಪ್ರತ್ಯೇಕ ತಂಡವನ್ನ ರಚಿಸಿ, ಎಲ್ಲಾ ರೈಲ್ವೇ ನಿಲ್ದಾಣದಲ್ಲಿ ಹುಡುಕಾಟ ನಡೆಸಿದ್ದರು. ಮತ್ತೊಂದೆಡೆ ಮನೆಯಲ್ಲಿ ಸಿಕ್ಕ ಪತ್ರ ಹಾಗೂ ಆತನ ಫೋನ್ ಬಗ್ಗೆ ಪರಿಶೀಲನೆ ಮಾಡಿದ್ದು, ಮನೆಯಲ್ಲಿ ಆತ ಉಪಯೋಗಿಸುತ್ತಿದ್ದ ಲ್ಯಾಪ್ ಟಾಪ್ ಪರಿಶೀಲನೆ ನಡೆಸಿದ್ದಾರೆ. ಆಗ ಲ್ಯಾಪ್ ಟಾಪ್ ನಲ್ಲಿ ಅತಿ ಹೆಚ್ಚು ಬಾರಿ ‘ಮಸಾನ್’ ಸಿನಿಮಾ ನೋಡಿದ್ದು ಪತ್ತೆಯಾಗಿದೆ. ಅಷ್ಟೇ ಅಲ್ಲದೇ ಸನ್ಯಾಸತ್ವ ಕುರಿತು ಕೆಲ ರೀಸರ್ಚ್ ವರ್ಕ್ ಕೂಡ ಮಾಡಿದ್ದನು. ಜೊತೆಗೆ ವಾರಣಾಸಿಯಲ್ಲಿ ಯಾವ ರೀತಿ ಸನ್ಯಾಸಿಗಳು ಇರುತ್ತಾರೆ ಹಾಗೂ ಹೇಗಿರುತ್ತೆ ಅನ್ನೋದರ ಬಗ್ಗೆ ಅರಿತಿದ್ದನು. ಈ ಹಿನ್ನೆಲೆಯಲ್ಲಿ ಮೊದಲೇ ಸಿದ್ಧವಾಗಿ ಯುವಕ ದೇವಾಂಶ್ ಮನೆ ಬಿಟ್ಟು ಹೊರಟಿದ್ದನು.


    ಪೊಲೀಸರು ಗೋವಾ, ಡೆಲ್ಲಿ ರೈಲ್ವೆ ನಿಲ್ದಾಣದಲ್ಲಿ ವಿಚಾರಿಸಿದ್ದರು. ಅದಕ್ಕೂ ಮೊದಲು ಪೊಲೀಸರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ್ದಾರೆ. ಅದರ ಅನ್ವಯ ಬೆಂಗಳೂರಿನಿಂದ ವಾರಣಾಸಿಗೆ ಹೊರಟ ರೈಲಿನ ಬಗ್ಗೆ ವಿಚಾರಿಸಿದ್ದು, ಅದರ ಕಂಪ್ಲೀಟ್ ಡಿಟೇಲ್ಸ್ ಹೊರತೆಗೆದಿದ್ದರು. ದೇವಾಂಶ್ ನಾಪತ್ತೆಯಾದ ದಿನದ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಸಿಸಿಟಿವಿ ಫೂಟೇಜ್ ನನ್ನು ಪರಿಶೀಲನೆ ನಡೆಸಿದ್ದಾರೆ. ಆಗ ದೇವಾಂಶ್ ಸಂಜೆ 4:20ಕ್ಕೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಬಳಿ ಕಾಣಿಸಿಕೊಂಡಿದ್ದನು.

