Tag: ಸದಸ್ಯತ್ವ

  • ಕಾಂಗ್ರೆಸ್ ಪಕ್ಷದ ಸದಸ್ಯರಾಗುವುದೇ ಒಂದು ಅದೃಷ್ಟ, ತ್ರಿವರ್ಣ ಧ್ವಜವನ್ನು ಧರಿಸುವ ಭಾಗ್ಯ ನಿಮ್ಮದಾಗಿದೆ: ಡಿಕೆಶಿ

    ಕಾಂಗ್ರೆಸ್ ಪಕ್ಷದ ಸದಸ್ಯರಾಗುವುದೇ ಒಂದು ಅದೃಷ್ಟ, ತ್ರಿವರ್ಣ ಧ್ವಜವನ್ನು ಧರಿಸುವ ಭಾಗ್ಯ ನಿಮ್ಮದಾಗಿದೆ: ಡಿಕೆಶಿ

    ಬೆಂಗಳೂರು: ಕಾಂಗ್ರೆಸ್ ಪಕ್ಷದ ಸದಸ್ಯರಾಗುವುದೇ ಒಂದು ಅದೃಷ್ಟ. ಈ ತ್ರಿವರ್ಣ ಧ್ವಜವನ್ನು ಧರಿಸುವ ಭಾಗ್ಯ ಬಿಜೆಪಿ ಹಾಗೂ ಜೆಡಿಎಸ್ ನವರಿಗೆ ಸಿಗುತ್ತದೆಯೇ? ಇಲ್ಲ. ಹೀಗಾಗಿ ಈಗ ಸುವರ್ಣ ಅವಕಾಶ ನಿಮಗೆ ಸಿಕ್ಕಿದೆ ಇದನ್ನು ಬಳಸಿಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.

    ಸರ್ವಜ್ಞ ನಗರದ ಡಿಜಿಟಲ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಇಂದು ಇಲ್ಲಿಗೆ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ನೋಂದಾಣಿದಾರರಾಗಿ ಆಯ್ಕೆಯಾಗಿರುವವರಿಗೆ ತರಬೇತಿ ನೀಡಲು ಬಂದಿದ್ದೇನೆ. ನನ್ನ ಮಾಹಿತಿ ಪ್ರಕಾರ 330 ಮಂದಿ ಮುಖ್ಯ ನೋಂದಣಿದಾರರು ಇದ್ದಾರೆ. ಅಲ್ಲಿಗೆ 660 ಮಂದಿ ಬೂತ್ ಮಟ್ಟದ ನೋಂದಣಿದಾರರು ನೇಮಕ ಆಗಿರಬೇಕು. ನಾನು ಕಳೆದ ವಾರ ತುಮಕೂರಿಗೆ ಹೋಗಿದ್ದಾಗ ಒಂದೊಂದು ಕ್ಷೇತ್ರದಲ್ಲಿ 65 ರಿಂದ 75 ಸಾವಿರ ಸದಸ್ಯತ್ವ ಮಾಡುವುದಾಗಿ ಮಾತು ಕೊಟ್ಟಿದ್ದಾರೆ ಎಂದರು. ಇದನ್ನೂ ಓದಿ: ಮುಸ್ಲಿಂ ಎಂಬ ಕಾರಣಕ್ಕೆ ಈ ಸರ್ಕಾರ ಒಂದು ನಯಾ ಪೈಸೆ ಕೊಟ್ಟಿಲ್ಲ: ಸಿಎಂ ಇಬ್ರಾಹಿಂ

