Tag: ಸದಸ್ಯೆ

  • ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ಥಾನ ಸಿಗದಿದ್ದಕ್ಕೆ ವಿಷ ಕುಡಿದ ಮಹಿಳಾ ಸದಸ್ಯೆ

    ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ಥಾನ ಸಿಗದಿದ್ದಕ್ಕೆ ವಿಷ ಕುಡಿದ ಮಹಿಳಾ ಸದಸ್ಯೆ

    ಶಿವಮೊಗ್ಗ: ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಗ್ರಾಮ ಪಂಚಾಯತ್ ಮಹಿಳಾ ಸದಸ್ಯೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ದೊಣಬಘಟ್ಟದಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಸದಸ್ಯೆಯನ್ನು ಕೌಸರ್ ಭಾನು(50) ಎಂದು ಗುರುತಿಸಲಾಗಿದೆ.

    ದೊಣಬಘಟ್ಟ ಗ್ರಾಮ ಪಂಚಾಯತ್ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆ ಪೊಲೀಸ್ ಬಂದೋಬಸ್ತ್ ನಲ್ಲಿ ನಡೆದಿದ್ದು ಡ್ರಾಮಾ, ಹೈಡ್ರಾಮಾಕ್ಕೆ ಎಡೆಮಾಡಿಕೊಟ್ಟಿದೆ. ಅಧ್ಯಕ್ಷರಾಗಿ ಖಲೀಲ್, ಉಪಾಧ್ಯಕ್ಷರಾಗಿ ಮಾಲಮ್ಮ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೌಸರ್ ಭಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನೂ ಓದಿ: ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಿದ ಫೋಟೋಗೆ 500 ರೂ. ಬಹುಮಾನ: ನಿತಿನ್ ಗಡ್ಕರಿ

    ಆತ್ಮಹತ್ಯೆಗೆ ಯತ್ನಿಸಿದ್ದೇಕೆ?
    2021 ಫೆಬ್ರವರಿಯಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆದಿತ್ತು. ಕೌಸರ್ ಭಾನು ಸಹ ದೊಣಬಘಟ್ಟದ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಈ ವೇಳೆ ಖಲೀಲ್ ತಾನು 14 ತಿಂಗಳು ಅಧ್ಯಕ್ಷನಾಗುತ್ತೇನೆ, ನೀವು 14 ತಿಂಗಳ ಬಳಿಕ ಅಧ್ಯಕ್ಷರಾಗಿ ಎಂದು ಕೌಸರ್ ಭಾನು ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ. ಇದನ್ನೂ ಓದಿ: ಆ್ಯಸಿಡ್ ಸಂತ್ರಸ್ತೆಯ ಸರ್ಜರಿಗೆ ನೆರವಾದ ಪೊಲೀಸರು

    ಖಲೀಲ್ ಮಾತಿಗೆ ತಕ್ಕಂತೆ 14 ತಿಂಗಳು ಅವಧಿ ಮುಗಿಸಿ ರಾಜೀನಾಮೆ ನೀಡಿದ್ದಾರೆ. ಒಡಂಬಡಿಕೆಯ ಪ್ರಕಾರ ಕೌಸರ್ ಭಾನು ಅಧ್ಯಕ್ಷರಾಗಬೇಕಿತ್ತು ಎಂಬುದು ಅವರ ಬೆಂಬಲಿಗರ ವಾದ. ಆದರೆ ಇಂದು ಗ್ರಾಪಂ ಅಧ್ಯಕ್ಷರಾಗಿ ಖಲೀಮ್ ಆಯ್ಕೆಯಾಗಿದ್ದಾರೆ.

