Tag: ಸದ್ಗುರು ಜಗ್ಗಿ ವಾಸುದೇವ

  • ವಿವಾದಿತ ‘ಓ ಮೈ ಗಾಡ್ 2’ ಸಿನಿಮಾ ವೀಕ್ಷಿಸಿದ ಸದ್ಗುರು

    ವಿವಾದಿತ ‘ಓ ಮೈ ಗಾಡ್ 2’ ಸಿನಿಮಾ ವೀಕ್ಷಿಸಿದ ಸದ್ಗುರು

    ಕ್ಷಯ್ ಕುಮಾರ್ (Akshay Kumar) ನಟನೆಯ ‘ಓ ಮೈ ಗಾಡ್’ (Oh My God) ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕು. ಥಿಯೇಟರ್ ನಲ್ಲಿ ಬಿಡುಗಡೆಗೂ ಮುನ್ನ ಸದ್ಗುರು ಜಗ್ಗಿ ವಾಸುದೇವ (Sadhguru Jaggi Vasudeva) ಸಿನಿಮಾವನ್ನು ವೀಕ್ಷಿಸಿದ್ದಾರೆ. ಸಿನಿಮಾ ಕುರಿತಾಗಿ ಅವರು ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ವಿವಾದಿತ ಮತ್ತು ಸಲಿಂಗ ಕಾಮದ ಕುರಿತಾದ ಸಿನಿಮಾವನ್ನು ಸದ್ಗುರು ನೋಡಿದ್ದು ಹಲವರಿಗೆ ಅಚ್ಚರಿ ಮೂಡಿಸಿದೆ.

    ಈ ಸಿನಿಮಾವನ್ನು ಸದ್ಗುರುಗೆ ತೋರಿಸುವುದಕ್ಕಾಗಿಯೇ ಅಕ್ಷಯ್ ಕುಮಾರ್ ಇಶಾ ಫೌಂಡೇಶನ್ ನಲ್ಲೇ ವ್ಯವಸ್ಥೆ ಮಾಡಿದ್ದರು. ಜೊತೆಗೆ ಅಕ್ಷಯ್ ಕುಮಾರ್ ಅಲ್ಲಿಗೆ ಹೋಗಿದ್ದರು. ಈ ಸಿನಿಮಾದ ಮೂಲಕ ಲೈಂಗಿಕ ಶಿಕ್ಷಣದ ಬಗ್ಗೆ ಹೇಳಲು ಹೊರಟಿರುವುದರಿಂದ ಜಗ್ಗಿ ವಾಸುದೇವ ಅವರ ಅಭಿಪ್ರಾಯ ಕೇಳಲೂ ಚಿತ್ರತಂಡ ಮುಂದಾಗಿತ್ತು, ಇಡೀ ಸಿನಿಮಾವನ್ನು ಸದ್ಗುರು ಮೆಚ್ಚಿಕೊಂಡಿದ್ದಾರೆ. ತಮ್ಮ ಅಭಿಪ್ರಾಯವನ್ನೂ ಅವರು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ತಮಿಳಿನಲ್ಲಿ ಬಂಪರ್ ಆಫರ್‌, ವಿಕ್ರಮ್‌ಗೆ ನಾಯಕಿಯಾದ ರಶ್ಮಿಕಾ ಮಂದಣ್ಣ

    ಚಿತ್ರದ ಕುರಿತು ಜಗ್ಗಿ ವಾಸುದೇವ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ತಮ್ಮ ಅಭಿಪ್ರಾಯದಲ್ಲಿ ಸಿನಿಮಾ ಬಗ್ಗೆ ಕೊಂಡಾಡಿದ್ದಾರೆ. ‘ಮಹಿಳೆಯರನ್ನು ಘನತೆಯಿಂದ ಕಾಣುವಂತಹ, ಅವರ ಸುರಕ್ಷತೆಯನ್ನು ಬಯಸುವಂತಹ ಸಮಾಜ ಕಟ್ಟಲು ನಾವು ಹೊರಟಿದ್ದೇವೆ. ಇಂತಹ ಸಮಯದಲ್ಲಿ ನಾವು ದೈಹಿಕ ಅಗತ್ಯತೆಗಳ ಕುರಿತಾಗಿಯೂ ಶಿಕ್ಷಣ ಕೊಡಬೇಕಿದೆ. ಅಂತಹ ಶಿಕ್ಷಣವನ್ನು ಈ ಸಿನಿಮಾದಲ್ಲಿ ಕೊಡಲು ಹೊರಟಿದ್ದೀರಿ’ ಎಂದು ಹೇಳಿದ್ದಾರೆ.