    ನಾವು ಪಾದಯಾತ್ರೆ ಮುಗಿಸಿ ಬಂದಿದ್ದೇವೆ. ನಿಮ್ಮ ಕ್ಷೇತ್ರಕ್ಕೂ ಪಾದಯಾತ್ರೆ ಬರಬೇಕು ಎಂದು ಭಾವಿಸಿದ್ದೆವು. ಆದರೆ ಅದು ಆಗಲಿಲ್ಲ. ಆದರೂ ನೀವೆಲ್ಲ ಬಂದು ಹೆಜ್ಜೆ ಹಾಕಿ, ಐತಿಹಾಸಿಕ ಹೋರಾಟದಲ್ಲಿ ಭಾಗವಹಿಸಿದ್ದೀರಿ. ಬೆಂಗಳೂರಿಗೆ ಕುಡಿಯುವ ನೀರು ತರಲು ನಡೆದ ಕಾಂಗ್ರೆಸ್ ನೇತೃತ್ವದ ಹೋರಾಟಕ್ಕೆ ಶಕ್ತಿ ತುಂಬಿದ್ದೀರಿ. ಕಾಂಗ್ರೆಸ್ ಪಕ್ಷ ಪ್ರಸ್ತುತ ರಾಜ್ಯಕ್ಕೆ ಅನಿವಾರ್ಯವಾಗಿದೆ. ನೀವು ಸತತವಾಗಿ ಜಾರ್ಜ್ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದೀರಿ. ಅವರು ನನಗಿಂತ ಹಿರಿಯರಾಗಿ ಶಾಸಕರಾದವರು. ನಿಮ್ಮ ಬ್ಲಾಕ್, ಜಿಲ್ಲಾಧ್ಯಕ್ಷರು, ಶಾಸಕರುಗಳ ಶಿಫಾರಸ್ಸು ಮೇರೆಗೆ ನಿಮ್ಮನ್ನು ಮುಖ್ಯ ನೋಂದಾಣಿದಾರರನ್ನಾಗಿ ಮಾಡಲಾಗಿದೆ. ನಿಮ್ಮ ಪಾತ್ರ ಏನೆಂದರೆ, ಪ್ರತಿ ಬೂತ್ ಮಟ್ಟದಲ್ಲಿ ಒಬ್ಬರು ಗಂಡು ಹಾಗೂ ಒಬ್ಬರು ಮಹಿಳೆಯನ್ನು ನೋಂದಾಣಿದಾರರನ್ನಾಗಿ ನೇಮಕ ಮಾಡಬೇಕು. ನೀವು ಸದಸ್ಯತ್ವ ನೋಂದಣಿಗೆ ಮನೆ, ಮನೆಗೆ ಹೋದಾಗ ಅಲ್ಲಿನ ಹೆಣ್ಣು ಮಕ್ಕಳು ಅವರ ಮಾಹಿತಿ ನೀಡಲು ಹಿಂಜರಿಯುತ್ತಾರೆ. ಹೀಗಾಗಿ ಅವರಿಗೆ ಅನುಕೂಲವಾಗಲು ಮಹಿಳಾ ನೋಂದಾಣಿದಾರರು ಅವಶ್ಯಕ ಎಂದು ಅಭಿಪ್ರಾಯಪಟ್ಟರು.

    ನೀವು ಮತದಾರರ ಪಟ್ಟಿ ಪಡೆಯಬೇಕು. ಆ ಮತಪಟ್ಟಿ ಹಿಡಿದುಕೊಂಡು ಮನೆ, ಮನೆಗೆ ಹೋಗಬೇಕು. ಇಲ್ಲಿರುವ ಒಬ್ಬೊಬ್ಬರು 200 ಸದಸ್ಯತ್ವ ಮಾಡಿದರೂ 70 ಸಾವಿರ ಸದಸ್ಯತ್ವ ಆಗುತ್ತದೆ. ಯಾರು ಸದಸ್ಯರಾಗುತ್ತಾರೆ, ಯಾರು ಸದಸ್ಯರಾಗುವುದಿಲ್ಲವೋ ಅದರಿಂದ ಯಾರು ಕಾಂಗ್ರೆಸ್ ಪರ ಇದ್ದಾರೆ ಹಾಗೂ ಯಾರು ಇಲ್ಲ ಎಂಬುದು ಅರಿಯುತ್ತದೆ. ನಂತರ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪರ ಇಲ್ಲದವರ ಮನವೊಲಿಸಲು ಪ್ರಯತ್ನ ಮಾಡಬಹುದು. ಮುಖ್ಯ ನೋಂದಾಣಿದಾರರ ಆಗಿರುವವರು ನೋಂದಾಣಿದಾರರು ಕಲೆ ಹಾಕಿರುವ ಸದಸ್ಯತ್ವ ಶುಲ್ಕ 5 ರೂ. ಅನ್ನು ಸಂಗ್ರಹಿಸಬೇಕು. ಅನಂತರ ಆ ಹಣವನ್ನು ಜಿಲ್ಲಾಧ್ಯಕ್ಷರಿಗೆ ನೀಡಬೇಕು. ಡಿಜಿಟಲ್ ಕಾರ್ಡ್ ಬೇಕಾಗಿರುವವರು 10 ರೂ. ಪಾವತಿಸಬೇಕು. ಅವರಿಗೆ ಜಿಲ್ಲಾ ಕಾಂಗ್ರೆಸ್ ನಿಂದ ಕಾರ್ಡ್ ನೀಡಲಾಗುವುದು ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಉಕ್ರೇನ್‍ನಲ್ಲಿ ಶೌಚಾಲಯ ಸ್ವಚ್ಛಗೊಳಿಸುವಂತೆ ಭಾರತೀಯ ವಿದ್ಯಾರ್ಥಿಗಳಿಗೆ ಆದೇಶಿಸಲಾಗಿದೆ: ರಾಹುಲ್ ಗಾಂಧಿ