    ಇದೇ ವೇಳೆ ಅಲ್ಲಿಂದ ಸುಮಾರು 5:20ಕ್ಕೆ ಮೆಜೆಸ್ಟಿಕ್ ನಿಂದ ವಾರಣಾಸಿಗೆ ರೈಲು ಹೊರಟಿತ್ತು. ಆ ರೈಲಿನಲ್ಲಿ ದೇವಾಂಶ್ ಹೋಗಿರಬಹುದು ಎಂಬ ಶಂಕೆ ಮೇರೆಗೆ ಎಲ್ಲಾ ಕಡೆ ಹುಡುಕಾಡಿದ್ದರು. ಅಲ್ಲಿನ ಆರ್ ಪಿಎಫ್ ಸಹಾಯದ ಮೇರೆಗೆ ದೆಹಲಿಯಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ. ಈ ಮೂಲಕ ನಾಪತ್ತೆಯಾದ ಯುವಕನನ್ನ ಪತ್ತೆ ಹಚ್ಚುವಲ್ಲಿ ಬಂಡೇಪಾಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀಗಳ ಬಗ್ಗೆ ಬಾಲ್ಯದಲ್ಲಿಯೇ ಇಂಟರೆಸ್ಟಿಂಗ್ ಭವಿಷ್ಯ ನುಡಿದಿದ್ದ ಹಸ್ತಸಾಮುದ್ರಿಕ ಸನ್ಯಾಸಿ!

    ಶ್ರೀಗಳ ಬಗ್ಗೆ ಬಾಲ್ಯದಲ್ಲಿಯೇ ಇಂಟರೆಸ್ಟಿಂಗ್ ಭವಿಷ್ಯ ನುಡಿದಿದ್ದ ಹಸ್ತಸಾಮುದ್ರಿಕ ಸನ್ಯಾಸಿ!

    ಶ್ರೀಗಳಿಗೆ ನಾಲ್ಕು ವರ್ಷವಿರುವಾಗಲೇ ಅವರ ಮನೆಗೆ ಹಸ್ತ ಸಾಮುದ್ರಿಕ ಸನ್ಯಾಸಿಯೊಬ್ಬರು ಆಗಮಿಸಿದ್ದರಂತೆ. ಇವರ ಮನೆಯ ಕಟ್ಟೆಯಲ್ಲಿ ಕೂತಿದ್ದ ಸನ್ಯಾಸಿಗೆ ಶಿವಣ್ಣದ ಬಾಲ್ಯದ ತೇಜೋ ವಿಶೇಷತೆಯನ್ನು ಕಂಡು ಸಂತೋಷಗೊಂಡಿದ್ದರು.

    ಬಳಿಕ ಶಿವಣ್ಣನ ಕೈಯನ್ನು ನೋಡಿ, “ಸ್ವಾಮಿ ಇಷ್ಟೊಂದು ಶುಭಲಕ್ಷಣದ ಕೈಯನ್ನು ನಾನು ನೋಡೇ ಇಲ್ಲ”, ಇವನೊಬ್ಬ ಮಹಾಭಾಗ್ಯವಂತ, ಅನ್ನದಾನಿ, ನಾಡೆಲ್ಲ ಇವರಿಂದಲೇ ಬೆಳಗುವುದು, ಇವರು ಕಾಲಜ್ಞಾನಿ. ನಿಮ್ಮ ಕೈಗೆ ಸಿಗುವವನಲ್ಲ, ಲೋಕದ ಸ್ವತ್ತು” ಎಂದು ಭವಿಷ್ಯ ನುಡಿದಿದ್ದರು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳಿಗಾಗಿ ವಿಮಾನದಲ್ಲಿಯೇ ಕುಳಿತು ಕವನ ಬರೆದ ಅಬ್ದುಲ್ ಕಲಾಂ!

    ಸನ್ಯಾಸಿಯ ಭವಿಷ್ಯವನ್ನು ಮನೆ ಅವರು ಯಾರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ದಿನದಿಂದ ದಿನಕ್ಕೆ ಬಾಲಕ ಶಿವಯೋಗಿಯಾಗಿ ಬದಲಾಗುತ್ತಾ ಕೊನೆಗೆ ಶಿವಕುಮಾರ ಸ್ವಾಮೀಜಿಯಾಗಿ ಸಿದ್ದಗಂಗಾ ಮಠದ ಅಧಿಕಾರ ಸ್ವೀಕರಿಸಿ ನಡೆದಾಡುವ ದೇವರಾಗಿದ್ದು ಇತಿಹಾಸ.