    ಖಲೀಲ್ ಮತ್ತು ಎಲ್ಲಮ್ಮ ನನ್ನ ಬಳಿ ಹಣ ಪಡೆದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಬೇಕಿದ್ದ ನನಗೆ ಅಧ್ಯಕ್ಷ ಸ್ಥಾನ ತಪ್ಪಿಸಿದ್ದಾರೆ ಎಂದು ಕೌಸರ್ ಭಾನು ಆರೋಪಿಸಿದ್ದಾರೆ. ವಿಷ ಸೇವಿಸಿದ್ದ ಕೌಸರ್ ಭಾನು ಅವರನ್ನು ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    Live Tv

  • ಗ್ರಾಮ ಪಂಚಾಯ್ತಿ ಸದಸ್ಯೆ ನೇತೃತ್ವದಲ್ಲೇ ಬಾಲ್ಯ ವಿವಾಹ – ಪ್ರಕರಣ ತಡವಾಗಿ ಬೆಳಕಿಗೆ

    ಗ್ರಾಮ ಪಂಚಾಯ್ತಿ ಸದಸ್ಯೆ ನೇತೃತ್ವದಲ್ಲೇ ಬಾಲ್ಯ ವಿವಾಹ – ಪ್ರಕರಣ ತಡವಾಗಿ ಬೆಳಕಿಗೆ

    ಶಿವಮೊಗ್ಗ: 33 ವರ್ಷದ ವ್ಯಕ್ತಿ 16 ವರ್ಷದ ಅಪ್ರಾಪ್ತೆಯೊಂದಿಗೆ ವಿವಾಹವಾಗಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಯಲ್ಲದಕೋಣೆ ಗ್ರಾಮದಲ್ಲಿ ನಡೆದಿದ್ದು, ಬಾಲ್ಯ ವಿವಾಹ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಫೆ.27 ರಂದು ಯಲ್ಲದಕೋಣೆ ಗ್ರಾಮದ ರಮೇಶ್ (33) ಹಾಗೂ ಬಳ್ಳಾರಿ ಜಿಲ್ಲೆಯ ಕೆ.ಕರ್ನಾರ್ ಹಟ್ಟಿಯ 16 ವರ್ಷದ ಬಾಲಕಿ ಜೊತೆ ವಿವಾಹ ನಡೆದಿದೆ. ವಧು ಅಪ್ರಾಪ್ತೆ ಎಂದು ತಿಳಿದಿದ್ದರೂ, ಗ್ರಾಮದ ರಾಘವೇಂದ್ರ, ಪ್ರವೀಣ್, ಅನಿಲ್, ಶ್ರೀಧರ್ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯೆ ಶ್ವೇತಾ ಶಿವಾನಂದ್ ನೇತೃತ್ವದಲ್ಲಿ ಬಾಲ್ಯ ವಿವಾಹ ನೆರವೇರಿದೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ನೇಪಾಳದ ಪ್ರಧಾನಿಗೆ ವಿಶಿಷ್ಟ ಉಡುಗೊರೆ ನೀಡಿದ ಪ್ರಧಾನಿ ಮೋದಿ

    POLICE JEEP

    ಇದೀಗ ಬಾಲ್ಯ ವಿವಾಹ ಪ್ರಕರಣ ಬಹಿರಂಗವಾಗಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಕುರಿ, ಕೋಳಿ ಪ್ರಜ್ಞೆ ತಪ್ಪಿಸುವುದು ಹೇಗೆ: ಸ್ಟನ್ನಿಂಗ್ ನಿಯಮಕ್ಕೆ ಡಿಕೆಶಿ ಕಿಡಿ

  • ಬಿಜೆಪಿ ಶಾಸಕ, ಬೆಂಬಲಿಗರ ತಳ್ಳಾಟ ಪ್ರಕರಣ- ಪುರಸಭೆ ಸದಸ್ಯೆಗೆ ಗರ್ಭಪಾತ

    ಬಿಜೆಪಿ ಶಾಸಕ, ಬೆಂಬಲಿಗರ ತಳ್ಳಾಟ ಪ್ರಕರಣ- ಪುರಸಭೆ ಸದಸ್ಯೆಗೆ ಗರ್ಭಪಾತ

    ಬಾಗಲಕೋಟೆ: ಮಹಲಿಂಗಪುರ ಪುರಸಭೆ ಸದಸ್ಯೆಯರ ತಳ್ಳಾಟ ನೂಕಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸದಸ್ಯೆಗೆ ಗರ್ಭಪಾತವಾಗಿದೆ.