    ನಿಮಗೆ ಯಾವುದೇ ಅನುಮಾನ ಇದ್ದರೂ ನಮ್ಮ ತಂಡ ಇಲ್ಲಿ ಇರುತ್ತದೆ. ನೀವು ಅವರನ್ನು ಸಂಪರ್ಕ ಮಾಡಬಹುದು. ಇಡೀ ರಾಜ್ಯಕ್ಕೆ ಸರ್ವಜ್ಞನಗರ ಹೆಚ್ಚು ಸದಸ್ಯತ್ವ ಮಾಡಬೇಕು.ನೀವು ಸದಸ್ಯತ್ವ ಮಾಡಿದರೆ ನೀವು ನಾಯಕರಾಗಿ ಬೆಳೆಯಲು ಸಾಧ್ಯ. ನೀವು ಜಿಲ್ಲಾ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿ ಆಗಬೇಕಾದರೆ ನಿಮ್ಮ ಬೂತ್ ಪ್ರತಿನಿಧಿಸಬೇಕು. ನೀವು ಎಷ್ಟೇ ದೊಡ್ಡವರಾದರೂ ನಿಮ್ಮ ಬೂತ್ ಮಟ್ಟದ ಪ್ರತಿನಿಧಿ ಆಗಲೇಬೇಕು. ನೋಂದಾಣಿದಾರರಾಗಿ ಯಾರು ಕಾರ್ಯಪ್ರವೃತ್ತವಾಗಿರುವುದಿಲ್ಲವೋ ಅವರನ್ನು ಬದಲಾಯಿಸಿ, ಬೇರೆಯವರನ್ನು ನೇಮಿಸಿ. ಮುಖ್ಯ ನೋಂದಣಿದಾರರು ಪ್ರತಿ ಬೂತ್ ನಲ್ಲಿ ನೋಂದಣಿದಾರರು ಮೇಲುಸ್ತುವಾರಿ ಮಾಡಬೇಕು. ಒಂದು ಮೊಬೈಲ್ ಸಂಖ್ಯೆಯಲ್ಲಿ ಐದು ಸದಸ್ಯರನ್ನು ನೋಂದಣಿ ಮಾಡಿಕೊಳ್ಳಬೇಕು. ಸರ್ವಜ್ಞ ನಗರದಲ್ಲಿ ಮನೆ, ಮನೆಗೆ ಹೋಗಿ 75 ಸಾವಿರ ಸದಸ್ಯತ್ವ ಮಾಡಬೇಕು. ನಿಮ್ಮ ಜೈಕಾರ ಬೇಡ, ನೀವು ಮಾಡುವ ಸದಸ್ಯತ್ವವೇ ನಮಗೆ ಜೈಕಾರ, ನನ್ನ ಪಾಲಿಗೆ ಅದೇ ಹೂವಿನ ಹಾರ. ನಿಮ್ಮಲ್ಲಿ 100 ಸದಸ್ಯತ್ವ ನೋಂದಣಿ ಮಾಡುವ 300 ಜನರಿಗೆ ಜಾರ್ಜ್ ಅವರಿಂದ ಬಹುಮಾನ ಕೊಡಿಸುತ್ತೇನೆ ಎಂದು ಘೋಷಿಸಿದರು.