    ಕುದುರೆ ಸವಾರಿ: ಕುದುರೆ ಸವಾರಿಯನ್ನು ಅತ್ಯಂತ ಪ್ರೀತಿಸುತ್ತಿದ್ದ ಸಿದ್ದಗಂಗಾ ಶ್ರೀ ಅವರ ಬಾಲ್ಯದ ಬದುಕು ಎಲ್ಲರಂತೆ ತುಂಟಾಟದಿಂದಲೇ ಕೂಡಿತ್ತು. ತಂದೆ ಇಲ್ಲದ ವೇಳೆಯಂತೂ ಕುದುರೆಯನ್ನು ಬಿಚ್ಚಿಕೊಂಡು ಹೋಗಿ ಧೂಳೆಬ್ಬಿಸುವಂತೆ ಕುದುರೆ ಸವಾರಿ ಮಾಡುತ್ತಿದ್ದರಂತೆ. ಸಿದ್ದಗಂಗಾ ಅಧಿಕಾರ ಸ್ವೀಕರಿಸಿದ ಆರಂಭದಲ್ಲಿ ಶಿವಕುಮಾರ ಸ್ವಾಮೀಜಿಗಳು ಭಕ್ತರ ಮನೆಗೆ ಕುದುರೆ ಮೂಲಕ ಸಂಚರಿಸಿ ಭೇಟಿ ನೀಡುತ್ತಿದ್ದರು. ಇದನ್ನೂ ಓದಿ: ಶ್ರೀಗಳ 50 ಶ್ರೀವಾಣಿಗಳು – ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ

    ಹಲಸಿನ ಹಣ್ಣನ್ನು ಇಷ್ಟಪಡುತ್ತಿದ್ದ ಶ್ರೀಗಳು ಯಾವಾಗಲೂ ಹಣ್ಣಿನ ಮರವೇರಿ ಹಣ್ಣನ್ನು ಕೊಯ್ದು ತಿನ್ನುತ್ತಿದ್ದರಂತೆ. ವೀರಾಪುರದ ಊರಿನಲ್ಲಿ ಯಾವ ಮರದಲ್ಲಿ ಹಣ್ಣು ಬಿಟ್ರೂ ಮೊದಲ ಪಾಲು ಶ್ರೀಗಳಿಗೆ ಮೀಸಲಾಗಿತ್ತು. ಬಾಲ್ಯದಲ್ಲಿಯೇ ದಾಸೋಹದ ಬಗ್ಗೆ ಅಪರಿಮಿತ ಆಸ್ಥೆ ಇಟ್ಟುಕೊಂಡಿದ್ದ ಶ್ರೀಗಳು ಹಣ್ಣನ್ನು ಇಡೀ ಊರಿನ ಹುಡುಗರಿಗೆ ಹಂಚಿಯೇ ತಿನ್ನುತ್ತಿದ್ದರು.

    ಬಾಲ್ಯದಲ್ಲಿ ತಾಯಿ ನಿಧನ: ನಾಲ್ಕನೇ ತರಗತಿ ಓದುತ್ತಿದ್ದ ಶ್ರೀಗಳ ಬದುಕಿಗೆ ದೊಡ್ಡ ಅಘಾತವಾಗಿದ್ದು, ಎದೆಗವುಚಿಕೊಂಡು ಬದುಕಿನ ಅಷ್ಟು ಸಂಸ್ಕಾರ ಧಾರೆಯೆರೆದ ತಾಯಿಯನ್ನು ಕಳೆದುಕೊಂಡಾಗ. ಸಣ್ಣ ವಯಸಿನಲ್ಲಿ ತಾಯಿಯನ್ನು ಕಳೆದುಕೊಂಡು ತೀರಾ ಅಘಾತ ಅನುಭವಿಸಿದ್ದ ಶ್ರೀಗಳು ತಮ್ಮನ್ನೇ ತಾವೇ ಸಮಾಧಾನ ಪಡಿಸಿಕೊಂಡು ಅಕ್ಕನಲ್ಲಿಯೇ ತಾಯಿಯ ಪ್ರೀತಿಯನ್ನು ಕಂಡ್ರು. ಮುಂದೆ ಬದುಕಿನಲ್ಲಿ ಅದೆಷ್ಟೋ ಅನಾಥ ಜೀವಗಳಿಗೆ ಗುರುಗಳು ತಾಯಿ ಪ್ರೀತಿಯನ್ನು ಮೊಗೆ ಮೊಗೆದು ಕೊಟ್ಟರು. ಹಸಿದ ಹೊಟ್ಟೆಗೆ ಅಮ್ಮನಂತೆ ಊಟ ಬಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸನ್ಯಾಸಿಯಾಗೋದಕ್ಕೆ ಮನಸ್ಸು ಮಾಡಿದ್ದರು ರಾಕಿಂಗ್ ಸ್ಟಾರ್..!

