Tag: ಸದಾಶಿವನಗರ

  • ಸಿಗರೇಟ್ ವಿಚಾರಕ್ಕೆ ಗಲಾಟೆ – ರಿಪೀಸ್‌ ಪಟ್ಟಿಯಿಂದ ಮಾರಣಾಂತಿಕ ಹಲ್ಲೆ, ಇಬ್ಬರು ಅರೆಸ್ಟ್

    ಸಿಗರೇಟ್ ವಿಚಾರಕ್ಕೆ ಗಲಾಟೆ – ರಿಪೀಸ್‌ ಪಟ್ಟಿಯಿಂದ ಮಾರಣಾಂತಿಕ ಹಲ್ಲೆ, ಇಬ್ಬರು ಅರೆಸ್ಟ್

    ಬೆಂಗಳೂರು: ಸಿಗರೇಟ್ ವಿಚಾರಕ್ಕೆ ಗಲಾಟೆಯಾಗಿ ರಿಪೀಸ್‌ ಪಟ್ಟಿಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸದಾಶಿವನಗರದಲ್ಲಿ (Sadashiva Nagar) ನಡೆದಿದೆ. ಸದ್ಯ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಶಂಕರ್ ಮತ್ತು ಅರವಿಂದ್ ಎಂದು ಗುರುತಿಸಲಾಗಿದ್ದು, ಸಿಗರೇಟ್ ಖರೀದಿಸುವ ವಿಚಾರಕ್ಕಾಗಿ ಗಲಾಟೆ ಮಾಡಿಕೊಂಡು ಬಳಿಕ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ: ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಸರ ಎಗರಿಸುತ್ತಿದ್ದ ಖತರ್ನಾಕ್ ಕಳ್ಳಿ ಅಂದರ್

    ಆರ್‌ಟಿ ನಗರದ (RT Nagar) ಬಾರ್ ಬಳಿಯಿರುವ ಪಾನ್‌ಶಾಪ್‌ವೊಂದಕ್ಕೆ ಇಬ್ಬರು ತೆರಳಿದ್ದರು. ಈ ವೇಳೆ ಅಂಗಡಿಯವನಿಗೆ ಇಬ್ಬರು ಒಟ್ಟಿಗೆ ಸಿಗರೇಟ್ ಕೊಡುವಂತೆ ಕೇಳಿದ್ದರು. ಅಂಗಡಿಯವ ಇಬ್ಬರ ಪೈಕಿ ಒಬ್ಬನಿಗೆ ಸಿಗರೇಟ್ ನೀಡಿದ್ದ. ಆಗ ಇನ್ನೋರ್ವ ನಾನು ಮೊದಲು ಸಿಗರೇಟ್ ಕೇಳಿದ್ದು, ಹೀಗಾಗಿ ನಾನೇ ಮೊದಲು ಸಿಗರೇಟ್ ತೆಗೆದುಕೊಳ್ಳಬೇಕು ಎಂದು ಕಿರಿಕ್ ಮಾಡಿದ. ಅಲ್ಲಿಂದ ಇಬ್ಬರ ನಡುವೆ ಜಗಳ ಶುರುವಾಯಿತು.

    ಆರ್‌ಟಿ ನಗರದಿಂದ ಇಬ್ಬರು ಆರೋಪಿಗಳು ಸದಾಶಿವ ನಗರದ (Sadashiva Nagar) ಕಡೆಗೆ ಬಂದಿದ್ದಾರೆ. ಈ ವೇಳೆ ಓರ್ವ ರಿಪೀಸ್‌ ಪಟ್ಟಿಯಿಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದಾನೆ.

    ಘಟನೆ ಬಳಿಕ ಸದಾಶಿವ ನಗರ ಪೊಲೀಸರು (Sadashiva Nagar Police) ಕೊಲೆಯತ್ನ ಕೇಸ್ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ನೇಪಾಳದಲ್ಲಿ ಫೇಸ್ಬುಕ್, ಎಕ್ಸ್, ಯೂಟ್ಯೂಬ್ ಸೇರಿ 26 ಸೋಷಿಯಲ್ ಮೀಡಿಯಾಗಳಿಗೆ ನಿಷೇಧ

  • “ಕಷ್ಟದಲ್ಲಿದ್ರೂ ತಂದೆ, ತಾಯಿ ಮಾತನಾಡ್ತಿಲ್ಲ, ಕಾಲ್‌ ಮಾಡಿದ್ರೂ ಕಟ್‌ ಮಾಡ್ತಿದ್ರು” – ಟೆಕ್ಕಿ ಅನೂಪ್‌ ಡೆತ್‌ನೋಟ್‌ನಲ್ಲಿ ಏನಿದೆ?

    “ಕಷ್ಟದಲ್ಲಿದ್ರೂ ತಂದೆ, ತಾಯಿ ಮಾತನಾಡ್ತಿಲ್ಲ, ಕಾಲ್‌ ಮಾಡಿದ್ರೂ ಕಟ್‌ ಮಾಡ್ತಿದ್ರು” – ಟೆಕ್ಕಿ ಅನೂಪ್‌ ಡೆತ್‌ನೋಟ್‌ನಲ್ಲಿ ಏನಿದೆ?

    – ಇನ್ನೂ ಬಾರದ ಕುಟುಂಬ ಸದಸ್ಯರು
    – ಶವಾಗಾರದಲ್ಲೇ ಇದೆ ಮೃತದೇಹಗಳು

    ಬೆಂಗಳೂರು: “ಅಪ್ಪ – ಅಮ್ಮ ಮಾತನಾಡುತ್ತಿಲ್ಲ. ನನ್ನ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಈ ಕಾರಣಕ್ಕೆ ನಾವು ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ” – ಇದು ಇಬ್ಬರು ಮಕ್ಕಳಿಗೆ ವಿಷ ಹಾಕಿ ನೇಣಿಗೆ ಶರಣಾದ ಅನೂಪ್‌ ಮರಣಪತ್ರದಲ್ಲಿರುವ (Death Note) ಅಂಶಗಳು.

    ಮಕ್ಕಳಾದ ಅನುಪ್ರಿಯಾ (5) ಮತ್ತು ಪ್ರಿಯಾಂಶ್ (2) ವಿಷ ಹಾಕಿದ ಬಳಿಕ ಪತಿ ಅನೂಪ್‌ (38), ರಾಖಿ(35) ನೇಣಿಗೆ ಶರಣಾಗಿದ್ದರು. ಆತ್ಮಹತ್ಯೆ (Suicide) ಮುನ್ನ ಅನೂಪ್‌ ಒಂದು ಪುಟದ ಡೆತ್‌ನೋಟ್‌ ಬರೆದು ಸಹೋದರನಿಗೆ ಇಮೇಲ್‌ ಮಾಡಿದ್ದರು.

    ಡೆತ್‌ನೋಟ್‌ನಲ್ಲಿ ಏನಿದೆ?
    ನಮ್ಮ ಜೊತೆ ಕುಟುಂಬ (Family) ಇರಲಿಲ್ಲ. ನಾನು ಅಪ್ಪನಿಗೆ ಹಲವು ಬಾರಿ ಫೋನ್‌ ಮಾಡಿದರೂ ಅವರು ಕರೆಯನ್ನೇ ಸ್ವೀಕರಿಸುತ್ತಿರಲಿಲ್ಲ. ಕರೆ ಸ್ವೀಕರಿಸಿದರೂ ನಾನು ಆಸ್ತಿ ಕೇಳುತ್ತೇನೆ ಎಂದು ನನ್ನ ಜೊತೆ ಜಗಳ ಮಾಡುತ್ತಿದ್ದರು.

    ನನಗೆ ಎರಡನೇ ಮಗು ಹುಟ್ಟಿದಾಗಲೂ ಯಾರೂ ವಿಚಾರಿಸಲಿಲ್ಲ. ಕನಿಷ್ಟ ಒಂದು ವಿಡಿಯೋ ಕಾಲ್ ಮಾಡಿ ಮಾತನಾಡಿಸಲಿಲ್ಲ.ಇದರಿಂದ ನಾನು ನನ್ನ ಹೆಂಡತಿ ಮಾನಸಿಕವಾಗಿ ನೊಂದು ಹೋಗಿದ್ದೇವೆ. ಇದನ್ನೂ ಓದಿ: ಇಬ್ಬರು ಮಕ್ಕಳನ್ನು ಹತ್ಯೆಗೈದು ಬೆಂಗಳೂರಿನ ಟೆಕ್ಕಿ, ಪತ್ನಿ ಆತ್ಮಹತ್ಯೆ

    ಮೊದಲ ಮಗು ಅನುಪ್ರಿಯಾಗೆ ಬುದ್ಧಿಮಾಂದ್ಯತೆ ಇತ್ತು. ಈಕೆಯ ವಿಚಾರದಲ್ಲಿ ನಾವಿಬ್ಬರೂ ಬಹಳ ನೊಂದಿದ್ದೆವು. ಆಗಲೂ ಯಾರೊಬ್ಬರೂ ನನಗೆ ಸಹಾಯ ಮಾಡಲಿಲ್ಲ ಧೈರ್ಯ ತುಂಬಲಿಲ್ಲ. ಕುಟುಂಬದವರು ನಮ್ಮಿಂದ ದೂರವಾಗಿದ್ದರು ಎಂದು ನೋವಿನ ಮಾತುಗಳನ್ನು ಇಮೇಲ್‌ನಲ್ಲಿ ಬರೆದಿದ್ದಾರೆ.

     

    ಉತ್ತರ ಪ್ರದೇಶ (Uttar Pradesh) ಮೂಲದ ದಂಪತಿ ಪ್ರೀತಿಸಿ ಮದುವೆಯಾಗಿದ್ದರು. ಅನೂಪ್‌ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕನ್ಸಲ್ಟೆಂಟ್‌ ಆಗಿ ಕೆಲಸ ಮಾಡುತ್ತಿದ್ದರೆ ರಾಖಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಇಬ್ಬರು ವರ್ಕ್‌ಫ್ರಂ ಹೋಮ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈಗಾಗಲೇ ಕುಟುಂಬದ ಸದಸ್ಯರಿಗೆ ಮೃತಪಟ್ಟ ವಿಚಾರವನ್ನು ತಿಳಿಸಲಾಗಿದೆ. ಆದರೆ ಉತ್ತರ ಪ್ರದೇಶದಿಂದ ಕುಟುಂಬ ಬಂದಿಲ್ಲ. ಮೃತದೇಹಗಳು ಇನ್ನೂ ಶವಾಗಾರದಲ್ಲೇ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

    ಬೆಂಗಳೂರಿನ (Bengaluru) ಸದಾಶಿವ ನಗರದ ಆರ್.ಎಂ.ವಿ ಎರಡನೇ ಹಂತದ ಟೆಂಪಲ್ ರಸ್ತೆಯಲ್ಲಿ ಕುಟುಂಬ ನೆಲೆಸಿತ್ತು. ಭಾನುವಾರ ರಾತ್ರಿ 10 ಗಂಟೆಯವರೆಗೆ ಕುಟುಂಬ ಚೆನ್ನಾಗಿತ್ತು. ಸೋಮವಾರ ಬೆಳಗ್ಗೆ ಮನೆಗೆ ಕೆಲಸದವರು ಬಂದಾಗ ಆತ್ಮಹತ್ಯೆ ಮಾಡಿಕೊಂಡ ವಿಚಾರ ಬೆಳಕಿಗೆ ಬಂದಿತ್ತು.

    ಅನೂಪ್ ಮನೆಯಲ್ಲಿ ಮೂರು ಜನ ಕೆಲಸ ಮಾಡುತ್ತಿದ್ದರು. ಅನುಪ್ರಿಯಾಗೆ ಆರೋಗ್ಯ ಸಮಸ್ಯೆ ಇತ್ತು. ಈ ವಿಚಾರಕ್ಕೆ ದಂಪತಿ ಬಹಳ ಬೇಸರದಲ್ಲಿದ್ದರು. ಘಟನೆ ಸಂಬಂಧ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು – ಖತರ್ನಾಕ್ ರಾಬರ್ ಕಾಲಿಗೆ ಪೊಲೀಸರ ಗುಂಡೇಟು

    ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು – ಖತರ್ನಾಕ್ ರಾಬರ್ ಕಾಲಿಗೆ ಪೊಲೀಸರ ಗುಂಡೇಟು

    ಬೆಂಗಳೂರು: ನಗರದ ಸದಾಶಿವನಗರ (Sadashivanagar) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿದ್ದು, ಸುಲಿಗೆ ಮತ್ತು ರಾಬರಿಯಲ್ಲಿ (Robbery) ನಿಪುಣನಾಗಿದ್ದ ಖತರ್ನಾಕ್ ಆಸಾಮಿಯೊಬ್ಬನ ಕಾಲಿಗೆ ಪೊಲೀಸರು ಗುಂಡೇಟು ಹೊಡೆದಿದ್ದಾರೆ.

    ಖತರ್ನಾಕ್ ರಾಬರ್ ಯಾಸರ್ (26) ಎಂಬಾತನ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದು, ಈತ ಏಳಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಆರೋಪಿಯಾಗಿದ್ದ. ಯಾಸರ್ ಸುಲ್ತಾನ್ ಪಾಳ್ಯದ ಭುವನೇಶ್ವರ್ ನಗರದ ನಿವಾಸಿಯಾಗಿದ್ದು, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಸುಲಿಗೆ ಮಾಡುತ್ತಿದ್ದ. ಈತ ಅಪ್ರಾಪ್ತನಾಗಿದ್ದಾಗಿನಿಂದಲೇ ಸುಲಿಗೆ ರಾಬರಿಯಲ್ಲಿ ನಿಪುಣನಾಗಿದ್ದು, ಶೇಷಾದ್ರಿಪುರಂ (Sheshadripuram) ಪೋಲೀಸರು ಈತನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಇದನ್ನೂ ಓದಿ: ಕಳಪೆ ರಸ್ತೆ ಕಾಮಗಾರಿ ಆರೋಪ – ಎಂಜಿನಿಯರ್‌ಗೆ ಕಲ್ಲೇಟು

    ಇಂದು (ಮಂಗಳವಾರ) ಬೆಳಗ್ಗೆ ಆರೋಪಿ ಯಾಸರ್‌ನನ್ನು ಹಿಡಿಯಲು ಹೋದ ಪೊಲೀಸರಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಪ್ಯಾಲೆಸ್ ರೋಡ್ (Palace Road) ಬಳಿ ಪರಾರಿಗೆ ಯತ್ನಿಸಿದ್ದು, ಹಿಡಿಯಲು ಹೋದ ಪೊಲೀಸರ ಮೇಲೆ ಮಾರಕಾಸ್ತ್ರ ಹಿಡಿದು ಅಟ್ಯಾಕ್ ಮಾಡಲು ಮುಂದಾಗಿದ್ದಾನೆ. ಈ ಸಂದರ್ಭ ತಮ್ಮ ಆತ್ಮರಕ್ಷಣೆಗಾಗಿ ಶೇಷಾದ್ರಿಪುರಂ ಇನ್ಸ್ಪೆಕ್ಟರ್‌ ಆರೋಪಿಯ ಬಲಗಾಲಿಗೆ ಗುಂಡು ಹೊಡೆದು ಆತನನ್ನು ಬಂಧಿಸಿದ್ದಾರೆ. ಈ ಕುರಿತು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮನಾಲಿ ಪ್ರವಾಸಕ್ಕೆಂದು ತೆರಳಿದ್ದ ಮೈಸೂರಿನ ಪ್ರವಾಸಿಗರು ನಾಪತ್ತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಪ್ಪು ಸುಂದರಿಯ ಮೇಲೆ ಮುತ್ತಪ್ಪ ರೈ ಪುತ್ರನ ಕಣ್ಣು – ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ

    ಕಪ್ಪು ಸುಂದರಿಯ ಮೇಲೆ ಮುತ್ತಪ್ಪ ರೈ ಪುತ್ರನ ಕಣ್ಣು – ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ

    ಬೆಂಗಳೂರು: ಉದ್ಯಮಿ ಶ್ರೀನಿವಾಸ್ ನಾಯ್ಡು ಅವರ ಕೋಟಿ ರೂ. ಬೆಳೆಬಾಳುವ ರೇಂಜ್ ರೋವರ್ (Range Rover) ಕಾರಿಗೆ ಬೆಂಕಿ ಹಚ್ಚಿ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಡಾನ್ ದಿ.ಮುತ್ತಪ್ಪ ರೈ (Muthappa Rai) ಪುತ್ರ ಸೇರಿದಂತೆ 9 ಜನರ ವಿರುದ್ಧ ಸದಾಶಿವನಗರ ಪೊಲೀಸರು 188 ಪುಟಗಳ ಚಾರ್ಜ್‌ಶೀಟ್ (Chargesheet) ಸಲ್ಲಿಸಿದ್ದಾರೆ.

    2021ರ ಅಕ್ಟೋಬರ್‌ನಲ್ಲಿ ಸದಾಶಿವನಗರದ (Sadashiva Nagara) ಸಪ್ತಗಿರಿ ಅಪಾರ್ಟ್ಮೆಂಟ್‌ನಲ್ಲಿ ಉದ್ಯಮಿ ಶ್ರೀನಿವಾಸ್ ನಾಯ್ಡು ಅವರ ರೇಂಜ್ ರೋವರ್ ಕಾರನ್ನು ಆರೋಪಿಗಳು ಸುಟ್ಟುಹಾಕಿದ್ದರು. ಈ ಕುರಿತು ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಟ್ಟು 10 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ರಿಕ್ಕಿ ರೈ (Rikki Rai) ಸೂಚನೆಯಂತೆ ಕಾರು ಸುಟ್ಟಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಘಟನೆ ಕುರಿತು ತನಿಖೆ ನಡೆಸಿದ ಸದಾಶಿವನಗರ ಪೊಲೀಸರು 33ನೇ ಎಸಿಎಂಎಂ ಕೋರ್ಟ್‌ಗೆ 188 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದನ್ನೂ ಓದಿ: ಟ್ರಕ್‍ಗೆ ಬಸ್ ಡಿಕ್ಕಿ – ಏಳು ಸಾವು, 13 ಮಂದಿಗೆ ಗಾಯ

    ದಿವಗಂತ ಮಾಜಿ ಡಾನ್ ಮುತ್ತಪ್ಪ ರೈ ಅವರ ಮಗ ರಿಕ್ಕಿ ರೈ ಮತ್ತು ಉದ್ಯಮಿ ಶ್ರೀನಿವಾಸ್ ನಾಯ್ಡು ಒಂದು ಕಾಲದಲ್ಲಿ ಆತ್ಮೀಯ ಗೆಳೆಯರಾಗಿದ್ದರು. ಮುತ್ತಪ್ಪ ರೈ ಅವರ ನಿಧನದ ಬಳಿಕ ಶ್ರೀನಿವಾಸ್ ನಾಯ್ಡು ರೈ ಗ್ರೂಪಿನಿಂದ ಹೊರಬಂದಿದ್ದರು. ನಾಯ್ಡು ಹೊರ ಬಂದಿದಕ್ಕೆ ರಿಕ್ಕಿ ರೈ ದ್ವೇಷ ಸಾಧಿಸಿ ಈ ಕೃತ್ಯ ಎಸಗಿದ್ದಾರಾ ಎಂಬ ಶಂಕೆ ಈಗ ವ್ಯಕ್ತವಾಗಿದೆ. ಇದನ್ನೂ ಓದಿ: ಇಂದಿನಿಂದ 2,000 ಮುಖಬೆಲೆ ನೋಟು ವಿನಿಮಯ ಪ್ರಕ್ರಿಯೆ ಆರಂಭ

    ಚಾರ್ಜ್‌ಶೀಟ್‌ನಲ್ಲಿ ಏನಿದೆ?
    ಈ ಘಟನೆ ನಡೆಯುವ 3 ತಿಂಗಳಿಗೂ ಮೊದಲು ರಿಕ್ಕಿ ರೈ ಶ್ರೀನಿವಾಸ್ ನಾಯ್ಡು ಅವರ ಕಾರನ್ನು ನೋಡಿ ನೈಸ್ ಕಾರ್ ಡ್ಯೂಡ್ ಎಂದು ಅದನ್ನು ಬೂದಿ ಮಾಡುವ ಸವಾಲು ಹಾಕಿದ್ದಾರೆ. ಈ ಕಾರಲ್ಲಿ ಓಡಾಡಿಕೊಂಡು ನನ್ನ ಮುಂದೆ ಎಷ್ಟು ದಿನ ಮೆರೆಯುತ್ತೀಯಾ ಮೆರಿ. ಎಷ್ಟು ದಿನ ಈ ಕಾರಲ್ಲಿ ಓಡಾಡುತ್ತೀಯಾ ನೋಡುತ್ತೇನೆ. ಈ ಕಾರನ್ನು ಬೂದಿ ಮಾಡುತ್ತೇನೆ ಎಂದು ರಿಕ್ಕಿ ರೈ ನಾಯ್ಡು ಅವರಿಗೆ ವಾರ್ನಿಂಗ್ ಕೊಟ್ಟಿದ್ದ ಅಂಶಗಳಿವೆ. ಇದನ್ನೂ ಓದಿ: ಮುಖ್ಯಮಂತ್ರಿ ಆಯ್ಕೆಗಿಂತಲೂ ಕಗ್ಗಂಟಾದ ವಿಪಕ್ಷ ನಾಯಕನ ಆಯ್ಕೆ

    ರಿಕ್ಕಿ ವಾರ್ನಿಂಗ್‌ಗೆ ಶ್ರೀನಿವಾಸ್ ನಾಯ್ಡು ತಲೆಕೆಡಿಸಿಕೊಳ್ಳದೇ ಸುಮ್ಮನಾಗಿದ್ದರು. ಇದಾದ ನಂತರ ನಾರಾಯಣಸ್ವಾಮಿ ಎಂಬವರಿಂದ ಕಾರಿಗೆ ಬೆಂಕಿ ಹಚ್ಚುವ ಪ್ಲಾನ್ ನಡೆದಿತ್ತು. ಆರೋಪಿಗಳ ಹೇಳಿಕೆ ಪ್ರಕಾರ ಆರೋಪಿ ನಾರಾಯಣ ಸ್ವಾಮಿ ಬೆಂಕಿ ಹಚ್ಚುವ ಪ್ಲಾನ್ ಮಾಡಿದ್ದು, ಮೊದಲಿಗೆ ಶ್ರೀನಿವಾಸ್ ನಾಯ್ಡು ಅವರ ಸ್ನೇಹಿತ ಸುಪ್ರೀತ್‌ಗೂ ಹಲ್ಲೆ ನಡೆಸಿದ್ದಾರೆ. ಬಳಿಕ ಶ್ರೀನಿವಾಸ್ ನಾಯ್ಡು ಅವರ ಫ್ಲ್ಯಾಟ್‌ಗೂ ನುಗ್ಗಿ ಹಲ್ಲೆ ನಡೆಸುವ ಯತ್ನ ವಿಫಲವಾದ್ದರಿಂದ ಕಾರಿಗೆ ಬೆಂಕಿ ಹಚ್ಚುವ ಪ್ಲಾನ್ ಮಾಡಿದ್ದಾರೆ. ಇದನ್ನೂ ಓದಿ: ಜನನ, ಮರಣ ಮಾಹಿತಿ ಮತದಾರರ ಪಟ್ಟಿಗೆ ಜೋಡಣೆ – ಶೀಘ್ರವೇ ಮಸೂದೆ ಮಂಡನೆ

    ಮಧ್ಯರಾತ್ರಿ ಬುಲೆಟ್ ಮತ್ತು ಕಾರಿನಿಂದ ಎರಡು ಲೀಟರ್‌ನ ಎರಡು ಬಾಟಲ್‌ನಲ್ಲಿ ಪೆಟ್ರೋಲ್ ಎಳೆದು ಕಾರಿಗೆ ಸುರಿದಿದ್ದಾರೆ. ಬಳಿಕ ಲೈಟರ್‌ನಿಂದ ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದಾರೆ. ಸದ್ಯ ಘಟನೆ ಸಂಬಂಧ ನಾರಾಯಣಸ್ವಾಮಿ, ಅಭಿನಂದನ್, ಮುನಿಯಪ್ಪ, ಗಣೇಶ್, ಶಶಾಂಕ್, ನಿರ್ಮಲ್, ರೋಹಿತ್, ರಾಕೇಶ್ ಹಾಗೂ ರಿಕ್ಕಿ ರೈ ಮೇಲೆ ಸದಾಶಿವ ನಗರ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಎ1 ಆರೋಪಿ ನಾರಾಯಣಸ್ವಾಮಿ ಹಾಗೂ ಎ8 ಆರೋಪಿ ರಿಕ್ಕಿ ರೈ ಹೇಳಿಕೆ ಇನ್ನೂ ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರದ ಬಳಿ ಅಂಕಿ ಅಂಶಗಳೇ ಇಲ್ಲ – ಶೀಘ್ರವೇ ಗ್ಯಾರಂಟಿ ಯೋಜನೆ ಜಾರಿ ಅನುಮಾನ

  • ಉಪ್ಪಿ ಹೊಸ ಮನೆ ಹೇಗಿದೆ? : ಫೋಟೋ ಆಲ್ಬಂ

    ಉಪ್ಪಿ ಹೊಸ ಮನೆ ಹೇಗಿದೆ? : ಫೋಟೋ ಆಲ್ಬಂ

    ರಿಯಲ್ ಸ್ಟಾರ್ ಉಪೇಂದ್ರ (Upendra), ಇದೀಗ ಮತ್ತೊಂದು ಪ್ರತಿಷ್ಠಿತ ಹಾಗೂ ದುಬಾರಿ ಏರಿಯಾದಲ್ಲಿ ಹೊಸ ಮನೆಯೊಂದನ್ನು (New House) ಖರೀದಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಸದಾಶಿವನಗರದಲ್ಲಿ(Sadashivnagar) ಅವರು ಹೊಸ ಮನೆ ಖರೀದಿಸಿದ್ದಾರೆ.

    ಸದಾಶಿವನಗರದಲ್ಲಿ ಡಾ.ರಾಜ್ ಕುಮಾರ್ ಸೇರಿದಂತೆ ಅನೇಕ ಗಣ್ಯರ ಮನೆಗಳಿವೆ. ಹಾಗೂ ಅನೇಕ ರಾಜಕಾರಣಿಗಳ ನಿವಾಸಗಳು ಇದೇ ಏರಿಯಾದಲ್ಲಿವೆ. ಮುಖ್ಯಮಂತ್ರಿ, ಮಾಜಿಮುಖ್ಯಮಂತ್ರಿ, ಸಚಿವರು, ಪ್ರಭಾವಿ ನಾಯಕರ ಮನೆಗಳೆಲ್ಲ ಇದೇ ಬಡಾವಣೆಯಲ್ಲೇ ಇವೆ.

    ಹಲವು ವರ್ಷಗಳಿಂದ ಕತ್ರಿಗುಪ್ಪೆಯಲ್ಲೇ ವಾಸವಿದ್ದ ಉಪೇಂದ್ರ, ಸಡನ್ನಾಗಿ ಸದಾಶಿವ ನಗರದಲ್ಲೇ ಮನೆ ಖರೀದಿಸಲು ಕಾರಣವೇನು ಎನ್ನುವ ಚರ್ಚೆ ಕೂಡ ಶುರುವಾಗಿದೆ. ರಾಜಕಾರಣಿಯಾಗಿ ಬೆಳೆಯುತ್ತಿರುವ ಉಪ್ಪಿ, ಈ ಕಾರಣದಿಂದಾಗಿಯೇ ರಾಜಕಾರಣಿಗಳೇ ಹೆಚ್ಚಿರುವ ಏರಿಯಾದಲ್ಲಿ ಮನೆ ಖರೀದಿಸಿದ್ರಾ ಎನ್ನುವ ಮಾತು ಹರಿದಾಡುತ್ತಿದೆ.

    ಈಗಾಗಲೇ ಹೊಸ ಮನೆಯ ಗೃಹಪ್ರವೇಶ ಕೂಡ ಆಗಿದ್ದು, ಚಿತ್ರರಂಗದ ಅನೇಕ ಕಲಾವಿದರು, ತಂತ್ರಜ್ಞರು ಹಾಗೂ ಗಣ್ಯರು ಭಾಗಿಯಾಗಿದ್ದಾರೆ. ಸ್ಯಾಂಕಿ ಟ್ಯಾಂಕ್ ಹತ್ತಿರದಲ್ಲೇ ಈ ನಿವಾಸವಿದ್ದು, ಶನಿವಾರ ಅಧಿಕೃತವಾಗಿ ಗೃಹಪ್ರವೇಶ ಮಾಡಿದ್ದಾರಂತೆ ಉಪ್ಪಿ ಮತ್ತು ಪ್ರಿಯಾಂಕಾ (Priyanka Upendra). ಮುಂದಿನ ದಿನಗಳಲ್ಲಿ ಕತ್ರಿಗುಪ್ಪೆ ನಿವಾಸದಿಂದ ಈ ಮನೆಗೆ ಶಿಫ್ಟ್ ಆಗಲಿದ್ದಾರೆ ರಿಯಲ್ ಸ್ಟಾರ್.

    ಸಂಗೀತ ನಿರ್ದೇಶಕ ಗುರುಕಿರಣ್, ಹಿರಿಯ ನಟಿ ಸರೋಜಾ ದೇವಿ ಸೇರಿದಂತೆ ಹಲವಾರು ನಟಿಯರು ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಆ ಫೋಟೋಗಳನ್ನು ಉಪ್ಪಿ ದಂಪತಿ ಹಂಚಿಕೊಂಡಿದ್ದಾರೆ. ಇದೊಂದು ಕುಟುಂಬದ ಕಾರ್ಯಕ್ರಮವಾಗಿದ್ದರಿಂದ ಆಪ್ತರಿಗಷ್ಟೇ ಆಹ್ವಾನ ನೀಡಿದ್ದರಂತೆ ಉಪ್ಪಿ ದಂಪತಿ.

    2003ರಲ್ಲಿ ಕತ್ರಿಗುಪ್ಪೆ ಮನೆಯನ್ನು ಕಟ್ಟಿಸಿದ್ದ ಉಪೇಂದ್ರ, ಆ ಮನೆಯಲ್ಲೇ ಆಫೀಸು, ಜಿಮ್ ಹೊಂದಿದ್ದರು. ತಂದೆ ತಾಯಿ ಜೊತೆ ಅದೇ ಮನೆಯಲ್ಲೇ ವಾಸವಾಗಿದ್ದರು. ಹಲವು ವರ್ಷಗಳಿಂದ ಈ ಮನೆ ತೊರೆದು ರುಪ್ಪಿ ರೇಸಾರ್ಟ್ ಗೆ ಸ್ಥಳಾಂತರಗೊಳ್ಳಬೇಕು ಎಂಬ ಆಲೋಚನೆ ಮಾಡಿದ್ದರು. ಆದರೆ, ಆ ಯೋಚನೆ ಬಿಟ್ಟು ಸದಾಶಿವ ನಗರಕ್ಕೆ ಶಿಫ್ಟ್ ಆಗುತ್ತಿದ್ದಾರೆ.

  • ಪ್ರತಿಷ್ಠಿತ ಬಡಾವಣೆಯಲ್ಲಿ ಐಷಾರಾಮಿ ಮನೆ ಖರೀದಿಸಿದ ನಟ ಉಪೇಂದ್ರ

    ಪ್ರತಿಷ್ಠಿತ ಬಡಾವಣೆಯಲ್ಲಿ ಐಷಾರಾಮಿ ಮನೆ ಖರೀದಿಸಿದ ನಟ ಉಪೇಂದ್ರ

    ಗಾಗಲೇ ಬೆಂಗಳೂರಿನ ಕತ್ರಿಗುಪ್ಪೆ (Katriguppe) ಏರಿಯಾದಲ್ಲಿ ಭವ್ಯವಾದ ಬಂಗಲೆ ಹೊಂದಿರುವ ರಿಯಲ್ ಸ್ಟಾರ್ ಉಪೇಂದ್ರ (Upendra), ಇದೀಗ ಮತ್ತೊಂದು ಪ್ರತಿಷ್ಠಿತ ಹಾಗೂ ದುಬಾರಿ ಏರಿಯಾದಲ್ಲಿ ಹೊಸ ಮನೆಯೊಂದನ್ನು (New House) ಖರೀದಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಸದಾಶಿವನಗರದಲ್ಲಿ(Sadashivnagar) ಅವರು ಹೊಸ ಮನೆ ಖರೀದಿಸಿದ್ದಾರೆ. ಈ ಏರಿಯಾದಲ್ಲಿ ಡಾ.ರಾಜ್ ಕುಮಾರ್ ಸೇರಿದಂತೆ ಅನೇಕ ಗಣ್ಯರ ಮನೆಗಳಿವೆ. ಹಾಗೂ ಅನೇಕ ರಾಜಕಾರಣಿಗಳ ನಿವಾಸಗಳು ಇದೇ ಏರಿಯಾದಲ್ಲಿವೆ.

    ಈಗಾಗಲೇ ಹೊಸ ಮನೆಯ ಗೃಹಪ್ರವೇಶ ಕೂಡ ಆಗಿದ್ದು, ಚಿತ್ರರಂಗದ ಅನೇಕ ಕಲಾವಿದರು, ತಂತ್ರಜ್ಞರು ಹಾಗೂ ಗಣ್ಯರು ಭಾಗಿಯಾಗಿದ್ದಾರೆ. ಸ್ಯಾಂಕಿ ಟ್ಯಾಂಕ್ ಹತ್ತಿರದಲ್ಲೇ ಈ ನಿವಾಸವಿದ್ದು, ಶನಿವಾರ ಅಧಿಕೃತವಾಗಿ ಗೃಹಪ್ರವೇಶ ಮಾಡಿದ್ದಾರಂತೆ ಉಪ್ಪಿ ಮತ್ತು ಪ್ರಿಯಾಂಕಾ (Priyanka Upendra). ಮುಂದಿನ ದಿನಗಳಲ್ಲಿ ಕತ್ರಿಗುಪ್ಪೆ ನಿವಾಸದಿಂದ ಈ ಮನೆಗೆ ಶಿಫ್ಟ್ ಆಗಲಿದ್ದಾರೆ ರಿಯಲ್ ಸ್ಟಾರ್.

    ಸಂಗೀತ ನಿರ್ದೇಶಕ ಗುರುಕಿರಣ್, ಹಿರಿಯ ನಟಿ ಸರೋಜಾ ದೇವಿ ಸೇರಿದಂತೆ ಹಲವಾರು ನಟಿಯರು ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಆ ಫೋಟೋಗಳನ್ನು ಉಪ್ಪಿ ದಂಪತಿ ಹಂಚಿಕೊಂಡಿದ್ದಾರೆ. ಇದೊಂದು ಕುಟುಂಬದ ಕಾರ್ಯಕ್ರಮವಾಗಿದ್ದರಿಂದ ಆಪ್ತರಿಗಷ್ಟೇ ಆಹ್ವಾನ ನೀಡಿದ್ದರಂತೆ ಉಪ್ಪಿ ದಂಪತಿ. ಇದನ್ನೂ ಓದಿ:ಒಂದು ಇಡ್ಲಿ, ಒಂದು ವಡೆ ತಗೊಂಡು ಗಲಾಟೆ ಮಾಡಿದ ರಾಖಿ ಸಾವಂತ್

    2003ರಲ್ಲಿ ಕತ್ರಿಗುಪ್ಪೆ ಮನೆಯನ್ನು ಕಟ್ಟಿಸಿದ್ದ ಉಪೇಂದ್ರ, ಆ ಮನೆಯಲ್ಲೇ ಆಫೀಸು, ಜಿಮ್ ಹೊಂದಿದ್ದರು. ತಂದೆ ತಾಯಿ ಜೊತೆ ಅದೇ ಮನೆಯಲ್ಲೇ ವಾಸವಾಗಿದ್ದರು. ಹಲವು ವರ್ಷಗಳಿಂದ ಈ ಮನೆ ತೊರೆದು ರುಪ್ಪಿ ರೇಸಾರ್ಟ್ ಗೆ ಸ್ಥಳಾಂತರಗೊಳ್ಳಬೇಕು ಎಂಬ ಆಲೋಚನೆ ಮಾಡಿದ್ದರು. ಆದರೆ, ಆ ಯೋಚನೆ ಬಿಟ್ಟು ಸದಾಶಿವ ನಗರಕ್ಕೆ ಶಿಫ್ಟ್ ಆಗುತ್ತಿದ್ದಾರೆ.

  • ರಾಹುಲ್‍ಗೆ ಪಿಸ್ತೂಲ್ ಬಳಸಲು ತರಬೇತಿಯನ್ನು ನೀಡಲಾಗಿತ್ತು: ಡಿಸಿಪಿ ಅನುಚೇತ್

    ರಾಹುಲ್‍ಗೆ ಪಿಸ್ತೂಲ್ ಬಳಸಲು ತರಬೇತಿಯನ್ನು ನೀಡಲಾಗಿತ್ತು: ಡಿಸಿಪಿ ಅನುಚೇತ್

    ಬೆಂಗಳೂರು: ರಾಹುಲ್‍ಗೆ ಪಿಸ್ತೂಲ್ ಬಳಸಲು ತರಬೇತಿಯನ್ನು ನೀಡಲಾಗಿತ್ತು ಎಂದು ಸದಾಶಿವನಗರ ಡಿಸಿಪಿ ಅನುಚೇತ್ ಹೇಳಿದ್ದಾರೆ.

    ಆರ್ಮಿ ಸ್ಕೂಲ್ ವಿದ್ಯಾರ್ಥಿ 17 ವರ್ಷದ ರಾಹುಲ್ ಭಂಡಾರಿ ಆತ್ಮಹತ್ಯೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಪಿ ಅನುಚೇತ್, ಬೆಳಗ್ಗೆ ಸದಾಶಿವನಗರ ವ್ಯಾಪ್ತಿಯಲ್ಲಿ 17 ವರ್ಷದ ಯುವಕ ತಲೆಗೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ. ಇಂಡಿಯನ್ ಏರ್ ಫೋರ್ಸ್ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಆದರೆ ನಾವು ಈ ಕುರಿತು ಪ್ರಾಥಮಿಕ ತನಿಖೆ ನಂತರವೇ ಮಾಡದೇ ಏನನ್ನು ಹೇಳಲಾಗುತ್ತಿಲ್ಲ. ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿದಾಗ ಒಂದು ಸಿಂಗಲ್ ಬುಲೆಟ್ ತಲೆಯ ಬಲಭಾಗದಿಂದ ನುಗಿ ಎಡಭಾಗದಿಂದ ಬಿದ್ದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿಗೆ ಸಕ್ಕರೆ ನಾಡಿನ ಸ್ಪೆಷಲ್ ಸಾಂಗ್ ಗಿಫ್ಟ್

    ಪರಿಶೀಲಿಸಿದಾಗ ನಮಗೆ ಇಂಡಿಯನ್ ಫ್ಯಾಕ್ಟರಿ ಮೇಡ್ ಪಿಸ್ತೂಲ್ ಸಿಕ್ಕಿದೆ. ಆ ಪಿಸ್ತೂಲ್‍ಗೆ ರಾಹುಲ್ ತಂದೆಯ ಪರವಾನಗಿ ಇದೆ ಎಂದು ತಿಳಿದುಬಂದಿದೆ. ರಾಹುಲ್ ಸುಮಾರು ಬೆಳಗ್ಗೆ 3.30ಗೆ ಅವನ ಮನೆಯಿಂದ ಹೊರಟು ಈ ಕಡೆ ಬಂದಿದ್ದಾನೆ. ಗಂಗೆನಹಳ್ಳಿಯಲ್ಲಿ ಈತನ ಮನೆ ಇರುವುದು ತಿಳಿದುಬಂದಿದ್ದು, ತಂದೆ, ತಾಯಿ ಮತ್ತು ಅಕ್ಕನ ಜೊತೆ ಇದ್ದ ಎಂದು ತಿಳಿದುಬಂದಿದೆ. ಅವನು ಸ್ವಯಂ ಪ್ರೇರಣೆಯಿಂದ ಈ ಕೃತ್ಯ ಮಾಡಿಕೊಂಡಿದ್ದಾನೆ ಎಂದು ಮೇಲ್ನೋಟಕ್ಕೆ ತಿಳಿದುಬರುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: 10ನೇ ತರಗತಿಯಲ್ಲಿ ಶೇ.90 ಅಂಕ ಗಳಿಸಿದ ವಿದ್ಯಾರ್ಥಿ, ನಿವೃತ್ತ ಹವಾಲ್ದಾರ್ ಪುತ್ರ ಶೂಟ್ ಮಾಡಿಕೊಂಡು ಆತ್ಮಹತ್ಯೆ

    ಯಾವ ಕಾರಣಕ್ಕೆ ಯುವಕ ಈ ರೀತಿ ಮಾಡಿಕೊಂಡಿದ್ದಾನೆ ಎಂದು ತಿಳಿದಿಲ್ಲ. ಈಗ ನಾವು ಪ್ರಾಥಮಿಕ ತನಿಖೆಯನ್ನು ಮಾಡುತ್ತಿದ್ದೇವೆ. ನಂತರ ಈ ಘಟನೆಗೆ ಕಾರಣ ಏನು ಎಂಬುದು ಪೂರ್ಣ ವಿವರ ತಿಳಿಯುತ್ತೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಸ್ವೀಕರಿಸಿದ ಉಡುಗೊರೆ- ಸ್ಮರಣಿಕೆಗಳು ಸೆ.17ರಿಂದ ಇ-ಹರಾಜು

    ರಾಹುಲ್ ತಂದೆ 2017ರಲ್ಲಿ ಆರ್ಮಿಯಿಂದ ನಿವೃತ್ತ ಹೊಂದುವ ಸಮಯದಲ್ಲಿ ಈ ಪಿಸ್ತೂಲ್ ನನ್ನು ತೆಗೆದುಕೊಂಡಿದ್ದಾರೆ. ಮನೆಯಲ್ಲಿ ಅಲ್ಮೆರಾದಲ್ಲಿ ಪಿಸ್ತೂಲ್ ಇಡುತ್ತಿದ್ದರೆಂದು ಅವರು ತಿಳಿಸಿದ್ದಾರೆ. ಅದು ಅಲ್ಲದೇ ಆತನಿಗೂ ಪಿಸ್ತೂಲ್ ಬಳಸುವುದು ತಿಳಿದಿತ್ತು. ಅದಕ್ಕಾಗಿ ತರಬೇತಿಯನ್ನು ತೆಗೆದುಕೊಂಡಿದ್ದ ಎಂದು ಯುವಕನ ಪೋಷಕರು ತಿಳಿಸಿದ್ದಾರೆ.