  • ವಿಪ್ ಉಲ್ಲಂಘಿಸಿದ ಪುರಸಭೆಯ ಮೂವರು ಕಾಂಗ್ರೆಸ್ ಸದಸ್ಯರ ಸದಸ್ಯತ್ವ ಅನರ್ಹ

    ವಿಪ್ ಉಲ್ಲಂಘಿಸಿದ ಪುರಸಭೆಯ ಮೂವರು ಕಾಂಗ್ರೆಸ್ ಸದಸ್ಯರ ಸದಸ್ಯತ್ವ ಅನರ್ಹ

    ಯಾದಗಿರಿ: ವಿಪ್ ಉಲ್ಲಂಘಿಸಿದ್ದ ಗುರಮಿಠಕಲ್ ಪುರಸಭೆಯ ಕಾಂಗ್ರೆಸ್ ಪಕ್ಷದ ಮೂವರು ಸದಸ್ಯರ ಸದಸ್ಯತ್ವ ಅನರ್ಹಗೊಂಡಿದೆ. ಸದಸ್ಯತ್ವ ಅನರ್ಹಗೊಳಿಸಿ ಡಿಸಿ ಡಾ.ರಾಗಪ್ರಿಯಾ ಆದೇಶ ಹೊರಡಿಸಿದ್ದಾರೆ.

    ಅಶನ್ನ ಬುದ್ಧ, ಅಶೋಕ ಕಲಾಲ, ಪವಿತ್ರ ಮನ್ನೆ ಅನರ್ಹಗೊಂಡ ಮೂವರು ಪುರಸಭೆ ಸದಸ್ಯರು. ಸೆಪ್ಟೆಂಬರ್ 2020ರಲ್ಲಿ ಗುರಮಿಠಕಲ್ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು, ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ನ ಮೂವರು ಗೈರಾಗಿದ್ದರು. ಕಾಂಗ್ರೆಸ್‍ನಿಂದ ಬಿ.ಫಾರ್ಮ್ ಪಡೆದು ಚುನಾವಣೆಯಲ್ಲಿ ಗೆದ್ದಿದ್ದರು, ಪುರಸಭೆ ಅಧ್ಯಕ್ಷ ಚುನಾವಣೆಯಲ್ಲಿ ವಿವಿಧ ಕಾರಣಗಳಿಂದ ಗೈರಾಗಿ, ವಿಪ್ ಉಲ್ಲಂಘಿಸಿದ್ದರು. ಇದನ್ನೂ ಓದಿ: ಹಳ್ಳಿಗರು ಹೇಳುವ ಸಮಯಕ್ಕೆ, ಹೇಳಿದ ಸ್ಥಳಕ್ಕೆ ಬರುತ್ತೆ ಕೋವಿಡ್ ಲಸಿಕೆ

    ಈ ಬಗ್ಗೆ ಪುರಸಭೆ ಸದಸ್ಯ ಖಾಜಾ ಮೈನೂದ್ದೀನ್ ವಿಪ್ ಉಲ್ಲಂಘಿಸಿದವರನ್ನು ಅನರ್ಹಗೊಳಿಸಲು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ಪಕ್ಷಾಂತರ ಕಾಯ್ದೆಯಡಿ ಮೂವರ ಸದಸ್ಯತ್ವ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್ ಕಂಪನಿಗಳ ಖಾಸಗೀಕರಣ ಇಲ್ಲ: ಸುನೀಲ್ ಕುಮಾರ್

  • ರಾಹುಲ್ ಗಾಂಧಿ ಮಹತ್ವಾಕಾಂಕ್ಷಿ ಯೋಜನೆ ರಾಜ್ಯದಲ್ಲಿ ವಿಫಲ

    ರಾಹುಲ್ ಗಾಂಧಿ ಮಹತ್ವಾಕಾಂಕ್ಷಿ ಯೋಜನೆ ರಾಜ್ಯದಲ್ಲಿ ವಿಫಲ

    – ಟಾರ್ಗೆಟ್ ರೀಚ್ ಆದಬಳಿಕ ಸಚಿವ ಸ್ಥಾನ ಕೇಳಿ- ರಾಹುಲ್ ಗಾಂಧಿ ಕಿಡಿ

    ಬೆಂಗಳೂರು: ರಾಜ್ಯದ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರ ನಿಷ್ಕಾಳಜಿಯಿಂದಾಗಿ ರಾಹುಲ್ ಗಾಂಧಿ ಕನಸಿನ ಶಕ್ತಿ ಯೋಜನೆ ವಿಫಲವಾಗಿದೆ. ವಿಫಲವಾದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿರುವ ಹಾಗೂ ಅಧಿಕಾರ ಪಡೆದು ಪಕ್ಷದ ಸಂಘಟನೆ ಮರೆತಿರುವ ರಾಜ್ಯ ನಾಯಕರ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಫುಲ್ ಗರಂ ಆಗಿದ್ದಾರೆ.

