Tag: ಸದಾಶಿವ ನಗರ

  • ಡಿಸಿಎಂ ಡಿಕೆಶಿ ಮನೆ ಬಳಿ ನಕಲಿ ನಂಬರ್ ಪ್ಲೇಟ್ ಕಾರು ಪತ್ತೆ – ಮಾಲೀಕನ ವಿರುದ್ಧ FIR

    ಡಿಸಿಎಂ ಡಿಕೆಶಿ ಮನೆ ಬಳಿ ನಕಲಿ ನಂಬರ್ ಪ್ಲೇಟ್ ಕಾರು ಪತ್ತೆ – ಮಾಲೀಕನ ವಿರುದ್ಧ FIR

    ಬೆಂಗಳೂರು: ಸದಾಶಿವ ನಗರದ (Sadashiva Nagar) ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಮನೆಯ ಬಳಿ ನಕಲಿ ನಂಬರ್ ಪ್ಲೇಟ್‌ನ ಫಾರ್ಚೂನರ್ ಕಾರೊಂದು ಪತ್ತೆಯಾಗಿದೆ.

    ಸೆ.07ರಂದು ಫಾರ್ಚೂನರ್ ಕಾರು ಪತ್ತೆಯಾಗಿತ್ತು. ಹೀಗಾಗಿ ಕಾರನ್ನು ಟೋಯಿಂಗ್ ಮಾಡಲು ಪೊಲೀಸರು ಬಂದಿದ್ದರು. ಈ ವೇಳೆ ಕಾರಿನ ಮೇಲಿನ KA51MW6814 ನಂಬರ್ ಪ್ಲೇಟ್ ಇರುವುದನ್ನು ಗಮನಿಸಿ, ಮಾಲೀಕರ ಸಂಪರ್ಕಕ್ಕೆ ಮುಂದಾಗಿದ್ದಾರೆ. ಆಗ ದೀಪಕ್ ಎಂಬುವವರಿಗೆ ಸೇರಿದ ಕಾರು ಎಂದು ತಿಳಿದಿದ್ದು, ಕರೆ ಮಾಡಿದ್ದಾರೆ. ಈ ವೇಳೆ ದೀಪಕ್ ಕಾರು ನಮ್ಮ ಮನೆ ಬಳಿಯೇ ಇದೆ ಎಂದಿದ್ದರು.ಇದನ್ನೂ ಓದಿ: ಸಿಎಂ ನಿವಾಸದ ಮುಂದೆ ಹೊತ್ತಿ ಉರಿದ ಕಾರು – ಕೂದಲೆಳೆ ಅಂತರದಲ್ಲಿ ಚಾಲಕ ಪಾರು

    ಇನ್ನೂ ಕಾರಿನ ಹಿಂಭಾಗದಲ್ಲಿ ಬೇರೆ KA42P6606 ನಂಬರ್ ಪ್ಲೇಟ್ ಇರುವುದನ್ನು ಗಮನಿಸಿ, ಮಾಲೀಕರನ್ನು ಪತ್ತೆಗೆ ಮುಂದಾಗಿದ್ದು, ರಾಮನಗರ ರಿಜಿಸ್ಟ್ರೇಷನ್ ಹೊಂದಿರುವ ಮಂಜುನಾಥ್ ಅವರಿಗೆ ಸೇರಿದ್ದು ಎಂದು ಗೊತ್ತಾಗಿದೆ. ಕಾರನ್ನು ಸೀಜ್ ಮಾಡಲಾಗಿದ್ದು, ಮಾಲೀಕ ಮಂಜುನಾಥ್ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

    ಪೊಲೀಸರ ಮಾಹಿತಿ ಪ್ರಕಾರ, ಪತ್ತೆಯಾಗಿರುವ ಕಾರು ಮಾಗಡಿ ಮಾಜಿ ಎಂಎಲ್‌ಎ ಮಂಜುನಾಥ್‌ಗೆ ಸೇರಿದ್ದು ಎನ್ನಲಾಗಿದ್ದು, ಈ ಬಗ್ಗೆ ಸದಾಶಿವನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಆ ದಿನ ಮಂಜುನಾಥ್ ಬಂದಿರಲಿಲ್ಲ, ಬದಲಾಗಿ ಮಾಗಡಿ ಮೂಲದ ಬೇರೊಬ್ಬರು ಕಾರನ್ನು ತಂದಿದ್ದರು ಎಂಬ ಮಾಹಿತಿ ತನಿಖೆ ವೇಳೆ ತಿಳಿದುಬಂದಿದೆ.ಇದನ್ನೂ ಓದಿ: ಹೊಸದಾಗಿ ಜಾತಿ ಜನಗಣತಿ ಸಮೀಕ್ಷೆಗೆ ರಾಜ್ಯ ಸರ್ಕಾರ ಅಸ್ತು – ಸೆ.22ರಿಂದ ಅ.7ರ ವರೆಗೆ ಸಮೀಕ್ಷೆ

  • ನಿವೃತ್ತ ಹವಾಲ್ದಾರ್ ಪುತ್ರನ ಆತ್ಮಹತ್ಯೆ ಪ್ರಕರಣ- ಸೈಕೋ ರೀತಿ ವರ್ತಿಸುತ್ತಿದ್ದ ವಿದ್ಯಾರ್ಥಿ

    ನಿವೃತ್ತ ಹವಾಲ್ದಾರ್ ಪುತ್ರನ ಆತ್ಮಹತ್ಯೆ ಪ್ರಕರಣ- ಸೈಕೋ ರೀತಿ ವರ್ತಿಸುತ್ತಿದ್ದ ವಿದ್ಯಾರ್ಥಿ

    – ರಾಹುಲ್ ವರ್ತನೆ ಬಗ್ಗೆ ಕೇಳಿ ಪೊಲೀಸರೇ ಶಾಕ್

    ಬೆಂಗಳೂರು: ಎಸ್‍ಎಸ್‍ಎಲ್‍ಸಿಯಲ್ಲಿ ಶೇ.90 ಅಂಕ ಗಳಿಸಿದ್ದ ನಿವೃತ್ತ ಹವಾಲ್ದಾರ್ ಪುತ್ರನ ಆತ್ಮಹತ್ಯೆ ಕುರಿತು ಪೊಲೀಸರು ಆಳವಾಗಿ ತನಿಖೆ ನಡೆಸುತ್ತಿದ್ದು, ಈ ವೇಳೆ ಭಯಾನಕ ವಿಚಾರಗಳು ಹೊರ ಬರುತ್ತಿವೆ. ವಿದ್ಯಾರ್ಥಿ ರಾಹುಲ್ ಭಂಡಾರಿ ವರ್ತನೆ ಬಗ್ಗೆ ಕೇಳಿ ಸ್ವತಃ ಪೊಲೀಸರೇ ಶಾಕ್ ಆಗಿದ್ದಾರೆ.

    ಕಳೆದ ಆರು ತಿಂಗಳಿಂದ ರಾಹುಲ್ ಭಂಡಾರಿ ವಿಚಿತ್ರವಾಗಿ ವರ್ತಿಸೋಕೆ ಶುರು ಮಾಡಿದ್ದ. ತನ್ನ ರೂಮಲ್ಲಿ ಕೂತು ಸೈಕೋ ರೀತಿ ವರ್ತಿಸುತ್ತಿದ್ದ. ಓದಲು, ಬರೆಯಲು, ಗೇಮ್ ಆಡಲು, ತಾನೇ ಟಾರ್ಗೆಟ್ ಫಿಕ್ಸ್ ಮಾಡಿಕೊಳ್ಳುತ್ತಿದ್ದ. ಟಾರ್ಗೆಟ್ ಸಕ್ಸಸ್ ಆದರೆ ಯೆಸ್ ಎಂದು ಸಿಂಬಲ್ ಹಾಕ್ತಿದ್ದ, ಟಾರ್ಗೆಟ್ ಫೇಲ್ ಆದರೆ ಇಂಟು ಮಾರ್ಕ್ ಹಾಕುತ್ತಿದ್ದ. ಅಲ್ಲದೆ ಸಕ್ಸಸ್ ಆದರೆ ಜೋರಾಗಿ ನಗೋದು, ಫೇಲ್ ಆದರೆ ಕೋಪದಲ್ಲಿ ವಸ್ತುಗಳನ್ನು ಹೊಡೆಯೋದು ಮಾಡುತ್ತಿನಂತೆ. ಇದನ್ನೂ ಓದಿ: 10ನೇ ತರಗತಿಯಲ್ಲಿ ಶೇ.90 ಅಂಕ ಗಳಿಸಿದ ವಿದ್ಯಾರ್ಥಿ, ನಿವೃತ್ತ ಹವಾಲ್ದಾರ್ ಪುತ್ರ ಶೂಟ್ ಮಾಡಿಕೊಂಡು ಆತ್ಮಹತ್ಯೆ

    ರಾಹುಲ್ ವರ್ತನೆ ಕಂಡು ಪೋಷಕರು ಶಾಕ್ ಆಗಿದ್ದರು. ಇದನ್ನು ಕೇಳಿದ ಸ್ವತಃ ಪೊಲೀಸರು ಸಹ ಶಾಕ್ ಆಗಿದ್ದಾರೆ. ದಿನದ ಬಹುತೇಕ ಸಮಯವನ್ನು ವಿದ್ಯಾರ್ಥಿ ರೂಮಲ್ಲೇ ಕಳೆಯುತ್ತಿದ್ದ. ಆತ್ಮಹತ್ಯೆ ಮಾಡಿಕೊಳ್ಳುವ ದಿನ ಬೆಳಗಿನ ಜಾವ ಮೂರು ಗಂಟೆಗೆ ಎದ್ದು, ನನ್ನ ಪೋಟೋ ಕೊಡಿ ಎಂದು ಕೇಳಿದ್ದ. ಏನಾಗಿದೆ ನಿಂಗೆ ಹೋಗಿ ಮಲ್ಕೋ ಹೋಗು ಎಂದು ಪೋಷಕರು ಬೈದು ಕಳಿಸಿದ್ದರು. ಅದೇ ದಿನ ರಾಹುಲ್ ಪಿಸ್ತೂಲ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಇದನ್ನೂ ಓದಿ: ಅಯ್ಯೋ ಮಗನೇ, ಆ ದೇವರು ನಿನ್ನ ಬದಲು ನನ್ನನ್ನು ಕರೆದುಕೊಳ್ಳಬೇಕಿತ್ತು

    ವಿದ್ಯಾರ್ಥಿ ರಾಹುಲ್ ಸಾವಿಗೆ ನಿಖರ ಕಾರಣ ತಿಳಿಯಲು ಮನೆಯವರು, ಸ್ನೇಹಿತರು ಹಾಗೂ ವಿದ್ಯಾಭ್ಯಾಸ ಸಂಬಂಧ ವಿಚಾರಣೆ ನಡೆಸಲು ಪೊಲೀಸರ ತಯಾರಿ ನಡೆಸಿದ್ದಾರೆ. ಸದ್ಯ ರಾಹುಲ್ ಸಾವಿನ ಬಗ್ಗೆ ಸದಾಶಿವನಗರ ಪೊಲೀಸರು ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದಾರೆ. ಇದನ್ನೂ ಓದಿ: ರಾಹುಲ್‍ಗೆ ಪಿಸ್ತೂಲ್ ಬಳಸಲು ತರಬೇತಿಯನ್ನು ನೀಡಲಾಗಿತ್ತು: ಡಿಸಿಪಿ ಅನುಚೇತ್

  • ಮದುವೆ ಸಂಭ್ರಮ – ಡಿಕೆಶಿ ಪುತ್ರಿಯ ಅರಿಶಿನ ಶಾಸ್ತ್ರ

    ಮದುವೆ ಸಂಭ್ರಮ – ಡಿಕೆಶಿ ಪುತ್ರಿಯ ಅರಿಶಿನ ಶಾಸ್ತ್ರ

    ಬೆಂಗಳೂರು: ಮದುವೆಯ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಪುತ್ರಿ ಐಶ್ವರ್ಯ ಅರಿಶಿನ ಶಾಸ್ತ್ರ ನಡೆಯಿತು.

    ಸದಾಶಿವ ನಗರದಲ್ಲಿರುವ ನಿವಾಸದಲ್ಲಿ ಬುಧವಾರ ಅರಿಶಿನ ಶಾಸ್ತ್ರ ನಡೆದಿದ್ದು, ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು ಭಾಗಿಯಾಗಿದ್ದರು.

     

    ಫೆಬ್ರವರಿ 14 ಪ್ರೇಮಿಗಳ ದಿನಾಚರಣೆಯಂದು ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ಧಾರ್ಥ್‌ ಅವರ ಪುತ್ರ ಅಮರ್ಥ್ಯ ಸಿದ್ದಾರ್ಥ್ ಮತ್ತು ಐಶ್ವರ್ಯ ಅವರ ವಿವಾಹ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿದೆ.

    ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್, ರಣದೀಪ್ ಸುರ್ಜೇವಾಲಾ ಸೇರಿದಂತೆ ಹಲವು ಕೇಂದ್ರ ನಾಯಕರು ಆಗಮಿಸುವ ಸಾಧ್ಯತೆಯಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ವಿವಾಹ ಕಾರ್ಯಕ್ರಮ ನಡೆದರೆ, ಫೆಬ್ರವರಿ 17 ರಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

    ಅಮೆರಿಕದಲ್ಲಿ ಶಿಕ್ಷಣ ಪಡೆದಿರುವ 26 ವರ್ಷದ ಅಮರ್ಥ್ಯ ಅವರು, ತಾಯಿ ಮಾಳವಿಕಾ ಅವರೊಂದಿಗೆ ಕಾಫಿ ಡೇ ಕಂಪನಿಯ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. ಎಂಜಿನಿಯರಿಂಗ್‌ ಪದವೀಧರೆಯಾದ 22 ವರ್ಷದ ಐಶ್ವರ್ಯ ಅವರು ತಂದೆ ಡಿ.ಕೆ.ಶಿವಕುಮಾರ್‌ ಸ್ಥಾಪಿಸಿರುವ ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿ ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ಧಾರೆ.