    ಅಕ್ಷಯ್ ಕುಮಾರ್ ಅವರು ಸಿನಿಮಾ ತೋರಿಸುವ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳನ್ನೂ ಈ ಸಂದರ್ಭದಲ್ಲಿ ಸದ್ಗುರು ತಿಳಿಸಿದ್ದಾರೆ. ಜಗ್ಗಿ ವಾಸುದೇವ ಅವರು ಪ್ರತಿಕ್ರಿಯೆಗೆ ಅಕ್ಷಯ್ ಕುಮಾರ್ ಕೂಡ ಧನ್ಯವಾದಗಳನ್ನು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಂದಿ ಬೆಟ್ಟದ ಬಳಿ ನಮ್ಮ ನಂದಿ-ಹಸಿರು ಬೆಂಗಳೂರು ಅಭಿಯಾನಕ್ಕೆ ಸದ್ಗುರು ಚಾಲನೆ

    ನಂದಿ ಬೆಟ್ಟದ ಬಳಿ ನಮ್ಮ ನಂದಿ-ಹಸಿರು ಬೆಂಗಳೂರು ಅಭಿಯಾನಕ್ಕೆ ಸದ್ಗುರು ಚಾಲನೆ

    ಚಿಕ್ಕಬಳ್ಳಾಪುರ: ನಮ್ಮ ನಂದಿ-ಹಸಿರು ಬೆಂಗಳೂರು ಗಿಡ ನೆಡುವ ಅಭಿಯಾನಕ್ಕೆ ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ಚಾಲನೆ ನೀಡಿದರು.

    ನಂದಿಬೆಟ್ಟ ಸೇರಿದಂತೆ ಸುತ್ತಲಿನ ಬೆಟ್ಡಗುಡ್ಡಗಳಲ್ಲಿ ಗಿಡ ನೆಟ್ಟು ಹಸೀರೀಕರಣ ಮಾಡುವ ಸದುದ್ದೇಶದಿಂದ ನಂದಿಬೆಟ್ಟದ ತಪ್ಪಲಲ್ಲಿ ಗಿಡ ನೆಡುವ ಅಭಿಯಾನಕ್ಕೆ ಇಂದು ಅಧಿಕೃತವಾಗಿ ಚಾಲನೆ ನೀಡಿದರು. ಬೆಳ್ಳಂ ಬೆಳಗ್ಗೆ ನಂದಿಬೆಟ್ಟದ ತಪ್ಪಲಲ್ಲಿ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಸದ್ಗುರುಗಳು ಚಾಲನೆ ನೀಡಿದರು. ಸ್ವಯಂ ಸೇವಕರು ಬಿಂದಿಗೆ ಮೂಲಕ ಬೆಟ್ಟಕ್ಕೆ ನೀರು ಹೊತ್ತು ಗಿಡಗಳನ್ನು ನೆಟ್ಟು ಸಂಭ್ರಮಿಸಿದರು. ಇದನ್ನೂ ಓದಿ: 20 ಕೋಟಿಗೂ ಅಧಿಕ ತೆರಿಗೆ ವಂಚಿಸಿದ್ದಾರೆ ಸೋನು ಸೂದ್: ಆದಾಯ ತೆರಿಗೆ ಇಲಾಖೆ

    ಕೇವಲ ಸಂಘ, ಸಂಸ್ಥೆಗಳು ಹಾಗೂ ಸರ್ಕಾರಿ ಅಧಿಕಾರಿಗಳಿಂದ ಯಾವುದೇ ಕಾರ್ಯಕ್ರಮ ಯಶಸ್ವಿ ಆಗುವುದಿಲ್ಲ. ನಾಗರಿಕರು ಹಾಗೂ ಯುವಕರ ಸಹಕಾರವೂ ಅಗತ್ಯ. ಹೀಗಾಗಿ ಯುವಜನತೆ ಈ ಪರಿಸರ ಸ್ನೇಹಿ ನಂದಿ ಮಾಡಲು ಸಾಥ್ ಕೊಡಬೇಕು ಎಂದು ಸದ್ಗುರುಗಳು ಮನವಿ ಮಾಡಿದರು.

    ಚಿಕ್ಕಬಳ್ಳಾಪುರದ ಬಳಿ ಲೀಡರ್ ಶಿಪ್ ಆಕಾಡೆಮಿ ಹಾಗೂ ವಸತಿ ಶಾಲೆ, ಯೋಗ ಸೆಂಟರ್ ಬರಲಿದೆ. ಚಿಕ್ಕಂದಿನಲ್ಲಿ ಚಿಕ್ಕಬಳ್ಳಾಪುರದ ಕಡೆ ಬಹಳ ಸಮಯ ಇರುತ್ತಿದ್ದೆವು. ಆದರೆ ಮತ್ತೆ ಈಗ ಚಿಕ್ಕಬಳ್ಳಾಪುರದ ಕಡೆ ಬರುತ್ತೇವೆಂದು ಅಂದುಕೊಂಡಿರಲಿಲ್ಲ ಎಂದು ನೆನಪುಗಳನ್ನು ಮೆಲುಕು ಹಾಕಿದರು.

    ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ, ಎಸ್‍ಪಿ ಮಿಥುನ್ ಕುಮಾರ್ ಹಾಗೂ ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ಅರಸಲನ್ ಸೇರಿದಂತೆ ಈಶಾ ಫೌಂಡೇಶನ್ ನ ನೂರಾರು ಸ್ವಯಂ ಸೇವಕರು ಭಾಗಿಯಾಗಿದ್ದರು.