    ಚಿಕ್ಕ ರಾಜ್ಯಗಳಲ್ಲಿ ನಿರೀಕ್ಷೆಗಿಂತ ಹೆಚ್ಚು ಜನರು ಸದಸ್ಯತ್ವ ಪಡೆದಿದ್ದಾರೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರಲ್ಲಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಕ್ಷದ ಸದಸ್ಯತ್ವ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡದ್ದಕ್ಕೆ ಎಐಸಿಸಿ ರಾಜ್ಯ ನಾಯಕರನ್ನು ತರಾಟೆಗೆ ತೆಗದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

    ಏನಿದು ಶಕ್ತಿ ಯೋಜನೆ?:
    ಲೋಕಸಭಾ ಚುನಾವಣೆ ಹಿನ್ನೆಲೆ ವಾಟ್ಸಾಪ್ ಮೂಲಕ ಪಕ್ಷದ ಸದಸ್ಯತ್ವ ನೋಂದಣಿ ಯೋಜನೆಯನ್ನು ರಾಹುಲ್ ಗಾಂಧಿ ಪರಿಚಯಿಸಿದ್ದರು. ಈ ಮೂಲಕ ಹೆಚ್ಚು ಸದಸ್ಯರು, ಕಾರ್ಯಕರ್ತರನ್ನು ಪಕ್ಷಕ್ಕೆ ನೋಂದಣಿ ಮತ್ತು ಸೇರ್ಪಡೆ ಮಾಡಿಕೊಳ್ಳುವ ಗುರಿಯನ್ನು ಹೊಂದಲಾಗಿತ್ತು.

    ಈ ಕುರಿತು ಪ್ರಚಾರ ಮಾಡಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಜವಾಬ್ದಾರಿಯನ್ನು ಶಾಸಕರು, ಸಚಿವರು ಹಾಗೂ ನಾಯಕರಿಗೆ ನೀಡಲಾಗಿತ್ತು. ಈ ನೋಂದಣಿ ಅಭಿಯಾನ 2018ರ ನವಂಬರ್ ಅಂತ್ಯಕ್ಕೆ ಮುಗಿಯಬೇಕಿತ್ತು. ಆದರೆ ಯೋಜನೆ ವಿಫಲವಾಗಿದ್ದಕ್ಕೆ ರಾಹುಲ್ ಗಾಂಧಿ ಅವರು ರಾಜ್ಯದ ನಾಯಕರಿಗೆ ಫುಲ್ ಕ್ಲಾಸ್ ತೆಗೆದುಕೊಂಡು ಡಿಸೆಂಬರ್ 15ರವರೆಗೆ ಅಭಿಯಾನವನ್ನು ವಿಸ್ತರಿಸಿದ್ದಾರೆ ಎನ್ನಲಾಗಿದೆ.

    ಹೈಕಮಾಂಡ್‍ನ ಹೊಸ ವರಸೆ ಕಂಡು ಶಾಸಕರು, ಸಚಿವ ಸ್ಥಾನ ಆಕಾಂಕ್ಷಿಗಳು ಈಗ ಕಂಗಲಾಗಿದ್ದಾರೆ. ಎಲ್ಲವೂ ಮುಗಿಯಿತು ಎನ್ನುವಾಗ ಪಕ್ಷ ಸಂಘಟನೆಯ ಹೊಸ ಜವಬ್ದಾರಿ ಎದುರಾಗಿದೆ. ಸಚಿವ ಸ್ಥಾನ ಕೇಳಲು ಸದಸ್ಯತ್ವ ನೋಂದಣಿ ಅಭಿಯಾನದ ಫಲಿತಾಂಶ ತೋರಿಸಬೇಕಾದ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಕನಿಷ್ಟ 10 ಲಕ್ಷ ಜನರು ಸದಸ್ಯತ್ವ ಪಡೆಯಬೇಕು ಎಂದು ಎಐಸಿಸಿ ಖಡಕ್ ಆದೇಶ ನೀಡಿದೆ.

    ಯಾವ ರಾಜ್ಯದಲ್ಲಿ ಎಷ್ಟು ನೋಂದಣಿ?:
    ಕರ್ನಾಟಕದಲ್ಲಿ ಕಳೆದ ಎರಡು ತಿಂಗಳಿನಿಂದ ಕೇವಲ 3 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದಾರೆ. ರಾಜಸ್ಥಾನದಲ್ಲಿ 7 ಲಕ್ಷ ಜನ, ಮಧ್ಯ ಪ್ರದೇಶದಲ್ಲಿ 6 ಲಕ್ಷ ಮಂದಿ, ಚಿಕ್ಕ ರಾಜ್ಯವಾಗಿರುವ ಛತ್ತೀಸಗಢದಲ್ಲಿ 4.5 ಲಕ್ಷ ಜನ ಸದಸ್ಯತ್ವ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅಧಿಕಾರಕ್ಕಾಗಿ ತಂದೆ-ತಾಯಿ ಗೊತ್ತಿಲ್ಲ ಅಂದ್ರು – ನಕಲಿ ಜಾತಿ ಪತ್ರ ನೀಡಿ ಸಿಕ್ಕಿಬಿದ್ರು ಅಗ್ರಹಾರದ ಗಾಯತ್ರಿ

    ಅಧಿಕಾರಕ್ಕಾಗಿ ತಂದೆ-ತಾಯಿ ಗೊತ್ತಿಲ್ಲ ಅಂದ್ರು – ನಕಲಿ ಜಾತಿ ಪತ್ರ ನೀಡಿ ಸಿಕ್ಕಿಬಿದ್ರು ಅಗ್ರಹಾರದ ಗಾಯತ್ರಿ

    ಬೆಂಗಳೂರು: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವ ವೇಳೆ ಜಾತಿ ಪ್ರಮಾಣ ಪತ್ರ ನೀಡಿಕ್ಕೆ ಸರಿಯಾದ ದಾಖಲೆ ಇಲ್ಲದ ಆರೋಪದಡಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಕೆಪಿ ಅಗ್ರಹಾರ ಗಾಯತ್ರಿ ಅವರ ಜಾತಿ ಪ್ರಮಾಣ ಪತ್ರ ರದ್ದುಪಡಿಸಿ ಆದೇಶ ನೀಡಿದ್ದಾರೆ.

    ನಗರದ ಕೆಪಿ ಅಗ್ರಹಾರ ಕಾರ್ಪೊರೇಟರ್ ಎಂ ಗಾಯತ್ರಿ ಗಣೇಶ್ ಅವರ ಜಾತಿ ಪ್ರಮಾಣ ಪತ್ರ ರದ್ದು ಮಾಡಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಬಿಬಿಎಂಪಿ ಚುನಾವಣೆಯಲ್ಲಿ ಎಸ್‍ಟಿ ಮಹಿಳೆಗೆ ಮೀಸಲಾಗಿದ್ದ ಕೆಪಿ ಅಗ್ರಹಾರ ವಾರ್ಡ್ ನಿಂದ ಎಂ ಗಾಯತ್ರಿ ಅವರು ನಾಯಕ ಜನಾಂಗದ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸ್ಪರ್ಧಿಸಿ ಗೆಲುವು ಪಡೆದಿದ್ದರು. ಈ ವೇಳೆ ದಾಖಲೆ ಪರಿಶೀಲಿಸದೆ ತಹಶೀಲ್ದಾರ್ ರಾಮಲಕ್ಷ್ಮಣ್ ಜಾತಿ ಪ್ರಮಾಣಪತ್ರ ನೀಡಿದ್ದರು.

    ಏನಿದು ಪ್ರಕರಣ:
    ಕಾರ್ಪೊರೇಟರ್ ಎಂ ಗಾಯತ್ರಿ ಗಣೇಶ್‍ಗೆ ತಂದೆ-ತಾಯಿ, ಜಾತಿ ಬಗ್ಗೆ ಮಾಹಿತಿ ಇಲ್ಲ. ಇದೇ ಕಾರಣಕ್ಕೆ ನಾಯಕ ಜಾತಿ ಹೆಸರಿನಲ್ಲಿ ಶಾಲೆಯನ್ನು ಬಳಕೆ ಮಾಡಿ ಜಾತಿ ಪ್ರಮಾಣಪತ್ರ ಮಾಡಲಾಗಿದೆ. ನಗರದ ಕೆಪಿ ಆಗ್ರಹಾರದಲ್ಲಿರುವ ಸಿದ್ದಲಿಂಗೇಶ್ವರ ಶಾಲೆಯಲ್ಲಿ ವ್ಯಾಸಂಗ ನಡೆಸಿರುವ ಕುರಿತು ದಾಖಲೆ ಸೃಷ್ಟಿ ಮಾಡಲಾಗಿದ್ದು, ಆದರೆ ಅವರ ಶೈಕ್ಷಣಿಕ ಆರ್ಹತೆ ಬಗ್ಗೆ ಶಾಲೆಯಲ್ಲಿ ಯಾವುದೇ ಪೂರಕ ಮಾಹಿತಿ ಲಭಿಸದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಕ್ರಮಕೈಗೊಂಡಿದ್ದಾರೆ.