    ಚಾಂದಿನಿ ನಾಯಕ್ ಗರ್ಭಪಾತವಾದ ಪುರಸಭೆ ಸದಸ್ಯೆ. ಈಕೆಗೆ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲೂಕಿನ ಮಹಲಿಂಗಪುರ ಸರ್ಕಾರಿ ಆಸ್ಪತ್ರೆಯಲ್ಲಿ ಅಬಾರ್ಷನ್ ಆಗಿದೆ. ನವೆಂಬರ್ 9 ರಂದು ನಡೆದಿದ್ದ ಶಾಸಕರು ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ತಳ್ಳಾಟ ನೂಕಾಟದಿಂದ ಕೆಳಕ್ಕೆ ಬಿದ್ದಿದ್ದ ಚಾಂದಿನಿ ನಾಯಕ್ ಅವರ ಹೊಟ್ಟೆಗೆ ಏಟು ಬಿದ್ದಿತ್ತು. ಆಗ ಚಾಂದಿನಿ ಅವರು ಮೂರು ತಿಂಗಳು ಗರ್ಭಿಣಿಯಾಗಿದ್ದರು. ಇದೀಗ ಅವರಿಗೆ ಗರ್ಭಪಾತವಾಗಿದೆ. ಇದನ್ನೂ ಓದಿ: ಪುರಸಭೆಯ ಮಹಿಳಾ ಸದಸ್ಯೆಯನ್ನು ಎಳೆದಾಡಿ ಬಿಜೆಪಿ ಶಾಸಕ, ಬೆಂಬಲಿಗರ ಅಸಭ್ಯ ವರ್ತನೆ

    ನಡೆದಿದ್ದೇನು?:
    ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆ ಸಂದರ್ಭದಲ್ಲಿ ಮಹಿಳೆಯೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ. ಚುನಾವಣೆಯಲ್ಲಿ ಮತ ಚಲಾಯಿಸಲು ಪುರಸಭೆ ಸದಸ್ಯೆ ಸವಿತಾ ಹುರಕಡ್ಲಿ ಅವರು ತೆರಳುತ್ತಿದ್ದರು. ಈ ವೇಳೆ ಸವಿತಾ ಅವರು ಕಾಂಗ್ರೆಸ್ ಪರ ಮತ ಚಲಾಯಿಸಲು ತೆರಳುತ್ತಿದ್ದಾರೆ ಎಂಬ ಮಾಹಿತಿ ಪಡೆದ ಶಾಸಕರು, ಸದಸ್ಯೆಯನ್ನು ಎಳೆದಾಡಿ ಗೂಂಡಾ ವರ್ತನೆ ತೋರಿದ್ದರು. ಶಾಸಕರು ದೌರ್ಜನ್ಯ ನಡೆಸಿರುವ ವಿಡಿಯೋ ವೈರಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯನ್ನು ಎಳೆದಾಡಿ ಮೈ, ಕೈ ಮುಟ್ಟಿ ಅಮಾನವೀವಾಗಿ ವರ್ತನೆ ಮಾಡಿರುವುದು ವಿಡಿಯೋದಲ್ಲಿ ಕಾಣಬಹುದಾಗಿತ್ತು. ಪೊಲೀಸರ ಸಮ್ಮುಖದಲ್ಲಿಯೇ ಇಂತಹ ಅಮಾನವೀಯ ಘಟನೆ ನಡೆದಿದ್ದು, ಬಿಜೆಪಿ ಸದಸ್ಯರ ಸಂಖ್ಯಾಬಲ ಹೆಚ್ಚಿಸಲು ಮಹಿಳಾ ಪುರಸಭೆ ಸದಸ್ಯೆಯೊಂದಿಗೆ ಅಮಾನವೀಯತೆಯಿಂದ ವರ್ತನೆ ಮಾಡಲಾಗಿತ್ತು. ಶಾಸಕರ ಅಮಾನವೀಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದನ್ನೂ ಓದಿ: ನಾನು ಮಹಿಳೆಯ ರಕ್ಷಣೆಗೆ ಮುಂದಾಗಿದ್ದೆ- ಅಸಭ್ಯ ವರ್ತನೆಗೆ ಸಿದ್ದು ಸವದಿ ಸಮರ್ಥನೆ

    ಘಟನೆ ಸಂಬಂಧ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದ ಚಾಂದಿನಿ ನಾಯ್ಕ್, ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ತೆರಳಿದ್ದೆವು. ಈ ವೇಳೆ ನಮಗೆ ಮತ ಚಲಾಯಿಸಲು ಅವಕಾಶ ನೀಡದೆ ನಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಘಟನೆ ನಡೆಯುವ ಮುನ್ನವೇ ನಮಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದೆವು. ಆದರೆ ಅವರು ಯಾವುದೇ ರಕ್ಷಣೆ ನೀಡಲು ಮುಂದಾಗಲಿಲ್ಲ. ಶಾಸಕರು ಹಾಗೂ ಅವರ ಬೆಂಬಲಿಗರು ನಮ್ಮನ್ನು ಹಿಡಿದು ಎಳೆದಾಡಿ, ಮೆಟ್ಟಿಲು ಮೇಲಿನಿಂದ ತಳ್ಳಿ ತುಳಿದಾಡಿದ್ದರು. ಘಟನೆಯಿಂದ ಮಾಸಿಕವಾಗಿ, ದೈಹಿಕವಾಗಿ ನೋವಾಗಿದ್ದು, ನಮ್ಮ ಮೇಲೆ ನಡೆದಿರುವ ದೌರ್ಜನ್ಯಕ್ಕೆ ನ್ಯಾಯ ಬೇಕಿದೆ ಎಂದು ಅಲವತ್ತುಕೊಂಡಿದ್ದರು. ಇದನ್ನೂ ಓದಿ: ಹಿಡಿದು, ಎಳೆದಾಡಿ, ಮೆಟ್ಟಿಲಿನಿಂದ ತಳ್ಳಿದ್ರು- ಪುರಸಭೆ ಸದಸ್ಯೆ ಕಣ್ಣೀರು

  • ಅಧ್ಯಕ್ಷಗಾದಿಗಾಗಿ ಪುರಸಭೆ ಸದಸ್ಯೆ ಕಿಡ್ನಾಪ್

    ಅಧ್ಯಕ್ಷಗಾದಿಗಾಗಿ ಪುರಸಭೆ ಸದಸ್ಯೆ ಕಿಡ್ನಾಪ್

    ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆದರೆ ಅಧ್ಯಕ್ಷ ಸ್ಥಾನಕ್ಕಾಗಿ ಪುರಸಭೆ ಸದಸ್ಯೆಯನ್ನು ಅಪಹರಣ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

    ಮುಗಳಖೋಡ ಪುರಸಭಾ ಸದಸ್ಯೆ ಭಾಗವ್ವ ಶೇಗುಣಸಿ ಅಪಹರಣಕ್ಕೊಳಗಾದ ಮಹಿಳೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಶಿವಾನಂದ್ ಗೋಕಾಕ್ ಎಂಬವರು ನಮ್ಮ ತಾಯಿಯನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಭಾಗವ್ವ ಅವರ ಪುತ್ರ ಅಪ್ಪಾಸಾಬ ಶೇಗುಣಸಿ ಆರೋಪಿಸಿದ್ದಾರೆ. ಭಾಗವ್ವನ ಕುಟುಂಬಸ್ಥರೆಲ್ಲ ಶಿವಾನಂದ್ ಅವರ ಮನೆಮುಂದೆ ಧರಣಿ ಕುಳಿತಿದ್ದಾರೆ.

    ಮುಗಳಖೋಡ ಪುರಸಭಾ ಸದಸ್ಯೆ ಭಾಗವ್ವ ಶೇಗುಣಸಿ ಮತ್ತು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶಿವಾನಂದ್ ಗೋಕಾಕ್ ಇಬ್ಬರೂ ಬಿಜೆಪಿ ಪಕ್ಷ ಸದಸ್ಯರೇ ಆಗಿದ್ದಾರೆ. ಭಾಗವ್ವ ಶೇಗುಣಸಿ ಕಾಂಗ್ರೆಸ್ ಪರ ಮತ ಚಲಾಯಿಸುವ ಒಲವು ತೋರಿದ್ದಾರೆ ಎಂದು ಅನುಮಾನ ಪಟ್ಟು ಶಿವಾನಂದ್ ಗೋಕಾಕ್ ಕಿಡ್ನಾಪ್ ಮಾಡಿದ್ದಾರೆ ಎನ್ನಲಾಗಿದೆ. ಈಗ ಸದ್ಯ ಶಿವಾನಂದ್ ಗೋಕಾಕ್ ಅವರ ಮನೆ ಮುಂದೆ ನಮ್ಮ ತಾಯಿಯನ್ನ ಮರಳಿ ತನ್ನಿ ಎಂದು ಭಾಗವ್ವನ ಕುಟುಂಬಸ್ಥರ ಧರಣಿ ಮಾಡುತ್ತಿದ್ದಾರೆ.

  • ಹಣ ಕೇಳಲು ಬಂದ ವ್ಯಾಪಾರಿಯನ್ನ ಚಪ್ಪಲಿಯಿಂದ ಹೊಡೆದ ಪುರಸಭೆ ಸದಸ್ಯೆ

    ಹಣ ಕೇಳಲು ಬಂದ ವ್ಯಾಪಾರಿಯನ್ನ ಚಪ್ಪಲಿಯಿಂದ ಹೊಡೆದ ಪುರಸಭೆ ಸದಸ್ಯೆ

    ಕೊಪ್ಪಳ: ತನ್ನ ಪಾಲಿನ ಹಣ ಕೇಳಲು ಬಂದ ಭತ್ತದ ವ್ಯಾಪಾರಿಯನ್ನು ಪುರಸಭೆ ಸದಸ್ಯೆ ಹಾಗೂ ಅವರ ಸಂಬಂಧಿಕರು ಚಪ್ಪಲಿಯಿಂದ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಜಿಲ್ಲೆಯ ಕಾರಟಗಿಯಲ್ಲಿ ನಡೆದಿದೆ.

    ಕಾರಟಗಿ ಗ್ರಾಮದ ಅಮರಗುಂಡಪ್ಪ ಹಲ್ಲೆಗೊಳಗಾದ ವ್ಯಾಪಾರಿ. ಪುರಸಭೆ ಸದಸ್ಯೆ ಅನುಷಾ ಹಲ್ಲೆ ಮಾಡಿದವರು. ಅನುಷಾ ಪತಿ ಸುರೇಶ್ ಕುಳಗಿ ಹಾಗೂ ಅಮರಗುಂಡಪ್ಪ ಇಬ್ಬರು ಸೇರಿ ಭತ್ತದ ವ್ಯಾಪಾರ ಮಾಡುತ್ತಿದ್ದರು. ಇಬ್ಬರ ನಡುವೆ ವ್ಯವಹಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ತನಗೆ ಕೊಡಬೇಕಾದ ಹಣವನ್ನು ನೀಡಬೇಕು ಎಂದು ಅಮರಗುಂಡಪ್ಪ ಪಟ್ಟು ಹಿಡಿದು ಅನುಷಾ ಅವರ ಮನೆ ಮುಂದೆ ನಿಂತಿದ್ದರು. ಇದರಿಂದ ಅಮರಗುಂಡಪ್ಪ ಹಾಗೂ ಅನುಷಾ ಕುಟುಂಬದವರ ಮಧ್ಯೆ ಮಾತಿನ ಚಕಮಕಿ ಉಂಟಾಗಿದೆ. ಹೀಗಾಗಿ ಅನುಷಾ ಹಾಗೂ ಅವರ ಸಂಬಂಧಿಕರು ಸೇರಿ ಅಮರಗುಂಡಪ್ಪರಿಗೆ ಮನ ಬಂದಂತೆ ಥಳಿಸಿದ್ದಾರೆ.

    ಕಳೆದ ಸುಮಾರು ದಿನಗಳಿಂದ ಅಮರಗುಂಡಪ್ಪ ಹಾಗೂ ಸುರೇಶ್ ನಡುವೆ ಅನೇಕ ಬಾರಿ ಗಲಾಟೆಯಾಗಿತ್ತು. ಆದರೆ ಇಂದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಘಟನೆಯ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಗ್ರಾಮದಲ್ಲಿನ ಜಗಳದಿಂದ ಬೇಸತ್ತ ಪಂಚಾಯತಿ ಸದಸ್ಯೆ ಆತ್ಮಹತ್ಯೆಗೆ ಯತ್ನ

    ಗ್ರಾಮದಲ್ಲಿನ ಜಗಳದಿಂದ ಬೇಸತ್ತ ಪಂಚಾಯತಿ ಸದಸ್ಯೆ ಆತ್ಮಹತ್ಯೆಗೆ ಯತ್ನ

    ಬೆಂಗಳೂರು: ಗ್ರಾಮದಲ್ಲಿನ ಜಗಳದಿಂದ ಮನನೊಂದ ಗ್ರಾಮ ಪಂಚಾಯತಿ ಸದಸ್ಯೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಲಕ್ಕೇನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಪಂಚಾಯತಿ ಸದಸ್ಯೆ ಲಕ್ಷ್ಮಿ ರೇವಣ್ಣ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಜಮೀನಿನ ವಿಚಾರದಲ್ಲಿ ಗ್ರಾಮದಲ್ಲಿ ಹಲವು ದಿನಗಳಿಂದ ಜಗಳವಾಗುತ್ತಿದ್ದು, ಶುಕ್ರವಾರ ನಡೆದ ಜಗಳದಿಂದ ಮನನೊಂದ ಲಕ್ಷ್ಮಿ ರೇವಣ್ಣ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇನ್ನೂ ಚಿಕಿತ್ಸೆಗಾಗಿ ನೆಲಮಂಗಲ ಪಟ್ಟಣದ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಘಟನೆಗೆ ಸಂಬಂಧಿಸಿದಂತೆ ಕುದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಬಿಬಿಎಂಪಿ ಕಾಂಗ್ರೆಸ್ ಪಾಲಿಕೆ ಸದಸ್ಯೆ ತಿರುಪತಿಯಲ್ಲಿ ನಿಧನ

    ಬಿಬಿಎಂಪಿ ಕಾಂಗ್ರೆಸ್ ಪಾಲಿಕೆ ಸದಸ್ಯೆ ತಿರುಪತಿಯಲ್ಲಿ ನಿಧನ

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯೆಯೊಬ್ಬರು ಹೃದಯಾಘಾತವಾಗಿ ನಿಧನರಾಗಿದ್ದಾರೆ.

    ವಾರ್ಡ್ 121 ಬಿನ್ನಿಪೇಟೆಯ ಮಹದೇವಮ್ಮ ನಾಗರಾಜ್ ಮೃತಪಟ್ಟ ಸದಸ್ಯೆಯಾಗಿದ್ದು, ಇವರು ಕುಟುಂಬ ಸಮೇತ ಪ್ರಸಿದ್ಧ ಕ್ಷೇತ್ರ ತಿರುಪತಿಗೆ ಹೋಗಿದ್ದರು. ಇಂದು ಮುಂಜಾನೆ ದರ್ಶನ ಮುಗಿಸಿ ಹಿಂದಿರುಗುವಾಗ ಮಾರ್ಗ ಮಧ್ಯದಲ್ಲಿ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.

    ಮಹದೇವಮ್ಮ ಅವರ ಮೃತದೇಹವನ್ನು ತಿರುಪತಿಯಿಂದ ಬೆಂಗಳೂರಿಗೆ ರವಾನಿಸಲಾಗಿದೆ. ಬಿಬಿಎಂಪಿ ಮೇಯರ್, ಆಯುಕ್ತರು, ಪಾಲಿಕೆ ಸದಸ್ಯರು ಮಹದೇವಮ್ಮ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.