Tag: ಸನ್ನಿ

  • ಭಾರತ ಗುಪ್ತಚರ ಇಲಾಖೆ ಸೇರಿಕೊಂಡ ಸನ್ನಿ ಲಿಯೋನ್

    ಭಾರತ ಗುಪ್ತಚರ ಇಲಾಖೆ ಸೇರಿಕೊಂಡ ಸನ್ನಿ ಲಿಯೋನ್

    ಬಾಲಿವುಡ್ ನಟಿ ಸನ್ನಿ ಲಿಯೋನ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದೊಂದು ಹಾಡಿಗೆ, ಅತಿಥಿ ಪಾತ್ರದಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಈ ನೀಲಿತಾರೆ, ಇದೀಗ ಅಚ್ಚರಿ ಎನ್ನುವಂತಹ ಸುದ್ದಿಯನ್ನು ಕೊಟ್ಟಿದ್ದಾರೆ. ಭಾರತ ಗುಪ್ತಚರ ಇಲಾಖೆ ರಾ ಏಜೆಂಟ್ ಆಗಿ ಅಭಿಮಾನಿಗಳ ಮುಂದೆ ನಿಲ್ಲಲಿದ್ದಾರೆ. ಇದನ್ನೂ ಓದಿ : ಸ್ಯಾಂಡಲ್ ವುಡ್ ಸಿಂಡ್ರೆಲಾ ಹೊಸ ನ್ಯೂಸ್ ಕೊಡ್ತಾರಾ?

    ಹಾಗಂತ ಅವರು ಭಾರತ ಗುಪ್ತಚರ ಇಲಾಖೆಗೆ ಸೇರಿಕೊಂಡರು ಅಂತ ಕನ್ ಫ್ಯೂಸ್ ಆಗಬೇಡಿ, ಅಂಥದ್ದೊಂದು ಪಾತ್ರವನ್ನು ಸನ್ನಿ, ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಅವರು ಹೊಸ ಜಗತ್ತಿಗೆ ಕಾಲಿಡುತ್ತಿದ್ದಾರೆ. ಇದನ್ನೂ ಓದಿ :  ಜಗ್ಗೇಶ್ ಗೆ ಕೈ ಕೊಟ್ಟ ಮಠದ ಗುರುಪ್ರಸಾದ್

    ಈಗಾಗಲೇ ಅನಾಮಿಕ ಹೆಸರಿನಲ್ಲಿ ಈ ವೆಬ್ ಸಿರೀಸ್ ಶೂಟಿಂಗ್ ಶುರುವಾಗಿದ್ದು, ಅಲ್ಲಿ ಸನ್ನಿಯದ್ದು ರಾ ಏಜೆಂಟ್ ಪಾತ್ರ. ಹಲವು ಕೇಸ್ ಗಳನ್ನು ಬೆನ್ನಹತ್ತಿ ರೋಚಕ ವಿಷಯಗಳನ್ನು ಜನರ ಮುಂದೆ ಇಡುವ ಪ್ರಯತ್ನ ಈ ಸಿರೀಸ್ ಮಾಡಲಿದೆಯಂತೆ. ಇದನ್ನೂ ಓದಿ : ಹಿರಣ್ಯ ಸಿನಿಮಾದ ಸ್ಪೆಷಲ್ ಪಾತ್ರದಲ್ಲಿ ಬಿಗ್ ಬಾಸ್ ದಿವ್ಯಾ

    ಅನಾಮಿಕ ವೆಬ್ ಸಿರೀಸ್ ನಲ್ಲಿ ಇವರ ಪಾತ್ರದ ಹೆಸರು ಏಜೆಂಟ್ ‘ಎಂ’ ಎಂದು. ಈಗಾಗಲೇ ಇದರ ಟ್ರೇಲರ್ ಕೂಡ ರಿಲೀಸ್ ಆಗಿದ್ದು, ಸನ್ನಿ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇಂತಹ ಸಾಕಷ್ಟು ಪಾತ್ರಗಳಲ್ಲಿ ಈ ತಾರೆ ಅಭಿನಯಿಸಲಿ ಎಂದು ಹಾರೈಸಿದ್ದಾರೆ.

  • ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ಕಣ್ಣೀರಿಟ್ಟ ಸಿಎಂ ಬೊಮ್ಮಾಯಿ

    ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ಕಣ್ಣೀರಿಟ್ಟ ಸಿಎಂ ಬೊಮ್ಮಾಯಿ

    ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಮಾನವೀಯ ಮೌಲ್ಯಗಳುಳ್ಳ, ಭಾವನಾತ್ಮಕ ವ್ಯಕ್ತಿ ಎಂಬುದು ತಿಳಿದಿರುವ ವಿಚಾರ. ಅದೇ ರೀತಿ ಅವರ ಮನೆಯ ಮುದ್ದಿನ ನಾಯಿ ಸನ್ನಿ ಬಗ್ಗೆ ಸಹ ಭಾವನಾತ್ಮಕ ಸಂಬಂಧ ಹೊಂದಿದ್ದರು. ಇದನ್ನು ನೆನೆದು ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ಸಹ ಕಣ್ಣೀರು ಹಾಕಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ವಿಶೇಷ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ ಅವರು, ಸನ್ನಿ ನಮ್ಮ ಮನೆಯ ಮುದ್ದಿನ ನಾಯಿಯಾಗಿತ್ತು. ಕುಟುಂಬದ ಎಲ್ಲ ಜೊತೆ ಬೆರೆಯುತ್ತಿತ್ತು. ಹೀಗಾಗಿ ತುಂಬಾ ಹಚ್ಚಿಕೊಂಡಿದ್ದೆವು. ನನ್ನ ಮಗಳಿಗೂ ಸನ್ನಿ ಎಂದರೆ ತುಂಬಾ ಇಷ್ಟವಾಗಿತ್ತು. ಮಗಳ ಹುಟ್ಟುಹಬ್ಬಕ್ಕೆ ನಾಯಿಯ ಗಿಫ್ಟ್ ಕೇಳಿದ್ದಳು. ಅದರಂತೆ ನಾಯಿಯನ್ನು ಮನೆಗೆ ತರಲಾಗಿತ್ತು. ಬಳಿಕ 14 ವರ್ಷಗಳ ಕಾಲ ಸನ್ನಿ ನಮ್ಮ ಮನೆಯಲ್ಲಿ ಕುಟುಂಬದ ಸದಸ್ಯನಾಗಿತ್ತು ಎಂದು ನೆನಪನ್ನು ಹಂಚಿಕೊಂಡರು. ಇದನ್ನೂ ಓದಿ: ಕುಟುಂಬದ ಓರ್ವ ಪ್ರೀತಿಯ ಸದಸ್ಯನನ್ನು ಕಳೆದುಕೊಂಡೆ – ಬೊಮ್ಮಾಯಿ

    ಇತ್ತೀಚೆಗೆ ಸನ್ನಿ ಸಾವನ್ನಪ್ಪಿತು. ಇದರ ದುಃಖ ಮರೆಯಲು ಆಗುತ್ತಿಲ್ಲ. ಸನ್ನಿಯ ಸ್ಥಾನವನ್ನು ಬೇರೆ ಯಾವುದೇ ನಾಯಿ ತುಂಬಲು ಸಾಧ್ಯವಿಲ್ಲ ಎಂದು ಈ ವರೆಗೆ ಬೇರೆ ನಾಯಿಯನ್ನು ತಂದಿಲ್ಲ ಎಂದು ತಿಳಿಸಿದರು. ಅಲ್ಲದೆ ಇದೇ ವೇಳೆ ತಮ್ಮ ಮುದ್ದಿನ ನಾಯಿಯನ್ನು ನೆನೆದು ಕಣ್ಣೀರು ಹಾಕಿದ್ದಾರೆ.

    ಸೂರ್ಯನಷ್ಟೇ ಪ್ರಕಾಶಮಾನವಾಗಿರಬೇಕು ಎಂಬ ಉದ್ದೇಶದಿಂದ ಸನ್ ಅಂದರೆ ಸೂರ್ಯ ಎಂಬರ್ಥದಲ್ಲಿ ಅದಕ್ಕೆ ಸನ್ನಿ ಎಂಬ ಹೆಸರಿಟ್ಟಿದ್ದೆವು. ನಮ್ಮ ಕುಟುಂಬದವರೊಂದಿಗೆ ತುಂಬಾ ಬೆರೆತಿತ್ತು. ಹೀಗಾಗಿ ಸನ್ನಿ ತೀರಿಕೊಂಡಾಗ ಬಹಳ ನೋವಾಗಿತ್ತು ಎಂದು ಹೇಳಿದರು.

  • ಪತಿಯನ್ನು ಬಿಡಲು ನಿರಾಕರಿಸಿದ್ದಕ್ಕೆ ಲವ್ವರ್‌ನಿಂದ ಎದೆ, ಸೊಂಟಕ್ಕೆ ಚಾಕು ಇರಿತ

    ಪತಿಯನ್ನು ಬಿಡಲು ನಿರಾಕರಿಸಿದ್ದಕ್ಕೆ ಲವ್ವರ್‌ನಿಂದ ಎದೆ, ಸೊಂಟಕ್ಕೆ ಚಾಕು ಇರಿತ

    – ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ

    ನವದೆಹಲಿ: ಪತಿಗೆ ಡಿವೋರ್ಸ್ ನೀಡಲು ಒಪ್ಪದಿದ್ದಕ್ಕೆ ಪ್ರಿಯತಮೆಯ ಸೊಂಟ ಹಾಗೂ ಎದೆಗೆ ಮನಬಂದಂತೆ ಚಾಕು ಇರಿದು, ಬಳಿಕ ವ್ಯಕ್ತಿಯೊಬ್ಬ ತನ್ನ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನವದೆಹಲಿಯಲ್ಲಿ ನಡೆದಿದೆ.

    5 ವರ್ಷಗಳ ಹಿಂದೆ ಪಿಂಕಿಯನ್ನು ಸಂಬಂಧಿಕರೊಬ್ಬರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಆಗ ಆಕೆಗೆ 19 ವರ್ಷ ವಯಸ್ಸಾಗಿತ್ತು. ಹಾಗೆಯೇ ದಂಪತಿಗೆ ಗಂಡು ಮಗುವೂ ಜನಿಸಿತ್ತು. ನಂತರ ದಂಪತಿ ಆರ್ಥಿಕವಾಗಿ ಸದೃಢವಾಗುವಲ್ಲಿ ನಿರತರಾಗಿದ್ದು, ಪಿಂಕಿ ಬ್ಯೂಟಿ ಪಾರ್ಲರ್ ತೆರೆಯುವ ಮೂಲಕ ಜೀವನ ಸಾಗುತಿತ್ತು.

    ಕಳೆದ ಪ್ರೇಮಿಗಳ ದಿನದಿಂದ ಪಿಂಕಿ ಜೀವನದಲ್ಲಿ ಮಹತ್ತರ ಟ್ವಿಸ್ಟ್ ಸಿಕ್ಕಿದೆ. ಗೆಳತಿಯೊಬ್ಬಳ ಮುಖಾಂತರ ದಕ್ಷಿಣ ದೆಹಲಿಯ ದೆವ್ಲಿ ನಿವಾಸಿ 26 ವರ್ಷದ ಸನ್ನಿ ಎಂಬಾತನ ಪರಿಚಯವಾಗಿದೆ. ಮೊದಲು ಇಬ್ಬರು ಗೆಳೆಯರಾಗಿದ್ದು, ಕ್ರಮೇಣ ಗೆಳೆತನ ಪ್ರೇಮಕ್ಕೆ ತಿರುಗಿತ್ತು. ಅಲ್ಲದೆ ಮುಂದುವರಿದು ಸನ್ನಿ, ಪಿಂಕಿಯನ್ನು ತನ್ನ ಬೈಕಿನಲ್ಲಿ ಕೂರಿಸಿಕೊಂಡು ಇಬ್ಬರೂ ಸುತ್ತಾಡಲು ಪ್ರಾರಂಭಿಸಿದರು. ಪಿಂಕಿಗೆ ಚಾಕಲೇಟ್ಸ್ ನೀಡುವುದರಿಂದ ಹಿಡಿದು ದಿನದ ಹೆಚ್ಚಿನ ಸಮಯವನ್ನು ಸನ್ನಿ ಜೊತೆಯೇ ಕಳೆಯಲು ಆರಂಭಿಸಿದ್ದಳು.

    ಇಷ್ಟೆಲ್ಲಾ ಆದ ಇವರ ಪ್ರೇಮ ಪ್ರಸಂಗ ಜಾಸ್ತಿ ದಿನ ಗುಟ್ಟಾಗಿ ಉಳಿಯಲಿಲ್ಲ. ಇವರಿಬ್ಬರು ಹಲವಾರು ಸ್ಥಳಗಳಿಗೆ ತಿರುಗಾಡುತ್ತಿರುವ ವಿಚಾರ ಪಿಂಕಿ ಪತಿ ಗಮನಕ್ಕೆ ಬಂದಿದೆ. ಈ ವಿಚಾರ ಪತಿಗೆ ತಿಳಿಯುತ್ತಿದ್ದಂತೆಯೇ ಪಿಂಕಿ ಜೀವನದಲ್ಲಿ ತೊಂದರೆ ಆರಂಭವಾಗಿದೆ. ಪತ್ನಿಯ ಅಕ್ರಮ ಸಂಬಂಧದ ವಿಚಾರ ತಿಳಿಯುತ್ತಿದ್ದಂತೆಯೇ ಪತಿ ತಮ್ಮ ಮನೆಯನ್ನು ದೆವ್ಲಿಯಿಂದ ಚಿರಾಗ್ ದಿಲ್ಲಿಗೆ ಕಳೆದ ತಿಂಗಳಲ್ಲಿ ಶಿಫ್ಟ್ ಮಾಡಿದರು. ಆದರೆ ಈ ವೇಳೆ ಪಿಂಕಿ ನಾನು ಮನೆಯಲ್ಲೇ ಇದ್ದು, ಕುಟುಂಬಸ್ಥರನ್ನು ನೋಡಿಕೊಳ್ಳುವುದಾಗಿ ತನ್ನ ಗಂಡನಲ್ಲಿ ಹೇಳಿದ್ದಾಳೆ. ಆ ಬಳಿಕ ಪಿಂಕಿ ಪತಿ ಕೆಲಸದ ನಿಮಿತ್ತ ಹೊರಗಡೆ ಹೋದ ನಂತರ ಸನ್ನಿ ಆಗಾಗ ಮನೆಗೆ ಬರುತ್ತಿದ್ದನು. ಸನ್ನಿಯ ಈ ನಡತೆಯಿಂದ ಪಿಂಕಿಗೆ ತಾನು ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ತಪ್ಪಿನ ಅರಿವಾಯಿತು. ಹೀಗಾಗಿ ಸನ್ನಿಯನ್ನು ದೂರ ಮಾಡಲು ಪ್ರಯತ್ನಿಸುತ್ತಾಳೆ.

    ಪಿಂಕಿಯ ನಡವಳಿಕೆಯಲ್ಲಿ ವ್ಯತ್ಯಾಸ ಕಂಡ ಸನ್ನಿಗೆ ಸಿಟ್ಟು ನೆತ್ತಿಗೇರಿತ್ತು. ಪರಿಣಾಮ ಆಗಾಗ ಪಿಂಕಿಗೆ ಕರೆ ಮಾಡಿ ಗಂಡನಿಗೆ ಡಿವೋರ್ಸ್ ನೀಡುವಂತೆ ಒತ್ತಾಯಿಸಿದ್ದಾನೆ. ಆದರೆ ಸನ್ನಿಯ ಮಾತನ್ನು ನಿರಾಕರಿಸಿದ ಪಿಂಕಿ, ತಮ್ಮಿಬ್ಬರ ಸಂಬಂಧವನ್ನು ಕೊನೆಗೊಳಿಸುವಂತೆ ಕೇಳಿಕೊಂಡಿದ್ದಾಳೆ. ಆದರೆ ಯಾವುದೇ ಕಾರಣಕ್ಕೂ ಪಿಂಕಿಯನ್ನು ಬಿಡಲ್ಲ ಎಂದು ಸನ್ನಿ ದಿಟ್ಟ ನಿರ್ಧಾರ ತೆಗೆದುಕೊಂಡನು. ಕಳೆದ ವಾರ ಪಿಂಕಿ, ಹೀಗೆ ನೀನು ನನ್ನ ಹಿಂದೆ ಬಿದ್ದರೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಕೋಪೋದ್ರಿಕ್ತನಾದ ಸನ್ನಿ, ಶುಕ್ರವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಕೈಯಲ್ಲಿ ಚಾಕು ಹಿಡಿದುಕೊಂಡು ನೇರವಾಗಿ ಪಿಂಕಿ ಮನೆಗೆ ತೆರಳಿದ್ದಾನೆ. ಅಲ್ಲದೆ ನಾವಿಬ್ಬರು ಓಡಿಹೋಗುವಂತೆ ಪಿಂಕಿಯಲ್ಲಿ ಹೇಳಿದ್ದಾನೆ. ಆದರೆ ಸನ್ನಿಯ ಈ ಮನವಿಯನ್ನು ಪಿಂಕಿ ನಿರಾಕರಿಸಿ, ಮನೆಯಿಂದ ಹೊರ ನಡೆಯುವಂತೆ ಗದರಿಸಿದ್ದಾಳೆ. ಈ ವೇಳೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ.

    ಇಬ್ಬರ ನಡುವೆ ನಡೆದ ಮಾತಿನ ಚಕಮಕಿಯ ವೇಳೆ ಸನ್ನಿ `ದಯವಿಟ್ಟು ನನ್ನ ಲೈಫ್ ಗೆ ಬಾ’ ಎಂದು ಪದೇ ಪದೇ ಬೇಡಿಕೊಂಡಿದ್ದಾನೆ. ಒಂದು ವೇಳೆ ನನ್ನೊಂದಿಗೆ ಜೀವನ ಮಾಡಲು ಬರದಿದ್ದರೆ ನಿನ್ನನ್ನು ಸಾಯಿಸುವುದಾಗಿ ಬೆದರಿಕೆಯನ್ನೂ ಹಾಕಿದ್ದಾನೆ. ಆದರೆ ಸನ್ನಿ ಮಾತುಗಳನ್ನೆಲ್ಲಾ ಪಿಂಕಿ ನಿರಾಕರಿಸುತ್ತಲೇ ಬಂದಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಸನ್ನಿ, ತನ್ನ ಕೈಯಲಿದ್ದ ಚಾಕುವಿನಿಂದ ಪಿಂಕಿ ಎದೆ ಹಾಗೂ ಸೊಂಟಕ್ಕೆ 12ಕ್ಕೂ ಹೆಚ್ಚು ಬಾರಿ ಇರಿದಿದ್ದಾನೆ. ಈ ವೇಳೆ ತಾನು ಪರಾರಿಯಾಗದೇ ಅಲ್ಲೇ ಇದ್ದು, ತನ್ನ ಕುತ್ತಿಗೆಯನ್ನೂ ಸೀಳಿಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ.

    ಈ ವೇಳೆ ಪಿಂಕಿ ಇದ್ದ ಮನೆ ಮಾಲೀಕ ಮಹಿಪಾಲ್ ಸಿಂಗ್ ಅನುಮಾನಗೊಂಡು ತನ್ನ ಪತ್ನಿಯನ್ನು ಪಿಂಕಿ ಇದ್ದ ಫ್ಲಾಟ್ ಗೆ ಹೋಗಲು ಹೇಳಿದ್ದಾರೆ. ಹೀಗೆ ಹೋದಾಗ ಪಿಂಕಿ ಹಾಗೂ ಇನ್ನೊಬ್ಬ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಓಡಿ ಬಂದ ಪತ್ನಿ, ಮಹಿಪಾಲ್ ಸಿಂಗ್ ಜೊತೆ ಪೊಲೀಸರಿಗೆ ಕರೆ ಮಾಡುವಂತೆ ಹೇಳಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಇಬ್ಬರನ್ನೂ ನಗರದ ಏಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಅದಾಗಲೇ ಪಿಂಕಿ ಮೃತಪಟ್ಟಿದ್ದು, ಸನ್ನಿಯನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಆತನ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.