    ಬಿಬಿಎಂಪಿ ಚುನಾವಣೆ ಸ್ಪರ್ಧೆ ಮಾಡುವ ಉದ್ದೇಶದಿಂದಲೇ 1ನೇ ತರಗತಿಯಿಂದ 5ನೇ ತರಗತಿಯವರೆಗೆ ವ್ಯಾಸಂಗ ಮಾಡಿರುವಂತೆ ದಾಖಲೆ ಸೃಷ್ಟಿಸಲಾಗಿದ್ದು, ನಾಯಕ ಜಾತಿ ಪ್ರಮಾಣ ಪತ್ರ ಪಡೆಯಲು ಸಿದ್ದಲಿಂಗೇಶ್ವರ ಶಾಲೆ ಬಳಕೆ ಮಾಡಿದ್ದಾರೆ. 2015 ಜೂನ್ ನಲ್ಲಿ ಗಾಯಿತ್ರಿ ಅವರು ಜಾತಿ ಪ್ರಮಾಣ ಪತ್ರ ಪಡೆದಿದ್ದು, 2015 ಜುಲೈ ನಲ್ಲಿ ಬಿಬಿಎಂಪಿ ಚುನಾವಣೆ ನಡೆದಿತ್ತು. ಅಂದರೆ ಚುನಾವಣೆಯಲ್ಲಿ ಮೀಸಲಾತಿ ಘೋಷಣೆ ಆದ ಮೇಲೆ ಜಾತಿ ಪ್ರಮಾಣ ಪತ್ರ ಪಡೆಯಲಾಗಿದೆ ಎಂಬುದು ಕಾಣಸಿಗುತ್ತದೆ.

    ಶಾಲೆಯಲ್ಲಿ ವರ್ಗಾವಣೆ ಪ್ರಮಾಣ ಪತ್ರ ಪಡೆಯುವ ವೇಳೆಯೂ 5ನೇ ತರಗತಿ ಪಾಸ್ ಎಂದು ಬರೆಯಲಾಗಿದೆ. ಆದರೆ ದಾಖಲೆಯಲ್ಲಿ ಗಾಯಿತ್ರಿ ಅವರು 5ನೇ ತರಗತಿ ಅನುತ್ತೀರ್ಣ ಎಂದು ನಮೂದಿಸಲಾಗಿದೆ. ಈ ಕುರಿತು ಡಿಡಿಪಿಐ ಹಾಗೂ ಇತರೇ ಅಧಿಕಾರಿಗಳು ವರದಿ ನೀಡಿದ್ದು, ಈ ವರದಿ ಅನ್ವಯ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.

    ಒಂದೊಮ್ಮೆ ಈ ಕುರಿತು ಗಾಯಿತ್ರಿ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ರೂ ಸಹ ವರದಿಯ ಅನ್ವಯ ಅರ್ಜಿ ತಿರಸ್ಕೃತ ಗೊಳ್ಳುವ ಸಾಧ್ಯತೆಯೂ ಇದೇ. ಆರೋಪ ಸಾಬೀತಾದಲ್ಲಿ ಗಾಯಿತ್ರಿ ಅವರು ಈ ಅವಧಿಯಲ್ಲಿ ಪಡೆದಿರುವ ಎಲ್ಲಾ ಸೌಲಭ್ಯಗಳನ್ನ ಹಿಂದಿರುಗಿಸುವ ಅನಿವಾರ್ಯ ಎದುರಾಗಲಿದೆ. ಅಲ್ಲದೇ ಚುನಾವಣೆಯಲ್ಲಿ ಅಕ್ರಮ ನಡೆಸಿರುವ ಆರೋಪದಡಿ 6 ವರ್ಷ ಚುನಾವಣೆಗೆ ಮತ್ತೆ ಸ್ಪರ್ಧೆ ಮಾಡುವಂತಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews