Tag: ಸದಾನಂದ ಗೌಡ

  • ಮಂಗಳೂರು ಸುಹಾಸ್ ಶೆಟ್ಟಿ ಕೊಲೆ ಕೇಸ್ NIA ತನಿಖೆ ಆಗಲಿ: ಸದಾನಂದ ಗೌಡ

    ಮಂಗಳೂರು ಸುಹಾಸ್ ಶೆಟ್ಟಿ ಕೊಲೆ ಕೇಸ್ NIA ತನಿಖೆ ಆಗಲಿ: ಸದಾನಂದ ಗೌಡ

    ಬೆಂಗಳೂರು: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಕೇಸ್ (Suhas Shetty Case) ಅನ್ನು ಎನ್‌ಐಎಗೆ ವಹಿಸಬೇಕು ಎಂದು ಮಾಜಿ ಸಿಎಂ ಸದಾನಂದ ಗೌಡ (Sadananda Gowda) ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದೊಂದು ಟೋಟಲ್ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹೇಗೆ ಹದಗೆಟ್ಟಿದೆ ಎಂಬುದಕ್ಕೆ ಹಿಡಿದ ಕೈಗನ್ನಡಿ. ಒಂದೆರೆಡು ಕೇಸ್ ಅಲ್ಲ. ಬ್ಯಾಂಕ್ ದರೋಡೆ ಸೇರಿ ಅನೇಕ ಕೇಸ್ ಆಗಿವೆ. ಸರ್ಕಾರ ಕೊಲೆ ಮಾಡೋ ಇಂತಹವರಿಗೆ ಬೆಂಬಲ ಕೊಡುವ ರಾಜನೀತಿ ಮಾಡುತ್ತಿದೆ. ಹಿಂದೂಗಳನ್ನು ಎರಡನೇ ದರ್ಜೆ ರೀತಿ ನೋಡುತ್ತಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾರೆ. ಯುದ್ಧ ಮಾಡಬೇಡಿ ಎನ್ನುತ್ತಾರೆ. ಇವತ್ತು ಹೋಗಿ ಗೃಹ ಸಚಿವರು ಸಭೆ ಮಾಡುತ್ತಿದ್ದಾರೆ. ಕೇವಲ ಮುಸ್ಲಿಂ ಸಂಘಟನೆಗಳನ್ನು ಕರೆದು ಸಭೆ ಮಾಡುತ್ತಿದ್ದಾರೆ. ಸ್ಥಳೀಯ ಶಾಸಕರನ್ನು ಕರೆದಿಲ್ಲ. ಇದು ಯಾವ ಸರ್ಕಾರದ ನೀತಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆ ವೇಳೆ ಕಾಣಿಸಿಕೊಂಡಿದ್ದ ಬುರ್ಖಾಧಾರಿ ಮಹಿಳೆಯರ ಬಗ್ಗೆ ಪೊಲೀಸ್‌ ಕಮಿಷನರ್ ಹೇಳಿದ್ದೇನು?

    ಸುಹಾಸ್ ಕೇಸ್‌ನಲ್ಲಿ 8 ಜನರ ಬಂಧನ ಆಗಿದೆ. ಆದರೆ ಅಶ್ರಫ್ ಕೊಲೆ ಕೇಸ್‌ನಲ್ಲಿ 25 ಜನ ಅರೆಸ್ಟ್ ಮಾಡ್ತಾರೆ. ಆದರೆ ಈ ಕೇಸ್ ನಲ್ಲಿ ಅಲ್ಲೇ 25 ಜನ ಇದ್ದರು,ಬುರ್ಕಾ ಹಾಕಿರೋ ವಿಡಿಯೋ ಇದ್ದರು ಅರೆಸ್ಟ್ ಆಗಿಲ್ಲ. ಈ ಸರ್ಕಾರ ಮೈನಾರಿಟಿ ಪರ ಅಂತ ತೋರಿಸಿಸೋಕೆ ಹೋಗ್ತಿದೆ.ಈ ಸರ್ಕಾರ ಈ ಕೇಸ್ ನಲ್ಲಿ ಏನು ಮಾಡೊಲ್ಲ. ಜನರು ಬೀದಿಗೆ ಇಳಿಯಬೇಕು. ಹೀಗಾಗಿ ಈ ಕೇಸ್ ಎನಐಎಗೆ ತನಿಖೆಗೆ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ ಪ್ರಕರಣ – 8 ಆರೋಪಿಗಳ ಬಂಧನ

    ಕರಾವಳಿ ಭಾಗದಲ್ಲಿ ಇಂತಹ ಕೇಸ್ ಹೆಚ್ಚು ಆಗುತ್ತಿದೆ. ಹೀಗಾಗಿ ಎನ್‌ಐಎ (NIA) ಬ್ರ‍್ಯಾಂಚ್ ಈ ಭಾಗದಲ್ಲಿ ಪ್ರಾರಂಭ ಮಾಡಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಿದರು. ಈ ಸರ್ಕಾರ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ. ಕೇವಲ ಸಚಿವರು ಮೈನಾರಿಟಿ ಅವರನ್ನು ಕರೆದು ಸಭೆ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳನ್ನು ಕರೆದಿಲ್ಲ. ಇಂತಹ ಘಟನೆ ಆದರೆ ಆರ್‌ಎಸ್‌ಎಸ್, ಬಿಜೆಪಿ ಬಿಟ್ಟರೆ ಇವರು ಬೇರೆ ಯಾರ ಮೇಲೂ ಹೇಳಲ್ಲ. ಇಂತಹ ರಾಜನೀತಿ ಸಮಾಜಕ್ಕೆ ದೊಡ್ಡ ಮಾರಕ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪಾಕಿಸ್ತಾನದ ಬೇಹುಗಾರಿಕಾ ಏಜೆನ್ಸಿಯಿಂದ ಕದಂಬ ನೌಕಾ ನೆಲೆಯ ಯುದ್ಧ ಹಡಗುಗಳ ಮಾಹಿತಿ ಪಡೆಯಲು ಯತ್ನ!

    ಕೊಲೆಗೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಕೊಲೆ ಮಾಡುವ ಪೋಸ್ಟರ್ ಹರಿದಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸುಹಾಸ್ ಶೆಟ್ಟಿಗೆ ರಕ್ಷಣೆ ಕೊಡಬೇಕಿತ್ತು. ಬೇರೆ ಕೇಸ್‌ನಲ್ಲಿ ಆರೋಪಿ ಆಗಿದ್ದ. ಸರ್ಕಾರ ಆತನ ಜೀವ ರಕ್ಷಣೆ ಮಾಡಬೇಕಿತ್ತು. ಇದನ್ನ ಮಾಡದೇ ಇರುವುದರಿಂದ ಇದಕ್ಕೆ ಒಂದು ಹಂತದಲ್ಲಿ ಸರ್ಕಾರದ ಲೋಪ ಇದೆ. ಒಲೈಕೆ ರಾಜಕೀಯ ಜಾಸ್ತಿ ಆಗುತ್ತಿದೆ. ಸರ್ಕಾರ ಇದನ್ನ ಬಿಡಬೇಕು. ಸರ್ಕಾರ ಒಂದು ಸಮುದಾಯಕ್ಕೆ ಬೆಂಬಲ ಕೊಡುತ್ತಿದೆ. ಕರಾವಳಿ ಭಾಗದಲ್ಲಿ ಎಲ್ಲಾ ಹಿಂದೂಗಳು ಬೀದಿಗೆ ಇಳಿದರೆ ಏನು ಆಗಬಹುದು. ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕು. ಈ ಸರ್ಕಾರ ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ರಕ್ಷಣೆ ಕೊಡೋದಲ್ಲ ಬಹುಸಂಖ್ಯಾತರ ರಕ್ಷಣೆಯೂ ಮಾಡಬೇಕು ಎಂದು ಹರಿಹಾಯ್ದರು. ಇದನ್ನೂ ಓದಿ: ಎಲ್ಲಾ ಸಮುದಾಯಗಳಿಗೆ ನ್ಯಾಯ ಕೊಡಲು ಕೇಂದ್ರದಿಂದ ಜಾತಿಗಣತಿ: ಸದಾನಂದಗೌಡ

    ಅಲ್ಪಸಂಖ್ಯಾತರಿಂದ ಕಾಂಗ್ರೆಸ್ 15 ಸೀಟು ಗೆದ್ದಿರಬಹುದು. ಉಳಿದ ಸೀಟು ಯಾರಿಂದ ಗೆದ್ದಿರಿ. ಜೆಡಿಎಸ್ ಈಗ ಎನ್‌ಡಿಎ ಜೊತೆ ಬಂದಿದೆ. ಅವರ ಜೊತೆ ಇದ್ದ ಅಲ್ಪಸಂಖ್ಯಾತರ ಮತಗಳ ಒಲೈಕೆ ಮಾಡೋಣ ಎಂದು ಹೋಗುತ್ತಿದ್ದಾರೆ. ಕ್ರಿಶ್ಚಿಯನ್ನರು ಕರಾವಳಿ ಭಾಗದಲ್ಲಿ ಇದ್ದಾರೆ. ಅವರು ಹೀಗೆ ಮಾಡುತ್ತಾರೆ. ಕಾಂಗ್ರೆಸ್ ಅವರು ಸತ್ಯ ಹರಿಶ್ಚಂದ್ರರ ರೀತಿ ಮಾತನಾಡುತ್ತಾರೆ. ಆದರೆ ಅವರು ಮಾಡುವುದೆಲ್ಲಾ ದುರ್ಯೋಧನನ ಪಾತ್ರವೇ ಎಂದು ಗುಡುಗಿದರು. ಇದನ್ನೂ ಓದಿ: ಜಮೀರ್ ಪಾಕಿಸ್ತಾನದಲ್ಲಿ ಬೇಡ, ತಮ್ಮ ಕ್ಷೇತ್ರದಲ್ಲೇ ಸೂಸೈಡ್ ಬಾಂಬರ್ ಆಗಿ ಆತ್ಮಾಹುತಿ ಮಾಡಿಕೊಳ್ಳಲಿ – ಸದಾನಂದಗೌಡ

  • ಸದಾನಂದಗೌಡರು ಬಿಜೆಪಿ ಪಕ್ಷ ಬಿಡ್ತಾರೆ ಅನ್ನೋದು ಸುಳ್ಳು: ಶೋಭಾ ಕರಂದ್ಲಾಜೆ

    ಸದಾನಂದಗೌಡರು ಬಿಜೆಪಿ ಪಕ್ಷ ಬಿಡ್ತಾರೆ ಅನ್ನೋದು ಸುಳ್ಳು: ಶೋಭಾ ಕರಂದ್ಲಾಜೆ

    ಬೆಂಗಳೂರು: ಸದಾನಂದಗೌಡರು (Sadananda Gowda) ಯಾವುದೇ ಕಾರಣಕ್ಕೂ ಪಕ್ಷವನ್ನು ಬಿಡೋದಿಲ್ಲ. ಸದಾನಂದಗೌಡರು ಪಕ್ಷ ಬಿಡುತ್ತಾರೆ ಅನ್ನೋದು ಸುಳ್ಳು ಸುದ್ದಿ ಎಂದು ಕೇಂದ್ರ ಸಚಿವೆ, ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ (Shobha Karandlaje) ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಈ ಕುರಿತು ಮಾತನಾಡಿದ ಅವರು, ಸದಾನಂದಗೌಡರು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ಬಿಟ್ಟು ಹೋಗಲ್ಲ. ಸದಾನಂದಗೌಡರು ಪಕ್ಷ ಬಿಡುತ್ತಾರೆ ಅನ್ನೋದು ಸುಳ್ಳು ಸುದ್ದಿಗಳು. ಸದಾನಂದಗೌಡ ಪಕ್ಷ ಬಿಡುವ ಯೋಚನೆ ಕೂಡಾ ಮಾಡಲ್ಲ ಎಂದರು. ಇದನ್ನೂ ಓದಿ: ಸ್ಟ್ರಾಂಗ್ ಯಾರು ಅನ್ನೋದು ಜಗತ್ತಿಗೆ ಗೊತ್ತಿದೆ- ಸಿಎಂ ವಿರುದ್ಧ ಸಿ.ಟಿ ರವಿ ಕಿಡಿ

    ಸದಾನಂದಗೌಡರು ನಮ್ಮ ಹಿರಿಯರು. ನಾನು ಮೊದಲ ದಿನ ಹೋದಾಗಲೇ ಆಶೀರ್ವಾದ ಮಾಡಿದ್ದಾರೆ. ಆದಾದ ಮೇಲೆ ಕೆ.ಆರ್ ಪುರಂ ಮತ್ತು ಪುಲಕೇಶಿ ನಗರದಲ್ಲಿ ಚುನಾವಣೆ ಪ್ರಚಾರದಲ್ಲಿ ಬಂದು ಭಾಗಿಯಾಗಿದ್ದರು. ನನಗಿಂತ ಉತ್ಸಾಹದಿಂದ ಅವರು ಓಡಾಡುತ್ತಾರೆ. ಅವರು ಇವತ್ತು ಊರಿಗೆ ಹೋಗಿದ್ದಾರೆ. ವಾಪಸ್ ಬಂದ ಮೇಲೆ ನಮ್ಮೆಲ್ಲರ ಪರವಾಗಿ ಅವರು ಕೆಲಸ ಮಾಡುತ್ತಾರೆ. ನನ್ನ ಪರ ಮಾತ್ರವಲ್ಲ ಮೈಸೂರಿಗೆ ಅವರು ಹೋದರೂ ಅನುಕೂಲ ಆಗುತ್ತದೆ. ಅಲ್ಲೂ ಕೂಡಾ ಪ್ರಚಾರ ಮಾಡುತ್ತಾರೆ. ಅವರು ಪಕ್ಷಕ್ಕಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್ ಮುಂದೆ ಈಶ್ವರಪ್ಪ ವಿರುದ್ಧ ಯಡಿಯೂರಪ್ಪ ಕೆಂಡಾಮಂಡಲ!

    ಕಾಂಗ್ರೆಸ್ (Congress) ನಾಯಕರಿಂದ ಸದಾನಂದಗೌಡ ಸಂಪರ್ಕ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದೆಲ್ಲವೂ ಸುಳ್ಳು. ಕಾಂಗ್ರೆಸ್ ಅವರು ಸಂಶಯ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಅವರಿಗೆ ಅಭ್ಯರ್ಥಿಗಳು ಇಲ್ಲ. ಕಾಂಗ್ರೆಸ್‌ನಲ್ಲಿ ಒಳಜಗಳ ಇದೆ. ಇದನ್ನ ಮರೆಮಾಚೋಕೆ ಬಿಜೆಪಿಯ (BJP) ಆ ನಾಯಕ ಬರುತ್ತಾರೆ. ಈ ನಾಯಕ ಬರ್ತಾರೆ, ಅವರನ್ನ ಮಾತನಾಡಿಸುತ್ತೇವೆ. ಇವರನ್ನು ಮಾತಾಡಿಸುತ್ತೇವೆ ಅನ್ನೋ ಸುಳ್ಳು ಸುದ್ದಿ ಬಿಡುವ ಕೆಲಸ ಕಾಂಗ್ರೆಸ್ ಮಾಡ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಾ.22ರ ಬಳಿಕ ಬಿಜೆಪಿ ಅಂತಿಮ ಪಟ್ಟಿ; 5 ಕ್ಷೇತ್ರದಲ್ಲಿ ಎರಡು ಕಗ್ಗಂಟು – ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ಡೌಟು

  • ಬೆಂಗಳೂರಿನಿಂದ ಮೈಸೂರಿಗೆ – ಕಾಂಗ್ರೆಸ್‌ನಿಂದ ಡಿವಿಎಸ್‌ ಸ್ಪರ್ಧೆ?

    ಬೆಂಗಳೂರಿನಿಂದ ಮೈಸೂರಿಗೆ – ಕಾಂಗ್ರೆಸ್‌ನಿಂದ ಡಿವಿಎಸ್‌ ಸ್ಪರ್ಧೆ?

    ಬೆಂಗಳೂರು: ಮಾಜಿ ಸಿಎಂ, ಹಾಲಿ ಬೆಂಗಳೂರು ಉತ್ತರ (Bengaluru North) ಕ್ಷೇತ್ರದ ಬಿಜೆಪಿ ಸಂಸದ ಸದಾನಂದ ಗೌಡ (D. V. Sadananda Gowda) ಮೈಸೂರಿನಿಂದ (Mysuru) ಸ್ಪರ್ಧಿಸುತ್ತಾರಾ ಹೀಗೊಂದು ಪ್ರಶ್ನೆ ಎದ್ದಿದೆ.

    ಇಂದು ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಡಿವಿಎಸ್‌ ಮಾತನಾಡಿದರು. ಈ ವೇಳೆ ನಾನು ಮಹತ್ವದ ವಿಷಯದ ಬಗ್ಗೆ ನಾಳೆ ನಿಮ್ಮ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದರಿಂದ ಈ ಪ್ರಶ್ನೆ ಈಗ ಸೃಷ್ಟಿಯಾಗಿದೆ.

    ಕಾಂಗ್ರೆಸ್ (Congress) ನಾಯಕರ ಸಂಪರ್ಕ ವಿಚಾರ ಒಪ್ಪಿಕೊಂಡ ಡಿವಿಎಸ್, ನನ್ನನ್ನ ಬೇರೆಬೇರೆಯವರು ಬಂದು ಸಂಪರ್ಕ ಮಾಡುತ್ತಿರುವುದು ನಿಜ. ನಿನ್ನೆ ನಮ್ಮ ಪಕ್ಷದ ಪ್ರಮುಖ ನಾಯಕರೊಬ್ಬರು ಬಂದು ಸಮಾಧಾನ ಹೇಳಿದ್ದಾರೆ. ಇವತ್ತು ನನ್ನ ಜನ್ಮದಿನ. ಇಡೀ ದಿನ ಕುಟುಂಬದ ಸದಸ್ಯರ ಜತೆ ಕಳೆದು ನಂತರ ನಿಶ್ಚಯ ಮಾಡುತ್ತೇನೆ ಎಂದು ಹೇಳಿದರು.

    ನನ್ನ ನಿರ್ಧಾರಗಳನ್ನು ನಾನು ನನ್ನ ಕುಟುಂಬದ ಸದಸ್ಯರ ಜತೆ ಚರ್ಚಿಸಬೇಕು. ಬೆಂಗಳೂರು ಉತ್ತರದಲ್ಲಿ ನಿಮಗೆ ಟಿಕೆಟ್‌ ಎಂದು ಹೇಳಿ ಕೊನೇ ಕ್ಷಣದಲ್ಲಿ ನನ್ನ ರಕ್ಷಣೆಗೆ ಬರಲಿಲ್ಲ. ಕೆಲವೊಂದು ಮನದಾಳದ ವಿಚಾರಗಳನ್ನು ಹೇಳಿಕೊಳ್ಳಬೇಕಿದೆ. ಅದಕ್ಕಾಗಿ ಮಂಗಳವಾರ ಸುದ್ದಿಗೋಷ್ಠಿ ಕರೆಯುತ್ತೇನೆ. ನಾಳೆ ಯಾವ ನಿರ್ಣಯ ಅಂತ ಈಗಲೇ ಹೇಳಿಬಿಟ್ಟರೆ ನಾಳೆಗೆ ಏನೂ ಉಳಿಯುವುದಿಲ್ಲ. ರಾಜಕೀಯದಲ್ಲಿ ಏರುಪೇರು, ಮುಜುಗರ ಸಹಜ. ಹೀಗಿದ್ದರೂ ತಿಳಿದೂ ತಿಳಿದೂ ಹೀಗೆ ಮಾಡಿರುವುದು ಬೇಜಾರು ತಂದಿದೆ ಎಂದು ತಿಳಿಸಿದರು.  ಇದನ್ನೂ ಓದಿ: ಕಲ್ಲೆಸೆತಕ್ಕೆ ಸುದ್ದಿಯಾಗಿದ್ದ ಕಾಶ್ಮೀರದಲ್ಲಿ ಫಸ್ಟ್‌ ಟೈಂ ಫಾರ್ಮುಲಾ 4 ರೇಸ್‌ – ಮೋದಿ ಮೆಚ್ಚುಗೆ

     

    ಮೈಸೂರಿನಿಂದ ಸ್ಪರ್ಧೆ:
    ಒಕ್ಕಲಿಗರ ಮತದಾರರ ಸಂಖ್ಯೆ ಮೈಸೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಆಪರೇಷನ್‌ ಹಸ್ತ ಮಾಡಿದ್ದು ಡಿವಿಎಸ್‌ ಅವರನ್ನು ಇಳಿಸಲು ಮುಂದಾಗಿದೆ ಎಂಬ ವದಂತಿ ರಾಜಕೀಯ ವಲಯದಿಂದ ಕೇಳಿ ಬರುತ್ತಿದೆ. ಈ ಬಗ್ಗೆ ಇನ್ನೂ ಯಾರು ಅಧಿಕೃತವಾಗಿ ತಿಳಿಸಿಲ್ಲ. ಹೀಗಾಗಿ ಮಂಗಳವಾರದ ಡಿವಿಎಸ್‌ ಸುದ್ದಿಗೋಷ್ಠಿ ಭಾರೀ ಮಹತ್ವ ಪಡೆದಿದೆ.

  • ಬಿಜೆಪಿಯಿಂದ ಕಾಂಗ್ರೆಸ್ ಕಲೆಕ್ಷನ್ ವಂಶಾವಳಿ, ನಿಗಮ ಮಂಡಳಿಗಳ ರೇಟ್ ಕಾರ್ಡ್ ರಿಲೀಸ್

    ಬಿಜೆಪಿಯಿಂದ ಕಾಂಗ್ರೆಸ್ ಕಲೆಕ್ಷನ್ ವಂಶಾವಳಿ, ನಿಗಮ ಮಂಡಳಿಗಳ ರೇಟ್ ಕಾರ್ಡ್ ರಿಲೀಸ್

    ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಬಿಜೆಪಿ (BJP) ಕಲೆಕ್ಷನ್ ಮಾಸ್ಟರ್ ಆರೋಪ ಹೊರಿಸಿದೆ. ವಲಯವಾರು ಹಣ ಕಲೆಕ್ಷನ್ ಮಾಡಿ ಕಾಂಗ್ರೆಸ್ ಹೈಕಮಾಂಡ್‍ಗೆ ಕೊಡುತ್ತಿದೆ ಬಿಜೆಪಿ ಆರೋಪಿಸಿದೆ.

    ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ (Sadananda Gowda) ಸುದ್ದಿಗೋಷ್ಠಿ ನಡೆಸಿ ಎಟಿಎಂ ಸರ್ಕಾರದ ಕಲೆಕ್ಷನ್ ವಂಶಾವಳಿ ರಿಲೀಸ್ ಮಾಡಿದ್ದಾರೆ. ಸುರ್ಜೇವಾಲಾಗೆ ಸಿಎಂ ಮತ್ತು ಪುತ್ರ ಯತೀಂದ್ರ ಕಲೆಕ್ಷನ್ ಕಲೆಕ್ಟ್ ಮಾಡಿ ಕೊಡುತ್ತಾರೆ. ವೇಣುಗೋಪಾಲ ಅವರಿಗೆ ಡಿಕೆಶಿ ಕಲೆಕ್ಷನ್ ಸಂಗ್ರಹಿಸಿ ಕೊಡುತ್ತಿದ್ದಾರೆ. ಸಿಎಂ, ಡಿಸಿಎಂ ಗುಂಪುಗಳಿಗೆ ಅವರರವರ ಬಣದ ಗುತ್ತಿಗೆದಾರರು ಕಮೀಷನ್ ಸಂಗ್ರಹಿಸಿ ಕೊಡ್ತಿದ್ದಾರೆ. ಸಂಗ್ರಹ ಮಾಡಿದ ಎಲ್ಲಾ ಹಣ ಕೊನೆಗೆ ರಾಹುಲ್ ಗಾಂಧಿ ಅವರಿಗೆ ಹೋಗುತ್ತದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಅಣ್ವಸ್ತ್ರಗಳು ಎಲ್ಲಾ ಮುಸ್ಲಿಮರಿಗೆ ಸೇರಿದ್ದು: ಷರಿಫ್‌ ಅಳಿಯ

    ಇಂದಿರಾ ಕ್ಯಾಂಟಿನ್‍ಗಳಿಗೂ ಹಣ ಬಿಡುಗಡೆಯಾಗುತ್ತಿಲ್ಲ. ಯಾಕೆಂದರೆ ಅವರು ಕಮಿಷನ್ ಕೊಡುತ್ತಿಲ್ಲ. ಅದಕ್ಕಾಗಿ ಅವರಿಗೆ ಹಣ ಬಿಡುಗಡೆ ಮಾಡಿಲ್ಲ. ದಸರಾ ಕಾರ್ಯಕ್ರಮಕ್ಕೆ ಕಲಾವಿದರಿಂದಲೂ ಕಮಿಷನ್ ಕೇಳಿದ್ದಾರೆ. ಡಿಕೆಶಿ ಅವರ ವಿರುದ್ಧ ಆದಾಯಕ್ಕೂ ಮೀರಿದ ಆಸ್ತಿ ವಿಚಾರಕ್ಕೆ ಕೋರ್ಟ್ ವಿಚಾರಣೆಗೆ ಅನುಮತಿ ನೀಡಿದೆ. ಈ ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

    ಟ್ವಿಟ್ಟರ್‍ನಲ್ಲಿ ಕಾರ್ಟೂನ್ ಹಂಚಿಕೊಂಡಿರುವ ಬಿಜೆಪಿ, ಕರ್ನಾಟಕದ ಜನತೆಯ ಶ್ರಮದ ದುಡಿಮೆಯ ಹಣವನ್ನು ಲೂಟಿ ಮಾಡುತ್ತಿದೆ. ಅದನ್ನು ಕಲೆಕ್ಷನ್ ಮಾಸ್ಟರ್‍ಗಳು ಹೈಕಮಾಂಡ್‍ಗೆ ತಲುಪಿಸುತ್ತಿದ್ದಾರೆ. ಸಿಎಂ ಎಂದರೆ ಕಲೆಕ್ಷನ್ ಮಾಸ್ಟರ್ ಎಂದು ವ್ಯಂಗ್ಯವಾಡಿದೆ. ಕಲೆಕ್ಷನ್ ಮಾಸ್ಟರ್ ನೇಮ್ ಪ್ಲೇಟ್ ಹಾಕಿ ವ್ಯಂಗ್ಯವಾಡಿದೆ.

    ಕಾಂಗ್ರೆಸ್ ಸರ್ಕಾರ ನಿಗಮ ಮಂಡಳಿಗಳಲ್ಲೂ ಕಮೀಷನ್ ವಸೂಲಿ ಮಾಡುತ್ತಿದೆ. ರಾಜ್ಯಕ್ಕೆ ಆಗಮಿಸಿದ್ದ ಹೈಕಮಾಂಡ್‍ನ ಕಲೆಕ್ಷನ್ ಏಜೆಂಟರುಗಳಾದ ಸುರ್ಜೇವಾಲಾ ಮತ್ತು ಕೆ.ಸಿ. ವೇಣುಗೋಪಾಲ್ ಅವರು ನಿಗಮ ಮಂಡಳಿಗಳ ನೇಮಕಕ್ಕೆ ರೇಟ್ ಕಾರ್ಡ್ ಫಿಕ್ಸ್ ಮಾಡಿ ಹೋಗಿದ್ದಾರೆ. ಕಾಂಗ್ರೆಸ್ ಸ್ನೇಹಿತರು ಕೊಟ್ಟಿರುವ ನಿಗಮ ಮಂಡಳಿಗಳ ರೇಟ್ ಕಾರ್ಡ್‍ನ್ನು ಬಿಡುಗಡೆ ಮಾಡಿದ್ದೇವೆ ಎಂದು ಒಂದು ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.

    ಬಿಡಿಎ – 50 ಕೋಟಿ ರೂ.
    ಬಿಡಬ್ಲೂಎಸ್‍ಎಸ್‍ಬಿ – 45 ಕೋಟಿ ರೂ.
    ಕೆಆರ್‌ಐಡಿಎಲ್ – 20 ಕೋಟಿ ರೂ.
    ಕಿಯೋನಿಕ್ಸ್ – 15 ಕೋಟಿ ರೂ.
    ಕರ್ನಾಟಕ ಉಗ್ರಾಣ ನಿಗಮ – 12 ಕೋಟಿ ರೂ.
    ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ – 10 ಕೋಟಿ ರೂ.

    ಇಷ್ಟೇ ಅಲ್ಲದೇ ಹತ್ತು ಹಲವು ನಿಗಮಗಳಿಗೆ ಕಲೆಕ್ಷನ್ ಮಾಸ್ಟರ್ಸ್‍ಗಳಾದ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ನಡೆಸುವ ಹರಾಜು ಪ್ರಕ್ರಿಯೆಯಲ್ಲಿ ಇನ್ನೂ ಹೆಚ್ಚು ಮೊತ್ತದ ಕಲೆಕ್ಷನ್ ಆಗುವ ಸಾಧ್ಯತೆ ಇದೆ ಎಂದು ಬಿಜೆಪಿ ಹೇಳಿಕೊಂಡಿದೆ. ಇದನ್ನೂ ಓದಿ: ಪರಶುರಾಮ ಮೂರ್ತಿ ಫೈಬರ್ ಅಲ್ಲ ಕಂಚು- ಬಿಜೆಪಿಯಿಂದ ವೀಡಿಯೋ ಬಿಡುಗಡೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಮ್ಮೂರಿನಲ್ಲಿ ಡಿ.ವಿ ಸದಾನಂದ ಗೌಡ ಅಂತ ಒಬ್ರು ಇದ್ರು ಈಗ ಅವರು ಭೂಮಿ ಮೇಲೆ ಇದ್ದಾರಾ ಗೊತ್ತಿಲ್ಲ: ಪೋಸ್ಟರ್ ವೈರಲ್

    ನಮ್ಮೂರಿನಲ್ಲಿ ಡಿ.ವಿ ಸದಾನಂದ ಗೌಡ ಅಂತ ಒಬ್ರು ಇದ್ರು ಈಗ ಅವರು ಭೂಮಿ ಮೇಲೆ ಇದ್ದಾರಾ ಗೊತ್ತಿಲ್ಲ: ಪೋಸ್ಟರ್ ವೈರಲ್

    ಮಂಗಳೂರು: ನಮ್ಮೂರಿನಲ್ಲಿ ಡಿ.ವಿ ಸದಾನಂದ ಗೌಡ ಅಂತ ಒಬ್ರು ಇದ್ರು. ಈಗ ಅವರು ಭೂಮಿ ಮೇಲೆ ಇದ್ದಾರಾ ಯಾರಿಗಾದ್ರು ಗೊತ್ತಾ? ಯಾಕಂದ್ರೆ ಅವರ ಊರಿನಲ್ಲೇ ಒಂದು ಕೊಲೆಯಾಗಿದೆ. ಈ ಬಗ್ಗೆ ತಿಳಿಸಬೇಕಿತ್ತು ಅವರ ಫೋನ್ ನಂಬರ್ ಯಾರಲ್ಲಾದರೂ ಇದ್ರೆ ಕೊಡಿ, ನಾನಾದರು ಫೋನ್ ಮಾಡಿ ಹೇಳುತ್ತೇನೆ ಎನ್ನುವ ಆಕ್ರೋಶದ ಪೋಸ್ಟರ್‌ಗಳು ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಮಾಜಿ ಸಿಎಂ ಸದಾನಂದ ಗೌಡರ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಪೋಸ್ಟರ್‌ನಲ್ಲಿ ಏನಿದೆ?:
    ಅವರ ಬಗ್ಗೆ ನಿಮಗೆ ಈಗ ಮರೆತಿರಬಹುದು. ಅವರು ಒಂದು ಕಾಲದ ಮಹಾನ್ ಹೋರಾಟಗಾರ, ಪುತ್ತೂರಿನಲ್ಲಿ ತನ್ನ ಜಾಥಾದ ಮೂಲಕವೇ ಬಿಜೆಪಿ ಪಕ್ಷದಲ್ಲಿ ಮುಂಚೂಣಿಯಾಗಿ ಕಾಣಿಸಿಕೊಂಡ ವ್ಯಕ್ತಿ. ಹುಟ್ಟೂರು ಸುಳ್ಯದ ಮಂಡೆಕೋಲು ಗ್ರಾಮಸ್ಥ, ಮಡಿಕೇರಿಯ ಕಡೆಯಿಂದ ಮದುವೆಯಾದ ಗೃಹಸ್ಥ. ಇದನ್ನೂ ಓದಿ: ಆರಗ ಮನೆಗೆ ನುಗ್ಗಿದ ABVP ಕಾರ್ಯಕರ್ತರಿಗೆ ಲಾಠಿ ಏಟು

    ಗೊತ್ತಾಗಿಲ್ಲಾ, ಪರ್ವಾಗಿಲ್ಲ. ಇನ್ನೊಂದು ಸುಳಿವು ನಿಮಗೆ ಕೊಡುತ್ತೇವೆ. ಈ ಸುಳಿವು ಮಾತ್ರ ಖಂಡಿತಾ ಆತ ಯಾರೆಂದು ನಿಮಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ, ಜೊತೆಗೇ ದೇಶಕ್ಕೆ ಅವರ ವ್ಯಕ್ತಿತ್ವವನ್ನು ಜನರ ಮುಂದು ಇಟ್ಟು, ಬಿಡಿಸಿ, ಅವರ ವ್ಯಕ್ತಿತ್ವದ ಘನತೆಯನ್ನು ತೆರೆದುಬಿಡುತ್ತದೆ ಎಂದು ಬರೆದಿರುವ ಪೋಸ್ಟರ್‌ಗಳು ಕರಾವಳಿಯಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಚುನಾವಣೆ ವರ್ಷ ನೆತ್ತರಧಾರೆ ಹರಿದಷ್ಟೂ ಭರ್ಜರಿ ಮತಧಾರೆ: ಎಚ್‍ಡಿಕೆ

    ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಅವರ ಮನೆಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು, ಶಾಸಕರು ಹಾಗೂ ಕೆಲ ಸಂಘಟನೆಯ ಮುಖ್ಯಸ್ಥರು, ಕಾರ್ಯಕರ್ತರು ಭೇಟಿ ನೀಡಿ ಸಾಂತ್ವನ ಹೇಳಿದ್ದು, ಪರಿಹಾರವನ್ನೂ ನೀಡಿದ್ದಾರೆ. ಆದರೆ ಬೆಳ್ಳಾರೆಯಿಂದ ಕೆಲವೇ ಕಿಲೋ ಮೀಟರ್‌ಗಳ ಅಂತರದ ಊರಿನವರಾದ ಸುಳ್ಯ ತಾಲೂಕಿನ, ಮಂಡೆಕೋಲು ಗ್ರಾಮದ ದೇವರಗುಂಡದ ಸದಾನಂದ ಗೌಡರು ಬಾರದೇ ಇರುವುದು ಮತ ನೀಡಿ ಗೆಲ್ಲಿಸಿದ್ದ ಸ್ಥಳೀಯ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.

    ಈಗಾಗಲೇ ಕರಾವಳಿಯಲ್ಲಿ ಕ್ಷೇತ್ರದ ಶಾಸಕರಾದ ಎಸ್. ಅಂಗಾರ ಮತ್ತು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ವಿರುದ್ಧ ತೀವ್ರ ಆಕ್ರೋಶದ ಮಾತುಗಳು ಕೇಳಿಬರುತ್ತಿದೆ. ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆಯ ಬಳಿಕ ಬೆಳ್ಳಾರೆಗೆ ಅಂತಿಮ ದರ್ಶನಕ್ಕೆ ತೆರಳಿದ ನಳಿನ್ ಕುಮಾರ್ ಕಟೀಲ್ ಸಚಿವರಾದ ಸುನಿಲ್ ಕುಮಾರ್, ಎಸ್. ಅಂಗಾರ ಸೇರಿದಂತೆ ಇತರ ಸಚಿವರಿಗೆ ಘೇರಾವ್, ಕಾರನ್ನೇ ಪಲ್ಟಿ ಹಾಕುವಷ್ಟರ ಮಟ್ಟಿಗೆ ಕಾರ್ಯಕರ್ತರು ಕುಪಿತಗೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಅಧಿಕಾರ ಸಿಕ್ಕಾಗ ಮಾತ್ರವಲ್ಲ, ಅಧಿಕಾರ ಕಳೆದುಕೊಂಡಾಗಲೂ ಜನ ನನ್ನೊಂದಿಗಿದ್ದಾರೆ: ಡಿವಿಎಸ್

    ಅಧಿಕಾರ ಸಿಕ್ಕಾಗ ಮಾತ್ರವಲ್ಲ, ಅಧಿಕಾರ ಕಳೆದುಕೊಂಡಾಗಲೂ ಜನ ನನ್ನೊಂದಿಗಿದ್ದಾರೆ: ಡಿವಿಎಸ್

    ಚಿಕ್ಕಬಳ್ಳಾಪುರ: ಪಕ್ಷದ ಅಧ್ಯಕ್ಷರ ಸೂಚನೆ ಮೇರೆಗೆ ನಾನು ರಾಜೀನಾಮೆ ನೀಡಿದ್ದೇನೆ. ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ನಾನು ಸಂತೋಷದಿಂದಲೇ ಇದ್ದೇನೆ. ಅಧಿಕಾರ ಸಿಕ್ಕಾಗ ಮಾತ್ರವಲ್ಲ, ಅಧಿಕಾರ ಕಳೆದುಕೊಂಡಾಗಲೂ ಜನ ನನ್ನೊಂದಿಗೆ ಇದ್ದಾರೆ. ಜನರ ಈ ಪ್ರೀತಿಗೆ ನಾನು ಚಿರರುಣಿ ಎಂದು ನಿರ್ಗಮಿತ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಹೇಳಿದ್ದಾರೆ.

    ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಇಂದು ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಮಾತನಾಡಿದ ಡಿವಿಎಸ್, ಜನರು ನನ್ನ ಮೇಲೆ ಇಟ್ಟಿರುವ ಅಪಾರ ಪ್ರೀತಿಗೆ ನಾನು ಯಾವತ್ತು ಚಿರರುಣಿ. ರಾಜ್ಯ ರಾಜಕಾರಣದ ಬಗ್ಗೆ ಈಗಲೇ ನಾನು ಏನು ಹೇಳಲಾಗುವುದಿಲ್ಲ. ಪಕ್ಷ ನೀಡುವ ಜವಾಬ್ದಾರಿ ಮತ್ತು ಸೂಚನೆ ಮೆರೆಗೆ ಕೆಲಸ ಮಾಡುತ್ತೇನೆ ಎಂದು ಹೇಳುವ ಮೂಲಕ ಬೇರೆ ಹುದ್ದೆಯ ಬಗ್ಗೆ ಮಾತನಾಡಲು ನಿರಾಕರಿಸಿದರು. ಇದನ್ನೂ ಓದಿ: ಸಿಎಂ ಆಗಿ ಕಟೀಲಿಗೆ ಬಂದಿದ್ದ ಡಿವಿಎಸ್ – 9 ವರ್ಷಗಳ ಬಳಿಕ ಅದೇ ದಿನ ರಾಜೀನಾಮೆ

    ಸದಾನಂದಗೌಡರ ಆಗಮನದ ಹಿನ್ನೆಲೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬೆಂಗಳೂರು ಉತ್ತರ ತಾಲೂಕಿನ ಡಿವಿಎಸ್ ಬೆಂಬಲಿಗರು ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಆಗಮಿಸಿ ಡಿವಿಎಸ್‍ಗೆ ಆತ್ಮಸ್ಥರ್ಯ ತುಂಬುವ ಕೆಲಸ ಮಾಡಿದರು. ವಿಮಾನ ನಿಲ್ದಾಣದಲ್ಲಿ ಕ್ಕಿಕ್ಕಿರಿದು ತುಂಬಿದ್ದ ಡಿವಿಎಸ್ ಬೆಂಬಲಿಗರು ಮುಂದಿನ ಸಿಎಂ ಸದಾನಂದಗೌಡ, ಜೈ ಎನ್ನುವ ಮೂಲಕ ಡಿವಿಎಸ್ ಅವರಿಗೆ ಜೈಕಾರ ಹಾಕಿದರು.

  • ಮೋದಿ ಕ್ಯಾಬಿನೆಟ್‍ನಿಂದ ರವಿಶಂಕರ್ ಪ್ರಸಾದ್, ಜಾವಡೇಕರ್ ಔಟ್

    ಮೋದಿ ಕ್ಯಾಬಿನೆಟ್‍ನಿಂದ ರವಿಶಂಕರ್ ಪ್ರಸಾದ್, ಜಾವಡೇಕರ್ ಔಟ್

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಂಪುಟ ಪುನಾರಚನೆಯ ಹಿನ್ನೆಲೆಯಲ್ಲಿ ಘಟಾನುಘಟಿ ಮಂತ್ರಿಗಳು ರಾಜೀನಾಮೆ ನೀಡಿದ್ದಾರೆ.

    ಇಂದು 43  ಸಂಸದರು ಪ್ರತಿಜ್ಞಾ ವಿಧಿ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಯಾರೆಲ್ಲ ರಾಜೀನಾಮೆ ನೀಡಲಿದ್ದಾರೆ ಎಂಬ ಕುತೂಹಲ ಮೂಡಿತ್ತು. ಸಂಜೆಯ ವೇಳೆಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ, ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವ ಪ್ರಕಾಶ್ ಜಾವಡೇಕರ್, ಮಾಹಿತಿ ತಂತ್ರಜ್ಞಾನ ಖಾತೆಯ ಸಚಿವ ರವಿಶಂಕರ್ ಪ್ರಸಾದ್ ರಾಜೀನಾಮೆ ನೀಡಿದ್ದಾರೆ.

    ಕೋವಿಡ್ 19 ಸರಿಯಾಗಿ ಸರಿಯಾಗಿ ನಿಭಾಯಿಸದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಹರ್ಷವರ್ಧನ್, ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯನ್ನು ನೋಡಿಕೊಳ್ಳುತ್ತಿದ್ದ ಸದಾನಂದ ಗೌಡ ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: ಸಾಮಾನ್ಯ ಕಾರ್ಯಕರ್ತನನ್ನು ಪಕ್ಷ ಗುರುತಿಸಿದೆ: ಭಾವುಕರಾದ ನಾರಾಯಣಸ್ವಾಮಿ


    ಸಂಪುಟದಿಂದ ಔಟ್
    ಕ್ಯಾಬಿನೆಟ್ ಸಚಿವರು
    ಹರ್ಷ ವರ್ಧನ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ
    ರವಿಶಂಕರ್ ಪ್ರಸಾದ್ – ಮಾಹಿತಿ ಮತ್ತು ತಂತ್ರಜ್ಞಾನ
    ರಮೇಶ್ ಪೋಖ್ರಿಯಾಲ್ – ಶಿಕ್ಷಣ
    ಪ್ರಕಾಶ್ ಜಾವಡೇಕರ್ – ಪರಿಸರ ಮತ್ತು ಅರಣ್ಯ ಸಚಿವ
    ಸಂತೋಷ್ ಗಂಗ್ವಾರ್ – ಕಾರ್ಮಿಕ
    ಸದಾನಂದ ಗೌಡ – ರಾಸಾಯನಿಕ ಮತ್ತು ರಸಗೊಬ್ಬರ

    ರಾಜ್ಯ ಖಾತೆ ಸಚಿವರು
    ಬಾಬುಲ್ ಸುಪ್ರಿಯೋ – ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ
    ಸಂಜಯ್ ಧೋತ್ರೆ – ಶಿಕ್ಷಣ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ
    ರಾವಾಸಾಹೇಬ್ ಪಾಟೀಲ್ ದನ್ವೆ – ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ
    ರತನ್ ಲಾಲ್ ಕಟಾರಿಯಾ – ಜಲ ಶಕ್ತಿ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
    ಪ್ರತಾಪ್ ಚಂದ್ರ ಸಾರಂಗಿ – ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ
    ದೇಬಶ್ರೀ ಚೌಧುರಿ – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
    ಥಾವರ್ ಚಂದ್ ಗೆಹ್ಲೋಟ್- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ

  • ಸಾಮಾಜಿಕ ಅಂತರ ಇಲ್ಲದೇ ಬರ್ತ್ ಡೇ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಿವಿಎಸ್, ಬೊಮ್ಮಾಯಿ

    ಸಾಮಾಜಿಕ ಅಂತರ ಇಲ್ಲದೇ ಬರ್ತ್ ಡೇ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಿವಿಎಸ್, ಬೊಮ್ಮಾಯಿ

    ಬೆಂಗಳೂರು: ಕೊರೊನಾ ಸೋಂಕು ಕಮ್ಮಿಯಾಗುತ್ತಿರುವ ಬೆನ್ನಲ್ಲೇ ಜನ ಇರಲಿ ಜವಾಬ್ದಾರಿಯುತ ಜನಪ್ರತಿನಿಧಿಗಳು ನಿಯಮಗಳ ಪಾಲನೆ ಗಾಳಿಗೆ ತೂರುತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಬೆಂಗಳೂರಿನ ಹೆಬ್ಬಾಳದಲ್ಲಿ ಸ್ವಪಕ್ಷದ ಮುಖಂಡ ಎಂಸಿಎ ಸಂಸ್ಥೆಯ ಅಧ್ಯಕ್ಷ ಸಿ.ಮುನಿಕೃಷ್ಣ ಅವರ ಬರ್ತಡೇ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಾಮಾಜಿಕ ಅಂತರ ಪಾಲನೆ ಮಾಡದೇ ಭಾಗವಹಿಸಿರುವುದು ಟೀಕೆಗೆ ಗುರಿಯಾಗಿದೆ. ಇದನ್ನು ಓದಿ: ರಾಜೀನಾಮೆಗೆ ಸಿದ್ಧ, ಅವಮಾನ ಮಾಡಿ ಕೆಳಗೆ ಇಳಿಸುತ್ತೇವೆ ಎಂದರೆ ನಾನು ಬಗ್ಗಲ್ಲ

    ಸಿ. ಮುನಿಕೃಷ್ಣ ಅವರು ತಮ್ಮ ಜನ್ಮದಿನದ ಅಂಗವಾಗಿ ಹೆಬ್ಬಾಳದ ಚೋಳನಾಯಕನ ಹಳ್ಳಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಗೃಹ, ಕಾನೂನು ಮತ್ತು ಸಂಸದ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಪೌರ ಕಾರ್ಮಿಕರಿಗೆ ಆಹಾರದ ಕಿಟ್‍ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾದ ಡಿ ವಿ ಸದಾನಂದಗೌಡ, ಸಿ ಮುನಿಕೃಷ್ಣ ಉಪಸ್ಥಿತರಿದ್ದರು. ಇದನ್ನು ಓದಿ:ಯಡಿಯೂರಪ್ಪ, ಬಿಜೆಪಿ ಪಕ್ಷಕ್ಕೆ ನಮ್ಮ ನಿಷ್ಠೆ – ಸುಧಾಕರ್

    ಆದರೆ ಯಾರೊಬ್ಬರೂ ಸಾಮಾಜಿಕ ಅಂತರ ಪಾಲಿಸದೇ ಅಕ್ಕಪಕ್ಕ ಅಂಟಿಕೊಂಡೇ ಇದ್ದರು. ಇದೇನಾ ಜನಪ್ರತಿನಿಧಿಗಳ ನಡವಳಿಕೆ ಅಂತ ಜನ ಪ್ರಶ್ನೆ ಮಾಡುತ್ತಿದ್ದಾರೆ.

  • ಒಂದು ಲಕ್ಷ ದಿನಸಿ ಕಿಟ್ ವಿತರಿಸಿದ ಸಚಿವ ಬೈರತಿ ಬಸವರಾಜ

    ಒಂದು ಲಕ್ಷ ದಿನಸಿ ಕಿಟ್ ವಿತರಿಸಿದ ಸಚಿವ ಬೈರತಿ ಬಸವರಾಜ

    ಬೆಂಗಳೂರು: ಕೊರೊನಾ ಸೊಂಕು ನಿಯಂತ್ರಣ ಸಾಧಿಸಲು ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕೆ.ಆರ್‌.ಪುರ ವಿಧಾನ ಸಭಾ ಕ್ಷೇತ್ರದ ಬಡವರು, ಶ್ರಮಿಕ ವರ್ಗದವರು, ಕೂಲಿ ಕಾರ್ಮಿಕರಿಗೆ ಶಾಸಕರು ಹಾಗೂ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರು ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ಲಕ್ಷ ಕುಟುಂಬಗಳಿಗೆ ಆಹಾರ ಪದಾರ್ಥಗಳ ದಿನಸಿ ಕಿಟ್ ವಿತರಿಸಿದರು.

    ಕೆ.ಆರ್.ಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೊತ್ತನೂರಿನ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ದಿನಸಿ ವಿತರಿಸಿ ಮಾತನಾಡಿದ ಬಸವರಾಜ ಅವರು ಇನ್ನೂ ಅಗತ್ಯ ಬಿದ್ದಲ್ಲಿ ಮತ್ತೆ ಬಡಜನರಿಗೆ ಕಿಟ್‌ ನೀಡುವುದಾಗಿ ಭರವಸೆ ನೀಡಿದರು. ಕ್ಷೇತ್ರದ ಎಲ್ಲರಿಗೂ ಕೊರೊನಾ ನಿಯಂತ್ರಣ ಲಸಿಕೆಯನ್ನು ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಅದನ್ನು ಹಂತ ಹಂತವಾಗಿ ನೀಡಲಾಗುತ್ತದೆ ಎಂದರು.

    ಕೃಷ್ಣರಾಜಪುರ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಗುರಿ ಹೊಂದಿದೆ. 200 ಹಾಸಿಗೆಗಳ ಆಸ್ಪತ್ರೆಗೆ ಉನ್ನತೀಕರಿಸಲು 13 ಕೋಟಿ ರೂಪಾಯಿಗಳು ವೆಚ್ಚವಾಗಲಿದೆ. ಐಟಿಐ ಆಸ್ಪತ್ರೆಯಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕೇಂದ್ರ ಸರ್ಕಾರ ಅದಕ್ಕೆ ಒಪ್ಪಿಗೆ ನೀಡಿದೆ ಎಂದು ಹೇಳಿದರು.

    ಡಿವಿಎಸ್‌ ಭಾಗಿ: ಈ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ದೇಶದ 130 ಕೋಟಿ ಜನರಿಗೂ ಕೋವಿಡ್ ನಿಯಂತ್ರಣ ಲಸಿಕೆಯನ್ನು ನೀಡಲಾಗುವುದು ಎಂದು ಕೇಂದ್ರ ‌ ರಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಡಿ.ವಿ ಸದಾನಂದ ಗೌಡರು ಹೇಳಿದರು. ಜೂನ್ ಅಂತ್ಯದ ವೇಳೆಗೆ ರಾಜ್ಯಕ್ಕೆ ಕೇಂದ್ರದಿಂದ 50 ಲಕ್ಷ ಲಸಿಕೆ ನೀಡಲಾಗುತ್ತದೆ, ರಾಜ್ಯ ಸರ್ಕಾರ ಕೂಡ 15 ಲಕ್ಷ ಲಸಿಕೆಯನ್ನು ಖರೀದಿಸಲು ಮುಂದಾಗಿದೆ. ಈ ತಿಂಗಳಲ್ಲಿ ಒಟ್ಟು 65 ಲಕ್ಷ ದಷ್ಟು ಲಸಿಕೆ ರಾಜ್ಯಕ್ಕೆ ಲಭ್ಯವಾಗಲಿದೆ ಎಂದರು.

    ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಜನರಿಗೆ ಒಂದು ಲಕ್ಷ ಆಹಾರ ಪದಾರ್ಥಗಳನ್ನು ಬೈರತಿ ಬಸವರಾಜ ಅವರು ವಿತರಣೆ ಮಾಡುತ್ತಿರುವುದು ನಿಜವಾಗಿಯೂ ಒಂದು ಪುಣ್ಯದ ಕೆಲಸ ಎಂದರು.

    ಕ್ಷೇತ್ರದ ಜನ ಮತ ಹಾಕುವ ಮೂಲಕ ಅವರಿಗೆ ಆಶೀರ್ವಾದ ಮಾಡಿದ್ದೀರಿ. ಅವರು ನಿಮಗೆ ಇಂತಹ ಸಂದರ್ಭದಲ್ಲಿ ಸಹಾಯಕ್ಕೆ ಬಂದಿದ್ದಾರೆ. ಸದಾ ಜನರ ನಡುವೆ ಇರುವ ಬಸವರಾಜ ಅಂತಹವರು ಸಮಾಜಕ್ಕೆ ಅವಶ್ಯಕತೆ ಇದೆ. ಅವರಿಗೆ ತಮ್ಮ ಬೆಂಬಲ ಸದಾ ಇರಲಿ ಎಂದು ಅಶಿಸುತ್ತೇನೆ ಎಂದರು.

    ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಒಂದು ವಿಧಾನಸಭಾ ಕ್ಷೇತ್ರವಾಗಿದೆ. ಇದನ್ನು ಸಚಿವರಾದ ಬಸವರಾಜ ಅವರು ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಈ ಭಾಗದ ಲೋಕಸಭಾ ಸದಸ್ಯನಾಗಿ ಮತ್ತು ಕೇಂದ್ರ ಸಚಿವನಾಗಿ ನನ್ನ ಬೆಂಬಲ, ಸಹಕಾರ ಈ ಕ್ಷೇತ್ರಕ್ಕೆ ಯಾವಾಗಲೂ ಇರುತ್ತದೆ ಎಂದು ಹೇಳಿದರು.

    ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೊರೊನಾ ನಿಯಂತ್ರಣ ಕುರಿತು ಸಭೆ ಕರೆದಾಗಲೆಲ್ಲ ‌ನಾನು ಕೆ.ಆರ್.ಪುರ ‌ಕ್ಷೇತ್ರದ ಬಗ್ಗೆ ಮತ್ತು ಬೈರತಿ ಬಸವರಾಜ ಅವರು ಕೈಗೊಂಡಿರುವ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡುತ್ತೇನೆ. ಹೀಗಾಗಿ ಬಸವರಾಜ ಅವರ ಕಾರ್ಯವೈಖರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ತಿಳಿದಿದೆ ಎಂದರು.

  • ರಾಜ್ಯದಲ್ಲಿ ಕೋವಿಡ್ 3ನೇ ಅಲೆಯನ್ನು ಎದುರಿಸಲು ಜಾಗೃತರಾಗಿದ್ದೇವೆ-ಸದಾನಂದ ಗೌಡ

    ರಾಜ್ಯದಲ್ಲಿ ಕೋವಿಡ್ 3ನೇ ಅಲೆಯನ್ನು ಎದುರಿಸಲು ಜಾಗೃತರಾಗಿದ್ದೇವೆ-ಸದಾನಂದ ಗೌಡ

    ಬೆಂಗಳೂರು: ಮಾರಣಾಂತಿಕ ಕೊರೊನ ಎರಡನೇ ಅಲೆಯ ಗಂಭೀರತೆಯ ನಂತರ ಮೂರನೇ ಅಲೆಯನ್ನು ಎದುರಿಸಲು ಜಾಗೃತರಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ತಿಳಿಸಿದ್ದಾರೆ.

    ಕೋವಿಡ್ ಸೋಂಕು ನಿಯಂತ್ರಣ ಸಂಬಂಧಿಸಿದಂತೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆರೋಗ್ಯ ಕೇಂದ್ರಗಳು, ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ, ಅರೋಗ್ಯ ಸಹಾಯವಾಣಿ ಉದ್ಘಾಟಿಸಿ ಅಂಬುಲೆನ್ಸ್ ಹಾಗೂ ಔಷಧಿ ಸಿಂಪಡಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಡಿವಿಎಸ್ ಮಾತನಾಡಿದರು.

    ಇನ್ನು ಮೂರ್ನಾಲ್ಕು ದಿನಗಳಲ್ಲಿ ಅವಶ್ಯಕವಾದಷ್ಟು ಕೋವಿಡ್ ವ್ಯಾಕ್ಸಿನ್ ಗಳನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಒದಗಿಸಲಿದೆ. ಜನತೆಗೆ ಯಾವುದೇ ರೀತಿಯ ಆತಂಕ ಬೇಡ. ಪ್ರಾರಂಭದಲ್ಲಿ ಇದ್ದ ಆತಂಕಗಳಿಲ್ಲ, ಚಿಕಿತ್ಸೆ, ಆಮ್ಲಜನಕ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ರಾಜ್ಯಗಳಿಗೆ ಕೇಂದ್ರಸರ್ಕಾರ ಒದಗಿಸಲಿದೆ. ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಗಳನ್ನು ಕೊಡಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಕೋವಿಡ್ ಸೋಂಕಿತ ಮಕ್ಕಳ ಶುಶ್ರೂಷೆಗಾಗಿ ವಿಶೇಷ ಕೇರ್ ಸೆಂಟರ್ ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    ನಂತರ ಮಾತನಾಡಿದ ಮಾಜಿ ಶಾಸಕ ಎಸ್.ಮುನಿರಾಜು ಕ್ಷೇತ್ರದ ಅಧಿಕಾರಿಗಳು ಮತ್ತು ಆರೋಗ್ಯ ಕೇಂದ್ರಗಳ ಸಂಪರ್ಕದಲ್ಲಿ ಬಿಜೆಪಿ ಕಾರ್ಯಕರ್ತರು ಕೋವಿಡ್ ವಾರಿಯರ್ಸ್ ಗಳಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಅದಕ್ಕೆ ಪೂರಕವಾಗಿ 3 ಅಂಬುಲೆನ್ಸ್, 6 ಔಷಧಿ ಸಿಂಪಡಣೆ ಟ್ರ್ಯಾಕ್ಟರ್ ಗಳನ್ನು ನೀಡಿದ್ದೇವೆ, ಪ್ರತಿ ವಾರ್ಡ್‍ಗಳಲ್ಲಿ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಸ್ಯಾನಿಟೇಷನ್ ಮಾಡಲಾಗುವುದು. ಗುರುಪ್ರಸಾದ್ ನೇತೃತ್ವದಲ್ಲಿ ಕೊರೊನಾ ಸೋಂಕಿತರಿಗೆ ಪ್ರತಿದಿನ ತಿಂಡಿ, ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಕೋವಿಡ್ ಸೋಂಕಿತರಿಗೆ ತುರ್ತಾಗಿ ಆಕ್ಸಿಜನ್ ಸೌಲಭ್ಯಗಳ ಅವಶ್ಯಕತೆ ಇದ್ದರೆ ತಾತ್ಕಾಲಿಕ ಪರಿಹಾರದೊಂದಿಗೆ ಅಂಥವರನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸವನ್ನು ಮಾಡಲಾಗುತ್ತದೆ. ಈ ಸಂಬಂಧ ಪ್ರತಿ ವಾರ್ಡ್ ಗಳಲ್ಲಿ ನಮ್ಮ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

    ಬಳಿಕ ಮಾಜಿ ಶಾಸಕ ಬಿಜೆಪಿ ಮುಖಂಡ ಎಸ್ ಮುನಿರಾಜು ಹಾಗೂ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎನ್.ಲೋಕೇಶ್ ಅವರು ದಾಸರಹಳ್ಳಿ ಕ್ಷೇತ್ರದ ನಾಗರಿಕರ ಸೇವೆಗಾಗಿ ನೀಡಿರುವ 3 ಆಂಬುಲೆನ್ಸ್, 6 ಸ್ಯಾನಿಟೈಸೇಷನ್ ಟ್ರ್ಯಾಕ್ಟರ್ ಗಳನ್ನು ಸದಾನಂದಗೌಡ ಸಾರ್ವಜನಿಕ ಸೇವೆಗೆ ಸಮರ್ಪಣೆಗೊಳಿಸಿದರು.