Tag: ಸನಾದಿ ಅಪ್ಪಣ್ಣ

  • ನಮಗೆ ನಿಮ್ಮ ದುಡ್ಡು ಬೇಡ – ಸನಾದಿ ಅಪ್ಪಣ್ಣ ವಂಶಸ್ಥರಿಗೆ ರನ್ನ ಉತ್ಸವದಲ್ಲಿ ಅಪಮಾನ

    ನಮಗೆ ನಿಮ್ಮ ದುಡ್ಡು ಬೇಡ – ಸನಾದಿ ಅಪ್ಪಣ್ಣ ವಂಶಸ್ಥರಿಗೆ ರನ್ನ ಉತ್ಸವದಲ್ಲಿ ಅಪಮಾನ

    ಬಾಗಲಕೋಟೆ: ಸನಾದಿ ಅಪ್ಪಣ್ಣ (Sanaadi Appanna) ವಂಶಸ್ಥರಿಗೆ ಬಾಗಲಕೋಟೆ (Bagalkote) ಜಿಲ್ಲಾಡಳಿತದಿಂದ ಅಪಮಾನವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

    ಫೆಬ್ರವರಿ 22 ರಿಂದ 25ರವರೆಗೆ ಮೂರು ದಿನಗಳ ಕಾಲ ಅದ್ಧೂರಿ ರನ್ನ ಉತ್ಸವ (Ranna Uthsava) ಕಾರ್ಯಕ್ರಮ ಮಾಡಲಾಗಿತ್ತು. ಆದರೆ ಕೋಟ್ಯಂತರ ರೂ. ಖರ್ಚು ಮಾಡಿದ ರನ್ನ ವೈಭವದಲ್ಲಿ ಸನಾದಿ ಅಪ್ಪಣ್ಣ ವಂಶಸ್ಥರಾದ ನಮಗೆ, ಕಲೆ ಪ್ರಸ್ತುತ ಪಡಿಸಲು ಸರಿಯಾದ ವೇದಿಕೆಯನ್ನೂ ಕಲ್ಪಿಸಲಿಲ್ಲ. ಕೇವಲ 5 ಸಾವಿರ ರೂ. ಸಂಭಾವನೆ ನೀಡಿ ಜಿಲ್ಲಾಡಳಿತ ನಮಗೆ ಅಪಮಾನವೆಸಗಿದೆ‌ ಎಂದು ಅಪ್ಪಣ್ಣ ಅವರ ವಂಶಸ್ಥರಾದ ಬಸವಂತ್ ಭಜಂತ್ರಿ ಆರೋಪ‌ ಮಾಡಿದ್ದಾರೆ.

    4.5 ಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ನಡೆದ ರನ್ನ ವೈಭವ ಕಾರ್ಯಕ್ರಮ ಆಯೋಜಿಸಲಾಗಿತ್ತು. ರನ್ನ ವೈಭವದ ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ, ಸಿನಿಮಾ, ಹಾಡುಗಳ ಝಲಕ್, ಚಿತ್ರನಟಿ ರಕ್ಷಿತಾ, ಗಾಯಕ ವಿಜಯ್ ಪ್ರಕಾಶ್,ಸಂಗೀತ ನಿರ್ದೇಶಕ ಗಾಯಕ ಗುರುಕಿರಣ್, ರಾಜೇಶ್ ಕೃಷ್ಣನ್ ತಂಡದಿಂದ ಭರ್ಜರಿ ಹಾಡು ನೃತ್ಯ ನಡೆದಿತ್ತು.

    ವೈಭವದಲ್ಲಿ ಮುಖ್ಯ ವೇದಿಕೆಯಲ್ಲಿ ಶಹನಾಯಿ ವಾದನಕ್ಕೆ ಅವಕಾಶ ಕೊಟ್ಟಿರಲಿಲ್ಲ. ಬದಲಾಗಿ ಅಂಬೇಡ್ಕರ್ ಭವನದಲ್ಲಿ ನಡೆದ ಕಿರು ವೇದಿಕೆಯಲ್ಲಿ ನಮಗೆ ಅವಕಾಶ ಕಲ್ಪಿಸಲಾಗಿತ್ತು. ಅಲ್ಲಿ ಸರಿಯಾದ ಮೈಕ್ ವ್ಯವಸ್ಥೆ ಕೂಡ ಇಲ್ಲ ಎಂದು ಬಸವಂತ್ ಭಜಂತ್ರಿ ಕಿಡಿಕಾರಿದ್ದಾರೆ.

