Tag: ಸದ್ದು ವಿಚಾರಣೆ ನಡೆಯುತ್ತಿದೆ

  • ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾ ಮೆಚ್ಚಿಕೊಂಡ ಪ್ರಬುದ್ಧ ಪ್ರೇಕ್ಷಕ

    ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾ ಮೆಚ್ಚಿಕೊಂಡ ಪ್ರಬುದ್ಧ ಪ್ರೇಕ್ಷಕ

    ಭಾಸ್ಕರ್ ನಿರ್ದೇಶನದ ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾ ನಾಳೆ ಎರಡನೇ ವಾರಕ್ಕೆ ಕಾಲಿಡುತ್ತಿದೆ. ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಯಶಸ್ಸಿ ಸಿನಿಮಾಗಳ ಸಾಲಿನತ್ತ ಹೆಜ್ಜೆ ಹಾಕುತ್ತಿದೆ. ವಿಮರ್ಶೆಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೊಸ ತಂಡದ ಚಿತ್ರಕ್ಕೆ ನೋಡುಗರು ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಇದೊಂದು ಹೊಸ ಬಗೆಯ ಸಿನಿಮಾ ಎಂದೂ ಬಣ್ಣಿಸಿದ್ದಾರೆ.

    ‘ಬೆಲ್‍ ಬಾಟಮ್’ ಸಿನಿಮಾದ ನಂತರ ಆ ಮಾದರಿಯ ಮತ್ತೊಂದು ಸಿನಿಮಾವನ್ನು ಪ್ರೇಕ್ಷಕ ಕೊಂಡಾಡುತ್ತಿದ್ದಾನೆ ಎನ್ನುವ ನೆನಪನ್ನು ‘ಸದ್ದು ವಿಚಾರಣೆ ನಡೆಯುತ್ತಿದೆ’ ಚಿತ್ರ ಮಾಡಿದೆ. ಭಾಸ್ಕರ್ ನಿರ್ದೇಶನದ ಈ ಸಿನಿಮಾದಲ್ಲಿ ಪ್ರೇಕ್ಷಕನಿಗೆ ಥ್ರಿಲ್ ಮಾಡುವಂತಹ ಸಾಕಷ್ಟು ಸಂಗತಿಗಳು ಇವೆ ಎನ್ನುವುದು ವಿಶೇಷ.

    ಈ ಚಿತ್ರದ ಮೂಲಕ ಪಶುವೈದ್ಯರಾಗಿರುವ ಮಧುನಂದನ್ ಸಿನಿಮಾ ರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ಥೇಟ್ ನೆನಪಿರಲಿ ಪ್ರೇಮ್ ರೀತಿಯಲ್ಲಿ ಕಾಣುವ ಇವರು, ಈ ಸಿನಿಮಾದಲ್ಲಿ ಪೃಥ್ವಿ ಎಂಬ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದು, ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ್ದಾರೆ. ಇದು ಇವರ ಚೊಚ್ಚಲ ಸಿನಿಮಾವಾಗಿದ್ದರೂ, ರಂಗಭೂಮಿ ಮೇಲಿನ ಸೆಳೆತ ಮತ್ತು ನಟನಾಗಬೇಕು ಎನ್ನುವ ಹಂಬಲವೇ ಇಂಥದ್ದೊಂದು ಪಾತ್ರ ಮಾಡಿಸಿದೆ. ಆ ಪಾತ್ರವನ್ನು ನೋಡುಗ ಕೂಡ ಮೆಚ್ಚಿಕೊಂಡಿದ್ದಾನೆ.

    ಈ ಸಿನಿಮಾದ ಮತ್ತೊಂದು ವಿಶೇಷ  ಅಂದರೆ, ಎಲ್ಲಾ ವರ್ಗದ ಪ್ರೇಕ್ಷಕರನ್ನು ಮನದಲ್ಲಿಟ್ಟುಕೊಂಡು ಚಿತ್ರಕಥೆ ಹೆಣೆದಿದ್ದಾರೆ ನಿರ್ದೇಶಕ ಭಾಸ್ಕರ್ ರಾವ್. ಪುಟ್ಟ ಪುಟ್ಟ ಪಾತ್ರಕ್ಕೂ ಹಿನ್ನೆಲೆ ಕೊಟ್ಟಿದ್ದಾರೆ. ಹಾಗಾಗಿ ಚಿತ್ರಕಥೆಯಲ್ಲಿ ಹಲವು ತಿರುವುಗಳಿದ್ದರೂ, ನೋಡುಗನನ್ನು ಈ ಸಿನಿಮಾ ಸರಾಗವಾಗಿ ನೋಡಿಸಿಕೊಂಡು ಹೋಗುತ್ತದೆ. ತಿರುವುಗಳಲ್ಲಿ ಥ್ರಿಲ್ ಕೊಡುತ್ತದೆ. ಒಂದಷ್ಟು ದೃಶ್ಯಗಳು ನಗಿಸುತ್ತಲೇ ಮತ್ತೆ ಸಿನಿಮಾದ ಕಥೆಯೊಳಗೇ ನಮ್ಮನ್ನು ತಂದು ಬಿಡುವುದು ಚಿತ್ರದ ಹೆಗ್ಗಳಿಕೆ.

    ಅಚ್ಯುತ್ ಕುಮಾರ್, ರಾಘು ಶಿವಮೊಗ್ಗ, ಪಾವನಾ, ರಾಕೇಶ್ ಮಯ್ಯ, ಜಹಾಂಗೀರ್, ಕೃಷ್ಣ ಹೆಬ್ಬಾಳೆಯಂತಹ ಪ್ರತಿಭಾವಂತ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ನಟನೆ. ಅಚ್ಯುತ್ ಕುಮಾರ್ ಪೊಲೀಸ್ ಅಧಿಕಾರಿಯಾಗಿ ಹೊಸ ಅನುಭವವನ್ನೇ ಕೊಟ್ಟರೆ, ರಾಘು ಶಿವಮೊಗ್ಗ ಖಳನಾಯಕನಾಗಿ ಅಚ್ಚರಿ ಮೂಡಿಸುತ್ತಾರೆ. ಪಾವನಾ ಮತ್ತು ರಾಕೇಶ್ ಮಯ್ಯ ಲವ್ ಸ್ಟೋರಿ ಈ ಹೊತ್ತಿನ ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ. ಜಹಾಂಗೀರ್ ಒದ್ದಾಟ, ಕೃಷ್ಣ ಹೆಬ್ಬಾಳೆಯವರ ಗತ್ತು ಸಿನಿಮಾಗೆ ಮತ್ತಷ್ಟು ಕಸುವು ತುಂಬಿದೆ.

    ಮೇಲ್ನೋಟಕ್ಕೆ ಸಸ್ಪೆನ್ಸ್, ಥ್ರಿಲ್ಲರ್ ಮತ್ತು ಮರ್ಡರ್ ಮಿಸ್ಟರಿ ಸಿನಿಮಾ ಅನಿಸಿದರೂ, ಕ್ಯಾಮೆರಾ ಕೆಲಸ, ಹಿನ್ನೆಲೆ ಸಂಗೀತ, ಹಾಡು ಮತ್ತು ಪಾತ್ರಗಳ ಹಿನ್ನೆಲೆಯ ಕಾರಣದಿಂದಾಗಿ ನಾನು ಅಂದುಕೊಂಡಿದ್ದನ್ನು ಸುಳ್ಳು ಮಾಡುತ್ತಾ, ಹೊಸ ಲೋಕವನ್ನೇ ಸಿನಿಮಾ ನಮ್ಮೆದುರು ತಂದಿಡುತ್ತಿದೆ. ಭಾಸ್ಕರ್ ನಿರ್ದೇಶನದ ಚೊಚ್ಚಲು ಸಿನಿಮಾ ಇದಾಗಿದ್ದರೂ, ಹಾಗೆ ಅನಿಸುವುದಿಲ್ಲ. ಆ ರೀತಿಯಲ್ಲಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಪ್ರತಿಭಾವಂತರ ತಂಡವೇ ಈ ಚಿತ್ರದಲ್ಲಿ ಇರುವುದರಿಂದ, ಚಿತ್ರವು ಸ್ಯಾಂಡಲ್ ವುಡ್‍ನಲ್ಲಿ ಸಖತ್ ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ‘ಸದ್ದು’ ಮಾಡುತ್ತಿದೆ ಸ್ಯಾಂಡಲ್ ವುಡ್ ಮತ್ತೊಂದು ಸಿನಿಮಾ

    ‘ಸದ್ದು’ ಮಾಡುತ್ತಿದೆ ಸ್ಯಾಂಡಲ್ ವುಡ್ ಮತ್ತೊಂದು ಸಿನಿಮಾ

    ಸ್ಪೆನ್ಸ್, ಥ್ರಿಲ್ಲರ್ ಮಾದರಿಯ ಸಿನಿಮಾಗಳನ್ನು ಪ್ರೇಕ್ಷಕ ನಿಧಾನಗತಿಯಲ್ಲೇ ತಗೆದುಕೊಳ್ಳುತ್ತಾನೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಹೊಸಬರು ಮತ್ತು ಪ್ರತಿಭಾವಂತ ಟೀಮ್‍ ಹೊಂದಿರುವ ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾದ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ‘ಬೆಲ್‍ ಬಾಟಮ್’ ಸಿನಿಮಾದ ನಂತರ ಆ ಮಾದರಿಯ ಮತ್ತೊಂದು ಸಿನಿಮಾವನ್ನು ಪ್ರೇಕ್ಷಕ ಕೊಂಡಾಡುತ್ತಿದ್ದಾನೆ ಎನ್ನುವ ನೆನಪನ್ನು ‘ಸದ್ದು ವಿಚಾರಣೆ ನಡೆಯುತ್ತಿದೆ’ ಚಿತ್ರ ಮಾಡಿದೆ. ಭಾಸ್ಕರ್ ನಿರ್ದೇಶನದ ಈ ಸಿನಿಮಾದಲ್ಲಿ ಪ್ರೇಕ್ಷಕನಿಗೆ ಥ್ರಿಲ್ ಮಾಡುವಂತಹ ಸಾಕಷ್ಟು ಸಂಗತಿಗಳು ಇವೆ ಎನ್ನುವುದು ವಿಶೇಷ.

    ಈ ಚಿತ್ರದ ಮೂಲಕ ಪಶುವೈದ್ಯರಾಗಿರುವ ಮಧುನಂದನ್ ಸಿನಿಮಾ ರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ಥೇಟ್ ನೆನಪಿರಲಿ ಪ್ರೇಮ್ ರೀತಿಯಲ್ಲಿ ಕಾಣುವ ಇವರು, ಈ ಸಿನಿಮಾದಲ್ಲಿ ಪೃಥ್ವಿ ಎಂಬ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದು, ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ್ದಾರೆ. ಇದು ಇವರ ಚೊಚ್ಚಲ ಸಿನಿಮಾವಾಗಿದ್ದರೂ, ರಂಗಭೂಮಿ ಮೇಲಿನ ಸೆಳೆತ ಮತ್ತು ನಟನಾಗಬೇಕು ಎನ್ನುವ ಹಂಬಲವೇ ಇಂಥದ್ದೊಂದು ಪಾತ್ರ ಮಾಡಿಸಿದೆ. ಆ ಪಾತ್ರವನ್ನು ನೋಡುಗ ಕೂಡ ಮೆಚ್ಚಿಕೊಂಡಿದ್ದಾನೆ. ಇದನ್ನೂ ಓದಿ: ಕಾಶ್ಮೀರ್‌ ಫೈಲ್ಸ್‌ ಕಾಲ್ಪನಿಕ ಅಂತಾ ಸಾಬೀತುಪಡಿಸಿದ್ರೆ, ಸಿನಿಮಾ ಮಾಡೋದನ್ನೇ ಬಿಡ್ತೀನಿ- ವಿವೇಕ್ ಅಗ್ನಿಹೋತ್ರಿ

    ಈ ಸಿನಿಮಾದ ಮತ್ತೊಂದು ವಿಶೇಷ  ಅಂದರೆ, ಎಲ್ಲಾ ವರ್ಗದ ಪ್ರೇಕ್ಷಕರನ್ನು ಮನದಲ್ಲಿಟ್ಟುಕೊಂಡು ಚಿತ್ರಕಥೆ ಹೆಣೆದಿದ್ದಾರೆ ನಿರ್ದೇಶಕ ಭಾಸ್ಕರ್ ರಾವ್. ಪುಟ್ಟ ಪುಟ್ಟ ಪಾತ್ರಕ್ಕೂ ಹಿನ್ನೆಲೆ ಕೊಟ್ಟಿದ್ದಾರೆ. ಹಾಗಾಗಿ ಚಿತ್ರಕಥೆಯಲ್ಲಿ ಹಲವು ತಿರುವುಗಳಿದ್ದರೂ, ನೋಡುಗನನ್ನು ಈ ಸಿನಿಮಾ ಸರಾಗವಾಗಿ ನೋಡಿಸಿಕೊಂಡು ಹೋಗುತ್ತದೆ. ತಿರುವುಗಳಲ್ಲಿ ಥ್ರಿಲ್ ಕೊಡುತ್ತದೆ. ಒಂದಷ್ಟು ದೃಶ್ಯಗಳು ನಗಿಸುತ್ತಲೇ ಮತ್ತೆ ಸಿನಿಮಾದ ಕಥೆಯೊಳಗೇ ನಮ್ಮನ್ನು ತಂದು ಬಿಡುವುದು ಚಿತ್ರದ ಹೆಗ್ಗಳಿಕೆ.

    ಅಚ್ಯುತ್ ಕುಮಾರ್, ರಾಘು ಶಿವಮೊಗ್ಗ, ಪಾವನಾ, ರಾಕೇಶ್ ಮಯ್ಯ, ಜಹಾಂಗೀರ್, ಕೃಷ್ಣ ಹೆಬ್ಬಾಳೆಯಂತಹ ಪ್ರತಿಭಾವಂತ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ನಟನೆ. ಅಚ್ಯುತ್ ಕುಮಾರ್ ಪೊಲೀಸ್ ಅಧಿಕಾರಿಯಾಗಿ ಹೊಸ ಅನುಭವವನ್ನೇ ಕೊಟ್ಟರೆ, ರಾಘು ಶಿವಮೊಗ್ಗ ಖಳನಾಯಕನಾಗಿ ಅಚ್ಚರಿ ಮೂಡಿಸುತ್ತಾರೆ. ಪಾವನಾ ಮತ್ತು ರಾಕೇಶ್ ಮಯ್ಯ ಲವ್ ಸ್ಟೋರಿ ಈ ಹೊತ್ತಿನ ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ. ಜಹಾಂಗೀರ್ ಒದ್ದಾಟ, ಕೃಷ್ಣ ಹೆಬ್ಬಾಳೆಯವರ ಗತ್ತು ಸಿನಿಮಾಗೆ ಮತ್ತಷ್ಟು ಕಸುವು ತುಂಬಿದೆ.

    ಮೇಲ್ನೋಟಕ್ಕೆ ಸಸ್ಪೆನ್ಸ್, ಥ್ರಿಲ್ಲರ್ ಮತ್ತು ಮರ್ಡರ್ ಮಿಸ್ಟರಿ ಸಿನಿಮಾ ಅನಿಸಿದರೂ, ಕ್ಯಾಮೆರಾ ಕೆಲಸ, ಹಿನ್ನೆಲೆ ಸಂಗೀತ, ಹಾಡು ಮತ್ತು ಪಾತ್ರಗಳ ಹಿನ್ನೆಲೆಯ ಕಾರಣದಿಂದಾಗಿ ನಾನು ಅಂದುಕೊಂಡಿದ್ದನ್ನು ಸುಳ್ಳು ಮಾಡುತ್ತಾ, ಹೊಸ ಲೋಕವನ್ನೇ ಸಿನಿಮಾ ನಮ್ಮೆದುರು ತಂದಿಡುತ್ತಿದೆ. ಭಾಸ್ಕರ್ ನಿರ್ದೇಶನದ ಚೊಚ್ಚಲು ಸಿನಿಮಾ ಇದಾಗಿದ್ದರೂ, ಹಾಗೆ ಅನಿಸುವುದಿಲ್ಲ. ಆ ರೀತಿಯಲ್ಲಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಪ್ರತಿಭಾವಂತರ ತಂಡವೇ ಈ ಚಿತ್ರದಲ್ಲಿ ಇರುವುದರಿಂದ, ಚಿತ್ರವು ಸ್ಯಾಂಡಲ್ ವುಡ್‍ನಲ್ಲಿ ಸಖತ್ ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ‘ಸದ್ದು ವಿಚಾರಣೆ ನಡೆಯುತ್ತಿದೆ’ ಚಿತ್ರದ  ಮೊದಲ ಸಾಂಗ್ ಇಂದು ರಿಲೀಸ್