    ಯುವಕ 3-30 ವರೆಗೂ ಓದಿಕೊಂಡು ನಂತರ ವಾಕಿಂಗ್ ಹೋಗುತ್ತಿದ್ದ ಎಂದು ಅವರ ಪೋಷಕರು ತಿಳಿಸಿದ್ದಾರೆ. ಅದೇ ರೀತಿ ಇಂದು ಅಲ್ಮೆರಾದಲ್ಲಿದ್ದ ಪಿಸ್ತೂಲ್‍ನನ್ನು ತೆಗೆದುಕೊಂಡು ಬಂದು ಈ ಕೃತ್ಯ ಮಾಡಿದ್ದಾನೆ ಎಂದು ತಿಳಿದುಬರುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೋದಿಗೆ ಸಕ್ಕರೆ ನಾಡಿನ ಸ್ಪೆಷಲ್ ಸಾಂಗ್ ಗಿಫ್ಟ್

  • ನೋ ಪಾರ್ಕಿಂಗ್‍ನಲ್ಲಿ ಕಾರು ನಿಲ್ಲಿಸಿ ಮಹಿಳಾ ಪೊಲೀಸರಿಗೆ ಅವಾಜ್ ಹಾಕಿದ ಚಾಲಕ

    ನೋ ಪಾರ್ಕಿಂಗ್‍ನಲ್ಲಿ ಕಾರು ನಿಲ್ಲಿಸಿ ಮಹಿಳಾ ಪೊಲೀಸರಿಗೆ ಅವಾಜ್ ಹಾಕಿದ ಚಾಲಕ

    – ಬಿಲ್ಡಪ್ ರಾಜನ ರಂಪಾಟ ಮೊಬೈಲ್‍ನಲ್ಲಿ ಸೆರೆ

    ಬೆಂಗಳೂರು: ನೋ ಪಾರ್ಕಿಂಗ್‍ನಲ್ಲಿ ಕಾರು ನಿಲ್ಲಿಸಿ ಚಾಲಕನೊಬ್ಬ ಮಹಿಳಾ ಪೊಲೀಸರಿಗೆ ಅವಾಜ್ ಹಾಕಿದ ಘಟನೆ ಮಲ್ಲೇಶ್ವರಂನ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ನಡೆದಿದೆ.

    ಕೆಎ 02 ಎಂಎನ್ 5223 ಕಾರ್ ನಂಬರ್ ನ ಚಾಲಕ ಮಹಿಳಾ ಪೊಲೀಸರಿಗೆ ಅವಾಜ್ ಹಾಕಿದ್ದಾನೆ. ನಡು ರಸ್ತೆಯಲ್ಲೆ ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ ಮಹಿಳಾ ಪೊಲೀಸರಿಗೆ ಗಾಡಿ ಮುಟ್ಟಿ ನೋಡೋಣ ಎಂದು ಬೆದರಿಕೆ ಹಾಕಿದ್ದಾನೆ. ಪತ್ನಿಯ ಮುಂದೆ ಚಾಲಕ ಬಿಲ್ಡಪ್ ತೋರಿಸುತ್ತಿದ್ದ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ಸೆರೆ ಹಿಡಿದಿದ್ದಾರೆ.

    ಆಗಿದ್ದೇನು?:
    ಸದಾಶಿವನಗರ ಟ್ರಾಫಿಕ್ ಮಹಿಳಾ ಸಿಬ್ಬಂದಿ ಮಲ್ಲೇಶ್ವರಂನ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಕೆಎ 02 ಎಂಎನ್ 5223 ಕಾರ್ ನಂಬರ್ ನ ಚಾಲಕ ನೋ ಪಾರ್ಕಿಂಗ್‍ನಲ್ಲಿ ಕಾರು ನಿಲ್ಲಿಸಿದ್ದ. ತಕ್ಷಣವೇ ಅಲ್ಲಿಗೆ ಬಂದ ಮಹಿಳಾ ಪೊಲೀಸರು ಪ್ರಶ್ನಿಸಿದ್ದಾರೆ.

    ಪೊಲೀಸ್ ಪ್ರಶ್ನಿಸಿದಕ್ಕೆ ಗರಂ ಆದ ಚಾಲಕ, ಕಾರ್ ಅನ್ನು ಯಾಕೆ ಮುಟ್ಟುತ್ತೀರಾ? ಗಾಡಿ ಮುಟ್ಟಿ ನೋಡೋಣ. ಕಾರ್ ಮುಟ್ಟೋಕೆ ಪರ್ಮೀಶನ್ ಕೊಟ್ಟಿದ್ಯಾರು? ಏ ನೆಟ್ಟಗೆ ಮಾತಾಡಮ್ಮ ಬಾಯಿ ಹೋದಂಗೆ ಮಾತನಾಡಬೇಡ ಎಂದು ಅವಾಜ್ ಹಾಕಿದ್ದಾನೆ.

    ಈ ವೇಳೆ ಕಾರಿನಲ್ಲಿದ್ದ ಚಾಲಕನ ಪತ್ನಿ ಕೆಳಗೆ ಇಳಿದು ಬಂದು ಪೊಲೀಸರಿಗೆ ಕ್ಷಮೆ ಕೇಳಿದ್ದಾರೆ. ಇತ್ತ ಮಹಿಳಾ ಪೊಲೀಸರು ಸದಾಶಿವನಗರ ಪೊಲೀಸ್ ಠಾಣೆಗೆ ಕರೆ ಮಾಡುತ್ತಿದ್ದಂತೆ ಚಾಲಕ ಪರಾರಿಯಾಗಿದ್ದಾನೆ.