    ಜಿಲ್ಲಾಡಳಿತ ನೀಡಿದ ಕೀಳು ಮಟ್ಟದ ಗೌರವಕ್ಕೆ ಅಪ್ಪಣ್ಣ ವಂಶಸ್ಥರು ಆಕ್ರೋಶ ವ್ಯಕ್ತಪಡಿಸಿ ಚೆಕ್‌ ಅನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಾಪಸ್ ನೀಡಿದ್ದಾರೆ. 300 ವರ್ಷದ ಶಹನಾಯಿ ಇತಿಹಾಸ ನಮ್ಮ ಕುಟುಂಬಕ್ಕಿದೆ. ಆದರೆ ಇಲ್ಲಿ ನಮಗೆ ಅಪಮಾನ ಮಾಡಿದರು. ನಮಗಷ್ಟೇ ಅಲ್ಲ ಸ್ಥಳೀಯ ಕಲಾವಿದರಿಗೆ ಸರಿಯಾಗಿ ಮಾನ್ಯತೆ ನೀಡಲಿಲ್ಲ ಎಂದು ಅಪ್ಪಣ್ಣ ವಂಶಸ್ಥರು ಜಿಲ್ಲಾಡಳಿತದ ಕ್ರಮಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ.

     

  • Exclusive- ಸಾವರ್ಕರ್ ಪತ್ನಿ ಪಾತ್ರದಲ್ಲಿ ಸನಾದಿ ಅಪ್ಪಣ್ಣನ ಮರಿಮೊಮ್ಮಗಳು

    Exclusive- ಸಾವರ್ಕರ್ ಪತ್ನಿ ಪಾತ್ರದಲ್ಲಿ ಸನಾದಿ ಅಪ್ಪಣ್ಣನ ಮರಿಮೊಮ್ಮಗಳು

    ಖ್ಯಾತ ಸನಾದಿ ವಾದಕ ಸನಾದಿ ಅಪ್ಪಣ್ಣನ (Sanadi Appanna) ಮೊಮ್ಮಗಳು ಜಾಹ್ನವಿಕ (Jahvavik) ಪ್ರಾರಂಭ ಸಿನಿಮಾದ ನಂತರ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ರಾಧಾಕೃಷ್ಣ ಪಲ್ಲಕ್ಕಿ (Radhakrishna Pallakki) ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವೀರ ಸಾವರ್ಕರ್ (Veera Savarkar) ಸಿನಿಮಾದಲ್ಲಿ ಅವರು ಸಾವರ್ಕರ್ ಪತ್ನಿ ಯಮುನಾ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸನಾದಿ ಅಪ್ಪಣನ ಅವರ ಪುತ್ರ ಹನುಮಂತ, ಹನುಮಂತ ಅವರ ಪುತ್ರ ಪ್ರಭಾಕರ್ ಮಗಳು ಇವರಾಗಿದ್ದಾರೆ.

    ಸಾವರ್ಕರ್ ಪಾತ್ರಕ್ಕಾಗಿ ಸುನೀಲ್ ರಾವ್ (Sunil Rao) ಆಯ್ಕೆಯಾಗಿದ್ದು, ಇವರ ಫಸ್ಟ್ ಲುಕ್ ಎಕ್ಸ್ ಕ್ಲೂಸಿವ್ ಆಗಿ ಪಬ್ಲಿಕ್ ಟಿವಿ ಡಿಜಿಟಲ್ ನಿನ್ನೆಯಷ್ಟೇ ಪ್ರಕಟಿಸಿತ್ತು. ಇವತ್ತು ಸಾವರ್ಕರ್ ಪತ್ನಿಯಾಗಿ ನಟಿಸುತ್ತಿರುವ ಜಾಹ್ನವಿಕ ಸುದ್ದಿಯನ್ನು ಮೊದಲ ಬಾರಿಗೆ ಪ್ರಕಟಿಸುತ್ತಿದೆ. ಈ ಸಿನಿಮಾದ ಪ್ರಮುಖ ಪಾತ್ರಕ್ಕಾಗಿ ಬಾಲಿವುಡ್ ನಟ ಅನುಪಮ್ ಖೇರ್ ಅವರನ್ನು ಕರೆತರುವ ಪ್ರಯತ್ನ ನಡೆದಿದ್ದು, ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ಈಗಾಗಲೇ ಮುಂಬೈಗೆ ಹೋಗಿ ಬಂದಿದ್ದಾರೆ. ಇದನ್ನೂ ಓದಿ: ಅಭಿಷೇಕ್ ಅಂಬರೀಶ್ ಮದುವೆ ಬಗ್ಗೆ ಮಾತಾಡಿದ ಸುಮಲತಾ

    ಹಿಂದಿಯಲ್ಲಿ ಈಗಾಗಲೇ ಸಾವರ್ಕರ್ ಬಯೋಪಿಕ್ ರೆಡಿ ಆಗುತ್ತಿದ್ದು, ಬಹುತೇಕ ಚಿತ್ರೀಕರಣ ಮುಗಿದಿದೆ. ಈ ಹೊತ್ತಿನಲ್ಲಿ ಸ್ಯಾಂಡಲ್ ವುಡ್ ಅವರ ಬಯೋಪಿಕ್ ಅನ್ನು ಕೈಗೆತ್ತಿಕೊಂಡಿದೆ. ಈ ಕುರಿತು ಚಿತ್ರದ ನಿರ್ದೇಶಕ ಪಲ್ಲಕ್ಕಿ ರಾಧಾಕೃಷ್ಣ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.  ವೀರ ಸಾವರ್ಕರ್ ಪಾತ್ರವನ್ನು ಸುನೀಲ್ ರಾವ್ ನಿರ್ವಹಿಸುತ್ತಿದ್ದು, ಮಹಾತ್ಮ ಗಾಂಧಿ ಪಾತ್ರವನ್ನು ಹಿಂದಿಯ ನಟ ಶರ್ಮಾ ಮಾಡುತ್ತಿದ್ದಾರೆ. ಚಿತ್ರದ ಟೀಸರ್ ಮತ್ತು ವೀರ ಸಾವರ್ಕರ್ ಪಾತ್ರವನ್ನು ನಿರ್ವಹಿಸುತ್ತಿರುವ ಸುನೀಲ್ ರಾವ್ ಅವರ ಫೋಟೋ ಶೂಟ್ ಕೂಡ ಮುಗಿದಿದೆ. ಮಾರ್ಚ್ 12 ರ ನಂತರ ಆ ಲುಕ್ ರಿಲೀಸ್ ಗೆ ಪ್ಲ್ಯಾನ್ ಮಾಡಲಾಗಿತ್ತು, ಅದು ಮುಂದೂಡಲಾಗಿದೆ.

    “ಹಿಂದಿಯಲ್ಲಿ ಈಗಾಗಲೇ ವೀರ ಸಾವರ್ಕರ್ ಅವರ ಬಯೋಪಿಕ್ ಚಾಲನೆ ಸಿಕ್ಕಿದೆ. ಆ ಸಿನಿಮಾಗೂ ನಮಗೂ ಸಂಬಂಧವಿಲ್ಲ. ಆ ತಂಡವೇ ಬೇರೆ ಇದೆ. ಕನ್ನಡದಲ್ಲಿ ಬರಲಿರುವ ತಂಡ ಮತ್ತು ಕಲಾವಿದರೇ ಬೇರೆ ಇದ್ದಾರೆ. ಚಿತ್ರೀಕರಣಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ. ಮಾರ್ಚ್ 25 ರಿಂದ ಶೂಟಿಂಗ್ ಶುರು ಮಾಡುತ್ತೇವೆ. ಇದೊಂದು ಭಾರೀ ಬಜೆಟ್ ಸಿನಿಮಾ ಆಗಲಿರಲಿದೆ’ ಎಂದರು ರಾಧಾಕೃಷ್ಣ ಪಲ್ಲಕ್ಕಿ.

    ಪಾತ್ರಕ್ಕೆ ಬೇಕಾಗಿರುವ ಎಲ್ಲ ತಯಾರಿಯನ್ನೂ ಸುನೀಲ್ ರಾವ್ ಕೂಡ ಮಾಡಿದ್ದಾರೆ. ಗೆಟಪ್ ಕೂಡ ಬದಲಾಯಿಸಿಕೊಂಡಿದ್ದಾರೆ. ಆದಷ್ಟು ನೈಜತೆಗೆ ಹತ್ತಿರವಾಗುವಂತೆ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಿದ್ದಾರಂತೆ ನಿರ್ದೇಶಕರು. ರಂಗಾಯಣ ರಘು, ಸಾಯಿಕುಮಾರ್, ರವಿಶಂಕರ್, ಅನುಪ್ರಭಾಕರ್ ಹೀಗೆ ಅನೇಕ ನುರಿತ ಕಲಾವಿದರು ಕೂಡ ತಾರಾಗಣದಲ್ಲಿ ಇರಲಿದ್ದಾರೆ. ಕೆ.ಎಸ್. ಚಂದ್ರಶೇಖರ್ ಅವರ ಸಿನಿಮಾಟೋಗ್ರಫಿ, ಥ್ರಿಲ್ಲರ್ ಮಂಜು ಅವರ ಸಾಹಸ ಮತ್ತು ಸ್ಯಾಮ್ ಸಂಗೀತ ಚಿತ್ರಕ್ಕಿರಲಿದೆ. ಕೆ.ಎನ್. ಚಕ್ರಪಾಣಿ ಈ ಸಿನಿಮಾದ ನಿರ್ಮಾಪಕರು.