    ‘ಸದ್ದು ವಿಚಾರಣೆ ನಡೆಯುತ್ತಿದೆ’ ಚಿತ್ರದ ಮೊದಲ ಸಾಂಗ್ ಇಂದು ರಿಲೀಸ್

    ಭಾಸ್ಕರ್ ಆರ್. ನೀನಾಸಂ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾದ ಟ್ರೇಲರ್ ಮತ್ತು ಫಸ್ಟ್ ಲುಕ್ ಈಗಾಗಲೇ ನೋಡುಗರ ಗಮನ ಸೆಳೆದಿವೆ. ಇದೀಗ ಸಿನಿಮಾದ ಒಂದು ಹಾಡನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ ಚಿತ್ರತಂಡ. ಇಂದು ಸಂಜೆ 5 ಗಂಟೆಗೆ ಲಹರಿ ಯೂಟ್ಯೂಬ್ ಚಾನೆಲ್ ನಲ್ಲಿ ‘ನಿನ್ನನ್ನೇ ನಿನ್ನನ್ನೇ’ ಸಾಂಗ್ ರಿಲೀಸ್ ಆಗಲಿದೆ. ಇದನ್ನೂ ಓದಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದ ಮೊದಲಿಗರಾರು? ಹೀಗಿದೆ ನಟ ಜಗ್ಗೇಶ್ ಉತ್ತರ

    ಈಗಾಗಲೇ ನಟನಾಗಿ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಭಾಸ್ಕರ್, ಇದೇ ಮೊದಲ ಬಾರಿಗೆ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಸಿನಿಮಾವಾಗಿದ್ದು ಹಾಡುಗಳಿಗೂ ಅಷ್ಟೇ ಮಹತ್ವ ನೀಡಲಾಗಿದೆಯಂತೆ. ಹಾಗಾಗಿ ಸಿನಿಮಾದ ಮೊದಲ ಹಾಡನ್ನು ಇಂದು ಅಭಿಮಾನಿಗಳಿಗೆ ಅರ್ಪಿಸುತ್ತಿದ್ದಾರೆ ನಿರ್ದೇಶಕರು. ಇದನ್ನೂ ಓದಿ :  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

    ಈ ಹಿಂದೆ ಸಿನಿಮಾದ ಪೋಸ್ಟರ್ ಅನ್ನು ಡಾಲಿ ಧನಂಜಯ್ ಮಾಡಿದ್ದರು. ಫಸ್ಟ್ ಲುಕ್ ಸಾಕಷ್ಟು ವೈರಲ್ ಆಗಿತ್ತು. ಇದೊಂದು ಭರವಸೆಯ ಸಿನಿಮಾ ಎನ್ನುವ ಗೌರವಕ್ಕೂ ಪಾತ್ರವಾಗಿತ್ತು. ಹಾಡು ಕೂಡ ಜನರ ಮನಸ್ಸನ್ನು ಗೆಲಲ್ಲಿದೆ ಎನ್ನುತ್ತಾರೆ ನಿರ್ದೇಶಕ ಭಾಸ್ಕರ್. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?

    ಮಗಳು ಜಾನಕಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರ ಮಾಡಿರುವ ರಾಕೇಶ್ ಮಯ್ಯ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು, ಗೊಂಬೆಗಳ ಲವ್ ಖ್ಯಾತಿಯ ಪಾವನಾ ನಾಯಕಿ. ಇಬ್ಬರೂ ಹೊಸ ರೀತಿಯ ಪಾತ್ರವನ್ನು ಈ ಸಿನಿಮಾದಲ್ಲಿ ನಿರ್ವಹಿಸಿದ್ದಾರಂತೆ. ಈ ಸಿನಿಮಾ ಇವರಿಬ್ಬರ ವೃತ್ತಿ ಬದುಕಿಗೆ ಮತ್ತೊಂದು ತಿರುವು ನೀಡಲಿದೆ ಎನ್ನುತ್ತಿದೆ ಚಿತ್ರತಂಡ. ಇದನ್ನೂ ಓದಿ : Love…ಲಿ ಅಂತಿದ್ದಾರೆ ಆಂಗ್ರಿ ಯಂಗ್ ಮ್ಯಾನ್ ವಸಿಷ್ಠ ಸಿಂಹ: ಚಿಟ್ಟೆ ನ್ಯೂ ಲುಕ್‌ ಹೇಗಿದೆ ಗೊತ್ತಾ?

    ಹೆಸರಾಂತ ಕಲಾವಿದರೇ ಈ ಸಿನಿಮಾದಲ್ಲಿದ್ದು, ಅಚ್ಯುತ್ ಕುಮಾರ್, ರಾಘು ಶಿವಮೊಗ್ಗ, ಜಾಹಂಗೀರ್ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿ ಇದ್ದಾರೆ. ಸಚಿನ್ ಬಸ್ರೂರ್ ಅವರ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬಂದಿವೆ.