Tag: ಸದ್ಗುರು ಜಗ್ಗಿ ವಾಸುದೇವ್

  • ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸದ್ಗುರು ಆಸ್ಪತ್ರೆಯಿಂದ ಡಿಸ್ಚಾರ್ಜ್

    ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸದ್ಗುರು ಆಸ್ಪತ್ರೆಯಿಂದ ಡಿಸ್ಚಾರ್ಜ್

    ನವದೆಹಲಿ: ಮೆದುಳಿನ ಶಸ್ತ್ರಚಿಕಿತ್ಸೆಗೆ (Brain Surgery) ಒಳಗಾಗಿದ್ದ ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಅವರು ಚೇತರಿಸಿಕೊಂಡಿದ್ದು, ಬುಧವಾರ ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಿಂದ (Indraprastha Apollo Hospital) ಡಿಸ್ಚಾರ್ಜ್ ಆಗಿದ್ದಾರೆ.

    ಕೆಲವು ವಾರಗಳ ಕಾಲ ತೀವ್ರ ತಲೆನೋವಿನಿಂದ ಬಳಲುತ್ತಿದ್ದ ಸದ್ಗುರು ಮಾರ್ಚ್ 17ರಂದು ಆಸ್ಪತ್ರೆಯಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಪೋಲೋ ಹಾಸ್ಪಿಟಲ್ಸ್ ಗ್ರೂಪ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಡಾ.ಸಂಗೀತಾ ರೆಡ್ಡಿ ಈ ಕುರಿತು ಮಾತನಾಡಿ, ಅವರ ಚೇತರಿಕೆ ಮತ್ತು ಗುಣಮುಖದ ಬಗ್ಗೆ ವೈದ್ಯರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಸದ್ಗುರು ಅವರು ಚೇತರಿಸಿಕೊಳ್ಳುತ್ತಿರುವಾಗಲೂ ಅದೇ ಮನೋಭಾವವನ್ನು ಉಳಿಸಿಕೊಂಡಿದ್ದಾರೆ. ಜಾಗತಿಕ ಒಳಿತಿಗಾಗಿ ಅವರ ಬದ್ಧತೆ, ಅವರ ತೀಕ್ಷ್ಣ ಮನಸ್ಸು ಮತ್ತು ಅವರ ಹಾಸ್ಯಪ್ರಜ್ಞೆ ಎಲ್ಲವೂ ಅಖಂಡವಾಗಿದೆ ಎಂದರು.

    ಮಾರ್ಚ್ 15 ರಂದು ಸದ್ಗುರುಗಳಿಗೆ ಎಮ್‌ಆರ್‌ಐ (MRI) ಸ್ಕ್ಯಾನ್ ಮಾಡಲಾಗಿದ್ದು, ಮೆದುಳಿನಲ್ಲಿ ರಕ್ತಸ್ರಾವ ಕಂಡುಬಂದಿದೆ ಎಂದು ಇಶಾ ಫೌಂಡೇಶನ್ ಹೇಳಿಕೆಯಲ್ಲಿ ತಿಳಿಸಿತ್ತು. ನಂತರ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಸದ್ಗುರು ಒಳಗಾಗಿದ್ದರು.

    ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದ ಡಾ ವಿನಿತ್ ಸೂರಿ, ಸದ್ಗುರುಗಳ ಮೆದುಳು, ದೇಹ ಮತ್ತು ಪ್ರಮುಖ ನಿಯತಾಂಕಗಳು ಸಾಮಾನ್ಯ ಮಟ್ಟಕ್ಕೆ ಸುಧಾರಿಸಿದೆ ಎಂದು ಹೇಳಿದ್ದಾರೆ.

  • ಹಾಲಿವುಡ್ ಚಿತ್ರದಲ್ಲಿ ಸದ್ಗುರು ಜಗ್ಗಿ ವಾಸುದೇವ್

    ಹಾಲಿವುಡ್ ಚಿತ್ರದಲ್ಲಿ ಸದ್ಗುರು ಜಗ್ಗಿ ವಾಸುದೇವ್

    ಚಿತ್ರರಂಗದಲ್ಲಿ ಸದ್ಯ ಸದ್ದು ಮಾಡ್ತಿರೋದೇ ಇಂಡಿಯನ್ ಸಿನಿಮಾಗಳು. ಅದರಲ್ಲೂ ಹಾಲಿವುಡ್‌ನಲ್ಲಿ ಭಾರತದ ನಟ-ನಟಿಯರಿಗೆ ಭಾರೀ ಬೇಡಿಕೆ ಶುರುವಾಗಿದೆ. ಇದೆಲ್ಲದರ ನಡುವೆ ಭಾರತದ ಅಧ್ಯಾತ್ಮ ಗುರುಗಳಿಗೂ ಹಾಲಿವುಡ್‌ನಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ. ಹಾಲಿವುಡ್ ಸಿನಿಮಾದಲ್ಲಿ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ನಟಿಸಿದ್ದಾರೆ.‌ ಇದನ್ನೂ ಓದಿ:ಸಮಂತಾ ಡಿವೋರ್ಸ್‌ಗೆ ಆಪ್ತ ಸ್ನೇಹಿತೆನೇ ಕಾರಣನಾ?

    ಹಾಲಿವುಡ್‌ನ (Hollywood) ಫೇಮಸ್ ಗಾಯಕಿ ಜನ್ನಿಫರ್ ಲೊಪೇಜ್ ಅವರು ‘ದಿಸ್ ಈಸ್ ಮಿ ನೌ: ಎ ಲವ್ ಸ್ಟೋರಿ’ ಮ್ಯೂಸಿಕ್ ಚಿತ್ರದಲ್ಲಿ ಇಶಾ ಫೌಂಡೇಶನ್‌ ರೂವಾರಿ ಸದ್ಗುರು ಜಗ್ಗಿ ವಾಸುದೇವ್ ಅತಿಥಿ ಪಾತ್ರ ಮಾಡಿದ್ದಾರೆ. ‘ರಾಶಿಚಕ್ರ ಕೌನ್ಸಿಲ್’ ಹೆಸರಿನ ಗುಂಪು ಪ್ರವೇಶ ಮಾಡುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಜೆನ್ನಿಫರ್ ಲೋಪೆಜ್ ಮತ್ತು ಆಕೆಯ ರಿಲೆಷನ್‌ಶಿಪ್‌ಗಳ ನಡುವಿನ ಸಮಸ್ಯೆಗಳು ಬಗ್ಗೆ ಚರ್ಚಿಸುವ ದೃಶ್ಯದಲ್ಲಿ ಸದ್ಗುರು ಪಾತ್ರ ನಿರ್ವಹಿಸಿದ್ದಾರೆ.

    ಸಮಯವನ್ನು ಕಾಪಾಡುವ ದೇವರ ಸೇವಕರಲ್ಲಿ ಒಬ್ಬರಾಗಿ ಸದ್ಗುರು ನಟಿಸಿದ್ದಾರೆ. ಈ ಚಿತ್ರದಲ್ಲಿ ಹಲವು ಹಾಲಿವುಡ್ ಸ್ಟಾರ್‌ಗಳು ನಟಿಸಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಬಣ್ಣದ ಜಗತ್ತಿಗೆ ಹಾಲಿವುಡ್ ಚಿತ್ರದ ಮೂಲಕ ಸದ್ಗುರು ಪಾದಾರ್ಪಣೆ ಮಾಡಿದ್ದಾರೆ.

    ‘ದಿಸ್ ಈಸ್ ಮಿ ನೌ: ಎ ಲವ್ ಸ್ಟೋರಿ’ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಫೆ.16ರಂದು ಈ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗಿದೆ.