    ಸನ್ಯಾಸಿಯಾಗೋದಕ್ಕೆ ಮನಸ್ಸು ಮಾಡಿದ್ದರು ರಾಕಿಂಗ್ ಸ್ಟಾರ್..!

    ಬೆಂಗಳೂರು: ಸ್ಯಾಂಡಲ್‍ವುಡ್ ರಾಂಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಕೆಜಿಎಫ್’ ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ನಟ ಯಶ್ ಅವರು ಒಂದು ಬ್ರೇಕಿಂಗ್ ಸುದ್ದಿ ಕೊಟ್ಟಿದ್ದಾರೆ.

    ನಟ ಯಶ್, ತಾವು ಸಿನಿಮಾ ಸ್ಟಾರ್ ಆಗದಿದ್ದರೆ ಸನ್ಯಾಸಿಯಾಗುತ್ತಿದ್ದೆ ಎಂದು ಹೇಳಿದ್ದಾರೆ. ಕೆಜಿಎಫ್ ಸಿನಿಮಾ ಪ್ರಮೋಶನ್‍ಗಾಗಿ ಯಶ್ ನಾಲ್ಕು ಭಾಷೆಯ ಮಾಧ್ಯಮಗಲ್ಲಿ ಸಂದರ್ಶನ ಕೊಡುತ್ತಿದ್ದಾರೆ. ಆದರೆ ಮಾಧ್ಯಮವೊಂದರಲ್ಲಿ ಜನರು ಪ್ರಶ್ನೆಗಳನ್ನು ಯಶ್ ಮುಂದೆ ಇಟ್ಟಿದ್ದರು.

    ಒಂದು ಪ್ರಶ್ನೆಗೆ ಒಂದೇ ಸಾಲಿನ ಉತ್ತರ ಕೊಡುವುದು ಪದ್ಧತಿಯಾಗಿತ್ತು. ಈ ವೇಳೆ ವ್ಯಕ್ತಿಯೊಬ್ಬ ಯಶ್ ಅವರಿಗೆ, ನೀವು `ನಟನಾಗದಿದ್ದರೆ ಇನ್ಯಾವ ವೃತ್ತಿ ಮಾಡುತ್ತಿದ್ರಿ’ ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ನಟ ಯಶ್ ‘ನಾನು ನಟನಾಗದಿದ್ದರೆ ಸ್ವಾಮೀಜಿಯಾಗುತ್ತಿದ್ದೆ’ ಎಂದು ಉತ್ತರ ಕೊಟ್ಟಿದ್ದಾರೆ. ನಟ ಯಶ್ ಉತ್ತರ ಕೇಳಿ ಎಲ್ಲರೂ ಒಂದು ಕ್ಷಣ ಶಾಕ್ ಆಗಿದ್ದು, ಆ ಬಳಿಕ ನಕ್ಕಿದ್ದಾರೆ.

    ಸದ್ಯಕ್ಕೆ ಯಶ್ ಯಾಕೆ ಆ ಉತ್ತರ ಹೇಳಿದ್ರು ಎಂದು ಅಭಿಮಾನಿಗಳಲ್ಲಿ ಗೊಂದಲ ಮೂಡಿದೆ. ಸದ್ಯಕ್ಕೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ‘ಕೆಜಿಎಫ್’ ಸಿನಿಮಾ ಡಿ.21 ರಂದು ಬಿಡುಗಡೆಯಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 15 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ: ಬೌದ್ಧ ಸನ್ಯಾಸಿ ಅರೆಸ್ಟ್

    15 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ: ಬೌದ್ಧ ಸನ್ಯಾಸಿ ಅರೆಸ್ಟ್

    ಪಾಟ್ನಾ: ಬಿಹಾರದ ಬೋಧ್ ಗಯಾದಲ್ಲಿ 15 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇರೆಗೆ ಬೌದ್ಧ ಸನ್ಯಾಸಿಯನ್ನು ಬುಧವಾರ ಪೋಲಿಸರು ಬಂಧಿಸಿದ್ದಾರೆ.

    ಬೋಧ್‍ಗಯಾದಲ್ಲಿನ ಮಾಸ್ತಿಪುರ್ ಗ್ರಾಮದಲ್ಲಿ ಸನ್ಯಾಸಿ, ಪ್ರಸನ್ನ ಜ್ಯೋತಿ ಬೌದ್ಧ ಶಾಲೆ ಮತ್ತು ಧ್ಯಾನ ಕೇಂದ್ರ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದನು. ಆ ಕೇಂದ್ರದಲ್ಲಿ ಅಸ್ಸಾಂನ ಕರ್ಬಿ ಆಂಗ್ಲೋಂಗ್ ಜಿಲ್ಲೆಯ ಮಕ್ಕಳು ಅಧ್ಯಯನ ಮಾಡುತ್ತಿದ್ದರು. ಸನ್ಯಾಸಿ ಈ ಬಾಲಕರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಡೆಪ್ಯೂಟಿ ಎಸ್ಪಿ ರಾಜ್ಕುಮಾರ್ ಷಾ ಅವರು ಈ ಘಟನೆ ಕುರಿತು ಸನ್ಯಾಸಿಯನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ಅನಿಲ್ ಕುಮಾರ್ ಹೇಳಿದ್ದಾರೆ.

    6 ರಿಂದ 12 ವರ್ಷದ ಚಿಕ್ಕ ಮಕ್ಕಳನ್ನು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುವಂತೆ ಸನ್ಯಾಸಿ ಒತ್ತಡ ಹಾಕುತ್ತಿದ್ದ ಎಂದು ಬಾಲಕರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬೌದ್ಧ ಶಾಲೆ ಮತ್ತು ಧ್ಯಾನ ಕೇಂದ್ರವನ್ನು ನಡೆಸುತ್ತಿದ್ದ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೂರು ಕೋಟಿ ಆಸ್ತಿ ತ್ಯಜಿಸಿ ಜೈನ ದೀಕ್ಷೆ ಪಡೆದ 24ರ ಯುವಕ!

    ನೂರು ಕೋಟಿ ಆಸ್ತಿ ತ್ಯಜಿಸಿ ಜೈನ ದೀಕ್ಷೆ ಪಡೆದ 24ರ ಯುವಕ!

    ಅಹಮದಾಬಾದ್: ಮುಂಬೈ ಮೂಲದ 24ರ ಹರೆಯದ ಯುವಕ ಮೋಕ್ಷೇಶ್ ಸೇಟ್ ಶುಕ್ರವಾರ ಬೆಳಗ್ಗೆ ಜೈನ ದೀಕ್ಷೆಯನ್ನು ಸ್ವೀಕರಿಸಿದರು.

    ಮೋಕ್ಷೇಶ್ ಕುಟುಂಬಕ್ಕೆ ಜೆ ಕೆ ಕಾರ್ಪೊರೇಷನ್ ಹೆಸರಿನ ವಜ್ರ ಲೋಹದ ಮತ್ತು ಸಕ್ಕರೆ ಉದ್ಯಮಗಳಿವೆ. ಸುಮಾರು ನೂರು ಕೋಟಿ ಆಸ್ತಿಯನ್ನು ತ್ಯಜಿಸಿದ್ದಾರೆ. ಚಾರ್ಟೇಡ್ ಅಕೌಂಟೆಂಟ್ ಆಗಿರುವ ಇವರು ಎಲ್ಲಾ ಆಸ್ತಿಪಾಸ್ತಿಯನ್ನು ಬಿಟ್ಟು ಗಾಂಧಿನಗರ-ಅಹಮದಾಬಾದ್ ರಸ್ತೆಯ ತಪೋವನ ಸರ್ಕಲ್‍ನಲ್ಲಿ ಇಂದು ಜೈನ ದೀಕ್ಷೆ ಸ್ವೀಕರಿಸಿದರು.

    ವಿದ್ಯಾಭ್ಯಾಸದಲ್ಲಿ ಮೊದಲಿಗನಾಗಿದ್ದ ನಾನು ಕಂಪನಿಯ ಲೆಕ್ಕ ಪರಿಶೋಧನೆಗಿಂತ ಧರ್ಮದ ಪರಿಶೋಧನೆಯ ವಿದ್ಯಾರ್ಥಿಯಾಗಲು ಬಯಸುತ್ತೇನೆ. 15 ವರ್ಷ ಇದ್ದಾಗಲೇ ಸನ್ಯಾಸಿಯಾಗಲು ಬಯಸಿದ್ದೆ. ಈ ಪ್ರಪಂಚದಿಂದ ನೆಮ್ಮದಿಯ ಜೀವನ ಸಿಗದ ಕಾರಣ ಈ ನಿರ್ಧಾರ ಕೈಗೊಂಡಿದ್ದೇನೆ. ನನ್ನೊಬ್ಬನ ಸಂತೋಷಕ್ಕಿಂತ ಎಲ್ಲರ ಸಂತೋಷವನ್ನು ಬಯಸುತ್ತೇನೆ ಎಂದು ಮೋಕ್ಷೇಶ್ ಹೇಳಿದ್ದಾರೆ.

    ಮೋಕ್ಷೇಶ್ ಕುಟುಂಬದವರು ಉತ್ತರ ಗುಜರಾತ್ ನ ಡೀಸಾ ನಿಂದ ವಲಸೆ ಬಂದು ಮಂಬೈನಲ್ಲಿ ನೆಲೆಸಿ 60 ವರ್ಷ ಆಗಿದೆ. ತಂದೆ ಸಂದೀಪ್, ಚಿಕ್ಕಪ್ಪ ಗಿರೀಶ್ ಸೇಟ್ ಒಟ್ಟಿಗೆ ವಾಸಮಾಡುತ್ತಿದ್ದಾರೆ.

    ಮೂರು ಜನ ಅಣ್ಣ ತಮ್ಮಂದಿರಲ್ಲಿ ಮೋಕ್ಷೇಶ್ ಮೊದಲನೆಯವರು. ವಾಲೇಶ್ವರ್‍ನಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿದ್ದ ಮೋಕ್ಷೇಶ್ 10ನೇ ತರಗತಿಯಲ್ಲಿ 93.38%, 12 ನೇ ತರಗತಿಯಲ್ಲಿ 85% ಅಂಕವನ್ನು ಪಡೆದ್ದರು.

    ಹೆಚ್‍ಆರ್ ಕಾಲೇಜಿನಲ್ಲಿ ವಾಣಿಜ್ಯ ಪದವಿ ಓದುತ್ತಿದ್ದಾಗ ಸಿಎ ಆರ್ಹತಾ ಪರೀಕ್ಷೆ ಪಾಸ್ ಮಾಡಿದ್ದ ಮೋಕ್ಷೇಶ್ ನಂತರ ಕುಟುಂಬದ ಲೋಹದ ವ್ಯವಹಾರವನ್ನು ಸಾಂಗ್ಲಿಯಲ್ಲಿ ಮುಂದುವರಿಸಿದರು.

    ಮೋಕ್ಷೇಶ್ ಆಧ್ಯಾತ್ಮದ ಕಡೆಗೆ ಹೆಚ್ಚು ಒಲವು ಹೊಂದಿದ್ದರು. ಸನ್ಯಾಸಿಯಾಗುವ ಬಯಕೆಯನ್ನು 8 ವರ್ಷದ ಕೆಳಗೆ ವ್ಯಕ್ತಪಡಿಸಿದ್ದರು. ಮೊದಲಿಗೆ ವಿದ್ಯಾಭ್ಯಾಸ ಮುಗಿಸಿ ಒಮ್ಮೆ ಪ್ರಪಂಚವನ್ನು ನೋಡಿ ಬಾ ಎಂದಿದ್ದೆವು. 200 ವರ್ಷ ಇತಿಹಾಸ ಇರುವ ನಮ್ಮ ಕುಟುಂಬದ ಪುರುಷ ಸದಸ್ಯರ ಪೈಕಿ ಸನ್ಯಾಸಿ ಆಗುತ್ತಿರುವುದು ಇವನೇ ಮೊದಲನೆಯವನು. ಮಹಿಳೆಯರ ಪೈಕಿ 5 ಜನ ಸಾಧ್ವಿಗಳಾಗಿದ್ದಾರೆ ಎಂದು ಗಿರೀಶ್ ಸೇಟ್ ತಿಳಿಸಿದ್ದಾರೆ.