  • ಭಾರತ ಕ್ರಿಕೆಟ್ ತಂಡ ಅಗ್ರಸ್ಥಾನಕ್ಕೆ ಬರುತ್ತೆ ಎಂದು ನನಗೆ ಖಾತ್ರಿಯಿದೆ: ಸದ್ಗುರು

    ಭಾರತ ಕ್ರಿಕೆಟ್ ತಂಡ ಅಗ್ರಸ್ಥಾನಕ್ಕೆ ಬರುತ್ತೆ ಎಂದು ನನಗೆ ಖಾತ್ರಿಯಿದೆ: ಸದ್ಗುರು

    ಚಿಕ್ಕಬಳ್ಳಾಪುರ: ವಿಶ್ವಕಪ್ ಫೀವರ್‌ ಇಡೀ ದೇಶವನ್ನು ಆವರಿಸಿರುವಾಗ, ಹೆಸರಾಂತ ಯೋಗಿ ಸದ್ಗುರು ಜಗ್ಗಿ ವಾಸುದೇವ್‌ (Sadhguru Jaggi Vasudev) ಅವರು ಭಾರತೀಯ ಕ್ರಿಕೆಟ್ ತಂಡದ ಗೆಲುವಿಗೆ ಪ್ರಾರ್ಥಿಸಿದ್ದಾರೆ.

    ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯವನ್ನು ವೀಕ್ಷಿಸಲಿರುವ ಸದ್ಗುರುಗಳು ತಮ್ಮ ಸಾಮಾಜಿಕ ಮಾಧ್ಯಮ ಸಂದೇಶದಲ್ಲಿ, “ಭಾರತದ ತಂಡಕ್ಕೆ ಎಂತಹ ಅದ್ಭುತ ರನ್! ನಮ್ಮ ಕ್ರಿಕೆಟ್ ತಂಡವು ಆಟವನ್ನು ಸಂಪೂರ್ಣವಾಗಿ ಹೊಸ ಮಟ್ಟಕ್ಕೆ ಕೊಂಡೊಯ್ದಿದೆ. 10 ಕ್ಕೆ 10, ಈ ಹಿಂದೆ ಕೇಳಿಲ್ಲದ ವಿಷಯ! ಅನುಕರಣೀಯ ನಾಯಕತ್ವ ಮತ್ತು ವೈಯಕ್ತಿಕ ಆಟಗಾರರ ಅದ್ಭುತ ಪ್ರದರ್ಶನ ಮತ್ತು ದಾಖಲೆಗಳು ಹೇರಳವಾಗಿರುವುದರಿಂದ, ಈ ಅಸಾಧಾರಣ ತಂಡವು ಫೈನಲ್ ಬಗ್ಗೆ ಯಾವುದೇ ಚಿಂತೆಯನ್ನು ಹೊಂದಿರಬಾರದು” ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಈ ಅವಮಾನ ತಪ್ಪಿಸಲು ಭಾರತ ವಿಶ್ವಕಪ್‌ ಗೆಲ್ಲಲೇಬೇಕು: 2006ರ ಚಾಂಪಿಯನ್ಸ್‌ ಟ್ರೋಫಿ ವೇಳೆ ಆಗಿದ್ದೇನು?

    ತಂಡದೊಂದಿಗೆ ತಮ್ಮ ಸಲಹೆಯನ್ನು ಹಂಚಿಕೊಂಡ ಸದ್ಗುರು, “ಮುಖ್ಯವಾದ ವಿಷಯವೆಂದರೆ, ನಾವು ಎಂದಿಗೂ ಎದುರಾಳಿಗಳನ್ನು ಲಘುವಾಗಿ ತೆಗೆದುಕೊಳ್ಳಬಾರದು. ಅಥವಾ ಅವರು ಯಾರು ಎಂಬುದರ ಬಗ್ಗೆ ನಾವು ತಲೆಕೆಡಿಸಿಕೊಳ್ಳಬಾರದು. ಆಟವನ್ನು ಪೂರ್ಣವಾಗಿ ಹೇಗೆ ಆಡುವುದು ಎಂಬುದು ನಮ್ಮ ಕಾಳಜಿಯಾಗಿರಬೇಕು. ನಮ್ಮ ಹುಡುಗರು ಅದೇ ರೀತಿಯಲ್ಲಿ ಇಡೀ ದೇಶಕ್ಕೆ ಹೆಮ್ಮೆ ಮತ್ತು ಸಂತೋಷವನ್ನು ತರುತ್ತಾರೆ ಎಂದು ನನಗೆ ವಿಶ್ವಾಸವಿದೆ ಎಂದಿದ್ದಾರೆ.

    ನೀವು 1.4 ಬಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ತರುವ ಸಂತೋಷದ ಪ್ರಮಾಣವನ್ನು ಪರಿಗಣಿಸಿರಿ. ಅದನ್ನು ಮರೆಯಬೇಡಿ. ಆದರೆ ಅದನ್ನು ನಿಮ್ಮ ತಲೆಯ ಮೇಲೆ ಒಯ್ಯಬೇಡಿ. ಕೇವಲ ಚೆಂಡನ್ನು ಹೊಡೆಯಿರಿ, ವಿಕೆಟ್‌ಗಳನ್ನು ಹೊಡೆದುರುಳಿಸಿ ಅಷ್ಟೇ! ಉಳಿದದ್ದು ಸಂಭವಿಸುತ್ತದೆ. ನಿಮ್ಮೆಲ್ಲರಿಗೂ ನನ್ನ ಶುಭ ಹಾರೈಕೆಗಳು ಮತ್ತು ಆಶೀರ್ವಾದಗಳು ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವಕಪ್‌ ಪಂದ್ಯಕ್ಕೂ ಮುನ್ನ ರಂಗೇರಲಿದೆ ಮೋದಿ ಕ್ರೀಡಾಂಗಣ – ಕಾರ್ಯಕ್ರಮಗಳ ಪಟ್ಟಿ ರಿಲೀಸ್‌

    ಅಹಮದಾಬಾದ್‍ನಲ್ಲಿ ನಡೆಯಲಿರುವ ಫೈನಲ್ ಪಂದ್ಯವನ್ನು ವೀಕ್ಷಿಸುತ್ತಾ ನಿಮ್ಮೊಂದಿಗೆ ಇರುತ್ತೇನೆ. ಇದನ್ನು ಸಾಧ್ಯವಾಗಿಸೋಣ ಎಂದು ಸದ್ಗುರು ತಿಳಿಸಿದ್ದಾರೆ. ಭಾನುವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಆಸ್ಟ್ರೇಲಿಯಾ (India vs Australia) ತಂಡಗಳು ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಸೆಣಸಲಿವೆ.

  • ಕಾಜಿರಂಗ ಉದ್ಯಾನವನದಲ್ಲಿ ಜೀಪ್ ಚಾಲನೆ – ಸದ್ಗುರು, ಹಿಮಂತ ಬಿಸ್ವಾ ಶರ್ಮಾ ವಿರುದ್ಧ FIR

    ಕಾಜಿರಂಗ ಉದ್ಯಾನವನದಲ್ಲಿ ಜೀಪ್ ಚಾಲನೆ – ಸದ್ಗುರು, ಹಿಮಂತ ಬಿಸ್ವಾ ಶರ್ಮಾ ವಿರುದ್ಧ FIR

    ಗುವಹಾಟಿ: ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ (Kaziranga National Park) ಜೀಪ್ ಚಾಲನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಈಶಾ ಫೌಂಡೇಶನ್‍ನ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಮತ್ತು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ವಿರುದ್ಧ ಎಫ್‍ಐಆರ್ (FIR) ದಾಖಲಾಗಿದೆ.

    ಸದ್ಗುರು ಜಗ್ಗಿ ವಾಸುದೇವ್ ಮತ್ತು ಹಿಮಂತ ಬಿಸ್ವಾ ಶರ್ಮಾ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಶನಿವಾರ ರಾತ್ರಿ ವಾಹನ ಚಲಾಯಿಸಿದರು ಎಂಬ ಕಾರಣಕ್ಕೆ ಅವರಿಬ್ಬರ ವಿರುದ್ಧ ಉದ್ಯಾನವನದ ಹತ್ತಿರದ ಎರಡು ಗ್ರಾಮಗಳ ಇಬ್ಬರು ನಿವಾಸಿಗಳು ದೂರು ದಾಖಲಿಸಿದ್ದಾರೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನ್ನು ಪ್ರವಾಸಿಗರಿಗಾಗಿ ಶನಿವಾರ ತೆರೆಯಲಾಗಿತ್ತು. ಅಂದು ರಾತ್ರಿ ಸದ್ಗುರು ಜಗ್ಗಿ ವಾಸುದೇವ್ ಉದ್ಯಾನದ ಒಳಗೆ ಜೀಪ್ ಚಾಲನೆ ಮಾಡಿದ್ದಾರೆ. ಅವರ ಪಕ್ಕ ಸಿಎಂ ಹಿಮಂತ ಬಿಸ್ವಾ ಶರ್ಮಾ ಕುಳಿತಿದ್ದರು. ಅಸ್ಸಾಂ ಸಂಪುಟ ಸಚಿವ ಜಯಂತ ಮಲ್ಲ ಮತ್ತಿತರರು ಕೂಡಾ ಜೀಪ್‍ನಲ್ಲಿ ರಾತ್ರಿ ಉದ್ಯಾನದಲ್ಲಿ ಸಂಚರಿಸಿದ್ದರು. ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ಹೂಡಿಕೆದಾರರಿಗೆ ಒಂದೇ ದಿನ 7 ಲಕ್ಷ ಕೋಟಿ ನಷ್ಟ

    ಇದೀಗ ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ (Wildlife Protection Act) ಸ್ಥಳೀಯರಾದ ಸೋನೇಶ್ವರ್ ನಾರಾ ಮತ್ತು ಪ್ರವೀಣ್ ಪೆಗು ಅಸ್ಸಾಂನ ಗೋಲಘಾಟ್ ಜಿಲ್ಲೆಯ ಬೊಕಾಕಾಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ಸಫಾರಿ ವನ್ಯಜೀವಿ ಸಂರಕ್ಷಣೆ ಕಾಯ್ದೆ, 1972ರ ಉಲ್ಲಂಘನೆಯಾಗಿದೆ ಎಂದು ಎಫ್‍ಐಆರ್‌ನಲ್ಲಿ ದಾಖಲಾಗಿದೆ. ಇದನ್ನೂ ಓದಿ: ಮಕ್ಕಳೊಂದಿಗೆ ಕೇರಳದ ಬೀದಿಗಳಲ್ಲಿ ಫುಟ್‍ಬಾಲ್ ಆಡಿದ ರಾಹುಲ್

    ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ಉದ್ಯಾನದೊಳಗೆ ಜೀಪ್ ಸಂಚಾರವನ್ನು ನಿಷೇಧಿಸಲಾಗಿದೆ. ಆದರೂ ಸದ್ಗುರು ಮತ್ತು ಹಿಮಂತ ಬಿಸ್ವಾ ಶರ್ಮಾ ಜೀಪ್ ಚಾಲನೆ ಮಾಡಿದ್ದಾರೆ. ಇಂತಹ ಘಟನೆಗಳಿಂದ ಕಾಜಿರಂಗ ಮತ್ತು ಅಲ್ಲಿಯ ಪ್ರಾಣಿಗಳ ಸಂರಕ್ಷಣೆಗೆ ಅಪಾಯ. ಕಾನೂನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಅವರಿಬ್ಬರನ್ನು ಬಂಧಿಸಿ ಕರ್ತವ್ಯ ಪ್ರಜ್ಞೆ ಮೆರೆಯಬೇಕು. ಅವರಿಬ್ಬರೂ ಸಾರ್ವಜನಿಕರರೊಂದಿಗೆ ಕ್ಷಮೆ ಕೇಳಬೇಕು. ಕಾನೂನಿನಡಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಈ ಆರೋಪದ ಬೆನ್ನಲ್ಲೇ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ರಾತ್ರಿ ವೇಳೆ ಜೀಪ್ ಚಾಲನೆ ಮಾಡಿಲ್ಲ. ರಾತ್ರಿ ವೇಳೆ ಉದ್ಯಾನವನಕ್ಕೆ ಭೇಟಿ ಕೊಡಬಾರದೆಂದು ಕಾನೂನಿಲ್ಲ ಎಂದು ಹಿಮಂತ ಬಿಸ್ವಾ ಶರ್ಮಾ ಆರೋಪವನ್ನು ಅಲ್ಲಗಳೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸದ್ಗುರು ಕಾಲು ಮುಟ್ಟಿ ನಮಸ್ಕರಿಸಿದ BSY – ಭಾಷಣದ ವೇಳೆ ಕೆಮ್ಮಿದಾಗ ನೀರು ತಂದುಕೊಟ್ಟ ಜಗ್ಗಿ ವಾಸುದೇವ್

    ಸದ್ಗುರು ಕಾಲು ಮುಟ್ಟಿ ನಮಸ್ಕರಿಸಿದ BSY – ಭಾಷಣದ ವೇಳೆ ಕೆಮ್ಮಿದಾಗ ನೀರು ತಂದುಕೊಟ್ಟ ಜಗ್ಗಿ ವಾಸುದೇವ್

    ಬೆಂಗಳೂರು: ಇಶಾ ಫೌಂಡೇಶನ್ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ `ಮಣ್ಣು ಉಳಿಸಿ ಅಭಿಯಾನ’ದ ಬೃಹತ್ ಸಮಾರಂಭ ಆಯೋಜಿಸಲಾಗಿದೆ. ಕಾರ್ಯಕ್ರಮದ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಸದ್ಗುರು ಜಗ್ಗಿ ವಾಸುದೇವ್ ಅವರ ನಡುವಿನ ಬಾಂಧವ್ಯ ನೆರೆದಿದ್ದವರ ಗಮನ ಸೆಳೆಯಿತು.

    ಸಾಂದರ್ಭಿಕ ಚಿತ್ರ

    ಕಾರ್ಯಕ್ರಮದ ವೇದಿಕೆಯಲ್ಲಿ ಜಗ್ಗಿ ವಾಸುದೇವ್ ಅವರ ಕಾಲು ಮುಟ್ಟಿ ಯಡಿಯೂರಪ್ಪ ನಮಸ್ಕರಿಸಿದರು. ನಂತರ ಯಡಿಯೂರಪ್ಪ ಭಾಷಣ ಮಾಡಲು ತೆರಳುವ ವೇಳೆಯೂ ಸದ್ಗುರು ಕಾಲಿಗೆ ನಮಸ್ಕರಿಸಿದರು. ಇದನ್ನೂ ಓದಿ: 52ನೇ ವಸಂತಕ್ಕೆ ಕಾಲಿಟ್ಟ ರಾಹುಲ್ ಗಾಂಧಿ – ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ್ದೇಕೆ?

    ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, ಈ ಶತಮಾನದಲ್ಲಿ ನಾವು ಕಳವಳಕಾರಿ ಸನ್ನಿವೇಶದಲ್ಲಿ ಬದುಕುತ್ತಿದ್ದೇವೆ. ಪ್ರಪಂಚದಾದ್ಯಂತ ಪ್ರವಾಹ, ಅತಿವೃಷ್ಟಿ, ಪರಿಸರ ಅಸಮತೋಲನ ಹೆಚ್ಚಾಗ್ತಿದೆ. ನಾಗರಿಕತೆ ಹೆಚ್ಚಾಗ್ತಿದೆ. ಉಸಿರಾಟಕ್ಕೆ ಶುದ್ಧ ಗಾಳಿ, ನೀರೂ ಸಿಕ್ತಿಲ್ಲ. ಗಾಳಿ, ನೀರಿಗೆ ಪರಿತಪಿಸುವ ಸನ್ನಿವೇಶ ಇದೆ ಎಂದು ವಿಷಾದಿಸಿದರು.

    ಈ ಹಿಂದೆ ರಾಜರು ಸಾಮ್ರಾಜ್ಯಗಳಿಗಾಗಿ ಹೋರಾಡಿದ್ರು. ಈಗ ಪೆಟ್ರೋಲ್, ಡೀಸೆಲ್, ನೀರಿಗಾಗಿ ಹೋರಾಟ ನಡೀತಿದೆ. ಇಂಥ ಸಂದರ್ಭದಲ್ಲಿ ಸದ್ಗುರು ಅವರ ಮಣ್ಣು ಉಳಿಸಿ ಅಭಿಯಾನದ ಅವಶ್ಯಕತೆ ಇದೆ. ಈ ಅಭಿಯಾನ ಸಮಯೋಚಿತವಾಗಿದೆ. ಇದಕ್ಕೆ ಎಲ್ಲರೂ ಕೈ ಜೋಡಿಸಿ ಮಣ್ಣು ಉಳಿಸುವ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.

    ಭಾಷಣದ ಮಧ್ಯೆ ಯಡಿಯೂರಪ್ಪಗೆ ಕೆಮ್ಮು ಬಂದಾಗ ಸದ್ಗುರು ನೀರು ತಂದುಕೊಟ್ಟರು. ಇದನ್ನೂ ಓದಿ: `ಅಗ್ನಿಪಥ್’ ಪ್ರತಿಭಟನೆ – ಸಿಕಂದರಾಬಾದ್ ಹಿಂಸಾಚಾರದ ಮಾಸ್ಟರ್ ಮೈಂಡ್ ಅರೆಸ್ಟ್

    ಇಶಾ ಫೌಂಡೇಶನ್ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಮಣ್ಣು ಉಳಿಸಿ ಅಭಿಯಾನದ ಬೃಹತ್ ಸಮಾರಂಭ ನಡೆಯಿತು. ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಬಿ.ಸಿ.ನಾಗೇಶ್ ಸೇರಿ ಸಾವಿರಾರು ಮಂದಿ ಭಾಗಿಯಾಗಿದ್ದರು. ಭರತನಾಟ್ಯ, ಸಾಂಸ್ಕೃತಿಕ ನೃತ್ಯಗಳ ಮೂಲಕ ಸಿಎಂಗೆ ಸ್ವಾಗತ ಕೋರಲಾಯಿತು.

    Live Tv

  • ಹಿಜಬ್ ಹೆಸರಿನಲ್ಲಿ ಮಕ್ಕಳಿಗೆ ವಿಭಜನೆ ವಿಷವನ್ನು ತಿನ್ನಿಸಬಾರದು: ಸದ್ಗುರು ಜಗ್ಗಿ ವಾಸುದೇವ್

    ಹಿಜಬ್ ಹೆಸರಿನಲ್ಲಿ ಮಕ್ಕಳಿಗೆ ವಿಭಜನೆ ವಿಷವನ್ನು ತಿನ್ನಿಸಬಾರದು: ಸದ್ಗುರು ಜಗ್ಗಿ ವಾಸುದೇವ್

    ನವದೆಹಲಿ: ಹಿಜಬ್ ಹೆಸರಿನಲ್ಲಿ ಮಕ್ಕಳಿಗೆ ವಿಭಜನೆ ವಿಷವನ್ನು ತಿನ್ನಿಸಬಾರದು ಎಂದು ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಶಾಲೆಗಳಲ್ಲಿ ಡ್ರೆಸ್ ಕೋಡ್‍ನಲ್ಲಿ ಕುರಿತಂತೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನೀವು ಧರಿಸುವ ಹಿಜಬ್, ಬುರ್ಖಾ, ಸೀರೆ ಮತ್ತು ನೀವು ತಿನ್ನುವ ಖಿಚಡಿ ಅಥವಾ ಬಿರಿಯಾನಿ ಎಲ್ಲವೂ ಮಣ್ಣಿನಿಂದ ಬರುತ್ತದೆ. ಆದ್ದರಿಂದ ಮಣ್ಣಿಗೆ ಅದ್ಭುತವಾಗಿ ಒಂದುಗೂಡಿಸುವ ಶಕ್ತಿಯಿದೆ. ನಮ್ಮನ್ನು ಒಟ್ಟಿಗೆ ಸೇರಿಸುವ ಜೀವನದ ಅಂಶಗಳನ್ನು ನೋಡುವ ಬದಲು, ನಾವು ನಿರಂತರವಾಗಿ ನಮ್ಮನ್ನು ವಿಭಜಿಸುವ ಅಂಶಗಳನ್ನು ನೋಡುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಹಿಜಬ್‌ ವಿವಾದ – ಶೀರೂರು ಮಠ, ಶಬರಿ ಮಲೆ, ತ್ರಿವಳಿ ತಲಾಖ್‌ ಪ್ರಕರಣ ಪ್ರಸ್ತಾಪಿಸಿ ಎಜಿ ವಾದ

    ಮಣ್ಣು ಸಾರ್ವತ್ರಿಕ ವಸ್ತುವಾಗಿದೆ. ನೀವು ಯಾರು, ಯಾವ ಧರ್ಮ, ಜನಾಂಗ, ರಾಷ್ಟ್ರೀಯತೆಗೆ ಸೇರಿದವರು ಎಂಬುದು ಮುಖ್ಯವಲ್ಲ. ನೀವು ಮಣ್ಣಿನಿಂದ ಬಂದು, ಮರಳಿ ಮಣ್ಣಿಗೆ ಹೋಗುತ್ತೀರಾ. ಆದ್ದರಿಂದ ಇದು ಮಣ್ಣು ಒಂದು ಪ್ರಮುಖ ಒಗ್ಗೂಡಿಸುವ ಮೂಲವಾಗಿದೆ. ಹಿಂದಿನ ಪೀಳಿಗೆಯವರು ಬದುಕಿದ ಪೂರ್ವಾಗ್ರಹಗಳೊಂದಿಗೆ ಮಕ್ಕಳು ಬೆಳೆಸಬಾರದು. ನೀವು ಶಾಲೆಗಳಲ್ಲಿದ್ದಾಗ ನಿಮ್ಮನ್ನು ಮಕ್ಕಳು ಎಂದು ಪರಿಗಣಿಸಲಾಗುತ್ತದೆ. ಹೀಗಿರುವಾಗ ಮಕ್ಕಳಿಗೆ ನೀವು ಹಿಜಬ್ ಹೆಸರಿನಲ್ಲಿ ಭಜನೆಯ ವಿಷವನ್ನು ತಿನ್ನಿಸಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಕ್ಷುಬ್ಧಗೊಂಡ ಶಿವಮೊಗ್ಗದಲ್ಲಿ 2 ದಿನ ಕರ್ಫ್ಯೂ – ನಾಳೆ ಬೆಳಗ್ಗೆವರೆಗೂ ನಿಷೇಧಾಜ್ಞೆ, ಖಾಕಿ ಭದ್ರತೆ

    ಹಿಂದಿನ ಪೀಳಿಗೆಯ ಜನರಂತೆ ಮಕ್ಕಳು ಬೆಳೆಯಬೇಕು ಎಂದಿಲ್ಲ. ನಮ್ಮಲ್ಲಿ ಯಾವುದೇ ಪೂರ್ವಾಗ್ರಹಗಳು, ಸಮಸ್ಯೆಗಳು, ದ್ವೇಷ ಅಥವಾ ಪ್ರೀತಿ ಇರಲಿ ಇದನ್ನು ಮಕ್ಕಳ ಮೇಲೆ ಬಲವಂತವಾಗಿ ಹೇರಬಾರದು. ನೀವು ಬದುಕಿದ ಪೂರ್ವಾಗ್ರಹಗಳೊಂದಿಗೆ ಮಕ್ಕಳು ಬೆಳೆಯಬಾರದು ಎಂದಿದ್ದಾರೆ.